ಮಲೆಯಾಳದ ಕಥೆಗಾರ್ತಿ ಗ್ರೇಸಿಯವರ ಕಥೆಗಳಲ್ಲಿ ಹೆಣ್ಣಿನ ಆಂತರಿಕ ಲೋಕ
Team Udayavani, Mar 14, 2021, 1:40 PM IST
ಹೆಣ್ಣಿನ ಆಂತರಿಕ ಲೋಕವನ್ನು ತುಂಬ ಭಿನ್ನವಾಗಿ ಚಿತ್ರಿಸುವ ಮಲೆಯಾಳದ ಕಥೆಗಾರ್ತಿ ಗ್ರೇಸಿ. ಸರಳ ಸಾಧಾರಣ ವಸ್ತುಗಳ ಮೂಲಕ ಅಸಾಧಾರಣವಾದ ಒಳನೋಟಗಳತ್ತ ಓದುಗರನ್ನು ಕೊಂಡೊಯ್ಯುವ ಅವರ ಕಥೆಗಳು ಹೆಣ್ಣೆಂದರೆ ಕೇವಲ ಭೋಗವಸ್ತು ಅಥವಾ ಶರೀರ ಮಾತ್ರವೆಂದು ಮತ್ತೆ ಮತ್ತೆ ಒತ್ತಿ ಹೇಳುವ ಸಾಂಪ್ರದಾಯಿಕ ಸಮಾಜದ ನಂಬಿಕೆಯನ್ನು ದಿಟ್ಟವಾಗಿ ಪ್ರಶ್ನಿಸುತ್ತವೆ.
‘ಮೆಟ್ಟಲಿಳಿದು ಹೋದ ಪಾರ್ವತಿ’ ಕಮಲಾ ಹೆಮ್ಮಿಗೆಯವರು ಅನುವಾದಿಸಿದ ಗ್ರೇಸಿಯವರ 18 ಸಣ್ಣ ಕತೆಗಳ ಸಂಕಲನ. ಗ್ರೇಸಿಯವರು ಅತ್ಯಂತ ಕಡಿಮೆ ಸ್ಪೇಸ್ ನಲ್ಲಿ ಅತ್ಯಂತ ಹೆಚ್ಚು ಹೇಳುವವರು. ‘ಒಂದು ಸತ್ಯ ಸಂಧ ಪುಟದ ನಕಲು.’ ಕಥೆಯಲ್ಲಿ ಹೆಣ್ಣನ್ನು ತನಗೆ ಬೇಕಾದಂತೆ ಕಾಮ ತೃಷೆಯನ್ನು ಹಿಂಗಿಸಲು ಬಳಸಿ ಒಂದು ಮಗುವನ್ನೂ ಕೊಟ್ಟು ಶಾಶ್ವತವಾಗಿ ಬಿಟ್ಟು ಹೋಗುವ ಮಹಾಭಾರತದ ಪರಾಶರನಂಥ ಒಬ್ಬ ವ್ಯಕ್ತಿ ಇದ್ದಾನೆ.
ಓದಿ : ಯಾರು ತಪ್ಪು ಮಾಡಿದ್ದಾರೋ ಅವರಿಗೆ ಶಿಕ್ಷೆ ಆಗ್ಲಿ ಬಿಡಿ: ಸಿಡಿ ಪ್ರಕರಣದ ಬಗ್ಗೆ ಸಿದ್ದರಾಮಯ್ಯ
‘ಬೇಸಿಗೆಯಲ್ಲೊಂದು ಮಳೆ ಹನಿ ..’ಹುಡುಗಿಯೊಬ್ಬಳು ಅಪರಿಚಿತ ಯುವಕನ ಜತೆಗೆ ಅವನ ಸ್ಕೂಟರಿನಲ್ಲಿ ಹೋಗಿ ಅವನ ಜತೆಗೆ ಹೋಟೆಲ್ ರೂಮಿನಲ್ಲಿ ತಂಗಿ ಅವನ ಜತೆಗೆ ಸಂಭೋಗ ನಡೆಸಿ, ಅವನು ಅವಳ ಕನ್ಯತ್ವದ ಬಗ್ಗೆ ಪ್ರಶ್ನಿಸಿದಾಗ ತಾನು ಕುಂತಿಯಂತೆ ಪ್ರತಿ ಸಂಭೋಗದ ನಂತರ ಕನ್ಯೆಯಾಗುವವಳು ಅನ್ನುತ್ತಾಳೆ. ಇಲ್ಲಿ ಹೆಣ್ಣಿನ ಚಾರಿತ್ರ್ಯದ ಬಗ್ಗೆ ಸದಾ ಸಂದೇಹ ಪಡುವ ಸಮಾಜದ ಬಗ್ಗೆ ವ್ಯಂಗ್ಯವಿದೆ.
‘ ದೂರದಿಂದ ಬಂದ ಜಾದೂಗಾರ’ ಗ್ರಾಮೀಣ ಪ್ರದೇಶದ ಹೆಣ್ಣು ಮಕ್ಕಳನ್ನು ಮರುಳು ಮಾಡಿ ವಶಪಡಿಸಿಕೊಳ್ಳುವ ನಗರದ ಪುರುಷರ ಸ್ವಾರ್ಥ–ವಂಚನೆಗಳ ಚಿತ್ರಣವಿದೆ. ‘ಅಳಿದ ಮೇಲೆ’ ಯಲ್ಲಿ ಬದುಕಿನಲ್ಲಿ ಅಪಾರವಾಗಿ ನೊಂದು ಆತ್ಮಹತ್ಯೆ ಮಾಡಿಕೊಂಡ ಒಬ್ಬ ಹೆಣ್ಣಿನ ಶವವು ಇದ್ದಕ್ಕಿಂದ್ದಂತೆ ಕಣ್ಣು ತೆರೆದು ತನ್ನ ಗಂಡ, ಅತ್ತೆ, ಮಾವ, ಅಕ್ಕ, ಅಮ್ಮ ಯಾರೂ ತನ್ನನ್ನು ಅರ್ಥ ಮಾಡಿಕೊಳ್ಳಲಿಲ್ಲವೆಂದು ರೋದಿಸುವ ಕಥೆಯಿದೆ. ಸೂಕ್ಷ್ಮ ಮನಸ್ಸಿನ ಒಬ್ಬ ಹೆಣ್ಣು ತನ್ನ ಜೀವನದಲ್ಲಿ ಸಂಬಂಧ ಪಟ್ಟವರಿಮದಲೇ ಅವಗಣಿಸಲ್ಪಟ್ಟು ಹೇಗೆ ಒಂಟಿತನದ ಸಂಕಟ ಅನುಭವಿಸುತ್ತಾಳೆ ಅನ್ನುವುದನ್ನು ಚಿತ್ರಿಸುವುದು ಗ್ರೇಸಿಯವರ ಗುರಿ ಅನ್ನಿಸುತ್ತದೆ. ‘ಹೀಗೊಂದು ಜಾಗ’ ದ ಕಥಾನಾಯಕಿ ಚಿಕ್ಕ ಹುಡುಗಿ. ತನ್ನ ಅಮ್ಮನ ನಡತೆ ಸರಿಯಿಲ್ಲವೆಂದು ಅಸಮಾಧಾನದಿಂದ ಆಕೆಯಿಂದ ಮಾನಸಿಕವಾಗಿ ದೂರವಾಗಿ, ಪಕ್ಕದ ಮನೆಯ ಗಂಡ–ಹೆಂಡಿರ ನಡುವಣ ಪ್ರೀತಿ ಕಂಡು ಸಂತೋಷ ಪಟ್ಟರೂ ಮುಂದೆ ಆ ಗಂಡ ಮನೆ ಕೆಲಸದಾಕೆಯ ಜತೆಗೆ ಸಂಬಂಧ ಬೆಳೆಸಿದ್ದನ್ನು ಕಂಡು ದಂಗಾಗುತ್ತಾಳೆ. ‘ಬೆಕ್ಕು’ ಕತೆಯಲ್ಲಿ ಒಬ್ಬ ಯುವಕ ತಾನು ಮದುವೆಯಾದ ಹೆಣ್ಣಿಗೆ ಬೆಕ್ಕಿನ ಕಣ್ಣುಗಳು ಅನ್ನುವ ಕಾರಣಕ್ಕೆ ಅವಳ ಬಗ್ಗೆ ಪೂರ್ವಗ್ರಹೀತನಾಗಿ ಅವಳನ್ನು ಮಾನಸಿಕ ಹಿಂಸೆಗೆ ಗುರಿ ಮಾಡುತ್ತಾನೆ. ‘ಪರದೇಶಿಯ ಪ್ರಸಂಗ’ ಒಬ್ಬ ತೃತೀಯ ಲಿಂಗಿಯ ಜತೆಗೆ ಪುರುಷನೊಬ್ಬ ಅಮಾನವೀಯವಾಗಿ ವರ್ತಿಸಿದಾಗ ಸ್ವಾಭಿಮಾನಿಯಾದ ಆಕೆ ತನಗೆ ಯಾರ ಸಂಗವೂ ಬೇಡ, ತಾನಿನ್ನು ಮುಂದೆ ಪುಸ್ತಕಗಳ ನಡುವೆ ಬದುಕುತ್ತೇನೆಂದು ನಿರ್ಧರಿಸುವ ಕಥೆ.
‘ಪಾಂಚಾಲಿ’ಯಂತೂ ಗ್ರೇಸಿಯವರು ನಿರ್ಮಿಸಿದ ಅದ್ಭುತ ಶಿಲ್ಪ. ನೆರೆಮನೆಯಲ್ಲಿ ಬಾಡಿಗೆಗಿದ್ದ ಐವರನ್ನು ಏಕಕಾಲದಲ್ಲಿ ಪ್ರೀತಿಸಿ, ಅರ್ಯಾರಿಗೂ ಪರಸ್ಪರ ಗೊತ್ತಾಗದ ಹಾಗೆ ಐವರನ್ನೂ ಮದುವೆಯಾಗುವ ಕೃಷ್ಣೆ ಅವರು ಐವರ ಜತೆಗೂ ಬೇರೆ ಬೇರೆಯಾಗಿ ರಾತ್ರಿಗಳನ್ನು ಕಳೆಯುತ್ತಾಳೆ. ಆದರೆ ಅವರು ಹೆಂಡತಿಯನ್ನು ಭೋಗಿಸುವ ರೀತಿ ಅವಳಿಗೆ ಇಷ್ಟವಾಗುವುದಿಲ್ಲ. ಪ್ರತಿಯೊಬ್ಬರಲ್ಲೂ ಅವಳು ಒಂದಿಲ್ಲೊಂದು ದೋಷಗಳನ್ನು ಕಾಣುತ್ತಾಳೆ. ಕೊನೆಗೆ ಆ ಐವರನ್ನೂ ಬಿಟ್ಟು ದೋಷರಹಿತನಾದ ಪೀತಾಂಬರಧಾರಿಯನ್ನು ಹುಡುಕುತ್ತ ಹೋಗುತ್ತಾಳೆ. ಹೆಣ್ಣು ಪುರುಷನಿಂದ ಬಯಸುವ ನಿಜವಾದ ಪ್ರೀತಿಯ ಅಂತ್ಯವಿಲ್ಲದ ಹುಡುಕಾಟವನ್ನು ಈ ಕತೆ ಚಿತ್ರಿಸುತ್ತದೆ. ‘ಮೆಟ್ಟಲಿಳಿದು ಹೋದ ಪಾರ್ವತಿ’ ಪುಸ್ತಿಕದ ಶೀರ್ಷಿಕೆ ಕಥೆ. ಅಪಾರವಾದ ಜೀವನಾಸಕ್ತಿಯುಳ್ಳ ನಿರೂಪಕಿಯ ಗೆಳತಿ ಪಾರ್ವತಿ ರಾಮನಾಥನನ್ನು ಮದುವೆಯಾದ ನಂತರ ಕಣ್ಣೀರಿನಲ್ಲಿ ಕೈತೊಳೆಯುವಂತಾಗಿ ಆಕೆಗೆ ಡ್ರೈವಿಂಗ್ ಕಲಿಸುವ ಉಣ್ಣಿಚೇಟನಿಂದ ಆಕರ್ಷಿತಳಾಗಿ , ಕೊನೆಗೆ ಅವನ ಕಾಮವಾಸನೆಯ ಅರಿವಾದ ತಕ್ಷಣ ಅವನನ್ನು ಬಿಡುತ್ತಾಳೆ. ಆದರೆ ಆತ ಅವಳನ್ನು ಬ್ಲಾಕ್ ಮೇಲ್ ಮಾಡುತ್ತಾನೆ. ಕೆಲವು ಕಾಲದ ನಂತರ ನಿರೂಪಕಿ ಪಾರ್ವತಿಯನ್ನು ಇನ್ನೊಮ್ಮೆ ಭೇಟಿಯಾದಾಗ ಅವಳು ಇಪ್ಪತ್ತರ ಹರೆಯದ ತರುಣನ ಪ್ರೀತಿಯಲ್ಲಿ ಸಿಲುಕಿರುತ್ತಾಳೆ. ಅಂದಿನಿಂದ ನಿರೂಪಕಿಗೆ ಅವಳ ಮೇಲಿನ ಗೌರವ ಮಾಯವಾಗುತ್ತದೆ. ಈ ಕತೆಯಲ್ಲಿ ಹೆಣ್ಣಿನ ದೌರ್ಬಲ್ಯವೇ ಕಥೆಗಾರ್ತಿಯ ಸಮಸ್ಯೆಯಾದಂತೆ ಕಾಣುತ್ತದೆ. ಅಥವಾ ಇದೂ ಪ್ರೀತಿಗಾಗಿ ಹೆಣ್ಣಿನ ನಿರಂತರ ಹುಡುಕಾಟದ ಚಿತ್ರಣವೇ ಇರಬಹುದು.
ಓದಿ : ಎಲ್ಲವನ್ನೂ ಎಸ್ ಐಟಿ ಯವರೇ ನೋಡಿಕೊಳ್ಳುತ್ತಾರೆ: ಗೃಹ ಸಚಿವ ಬೊಮ್ಮಾಯಿ
ಒಟ್ಟಿನಲ್ಲಿ ಇದರಲ್ಲಿರುವ 18 ಕತೆಗಳೂ ಸ್ತ್ರೀ ಕೇಂದ್ರಿತವಾಗಿದ್ದು ಪುರುಷ ಪ್ರಧಾನ ವ್ಯವಸ್ಥೆಯಲ್ಲಿ ಸ್ತ್ರೀಯರನ್ನು ಸುತ್ತಿಕೊಳ್ಳುವ ಹತ್ತಾರು ಸಮಸ್ಯೆಗಳನ್ನು ಚಿತ್ರಿಸುತ್ತವೆ. ಗ್ರೇಸಿಯವರ ಕತೆಗಳ ರಚನಾ ಬಂಧವು ಎಷ್ಟು ಬಿಗಿಯಾಗಿದೆ ಅಂದರೆ ಅವುಗಳಿಂದ ಒಂದೇ ಒಂದು ಶಬ್ದವನ್ನು ಸಹ ತೆಗೆಯುವಂತಿಲ್ಲ. ಕಥೆಗಳಲ್ಲಿ ಪ್ರತಿಮೆ–ಸಂಕೇತಗಳು ಯಥೇಷ್ಟವಾಗಿವೆ. ಮುಖ್ಯವಾಗಿ ಅವರು ಮಹಾಭಾರತದ ಪಾತ್ರಗಳನ್ನು–ಕುಂತಿ, ದ್ರೌಪದಿ, ಪಂಚಪಾಂಡವರು, ಪರಾಶರ ಮೊದಲಾದವರನ್ನು ಪ್ರತಿಮೆಗಳಾಗಿಸುತ್ತಾರೆ.
–ಡಾ. ಪಾರ್ವತಿ ಜಿ. ಐತಾಳ್
ಹಿರಿಯ ಸಾಹಿತಿಗಳು, ಅನುವಾದಕರು.
ಓದಿ : ಜೊಮ್ಯಾಟೊ ಡೆಲಿವರಿ ಬಾಯ್ ಕಾಮರಾಜ್‍ನಿಗೆ ಬಾಲಿವುಡ್ ನಟಿ ಪರಿಣಿತಿ ಚೋಪ್ರಾ ಬೆಂಬಲ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Mandya :ಗಂಡ ಗದ್ಯ, ಹೆಂಡತಿ ಪದ್ಯ, ಮಕ್ಕಳು ರಗಳೆ!: ಹಾಸ್ಯ ಸಾಹಿತಿ ವೈ.ವಿ.ಗುಂಡೂರಾವ್
Mandya Sahitya Sammelana: ಅಕ್ಷರ ಜಾತ್ರೆಯಲ್ಲಿ “ಹವಾ’ ಎಬ್ಬಿಸಿದ ತೊಟ್ಟಿ ಮನೆ..!
Mandya: ನುಡಿ ಹಬ್ಬದ ಔತಣ ಸವಿಯಲು ಜನವೋ ಜನ- ವೃದ್ಧರಿಗೆ ವಿಶೇಷ ಕೌಂಟರ್
World Meditation Day; ಶರೀರಕ್ಕೆ ಊಟ, ಆತ್ಮಕ್ಕೆ ಧ್ಯಾನ
Meditation; ಮಾನಸಿಕ ಆರೋಗ್ಯಕ್ಕೆ ದಿವ್ಯೌಷಧ: ಡಿ.21ರಂದೇ ಏಕೆ ಧ್ಯಾನ ದಿನ?
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.