ಅಂತರಂಗದ ಯುದ್ಧ ಗೆಲ್ಲುವುದೆಂತು?
Team Udayavani, May 6, 2018, 12:30 AM IST
“ಯುದ್ಧ’, ಯುದ್ಧರಂಗದಲ್ಲೇ ನಡೆಯಬೇಕಾಗಿಲ್ಲ. ಹೆಚ್ಚಿನ ಸಂದರ್ಭದಲ್ಲಿ ಯುದ್ಧ ಬಹಿರಂಗವಾಗಿಯೂ ನಡೆಯುವುದಿಲ್ಲ. ವ್ಯಕ್ತಿ ವ್ಯಕ್ತಿಗಳ ಸಂಬಂಧಗಳಲ್ಲಿ, ಸಂಸ್ಥೆಗಳಲ್ಲಿ, ಸಮಾಜದಲ್ಲಿ, ಸಂಸಾರದಲ್ಲಿ, ಸರಿ-ತಪ್ಪುಗಳ ನಡುವೆ, ಧರ್ಮ- ಅಧರ್ಮಗಳ ನಡುವೆ, ನ್ಯಾಯ-ಅನ್ಯಾಯಗಳ ನಡುವೆ, ನಿತ್ಯ ಯುದ್ಧ ನಡೆಯುವುದು ಉಂಟು. ಇನ್ನು ಆಂತರ್ಯದಲ್ಲಿ ಅರಿಷಡ್ವರ್ಗಗಳ ಕೋಟೆಯಲ್ಲಿ, ಮೋಹ ಮಮಕಾರಗಳು ರಚಿಸಿರುವ ಚಕ್ರವ್ಯೂಹದಲ್ಲಿ, ನಿತ್ಯ ಅನಿತ್ಯಗಳ ನಡುವೆ ನಡೆಯುವ ಯುದ್ಧ ಅಂತೂ ಇನ್ನೂ ತೀಕ್ಷತಮ. ಇಂತಹ ವಿಭಿನ್ನ ರೀತಿಯ, ವಿಭಿನ್ನ ಸ್ತರಗಳಲ್ಲಿ ನಡೆವ ನಿತ್ಯ ಯುದ್ಧವನ್ನು ಸಹಿಸಲಾಗದೆ ನಾವು ಕುಗ್ಗುವುದುಂಟು, ಒಮ್ಮೊಮ್ಮೆ ಯುದ್ಧಕ್ಕೆ ಅಂಜಿ ಹಿಂಜರಿಯುವುದುಂಟು.
ಅರ್ಜುನನಂತಹ ಮಹಾಪರಾಕ್ರಮಿಯೇ ಯುದ್ಧ ಬೇಡವೆಂದು ಹಿಮ್ಮೆಟ್ಟುವಾಗ ಸಾಮಾನ್ಯರಾದ ನಾವು ನಿತ್ಯ ಸಂಸಾರದ ಸೆಣೆಸಾಟಕೆ ಅಂಜುವುದರಲ್ಲಿ ಆಶ್ಚರ್ಯ ಏನಿಲ್ಲ. ಆದರೆ ಸಂಸಾರದಲ್ಲಿ ಹೆಜ್ಜೆ ಇಟ್ಟಾದ ಮೇಲೆ ಹೆಜ್ಜೆ ಹೆಜ್ಜೆಯಲ್ಲೂ ನಾವು ಕಾದಾಡಲೇಬೇಕಿದೆ. ಒಮ್ಮೆ ಹೊರಗಿನ ಶತ್ರುಗಳ ಜೊತೆಗೆ, ಒಮ್ಮೆ ಒಳಗಿನ ಶತ್ರುಗಳ ಜೊತೆಗೆ. ಅಂತರಂಗದ ಯುದ್ಧ ಬಹಳ ದೀರ್ಘಕಾಲ¨ªಾಗಿದ್ದು, ಅಂತ್ಯವೇ ಇಲ್ಲದಂತೆ ಗೋಚರಿಸುತ್ತದೆ ಮತ್ತು ಅದು ನಮ್ಮನ್ನು ಒಳಗಿನಿಂದ ಛಿದ್ರಛಿದ್ರವಾಗಿಸುತ್ತದೆ. ನಿನ್ನೆಯ ದಿನ ನಾ ಏನು ಮಾಡಿದೆ? ನಾನೇಕೆ ತಪ್ಪಾದ ಆಯ್ಕೆಯನ್ನು ಮಾಡಿದೆ? ನಾನು ಇದರ ಬದಲು ಅದನ್ನು ಮಾಡಿದ್ದರೆ ಚೆನ್ನಾಗಿತ್ತೋ ಏನೋ? ನಾನು ಚಿಕ್ಕಂದಿನಲ್ಲಿ ವಿದ್ಯಾಭ್ಯಾಸಕ್ಕೆ ಚೆನ್ನಾಗಿ ಗಮನ ಕೊಟ್ಟಿದ್ದಿದ್ದರೆ, ಇಂದು ಬದುಕಿನಲ್ಲಿ ಹೋರಾಟ ಕಡಿಮೆಯಾಗುತ್ತಿತ್ತೋ ಏನೋ? ನಾನು ಇವಳ(ನ)ನಲ್ಲದೆ ಮತ್ಯಾರನ್ನಾದರೂ ವಿವಾಹವಾಗಿದ್ದಿದ್ದರೆ ಚೆನ್ನಾಗಿತ್ತೋ ಏನೋ? ನನಗೆ ಇನ್ನೂ ಒಂದೆರಡು ಮಕ್ಕಳಾಗಿದ್ದಿದ್ದರೆ ಚೆನ್ನಾಗಿತ್ತೋ ಏನೋ? ನಾನು ಅಂದು ಧೈರ್ಯವಾಗಿ ಎದ್ದು ನಿಂತು ಮಾತನಾಡಿದ್ದರೆ ಒಳಿತಾಗುತ್ತಿತ್ತೋ ಏನೋ? ನಾನಂದು ಅಲ್ಲಿಗೆ ಹೋಗಿರದಿದ್ದರೆ ಚೆನ್ನಾಗಿರುತ್ತಿತ್ತೋ ಏನೋ? ಅಯ್ಯೋ, ಕೆಲಸ ಕೆಟ್ಟರೆ ಏನು ಮಾಡುವುದು? ಖಾಯಿಲೆ ಬಂದು ನರಳುವಂತಾದರೆ? ಕೆಲಸ ಕಳೆದುಕೊಂಡರೆ? ಬದುಕಿನುದ್ದಕ್ಕೂ ಬೇಕಾಗುವಷ್ಟು ಹಣ ನನ್ನ ಬಳಿ ಇದೆಯೇ? ಅನ್ಯರು ನನ್ನನ್ನು ಏಕೆ ಸರಿಯಾಗಿ ಅರ್ಥಮಾಡಿಕೊಳ್ಳುವುದಿಲ್ಲ? ಹೀಗೆ ಇನ್ನೂ ನೂರಾರು ಅಥವಾ ಸಾವಿರಾರು ಪ್ರಶ್ನೆಗಳು ನಮ್ಮ ಮನಸ್ಸಿನಲ್ಲಿ ಸದಾಕಾಲ ಮೇಲೇಳುತ್ತಲೇ ಇರುತ್ತವೆ.
ಇದು ಒಬ್ಬಿಬ್ಬರ ಕಥೆಯಲ್ಲ. ಇಡೀ ಮನುಕುಲದ ಕಥೆ. ಸದಾಕಾಲ ತನ್ನ ಅಂತರಂಗದಲ್ಲಿ ತುಮುಲಗಳಲ್ಲಿ ಮತ್ತು ದ್ವಂದ್ವಗಳಲ್ಲಿ ಹೋರಾಡದೆ ಇರುವ ಒಬ್ಬನೇ ಒಬ್ಬ ವ್ಯಕ್ತಿಯೂ ನಮಗೆ ಸಿಗಲಾರ. ಈ ರೀತಿಯ ಅಂತರಂಗದ ಯುದ್ಧವನ್ನು ತಡೆಯುವುದು ಹೇಗೆ? ಮಾನಸಿಕ ಸಮನ್ವಯ ಮತ್ತು ಶಾಂತಿಯನ್ನು ಸಾಧಿಸುವುದು ಹೇಗೆ? ಈ ಎಲ್ಲಾ ದ್ವಂದ್ವ ಮತ್ತು ಅಂತರಂಗದ ಹೋರಾಟದಿಂದ ಮುಕ್ತರಾಗಿ ಮಾನಸಿಕ ಶಾಂತಿಯನ್ನು ಪಡೆಯುವ ಮಾರ್ಗವಾವುದಾರೂ ಉಂಟೆ? ಮಾರ್ಗವಿದೆ, ಆದರೆ ಅದು ಸುಲಭವಲ್ಲ. ಬದುಕಿನಲ್ಲಿ ಒಳ್ಳೆಯದಾವುದೂ ಸುಲಭವಾಗಿ ದಕ್ಕುವುದಿಲ್ಲ. ಲಾಭ ಬರಲು ಬಹಳ ವಿಳಂಬವಾಗುತ್ತದೆ, ಆದರೆ ನಷ್ಟ ಒಂದೇ ಗಳಿಗೆಯಲ್ಲಾಗಿಬಿಡಬಹುದು. ಮನವನ್ನು ಶಾಂತಗೊಳಿಸಲು ಮತ್ತು ಅಂತರಂಗದ ಯುದ್ಧವನ್ನು ಕಡಿಮೆ ಮಾಡಲು ನಮಗೆ ಧೈರ್ಯ, ಭರವಸೆ ಮತ್ತು ಉತ್ತೇಜನವೀಯುವ ಒಂದು ದಾರಿ ದೀಪದ ಅವಶ್ಯಕತೆಯಿದೆ. ಒಬ್ಬೊಬ್ಬರಿಗೆ ಒಂದೊಂದು ರೀತಿಯ ಆಧಾರ ಸಿಗುತ್ತದೆ. ಕೆಲವರಿಗೆ ಕೆಲಸದಲ್ಲಿ, ಕೆಲವರಿಗೆ ಹವ್ಯಾಸದಲ್ಲಿ, ಕೆಲವರಿಗೆ ವ್ಯಸನದಲ್ಲಿ ಮತ್ತೆ ಕೆಲವರಿಗೆ ಧ್ಯಾನ, ಪ್ರಾರ್ಥನೆ, ಪೂಜೆ ಮತ್ತು ಆಧ್ಯಾತ್ಮದಲ್ಲಿ. ಒಂದು ಶಾಂತ ಸ್ಥಿತಿಯನ್ನು ಕಾಣಲು ನಂಬಿಕೆ ಮತ್ತು ಒಪ್ಪಿಕೊಳ್ಳುವಿಕೆ ಬೇಕು. ನಮ್ಮೆಲ್ಲಾ ಅಂತರಂಗದ ಯುದ್ಧಗಳು ಕೇವಲ ನಮ್ಮ ನಂಬಿಕೆಯ ಮತ್ತು ವಿಶ್ವಾಸದ ಕೊರತೆಯಿಂದ ಉಂಟಾಗುತ್ತವೆ.
ದೇವರು, ಸೃಷ್ಟಿ, ಪರಮಾತ್ಮ, ಪ್ರಕೃತಿ, ಅಗೋಚರ ಶಕ್ತಿ ಹೀಗೆ ನೀವು ಅದನ್ನು ಯಾವ ಹೆಸರಿನಿಂದಾಗಲೀ ಕರೆಯಿರಿ, ಅದರಲ್ಲಿ ಸಂಪೂರ್ಣ ನಂಬಿಕೆ ಮತ್ತು ನಮ್ಮ ಜೀವನದಲ್ಲಿ ಅದರ ಪ್ರಭಾವವನ್ನು ಒಪ್ಪಿಕೊಳ್ಳುವಿಕೆಯೊಂದೇ ನಮ್ಮೆಲ್ಲಾ ಗೊಂದಲ ಗಳಿಂದ ಹೊರಬರಲು ನಮಗಿರುವ ಏಕೈಕ ಮಾರ್ಗ. ಹಿಂದೆ ನಡೆದ, ಇಂದು ನಡೆಯುತ್ತಿರುವ, ಮುಂದೆ ನಡೆಯುವುದೆಲ್ಲವೂ ಕೋಟ್ಯಂತರ ವರ್ಷಗಳಿಂದ ಇರುವ ಆ ದೈವಿ ವಿನ್ಯಾಸದ ಪ್ರಕಾರ ನಡೆಯುತ್ತಿದೆ ಮತ್ತು ಅದನ್ನು ನಾವು ಬದಲಾಯಿಸಲು ಸಾಧ್ಯವಿಲ್ಲ ಎಂದು ಒಪ್ಪಿಕೊಳ್ಳಬೇಕು. ಇಲ್ಲಿರುವುದೆಲ್ಲವೂ ಆ ದೈವಿ ಶಕ್ತಿಯ ಪ್ರಕಟರೂಪವಷ್ಟೇ. ನಾವು, ಅದು ಬೇರೆಯ ರೀತಿಯಲ್ಲಿರಬೇಕೆಂದು ಬಯಸುವುದು, ಆ ದೈವಕ್ಕೇ ಸವಾಲೆಸೆದಂತೆ ಆಗುತ್ತದೆ. ಇರುವುದಕ್ಕಿಂತ ಬೇರೆಯ ದನ್ನೇ ಬಯಸಿದರೆ ನಾವು ಸಕಲವನ್ನೂ ಸೃಷ್ಟಿಸಿರುವ ಆ ಪರಮಾತ್ಮನೊಡನೆ ಯುದ್ಧಕ್ಕೆ ನಿಂತ ಹಾಗಾಗುತ್ತದೆ. ಖಂಡಿತವಾಗಿಯೂ ನಾವು ಆ ಯುದ್ಧದಲ್ಲಿ ಜಯಿಸಲು ಆಗುವುದೇ ಇಲ್ಲ. ಪರತತ್ವದಲ್ಲಿ ದೃಢ ಮತ್ತು ಶುದ್ಧ ನಂಬಿಕೆಯಿದ್ದರೆ ಆಗ ಸಮಸ್ಯೆಗಳನ್ನು ಸಮಸ್ಯೆಗಳಂತೆ ಅಲ್ಲದೆ ದೈವ ನಿಯಮಿತಗಳೆಂದು ಪರಿಗಣಿಸಲು ಸಾಧ್ಯ. ಬೇರೆಬೇರೆಯವರ ಅದೃಷ್ಟ ಭಿನ್ನಭಿನ್ನವಾಗಿ ಇರುತ್ತದೆ ಏಕೆ ಎಂಬ ಪ್ರಶ್ನೆಗೆ ಉತ್ತರಿಸಲು ಸಾಧ್ಯವಿಲ್ಲ. ಆದರೆ ಒಂದು ಬಾರಿ, ನಮ್ಮ ಬದುಕು ನಮ್ಮಿಂದಲೇ ನಡೆಸಲ್ಪಡುವುದಿಲ್ಲ, ಅದನ್ನು ನಡೆಸುವುದು ಒಂದು ಅಗೋಚರ ದೈವೀ ಶಕ್ತಿ. ನಾವು ಕೇವಲ ಆ ದೈವ ತನ್ನ ಕಾರ್ಯಗಳನ್ನು ನಡೆಸಲು ಬಳಸುವ ಉಪಕರಣಗಳು ಮಾತ್ರ ಎಂಬ ವಾದವನ್ನು ಒಪ್ಪಿಕೊಂಡರೆ ಸೋಲು ಮತ್ತು ಗೆಲುವುಗಳಿಗೆ ನಾವು ಬಾಧ್ಯರಾಗದೆ, ನಮ್ಮ ಮನಸ್ಸು ನಿರಾಳವಾಗಿ ನಮಗೆ ಶಾಂತಿ ಮತ್ತು ಸಂತೋಷ ಸಿಗುತ್ತದೆ. ಆಗ ನಮ್ಮೊಳಗೆ “ಆಹಂ’ ಕರಗಿ, ನಾವು ಅನುಭವಿಸುತ್ತಿದ್ದ ಸೋಲು ಗೆಲುವಿನ ಬಾಧ್ಯತೆಯ ಹೊರೆ ಕಡಿಮೆಯಾಗುತ್ತ¨
ದ್ವಂದ್ವ ಮತ್ತು ವೈರುಧ್ಯದ ನಿವಾರಣೆ ಹೇಗೆ?
ಅವುಗಳನ್ನು ನಿವಾರಿಸಲು ಪ್ರಯತ್ನಿಸಬಾರದು; ಪ್ರೀತಿ, ದಯೆ ಮತ್ತು ನಮ್ರತೆಯಿಂದ ಅವುಗಳನ್ನು ತಿದ್ದಿ, ರೂಪಿಸಿ, ಸರಿಪಡಿಸಲು ಸಮಯ ನೀಡಬೇಕು. ಆ ಸಮಯದಲ್ಲಿ ನಮ್ಮ ಜೀವನದಲ್ಲಿ ಬೇರೆಯೇ ಒಂದು ಶಕ್ತಿಯು ಹರಿಯುತ್ತದೆ. ಅಂತಹ ಶಕ್ತಿಗಳಲ್ಲಿ ಎರಡು ವಿಧಗಳಿವೆ – ಒಂದು, ತನ್ನ ಅಸ್ತಿತ್ವಕ್ಕೆ ಕಾರಣಗಳನ್ನು ಮತ್ತು ಗುರಿಗಳನ್ನಿಟ್ಟುಕೊಂಡಂತಹ, ನಮ್ಮ ಅಹಂಕಾರವನ್ನು ಬೆಂಬಲಿಸುವ ಒಂದು ಸಾಮಾನ್ಯ ಶಕ್ತಿ ಹಾಗೂ ಮತ್ತೂಂದು ನಮ್ಮ ಅಹಂಕಾರವನ್ನು ಕರಗಿಸಿ ನಾಶಮಾಡುವ ದೈವೀ ಶಕ್ತಿ. ಈ ಶಕ್ತಿ ನಮ್ಮ ಬದುಕಿಗೆ ಒಂದು ಹೊಸ ಆಯಾಮ ನೀಡುತ್ತದೆ. ಅಂತಹ ಶಕ್ತಿಯ ಒಳಹರಿವಿಗೆ ನಮ್ಮನ್ನು ನಾವು ತೆರೆದುಕೊಳ್ಳಬೇಕು, ಸಕಾರಾತ್ಮಕವಾಗಿ ಮುನ್ನಡೆಯಬೇಕು ಮತ್ತು ಅದರ ಹಾದಿಯಲ್ಲಿ ನಿರಂತರವಾಗಿರಬೇಕು. ನಮ್ಮಲ್ಲಿ ಮೂರು ಕೇಂದ್ರಗಳುಂಟು. ಅವುಗಳೇ ದೇಹ, ಭಾವನೆ ಮತ್ತು ಬುದ್ಧಿಶಕ್ತಿ. ಈ ಮೂರೂ ಕೇಂದ್ರಗಳು ನಮ್ಮ ನಿತ್ಯದ ಜೀವನದಲ್ಲಿ ಸಮನ್ವಯಗೊಂಡಾಗ ನಮ್ಮೊಳಗೇ ಒಂದು ದೈವೀ ಶಕ್ತಿಯು ಪ್ರವಹಿಸಿ ಅದ್ಭುತ ರೀತಿಯ ಬದಲಾವಣೆಗಳು ಕಂಡುಬರುತ್ತವೆ. ಆಗ ಜಗತ್ತೆಲ್ಲಾ ನಮಗೆ ಸುಂದರವಾಗಿ ಕಾಣಲಾರಂಭವಾಗುತ್ತದೆ.
ಮನಸ್ಸನ್ನು ನಿರಾಳವಾಗಿಸಿದರೆ ದೇಹ ಶಾಂತವಾಗುತ್ತದೆ. ದೇಹ ಶಾಂತವಾದರೆ ದೇಹಕ್ಕನುಕೂಲವಾದ ರಸಗಳ ಉತ್ಪತ್ತಿಯಾಗಿ ಆರೋಗ್ಯ ಉಂಟಾಗುತ್ತದೆ. ಹಾಗಲ್ಲದೆ, ಸದಾ ಚಿಂತೆಯಲ್ಲಿ ಮುಳುಗಿರುವ ಮನಸ್ಸು ದೇಹವನ್ನು ದಣಿಸುತ್ತಾ ಅನಾರೋಗ್ಯದ ಆಗರವಾಗುತ್ತದೆ. ಹಾಗಾಗಿ ಮನಸ್ಸನ್ನು ನಿರಾತಂಕಗೊಳಿಸುವುದು ಮಾನಸಿಕ ಮತ್ತು ದೈಹಿಕ ಆರೋಗ್ಯದ ದೃಷ್ಟಿಯಿಂದ ಅತೀ ಅವಶ್ಯಕ.
ಆತಂಕದಿಂದ ಕೂಡಿದ ಮನಸ್ಸು ಕ್ರಿಯಾಶೀಲತೆಯನ್ನು ಕಳೆದುಕೊಳ್ಳುತ್ತದೆ. ಯಾವುದೇ ಕೆಲಸವನ್ನು ಮಾಡುವಾಗಲೂ ನಿರಾತಂಕವಾಗಿರುವುದು ಬಹಳ ಅವಶ್ಯಕ. ಸಂತೋಷವಾಗಿರಬೇಕಾದರೆ, ಸಂತೋಷವಾಗಿರಬೇಕು ಅಷ್ಟೇ. ವಸ್ತು ವಿಷಯ ಅಥವಾ ವ್ಯಕ್ತಿಗಳಿಂದ ಸಂತೋಷ ಸಿಗುತ್ತದೆ, ಆಗ ನಾನು ಸಂತೋಷವಾಗಿರುತ್ತೇನೆ ಎಂದೋ ಅಥವಾ ಇಂತಿಂತಹದ್ದು ಸಿಕ್ಕರೆ ನನಗೆ ಸಂತೋಷ ಸಿಗುತ್ತದೆ ಎಂದೋ ಭಾವಿಸಿದರೆ, ಅದು ಕೇವಲ ಭ್ರಮೆ ಅಷ್ಟೇ! ಹಾಗೆ ಅವುಗಳು ಸಿಗದಿದ್ದರೆ ನಮಗೆ ಕೋಪಬರುತ್ತದೆ. ಆ ಕೋಪ, ಅವುಗಳನ್ನು ಪಡೆಯಲಾಗದ ನಮ್ಮ ಮೇಲೆಯೇ ಆಗಿರಬಹುದು/ ನಾವು ದೂಷಿಸುವ ಅನ್ಯರ ಮೇಲಾ ಗಿರಬಹುದು. ಆದರೆ ಕೋಪ ಯಾವ ಕಾರಣಕ್ಕೆ ಬಂದರೂ, ಯಾರ ಮೇಲೆ ಬಂದರೂ, ಅದು ಮೊದಲು ಭಾದಿಸುವುದು ಕೇವಲ ನಮ್ಮ ಮನಸ್ಸನ್ನು ಮತ್ತು ತತ್ಕಾರಣವಾಗಿ ನಮ್ಮ ದೇಹದ ಆರೋಗ್ಯವನ್ನು. ಹಾಗಾಗಿ ಸಂತೋಷವಾಗಿರಬೇಕು. ನಗುನಗುತ್ತಾ ಸಂತೋಷವಾಗಿರಬೇಕು. ಅದೇ ಆನಂದಕ್ಕೆ ಸಿದ್ಧ ಔಷಧಿ.
ನಾವು ಸದಾಕಾಲ ನಮ್ಮ ಧನಾತ್ಮಕ ಮತ್ತು ಋಣಾತ್ಮಕ ಚಿಂತನೆಗಳ ಬಗ್ಗೆ ಜಾಗ ರೂಕರಾಗಿರಬೇಕು. ಪ್ರಯತ್ನಪೂರ್ವಕವಾಗಿ ನಮ್ಮೊಳಗೇ ಉಂಟಾಗುವ ಋಣಾತ್ಮಕ ಆಲೋಚನೆಗಳನ್ನು ಹತ್ತಿಕ್ಕಿ ಧನಾತ್ಮಕತೆಯನ್ನು ಹೆಚ್ಚಿಸಿಕೊಳ್ಳಬೇಕು. ಎಲ್ಲರಲ್ಲೂ ಪ್ರೀತಿಯಿಂದ ಇಡೀ ಜಗತ್ತನ್ನೇ ಅಪ್ಪಿಕೊಳ್ಳುವಂತಹ ಮನೋಭಾವ ನಮ್ಮದಾಗಬೇಕು. ಈ ಧನಾತ್ಮಕ ಆಲೋಚನೆಗಳನ್ನು ಹೆಚ್ಚಿಸಿಕೊಳ್ಳುವುದು ಹೇಗೆ ಎನ್ನುವುದೇ ಸಮಸ್ಯೆ. ಇದಕ್ಕೆ ನಮ್ಮ ಪೂರ್ವಜರು ನಮಗೆ ಮಾರ್ಗಗಳನ್ನು ತೋರಿ¨ªಾರೆ. ಭಕ್ತಿ, ಧ್ಯಾನ, ಸೇವೆ, ಅಧ್ಯಯನ, ಶ್ರದ್ಧೆ, ತ್ಯಾಗ ಮುಂತಾದ ಗುಣಗಳನ್ನು ನಮ್ಮಲ್ಲಿ ಬೆಳೆಸಿಕೊಂಡರೆ ಆಗ ಋಣಾತ್ಮಕ ಗುಣಗಳಾದ ದ್ವೇಷ, ಅಸೂಯೆ, ಕೋಪ ಮುಂತಾದವುಗಳು ನಮ್ಮನ್ನು ತೊರೆದು ಹೋಗುತ್ತವೆ. ನಮ್ಮ ಬದುಕಿನಲ್ಲಿ ನಡೆಯುವ ವಿದ್ಯಮಾನಗಳೇ ನಮಗೆ ಪಾಠ ಕಲಿಸುತ್ತವೆ.
ರವಿ ತಿರುಮಲೈ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Constitution Day: ಅಮೃತ ಸಂಭ್ರಮದಲ್ಲಿ ಭಾರತ ಸಂವಿಧಾನ
ಜಾನಪದದಲ್ಲಿ ಕನ್ನಡ ಕಟ್ಟುವ ಕೆಲಸ ಹೆಚ್ಚಾಗಲಿ…
Smart meters: ನೀರು ಸಂರಕ್ಷಿಸುವ ವಿಚಾರದಲ್ಲಿ ಕ್ರಾಂತಿ ಮಾಡಿದ ಸ್ಮಾರ್ಟ್ ವಾಟರ್ ಮೀಟರ್
Karnataka; ಕೇಂದ್ರ ಸ್ವಾಮ್ಯದ ಸಂಸ್ಥೆಗಳಲ್ಲಿ ಕನ್ನಡಿಗರೇಕೆ ವಿರಳ? ಆಗಬೇಕಿರುವುದೇನು?
ಬೆಳಗಾವಿ:ಬಟ್ಟೆ ಅಂಗಡಿಯಲ್ಲಿ ಕೆಲಸ ಮಾಡಿದ ಹುಡುಗ..ಜಿಲ್ಲಾ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷ
MUST WATCH
ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಹೊಸ ಸೇರ್ಪಡೆ
Gundlupete: ವಿದ್ಯುತ್ ತಂತಿಗೆ ಸಿಲುಕಿ ಮರಿಯಾನೆ ಸಾವು
Constitution: ಕಾಂಗ್ರೆಸ್ಸಿಗರಿಂದ ಸಂವಿಧಾನದ ರಕ್ಷಕರಂತೆ ಕಪಟ ನಾಟಕ: ಬಿ.ವೈ.ವಿಜಯೇಂದ್ರ
Sirsi: ಅಪ್ರಾಪ್ತೆ ಮೇಲೆ ಲೈಂಗಿಕ ದೌರ್ಜನ್ಯಕ್ಕೆ ಯತ್ನಿಸಿ ಪರಾರಿ; ಆರೋಪಿ ಬಂಧನ
EVM: ಸೋತಾಗ ಮಾತ್ರ ಯಾಕೆ ಇವಿಎಂ ಮೇಲೆ ಆರೋಪ ಮಾಡುತ್ತೀರಿ: ಸುಪ್ರೀಂ ಕೋರ್ಟ್ ಟೀಕೆ
Sirsi: ರಕ್ಷಣಾ ಸಚಿವ ರಾಜನಾಥ ಸಿಂಗ್ ಅವರನ್ನು ಭೇಟಿಯಾದ ಸಂಸದ ಕಾಗೇರಿ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.