ಬ್ರ್ಯಾಂಡ್ ಮೋದಿ: ನಿರಂತರವಾಗಿ ಚುನಾವಣೆ ಗೆಲ್ಲುವ ಕಲೆ
Team Udayavani, Dec 10, 2022, 6:35 AM IST
ಗುರುವಾರವಷ್ಟೇ ಗುಜರಾತ್ ಚುನಾವಣ ಫಲಿತಾಂಶ ಹೊರಬಿದ್ದಿದ್ದು, ಬಿಜೆಪಿಯೇ ತನ್ನ ಹಿಂದಿನ ಎಲ್ಲ ದಾಖಲೆಗಳನ್ನು ಮುರಿದಿದೆ. ವಿಶೇಷವೆಂದರೆ ಪ್ರಧಾನಿ ನರೇಂದ್ರ ಮೋದಿ ಅವರೇ ಗುಜರಾತ್ ಸಿಎಂ ಆಗಿದ್ದಾಗ, ಗೆಲ್ಲಲಾಗದಷ್ಟು ಸ್ಥಾನಗಳಲ್ಲಿ ಈ ಬಾರಿ ಬಿಜೆಪಿ ಗೆದ್ದಿದೆ. ಆದರೆ ಬಿಜೆಪಿ ಮತ್ತು ಮೋದಿಯವರ ಚುನಾವಣ ಕಾರ್ಯತಂತ್ರ ಗೊತ್ತಿರುವವರು ಇದು ವರ್ಷಗಳ ಕಾಲದ ಶ್ರಮಕ್ಕೆ ಸಿಕ್ಕ ಯಶಸ್ಸು ಎನ್ನುತ್ತಿದ್ದಾರೆ. ಹಾಗಾದರೆ ಗುಜರಾತ್‌ನಲ್ಲಿ ಮೋದಿ ಅವರು ಚುನಾವಣೆ ಗೆಲ್ಲುವ ಕಲೆಯನ್ನು ರೂಢಿಸಿಕೊಂಡದ್ದು ಹೇಗೆ? ಈ ಬಗ್ಗೆ ಇಲ್ಲಿದೆ ಮಾಹಿತಿ…
1987: ನಗರಪಾಲಿಕೆ ಚುನಾವಣೆ
ಸ್ಥಳೀಯ ಚುನಾವಣೆಗೆ ರಾಜ್ಯ ಮತ್ತು ರಾಷ್ಟ್ರ ಮಟ್ಟದ ನಾಯಕರು ತಲೆ ಕೆಡಿಸಿಕೊಳ್ಳಬೇಕಾ? ಈ ಪ್ರಶ್ನೆ ಇಂದಿನ ಹಲವಾರು ರಾಜಕಾರಣಿಗಳ ತಲೆಯಲ್ಲಿ ಇದೆ. ಆದರೆ ಈ ವಿಚಾರದಲ್ಲಿ ಬಿಜೆಪಿ ನಾಯಕರ ಆಲೋಚನೆಯೇ ಬೇರೆ. ಸಣ್ಣ ಪುಟ್ಟ ಚುನಾವಣೆಗಳೂ ಮಹತ್ವದ್ದೇ ಎಂದುಕೊಳ್ಳುವ ಬಿಜೆಪಿ, ಈ ನಿಟ್ಟಿನಲ್ಲಿ 1987ರಿಂದಲೇ ಗುಜರಾತ್‌ನಲ್ಲಿ ಕಾರ್ಯತಂತ್ರ ರೂಪಿಸಿತು. ಇದರ ಹಿಂದಿನ ಕಥೆಯೇ ರೋಚಕ. 1987ರಲ್ಲಿ ಅಟಲ್ ಬಿಹಾರಿ ವಾಜಪೇಯಿ ಅವರದ್ದು ದೇಶದ ಮಟ್ಟದಲ್ಲಿ ಕೇಳಿಬರುತ್ತಿದ್ದ ಬಿಜೆಪಿ ಅಗ್ರ ನಾಯಕರ ಹೆಸರಾಗಿತ್ತು. ಅದೊಂದು ದಿನ ಆಗಷ್ಟೇ ಆರ್‌ಎಸ್‌ಎಸ್‌ನಿಂದ ಬಿಜೆಪಿಗೆ ಕಾರ್ಯದರ್ಶಿಯಾಗಿ ಬಂದಿದ್ದ ಯುವ ನಾಯಕರೊಬ್ಬರು ರಾಷ್ಟ್ರೀಯ ನಾಯಕರು ಅಹ್ಮದಾಬಾದ್ ಮಹಾನಗರ ಪಾಲಿಕೆ ಚುನಾವಣೆಯ ಪ್ರಚಾರಕ್ಕಾಗಿ ಬರಬೇಕು ಎಂದು ವಿನಂತಿ ಮಾಡಿಕೊಳ್ಳುತ್ತಾರೆ.
ಹೀಗೆ ವಿನಂತಿ ಮಾಡಿದವರು ನರೇಂದ್ರ ಮೋದಿ. ವಿಚಿತ್ರವೆಂದರೆ ಮೋದಿಯವರ ಈ ವಿನಂತಿ ಬಗ್ಗೆ ವಾಜಪೇಯಿ ಅವರು ಸಿಟ್ಟಾಗುತ್ತಾರೆ. ಪಾಲಿಕೆ ಚುನಾವಣೆ ಪ್ರಚಾರಕ್ಕೆ ರಾಷ್ಟ್ರ ನಾಯಕರು ಬರಬೇಕೇ ಎಂದು ಪ್ರಶ್ನಿಸುತ್ತಾರೆ. ಆದರೆ ಮೋದಿಯವರು, ಮನವೊಲಿಕೆ ಮಾಡಿ, ನೀವು ಬಂದರೆ ಈ ಪಾಲಿಕೆ ಚುನಾವಣೆಯಲ್ಲಿ ದೊಡ್ಡ ಗೆಲುವು ಕಾಣಬಹುದು ಎಂದು ಹೇಳುತ್ತಾರೆ.
ಆಗ ಇದೊಂದು ವಿಚಿತ್ರವಾದ ಬೇಡಿಕೆಯಾಗಿತ್ತು ಎಂಬುದು ನಿಜ. ಆದರೂ ಗುಜರಾತ್‌ನ ವಿಧಾನಸಭೆಗೆ ನಡೆದಿದ್ದ ಚುನಾವಣೆಯಲ್ಲಿ ರಾಜೀವ್ ಗಾಂಧಿಯವರ ಪ್ರಭಾವದಿಂದಾಗಿ ಕಾಂಗ್ರೆಸ್ ದೊಡ್ಡ ಪ್ರಮಾಣದಲ್ಲಿ ಗೆದ್ದಿತ್ತು. ಬಿಜೆಪಿ ಕೇವಲ 11ರಲ್ಲಿ ಮಾತ್ರ ಜಯಗಳಿಸಿತ್ತು. ಹೀಗಾಗಿ ವಾಜಪೇಯಿ ಅವರು ಬಂದರೆ ಮಹಾನಗರ ಪಾಲಿಕೆ ಚುನಾವಣೆಯ ಫಲಿತಾಂಶವನ್ನಾದರೂ ಬದಲಾಯಿಸಬಹುದು ಎಂಬುದು ಮೋದಿಯವರ ಇರಾದೆಯಾಗಿತ್ತು.
ಮೋದಿಯವರ ಕರೆಗೆ ಓಗೊಟ್ಟು ವಾಜಪೇಯಿ ಅವರು ರಾಜೇಂದ್ರ ನಗರದ ವಿಜಯ್ ಚೌಕದಲ್ಲಿ ಪ್ರಚಾರ ನಡೆಸುತ್ತಾರೆ. ಆಗ ಭಾರೀ ಪ್ರಮಾಣದಲ್ಲಿ ಜನ ಸೇರಿ, ವಾಜಪೇಯಿ ಅವರಿಗೇ ಅಚ್ಚರಿಯಾಗುತ್ತದೆ. ಅಷ್ಟೇ ಅಲ್ಲ, ಈ ಬೃಹತ್ ಪ್ರಮಾಣದ ಜನರ ಬಗ್ಗೆ ವಾಜಪೇಯಿ ಅವರು ಸಂಶಯ ವ್ಯಕ್ತಪಡಿಸಿ, ಬೇರೆ ಕಡೆಯಿಂದ ನೀವು ಜನರನ್ನು ಕರೆದುಕೊಂಡು ಬಂದಿದ್ದೀರಿ ಎನ್ನುತ್ತಾರೆ. ಆದರೆ ಅವರು ನಾಲ್ಕು ವಾರ್ಡ್‌ಗಳ ಜನ ಎಂದು ಪಕ್ಷದವರೇ ಹೇಳಿ ಮೋದಿಯವರೇ ಈ ಮಟ್ಟದ ಜನರನ್ನು ಸಂಘಟಿಸಿದ್ದಾರೆ ಎಂದು ಹೇಳುತ್ತಾರೆ.
ಇದಾದ ಬಳಿಕ ಚುನಾವಣೆ ನಡೆದು ಬಿಜೆಪಿ ಅಹ್ಮದಾಬಾದ್ ಮಹಾನಗರ ಪಾಲಿಕೆಯನ್ನು ಗೆದ್ದು, ಮೊದಲ ಮೇಯರ್ ಪಟ್ಟವನ್ನೂ ಪಡೆಯುತ್ತದೆ. ಇದು ಗುಜರಾತ್‌ನ ರಾಜಕೀಯ ಭವಿಷ್ಯವನ್ನೇ ಬದಲಾವಣೆ ಮಾಡುತ್ತದೆ.
ಮೋದಿ ಸಂಘಟನೆ ಅಸ್ತ್ರ
ಮೊದಲೇ ಹೇಳಿದ ಹಾಗೆ, 1987ರ ಅಹ್ಮದಾಬಾದ್ ಮಹಾನಗರ ಪಾಲಿಕೆ ಚುನಾವಣೆ ಬಿಜೆಪಿ ಪಾಲಿಗೆ ಟರ್ನಿಂಗ್ ಪಾಯಿಂಟ್ ಆಗುತ್ತದೆ. ಈ ಚುನಾವಣೆಯಲ್ಲಿ ಮೋದಿ ಎರಡು ತಂತ್ರಗಳನ್ನು ಪಾಲನೆ ಮಾಡುತ್ತಾರೆ. ಒಂದು, ಪಕ್ಷದ ಕೇಡರ್ ಮತ್ತು ಸಂಘಟನೆ ಬಗ್ಗೆ ಗಮನ ಹರಿಸಿ, 200 ಜನರಿಗೆ ವೈಯಕ್ತಿಕವಾಗಿ ತರಬೇತಿ ನೀಡುತ್ತಾರೆ. ಚುನಾವಣ ಸಭೆಗಳನ್ನು ನಡೆಸುವುದು ಹೇಗೆ? ಎಂಬುದನ್ನು ಕಲಿಸಿಕೊಡುತ್ತಾರೆ. ಎರಡನೆಯದು, ಬಿಜೆಪಿ ಗೆದ್ದ ಮೇಲೆ, ಮೋದಿಯವರೇ ಗೆದ್ದ ಅಭ್ಯರ್ಥಿಗಳ ಮನೆ ಮನೆಗೆ ತೆರಳಿ ಅವರನ್ನು ಭೇಟಿ ಮಾಡುತ್ತಾರೆ. ಬೆಳಗ್ಗೆ 5 ಗಂಟೆಗೇ ಎದ್ದು, ಪ್ರತೀ ದಿನವೂ ಒಂದಷ್ಟು ಸದಸ್ಯರನ್ನು ಭೇಟಿ ಮಾಡುತ್ತಾರೆ. ಆಗ 100ಕ್ಕೂ ಹೆಚ್ಚು ಚುನಾಯಿತರನ್ನು ಭೇಟಿ ಮಾಡಿ ವೈಯಕ್ತಿಕವಾಗಿ ಅವರಿಗೆ ಅಭಿನಂದನೆ ಸಲ್ಲಿಸುತ್ತಾರೆ.
ಎರಡು ವರ್ಷಗಳಲ್ಲೇ ಬಿಜೆಪಿ, ಸಂಸತ್ ಚುನಾವಣೆಯಲ್ಲಿ ಗುಜರಾತ್‌ನಿಂದ ಹೆಚ್ಚು ಸ್ಥಾನ ಪಡೆದ ಪಕ್ಷವಾಗಿ ಹೊರಹೊಮ್ಮುತ್ತದೆ. 1995ರಲ್ಲಿ ವಿಧಾನಸಭೆ ಚುನಾವಣೆಯಲ್ಲೂ ಸ್ಪರ್ಧಿಸಿ ಗೆಲುವು ಸಾಧಿಸುತ್ತದೆ. ವಿಶೇಷವೆಂದರೆ ಆಗಿನಿಂದ ಇಲ್ಲಿವರೆಗೆ ಗುಜರಾತ್‌ನಲ್ಲಿ ಬಿಜೆಪಿ ಸೋತೇ ಇಲ್ಲ. ಇದಕ್ಕೆ ಪೂರಕವಾಗಿ ಗುಜರಾತ್‌ನಲ್ಲಿ ಬ್ರ್ಯಾಂಡ್ ಮೋದಿಯ ಪರಿಕಲ್ಪನೆಯನ್ನು ಪರಿಚಯಿಸಿ ಅದಕ್ಕೆ ತಕ್ಕಂತೆ ಚುನಾವಣೆ ಎದುರಿಸಿಕೊಂಡು ಹೋಗಲಾಗುತ್ತಿದೆ.
ಬೂತ್ ಮತ್ತು ಪನ್ನಾ ಪ್ರಮುಖ್ ಮೇಲೆ ಗಮನ
2014ರಿಂದ ಈಚೆಗೆ ಬಿಜೆಪಿಯಲ್ಲಿ ಹೊಸ ತಂತ್ರಗಾರಿಕೆಯನ್ನು ಅಳವಡಿಸಿಕೊಳ್ಳಲಾಗಿದೆ. ಅಂದರೆ ಕೇಡರ್ ನಿರ್ವಹಣೆಯ ಜಾರಿ, ವಿಸ್ತರಣೆ ಮತ್ತು ವಿತರಣೆಯ ಅಸ್ತ್ರಗಳನ್ನು ಇರಿಸಿಕೊಂಡು ಸಂಘಟನೆ ಮಾಡಲಾಗುತ್ತಿದೆ. ಈ ಮೂಲಕ ಕಟ್ಟ ಕಡೆಯ ಕಾರ್ಯಕರ್ತನ ಮೇಲೂ ಗಮನ ನೀಡಲಾಗುತ್ತದೆ. ಮೋದಿಯವರು ರಾಷ್ಟ್ರೀಯ ಸಂಘಟನ ಪ್ರಧಾನ ಕಾರ್ಯದರ್ಶಿಯಾದಾಗ “ಒನ್ ಬೂತ್ 10 ಯೂತ್’ ಎಂಬ ಸ್ಲೋಗನ್ ಮೂಲಕ ಸಂಘಟನೆ ಮಾಡುತ್ತಿದ್ದರು. ಈ ಐಡಿಯಾವನ್ನು ಮೋದಿಯವರು ಚಂಡೀಗಢ ಬಿಜೆಪಿಯ ಉಸ್ತುವಾರಿಯಾಗಿದ್ದಾಗ ಜಾರಿಗೆ ತಂದು, ಇಡೀ ರಾಜ್ಯದಲ್ಲಿ ಬೂತ್ ನಿರ್ವಹಣೆಯನ್ನೇ ಬದಲಾಯಿಸಿದ್ದರು.
ಬಳಿಕ “ಬೂತ್ ಜೀತಾ, ಎಲೆಕ್ಷನ್ ಜೀತಾ, ಹಮಾರಾ ಬೂತ್, ಸಬೆÕà ಮಜೂºತ್’ ಎಂಬ ಟ್ಯಾಗ್‌ಲೈನ್ ಮೂಲಕ ಸಂಘಟನೆ ಮಾಡಿದರು. ಇದಾದ ಮೇಲೆ ಎಲ್ಲೆಲ್ಲಿ ಮೋದಿಯವರು ಚುನಾವಣ ಉಸ್ತುವಾರಿಯಾಗಿ ತೆರಳುತ್ತಿದ್ದರೋ ಅಲ್ಲೆಲ್ಲಾ ಈ ಪ್ರಯೋಗ ಮಾಡುತ್ತಿದ್ದರು. ಈ ಮೂಲಕ ಚುನಾವಣೆ ಗೆಲ್ಲುವುದನ್ನು ಒಂದು ವಿಜ್ಞಾನದಂತೆ ಎಂಬುದನ್ನು ಬಹಿರಂಗಗೊಳಿಸುತ್ತಿದ್ದರು.
ಬೂತ್‌ಗಳ ಮೇಲೆ ಈ ರೀತಿ ಗಮನ ನೀಡಿದ್ದರಿಂದಲೇ 2014ರ ಅನಂತರ ದೇಶದಲ್ಲಿ ಬಿಜೆಪಿಯ ಬೂತ್‌ಗಲ ಸಂಖ್ಯೆ ಹೆಚ್ಚಾಯಿತು. ಈಗ 10,35,000 ವೋಟಿಂಗ್ ಬೂತ್‌ಗಳಿದ್ದು, ಇದರಲ್ಲಿ ಶೇ.83ರಷ್ಟನ್ನು 2014ರಿಂದ 2019ರ ಅಂತರದಲ್ಲಿ ಸ್ಥಾಪಿಸಲಾಗಿದೆ.
ಈ ಬೂತ್ ಮಟ್ಟದ ಸಂಘಟನೆಯಲ್ಲಿ ಪನ್ನಾ ಪ್ರಮುಖ್ ಮತ್ತು ವಿಸ್ತಾರಕ್‌ಗಳು ಕೆಲಸ ಮಾಡಿ ಸಂಘಟನೆಯನ್ನು ಇನ್ನಷ್ಟು ಗಟ್ಟಿ ಮಾಡುತ್ತಿದ್ದಾರೆ. ವಿಶೇಷವೆಂದರೆ ಈ ಅಭ್ಯಾಸ ಗುಜರಾತ್ ಬಿಜೆಪಿಯಲ್ಲಿ ಮೊದಲಿಗೆ ಬಂದಿದ್ದರೂ ಬಳಿಕ 2014ರ ಬಳಿಕ ಉತ್ತರ ಪ್ರದೇಶದಲ್ಲೂ ಜಾರಿ ಮಾಡಲಾಯಿತು. ಇದನ್ನು ಉತ್ತರ ಪ್ರದೇಶದಲ್ಲಿ ಮೋದಿಯವರು ಉಸ್ತುವಾರಿಯಾಗಿದ್ದಾಗ ಜಾರಿಗೆ ತಂದಿದ್ದರು ಎಂದು ಸ್ಥಳೀಯ ನಾಯಕರು ಹೇಳುತ್ತಾರೆ. ವಿಶೇಷವೆಂದರೆ,ಗುಜರಾತ್ ಸಿಎಂ ಆಗಿದ್ದ ಮೋದಿಯವರು, ಪನ್ನಾ ಪ್ರಮುಖ್ ಜವಾಬ್ದಾರಿಯನ್ನು ಮುಂದುವರಿಸಿದ್ದರು.
ಎಲ್ಲ ಚುನಾವಣೆಗಳ ಮೇಲೆ ಗಮನ
1987ರಿಂದ ಪಾಠ ಕಲಿತ ಬಿಜೆಪಿ ಅನಂತರದಲ್ಲಿ ಎಲ್ಲ ಸಣ್ಣಪುಟ್ಟ ಚುನಾವಣೆಗಳನ್ನು ಅಷ್ಟೇ ಗಂಭೀರವಾಗಿ ಪರಿಗಣಿಸಿ ತೆಗೆದುಕೊಂಡು ಹೋಗುತ್ತಿದೆ. ಉತ್ತರ ಪ್ರದೇಶದಲ್ಲಿ 2014ರ ಬಳಿಕ ಜಾರಿ ಮಾಡಲಾಯಿತು. ಇದಕ್ಕೂ ಮುನ್ನ ಇಲ್ಲಿ ಸ್ಥಳೀಯ ಚುನಾವಣೆಗಳಲ್ಲಿ ಬಿಜೆಪಿ ಸ್ಪರ್ಧಿಸುತ್ತಲೇ ಇರಲಿಲ್ಲ. 2014ರ ಅನಂತರ ಇಲ್ಲಿ ಗಂಭೀರವಾಗಿ ಪರಿಗಣಿಸಿ ಸ್ಪರ್ಧೆ ಮಾಡಲು ಆರಂಭಿಸಲಾಯಿತು. ಗುಜರಾತ್‌ನಲ್ಲಿ ಗೆದ್ದು, ಬಳಿಕ ಉತ್ತರ ಪ್ರದೇಶದ ಸ್ಥಳೀಯ ಸಂಸ್ಥೆಗಳು, ವಿಧಾನಸಭೆ ಚುನಾವಣೆಗಳನ್ನೂ ಗೆಲ್ಲಲು ಸಾಧ್ಯವಾಗಿದೆ.
ನಿರ್ವಹಣ ಮತ್ತು ಸಂಘಟನ ದೂರದೃಷ್ಟಿ
ಇದು ಬಿಜೆಪಿಯ ಚುನಾವಣ ಕಾರ್ಯತಂತ್ರದ ಬಹುದೊಡ್ಡ ಭಾಗ. ಇಲ್ಲಿ ಆರು ರೀತಿಯ ಅಧ್ಯಕ್ಷರಿರುತ್ತಾರೆ. ಅಂದರೆ ಬೂತ್, ಮಂಡಲ್, ಜಿಲ್ಲಾ, ಪ್ರಾದೇಶಿಕ, ರಾಜ್ಯ ಮತ್ತು ರಾಷ್ಟ್ರೀಯ ಅಧ್ಯಕ್ಷರು ಇರುತ್ತಾರೆ. ಚಂಡೀಗಢದ ಚುನಾವಣೆ ವೇಳೆ ಬಿಜೆಪಿಯು ಬೂತ್ ಮತ್ತು ಮಂಡಲ ಅಧ್ಯಕ್ಷರ ಹುದ್ದೆಗಳನ್ನು ಪರಿಚಯಿಸಿತು. ಆಗ ಅಲ್ಲಿ ಮೋದಿ ಉಸ್ತುವಾರಿಯಾಗಿದ್ದರು. 2014ರ ಬಳಿಕ ವಿಸ್ತಾರಕ್ ಎಂಬ ಇನ್ನೊಂದು ಹುದ್ದೆ ಸೃಷ್ಟಿಸಲಾಗಿದೆ. ಈ ಮೂಲಕ ಸ್ವಯಂ ಸೇವಕರು, ತಮ್ಮ ಕ್ಷೇತ್ರಗಳನ್ನು ಬಿಟ್ಟು ಬೇರೆ ಕಡೆಯ ನಿರ್ದಿಷ್ಟ ಬೂತ್‌ಗಳಲ್ಲಿ 15 ದಿನ, ಆರು ತಿಂಗಳು ಮತ್ತು ಒಂದು ವರ್ಷದ ವರೆಗೆ ಇರಬೇಕು. ಅಲ್ಲದೆ, 1998ರ ಮಧ್ಯಪ್ರದೇಶ ಚುನಾವಣೆ ವೇಳೆ ವಿಜಯ ಕ್ರಾಂತಿ ಕಾರ್ಯಕರ್ತರು ಎಂಬ ಪರಿಕಲ್ಪನೆಯನ್ನು ಜಾರಿಗೆ ತಂದಿತು. ಆಗ ಮೋದಿ ಅವರು ಮಧ್ಯಪ್ರದೇಶದ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ(ಉಸ್ತುವಾರಿ)ಯಾಗಿದ್ದರು. ಈಗ 320 ಪೂರ್ಣಾವಧಿ ಕಾರ್ಯಕರ್ತರನ್ನು ಗುರುತಿಸಿ, ಪ್ರತೀ ಯೊಂದು ವಿಧಾನಸಭಾ ಕ್ಷೇತ್ರದಲ್ಲೂ ಕೆಲಸ ಮಾಡಲು ಬಿಡಲಾಗಿತ್ತು.
ಕೊನೆ ಚುನಾವಣೆಯೆಂದೇ ಭಾವಿಸಿ ಸ್ಪರ್ಧೆ
ಬಿಜೆಪಿಯು ಯಾವುದೇ ಚುನಾವಣೆಯನ್ನು ಅಷ್ಟು ಸುಲಭವಾಗಿ ತೆಗೆದುಕೊಳ್ಳುವುದಿಲ್ಲ. ಒಂದು ವೇಳೆ ಸೋತರೂ, ಕೈಚೆಲ್ಲಿ ಕುಳಿತುಕೊಳ್ಳುವುದಿಲ್ಲ. 2017ರಲ್ಲಿ ಗುಜರಾತ್‌ನಲ್ಲಿ ಬಿಜೆಪಿ ಮತ್ತು ಕಾಂಗ್ರೆಸ್ ಹೆಚ್ಚು ಕಡಿಮೆ ಸಮಬಲದ ಹೋರಾಟ ನಡೆಸಿದ್ದವು. ಇದನ್ನು ಮನಗಂಡ ಬಿಜೆಪಿ, ಆಗಿನಿಂದಲೂ ಸಂಘಟನೆಯನ್ನು ಬಲಪಡಿಸುತ್ತಾ ಹೋದರೆ ಕಾಂಗ್ರೆಸ್ ಹೆಚ್ಚು ಕಡಿಮೆ ಗುಜರಾತ್ ಮೇಲಿನ ಗಮನವನ್ನೇ ಬಿಟ್ಟಿತು. ಅಂದರೆ ಈ 5 ವರ್ಷಗಳ ಶ್ರಮದ ಪರಿಣಾಮವಾಗಿಯೇ ಈ ಬಾರಿ ಭರ್ಜರಿ ಫಲಿತಾಂಶ ಸಿಕ್ಕಿದೆ ಎಂಬ ವಿಶ್ಲೇಷಣೆಗಳು ಕೇಳಿಬಂದಿವೆ. ಅಲ್ಲದೆ, ರಾಜಕೀಯದಲ್ಲಿ ವಿಶ್ರಾಂತಿ ಇಲ್ಲ. 24×7 ರಾಜಕಾರಣ ಮಾಡುತ್ತಲೇ ಇರಬೇಕು ಎಂಬುದು ಬಿಜೆಪಿ ಧ್ಯೇಯವಾಗಿದೆ.
ಮಹಿಳೆಯರಿಗೆ ಸ್ಥಾನ
2014ರಿಂದ ಈಚೆಗೆ ಮಹಿಳಾ ಮತದಾರರ ಮೇಲೆ ಬಿಜೆಪಿ ಹೆಚ್ಚು ಗಮನವಿರಿಸಿಕೊಂಡಿದೆ. ಕಾಂಗ್ರೆಸ್‌ಗೆ ಹೋಲಿಕೆ ಮಾಡಿದರೆ ಈ ಅವಧಿಯಿಂದ ಈಚೆಗೆ ಹೆಚ್ಚು ಮತದಾರರು ಬಿಜೆಪಿ ಕಡೆಗೆ ವಾಲಿದ್ದಾರೆ. ಗುಜರಾತ್‌ನಲ್ಲಿ ಮಹಿಳಾ ಕೇಂದ್ರಿತ ಯೋಜನೆಗಳನ್ನು ಜಾರಿ ಮಾಡಿ ಇದನ್ನು ಬೇರೆಡೆ ತೆಗೆದುಕೊಂಡು ಹೋಗಲಾಗಿದೆ. ಅಂದರೆ 2007ರಲ್ಲಿ ಮೋದಿ ಅವರು ಪ್ರತೀ ಜಿಲ್ಲೆಯಲ್ಲೂ ಮಹಿಳಾ ಸಮಾವೇಶಗಳನ್ನು ನಡೆಸುತ್ತಿದ್ದರು. ಗುಜರಾತ್‌ನಲ್ಲಿ ಸಿಎಂ ಆದ ಬಳಿಕವೂ ಅವರು 27 ಮಹಿಳಾ ಸಮ್ಮೇಳನ ನಡೆಸಿದ್ದರು. ಹಾಗೆಯೇ ಕೇಂದ್ರದಲ್ಲಿ ಅಧಿಕಾರಕ್ಕೆ ಬಂದ ಬಳಿಕವೂ ಸಂಪುಟದಲ್ಲಿ ಹೆಚ್ಚು ಮಹಿಳೆಯರಿಗೆ ಸ್ಥಾನ ನೀಡಲಾಗಿದೆ. ತಮ್ಮ ಭಾಷಣಗಳಲ್ಲೂ ಹೆಚ್ಚಾಗಿ ಮಹಿಳಾ ಕೇಂದ್ರಿತ ವಿಚಾರಗಳನ್ನೇ ಪ್ರಸ್ತಾವಿಸುತ್ತಾರೆ.
ಕೃಪೆ: ಫಸ್ಟ್ ಪೋಸ್ಟ್
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Golden Jubliee: ಕರುನಾಡ ರಂಗವೈಭವ ಮತ್ತೆ ಮರಳಿ ತರಬೇಕಿದೆ…
ರೀಲ್‌ನಿಂದ ರಿಯಲ್ ಕೃಷಿಯತ್ತ ಚಿತ್ರೋದ್ಯಮಿ ಚಿತ್ತ; ಬಸವರಾಜ ಚಿತ್ರ ಮಂದಿರದ ಮಾಲೀಕ ಕೋಳೂರು!
Donald Trump Salary: ಅಮೆರಿಕದ ಅಧ್ಯಕ್ಷರಿಗೆ ಸಿಗುವ ಸಂಬಳ ಎಷ್ಟು? ಏನೇನು ಸೌಲಭ್ಯಗಳಿವೆ
Explainer:ಅಮೇರಿಕವನ್ನು ಅಭಿನಂದಿಸುವ ಮೊದಲು ಭಾರತೀಯರು ಕಲಿಯಬೇಕಾದ ರಾಜಕೀಯ ಪಾಠ…
Golden Jubliee: ಕನ್ನಡಕ್ಕೆ ಹೋರಾಡುತ್ತಲೇ ಇರಬೇಕಾದ ಸ್ಥಿತಿ ಬಾರದಿರಲಿ
MUST WATCH
ಹೊಸ ಸೇರ್ಪಡೆ
Waqf Bill: ಜೆಪಿಸಿ ಅಧ್ಯಕ್ಷರ ಭೇಟಿ ಚುನಾವಣ ನಿಯಮ ಉಲ್ಲಂಘನೆ: ಸಚಿವ ಪ್ರಿಯಾಂಕ್
MUDA: ಆರೋಪಿ ಸ್ಥಾನದಲ್ಲಿರುವ ಸಿಎಂ ತಮ್ಮ ಬೆನ್ನು ತಾವೇ ತಟ್ಟಿಕೊಳ್ಳುತ್ತಿದ್ದಾರೆ: ಬಿವೈವಿ
By Election: ಒಬ್ಬ ಯುವಕನ ಕಟ್ಟಿ ಹಾಕಲು ಬೀಡುಬಿಟ್ಟ ಕೈ ನಾಯಕರ ದಂಡು: ಎಚ್.ಡಿ.ಕುಮಾರಸ್ವಾಮಿ
Rahul Gandhi ಗುರಿ ತಪ್ಪಿದ ಕ್ಷಿಪಣಿ, ಸೋನಿಯಾರಿಂದ ತರಬೇತಿ ಅಗತ್ಯ: ಹಿಮಾಂತ
Delhi; ಕಾನೂನು ಅಧಿಕಾರಿ ನಿವಾಸದಲ್ಲಿ 3.79 ಕೋಟಿ ನಗದು ಸಿಬಿಐನಿಂದ ವಶಕ್ಕೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.