ಬ್ರೇಕಿಂಗ್ ನ್ಯೂಸ್ ಹಿಂದಿನ ಶಾಕಿಂಗ್ ಸತ್ಯಗಳು!
Team Udayavani, May 28, 2017, 5:42 AM IST
ಸೆನ್ಸೇಷನಲಿಸಂ ಅಥವಾ ರೋಚಕತೆ. “ಮೀಡಿಯಾ ಸೆನ್ಸೇಷನಲಿಸಂ’ ಎಂದು ಕರೆಸಿಕೊಳ್ಳುವ ಈ ಪದ ಈಗ ಅಂತರ್ಜಾಲದಲ್ಲಿ “ಕ್ಲಿಕ್ ಬೇಯ್’ ಎನ್ನುವ ಹೊಸ ರೂಪದಲ್ಲೂ ಅವತರಿಸಿದೆ. ಬೇಯ್ ಭಾವಾರ್ಥ ಗಾಳಕ್ಕೆ ಬೀಳಿಸುವುದು ಎಂದರ್ಥ.
ನೀವು ಅಂತರ್ಜಾಲಕ್ಕೆ ಕಾಲಿಟ್ಟಾಕ್ಷಣ “ಶಾಕಿಂಗ್ ನ್ಯೂಸ್’ ಎನ್ನುವ ಹೆಸರಲ್ಲಿ ಯಾವುದೋ ಲೇಖನ ಅಥವಾ ವೀಡಿಯೋ ಕಾಣಿಸಿಕೊಳ್ಳುತ್ತದೆ. ನೀವು ಅದನ್ನು ಓಪನ್ ಮಾಡಿದಾಗ ತಲೆಬರಹಕ್ಕೂ ಅದರಲ್ಲಿರುವ ವಿವರಕ್ಕೂ ಹೆಚ್ಚು ಸಂಬಂಧವಿಲ್ಲ ಎನ್ನುವುದು ಅರ್ಥವಾಗಿರುತ್ತದೆ. ಇನ್ನು ಬ್ರೇಕಿಂಗ್ ನ್ಯೂಸ್‌ನ ಕಥೆಯೂ ಇಷ್ಟೇ.
ನಾನು ನ್ಯೂಸ್ ಚಾನೆಲ್ ನೋಡೋದಿಲ್ಲ, ಪೇಪರ್ ಓದೋದಿಲ್ಲ ಅನ್ನುವುದನ್ನು ಕೇಳಿ ಜನರೆಲ್ಲ ಆಶ್ಚರ್ಯಗೊಳ್ಳುತ್ತಾರೆ. “ನ್ಯೂಸ್ ನೋಡಲ್ಲ ಅಂದ್ರೆ ಜಗತ್ತಿನಲ್ಲಿ ಏನೇನಾಗ್ತಿದೆ ಅಂತ ಹೇಗೆ ತಿಳಿದುಕೊಳ್ತೀಯಾ?’ ಎಂದು ಪ್ರಶ್ನಿಸುತ್ತಾರೆ.
ನಿಜಕ್ಕೂ ನನಗೆ ಕಳವಳವುಂಟುಮಾಡುವ ಅಂಶವೆಂದರೆ “ವರದಿ/ ಸುದ್ದಿಗಳು ಜಗತ್ತಿನಲ್ಲಿ ಏನಾಗುತ್ತಿದೆ ಎನ್ನುವುದರ ಸ್ಪಷ್ಟ ಚಿತ್ರಣ ನೀಡುತ್ತವೆ’ ಎಂದು ಜನರು ಭಾವಿಸುತ್ತಿದ್ದಾರೆ ಎನ್ನುವುದು. ನಾನು ಸುದ್ದಿಗಳಿಂದ ದೂರವಿರುವುದಕ್ಕೆ ಅವು ಬಿತ್ತರಿಸುವ ನೆಗಟಿವ್ ಮಾಹಿತಿಯೇ ಕಾರಣ.
ನನಗೆ ತಿಳಿವಳಿಕೆ ಬಂದಾಗಿನಿಂದ ನಿರಂತರವಾಗಿ ಕಾಡುತ್ತಿರುವ ಪ್ರಶ್ನೆಯಿದು: “ಅದೇಕೆ ನ್ಯೂಸ್‌ಗಳು ಹೆಚ್ಚಾಗಿ ನೆಗೆಟಿವ್ (ಋಣಾತ್ಮಕವಾಗಿ) ಇರುತ್ತವೆ? ಸಿಹಿ ಸುದ್ದಿಗಳಿಗಿಂತಲೂ ಕಹಿ ಸುದ್ದಿಗಳೇ ಹೆಚ್ಚಾಗಿರುವುದೇಕೆ?’
ಈ ವಿಚಾರದಲ್ಲಿ ಕೆಲವು ಪರಿಣಾಮಕಾರಿ ಸಂಶೋಧನೆಗಳು ನಡೆದಿವೆ ಎನ್ನುವುದನ್ನು ತಿಳಿದುಕೊಂಡು ನನಗೆ ಸಂತೋಷವಾ ಯಿತು. ಹೇಗೆ “ನ್ಯೂಸ್’ ವ್ಯಕ್ತಿಯೊಬ್ಬನ ಸಂತೋಷದ ಮೇಲೆ ಪರಿಣಾಮಬೀರುತ್ತದೆ ಎನ್ನುವುದನ್ನು ತಿಳಿದ ಮೇಲಂತೂ ಕಮರ್ಷಿಯಲ್ ನ್ಯೂಸ್‌ನಿಂದ ದೂರವೇ ಉಳಿಯುವುದು ಒಳ್ಳೆಯದೆಂದು ನಿರ್ಧರಿಸಿದ್ದೇನೆ.
ನ್ಯೂಸ್ ಉದ್ಯಮ: ನಮ್ಮ ಬ್ರಿಟನ್‌ನಲ್ಲಿ ಸುದ್ದಿ ಪ್ರಸಾರ ಆರಂಭ ವಾಗಿದ್ದು 1920ರ ಆದಿಯಲ್ಲಿ. ಆಗಿನ ನ್ಯೂಸ್‌ಗೂ ಈಗಿನದ್ದಕ್ಕೂ ಇರುವ ವ್ಯತ್ಯಾಸವೆಂದರೆ ಈಗ ವಾರ್ತಾ ಲೋಕದೊಂದಿಗೆ ಜಾಹೀರಾತು ಜಗತ್ತೂ ಸೇರಿಕೊಂಡಿರುವುದು. ಈಗ ಸ್ವಲ್ಪ ಲಾಜಿಕಲ್ ಆಗಿ ಯೋಚನೆ ಮಾಡಿ. ಕಂಪೆನಿಯೊಂದು ನ್ಯೂಸ್ ಚಾನೆಲ್ ಒಂದಕ್ಕೆ ಕೋಟ್ಯಂತರ ರೂಪಾಯಿ ಖರ್ಚು ಮಾಡಿ ಅಡ್ವಟೈìಸ್‌ಮೆಂಟ್ ಕೊಡುತ್ತಿದೆಯೆಂದರೆ, ಅದರ ಆದ್ಯತೆ ಯೇನಿದ್ದರೂ ತಮ್ಮ ಉತ್ಪನ್ನವು ಹೆಚ್ಚು ಜನರನ್ನು ತಲುಪಬೇಕು ಎನ್ನುವುದೇ ಆಗಿರುತ್ತದೆ.
ಇಂಥ ಕ್ಲೈಂಟ್‌ಗಳು ಬೇಕೆಂದರೆ ಟೆಲಿವಿಷನ್ ಚಾನೆಲ್‌ಗಳು “ನಮ್ಮ ಚಾನೆಲ್‌ಗೆ ಹೆಚ್ಚು ವೀಕ್ಷಕರಿದ್ದಾರೆ’ ಎಂದು ರುಜುವಾತು ಮಾಡಬೇಕಾಗುತ್ತದೆ. ಈ ಕಾರಣಕ್ಕಾಗಿಯೇ ಯಾವುದೇ ಟೆಲಿವಿಷನ್ ಚಾನೆಲ್‌ನ ಉದ್ದೇಶ ತಮ್ಮ ವೀಕ್ಷಕರ ಸಂಖ್ಯೆಯನ್ನು ಹೆಚ್ಚು ಮಾಡಿಕೊಳ್ಳಬೇಕು ಎನ್ನುವುದೇ ಆಗಿರುತ್ತದೆ ಹೊರತು, ವೀಕ್ಷಕರಲ್ಲಿ ಜಾಗೃತಿ ಮೂಡಿಸುವುದೋ ಅಥವಾ ಮೌಲ್ಯಯುತ ಮಾಹಿತಿ ನೀಡುವುದೋ ಅಲ್ಲ.
ಹೆಚ್ಚು ವೀಕ್ಷಕರನ್ನು ಸೆಳೆಯಲು ಇರುವ ಸರಳ ಮಾರ್ಗವೆಂದರೆ: ಸೆನ್ಸೇಷನಲಿಸಂ ಅಥವಾ ರೋಚಕತೆ. “ಮೀಡಿಯಾ ಸೆನ್ಸೇಷನಲಿಸಂ’ ಎಂದು ಕರೆಸಿಕೊಳ್ಳುವ ಈ ಪದ ಈಗ ಅಂತರ್ಜಾಲದಲ್ಲಿ “ಕ್ಲಿಕ್ ಬೇಯ್r’ ಎನ್ನುವ ಹೊಸ ರೂಪದಲ್ಲೂ ಅವತರಿಸಿದೆ. ಬೇಯ್r ಎಂದರೆ ಗಾಳಕ್ಕೆ ಸಿಲುಕುವುದು ಎಂದರ್ಥ.
ನೀವು ಅಂತರ್ಜಾಲಕ್ಕೆ ಕಾಲಿಟ್ಟಾಕ್ಷಣ “ಶಾಕಿಂಗ್ ನ್ಯೂಸ್’ ಎನ್ನುವ ಹೆಸರಲ್ಲಿ ಯಾವುದೋ ಲೇಖನ ಅಥವಾ ವೀಡಿಯೋ ಕಾಣಿಸಿಕೊಳ್ಳುತ್ತದೆ. ನೀವು ಅದನ್ನು ಓಪನ್ ಮಾಡಿದಾಗ ತಲೆಬರಹಕ್ಕೂ ಅದರಲ್ಲಿರುವ ವಿವರಕ್ಕೂ ಹೆಚ್ಚು ಸಂಬಂಧವಿಲ್ಲ ಎನ್ನುವುದು ಅರ್ಥವಾಗಿರುತ್ತದೆ. ಆದರೆ ಅದನ್ನು ಕ್ಲಿಕ್ ಮಾಡಿ ಗಾಳಕ್ಕೆ ಸಿಲುಕಿ ಸುದ್ದಿ ಹಾಕಿದವರಿಗೆ ಲಾಭವಂತೂ ಮಾಡಿಕೊಡುತ್ತೀರಿ!
ನ್ಯೂಸ್ ಚಾನೆಲ್‌ಗಳು “BREAKING NEWS ಎನ್ನುವ ಹೆಸರಲ್ಲಿ ವೀಕ್ಷಕರನ್ನು ಬೋನಿಗೆ ಬೀಳಿಸುತ್ತವೆ.
ಆದರೆ ಬ್ರೇಕಿಂಗ್ ಅಥವಾ ಶಾಕಿಂಗ್ ನ್ಯೂಸ್ ಎಂದಾಕ್ಷಣ ನಾವು ಅದನ್ನು ನೋಡುವುದೇಕೆ? (ಈ ಲೇಖನವನ್ನು ನೀವು ಓದಲಾರಂಭಿಸಿದ್ದೂ “ಶೀರ್ಷಿಕೆ’ ರೋಚಕವಾಗಿದೆ ಎಂದೇ ಅಲ್ಲವೇ?) ಬಹುಶಃ ನ್ಯೂಸ್ ಚಾನೆಲ್‌ಗಳ ಮಂದಿಗೂ ಇದಕ್ಕೆ ಸ್ಪಷ್ಟ ಕಾರಣ ಗೊತ್ತಿರಲಿಕ್ಕಿಲ್ಲ. ಆದರೆ ನಾವು ಇಂಥ ಸುದ್ದಿಗಳತ್ತ ಬೇಗನೇ ಗಮನ ಕೊಡುವುದೇಕೆ ಎಂಬುದಕ್ಕೆ ಮೂಲ ಕಾರಣ ನಮ್ಮ ವಿಕಸನ ಕ್ರಿಯೆಯಲ್ಲಿ ಹುದುಗಿದೆ!
ಮಿದುಳಲ್ಲಿದೆ ಉತ್ತರ: ನಮ್ಮ ಮಿದುಳಲ್ಲಿ ಅಮಿಗ್ಡಲಾ ಎನ್ನುವ ಭಾಗವಿದೆ. ಬಾದಾಮಿ ಆಕಾರದಲ್ಲಿರುವ ಈ ಮಿದುಳಿನ ಪುಟ್ಟ ಪ್ರದೇಶದ ಕೆಲಸವೆಂದರೆ “ಅಪಾಯ’ವನ್ನು ಗುರುತಿಸುವುದು ಮತ್ತು ತುರ್ತು ಪರಿಸ್ಥಿತಿಗೆ ನಮ್ಮನ್ನು ಸಜ್ಜುಗೊಳಿಸುವುದು.
ಪುರಾತನ ಕಾಲದಲ್ಲಿ, ಅಂದರೆ ನಾವೆಲ್ಲ ಇನ್ನೂ ಗುಹೆಗಳಲ್ಲಿ ವಾಸಿಸುತ್ತಿದ್ದಾಗ ನಮ್ಮ ಸುತ್ತಮುತ್ತಲಿನ ಪರಿಸರದ ಮೇಲೆ ಗಮನ ಕೊಟ್ಟರೆ ಮಾತ್ರ ಅಪಾಯದಿಂದ ತಪ್ಪಿಸಿಕೊಳ್ಳಬಹುದಿತ್ತು. ಒಂದು ವೇಳೆ ಹೊರಗೆ ಹಕ್ಕಿಗಳು ಚಿಲಿಪಿಲಿಗುಟ್ಟುತ್ತಿದ್ದರೆ, ಸೌಮ್ಯ ಪ್ರಾಣಿಯೊಂದು ಆರಾಮವಾಗಿ ಗುಹೆಯ ಹೊರಗೆ ಆಟವಾಡುತ್ತಿದ್ದರೆ, ಯಾವುದೇ ಅಪಾಯವಿಲ್ಲ ಎನ್ನುವುದು ಒಳಗೆ ಕುಳಿತವರಿಗೆ ಅರ್ಥವಾಗುತ್ತಿತ್ತು.
ಸುತ್ತಲಿನ ಪರಿಸರದಲ್ಲಿ ತುಸು ಬದಲಾವಣೆಯೇನಾದರೂ ಕಂಡು ಬಂತೆಂದರೆ ಅಮಿಗ್ಡಲಾ ಜಾಗೃತವಾಗಿಬಿಡುತ್ತದೆ. ಅಪಾಯದಿಂದ ತಪ್ಪಿಸಿಕೊಂಡು ಓಡಲು ಅಥವಾ ಅದನ್ನೆದುರಿಸಲು ನಮ್ಮನ್ನದು ಸಜ್ಜುಮಾಡುತ್ತದೆ. ಈ ಕಾರಣಕ್ಕಾಗಿಯೇ “ಬದುಕಿ ಉಳಿಯುವುದಕ್ಕಾಗಿ’ ನಾವು ಹೆಚ್ಚಾಗಿ ನೆಗೆಟಿವ್/ ಅಪಾಯಕರ ಸಂಗತಿಗಳತ್ತಲೇ ಗಮನಕೊಡಲಾರಂಭಿಸಿದೆವು. ಇಂದು ಸುದ್ದಿವಾಹಿನಿಗಳು ವೀಕ್ಷಕರನ್ನು ಸೆಳೆಯಲು ಇದೇ ತಂತ್ರವನ್ನೇ ಬಳಸುತ್ತಿವೆ. “ದೇಶದ ಮೇಲೆ ದಾಳಿಯಾಗಬಹುದಾ?’ ಎನ್ನುವ ಬ್ರೇಕಿಂಗ್ ನ್ಯೂಸ್ ನೋಡುತ್ತಿರುವಂತೆಯೇ ವೀಕ್ಷಕನ ಅಮಿಗ್ಡಲಾ ಜಾಗೃತವಾಗುತ್ತದೆ. ದೇಶದ ಮೇಲೆ ದಾಳಿಯಾದರೆ ತನಗೂ ಅಪಾಯ ತಪ್ಪಿದ್ದಲ್ಲ ಎನ್ನುವ ಭಯ ಅವನಲ್ಲಿ ಮೊಳಕೆಯೊಡೆದು, ಇನ್ನಷ್ಟು ಸುದ್ದಿ ತಿಳಿದುಕೊಳ್ಳಲು ಪ್ರಯತ್ನಿಸುತ್ತಾನೆ!
ಸಂಶೋಧನೆಯೊಂದರ ಪ್ರಕಾರ ಇಂದು ಜಗತ್ತಿನಲ್ಲಿನ ಪ್ರತಿ 17 ಸುದ್ದಿಯಲ್ಲಿ ಒಂದು ಸುದ್ದಿ ಮಾತ್ರ ಗುಣಾತ್ಮಕವಾಗಿದ್ದರೆ, ಉಳಿದ 16 ಸುದ್ದಿಗಳು ನೆಗೆಟಿವ್ ಆಗಿರುತ್ತವಂತೆ. ಆದರೆ ಇದರಿಂದಾಗಿ ವೀಕ್ಷಕರ ಮಿದುಳಿನ ಮೇಲಾಗುತ್ತಿರುವ ಪರಿಣಾಮದ ಬಗ್ಗೆ ಸುದ್ದಿ ವಾಹಿನಿಗಳು, ಪತ್ರಿಕೆಗಳು ತಲೆಕೆಡಿಸಿಕೊಳ್ಳುತ್ತಿಲ್ಲ. ಹೇಗೆ ಒಂದು ಕೆಟ್ಟ ಸಂಗತಿ ಮನುಷ್ಯನ ಮನಸ್ಸನ್ನು ಕದಡಬಲ್ಲದೋ ನೋಡಿ: ನೀವು ಆಫೀಸಿಗೆ ಹೊರಟಿರುತ್ತೀರಿ. ನಿಮ್ಮ ಪಕ್ಕದಿಂದ ಕಾರು, ಬೈಕುಗಳು ಹಾದು ಹೋಗುತ್ತಲೇ ಇರುತ್ತವೆ. ಆದರೆ ಅವುಗಳನ್ನು ನೀವು ಗಮನಿಸುವುದಿಲ್ಲ.
ಅದೇ ನೀವು ಡ್ರೈವಿಂಗ್ ಮಾಡುವಾಗ ಅಪಘಾತವಾಗಿ ಬಿದ್ದ ಕಾರೊಂದನ್ನು ನೋಡಿದಿರಿ ಎಂದುಕೊಳ್ಳಿ. ಕೂಡಲೇ ನಿಮ್ಮ ವಾಹನ ನಿಲ್ಲಿಸಿ ಅಥವಾ ಸ್ಲೋ ಮಾಡಿ ಅದನ್ನು ನೋಡುತ್ತೀರಿ.
ಎಲ್ಲರಿಗೂ ಬೇಕು ಬ್ರೇಕಿಂಗ್ ನ್ಯೂಸ್: ನಮಗೆ ಕಹಿ ಸುದ್ದಿಗಿಂತ, ಸಿಹಿ ಸುದ್ದಿಯೇ ಇಷ್ಟ ಎಂದು ಜನರು ಹೇಳುತ್ತಾರೆ. ಸುದ್ದಿ ವಾಹಿನಿಗಳಲ್ಲಿ ಬರೀ ಕೆಟ್ಟ ಸುದ್ದಿಗಳೇ ಬರುತ್ತವೆ ಎಂದೂ ಸೇರುಸುತ್ತಾರೆ. ಹೀಗೆ ಹೇಳುವವರ ಮೇಲೆ ಮನಶಾÏಸ್ತ್ರಜ್ಞರು ಪ್ರಯೋಗ ನಡೆಸಿದರು. ತಮಗೆ ಪಾಸಿಟಿವ್ ಸುದ್ದಿಗಳು ಬೇಕು ಎಂದು ಹೇಳಿದವರ ಮುಂದೆ ಸಾಲು ಸಾಲು ಸುದ್ದಿಗಳನ್ನು ಇಟ್ಟರು. ಐ ಟ್ರಾÂಕಿಂಗ್ ಡಿವೈಸ್‌ನ ಮೂಲಕ ಅವರ ಕಣ್ಣುಗಳ ಚಲನೆಯನ್ನು ನೋಡಲಾಯಿತು. ಪ್ರಯೋಗದಲ್ಲಿ ಪಾಲ್ಗೊಂಡ ಬಹುತೇಕರ ಕಣ್ಣುಗಳು ಹರಿದಾಡಿದ್ದು “ಭ್ರಷ್ಟಾಚಾರ, ಕೊಲೆ, ದಾಳಿ…’ ಇತ್ಯಾದಿ ನೆಗೆಟಿವ್ ಸುದ್ದಿಗಳತ್ತಲೇ.
ಸುದ್ದಿಯೇ ಜಗತ್ತಿನ ಸತ್ಯವೇ?: ಒಂದು ವೇಳೆ ನೀವು ಜಗತ್ತಿನ ಬಗ್ಗೆ ತಿಳಿದುಕೊಳ್ಳಲು ಕೇವಲ ವಾರ್ತೆಗಳನ್ನೇ ಅವಲಂಬಿಸಿದ್ದೀರಿ ಎಂದರೆ, ನಿಸ್ಸಂಶಯವಾಗಿಯೂ ನೀವು “ಇಂದು ಜಗತ್ತು ಅತ್ಯಂತ ಅಪಾಯದಲ್ಲಿ ಸಿಲುಕಿದೆ, ಮಾನವ ಇತಿಹಾಸದಲ್ಲೇ ಅತಿ ಕೆಟ್ಟ ಸಮಯವಿದು’ ಎಂದು ಯೋಚಿಸುತ್ತೀರಿ.
ಆದರೆ ಬಹಳಷ್ಟು ತಜ್ಞರು ಇದಕ್ಕೆ ತದ್ವಿರುದ್ಧ ವಾದವನ್ನು ಮುಂದಿಡುತ್ತಾರೆ. ಅಂಕಿ ಅಂಶಗಳನ್ನು ನೋಡಿದರೆ ಇಂದು ನಾವು ಅತಿ ಶಾಂತಯುತ ಸಮಯದಲ್ಲಿ ವಾಸಿಸುತ್ತಿದ್ದೇವೆ ಎನ್ನುತ್ತಾರವರು.
ಮಾನಸಿಕ ಸಮಸ್ಯೆಗಳಿಗೆ ಕಾರಣ: ಹೇಗೆ ಮಾಧ್ಯಮಗಳು ವೀಕ್ಷಕರನ್ನು ಸೆಳೆಯುವುದಕ್ಕಾಗಿ ನೆಗೆಟಿವ್ ಸುದ್ದಿಯನ್ನೇ ಬಿತ್ತರಿಸುತ್ತಾರೆ, ಅದನ್ನು ರೋಚಕಗೊಳಿಸುತ್ತಾರೆ ಎನ್ನುವುದನ್ನು ನೋಡಿದ್ದೇವೆ. ಈಗ ನಮಗೆದುರಾಗುವ ಪ್ರಶ್ನೆಯೆಂದರೆ, ಈ ಸುದ್ದಿಗಳಿಂದಾಗಿ ನಮಗೆ ಹಾನಿಯಾಗುತ್ತಿದೆಯೇ?
ಇತ್ತೀಚೆಗೆ ಮನಶಾÏಸ್ತ್ರಜ್ಞರ ತಂಡವೊಂದು 179 ವ್ಯಕ್ತಿಗಳ ಮೇಲೆ ಈ ನಿಟ್ಟಿನಲ್ಲಿ ಪ್ರಯೋಗ ನಡೆಸಿತು. ಕೇವಲ 15 ನಿಮಿಷವಷ್ಟೇ ಇವರಿಗೆಲ್ಲ ಸುದ್ದಿಗಳನ್ನು ತೋರಿಸಲಾಯಿತಾದರೂ, ಇಷ್ಟು ಕಡಿಮೆ ಅವಧಿಯಲ್ಲಿಯೇ ಅವರಲ್ಲಿ ಅನೇಕ ಮಾನಸಿಕ ಬದಲಾವಣೆಗಳಾಗಿರುವುದನ್ನು ಪತ್ತೆಹಚ್ಚಲಾಯಿತು. ಕೇವಲ 15 ನಿಮಿಷ ನ್ಯೂಸ್ ನೋಡಿದರೆ ತೊಂದರೆಯಾಗುತ್ತದೆ ಎನ್ನುವುದಾದರೆ, ಇಡೀ ವರ್ಷ ದಿನಕ್ಕೆ 15 ನಿಮಿಷದಂತೆ ನೋಡಿದರೆ ಎಷ್ಟು ಪರಿಣಾಮವುಂಟಾಗುವುದೋ ಯೋಚಿಸಿ?
ಯೂನಿವರ್ಸಿಟಿ ಆಫ್ ಟೊರೊಂಟೋದ ಸಂಶೋಧನಾ ತಂಡವೊಂದು “ನಾವು ಎಷ್ಟು ಹೊತ್ತು ನ್ಯೂಸ್ ನೋಡುತ್ತೇವೆ ಎನ್ನುವುದು ಮುಖ್ಯವಲ್ಲ, ನಾವು ನೋಡುವ ನ್ಯೂಸ್ ಎಷ್ಟು ತೀವ್ರವಾಗಿದೆ(ಅದರಲ್ಲಿ ಎಷ್ಟು ಹಿಂಸೆಯಿದೆ, ಗ್ರಾಫಿಕ್ಸ್ ಇದೆ, ಭಯಹುಟ್ಟಿಸುವ ಸದ್ದುಗಳಿವೆ) ಎನ್ನುವುದು ಮುಖ್ಯ’ ಎನ್ನುತ್ತಾರೆ.
ನೆಗೆಟಿವ್ ನ್ಯೂಸ್‌ಗಳು ನಮ್ಮಲ್ಲಿ ಖನ್ನತೆ ಮತ್ತು ದುಗುಡ ಹೆಚ್ಚಿಸುತ್ತವೆ, ಪೋಸ್ಟ್ ಟ್ರಾಮಾಟಿಕ್ ಸ್ಟ್ರೆಸ್‌ನಂಥ ಅಸ್ವಸ್ಥತೆಯನ್ನು ಹುಟ್ಟುಹಾಕುತ್ತವೆ, ಅಲ್ಲದೇ ನಮ್ಮ ವೈಯಕ್ತಿಕ ಸಮಸ್ಯೆಗಳ ತೀವ್ರತೆಯನ್ನೂ ಅದು ಹೆಚ್ಚು ಮಾಡುತ್ತದೆ ಎನ್ನುತ್ತದೆ ಈ ತಂಡ.
ಇತ್ತೀಚಿನ ಸಂಶೋಧನೆಯೊಂದು “ನಾವು ದಿನಕ್ಕೆ 180 ಸೆಕೆಂಡ್(3 ನಿಮಿಷ) ನೆಗೆಟಿವ್ ನ್ಯೂಸ್ ನೋಡಿದೆವೆಂದರೆ, ನಮ್ಮ ಇಡೀ ದಿನ ಅಸಂತೋಷದಲ್ಲೇ ಮುಗಿಯುವ ಸಾಧ್ಯತೆ 27 ಪ್ರತಿಶತದಷ್ಟು ಹೆಚ್ಚು’ ಎನ್ನುತ್ತದೆ.
ಜಗತ್ತಿನಲ್ಲಿ ಏನೇನಾಗುತ್ತಿದೆ?: ನೀವು ಸುದ್ದಿ ವಾಹಿನಿಗಳು ಮತ್ತು ಪತ್ರಿಕೆಗಳನ್ನೇ ನಂಬುವುದಾದರೆ ಇಂದು ಜಗತ್ತು ಅಶಾಂತವಾಗಿದೆ ಎನ್ನುವ ತೀರ್ಮಾನಕ್ಕೆ ಬರುತ್ತೀರಿ. ಅದರಲ್ಲೂ ಈಗ ದಿನದ 24 ಗಂಟೆಯೂ ನಿಮ್ಮನ್ನು ಜಗತ್ತಿನ ಸುದ್ದಿ ತಲುಪುತ್ತದಾದ್ದರಿಂದ ಹೀಗೆ ಭಾವಿಸುವುದು ಸಹಜವೇ. ಆದರೆ ನಿಜಕ್ಕೂ ಜಗತ್ತಿನಲ್ಲಿ ಒಳ್ಳೆಯದು ಘಟಿಸುತ್ತಿಲ್ಲವೇ? ಈ ಪ್ರಶ್ನೆಗೆ ಉತ್ತರ ಹುಡುಕಿದಾಗ, ಜಗತ್ತಿನಲ್ಲಿ ಸಂಭ್ರಮಿಸಲು ಏನೆಲ್ಲಾ ಇದೆ ಎನ್ನುವುದು ಅರ್ಥವಾಗುತ್ತದೆ.
ಸುಮ್ಮನೇ ಯೋಚಿಸಿ ನೋಡಿ. ಈಗ, ಈ ಕ್ಷಣದಲ್ಲಿ ಎಷ್ಟೊಂದು ಮುದ್ದು ಮುಖದ ಮಕ್ಕಳು ಜಗತ್ತಿಗೆ ಆಗಮಿಸಿ ತಮ್ಮ ಪೋಷಕರ ಜೀವನದಲ್ಲಿ ಸಂತಸ ತುಂಬುತ್ತಿಲ್ಲ? ಎಷ್ಟು ಜನ ತಮ್ಮ ಆಪ್ತರನ್ನು ಭೇಟಿಯಾಗಿ ಸಂಭ್ರಮಿಸುತ್ತಿಲ್ಲ? ಸೂರ್ಯೋದಯ, ಸೂರ್ಯಾಸ್ತ, ಮಳೆ, ಚಳಿ ಎಷ್ಟೊಂದು ಜನರ ಜೀವನದಲ್ಲಿ ಪುಳಕ ಹುಟ್ಟುಹಾಕುತ್ತಿಲ್ಲ? ಎಷ್ಟೊಂದು ಜನ ತಮ್ಮ ಪರಿಶ್ರಮದಿಂದ ಯಶಸ್ಸು ಪಡೆಯುತ್ತಿಲ್ಲ? ಜೀವನದಲ್ಲಿ ಸಂಭ್ರಮಿಸಲು ಅನೇಕ ಸಂಗತಿಗಳು ಸಿಗುತ್ತವೆ. ಆದರೆ ನಾವು ಅದನ್ನು ನೋಡುವ ಗುಣ ಬೆಳೆಸಿಕೊಳ್ಳಬೇಕಷ್ಟೆ.
ಹಾಗೆಂದು ಸುದ್ದಿ ಮಾಧ್ಯಮಗಳಿಂದ ಸಮಾಜಕ್ಕೆ ಒಳ್ಳೆಯ ದಾಗುತ್ತಿಲ್ಲ ಎಂದೇನೂ ಅಲ್ಲ, ಆದರೆ ಅಸ್ತಿತ್ವದಲ್ಲಿ ಉಳಿಯಲು ಅವು ವೀಕ್ಷಕರನ್ನು ಸೆಳೆಯುವ ಅನಿವಾರ್ಯತೆಗೆ ಸಿಲುಕಿಬಿಟ್ಟಿವೆ. ಈ ಕಾರಣಕ್ಕಾಗಿಯೇ ನಿಮ್ಮ ಚಿತ್ತವನ್ನು ತಮ್ಮತ್ತ ಸೆಳೆಯಲು ನಾನಾ ರೀತಿಯ ಕಸರತ್ತು ನಡೆಸುತ್ತಲೇ ಇರುತ್ತವೆ. ಅವು ತಮಗೆ ಲಾಭ ಮಾಡಿಕೊಳ್ಳಲು ದಿನದ 24 ಗಂಟೆಯೂ ನಮ್ಮ ಮೇಲೆ ಕೆಟ್ಟ ಸುದ್ದಿಗಳನ್ನು ಹೇರುತ್ತಲೇ ಇರುತ್ತವೆ. ಈ ಕಾರಣಕ್ಕಾಗಿಯೇ ಸುದ್ದಿಯೊಂದು ನಮ್ಮ ಮುಂದೆ ಎದುರಾದರೂ ಅದನ್ನು ತುಸು ಅನುಮಾನದಿಂದಲೇ ನೋಡುವ ಗುಣವನ್ನು, ಎಚ್ಚರಿಕೆಯನ್ನು ನಾವು ಬೆಳೆಸಿಕೊಳ್ಳಬೇಕು.ಜಾಗೃತ ಮನಸ್ಸೇ ಸಂತೋಷದ ರಹದಾರಿ. (ಕುಲ್‌ರಾಜ್ ಬ್ರಿಟನ್‌ನ ಲೇಖಕರು, ಸ್ಫೂರ್ತಿದಾಯಕ ಮಾತುಗಾರರು)
– ಕುಲ್‌ರಾಜ್
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ನುಡಿ ನಮನ: ಸಾಮಾಜಿಕ ಚಿಂತಕ, ಎಲ್ಲರ ಮನಗೆದ್ದ ಶ್ರೇಷ್ಠ ಪ್ರಾಧ್ಯಾಪಕ ಪ್ರೊ.ಅಸ್ಸಾದಿ
India- China border: ಭಾರತದ ಗಡಿಯಲ್ಲಿ ಚೀನ ದುಸ್ಸಾಹಸ !
Unique Achiever: ಗಡಿನಾಡಿನ ಅನನ್ಯ ಸಾಧಕ ಪ್ರೊ| ಪಿ. ಶ್ರೀಕೃಷ ಭಟ್
Explainer:HMPV ಮಹಾಮಾರಿಗೆ ಕಂಗೆಟ್ಟ ಚೀನಾ-ಏನಿದು ಕೋವಿಡ್ ಮಾದರಿಯ ಎಚ್ ಎಂಪಿವಿ ವೈರಸ್?
Story Of Generations: ಪೀಳಿಗೆಗಳ ವೃತ್ತಾಂತ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Nagavalli Bangale Movie: ಸೆನ್ಸಾರ್ ಪಾಸಾದ ನಾಗವಲ್ಲಿ
Sky Force: ಭಾರತದ ಮೊದಲ ವೈಮಾನಿಕ ದಾಳಿಯ ʼಸ್ಕೈ ಫೋರ್ಸ್ʼ ಟ್ರೇಲರ್ ಔಟ್- ಮಿಂಚಿದ ಅಕ್ಷಯ್
Doddaballapura: ಘಾಟಿ ಕ್ಷೇತ್ರದಲ್ಲಿ ಶ್ರೀ ಸುಬ್ರಹ್ಮಣ್ಯಸ್ವಾಮಿ ಬ್ರಹ್ಮ ರಥೋತ್ಸವ
Naxalite: ಮುಂಡಗಾರು ಲತಾ ಸೇರಿ ಆರು ನಕ್ಸಲರು ಶೀಘ್ರ ಮುಖ್ಯವಾಹಿನಿಗೆ: ಪ್ರಕ್ರಿಯೆ ಚುರುಕು
Hunsur: ಬ್ಯಾರಿಕೇಡ್ ಗೆ ಸಿಲುಕಿದ ಗಜರಾಜ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.