ಅದು ಬಿಸಿಲು ಚುಚ್ಚುವ ‘ನೆರಳು ಮರಗಳಿಲ್ಲದ ದಾರಿ’


ಶ್ರೀರಾಜ್ ವಕ್ವಾಡಿ, Apr 3, 2021, 6:56 PM IST

Book Review On Tamil Origin Translated book, Named as Neralu Maragalillada Dari

ಅನುವಾದ ಕೃತಿಗಳು ಹಿಡಿಸುವುದು ಅವುಗಳ ಭಾಷಾಂತರದಿಂದಲ್ಲ, ಭಾವಾಂತರದಿಂದ.

ಕೆಲವು ಅನುವಾದ ಕೃತಿಗಳು ಒಮ್ಮೊಮ್ಮೆ ಬರೀ ಜಾಳುಜಾಳಾಗಿ ನೀರಸ, ಬೇಸರ, ಕೋಪ, ತಾಪ, ಸಿಟ್ಟು ಎಲ್ಲವನ್ನೂ ತರಿಸಿಬಿಡುತ್ತವೆ‌. ಅದು ಭಾಷಾಂತರದಲ್ಲಿನ ಅಥವಾ ಭಾವಾಂತರದಲ್ಲಿನ ತೊಡಕಿನಿಂದಲೂ ಇರಬಹುದು. ಅಥವಾ ವಸ್ತುವಿನ ಆಳ ಮತ್ತು ವಿಸ್ತಾರದಿಂದಲೂ ಇರಬಹುದು.

ಕೃತಿ ಗೆಲ್ಲುವುದು ಕೇವಲ ವಸ್ತುವಿನಿಂದಲ್ಲ. ಅದರ ಪ್ರಸ್ತುತಿ ಇಂದಲೂ ಗೆಲ್ಲುತ್ತದೆ‌‌. ಅನುವಾದ ಕೃತಿಗಳು ಎಲ್ಲರಿಗೂ ಹಿಡಿಸುವುದಿಲ್ಲ‌. ಅದು ಅದರ ಮೂಲ ಭಾಷೆಯ ಕಾರಣದಿಂದಲೂ ಇರಬಹುದು‌. ಅದೇಲ್ಲಾ ಏನೇ ಇರಲಿ‌.

‘ನೆರಳು ಮರಗಳಿಲ್ಲದ ದಾರಿ’ ಎಂಬ ಮಲಯಾಳಂ ಮೂಲದ ಕನ್ನಡ ಅನುವಾದ ಕೃತಿಯನ್ನು ಓದಿದ್ದೇನೆ. ಅನಿಸಿಕೆಯೊಂದನ್ನಿಷ್ಟು ಬರೆಯಲೇ ಬೇಕೆನ್ನಿಸಿದೆ. ಕೃತಿ ಆಪ್ತವೆನ್ನಿಸಿದೆ‌, ಹಾಗಾಗಿ ಬರೆಯಲು ಕಾಗದದ ಮೇಲೆ ಪೆನ್ನೂರಿದ್ದೇನೆ.

ಸಾಹಿತ್ಯ ಲೋಕದ ಈಗಿನ ಅನುವಾದಕರಲ್ಲಿ ಅಗ್ರ ಪಂಕ್ತಿಗೆ ಸೇರುವವರ ಪಟ್ಟಿಯಲ್ಲಿ ಡಾ. ಪಾರ್ವತಿ ಜಿ‌. ಐತಾಳ್ ಕೂಡ ಕಾಣಿಸಿಕೊಳ್ಳುತ್ತಾರೆ. ವೃತ್ತಿಯಲ್ಲಿ  ಆಂಗ್ಲ ಭಾಷಾ ಉಪನ್ಯಾಸಕರಾಗಿದ್ದ ಪಾರ್ವತಿ ಐತಾಳ್, ಈಗ ನಿವೃತ್ತ ಬದುಕನ್ನನುಭವಿಸುತ್ತಿದ್ದಾರೆ. ಕನ್ನಡ, ಇಂಗ್ಲಿಷ್, ಹಿಂದಿ, ಮಲಯಾಳಂ, ತುಳು ಎಂಬ ಐದು ಭಾಷೆಗಳಲ್ಲಿ ಅನುವಾದ ಮಾಡಬಲ್ಲವರು‌. ಅವರ ಅನುವಾದ ಕೃತಿಗಳ ಪಟ್ಟಿಯಲ್ಲಿ ಈ ಮಲಯಾಳಂ ಮೂಲದ ಕನ್ನಡ ಅನುವಾದ ಕೃತಿ ‘ನೆರಳು ಮರಗಳಿಲ್ಲದ ದಾರಿ’ ಕೂಡ ಒಂದು. ಮಲಯಾಳಂ ನ ಈಗಿನ ಪ್ರಸಿದ್ಧ ಕಥೆಗಾರ್ತಿಯರಲ್ಲಿ ಒಬ್ಬರಾದ ಕೆ. ಪಿ ಸುಧೀರ ಅವರ ನಾಲ್ಕು ಕಥಾ ಸಂಕಲನಗಳಲ್ಲಿನ ಆಯ್ದ ಕಥೆಗಳ ಅನುವಾದದ ಹೊತ್ತಿಗೆ ಇದು. ಕನ್ನಡಕ್ಕೆ ಪಾರ್ವತಿ ಜಿ‌‌. ಐತಾಳ್ ಬಹಳ ಸಹಜವಾಗಿ, ಸರಳವಾಗಿ ಅನುವಾದಿಸಿದ್ದಾರೆ.

ನನಗೆ, ಕಾಸರಗೋಡು ಮೂಲದವರಾದ ಪಾರ್ವತಿ ಜಿ. ಐತಾಳ್ ಅವರಿಗೆ ಮಲಯಾಳಂ ಹಾಗೂ ಕನ್ನಡದ ಗಡಿ ಸ್ಪರ್ಶ ಇರುವುದರಿಂದ ಈ ಕೃತಿಯಲ್ಲಿ ಕಥೆಯ ಆಳದ ಭಾವಾಂತರ ಚೆನ್ನಾಗಿ ಮೂಡಿ ಬರುವುದಕ್ಕೆ ಕಾರಣವಾಗಿದೆ ಅಂತನ್ನಿಸುತ್ತದೆ.

ಹದಿನೈದು ಸಣ್ಣ ಕಥೆಗಳನ್ನು ಹೊಂದಿರುವ ಈ ಕೃತಿ, ಸ್ತ್ರೀ ಭಾವಗಳ ಹಲವು ಆಯಾಮಗಳ ಸೂಕ್ಷ್ಮ ಧ್ವನಿ.

ಹೆಣ್ಣಿನ ಆಂತರ್ಯದ ತುಡಿತ, ಅವಳ ಪ್ರತಿ ಕ್ಷಣದ ನುಡಿ ನುಡಿತ, ಹಿತ, ಮಿತ, ಮೃದು ಧೋರಣೆಗಳ ಸಂವೇದನೆಗಳನ್ನು ಕಟ್ಟಿಕೊಡುತ್ತದೆ.

ಹೆಣ್ಣಿನೊಳಗಿನ ಮೃದು ವಿರೋಧ, ಕಟು ವಿರೋಧ, ದುಃಖ, ದುಮ್ಮಾನ, ಸಂಕಟ, ಸುಖ, ಸಂತೋಷ ಜೊತೆಗಿಷ್ಟು ಗೊಂದಲ ಎಲ್ಲವೂ ಇಲ್ಲಿನ ಕಥೆಗಳಲ್ಲಿ ಬೇರೆ ಬೇರೆ ಆಯಾಮಗಳಲ್ಲಿ ಕಾಣಿಸಿಕೊಳ್ಳುತ್ತವೆ‌.

ಪುಟ ತೆರೆಯುವುದಕ್ಕೆ ಸ್ಫೂರ್ತಿಯಾಗುವುದು ಕೃತಿಯ ಶಿರ್ಷಿಕೆ ಮತ್ತು ಶಿರ್ಷಿಕೆಯ ಕಥೆ. ‘ನೆರಳು ಮರಗಳಿಲ್ಲದ ದಾರಿ’ ಕಥೆಯ ನಾಯಕಿಯ ಧಿಕ್ಕರಿಸುವ ಗುಣ. ಮತ್ತು ಧಿಕ್ಕರಿಸುವುದಕ್ಕೆ ಕಾರಣವಾದ ನಿಶ್ಚಯವಾದ ಮದುವೆಯ ಹುಡುಗನ ಸ್ವಾರ್ಥ ಗುಣಗಳ ಸುತ್ತ ನಡೆಯುವ ಕಥೆ, ಸ್ಪಂದನೆಗೆ ಪ್ರತಿ ಸ್ಪಂದನೆ ದೊರಕದಿದ್ದಾಗ  ನಿತ್ಯ ನರಕವನ್ನು ನುಂಗುವ ಬಾಳನ್ನು ಇಷ್ಟ ಪಡದ ಕಥಾ ನಾಯಕಿಯ ಮನಸ್ಥಿತಿ ವಿಶೇಷ ಅನ್ನಿಸುತ್ತದೆ.

ಹೆಣ್ಣೊಬ್ಬಳು ನೆರಳು ಮರಗಳಿಲ್ಲದ ದಾರಿಯಲ್ಲಿ ಎಷ್ಟು ದೂರ ನಡೆಯಬಲ್ಲಳು…?  ಅಷ್ಟಕ್ಕೂ ಈ ಕಥೆಯ ನಾಯಕಿ ಕವಯತ್ರಿ. ಸಹಜವಾಗಿ ಆಕೆಯಲ್ಲಿ ಬದುಕು ಬಂದ ಹಾಗೆ ಸ್ವೀಕರಿಸುವ ಮತ್ತು ಅದು ಹಿತವೆನ್ನಿಸಿದಾಗ ಒಪ್ಪುವ, ಹಿತವಲ್ಲವೆನ್ನಿಸಿದಾಗ ದೂರ ತಳ್ಳುವ ಗುಣ ಆಕೆಯದ್ದು.  ಪ್ರಾಯ ಕಳೆದರೂ ಮದುವೆಗೆ ಒಪ್ಪದಿದ್ದುದ್ದಕ್ಕೆ ಹೆತ್ತವರ ತಿರಸ್ಕಾರ, ಸುಡುಸುಡು ಕೆಂಡದಲ್ಲಿ ಸುಟ್ಟು ಹೋದ ಎದೆಯ ಹಸಿ ನೋವುಗಳು ಅವಳನ್ನು ಬದುಕಿನುದ್ದಕ್ಕೂ ಚಂಚಲಕ್ಕೆ ಸಿಲುಕಿಸುತ್ತದೆ. ಇಷ್ಟೆಲ್ಲಾ ಹೇಳಿದ ಮೇಲೆ ಕಥಾ ನಾಯಕಿಯಿಂದ, ಅವಳೊಂದಿಗೆ ನಿಶ್ಚಯವಾದ ಮದುವೆಯ ಹುಡುಗ ಏನನ್ನು ಬಯಸಿದ್ದ ಎನ್ನುವುದನ್ನು ಹೇಳಿ ನಿಮ್ಮ ಓದನ್ನು ನಾನು ಕಸಿದುಕೊಳ್ಳಲಾರೆ‌‌‌.

ಉಳಿದ ಕಥೆಗಳಲ್ಲಿ ಕಾಣುವ ಶೋಷಣೆ, ವಿರೋಧ, ಅಸೂಯೆ, ಮೃದು ಪ್ರತಿಭಟನೆ,  ಸಹನೆ, ಅಸಹನೆ, ಸ್ವಾಭಿಮಾನ, ಏನೇ ಆದರೂ ಒಪ್ಪಿಕೊಳ್ಳುವ ಮನಸ್ಥಿತಿ ಎಲ್ಲವೂ ಧ್ವನಿಸುತ್ತವೆ.

‘ಸ್ತ್ರೀವಾದ’ ಎನ್ನುವ ಕನ್ನಡಕ ಹಾಕಿಕೊಳ್ಳದೆ ಓದಿದಾಗ ಇದು ಪ್ರತಿ ಹೆಣ್ಣು ತನ್ನೊಳಗೆ ಅನುಭವಿಸುವ ಸಾಮಾನ್ಯ ನೋವು ಅಂತನ್ನಿಸುತ್ತದೆ.

ಈ ಕೃತಿಯಲ್ಲಿ ಹೆಣ್ಣಿನ ನೋವಿನ ಭಾರಗಳಿಲ್ಲ, ಆದರೇ, ಹೆಣ್ಣು ಅದನ್ನು ಇಳಿಸಿಕೊಳ್ಳುವಲ್ಲಿ ತುಡಿಯುವ ಹೆಜ್ಜೆಗಳಿವೆ.

ಕೆಲವು ಕಥೆಗಳು ಅತಿಯಾಗಿ ಬಿಂಬಿಸಲ್ಪಟ್ಟಿವೆ ಅಂತನ್ನಿಸಿದರೂ, ಆರಂಭದಲ್ಲಿ ಸುತ್ತಿ ಬಳಸಿ ಕರೆದುಕೊಂಡು ಹೋಗುತ್ತಿವೆ ಅಂತನ್ನಿಸಿದರೂ, ‘ಅಯ್ಯೋ.‌.ಬೋರ್ ಅನ್ನಿಸುತ್ತಿದೆ’ ಅಂತ ಅನ್ನಿಸುವುದಿಲ್ಲ. ಓದಿಸಿಕೊಂಡು ಹೋಗುವ ಗುಣ ಕಥೆಗಳಿಗಿವೆ. ಮತ್ತು ಅನುವಾದಕರ ಭಾಷಾ ಹಿಡಿತದ ಬಗ್ಗೆ ಎರಡನೇ ಮಾತಿಲ್ಲ.

ಕಥೆಗಳಲ್ಲಿ ಕಥೆಗಾರ್ತಿಯ ಸ್ತ್ರೀ ಕಾಳಜಿ, ಮಾನವೀಯ ಕಾಳಜಿ, ಕಳಕಳಿ ಇಷ್ಟವಾಗುತ್ತದೆ. ಸ್ತ್ರೀ ಅಂದರೆ ಕೇವಲ ಜೀವವಷ್ಟೇ ಅಲ್ಲ. ಅದೊಂದು ಸುಖ ದುಃಖಗಳಿಗೆ ಸ್ಪಂದಿಸುವ ಭಾವ ಎನ್ನುವುದನ್ನು ಮತ್ತೆ ಮತ್ತೆ ಸಾರಿ ಹೇಳುತ್ತದೆ‌‌.

ಹೌದು, ಹೆಣ್ಣಿನ ಬದುಕು ಒಂಥರಾ ‘ನೆರಳು ಮರಗಳಿಲ್ಲದ ದಾರಿ’. ಕೃತಿಯ ಓದು ನಿಮಗೆ ದೊರಕಲಿ.

-ಶ್ರೀರಾಜ್ ವಕ್ವಾಡಿ

ಓದಿ : ವೈರಲ್ ಸ್ಟೋರಿ : ಇದು 82ರ ವೃದ್ಧನೋರ್ವನ ಪ್ರೇಮ ಕಥೆ..! ಪ್ರೀತಿಯೆಂದರೇ, ಶುದ್ಧ ಸಲಿಲ..!

ಟಾಪ್ ನ್ಯೂಸ್

CKM-CTR

ಬಿಜೆಪಿ, ಕಾಂಗ್ರೆಸ್‌ಗೆ ಪ್ರತ್ಯೇಕ ಕಾನೂನಿಲ್ಲ, ನನ್ನ ದೂರಿಗೆ ಕ್ರಮವಿಲ್ಲವೇಕೆ?: ಸಿ.ಟಿ.ರವಿ

Ankola; ಕಾರು ಢಿಕ್ಕಿ: ಪಾದಚಾರಿ ಮೃತ್ಯು; ಮೂವರಿಗೆ ಗಾಯ

Ankola; ಕಾರು ಢಿಕ್ಕಿ: ಪಾದಚಾರಿ ಮೃತ್ಯು; ಮೂವರಿಗೆ ಗಾಯ

Road Mishap: ಬೈಕ್‌- ಬಸ್ ಡಿಕ್ಕಿ; 8 ವರ್ಷದ ವಿದ್ಯಾರ್ಥಿನಿ ಸಾವು

Road Mishap: ಬೈಕ್‌- ಬಸ್ ಡಿಕ್ಕಿ; 8 ವರ್ಷದ ವಿದ್ಯಾರ್ಥಿನಿ ಸಾವು

Missing Case ಶಿರ್ವ: ವ್ಯಕ್ತಿ ನಾಪತ್ತೆ; ಪ್ರಕರಣ ದಾಖಲು

Missing Case ಶಿರ್ವ: ವ್ಯಕ್ತಿ ನಾಪತ್ತೆ; ಪ್ರಕರಣ ದಾಖಲು

Government scraps ‘no-detention policy’ for Classes 5 and 8 in central schools

Rule; 5, 8ನೇ ತರಗತಿಯಲ್ಲಿ ಫೈಲ್‌ ಆದರೆ ಭಡ್ತಿ ನೀಡುವಂತಿಲ್ಲ; ಅದೇ ಕ್ಲಾಸಲ್ಲಿ ಮುಂದುವರಿಕೆ!

1-biren

Manipur; ಪೊಲೀಸ್ ಇಲಾಖೆಯಲ್ಲಿ ಮೈತೇಯಿ ಮತ್ತು ಕುಕಿಗಳು ಒಟ್ಟಾಗಿ ಕೆಲಸ ಮಾಡಬೇಕು

Team India; A spinner from the Karnataka coast who joined Team India as a replacement for Ashwin

Team India; ಅಶ್ವಿನ್‌ ಬದಲಿಯಾಗಿ ಟೀಂ ಇಂಡಿಯಾ ಸೇರಿದ ಕರ್ನಾಟಕ ಕರಾವಳಿ ಮೂಲದ ಸ್ಪಿನ್ನರ್‌


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಇಂದು ರಾಷ್ಟ್ರೀಯ ರೈತ ದಿನ: ರೈತರ ಬದುಕು ಹಸನಾದರಷ್ಟೇ ಉಳಿದೀತು ಕೃಷಿ ಸಂಸ್ಕೃತಿ

ಇಂದು ರಾಷ್ಟ್ರೀಯ ರೈತ ದಿನ: ರೈತರ ಬದುಕು ಹಸನಾದರಷ್ಟೇ ಉಳಿದೀತು ಕೃಷಿ ಸಂಸ್ಕೃತಿ

Mandya :ಗಂಡ ಗದ್ಯ, ಹೆಂಡತಿ ಪದ್ಯ ಮಕ್ಕಳು ರಗಳೆ: ಹಾಸ್ಯ ಸಾಹಿತಿ ವೈ.ವಿ.ಗುಂಡೂರಾವ್‌

Mandya :ಗಂಡ ಗದ್ಯ, ಹೆಂಡತಿ ಪದ್ಯ, ಮಕ್ಕಳು ರಗಳೆ!: ಹಾಸ್ಯ ಸಾಹಿತಿ ವೈ.ವಿ.ಗುಂಡೂರಾವ್‌

Mandya Sahitya Sammelana: ಅಕ್ಷರ ಜಾತ್ರೆಯಲ್ಲಿ “ಹವಾ’ ಎಬ್ಬಿಸಿದ ತೊಟ್ಟಿ ಮನೆ..!

Mandya Sahitya Sammelana: ಅಕ್ಷರ ಜಾತ್ರೆಯಲ್ಲಿ “ಹವಾ’ ಎಬ್ಬಿಸಿದ ತೊಟ್ಟಿ ಮನೆ..!

Mandya: ನುಡಿ ಹಬ್ಬದ ಔತಣ ಸವಿಯಲು ಜನವೋ ಜನ- ವೃದ್ಧರಿಗೆ ವಿಶೇಷ ಕೌಂಟರ್‌

Mandya: ನುಡಿ ಹಬ್ಬದ ಔತಣ ಸವಿಯಲು ಜನವೋ ಜನ- ವೃದ್ಧರಿಗೆ ವಿಶೇಷ ಕೌಂಟರ್‌

ravishankar-guruji

World Meditation Day; ಶರೀರಕ್ಕೆ ಊಟ, ಆತ್ಮಕ್ಕೆ ಧ್ಯಾನ

MUST WATCH

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

ಹೊಸ ಸೇರ್ಪಡೆ

CKM-CTR

ಬಿಜೆಪಿ, ಕಾಂಗ್ರೆಸ್‌ಗೆ ಪ್ರತ್ಯೇಕ ಕಾನೂನಿಲ್ಲ, ನನ್ನ ದೂರಿಗೆ ಕ್ರಮವಿಲ್ಲವೇಕೆ?: ಸಿ.ಟಿ.ರವಿ

Ankola; ಕಾರು ಢಿಕ್ಕಿ: ಪಾದಚಾರಿ ಮೃತ್ಯು; ಮೂವರಿಗೆ ಗಾಯ

Ankola; ಕಾರು ಢಿಕ್ಕಿ: ಪಾದಚಾರಿ ಮೃತ್ಯು; ಮೂವರಿಗೆ ಗಾಯ

Road Mishap: ಬೈಕ್‌- ಬಸ್ ಡಿಕ್ಕಿ; 8 ವರ್ಷದ ವಿದ್ಯಾರ್ಥಿನಿ ಸಾವು

Road Mishap: ಬೈಕ್‌- ಬಸ್ ಡಿಕ್ಕಿ; 8 ವರ್ಷದ ವಿದ್ಯಾರ್ಥಿನಿ ಸಾವು

Missing Case ಶಿರ್ವ: ವ್ಯಕ್ತಿ ನಾಪತ್ತೆ; ಪ್ರಕರಣ ದಾಖಲು

Missing Case ಶಿರ್ವ: ವ್ಯಕ್ತಿ ನಾಪತ್ತೆ; ಪ್ರಕರಣ ದಾಖಲು

Government scraps ‘no-detention policy’ for Classes 5 and 8 in central schools

Rule; 5, 8ನೇ ತರಗತಿಯಲ್ಲಿ ಫೈಲ್‌ ಆದರೆ ಭಡ್ತಿ ನೀಡುವಂತಿಲ್ಲ; ಅದೇ ಕ್ಲಾಸಲ್ಲಿ ಮುಂದುವರಿಕೆ!

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.