ಉದ್ಯಮಸ್ನೇಹಿ ದೇಶ: ಅಭಿವೃದ್ಧಿಗೆ ಪೂರಕ ನೆಗೆತ 


Team Udayavani, Nov 3, 2018, 12:30 AM IST

v-4.jpg

ವಿಶ್ವಬ್ಯಾಂಕ್‌ ಬಿಡುಗಡೆಗೊಳಿಸಿದ ಉದ್ಯಮಸ್ನೇಹಿ ದೇಶಗಳ ಪಟ್ಟಿಯಲ್ಲಿ ಭಾರತ ಕಂಡಿರುವ ನೆಗೆತ ಚೇತೋಹಾರಿಯಾಗಿದ್ದು ಆರ್ಥಿಕ ಅಭಿವೃದ್ಧಿಗೆ ಪೂರಕವಾಗಿದೆ. 190 ದೇಶಗಳ ಪೈಕಿ ಭಾರತ 77ನೇ ಸ್ಥಾನದಲ್ಲಿದೆ ಎನ್ನುವುದು ಕಡಿಮೆ ಸಾಧನೆಯಲ್ಲ. ಬರೀ ನಾಲ್ಕು ವರ್ಷದಲ್ಲಿ ಈ ಸಾಧನೆ ಸಾಧ್ಯವಾಗಿದೆ ಎನ್ನುವುದು ಗಮನಾರ್ಹ ಅಂಶ. 2014ರಲ್ಲಿ ನಮ್ಮ ದೇಶ 142ನೇ ಸ್ಥಾನದಲ್ಲಿತ್ತು. ಈ ಸಂದರ್ಭದಲ್ಲಿ ಪ್ರಧಾನಿಯಾಗಿ ಅಧಿಕಾರಕ್ಕೇರಿದ ಮೋದಿಯವರು ಉದ್ಯಮ ಸ್ನೇಹಿ ವಾತಾವರಣದಲ್ಲಿ ಅಗ್ರ 50 ದೇಶಗಳ ಸಾಲಿಗೆ ಸೇರ್ಪಡೆಯಾಗುವುದು ನಮ್ಮ ಗುರಿ ಎಂದು ಹೇಳಿದಾಗ ಇದು ಸಾಧ್ಯವಾಗುವ ಮಾತಲ್ಲ ಎಂದು ಹೇಳಿದವರೇ ಹೆಚ್ಚು. ಆದರೆ ಇದೀಗ ಬಿಡುಗಡೆಯಾದ ಪಟ್ಟಿಯನ್ನು ನೋಡುವಾಗ 50ರೊಳಗೆ ಸೇರ್ಪಡೆ ಯಾಗುವುದು ಅಸಾಧ್ಯವಲ್ಲ ಎಂಬ ವಿಶ್ವಾಸ ಮೂಡಿರುವುದಂತೂ ಸತ್ಯ. ಹಾಗೆಂದು ಈ ಸಾಧನೆ ರಾತ್ರಿ ಬೆಳಗಾಗುವುದರೊಳಗೆ ಆಗಿದೆ ಎಂದು ಭಾವಿಸಬೇಕಿಲ್ಲ. ಇದರ ಹಿಂದೆ ನಿರಂತರ ಪ್ರಯತ್ನವಿದೆ. ವಿವಿಧ ಇಲಾಖೆಗಳ ನಡುವಿನ ಅವಿರತ ಶ್ರಮವಿದೆ. ಕೇಂದ್ರ -ರಾಜ್ಯ ಸರಕಾರಗಳ ಮಾತ್ರವಲ್ಲದೆ ಸ್ಥಳೀಯಾಡಳಿತಗಳ ಯೋಗದಾನವೂ ಇದೆ. 

ಪ್ರಸ್ತುತ ನಾವು ದಕ್ಷಿಣ ಏಶ್ಯಾದಲ್ಲಿ ಅಗ್ರಸ್ಥಾನದಲ್ಲಿದ್ದೇವೆ. ಮೂರು ವರ್ಷದಲ್ಲಿ 65 ಸ್ಥಾನ ಮೇಲೇರುವುದು ನಮ್ಮಿಂದ ಸಾಧ್ಯವಾಗಿದೆ. ಯಾವುದೇ ದೇಶ ಆರ್ಥಿಕವಾಗಿ ಅಭಿವೃದ್ಧಿ ಹೊಂದಬೇಕಾದರೆ ಕೈಗಾರಿಕೋದ್ಯಮಗಳು ಸ್ಥಾಪನೆಯಾಗುವುದು ಅಗತ್ಯ. ಸ್ವಾತಂತ್ರ್ಯ ಸಿಕ್ಕಿದ ಕಾಲಘಟ್ಟದಲ್ಲೇ ಕೈಗಾರಿಕೋದ್ಯಮಗಳ ಅಗತ್ಯವನ್ನು ಮನಗಂಡಿದ್ದರೂ ಅದನ್ನು ಕಾರ್ಯರೂಪಕ್ಕಿಳಿಸುವುದು ನಮ್ಮಿಂದ ಸಾಧ್ಯವಾಗಿರಲಿಲ್ಲ. ಹೀಗಾಗಿ ನಾವು ಆಮದು ದೇಶವಾಗಿಯೇ ಉಳಿಯಬೇಕಾಯಿತು. ಬಹುರಾಷ್ಟ್ರೀಯ ಕಂಪೆನಿಗಳಿಗೆ ಭಾರತ ಎನ್ನುವುದು ತಮ್ಮ ಉತ್ಪನ್ನಗಳನ್ನು ಮಾರಲು ವಿಪುಲ ಅವಕಾಶವುಳ್ಳ ಮಾರುಕಟ್ಟೆಯಾಯಿತು. ಬೇರೆ ದೇಶಗಳು ಉತ್ಪಾದಿಸಿದ ಸರಕುಗಳನ್ನು ಬಳಸುವ ದೇಶವಾದವೆಯೇ ಹೊರತು ನಾವೇ ಉತ್ಪಾದಕ ದೇಶವಾಗುವಲ್ಲಿ ಸೋತೆವು. ಹೀಗಾಗಿ ಇಂದಿಗೂ ನಮ್ಮ ಆರ್ಥಿಕತೆ ಅಭಿವೃದ್ಧಿಶೀಲ ಹಂತದಲ್ಲೇ ಉಳಿದಿದೆ. 

ನಿಧಾನವಾಗಿಯಾದರೂ ಈ ಪರಿಸ್ಥಿತಿ ಬದಲಾಯಿಸುತ್ತಿದೆ ಎನ್ನುವುದು ಸಮಾಧಾನಕೊಡುವ ಸಂಗತಿ. ಉದ್ಯಮಸ್ನೇಹಿ ರ್‍ಯಾಂಕಿಂಗ್‌ನಂತಹ ಅಂತರಾಷ್ಟ್ರೀಯ ಮಟ್ಟದ ಪರೀಕ್ಷೆಗಳಲ್ಲಿ ಉತ್ತಮ ಅಂಕಗಳನ್ನು ಪಡೆಯುವುದು ಎಂದರೆ ಹೂಡಿಕೆದಾರರ ವಿಶ್ವಾಸ ಗಳಿಸುವುದು ಎಂದು ಅರ್ಥ. ಭಾರತದಲ್ಲಿ ಹೂಡಿಕೆ ಮಾಡಲು ಉತ್ತಮ ವಾತಾವರಣ ಇದೆ ಎಂಬ ಸಂದೇಶ ಇದರಿಂದ ರವಾನೆಯಾಗುತ್ತದೆ. 

ಆದರೆ ನಮ್ಮ ಉದ್ಯಮ ಸ್ನೇಹಿ ವಾತಾವರಣ ನಗರ ಕೇಂದ್ರಿತವಾಗಿದೆ ಎನ್ನುವುದು ಕೂಡಾ ಗಮನಾರ್ಹ ಅಂಶ. ಮುಖ್ಯವಾಗಿ ಮುಂಬಯಿ, ದಿಲ್ಲಿಯಂಥ ಮಹಾನಗರಗಳನ್ನು ಆದ್ಯತೆಯಾಗಿರಿಸಿಕೊಂಡೇ ಉದ್ಯಮಗಳು ಬೆಳೆಯುತ್ತಿರುವುದು ಆರೋಗ್ಯಕಾರಿಯಲ್ಲ. ಮಹಾ ನಗರಗಳ ಮೇಲೆ ಬೀಳುವ ಒತ್ತಡ ಕಡಿಮೆಯಾಗಬೇಕಾದರೆ ಭುವನೇಶ್ವರ, ಲೂಧಿಯಾನ, ಹೈದರಾಬಾದ್‌ ಮತ್ತಿತರ ದ್ವಿತೀಯ ಸ್ತರದ ನಗರಗಳಲ್ಲೂ ಈ ವಾತಾವರಣ ಬೆಳೆಯಬೇಕಾಗಿದೆ. ಈ ಅಂಶದತ್ತ ಸರಕಾರ ಗಮನ ಹರಿಸಬೇಕು. 

ಹೂಡಿಕೆಗಳನ್ನು ಆಕರ್ಷಿಸುವಲ್ಲಿ ರಾಜ್ಯಗಳ ನಡುವೆ ಸ್ಪರ್ಧೆ ಏರ್ಪಟ್ಟಿರುವುದು ಆರೋಗ್ಯಕಾರಿ ಬೆಳವಣಿಗೆ. ಆದರೆ ಇದರಲ್ಲಿ ಕೆಲವೇ ರಾಜ್ಯಗಳು ಮಾತ್ರ ತೊಡಗಿಕೊಂಡಿದೆ. ಎಲ್ಲ 29 ರಾಜ್ಯಗಳೂ ಈ ಸ್ಪರ್ಧೆಯಲ್ಲಿ ಸಹಭಾಗಿಯಾದರೆ ಮಾತ್ರ ಇದು ಅರ್ಥಪೂರ್ಣ. ಅಂತೆಯೇ ಮುಂದಿನ ದಿನಗಳಲ್ಲಿ ಈ ಸ್ಪರ್ಧೆಯನ್ನು ಜಿಲ್ಲಾ ಮಟ್ಟಕ್ಕೆ ವಿಸ್ತರಿಸುವ ಯೋಜನೆಯೂ ಸರಕಾರದ ಮುಂದಿದೆ. ಹೂಡಿಕೆಗೆ ಮೂಲಸೌಕರ್ಯ ಕಲ್ಪಿಸಿಕೊಡುವಲ್ಲಿ ಈ ಮಾದರಿಯ ಸ್ಪರ್ಧೆ ಪೂರಕವಾಗಲಿದೆ. ಹೀಗಾದರೆ ಭಾರತ ಉದ್ಯಮ ಪ್ರಾರಂಭಿಸಲು ಅತಿ ಸುಲಭವಾದ ಮತ್ತು ಸರಳ ಪ್ರಕ್ರಿಯೆಯನ್ನೊಳಗೊಂಡಿರುವ ದೇಶವನ್ನಾಗಿ ಮಾಡುವ ಕನಸು ನನಸಾದೀತು. 

ಟಾಪ್ ನ್ಯೂಸ್

18

Ganesh Chaturthi: ಸ್ವರ್ಣ ಗೌರಿ ಮತ್ತು ವಿಘ್ನ ವಿನಾಯಕನಿಗೊಂದು ನಮನ

Anna Movie: ಅನ್ನಂ ಪರಬ್ರಹ್ಮ ಸ್ವರೂಪಂ!

Anna Movie: ಅನ್ನಂ ಪರಬ್ರಹ್ಮ ಸ್ವರೂಪಂ!

Tommy movie: ಟಾಮಿ ಅವನು ಮತ್ತು ಆರ್‌ಎಕ್ಸ್‌!

Tommy movie: ಟಾಮಿ ಅವನು ಮತ್ತು ಆರ್‌ಎಕ್ಸ್‌!

22

Ganesh Chaturthi: ಗಣೇಶ ಬಂದ

Kaalapatthar Movie: ಕಾಲಾಪತ್ಥರ್‌ನಲ್ಲಿ ಬಾಂಡ್ಲಿ ಸದ್ದು

Kaalapatthar Movie: ಕಾಲಾಪತ್ಥರ್‌ನಲ್ಲಿ ಬಾಂಡ್ಲಿ ಸದ್ದು

Cycling velodrome: ಸಾಕಾರದತ್ತ ರಾಜ್ಯದ ಮೊದಲ ಸೈಕ್ಲಿಂಗ್‌ ವೆಲೋಡ್ರೋಮ್‌

Cycling velodrome: ಸಾಕಾರದತ್ತ ರಾಜ್ಯದ ಮೊದಲ ಸೈಕ್ಲಿಂಗ್‌ ವೆಲೋಡ್ರೋಮ್‌

Actor Vinayakan: ವಿಮಾನ ನಿಲ್ದಾಣದ ಸಿಬ್ಬಂದಿಗಳ ಜತೆ ವಾಗ್ವಾದ; ನಟ ವಿನಾಯಗನ್ ವಶಕ್ಕೆ

Actor Vinayakan: ವಿಮಾನ ನಿಲ್ದಾಣದ ಸಿಬ್ಬಂದಿಗಳ ಜತೆ ವಾಗ್ವಾದ; ನಟ ವಿನಾಯಗನ್ ವಶಕ್ಕೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ganapa

Ganesha Festival: ಇಂದು ಗಣೇಶ ಚತುರ್ಥಿ; ವಿಘ್ನ ನಿವಾರಕ ವಿನಾಯಕ ವಿಶ್ವನಾಯಕನೂ ಹೌದು

ETTINAHOLE

Ettinahole Drinking Water Project: ದಶಕದ ಬಳಿಕ ಎತ್ತಿನಹೊಳೆ ಯೋಜನೆ ಸಾಕಾರ

Gouri-Puja-

Gowri Festival: ಇಂದು ಗೌರಿ ತದಿಗೆ: ಭಾದ್ರಪದ ಶುಕ್ಲ ತೃತೀಯಾ ಹರಿತಾಲಿಕಾ ವ್ರತಂ

ETTINAHOLE1

Ettinahole Project: ಬತ್ತಿದ ಕನಸುಗಳಿಗೆ ಎತ್ತಿನಹೊಳೆ ಜೀವಜಲ ಧಾರೆ!

10-uv-fusion

Teacher’s Day: ಆದರ್ಶ ಬದುಕಿಗೆ ದಾರಿ ತೋರುವ ಗುರು

MUST WATCH

udayavani youtube

ಗಜಪಯಣಕ್ಕೆ ಚಾಲನೆ : ಕ್ಯಾಪ್ಟನ್‌ ಅಭಿಮನ್ಯು ನೇತೃತ್ವದ 9 ಆನೆಗಳ ಗಜಪಡೆ

udayavani youtube

ರಕ್ಷಾ ಬಂಧನದ ಅರ್ಥ ಮತ್ತು ಮಹತ್ವ | ರಕ್ಷಾ ಬಂಧನ 2024

udayavani youtube

ಕಡಿಮೆ ಬೆಲೆಗೆ ಫಸ್ಟ್ ಕ್ಲಾಸ್ ಬಾಳೆಎಲೆ ಊಟ

udayavani youtube

ಆ.18 ರಿಂದ ಶ್ರೀಕೃಷ್ಣ ಮಠದಲ್ಲಿ ಕ್ರೀಡೋತ್ಸವ

udayavani youtube

ತಮ್ಮ ಮಕ್ಕಳನ್ನು ಬೆಳೆಸುವ ಸಲುವಾಗಿ ಕಂಡೋರ ಮಕ್ಕಳ ಭವಿಷ್ಯ ನಾಶ. ಈ ವ್ಯವಸ್ಥೆಗೆ ನಾನೂ ಬಲಿ

ಹೊಸ ಸೇರ್ಪಡೆ

18

Ganesh Chaturthi: ಸ್ವರ್ಣ ಗೌರಿ ಮತ್ತು ವಿಘ್ನ ವಿನಾಯಕನಿಗೊಂದು ನಮನ

Anna Movie: ಅನ್ನಂ ಪರಬ್ರಹ್ಮ ಸ್ವರೂಪಂ!

Anna Movie: ಅನ್ನಂ ಪರಬ್ರಹ್ಮ ಸ್ವರೂಪಂ!

Tommy movie: ಟಾಮಿ ಅವನು ಮತ್ತು ಆರ್‌ಎಕ್ಸ್‌!

Tommy movie: ಟಾಮಿ ಅವನು ಮತ್ತು ಆರ್‌ಎಕ್ಸ್‌!

22

Ganesh Chaturthi: ಗಣೇಶ ಬಂದ

Kaalapatthar Movie: ಕಾಲಾಪತ್ಥರ್‌ನಲ್ಲಿ ಬಾಂಡ್ಲಿ ಸದ್ದು

Kaalapatthar Movie: ಕಾಲಾಪತ್ಥರ್‌ನಲ್ಲಿ ಬಾಂಡ್ಲಿ ಸದ್ದು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.