BSNL: ಗತವೈಭವದತ್ತ ಬಿಎಸ್‌ಎನ್‌ಎಲ್‌?

ಸಾಲದ ಸುಳಿಯಿಂದ ಹೊರಬರುತ್ತಿರುವ ಸರಕಾರಿ ಸಂಸ್ಥೆ ಗ್ರಾಹಕರೂ ಹೆಚ್ಚಳ ; ಖಾಸಗಿ ಕಂಪೆನಿಗಳಿಗೂ ಪೈಪೋಟಿ

Team Udayavani, Dec 2, 2024, 1:16 PM IST

4-BSNL

ಖಾಸಗಿ ಕಂಪೆನಿಗಳ ಪೈಪೋಟಿಯನ್ನು ಎದುರಿಸಲಾಗದೇ ಸಾಲದ ಸುಳಿಯಲ್ಲಿ ಸಿಲುಕಿದ್ದ ಸರಕಾರಿ ಸ್ವಾಮ್ಯದ ಬಿಎಸ್‌ಎನ್‌ಎಲ್‌ ಇದೀಗ ಮೈಕೊಡವಿಕೊಂಡು ಅಣಿಯಾಗುತ್ತಿದೆ. 3 ವರ್ಷಗಳಲ್ಲಿ ಗಣನೀಯ ಪ್ರಮಾಣದಲ್ಲಿ ಸಾಲದಿಂದ ಹೊರ ಬರುವುದರ ಜತೆಗೆ, ಹೊಸ ಗ್ರಾಹಕರನ್ನು ಸೆಳೆಯಲು ಯಶಸ್ವಿಯಾಗುತ್ತಿದೆ. ಕೇಂದ್ರ ಸರಕಾರ ಒದಗಿಸುತ್ತಿರುವ ಪ್ಯಾಕೇಜ್‌ಗಳ ಲಾಭ ಪಡೆದು ಮುನ್ನುಗ್ಗುತ್ತಿರುವ ಬಿಎಸ್ಸೆನ್ನೆಲ್‌ನ ಮುಂದೆ ಅಷ್ಟೇ ಸವಾಲುಗಳಿವೆ. ಬಿಎಸ್ಸೆನ್ನೆಲ್‌ನ ಪುನಃಶ್ಚೇತನದ ಹಾದಿಯ ಮಾಹಿತಿ ಇಲ್ಲಿದೆ.

ಒಂದು ಕಾಲದಲ್ಲಿ ಭಾರತದ ಟೆಲಿಕಾಂ ಕ್ಷೇತ್ರವನ್ನು ಆಳಿದ್ದ, ಹಳ್ಳಿ ಮಟ್ಟಕ್ಕೂ ತಲುಪಲು ಕಾರಣವಾಗಿದ್ದ ಭಾರತೀಯ ಸಂಚಾರ ನಿಗಮ ಲಿ. (ಬಿಎಸ್‌ಎನ್‌ಎಲ್‌) ಎಷ್ಟು ಉತ್ತುಂಗದಲ್ಲಿತ್ತೋ ಅಷ್ಟೇ ಪಾತಾಳಕ್ಕೂ ಜಾರಿದ್ದು ನಿಜ. ಬಳಿಕ ಮೇಲೇಳಲು ಸಾಕಷ್ಟು ತಿಣುಕಾಟವನ್ನು ನಡೆಸಿದೆ. ಈಗ ಮತ್ತೆ ಪುಟಿಯಲು ಸಿದ್ಧವಾಗಿದೆ. ತನ್ನ ಅಸ್ತಿತ್ವಕ್ಕಾಗಿ ಹೋರಾಟಕ್ಕೆ ಮುಂದಾಗಿದೆ. ಇದರ ಪುನರುತ್ಥಾನಕ್ಕೆ ಕೇಂದ್ರ ಸರಕಾರಸಹ ಹಲವಾರು ಕ್ರಮಗಳನ್ನು ಕೈಗೊಂಡಿದೆ, ಕೈಗೊಳ್ಳು ತ್ತಲೂ ಇದೆ. ಈಗ ಬಿಎಸ್ಸೆನ್ನೆಲ್‌ ತೋರುತ್ತಿರುವ ಬದ್ಧತೆ, ಪ್ರದರ್ಶನವು ಇದೇ ಗತಿಯಲ್ಲಿ ಸಾಗಿದ್ದೇ ಹೌದಾದಲ್ಲಿ ಖಂಡಿತ ತನ್ನ ಹಳೇ ವೈಭವಕ್ಕೆ ಮರಳಲಿದೆ.

ಬಿಎಸ್ಸೆನ್ನೆಲ್‌ನ ಇತಿಹಾಸ

ಬಿಎಸ್ಸೆನ್ನೆಲ್‌ 2000ರ ಅಕ್ಟೋಬರ್‌ 1ರಂದು, ದೂರಸಂಪರ್ಕ ಸಚಿವಾಲಯದ ಅಂಗಸಂಸ್ಥೆಯಾಗಿ ಶುರು ಆಯಿತು. ಇದರ ಮೂಲ ಹುಟ್ಟಿನ ಇತಿ ಹಾಸಕ್ಕೆ ಹೋದರೆ ಅದು ಬ್ರಿಟಿಷರ ಆಡಳಿತಕ್ಕೆ ಕರೆ ದೊಯ್ಯುತ್ತದೆ. ಭಾರತದಲ್ಲಿ ಟೆಲಿಕಾಂ ಸೇವೆಯು ಬ್ರಿಟಿಷರ ಆಡಳಿತದ ಸಮಯದಲ್ಲಿ “ಟೆಲಿಗ್ರಾಫ್‌ ಸೇವೆ’ ಯೊಂದಿಗೆ ಆರಂಭವಾಯಿತು. ಅಂದರೆ ಇದು 1850ರಿಂದ 1880ರ ಅವಧಿಯಲ್ಲಿ ಎಲ್ಲೆಡೆ ವಿಸ್ತರಣೆಗೊಂಡಿತ್ತು. ಇನ್ನು 1985ರಲ್ಲಿ ದೂರಸಂಪರ್ಕ ಇಲಾಖೆ  ಯನ್ನು ಪ್ರತ್ಯೇಕ ಅಂಗಸಂಸ್ಥೆಯಾಗಿ ಕೇಂದ್ರ ಸರಕಾರ ಪ್ರಾರಂಭಿಸಿತು. ಇದು ಆ ಕಾಲದ ದೂರಸಂಪ ರ್ಕ ಸೇವೆಗಳನ್ನು ನಿರ್ವಹಿಸಿತು. 2000ರಿಂದ 2010ರ ವರೆಗೆ ದೇಶದ ಪ್ರಮುಖ ಟೆಲಿಕಾಂ ಪೂರೈಕೆದಾರ ಕಂಪೆನಿಯಾಗಿ ಬೆಳೆಯಿತು. ಈ ವೇಳೆ ಲ್ಯಾಂಡ್‌ಲೈನ್‌ ಮತ್ತು ಬ್ರಾಡ್‌ಬ್ಯಾಂಡ್‌ ಸೇವೆಗಳು ಜನಪ್ರಿಯವಾಗಿದ್ದವು. ಗ್ರಾಮೀಣ ಪ್ರದೇಶಗಳನ್ನು ತಲುಪುವಲ್ಲಿ ಪ್ರಮುಖ ಪಾತ್ರವನ್ನು ವಹಿಸಿತ್ತು.

ವೈಫ‌ಲ್ಯಗಳ ಸರಮಾಲೆ

2008-2010ರ ಅವಧಿಯಲ್ಲಿ ಟೆಲಿಕಾಂ ಕ್ಷೇತ್ರಕ್ಕೆ ಖಾಸಗಿ ಟೆಲಿಕಾಂ ಕಂಪೆನಿಗಳು ಪ್ರವೇಶ ಪಡೆದವು. ಗ್ರಾಹಕರನ್ನು ಸೆಳೆಯಲು ಈ ಕಂಪೆನಿಗಳು ಆಫರ್‌ಗಳ ಮೇಲೆ ಆಫರ್‌ಗಳನ್ನು ನೀಡಿದವು. ಉತ್ತಮ ಸೇವೆಗಳನ್ನು ನೀಡಲಾರಂಭಿಸಿದವು. ಬಳಿಕದ ವರ್ಷಗಳಲ್ಲಿ 4ಜಿ/5ಜಿ ಸೇವೆಗಳನ್ನು ನೀಡಲು ಪ್ರಾರಂಭಿಸಿದವು. ಆದರೆ, ಏರ್‌ಟೆಲ್‌ ಸೇರಿ ಖಾಸಗಿ ಕಂಪೆನಿಗಳಿಗೆ ಪೈಪೋಟಿ ನೀಡಲು ಬಿಎಸ್ಸೆನ್ನೆಲ್‌ಗೆ ಸಾಧ್ಯವಾಗಲಿಲ್ಲ. ಈ ಕಾರಣದಿಂದಾಗಿ ಗ್ರಾಹಕರನ್ನು ದಿನೇ ದಿನೆ ಕಳೆದುಕೊಳ್ಳತೊಡಗಿತು. ಅದೂ ಅಲ್ಲದೆ, 2ಜಿಯಲ್ಲೇ ಬಹುತೇಕ ಸಮಯ ಕಳೆದುಬಿಟ್ಟಿತು. 4ಜಿ ತಂತ್ರಜ್ಞಾನವನ್ನು ತಡವಾಗಿ ಅಳವಡಿಸಿಕೊಂಡು ಮಾರುಕಟ್ಟೆ ಯನ್ನು ಪ್ರವೇಶಿಸಿತಾದರೂ ಅಷ್ಟರಲ್ಲಿ ಖಾಸಗಿ ಸಂಸ್ಥೆಗಳು ತಮ್ಮ ಪಾರುಪತ್ಯವನ್ನು ಸಾಧಿಸಿದ್ದವು.

ಮೂಡಿದ ಹೊಸ ಭರವಸೆ

ಇತ್ತೀಚಿನ ಕೆಲವು ವರ್ಷಗಳಲ್ಲಿ ಏರ್‌ಟೆಲ್‌, ಜಿಯೋಗೆ ಪೈಪೋಟಿ ನೀಡುವ ನಿಟ್ಟಿನಲ್ಲಿ ಬಿಎಸ್ಸೆನ್ನೆಲ್‌ ಮುಂದಾಗುತ್ತಿದೆ. ಇಷ್ಟು ವರ್ಷಗಳವರೆಗೆ ಸಾಲದ ಸುಳಿಯಲ್ಲಿದ್ದ ಸಂಸ್ಥೆ, 3 ವರ್ಷಗಳಲ್ಲಿ ಗಣನೀಯ ಪ್ರಮಾಣದಲ್ಲಿ ತನ್ನ ಸಾಲವನ್ನು ತೀರಿಸಿದೆ. ಅಧಿಕೃತ ಮಾಹಿತಿಯ ಪ್ರಕಾರ 2022ರ ಮಾರ್ಚ್‌ 31ರ ವೇಳೆಗೆ 40,400 ಕೋಟಿ ರೂ. ಇದ್ದ ಸಾಲವು, 2023ರ ಮಾರ್ಚ್‌ 31ರ ವೇಳೆಗೆ 28,092 ಕೋಟಿ ರೂ.ಗೆ ಇಳಿಕೆಯಾಗಿದೆ. ಅದೇ 2024 ಮಾರ್ಚ್‌ 31ರ ವೇಳೆಗೆ 23,297 ಕೋಟಿ ರೂ. ಗೆ ಸಾಲದ ಪ್ರಮಾಣ ಇಳಿದಿದೆ.

2 ವರ್ಷಕ್ಕೆ ಆದಾಯ ಗುರಿ!

2025 ಮತ್ತು 2026ನೇ ಸಾಲಿನಲ್ಲಿ ಆರ್ಥಿಕ ಪ್ರಗತಿ ಸಾಧಿಸುವ ಗುರಿಯನ್ನು ಬಿಎಸ್ಸೆನ್ನೆಲ್‌ ಹಾಕಿಕೊಂಡಿದೆ. 2025ರಲ್ಲಿ 24,428 ಕೋಟಿ ಮತ್ತು 2026ನೇ ಸಾಲಿನಲ್ಲಿ 28,476 ಕೋಟಿ ಆದಾಯ ಗುರಿ ಹೊಂದಲಾಗಿದೆ. ಕಳೆದ ಹಲವು ವರ್ಷಗಳಲ್ಲಿ ಇದೇ ಮೊದಲ ಬಾರಿಗೆ ಗ್ರಾಹಕರ ಸಂಖ್ಯೆಯಲ್ಲಿ ಏರಿಕೆ ಯಾಗಿದೆ. ಈಚೆಗೆ ಖಾಸಗಿ ಕಂಪೆನಿಗಳು ತಮ್ಮ ರೀಚಾರ್ಜ್‌ ಪ್ಲ್ರಾನ್‌ಗಳ ದರವನ್ನು ಹೆಚ್ಚಳ ಮಾಡಿದ ಬಳಿಕ ಲಕ್ಷಾಂತರ ಮಂದಿ ಬಿಎಸ್ಸೆನ್ನೆಲ್‌ನತ್ತ ಮುಖ ಮಾಡಿದ್ದಾರೆ. ಟ್ರಾಯ್‌ ಪ್ರಕಾರ, 2024ರ ಜುಲೈಯಲ್ಲಿ 29.4 ಲಕ್ಷ ಗ್ರಾಹಕರು ಹಾಗೂ ಆಗಸ್ಟ್‌ನಲ್ಲಿ 25 ಲಕ್ಷ ಹೊಸ ಗ್ರಾಹಕರು ಸೇರ್ಪಡೆಯಾಗಿದ್ದರೆ, ಸೆಪ್ಟಂಬರ್‌ನಲ್ಲಿ 8 ಲಕ್ಷ ಹೊಸ ಗ್ರಾಹಕರು ಸೇರಿದ್ದಾರೆ. ಹೀಗಾಗಿ ಬಿಎಸ್ಸೆನ್ನೆಲ್‌ನ ಒಟ್ಟು ಗ್ರಾಹಕರ ಸಂಖ್ಯೆ 9.19 ಕೋಟಿಗೆ ತಲುಪಿದೆ. ಜಿಯೋ ಬಳಿ 46 ಕೋಟಿ ಚಂದಾ ದಾರರಿದ್ದರೆ, ಏರ್‌ಟೆಲ್‌ ಬಳಿ 38 ಕೋಟಿ ಹಾಗೂ ವೋಡಾ ಫೋನ್‌ ಬಳಿ 21 ಕೋಟಿ ಚಂದಾದಾರರಿದ್ದಾರೆ.

ಪುನಃಶ್ಚೇತನಕ್ಕೆ ಕ್ರಮ

1. 3.2 ಲಕ್ಷ ಕೋಟಿ ಪ್ಯಾಕೇಜ್‌

ಬಿಎಸ್ಸೆನ್ನೆಲ್‌ ಪುನಃಶ್ಚೇತನಕ್ಕೆ ಕೇಂದ್ರ ಸರಕಾರವು ಈವರೆಗೆ 3.2 ಲಕ್ಷ ಕೋಟಿ ರೂ. ಪ್ಯಾಕೇಜ್‌ ನೀಡಿದೆ. 2019ರಲ್ಲಿ 69,000 ಕೋಟಿ ರೂ., 2022ರ ಜುಲೈಯಲ್ಲಿ 1.64 ಲಕ್ಷ ಕೋಟಿ ರೂ., 2023ರ ಜೂನ್‌ನಲ್ಲಿ 89,047 ಕೋಟಿ ರೂ. ಪ್ಯಾಕೇಜ್‌ ನೀಡಿದೆ. ಇದರಲ್ಲಿ 4 ಜಿ -5 ಜಿ ಸ್ಪೆಕ್ಟ್ರಮ್‌ ಹಂಚಿಕೆಯೂ ಸೇರಿದೆ.

2. ಮೂಲಸೌಕರ್ಯಕ್ಕೆ ಹೂಡಿಕೆ

ಖಾಸಗಿ ಕಂಪೆನಿಗಳು 4ಜಿ ಸೇವೆ ಪ್ರಾರಂಭಿಸಿ 8 ವರ್ಷಗಳ ಬಳಿಕ ಕಾಲಿಡುತ್ತಿರುವ ಬಿಎಸ್ಸೆನ್ನೆಲ್‌, 4ಜಿ ಮತ್ತು 5ಜಿ ಸೇವೆಗಳಲ್ಲಿ ಭಾರೀ ಹಿಂದಿದೆ. ಹೀಗಾಗಿ 4ಜಿ ಸೇವೆಗಳನ್ನು ಈಗಾಗಲೇ ಆರಂಭಿಸಿದ್ದು, ಮುಂಬರುವ ದಿನಗಳಲ್ಲಿ ಅಪ್‌ಗ್ರೇಡ್‌ ಮಾಡಲು ನಿರ್ಧರಿಸಲಾಗಿದೆ. ಇದಕ್ಕಾಗಿ ಟಾಟಾ ಕನ್‌ಸಲ್ಟೆನ್ಸಿ ಸರ್ವೀಸಸ್‌ ಮತ್ತು ಎಲ್‌ಆ್ಯಂಡ್‌ಟಿ ಟೆಕ್‌ ಸರ್ವಿಸಸ್‌ ಕಂಪೆನಿಗಳ ಜತೆ ಸಹಭಾಗಿತ್ವ ಹೊಂದಿದೆ.

3. ಗ್ರಾಮೀಣ ಸಂಪರ್ಕ

ಗ್ರಾಮೀಣ ಭಾಗದಲ್ಲಿ ಬ್ರಾಡ್‌ಬ್ಯಾಂಡ್‌ ಸೇವೆಯನ್ನು ವಿಸ್ತರಿಸಿರುವ ಬಿಎಸ್ಸೆನ್ನೆಲ್‌ನ ಯೋಜನೆಗೆ ಸರಕಾರ ಸಹಾಯ ಮಾಡುತ್ತಿದೆ. ಈ ಮೂಲಕ ಗ್ರಾಮೀಣ ಭಾಗದಲ್ಲಿ ತನ್ನ ಹಿಡಿತವನ್ನು ಬಿಗಿಗೊಳಿಸಲು ಮುಂದಾಗಿದೆ.

4. ವಿಆರ್‌ಎಸ್‌ ಯೋಜನೆ ಖಾಸಗಿ ಟೆಲಿಕಾಂ ಕಂಪೆನಿಗಳಿಗೆ ಹೋಲಿಸಿದರೆ ಬಿಎಸ್ಸೆನ್ನೆಲ್‌ನಲ್ಲಿ ಭಾರೀ ಸಂಖ್ಯೆಯಲ್ಲಿ ಮಾನವ ಸಂಪನ್ಮೂಲ ಇದೆ. ಇದು ಭಾರೀ ವೆಚ್ಚಕ್ಕೆ ಕಾರಣವಾಗಿದೆ. ಈ ಹಿನ್ನೆಲೆಯಲ್ಲಿ ವಿಆರ್‌ಎಸ್‌ ಪಡೆಯಲು ಕೇಂದ್ರ ಸರಕಾರ ಅನುಮತಿ ನೀಡಿದೆ.

5. ತಂತ್ರಜ್ಞಾನ ಅಳವಡಿಕೆ

ಇದು 5ಜಿ ಯುಗ ಆಗಿದ್ದರಿಂದ ಸಾಕಷ್ಟು ಹೊಸ ತಂತ್ರಜ್ಞಾನ ಅಳವಡಿಸಿಕೊಳ್ಳಬೇಕಿದೆ. 1 ಲಕ್ಷಕ್ಕೂ ಅಧಿಕ ಆರ್‌ಎಎನ್‌ (ರೇಡಿಯೋ ಆ್ಯಕ್ಸೆಸ್‌ ನೆಟ್‌ವರ್ಕ್‌ – ಸೆಲ್ಯುಲರ್‌ ರೇಡಿಯೋ ನೆಟ್‌ವರ್ಕ್‌) ಸ್ಥಾಪಿಸುವತ್ತ ಹೆಜ್ಜೆ ಇಟ್ಟಿದೆ. ಈ ಮೂಲಕ ತರಂಗಾಂತರಗಳು ಮೊಬೈಲ್‌ ನೆಟ್‌ವರ್ಕ್‌ ಗಳಿಗೆ ಸುಲಭವಾಗಿ ಸಿಗುವಂತೆ ಮಾಡುವ ಉದ್ದೇಶವಿದೆ.

ಮುಂದಿರುವ ಸವಾಲು

 1. ಖಾಸಗಿ ಕಂಪೆನಿಗಳ ಜತೆ ಸ್ಪರ್ಧೆ

ಜಿಯೋ, ಏರ್‌ಟೆಲ್‌, ವೋಡಾಫೋನ್‌ ಗಳಂಥ ದೈತ್ಯ ಟೆಲಿಕಾಂ ಸಂಸ್ಥೆಗಳಿಗೆ ಸ್ಪರ್ಧೆಯೊಡ್ಡಬೇಕಾದ ಅನಿವಾರ್ಯತೆ ಇದೆ. ಈ ಕಂಪೆನಿಗಳಲ್ಲಿ ಹೆಚ್ಚು ಆಕರ್ಷಕ ರಿಯಾಯಿತಿಗಳ (ಒಟಿಟಿ ಸೇವೆ ಸಹಿತ) ರಿಚಾರ್ಜ್‌ ಪ್ಲ್ರಾನ್‌ಗಳಿವೆ. ಈ ನಿಟ್ಟಿನಲ್ಲಿ ಗಮನಹರಿಸುವುದು.

2. ತಂತ್ರಜ್ಞಾನಗಳ ಸುಧಾರಣೆ

4ಜಿ ಮತ್ತು 5ಜಿ ತಂತ್ರಜ್ಞಾನಗಳ ಅಳವಡಿಕೆಯನ್ನು ಚುರುಕುಗೊಳಿಸಬೇಕಿದೆ. ಏಕೆಂದರೆ ಖಾಸಗಿ ಕಂಪೆನಿಗಳು 5ಜಿ ಸೇವೆಯನ್ನು ಆರಂಭಿಸಿದ್ದರೆ, ಬಿಎಸ್ಸೆನ್ನೆಲ್‌ ಇನ್ನೂ 4ಜಿ ಪೂರ್ಣಗೊಳಿಸುವ ಹಂತದಲ್ಲಿದೆ.

3. ಆರ್ಥಿಕ ಹೊರೆ ತಗ್ಗಿಸುವುದು

ಹೆಚ್ಚು ಕಾರ್ಯಾಚರಣ ವೆಚ್ಚ, ಹಳೇ ಬಾಕಿ ಪಾವತಿಗಳು ಬಿಎಸ್ಸೆನ್ನೆಲ್‌ನ ಆರ್ಥಿಕ ಸ್ಥಿತಿಗತಿಗೆ ಮತ್ತಷ್ಟು ಹೊರೆಯಾಗಿದೆ. ಇದು ಮೂಲಸೌಕರ್ಯಗಳ ಮೇಲಿನ ಹೂಡಿಕೆಗೆ ತೊಡಕಾಗಿದೆ. ಜತೆಗೆ ಹೊಸ ಯೋಜನೆಗಳೊಂದಿಗೆ ಮುನ್ನುಗ್ಗಲು ಅಡ್ಡಿಪಡಿಸುತ್ತದೆ.

4. ಇನ್ನೂ ಹಳೆ ವ್ಯವಸ್ಥೆ

ಬಿಎಸ್ಸೆನ್ನೆಲ್‌ ಇನ್ನೂ ಹಳೆ ವ್ಯವಸ್ಥೆಯಲ್ಲಿಯೇ ಇದ್ದು, ಖಾಸಗಿ ಕಂಪೆನಿಗಳಲ್ಲಿ ಅಳವಡಿಕೆಯಾಗಿರುವ ಮುಂದುವರಿದ ತಂತ್ರಜ್ಞಾನವಾಗಲಿ, ಫೀಚರ್‌ಗಳನ್ನಾಗಲಿ ಹೊಂದಿಲ್ಲ. ಇದರಿಂದ ಗುಣಮಟ್ಟದ ಸೇವೆ ನೀಡುವಲ್ಲಿ ವಿಫ‌ಲವಾಗುತ್ತಿದೆ. ಇವುಗಳನ್ನು ನಿವಾರಿಸಬೇಕಿದೆ.

5. ತ್ವರಿತ ಅನುಷ್ಠಾನ

ದಿನೇ ದಿನೆ ತಂತ್ರಜ್ಞಾನ ಹೊಸ ರೂಪವನ್ನು ಪಡೆದುಕೊಳ್ಳುತ್ತದೆ. ಅದಕ್ಕೆ ತಕ್ಕಂತೆ ಸೇವೆ ಗಳು ಬದಲಾಗಬೇಕು. ಆದರೆ, ಈ ನಿಟ್ಟಿ ನಲ್ಲಿ ಬಿಎಸ್ಸೆನ್ನೆಲ್‌ ಇದುವರೆಗೆ ವಿಫ‌ಲ ವಾಗಿದೆ. ಹೀಗಾಗಿ ತತ್‌ಕ್ಷಣದ ನಿರ್ಣಯ ಹಾಗೂ ತ್ವರಿತ ಕಾರ್ಯಗೊಳಿಸುವಿಕೆಗೆ ಒತ್ತು ನೀಡುವ ಅಧಿಕಾರ ಹಾಗೂ ಸೌಕರ್ಯವನ್ನು ನೀಡಬೇಕಿದೆ.

ದೇಶಿ ಉಪಕರಣಗಳ ಬಳಕೆ

ಬಿಎಸ್ಸೆನ್ನೆಲ್‌ ತನ್ನ 4ಜಿ ಮತ್ತು 5ಜಿ ಸೇವೆಗಳನ್ನು ದೇಶವ್ಯಾಪಿ ಪೂರೈಸಬೇಕಿದೆ. ಇದಕ್ಕಾಗಿ ದೇಶಾದ್ಯಂತ 4ಜಿ ಸೈಟ್‌ಗಳ ಸ್ಥಾಪನೆಗಾಗಿ ದೇಶೀಯವಾಗಿ ಅಭಿವೃದ್ಧಿಪಡಿಸಿದ ಉಪಕರಣಗಳ ಅಳವಡಿಕೆ ಕಾರ್ಯ ಶುರುವಾಗಿದೆ. 2024ರ ಅಕ್ಟೋಬರ್‌ 31ರ ವೇಳೆಗೆ 50,708 4ಜಿ ಸೈಟ್‌ಗಳನ್ನು ಸ್ಥಾಪಿಸಲಾಗಿದ್ದು, 41,957 ಸೈಟ್‌ಗಳ ಅಳವಡಿಕೆ ಚಾಲ್ತಿಯಲ್ಲಿದೆ. ಈ ಉಪಕರಣಗಳನ್ನು 5ಜಿಗೆ ನವೀಕರಿಸಬಹುದಾಗಿದೆ.

3.2 ಲಕ್ಷ ಕೋಟಿ ರೂ.- ಪುನಃಶ್ಚೇತನಕ್ಕೆ ಕೇಂದ್ರ ನೀಡಿದ ಪ್ಯಾಕೇಜ್‌

23297 ಕೋಟಿ ರೂ.- ಬಿಎಸ್ಸೆನ್ನೆಲ್‌ನ ಈಗಿರುವ ಸಾಲ ಮೊತ್ತ

40400ಕೋಟಿ ರೂ. -2022ರಲ್ಲಿದ್ದ ಬಿಎಸ್ಸೆನ್ನೆಲ್‌ನ ಸಾಲ

9.19ಕೋಟಿ ರೂ.- ಬಿಎಸ್ಸೆನ್ನೆಲ್‌ ಹೊಂದಿರುವ ಗ್ರಾಹಕರು

■ ಆದರ್ಶ ಎಸ್‌.ಅಂಚೆ

ಟಾಪ್ ನ್ಯೂಸ್

BSY POCSO case: Dharwad High Court adjourns hearing to January 10

BSY POCSO Case: ಜ.10ಕ್ಕೆ ವಿಚಾರಣೆ ಮುಂದೂಡಿದ ಧಾರವಾಡ ಹೈಕೋರ್ಟ್

Girl Trapped: 24 ಗಂಟೆಗಳ ಕಾಲ 540 ಅಡಿ ಆಳದ ಕೊಳವೆ ಬಾವಿಯಲ್ಲಿ ಸಿಲುಕಿದ್ದ ಯುವತಿ ಮೃತ್ಯು

Girl Trapped: 24 ಗಂಟೆಗಳ ಕಾಲ 540 ಅಡಿ ಆಳದ ಕೊಳವೆ ಬಾವಿಯಲ್ಲಿ ಸಿಲುಕಿದ್ದ ಯುವತಿ ಮೃತ್ಯು

Yuzi Chahal: ಡಿವೋರ್ಸ್‌ ಸುದ್ದಿಯ ನಡುವೆ ಬೇರೆ ಯುವತಿ ಜತೆ ಕಾಣಿಸಿಕೊಂಡ ಚಾಹಲ್;‌ ಯಾರೀಕೆ?

Yuzi Chahal: ಡಿವೋರ್ಸ್‌ ಸುದ್ದಿಯ ನಡುವೆ ಬೇರೆ ಯುವತಿ ಜತೆ ಕಾಣಿಸಿಕೊಂಡ ಚಾಹಲ್;‌ ಯಾರೀಕೆ?

Hunger Strike: ಹದಗೆಟ್ಟ ಅರೋಗ್ಯ: ಪ್ರಶಾಂತ್ ಕಿಶೋರ್ ಆಸ್ಪತ್ರೆಗೆ ದಾಖಲು

Hunger Strike: ಹದಗೆಟ್ಟ ಅರೋಗ್ಯ… ಪ್ರಶಾಂತ್ ಕಿಶೋರ್ ಆಸ್ಪತ್ರೆಗೆ ದಾಖಲು

Team India: ಕೆಎಲ್‌, ಪಾಂಡ್ಯ, ಗಿಲ್‌ ಅಲ್ಲ.., ಚಾಂಪಿಯನ್ಸ್‌ ಟ್ರೋಫಿಗೆ ಈತನೇ ಉಪ ನಾಯಕ

Team India: ಕೆಎಲ್‌, ಪಾಂಡ್ಯ, ಗಿಲ್‌ ಅಲ್ಲ.., ಚಾಂಪಿಯನ್ಸ್‌ ಟ್ರೋಫಿಗೆ ಈತನೇ ಉಪ ನಾಯಕ

Video: ಬೀದಿ ವ್ಯಾಪಾರಿ ಬಳಿ 6 ಟ್ರೇ ಮೊಟ್ಟೆ ಖರೀದಿಸಿ ಹಣ ಪಾವತಿಸದೇ ಪರಾರಿ…ಮುಂದೇನಾಯ್ತು!

Video: ಬೀದಿ ವ್ಯಾಪಾರಿ ಬಳಿ 6 ಟ್ರೇ ಮೊಟ್ಟೆ ಖರೀದಿಸಿ ಹಣ ಪಾವತಿಸದೇ ಪರಾರಿ…ಮುಂದೇನಾಯ್ತು!

Actress Ramya: ಕೋರ್ಟ್‌ಗೆ ಹಾಜರಾದ ಮೋಹಕ ತಾರೆ ರಮ್ಯಾ; ಕಾರಣವೇನು?

Actress Ramya: ಕೋರ್ಟ್‌ಗೆ ಹಾಜರಾದ ಮೋಹಕ ತಾರೆ ರಮ್ಯಾ; ಕಾರಣವೇನು?


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Bangla-immigrtnst

ಆಪರೇಷನ್‌ ಬಾಂಗ್ಲಾದೇಶಿ; ಅಕ್ರಮ ವಲಸಿಗರ ಪತ್ತೆ ಹಚ್ಚುವ ಕಾರ್ಯಾಚರಣೆ ಚುರುಕು

Explainer; ಭಾರತದ ಪರಮಾಣು ಯುಗದ ರೂವಾರಿಗಳು: ಡಾ. ಆರ್ ಚಿದಂಬರಂ & ಡಾ. ರಾಜಾ ರಾಮಣ್ಣ

Explainer; ಡಾ. ಚಿದಂಬರಂ & ಡಾ. ರಾಜಾ ರಾಮಣ್ಣ;ಪರಮಾಣು ವಿಜ್ಞಾನವನ್ನೂ ಮೀರಿದ ನಾಯಕತ್ವ

ಲೋಕೋಪಯೋಗಿ To ಸಾಹಿತ್ಯಕ್ಷೇತ್ರ: ಚಲನಚಿತ್ರದ ಮೂಲಕ ಖ್ಯಾತಿಗಳಿಸಿದ ನಾ.ಡಿಸೋಜ ಕಾದಂಬರಿಗಳು…

ಲೋಕೋಪಯೋಗಿ To ಸಾಹಿತ್ಯಕ್ಷೇತ್ರ: ಚಲನಚಿತ್ರದ ಮೂಲಕ ಖ್ಯಾತಿಗಳಿಸಿದ ನಾ.ಡಿಸೋಜ ಕಾದಂಬರಿಗಳು…

Trump-Maga

Make America Great Again: ಅಮೆರಿಕದಲ್ಲಿ ಸ್ವದೇಶಿ vs ವಲಸಿಗರು ಜಟಾಪಟಿ

Na-Dsoza-Family

ಸಾಹಿತ್ಯದಾಚೆಗೂ ಬೆಳೆದು ನಿಂತ ಸಾಗರದ ನಾ.ಡಿ’ಸೋಜಾ!

MUST WATCH

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

ಹೊಸ ಸೇರ್ಪಡೆ

BSY POCSO case: Dharwad High Court adjourns hearing to January 10

BSY POCSO Case: ಜ.10ಕ್ಕೆ ವಿಚಾರಣೆ ಮುಂದೂಡಿದ ಧಾರವಾಡ ಹೈಕೋರ್ಟ್

Girl Trapped: 24 ಗಂಟೆಗಳ ಕಾಲ 540 ಅಡಿ ಆಳದ ಕೊಳವೆ ಬಾವಿಯಲ್ಲಿ ಸಿಲುಕಿದ್ದ ಯುವತಿ ಮೃತ್ಯು

Girl Trapped: 24 ಗಂಟೆಗಳ ಕಾಲ 540 ಅಡಿ ಆಳದ ಕೊಳವೆ ಬಾವಿಯಲ್ಲಿ ಸಿಲುಕಿದ್ದ ಯುವತಿ ಮೃತ್ಯು

Dharmasthala ಶ್ರೀ ಮಂಜುನಾಥ ಸ್ವಾಮಿಯ ದರ್ಶನ ಪಡೆದ ಉಪರಾಷ್ಟ್ರಪತಿ ಜಗದೀಪ್‌ ಧನ್‌ಕರ್‌

Dharmasthala ಶ್ರೀ ಮಂಜುನಾಥ ಸ್ವಾಮಿಯ ದರ್ಶನ ಪಡೆದ ಉಪರಾಷ್ಟ್ರಪತಿ ಜಗದೀಪ್‌ ಧನ್‌ಕರ್‌

Yuzi Chahal: ಡಿವೋರ್ಸ್‌ ಸುದ್ದಿಯ ನಡುವೆ ಬೇರೆ ಯುವತಿ ಜತೆ ಕಾಣಿಸಿಕೊಂಡ ಚಾಹಲ್;‌ ಯಾರೀಕೆ?

Yuzi Chahal: ಡಿವೋರ್ಸ್‌ ಸುದ್ದಿಯ ನಡುವೆ ಬೇರೆ ಯುವತಿ ಜತೆ ಕಾಣಿಸಿಕೊಂಡ ಚಾಹಲ್;‌ ಯಾರೀಕೆ?

Kuchuku Movie: ಟೀಸರ್‌ನಲ್ಲಿ ಕುಚುಕು

Kuchuku Movie: ಟೀಸರ್‌ನಲ್ಲಿ ಕುಚುಕು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.