ವಂಡರ್‌ ಆಗಲಿ ಕ್ಯಾಲೆಂಡರ್‌!


Team Udayavani, Jan 1, 2023, 6:05 AM IST

ವಂಡರ್‌ ಆಗಲಿ ಕ್ಯಾಲೆಂಡರ್‌!

ಹೊಸ ವರ್ಷದ ಶುಭಾಶಯಗಳು… ಮತ್ತೆ ನಮ್ಮ ಕ್ಯಾಲೆಂಡರ್‌ ಬದಲಾಗಿದೆ. 2022 ದಾಟಿ 2023ಕ್ಕೆ ಕಾಲಿಟ್ಟಿದ್ದೇವೆ. ಮತ್ತೆ ಕೊರೊನಾ ಭೀತಿ ಮೂಡಿದೆ. ಆದರೂ ಕಳೆದ ಎರಡು ವರ್ಷಗಳ ಕಾಲ ಕೊರೊನಾ ಕೊಟ್ಟ ಕಾಟದಿಂದಾಗಿ ನಮ್ಮೆಲ್ಲರ ಜೀವನ ಶೈಲಿಯೇ ಬದಲಾಗಿದೆ. ಶಾಲೆಗೆ ಹೋಗುವ ಮಕ್ಕಳೂ, ಪಠ್ಯಕ್ಕಿಂತ ಹೆಚ್ಚಾಗಿ ಗ್ಯಾಡೆjಟ್‌ಗಳ ಲೋಕದಲ್ಲಿ ಮುಳುಗಿದ್ದಾರೆ. ಹಾಗಾದರೆ 2023 ಅನ್ನು ನಾವು ಹೇಗೆ ಕಟ್ಟಿಕೊಳ್ಳಬೇಕು? ನಮ್ಮ ದೈನಂದಿನ ದಿನಚರಿ ಹೇಗಿರಬೇಕು? ಸ್ಮಾರ್ಟ್‌ಲೋಕದಿಂದ ಕಿಂಚಿತ್ತು ಹೊತ್ತಾದರೂ ಹೊರಗೆ ಬರುವುದು ಹೇಗೆ? ಇಲ್ಲಿದೆ ಟಿಪ್ಸ್‌…

ಟೈಮ್‌ ಮ್ಯಾನೇಜ್‌ಮೆಂಟ್‌ ಮಾಡಿಕೊಳ್ಳಿ

ಬದುಕಿನಲ್ಲಿ ಯಶಸ್ಸು ಸಾಧಿಸಲು ಸಮಯ ನಿರ್ವಹಣೆ ಕೌಶಲ (ಟೈಮ್‌ ಮ್ಯಾನೇಜ್‌ಮೆಂಟ್‌ ಸ್ಕಿಲ್‌) ಬಹಳ ಮುಖ್ಯ.  ಜತೆಗೆ ಉಲ್ಲಸಿತ ಕುಟುಂಬ ಹಾಗೂ ಉತ್ತಮ ಉದ್ಯಮ ನಿರ್ಮಾಣಕ್ಕಾಗಿ ಸಮಯ ನಿರ್ವಹಣೆ ಜಾಣ್ಮೆ ಇದ್ದರೆ ಉನ್ನತಮಟ್ಟಕ್ಕೆ ತಲುಪಲು ಸಾಧ್ಯ. ಮಾನಸಿಕ ಆರೋಗ್ಯ ಒತ್ತಡ ಮುಕ್ತ ಜೀವನಕ್ಕಾಗಿ ನಮ್ಮ ಅಮೂಲ್ಯ ಸಮಯವನ್ನು ಸಂಪೂರ್ಣವಾಗಿ ಉಪಯೋಗಿಸಿಕೊಳ್ಳುವ ಜಾಣ್ಮೆ ನಮಗಿರಬೇಕು.

ಗಮನಿಸಬೇಕಾದ ಅಂಶಗಳು: ಪ್ರತಿಯೊಬ್ಬರೂ ಸಮಯದ ವಿಚಾರದಲ್ಲಿ ಉತ್ತಮ ನಿರ್ವಹಣೆ ಹಾಗೂ ಕಳಪೆ ನಿರ್ವಹಣೆ ಹೊಂದಿರುತ್ತಾರೆ. ಇದು ಎಲ್ಲರಲ್ಲೂ ಸಾಮಾನ್ಯವಾದ ಅಂಶ. ಆದರೆ ಸಮಯ ನಿರ್ವಹಣೆ ಪ್ರತಿಯೊಬ್ಬರಲ್ಲೂ ವಿಭಿನ್ನ ಪ್ರಕಾರವಾಗಿರುತ್ತದೆ. ಕೆಲವರು ಯಾವುದೇ ಪ್ಲಾನಿಂಗ್‌ ಇಲ್ಲದೆ ಸಿಗುವ ಉತ್ತಮ ಅವಕಾಶಗಳನ್ನು ಕೈಚೆಲ್ಲುತ್ತಾರೆ.

ಒಬ್ಬ ವ್ಯಕ್ತಿ ಶ್ರಮ ಹಾಕಿ ಸಮಯ ನಿರ್ವಹಣೆ ಕೌಶಲ ಕಲಿತುಕೊಂಡರೆ ಅವರು ಈಗ ಯಾವ ಹಂತದಲ್ಲಿರುತ್ತಾನೋ ಆ ಹಂತದಿಂದ ಮುಂದಿನ ಹಂತಕ್ಕೆ ಹೋಗಲು ಸಹಾಯವಾಗುತ್ತದೆ.  ಮುಂದೆ ಬದುಕಿನಲ್ಲೂ ಯಶಸ್ಸು ಕಾಣಲು, ಖುಷಿಯಾಗಿರಲು ಸಹಕಾರಿಯಾಗುತ್ತದೆ. ಸಮಯ ನಿರ್ವಹಣೆಗಾಗಿ ಮೂರು ಪ್ರಮುಖ ಅಂಶಗಳನ್ನು ನಾವು ಜೀವನದಲ್ಲಿ ರೂಢಿಸಿಕೊಳ್ಳಬೇಕಾಗಿದೆ. ಅವು ಯಾವುದೆಂದರೆ ಯೋಜನೆ, ಆದ್ಯತೆ ಹಾಗೂ ಪ್ರದರ್ಶನ.

ಯೋಜನೆ: ಯೋಜನೆ (ಪ್ಲಾನಿಂಗ್‌) ಎಂದರೆ  ಕೆಲಸ ನಿರ್ವಹಿಸಲು ಬೇಕಾದ ಸಾಮರ್ಥ್ಯ, ಕೆಲಸದ ಸಾಧ್ಯಾಸಾಧ್ಯತೆಯನ್ನು ಆಲೋಚಿಸಿ ರೂಪಿಸಿಕೊಳ್ಳುವ ಒಂದು ತೀರ್ಮಾನ. ತೀರ್ಮಾನವನ್ನು ಬರೆದಿಡುತ್ತೀವಿ ಅಥವಾ ಮನಸ್ಸಿನಲ್ಲಿಯೇ ಸಿದ್ಧಪಡಿಸಿಕೊಳ್ಳುತ್ತೀವಿ. ಈ ಹಂತದಲ್ಲಿ ಯೋಜನೆ ರೂಪಿಸಿಕೊಳ್ಳುವಾಗ ವಾಸ್ತವದ ಆಧಾರದ ಮೇಲೆ ನಮ್ಮ ಸಾಮರ್ಥ್ಯ ಹಾಗೂ ಪರಿಣಾಮಗಳ ಅನುಸಾರ ರೂಪಿಸಿಕೊಳ್ಳುವುದು ಮುಖ್ಯವಾಗುತ್ತದೆ.  ಇದಾಗದಿದ್ದರೆ ನಾವು ನಮ್ಮ ಯೋಜನೆಯನ್ನು ಸರಿಯಾಗಿ ಕಾರ್ಯರೂಪಕ್ಕೆ ಇಳಿಸಲು ವಿಫಲವಾಗುತ್ತೇವೆ.

ಆದ್ಯತೆ: ಇದರಲ್ಲಿ ತೀರ್ಮಾನಿಸಿದ ಯೋಜನೆಯಲ್ಲಿ ಯಾವುದು ಮುಖ್ಯ, ಯಾವುದನ್ನು ಬೇಗ ಮಾಡಬೇಕು, ಯಾವುದಕ್ಕೆ ಜಾಸ್ತಿ ಸಮಯ ಕೊಡಬೇಕು ಎಂಬುದನ್ನು ಆದ್ಯತೆಯನ್ನಾಗಿ ಮಾಡಿಕೊಳ್ಳುವುದು. ಯಾವ ಕೆಲಸ ಅತಿ ಹೆಚ್ಚು ಮುಖ್ಯ ಮತ್ತು ಶೀಘ್ರವಾಗಿ ಮಾಡಬೇಕೋ ಅದನ್ನು ಆದ್ಯತೆಯಾಗಿ ಪರಿಗಣಿಸಬೇಕು. ಯಾವ ಕೆಲಸ ಮುಖ್ಯವಲ್ಲವೋ, ಶೀಘ್ರವಾಗಿ ಆಗಬೇಕಿಲ್ಲವೋ ಅಂತಹ ಕೆಲಸವನ್ನು ಅನಂತರ ಮಾಡಬೇಕು.

ಪ್ರದರ್ಶನ(ಕಾರ್ಯರೂಪ): ಒಂದು ಬಾರಿ ಪ್ಲಾನಿಂಗ್‌ ಮತ್ತು ಆದ್ಯತೆಗಳನ್ನು ಪಟ್ಟಿಮಾಡಿದ ಮೇಲೆ ಅದನ್ನು ಸರಿಯಾದ ರೀತಿಯಲ್ಲಿ ಕಾರ್ಯರೂಪಕ್ಕೆ ಇಳಿಸಬೇಕು. ಹೆಚ್ಚು ಗಮನ ಹರಿಸಿ ಬೇರೆ ಕಡೆ ಗಮನ ನೀಡದೆ ನಿರ್ವಹಣೆ ಮಾಡಿದರೆ ಯೋಜನೆಯಲ್ಲಿ ಯಶಸ್ಸು ಸಾಧಿಸಲು ಸಾಧ್ಯವಾಗುತ್ತದೆ.

ಈ ಮೇಲಿನ ಮೂರು ಮುಖ್ಯವಾದ ಹಂತಗಳನ್ನು ಅನುಸರಿಸದರೆ ಸಮಯ ನಿರ್ವಹಣೆ ಸಾಧ್ಯವಾಗಿ ಕಾರ್ಯವಿಧಾನಕ್ಕೆ ಹೆಚ್ಚು ಮೌಲ್ಯಯುತವಾಗುತ್ತದೆ.

ಪ್ರೊಕ್ರಾಸ್ಟಿನೇಷನ್‌ (ವಿಳಂಬ ಪ್ರವೃತ್ತಿ) ಎಂದರೆ ಯಾವುದೇ ಒಂದು ಕೆಲಸವನ್ನು ಕಡೆ ಸಮಯದವರೆಗೆ ಮುಂದೂಡುವುದು. ಅಂದಿನ ಕಾರ್ಯವನ್ನು ಆಗಲೇ ಮಾಡುವುದಿಲ್ಲ. ಕೆಲವೊಮ್ಮೆ ಅನೇಕ ಕಾರಣಗಳಿಂದ ಮುಂದೂಡಬೇಕಾದ ಪರಿಸ್ಥಿತಿ ಉಂಟಾಗುತ್ತದೆ. ಕೆಲವೊಮ್ಮೆ ನಾವು ಸಮಯ ಮಿತಿ ಹಾಕಿಕೊಳ್ಳುವುದನ್ನೂ ಮುಂದೂಡಬೇಕಾಗಬಹುದು.

ಇದು ಸಮಯ ನಿರ್ವಹಣೆ ಕೌಶಲಕ್ಕೆ ದೊಡ್ಡ ಅಡಚಣೆ. ಜೀವನದಲ್ಲಿ ಯಶಸ್ಸು ಸಾಧಿಸಲು ತೊಂದರೆ ಕೊಡುತ್ತಾ ಹೋಗುತ್ತದೆ. ಹಾಗಾಗಿ ನನ್ನ ಸಲಹೆ ಏನಂದರೆ ನಾವು ಏನೇ ಮಾಡಿದರೂ ಒಂದು ಹಂತಕ್ಕೆ ಹೊಂದಾಣಿಕೆ ಇರಬೇಕು. ತುಂಬಾ ಸಂಕುಚಿವಾಗಿ ಕೆಲಸ ನಿರ್ವಹಿಸಲು ಮುಂದಾದರೆ ಯಾವುದನ್ನೂ ಸಾಧನೆ ಮಾಡಲು ಆಗುವುದಿಲ್ಲ. ಹಾಗಾಗಿ ಬದುಕಿನಲ್ಲಿ ಫ್ಲೆಕ್ಸಿಬಿಲಿಟಿ(ಹೊಂದಾಣಿಕೆ) ತುಂಬಾ ಮುಖ್ಯ. ಆ ಪ್ಲ್ರಾನ್‌ ಅಂದಿನ ದಿವಸ ಮಾಡಲು ಆಗದಿರಬಹುದು. ಆದರೆ ಅಡಚಣೆ ಮುಗಿದ ಬಳಿಕ ಅದನ್ನು ಮುಂದಕ್ಕೆ ತೆಗೆದುಕೊಂಡು ಮತ್ತೂಂದು ಪ್ರಯತ್ನ ಮಾಡಲೇಬೇಕಾಗುತ್ತದೆ.

ಈ ಎಲ್ಲದರ ಮಧ್ಯೆ ನಮ್ಮನ್ನು ನಾವು ದೈಹಿಕ ಹಾಗೂ ಮಾನಸಿಕ ಆರೋಗ್ಯ ನೋಡಿಕೊಳ್ಳದಿದ್ದರೆ ಯಾವುದೇ ಪ್ಲ್ರಾನಿಂಗ್‌ ಮಾಡಲು ಆಗುವುದಿಲ್ಲ. ಚೆನ್ನಾಗಿ ಊಟ ಮಾಡಬೇಕು, ಪ್ರತಿನಿತ್ಯ ವ್ಯಾಯಾಮ ಮಾಡಬೇಕು, ಆವಶ್ಯಕವಾದ ನಿದ್ದೆ ಮಾಡಬೇಕು. ಈ ಮೂಲಕ ಮಾನಸಿಕ ಹಾಗೂ ದೈಹಿಕ ಆರೋಗ್ಯವನ್ನು ಕಾಪಾಡಿಕೊಳ್ಳಬೇಕು. ಆಗ ಮಾತ್ರ ಬದುಕಿನಲ್ಲಿ ಯಶಸ್ಸು ಗಳಿಸಲು ಸಾಧ್ಯವಾಗುತ್ತದೆ. ಹೊಸ ವರ್ಷ ನಿಮ್ಮ ಎಲ್ಲ ಆಲೋಚನೆಗಳನ್ನು ಯೋಜನೆಗಳನ್ನಾಗಿಸಿ ಬದ್ಧತೆಯಿಂದ ಕಾರ್ಯನಿರ್ವಹಿಸುವಂತಾಗಿ ಯಶಸ್ಸು ನಿಮ್ಮದಾಗಲಿ.

– ಡಾ.ಗಿರೀಶ್‌ ಚಂದ್ರ, ಮಾನಸಿಕರೋಗ ತಜ್ಞರು

***

ಯಂತ್ರದ ಚಟ ಬಿಡಿಸುವ ಸೂತ್ರ!

ಇತ್ತೀಚಿನ ದಿನಗಳಲ್ಲಿ ಮೊಬೈಲ…, laptop, tv, ಜನರ ಬದುಕಿನ ಒಂದು ಬಹುಮುಖ್ಯ ಅಂಗವಾಗಿವೆ. ಸೋಶಿಯಲ್‌ ಮೀಡಿಯಾ ಹಾವಳಿಯಿಂದ ಜನರು ಇಂಟರ್ನೆಟ್‌ನ ದಾಸರಾಗಿ¨ªಾರೆ ಎಂದರೆ ತಪ್ಪಾಗಲಾರದು. ಇದರ ಮಧ್ಯೆ, Covid ನಿಂದ ಆದ lockdown ಸಮಾಜದ ನೈಜ ಸನ್ನಿವೇಶಗಳು ಹಾಗೂ ಸಂಭಾಷಣೆಗಳಿಂದ ಜನರನ್ನು ದೂರ ಮಾಡಿ ಸಹಜತೆಯನ್ನು ಮರೆಸಿದೆ. ಈ ಬೆಳವಣಿಗೆಗಳಿಂದ ತುಂಬಾ ಹಾನಿ ಆಗಿದ್ದು ಮುದ್ದು ಮಕ್ಕಳಿಗೆ. ವ್ಯಕ್ತಿತ್ವ ನಿರ್ಮಾಣದ ಸಮಯದಲ್ಲಿ, online ಪಾಠ, ಗೆಳೆಯರೊಡನೆ ಆಟದ ಬದಲು, ನಾಲ್ಕು ಗೋಡೆ ನಡುವೆ ಬಂಧಿಯಾಗಿ ಅವರ ಕ್ರಿಯೇಟಿವಿಟಿಗೆ ತುಂಬಾ ದೊಡ್ಡ ಹೊಡೆತ ಬಿದ್ದಿದೆ. ಇದರಿಂದ  ಮಕ್ಕಳ ವರ್ತನೆಯಲ್ಲಿ ಕೋಪ, ಹಠ, ಸಣ್ಣ ಸಣ್ಣ ವಿಷಯಕ್ಕೂ ಅಳುವುದು,ಸೋಮಾರಿತನ, ಅಶಿಸ್ತು ಹೀಗೇ ಹಲವಾರು ನಕಾರಾತ್ಮಕ ಭಾವನೆಗಳು ಹೆಚ್ಚಾಗಿ ಪೋಷಕರಿಗೆ ಒಂದು ದೊಡ್ಡ ಸವಾಲೇ ಆಗಿದೆ. ಸೋಶಿಯಲ್‌ ಮೀಡಿಯಾ ದಿಂದ ನೈಜತೆ ಹಾಗೂ ಕೃತಕತೆ ನಡುವೆ ವ್ಯತ್ಯಾಸ ಗೊತ್ತಾಗದೆ ಎಷ್ಟೋ ಮಕ್ಕಳು depression, anxiety ಹೀಗೆ ಹಲವು ಮಾನಸಿಕ ಸಮಸ್ಯೆಗಳಿಗೆ ಗುರಿಯಾಗುತ್ತಿ¨ªಾರೆ. ಬೇರೆಯವರ ಜೀವನ ಶೈಲಿಯನ್ನು ಕುರುಡಾಗಿ ಅನುಸರಿಸಿ ತಮ್ಮ ಸ್ವಂತಿಕೆಯನ್ನು ಕಳೆದುಕೊಳ್ತಿ¨ªಾರೆ.  ಟಿವಿ, ಮೊಬೈಲ…, ಇಂಟರ್ನೆಟ್‌ ಚಟದ ಯುಗದಲ್ಲಿ ಇದರಿಂದ ಮಕ್ಕಳನ್ನು ಪಾರು ಮಾಡಲು ಕೆಲವು ಸೂತ್ರಗಳು:

1) ಮಕ್ಕಳನ್ನು ಆದಷ್ಟು ಅವಕಾಶ ಸಿಕ್ಕಾಗೆಲ್ಲ ಪ್ರಕೃತಿಗೆ ಹತ್ತಿರವಾಗುವಂತೆ ಮಾಡ್ಬೇಕು. ಹಸಿರು ಗಿಡ ಮರ, ಮರುಳಲ್ಲಿ ಆಟ, ದನ ಕರು, ತೋಟ ಗದ್ದೆ ಇವೆಲ್ಲವೂ ಅವರಿಗೆ ಯಾಂತ್ರಿಕ ಪ್ರಪಂಚಕ್ಕೂ ಹೆಚ್ಚು ಆಕರ್ಷಕ ಅನಿಸಿದಾಗ ಸ್ವಾಭಾವಿಕವಾಗಿ ಅದರಿಂದ ದೂರ ಇರ್ತಾರೆ.

2) ಕಲೆ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳಿಗೆ ಸಂದರ್ಭ  ಸಿಕ್ಕಾಗೆಲ್ಲ ಕರ್ಕೊಂಡು ಹೋದ್ರೆ ಅವರೊಳಗಿರುವ ಕಲೆ ಹೊರತರಲು ಸ್ಪೂರ್ತಿ ಆಗುತ್ತೆ.

3) ಕಥೆ ಪುಸ್ತಕ, ಸಣ್ಣ ಕವಿತೆಗಳ ಪುಸ್ತಕಗಳನ್ನು ಓದಲು ಪೋ›ತ್ಸಾಹಿಸುವ ಮೂಲಕ ಭಾಷಸಕ್ತಿ, ಸಾಹಿತ್ಯಾಸಕ್ತಿ, creative imagination ಹೆಚ್ಚಾಗುತ್ತೆ.

4) ಮನೆಯಲ್ಲಿ ಕುಟುಂಬದವರೆಲ್ಲ ಸೇರಿ ಹಳೆಯ ಆಟಗಳಾದ ಚೆಸ…, ಚೆನ್ನೆ ಮಣೆ, ಚೌಕಾ ಬಾರ, ಹೀಗೆ ಸ್ವಲ್ಪ ಸಮಯ ಒಟ್ಟಿಗೆ ಕಳೆದರೆ ಮಕ್ಕಳಿಗೆ ಮನೆಯವರೊಡನೆ ಬಾಂಧವ್ಯ ಹೆಚ್ಚುತ್ತೆ.

5) ಬಿಡುವಿನ ಸಮಯದಲ್ಲಿ ಏಕಪಾತ್ರಾಭಿನಯ (mono acting ), ಆಶುಭಾಷಣ (pick and speak), role playing, ಹೀಗೆ ವಿಶೇಷ ಆಟ ಆಡಿದ್ರೆ ಮಕ್ಕಳ ಪ್ರತಿಭೆ, ಕ್ರಿಯಾಶೀಲತೆ, creative skills ಹೆಚ್ಚುವುದರ ಜತೆಗೆ ಧೈರ್ಯವೂ ಹೆಚ್ಚುತ್ತೆ.

6) ಚಿತ್ರ ಬಿಡಿಸುವುದು ಮನಸ್ಸಿಗೆ ಮುದ, ಹಾಡು ಕಲಿಯುವುದು ಕಿವಿಗೆ ಇಂಪು, ನೃತ್ಯ ಖುಷಿಯ ಜತೆ ವ್ಯಾಯಾಮ. ಹೀಗೆ ಇವೆಲ್ಲವೂ ಮಕ್ಕಳನ್ನು ಮೊಬೈಲ…, tv, social media ಚಟಕ್ಕೆ ಬೀಳುವುದರಿಂದ ಪಾರು ಮಾಡುತ್ತವೆ.

ಇವೆಲ್ಲವೂ ಮಕ್ಕಳಲ್ಲಿ ಒಂದು ಸೃಜನಾತ್ಮಕ ವ್ಯಕ್ತಿತ್ವ ನಿರ್ಮಾಣ ಮಾಡುತ್ತೆ.

ಪೋಷಕರಿಗೆ ಕೆಲವು tips:

1) ಮಕ್ಕಳು ನಾವು ಹೇಳಿದ್ದನ್ನು ಕಲಿಯುವುದಕ್ಕಿಂತ ನಾವು ಮಾಡುವುದನ್ನ ನೋಡಿ ಕಲಿಯೋದು ಹೆಚ್ಚು. ಹಾಗಾಗಿ ನಾವು ಅವರಿಂದ ಏನು ನಿರೀಕ್ಷಿಸುತ್ತೇವೆ ಅದನ್ನು ನಾವು ಮೊದಲು ಮಾಡಬೇಕು.

2) ಮಕ್ಕಳಿಗೆ ಕಲಿವಿಕೆಗೆ ಒಳ್ಳೇ ವಾತಾವರಣ ಕಲ್ಪಿಸೋದು ನಮ್ಮೆಲ್ಲರ ಕರ್ತವ್ಯ.

3) ತಾಳ್ಮೆ, ವಿನಯ, ಎಲ್ಲರನ್ನೂ ಗೌರವಿಸಿ ಮಾತಾಡೋದು ಇವೆಲ್ಲವನ್ನೂ ನಾವು conscious effortಠಿ ಹಾಕಿ ರೂಢಿ ಮಾಡಿಕೊಳ್ಳಬೇಕು.

4) ಮಕ್ಕಳಿಗೆ ನಾವು ಒಳ್ಳೆಯ ಸ್ನೇಹಿತರಾದರೆ ಅವರಿಗೆ ಬದುಕಿನಲ್ಲಿ ಸರಿ ಆಯ್ಕೆಗಳನ್ನು ಮಾಡಲು ಸಹಾಯ ಆಗುತ್ತದೆ.

5) ನಮ್ಮ ಅತಿಯಾದ ಪ್ರೀತಿ ಹಾಗೂ ಕಾಳಜಿ ಕೆಲವೊಮ್ಮೆ ಅವರು ಮಾನಸಿಕವಾಗಿ ಸ್ವಾವಲಂಬಿಗಳಾಗುವುದನ್ನು ತಡೆಯಬಹುದು. ಹಾಗಾಗಿ ವಿಪರೀತ ಶಿಸ್ತು, ವಿಪರೀತ ಅಲಕ್ಷÂ, ವಿಪರೀತ ಕಾಳಜಿ ಯಾವುದೂ ಬೇಡ. ಅವರ ಆತ್ಮವಿಶ್ವಾಸ ತುಂಬುವ ಕೆಲಸ ಮಾತ್ರ ಸಾಕು.

6)  ತನ್ನ ವ್ಯಕ್ತಿತ್ವ ಉಳಿಸಿಕೊಂಡು ಸುಂದರ ಬದುಕು ಕಟ್ಟುವುದು ಹೀಗೆ, ತಪ್ಪು ಮಾಡಿದರೆ ತಿದ್ದಿಕೊಳ್ಳುವ, ಇತರರ ಒಳ್ಳೆಯತನವನ್ನು ಮೆಚ್ಚಿಕೊಳ್ಳುವ, ದ್ವೇಷ, ಅಸೂಯೆ ಸಾಧಿಸದೆ ಬದುಕುವ ಕಲೆ ನಾವು ಬದುಕಿ ಅವರಿಗೆ ಕಲಿಸಬೇಕು.

ಕೊನೆಯÇÉೊಂದು ಮಾತು…

Technology ಖಂಡಿತವಾಗಿಯೂ ಮಾರಕವಲ್ಲ. ನಾವು ಹೇಗೆ ಉಪಯೋಗಿಸ್ತೀವಿ ಅನ್ನೋದು ಮುಖ್ಯ. ‘Freedom comes with responsibility’ ಅನ್ನೋ ಮಾತನ್ನು ಮಕ್ಕಳಿಗೆ ಸಣ್ಣ ವಯಸ್ಸಿನಿಂದಲೇ ಹೇಳಿಕೊಟ್ರೆ ಅವರು ಅದನ್ನು ತಮ್ಮ ಸಾಧನೆಗೆ ಪೂರಕವಾಗಿ ಬಳಸೋದು ಕಲಿತಾರೆ.

ಈ ಹೊಸ ವರ್ಷ ಎಲ್ಲ ಮುದ್ದು ಮಕ್ಕಳಿಗೂ, ನಿಮ್ಮೆಲ್ಲರಿಗೂ ಯಾಂತ್ರಿಕ ಪ್ರಪಂಚದಾಚೆ ಬದುಕಿನ ಸುಂದರ ಕ್ಷಣಗಳನ್ನು ಅನುಭವಿಸಿ ಖುಷಿ ನೆಮ್ಮದಿ ಕೊಡಲಿ ಎಂದು ಹಾರೈಸುತ್ತೇನೆ.

– ಸುಹಾಸಿನಿ ರಾವ್, ಮನಃಶಾಸ್ತ್ರಜ್ಞೆ

***

ಅಂಕುಶದಲ್ಲಿರಲಿ ಅಶನ, ವಸನ, ವ್ಯಸನ…

ನೂತನ ವರುಷದ ಶುಭಾರಂಭದಲ್ಲಿ ನಮ್ಮ ಯುವ ಸಹೋದರ, ಸಹೋದರಿಯರಿಗೆ ನಾವು ಒಂದಷ್ಟು ಕಿವಿಮಾತುಗಳನ್ನು ಹೇಳಬಯಸುತ್ತೇವೆ.

ಯೌವನವಿದು ಕುದುರೆ ಇದ್ದ ಹಾಗೆ!! ಅದು ಯಾವಾಗಲೂ ನಾಗಾಲೋಟದಲ್ಲಿ ಓಡಿಕೊಂಡಿರುತ್ತದೆ. ನೀವು ಇದರ ವೇಗ, ಆವೇಗಗಳಿಗೆ ಕಡಿವಾಣ ಹಾಕಿಕೊಂಡಿರಬೇಕು.

ಮುಪ್ಪು ಅಲ್ಪಾಯುವಾದರೆ ಚಿಂತೆ ಇಲ್ಲ. ಆದರೆ ನಿಮ್ಮ ಯೌವನ ಮಾತ್ರ ದೀರ್ಘಾಯುವಾಗಬೇಕು.   ನಿಮ್ಮ ಯೌವನವದು ದೀರ್ಘಾಯುವಾಗಬೇಕೆಂದರೆ ಅಶನ, ವಸನ, ವ್ಯಸನಾದಿಗಳು ನಿಮ್ಮ ಅಂಕುಶದಲ್ಲಿರಬೇಕು.

ಕಾಮ, ಕ್ರೋಧ, ಅಸೂಯೆಗಳು ನಿಮ್ಮ ಯೌವನದ ಉಸ್ತುವಾರಿ ಸಚಿವರಾಗುವುದು ಬೇಡ.

ನಿಮ್ಮ ಅಮೂಲ್ಯ ಯೌವನವು ದುರಿತ, ದುಷ್ಕೃತ್ಯಗಳ ದಾಳಿ-ದಾಂಧಲೆಗಳಿಗೆ (ಎನ್‌ಕೌಂಟರ್‌ಗೆ) ವೇದಿಕೆಯಾಗದಂತೆ ನೋಡಿಕೊಳ್ಳಿ.

ನೀವು ಬರೀ ಉದ್ದೇಶಭಕ್ತರಾಗಿ ಉಳಿದುಕೊಂಡರೆ ಸಾಲದು, ನೀವು ದೇಶಭಕ್ತರಾಗಿ ಬೆಳೆಯಬೇಕು.

ನೀವು ಬರೀ ಸ್ವಾರ್ಥಪ್ರಿಯರಾದರೆ ಸಾಲದು, ನೀವು ಪುರುಷಾರ್ಥ ಪ್ರಿಯರಾಗಿ ನಿಲ್ಲಬೇಕು.

ನಿಮ್ಮ ಬದುಕಿನ “”ಗೋಲ್ಡನ್‌ ಏಜ್‌” ಎಂದು ಕರೆಯಲ್ಪಡುವ ಯೌವನವದು “”ಡ್ಯಾಮೇಜ್‌” ಆಗದಂತೆ  ನಿಗಾ ವಹಿಸಬೇಕು.

ನಾವು ಇತ್ತೀಚೆಗೆ “”ಸತ್ಯಮೇವ ಜಯತೇ” ಎಂದು ಹೇಳದೆ “”ಯುವಾ ಏವ ಜಯತೇ” ಎಂದೂ, “”ರಾಜಾ ಪ್ರತ್ಯಕ್ಷ ದೇವತಾ” ಎಂದು ಹೇಳದೆ “”ಯುವಾ ಪ್ರತ್ಯಕ್ಷ ದೇವತಾ” ಎಂದು ಹೇಳುತ್ತಿದ್ದೇವೆ. ಈ ಮಾತುಗಳಲ್ಲಿನ ಅರ್ಥವನ್ನು ಅರ್ಥವತ್ತಾಗಿಸುವ ಜವಾಬ್ದಾರಿ ನಿಮ್ಮ ಮೇಲಿದೆ.

ನಿಮ್ಮ ಯೌವನವದು “”ಟ್ರಾÂಶ್‌ ಬಾಕ್ಸ್‌’ಗೆ ಸೇರ್ಪ ಡೆಯಾಗಬಾರದು.  ಯೌವನವನ್ನು ನೀವುಗಳು ಸಂಪೂರ್ಣವಾಗಿ “”ಎನ್‌ಕ್ಯಾಶ್‌” ಮಾಡಿಕೊಳ್ಳಬೇಕು. ಉರುಳಿಹೋದ ವರುಷಗಳು, ಕಳೆದುಹೋದ ಯೌವನವದು ಮತ್ತೆ ಮರಳಿ ಬರುವುದಿಲ್ಲ.

ಇಂದಿನ ಚಿತ್ರ-ವಿಚಿತ್ರ ಚಲನಚಿತ್ರ ಜಗತ್ತಿನ ಚಿತ್ರ ನಾಯಕರನ್ನು ನಿಮ್ಮ ಆದರ್ಶವಾಗಿಸಿ ಕೊಳ್ಳದೆ ನಮ್ಮ ದೇಶದ ಚರಿತ್ರ ನಾಯಕರನ್ನು  ಆದರ್ಶವಾಗಿಸಿಕೊಳ್ಳಿ.

ವರ್ತಮಾನ ಕಾಲದ ಜಗತ್ತು ಬರೀ ದಿಖಾವಟ್‌, ಬನಾವಟ್‌,  ಸಜಾವಟ್‌ಗಳ ಉಗ್ರಾಣವಾಗಿ ಪರಿಣಮಿಸಿದೆ. ಇದನ್ನರಿತು ಕೊಂಡು ನೀವು ಇದಕ್ಕೆ ವ್ಯತಿರಿಕ್ತವಾಗಿ ವರ್ತಿಸಬೇಕಿದೆ.

ನೀವುಬದುಕಿನ ಶಾಶ್ವತ ಸತ್ಯಗಳಿಗೆ ಸಾಕ್ಷಿಯಾಗಿ  ನಿಂತುಕೊಳ್ಳಬೇಕು.

ನಿಮ್ಮ ಯೌವನದ ದಿಕ್ಕು ತಪ್ಪಿಸಲು ಸಾವಿರಾರು ಜನಗಳು ಕಾದುಕೊಂಡಿರುತ್ತಾರೆ. ನೀವು ದಿಕ್ಕು ತಪ್ಪದೆ ನೊಂದವರ ನೋವಿಗೆ ಮತ್ತು ಬೆಂದವರ ಬಾಳಿಗೆ ದಿಕ್ಸೂಚಿಯಾಗಿ ನಿಂತುಕೊಳ್ಳಬೇಕು.

ಇವತ್ತು ಕೆಡುವುದಕ್ಕೆ ನೂರು ದಾರಿಗಳಿವೆ, ನೂರಾರು ಖೆಡ್ಡಾಗಳಿವೆ. ನೀವು ಕೆಡದೆ ಉಳಿಯ ಬೇಕಾಗಿದೆ. ಖೆಡ್ಡಾದಲ್ಲಿ ಬೀಳದೆ ಇರಬೇಕಿದೆ.

ಇವತ್ತು ಮೊಬೈಲು, ಇನ್ಸಾಗ್ರಾಮ್‌,  ವಾಟ್ಸ್‌ಆಪ್‌, ಫೇಸ್‌ಬುಕ್‌, ರೀಲ್ಸ್‌…, ಇತ್ಯಾದಿ ಆಧುನಿಕ ಭಸ್ಮಾಸುರರು ನಿಮ್ಮ ಮೇಲೆ ಸವಾರಿ ಮಾಡಿಕೊಂಡಿದ್ದಾರೆ. ಇವುಗಳಿಂದ ಹುಷಾರಾಗಿರಬೇಕಿದೆ.

ನೀವು ಮೊಬೈಲ್‌ನ ಗುಲಾಮರಾಗುವುದು ಬೇಡ. ಈ ಆಧುನಿಕ ಸೌಲಭ್ಯ, ಸಲಕರಣೆಗಳಿಂದ ಸುರಕ್ಷಿತ ಅಂತರವನ್ನು ಕಾಯ್ದುಕೊಳ್ಳಿ.

ಸ್ವಾಮಿ ವಿವೇಕಾನಂದರಂಥ ಮಹಾನುಭಾವರನ್ನು  ಬದುಕಿನ ಪಾಠ ವಾಗಿಸಿಕೊಳ್ಳಿ; ಮತ್ತು ಅಂಥವರನ್ನು ನಿಮ್ಮ ಬದುಕಿನ ಪಠ್ಯವಾಗಿಸಿಕೊಳ್ಳಿ.

ನಿಮ್ಮ ಯೌವನವು ಸುಖದಾಂ, ವರದಾಂ ಆಗಲಿ. ಆ ದಿಶೆಯಲ್ಲಿ ನಿಮ್ಮ ಪ್ರಯತ್ನವನ್ನು ಚುರುಕಾಗಿಸಿಕೊಂಡಿರಿ.

– ಡಾ| ಶಿವಾನಂದ ಶಿವಾಚಾರ್ಯರು ಹಿರೇಮಠ, ತಪೋವನ, ತುಮಕೂರು

 

ಎಲ್ಲವೂ ಒಪ್ಪ ಓರಣದಂತಿರಲಿ…

ಹೊಸತೊಂದು ಕ್ಯಾಲೆಂಡರ್‌ ತಂದು ಗೋಡೆಯ ಮೇಲೆ ನೇತು ಹಾಕುವ ಸಮಯ ಮತ್ತೆ ಬಂದಿದೆ. ಹೊಸ ವರ್ಷದ, ಹರುಷಗಳ ಜತೆಯÇÉೇ ಬರುವುದು ಒಂದಿಷ್ಟು ನಿರ್ಣಯಗಳು. ಈ ಹೊಸವರ್ಷದ ನಿರ್ಣಯಗಳಲ್ಲಿ ನಿಮ್ಮ ಹಣಕಾಸಿನ ಆರೋಗ್ಯ ಹೆಚ್ಚಿಸುವ ಒಂದಿಷ್ಟು ವಿಚಾರಗಳ ಬಗ್ಗೆ ಚಿಂತನೆ, ಯೋಚನೆ ಮತ್ತೂಂದಿಷ್ಟು ಯೋಜನೆಗಳ ಬಗೆಗೆ ಗಮನ ಹರಿಸಿ.

ನಿಮ್ಮ ಸಹಾಯಕ್ಕೆ ಒಂದಿಷ್ಟು ಮಾಹಿತಿ ಇಲ್ಲಿದೆ  ನೋಡಿ.

ಒಂದು ಬಜೆಟ್‌ ಮಾಡಿ: ನಿಮ್ಮೆಲ್ಲ ಆದಾಯ,  ಖರ್ಚುಗಳ ಬಗ್ಗೆ ಸಂಪೂರ್ಣ ಮಾಹಿತಿ ನಿಮಗಿರಬೇಕು. ಯಾವ ಖರ್ಚುಗಳು ತೀರಾ ಅಗತ್ಯ, ಯಾವುದನ್ನು ಮುಂದೂಡಬಹುದು ಅನ್ನೋದನ್ನು ನಿರ್ಧರಿಸಲೂ ಇದನ್ನು ಬಳಸಬಹುದು. ಒಂದು ಬಜೆಟ್‌ ಹೆಚ್ಚಿನ ಉಳಿತಾಯ ಮಾಡಲು ನಿಮಗೆ ಅವಕಾಶವನ್ನು ಕೊಡುತ್ತದೆ. ಇದರತ್ತ ಗಮನಹರಿಸಿ.

ಹೆಚ್ಚಿನ ಉಳಿತಾಯ ಮಾಡಿ: ಪ್ರತೀ ವರ್ಷ ಒಂದು ಸ್ವಲ್ಪ ಹೆಚ್ಚು ದುಡ್ಡನ್ನು ಉಳಿಸುವ ಕಡೆಗೆ ನಾವು ಗಮನಹರಿಸಬೇಕು. ಹೆಚ್ಚಾದ ಸಂಬಳ, ಅಥವಾ ಇತರ ಆದಾಯ, ಬಂದ “ಬೋನಸ್‌’ ನ ಒಂದು ಭಾಗವನ್ನು ಉಳಿಸುವ, ಹೂಡಿಕೆ ಮಾಡುವತ್ತ ಗಮನ ಹರಿಸಿ.

ಸಾಲ ತೀರಿಸುವತ್ತ ಗಮನ ಹರಿಸಿ: ಹೆಚ್ಚಿನ ಬಡ್ಡಿ ಕಟ್ಟುವ ಸಾಲವನ್ನು ಆದಷ್ಟು ಬೇಗ ತೀರಿಸುವ ಕಡೆಗೆ ಗಮನ ಹರಿಸಿ. ಹೆಚ್ಚಿನ ಬಡ್ಡಿಯ ಸಾಲವನ್ನು ಬೇಗ ತೀರಿಸಿದರೆ ಕಟ್ಟುವ ಬಡ್ಡಿ ಕಮ್ಮಿಯಾಗುತ್ತದೆ. ಅದನ್ನು ಉಳಿಸಲು, ಅಥವಾ ಬೇರೆ ಸಾಲ ಮುಗಿಸಲು ಬಳಸಿ.

ಹಣಕಾಸಿನ ಸಾಕ್ಷರತೆ ಬೆಳೆಸಿಕೊಳ್ಳಿ : ದುಡ್ಡು ಉಳಿಸುವುದಕ್ಕೆ, ಹೂಡಿಕೆ ಮಾಡೋದಕ್ಕೆ ಉಳಿಸಿದ ದುಡ್ಡನ್ನು ಬೆಳೆಸೋದಕ್ಕೆ ಹಲವಾರು ವಿಧಾನಗಳು ಇವೆ. ಅವುಗಳ ಬಗ್ಗೆ ಅರಿತುಕೊಳ್ಳಿ. ಪರ್ಸನಲ್‌ ಫೈನಾನ್ಸ್ ಪುಸ್ತಕಗಳು, ಆನ್ಲçನ್‌ ವೀಡಿಯೋಗಳು ಈ ವಿಚಾರದಲ್ಲಿ ಸಹಕಾರಿ. ಇದನ್ನು ಬಳಸಿಕೊಂಡು ನಿಮ್ಮ  ಜ್ಞಾನವನ್ನು ಹೆಚ್ಚಿಸಿಕೊಳ್ಳಿ.

ದೀರ್ಘಾವಧಿಯ ನಿಮ್ಮ ಗುರಿಗಳ ಬಗ್ಗೆ ಗಮನ ಇರಲಿ: ಮಕ್ಕಳ ಶಿಕ್ಷಣ, ಮದುವೆ, ನಿಮ್ಮ ವಿಶ್ರಾಂತ ಜೀವನದ ಅಗತ್ಯಗಳು, ಆಸ್ಪತ್ರೆ ಖರ್ಚು, ಹೀಗೆ ದುಡ್ಡಿನ ಆವಶ್ಯಕತೆ ಭವಿಷ್ಯದಲ್ಲೂ ಇರುತ್ತದೆ. ಇದಕ್ಕೆ ಈಗಿಂದಲೇ ತಯಾರಿ ಮಾಡಿ. ಆದಷ್ಟು ಅನಿರೀಕ್ಷಿತ ಖರ್ಚುಗಳನ್ನು ಕಮ್ಮಿ ಮಾಡುವತ್ತ ಗಮನ ಹರಿಸಿ.

ಆರೋಗ್ಯಕ್ಕೊಂದು ವಿಮೆ ಇರಲಿ: ನಿಮ್ಮ ಆರೋಗ್ಯದ ಬಗ್ಗೆ ನಂಬಿಕೆ ಆತ್ಮವಿಶ್ವಾಸ  ಇರಲಿ, ಆದರೆ ಆರೋಗ್ಯ ಸಮಸ್ಯೆಗಳನ್ನು ಎದುರಿಸೋಕೆ ಅರೋಗ್ಯ ವಿಮೆ ಇರಲಿ. ಅನೀರಿಕ್ಷಿತವಾಗಿ ಪ್ರಾಣಾಪಾಯ ಉಂಟಾಗುವ ಸಂದರ್ಭ ಬಂದರೆ ನಿಮ್ಮ ಕುಟುಂಬದ ಭವಿಷ್ಯದ ಬಗ್ಗೆಯೂ ಯೋಚನೆ ಅಗತ್ಯ. ಇದನ್ನು ಗಟ್ಟಿಗೊಳಿಸಲು ಟರ್ಮ್ ಇನ್ಶೂರೆ®Õ… ಮಾಡಿಸುವ ಆಲೋಚನೆ ಮಾಡಿ. ಅಗತ್ಯ ಖರ್ಚುಗಳಿಗೆ ಒಂದಿಷ್ಟು ದುಡ್ಡು ಕೈಯಲ್ಲಿರಲಿ. ಇದಿಷ್ಟೂ ನೀವು ಮಾಡಿದರೆ ನಿಮ್ಮ 2023 ಸೂಪರ್‌ ಆಗಿರುತ್ತದೆ. ಇವಿಷ್ಟನ್ನೂ ಸಾಧಿಸುವ ಪ್ರಯತ್ನವನ್ನು ನೀವು ಮಾಡಿ. ಒಳ್ಳೆಯದಾಗಲಿ. ಹೊಸ ವರ್ಷ ನಿಮಗೆ ಒಳ್ಳೆಯದನ್ನು ಮಾಡಲಿ.

– ಅಶೀಶ್‌ ಸಾರಡ್ಯ, ಹಣಕಾಸು ಸಲಹೆಗಾರರು

 

ಟಾಪ್ ನ್ಯೂಸ್

ಭದ್ರಾವತಿಯ ರೈಸ್​ಮಿಲ್​ನಲ್ಲಿ ಬಾಯ್ಲರ್ ಸ್ಫೋಟ: ನಾಪತ್ತೆಯಾಗಿದ್ದ ವ್ಯಕ್ತಿಯ ಶವ ಪತ್ತೆ

ಭದ್ರಾವತಿಯ ರೈಸ್​ಮಿಲ್​ನಲ್ಲಿ ಬಾಯ್ಲರ್ ಸ್ಫೋಟ: ಕಣ್ಮರೆಯಾಗಿದ್ದ ವ್ಯಕ್ತಿಯ ಶವ ಪತ್ತೆ

Women’s T20: ದಾಖಲೆ ಮೊತ್ತ… ಭಾರತಕ್ಕೆ ಟಿ20 ಸರಣಿ

Women’s T20: ದಾಖಲೆ ಮೊತ್ತ… ಭಾರತಕ್ಕೆ ಟಿ20 ಸರಣಿ

8-belthangady

Belthangady: ಬೈಕಿಗೆ ಕಾರು ಢಿಕ್ಕಿ, ಓಡಿಲ್ನಾಳದ ಯುವಕ ಸಾವು

ಟ್ರಕ್ ಡಿಕ್ಕಿ ಹೊಡೆದು ಗ್ಯಾಸ್ ಟ್ಯಾಂಕರ್ ಸೇರಿ ಹಲವು ವಾಹನ ಬೆಂಕಿಗಾಹುತಿ… ಓರ್ವ ಸಾ*ವು

Tragedy: ಬೆಳ್ಳಂಬೆಳಗ್ಗೆ ಭೀಕರ ಅಪಘಾತ… ಗ್ಯಾಸ್ ಟ್ಯಾಂಕರ್ ಸೇರಿ ಹಲವು ವಾಹನ ಬೆಂಕಿಗಾಹುತಿ

7-icc

ICC Champions Trophy: ಹೈಬ್ರಿಡ್‌ ಮಾದರಿಯೇ ಅಂತಿಮ

6-mandya

Mandya; ಸಕ್ಕರೆ ನಾಡಿನಲ್ಲಿ ಇಂದಿನಿಂದ  87ನೇ ಅಖಿಲ ಭಾರತ ಸಾಹಿತ್ಯ ಸಮ್ಮೇಳನ

5-dinesh

Dinesh Gundu Rao; ಬಾಣಂತಿಯರ ಸಾ*ವು ಪ್ರಕರಣ ನ್ಯಾಯಾಂಗ ತನಿಖೆಗೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Kannada Sahitya Sammelana: ಕಾವೇರಿ ಹೊನಲಲ್ಲಿ ಕನ್ನಡ ಉಕ್ಕಲಿ…

Kannada Sahitya Sammelana: ಕಾವೇರಿ ಹೊನಲಲ್ಲಿ ಕನ್ನಡ ಉಕ್ಕಲಿ…

One Nation, One Election;ಹಣ, ಸಮಯ ಉಳಿಯಬಹುದು…ಮುಂದಾಗುವ ಸಮಸ್ಯೆಗಳಿಗೆ ಪರಿಹಾರ ಇದೆಯಾ?

One Nation, One Election;ಹಣ, ಸಮಯ ಉಳಿಯಬಹುದು…ಮುಂದಾಗುವ ಸಮಸ್ಯೆಗಳಿಗೆ ಪರಿಹಾರ ಇದೆಯಾ?

8

Year ender: ಈ ವರ್ಷ ನಕ್ಕು ನಗಿಸಿ ಸೋಶಿಯಲ್‌ ಮೀಡಿಯಾದಲ್ಲಿ ವೈರಲ್‌ ಆದ ವಿಡಿಯೋಗಳಿವು..

ಅಪಾಯಕ್ಕೆ ಎದೆಯೊಡ್ಡಿ ವಕ್ಫ್ ವರದಿ ಮಾಡಿದ್ದು ನಾನು, ಅದರಿಂದ ಹಣ ಮಾಡಿದ್ದು ಅನೇಕರು!

ಅಪಾಯಕ್ಕೆ ಎದೆಯೊಡ್ಡಿ ವಕ್ಫ್ ವರದಿ ಮಾಡಿದ್ದು ನಾನು, ಅದರಿಂದ ಹಣ ಮಾಡಿದ್ದು ಅನೇಕರು!

ಕರಾವಳಿಯಲ್ಲಿ ಹೈಕೋರ್ಟ್‌ ಪೀಠ ಸ್ಥಾಪನೆ ­ಅತ್ಯಗತ್ಯ

ಕರಾವಳಿಯಲ್ಲಿ ಹೈಕೋರ್ಟ್‌ ಪೀಠ ಸ್ಥಾಪನೆ ­ಅತ್ಯಗತ್ಯ

MUST WATCH

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

ಹೊಸ ಸೇರ್ಪಡೆ

ಭದ್ರಾವತಿಯ ರೈಸ್​ಮಿಲ್​ನಲ್ಲಿ ಬಾಯ್ಲರ್ ಸ್ಫೋಟ: ನಾಪತ್ತೆಯಾಗಿದ್ದ ವ್ಯಕ್ತಿಯ ಶವ ಪತ್ತೆ

ಭದ್ರಾವತಿಯ ರೈಸ್​ಮಿಲ್​ನಲ್ಲಿ ಬಾಯ್ಲರ್ ಸ್ಫೋಟ: ಕಣ್ಮರೆಯಾಗಿದ್ದ ವ್ಯಕ್ತಿಯ ಶವ ಪತ್ತೆ

10-up-yodhas

Pro Kabaddi: ದ್ವಿತೀಯ ಸ್ಥಾನಕ್ಕೆ ಯೋಧಾಸ್‌

Women’s T20: ದಾಖಲೆ ಮೊತ್ತ… ಭಾರತಕ್ಕೆ ಟಿ20 ಸರಣಿ

Women’s T20: ದಾಖಲೆ ಮೊತ್ತ… ಭಾರತಕ್ಕೆ ಟಿ20 ಸರಣಿ

9-ind-pak

Kho Kho ವಿಶ್ವಕಪ್‌: ಭಾರತ- ಪಾಕಿಸ್ಥಾನ ಉದ್ಘಾಟನ ಪಂದ್ಯ

8-belthangady

Belthangady: ಬೈಕಿಗೆ ಕಾರು ಢಿಕ್ಕಿ, ಓಡಿಲ್ನಾಳದ ಯುವಕ ಸಾವು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.