ಭಾರತ ಕಂಡ ಮಹಾ ಭಕ್ತಿ ವೇದಾಂತಿ


Team Udayavani, Mar 2, 2018, 8:56 AM IST

Chaitanya-Maha-Prabhu.jpg

ಭಾರತದಲ್ಲಿ ಆಗಿಹೋದ ನೂರಾರು ಮಂದಿ ದಾರ್ಶನಿಕರಲ್ಲಿ ಚೈತನ್ಯ ಮಹಾಪ್ರಭುಗಳು ಒಬ್ಬರು. ಮಧ್ಯಕಾಲೀನ ಭಾರತದ ಸಂದರ್ಭದಲ್ಲಿ ಭಕ್ತಿಯುಗವನ್ನು ಸಮರ್ಥವಾಗಿ ಮುನ್ನಡೆಸಿದ ಹಿರಿಮೆ ಚೈತನ್ಯ ಮಹಾಪ್ರಭುಗಳದು. ಕರ್ನಾಟಕದಲ್ಲಿ ದಾಸ  ಪರಂಪರೆಯ ಮೂಲಕ ಕೃಷ್ಣಭಕ್ತಿಯನ್ನು ಪಸರಿಸಿದಂತೆ, ಸರಿ ಸುಮಾರು ಅದೇ ಕಾಲದಲ್ಲಿ ಬಂಗಾಳದಲ್ಲಿ ಚೈತನ್ಯಪ್ರಭುಗಳು ಜನಮಾನಸದಲ್ಲಿ ಭಕ್ತಿಯ ಬೀಜವನ್ನು ಬಿತ್ತುವುದರ ಮೂಲಕ ಸಾಮಾಜಿಕ ಪರಿವರ್ತನೆಯ ಹರಿಕಾರರಾದರು. ಜನಸಾಮಾನ್ಯರ ಬದುಕಿನಲ್ಲಿ ಆಧ್ಯಾತ್ಮಿಕ ಒರತೆಯನ್ನು ಚಿಮ್ಮಿಸಿದರು. ರಾಜಕೀಯ ವಾಗಿ ಮತ್ತು ಸಾಮಾಜಿಕವಾಗಿ ಹಿಂದೂ ಸಮಾಜ ಅತ್ಯಂತ ಸಂಕೀರ್ಣ ಪರಿಸ್ಥಿತಿಯನ್ನು ಎದುರಿಸುತ್ತಿದ್ದ ಸಂದರ್ಭದಲ್ಲಿ ಬರುವ ಚೈತನ್ಯ ಪ್ರಭುಗಳು ಬೆಳಕಿನ ಕಿರಣವಾಗಿ ಕಾಣಿಸಿಕೊಂಡರು. 

ಪರಕೀಯರ ಆಕ್ರಮಣ, ರಾಜಕೀಯ ಮತ್ತು ಸಾಮಾಜಿಕ ದೌರ್ಜನ್ಯದಿಂದ ಭಾರತೀಯ ಸಮಾಜ ನಲುಗಿ ಹೋಗುತ್ತಿದ್ದ ಸಂದರ್ಭದಲ್ಲಿ ಚೈತನ್ಯರು ಜನಸಾಮಾನ್ಯರ ಬದುಕಿನಲ್ಲಿ ಕೃಷ್ಣಭಕ್ತಿಯನ್ನು ಸಂಕೀರ್ತನೆಯ ಮೂಲಕ ವಿಸ್ತರಿಸಿದರು. ಅಲ್ಲದೆ, ಮತಾಂತರದ ಭಯದಿಂದ ಕಂಗಾಲಾಗಿದ್ದ ಜನರಲ್ಲಿ ಭರವಸೆ  ಯನ್ನು ಮೂಡಿಸಿದ ಶ್ರೇಷ್ಠ ದಾರ್ಶನಿಕರು ಅವರು ಎಂಬಲ್ಲಿ ಯಾವ ಸಂಶಯವೂ ಇಲ್ಲ.

ಕ್ರಿ.ಶ. 18.02.1486ರಿಂದ 14.06.1534ರ ನಡುವಿನ ಅವಧಿಯಲ್ಲಿದ್ದ ಚೈತನ್ಯ ಮಹಾಪ್ರಭುಗಳು ಭಕ್ತರ ದೃಷ್ಟಿಯಲ್ಲಿ ಕೃಷ್ಣನ ಅವತಾರವೇ ಆಗಿದ್ದರು. ವೈಷ್ಣವ ಪಂಥದ ಭಕ್ತಿಯೋಗದ ವಾತಾವರಣವನ್ನು ತಮ್ಮ ಪರಿಸರದಲ್ಲಿ ನಿರ್ಮಿಸಿದ ಅವರ ಜನ್ಮದಿನವನ್ನು “ಗೌರಪೂರ್ಣಿಮಾ’ ಎಂಬ ಹೆಸರಿನಲ್ಲಿ ಆಚರಿಸುವ ಪದ್ಧತಿ ಉಂಟು. ಮೂಲತಃ ದೂರದ ಬಂಗಾಳದ ನವದ್ವೀಪದಿಂದ ಬಂದು ಒಡಿಶಾದ ಪುರಿಯಲ್ಲಿ ನೆಲೆ ಸ್ಥಾಪಿಸಿಕೊಂಡುದಕ್ಕೆ ಮತ್ತು ದಿನೇ ದಿನೆ ತನ್ನನ್ನು ಮೀರಿಸುವಂತೆ ಪ್ರಸಿದ್ಧಿಗೆ ಬರುತ್ತಿದ್ದುದಕ್ಕೆ ಶ್ರೀ ಚೈತನ್ಯರ ಬಗ್ಗೆ ಪುರಿ ಮಹಾರಾಜನಿಗೆ ಒಳಗೊಳಗೇ ಅಸಮಾಧಾನ ಇದ್ದಿತ್ತು. ಆದರೆ, ಶ್ರೀ ಚೈತನ್ಯರ ಭಕ್ತಿಚಳವಳಿಯ ಮುಂದೆ, ಸಾತ್ವಿಕವಾದ ನಿಶ್ಶಸ್ತ್ರ ಬದುಕಿನ ಮುಂದೆ, ರಾಜನ ಸಾಮ್ರಾಜ್ಯ ವೈಭವ ಮಂಡಿಯೂರಬೇಕಾಯಿತು. ಮುಂದೆ ಬ್ರಿಟಿಷರ ವಿರುದ್ಧ ಚಳವಳಿ ಹೂಡಲು ಗಾಂಧೀಜಿಗೆ ಇದು ಪ್ರೇರಣೆ ಒದಗಿಸಿರ 
ಬೇಕೆಂದು ತೋರುತ್ತದೆ.

ಆ ಕಾಲಕ್ಕೆ ಅತ್ಯಂತ ಪ್ರಬಲರಾಗಿ ಸಾಮ್ರಾಜ್ಯವನ್ನಾಳುತ್ತಿದ್ದ ಕಳಿಂಗವಂಶದ ಕಾಕತೀಯ ದೊರೆ ಪ್ರತಾಪರುದ್ರನನ್ನು ಖೆಡ್ಡಾಕ್ಕೆ ಬೀಳಿಸಿದ, ನಿಧಾನವಾಗಿ ಪಳಗಿಸಿ ಭಕ್ತಿಮಾರ್ಗಕ್ಕೆ ಹಚ್ಚಿದ ಶ್ರೇಯಸ್ಸು ಶ್ರೀ ಚೈತನ್ಯರದು. ಯುದ್ಧ ಮಾಡದೆಯೇ ಸಾಮ್ರಾಜ್ಯ ಗೆದ್ದ ಯಶಸ್ಸು ಅವರದು. ರಾಜಕೀಯವು ಧರ್ಮದ ತಳಹದಿಯಲ್ಲಿರಬೇಕು. ಆದರೆ ಅವು ಅಪವಿತ್ರ ಮೈತ್ರಿ ಮಾಡಿಕೊಳ್ಳಬಾರದು. ಧರ್ಮವು ರಾಜಕೀಯಕ್ಕೆ ಅಡಿಯಾಳಾಗಬಾರದು ಎಂಬ ಬಹುದೊಡ್ಡ ದೃಷ್ಟಾಂತವನ್ನು ಶ್ರೀ ಚೈತನ್ಯರು ಆಡದೆಯೇ ಇಂಥ ಪ್ರಸಂಗದಲ್ಲಿ ಮಾಡಿ ತೋರಿಸಿಬಿಟ್ಟಿದ್ದಾರೆ. ಶ್ರೀಚೈತನ್ಯ ಮಹಾಪ್ರಭುಗಳು ಮಧ್ಯಯುಗದ ಭಾರತ ಕಂಡ ಮಹಾ ಭಕ್ತಿವೇದಾಂತಿಗಳಲ್ಲಿ ಅತಿಪ್ರಮುಖರು. ಗೌಡೀಯ ಪಂಥದ ವೈಷ್ಣವ ಮತವನ್ನು ಪ್ರತಿಪಾದಿಸಿದ ಚೈತನ್ಯರು ಬಂಗಾಳದ ನವದ್ವೀಪ ಅಥವಾ ಇವತ್ತಿನ ನಾಡಿಯಾದಲ್ಲಿ 18.2.1486ರಲ್ಲಿ ಜಗನ್ನಾಥ ಮಿಶ್ರ ಮತ್ತು ಶಚೀದೇವಿಯರ ಮಗನಾಗಿ ಜನ್ಮತಾಳಿದರು, ಅವರು ಕಹಿಬೇವಿನ ಮರದ ಬುಡದಲ್ಲಿ ಹುಟ್ಟಿದ್ದರಿಂದ ಮುದ್ದಿನಿಂದ “ನೀಮಾಯಿ’ ಎಂದು ಕೂಡ ಕರೆಯುತ್ತಿದ್ದರು, ಅವರ ಜನ್ಮಸ್ಥಳವನ್ನು ಅನಂತರದ ಕಾಲಘಟ್ಟದಲ್ಲಿ ಬಹುಕಷ್ಟದಿಂದ ಪತ್ತೆಹಚ್ಚಿ ಅಭಿವೃದ್ಧಿ ಪಡಿಸಲಾಯಿತು ಮತ್ತು ಅಲ್ಲಿ ಒಂದು ಮಂದಿರವನ್ನು ನಿರ್ಮಿಸಲಾಯಿತು, ಆ ಪ್ರದೇಶವು ಇಂದು “ಯೋಗಪೀಠ’ ಎಂದು ಪ್ರಸಿದ್ಧವಾಗಿದೆ. ಸರ್ವಧರ್ಮಗಳ ಸಮನ್ವಯ ಕೇಂದ್ರವಾಗಿಯೂ ಇದು ಹೆಸರಾಗಿದೆ.

ಮೋಕ್ಷ ಸಂಪಾದನೆಗೆ ಜಾnನಮಾರ್ಗ ಭಕ್ತಿಮಾರ್ಗ ಮತ್ತು ಕರ್ಮಮಾರ್ಗ ಎಂಬ ಮೂರು ಹಾದಿಗಳನ್ನು ಭಾರತೀಯ ದಾರ್ಶನಿಕರು ಸೂಚಿಸಿದ್ದಾರಷ್ಟೆ. ಶ್ರೀ ಶಂಕರರು ಜ್ಞಾನ ಮಾರ್ಗಕ್ಕೂ, ಬಸವಣ್ಣನವರು ಕರ್ಮಮಾರ್ಗಕ್ಕೂ, ಚೈತನ್ಯರು ಭಕ್ತಿಮಾರ್ಗಕ್ಕೂ ಸಂಕೇತವಾಗಿ ನಿಂತಿದ್ದಾರೆ. ಈಗಿನ ಕಲಿಗಾಲಕ್ಕೆ ಭಕ್ತಿಮಾರ್ಗ ಸೂಕ್ತ ಎಂದೂ ಹೇಳಲಾಗಿದೆ. “ಕಲಿ’ ಎಂದರೆ ಹೋರಾಟ, ಜಗಳ, ಅಂತಃಕಲಹ, ಸದಾ ಕಟಿಪಿಟಿ ಎಂಬ ಅರ್ಥ ಗಳೂ ಇವೆ. ಸಣ್ಣಪುಟ್ಟ ವಿಚಾರಗಳಿಗೂ ಸದಾ ಜಗಳವಾಡುತ್ತಿರುವುದೇ ಕಲಿಗಾಲದ ವೈಶಿಷ್ಟ್ಯ. ಜಗಳ ಅಥವಾ ಕಲಹಗಳಿಂದ ಜನರನ್ನು ವಿಮುಖರನ್ನಾಗಿ ಮಾಡಿ ದೈವೀಚಿಂತನೆಯಲ್ಲಿ ಮನಸ್ಸು ನೆಡುವಂತಾಗಬೇಕಾದರೆ “ಭಜನೆ’ “ಸಂಕೀರ್ತನೆ’ ಉತ್ತಮವಾದ ಹಾದಿ ಎಂದು ಹೇಳಲಾಗುತ್ತದೆ, ಸಂಕೀರ್ತನೆಯಲ್ಲಿ ಉದಿಸಿ ಬರುವ ಉದ್ದೀಪಕ ನಾದ ಮತ್ತು ಭಕ್ತಿಯ ರಸವು, ಕನ್ನಡಿಯ ಧೂಳನ್ನು ಒರೆಸುವ ಹಾಗೆ, ಹೃದಯದಲ್ಲಿ ಕವಿದಿರುವ ಕಲ್ಮಷ ವನ್ನು ತೊಳೆದು ದೈವಿಕ ನೆಲೆಗೆ ಮಾನವ ಜೀವಿಯನ್ನು ಕರೆದೊಯ್ಯುತ್ತದೆ ಎಂದು ಭಕ್ತಿವೇದಾಂತವು ಪ್ರತಿಪಾದಿಸುತ್ತದೆ.

ಅದಕ್ಕಿರುವ ಹಾದಿಯೆಂದರೆ ಭಗವಂತನನ್ನು ಗುರಿಯಾಗಿಟ್ಟುಕೊಂಡು ಸಂಪೂರ್ಣ ಶರಣಾಗತಿಯ ಭಾವದಿಂದ ಸಂಕೀರ್ತನೆ  ಯಲ್ಲಿ ನಿರತವಾಗುವುದು. ಅಂತಾರಾಷ್ಟ್ರೀಯ ಕೃಷ್ಣಪ್ರಜ್ಞಾ ಸಂಘಟನೆಯ (ಇಸ್ಕಾನ್‌) ಸಂಸ್ಥಾಪಕರಾದ ಶ್ರೀಲ ಪ್ರಭುಪಾ ದರು ಶ್ರೀಚೈತನ್ಯರ ತತ್ವಾದರ್ಶನಗಳಿಂದ ಪ್ರಭಾವಿತರಾಗಿ, ಪ್ರೇರಿತರಾಗಿ ಆ ಭಕ್ತಿಯ ಹಾದಿಯನ್ನು ತುಳಿದು; ಪ್ರಾಪಂಚಿಕರ ಹೃದಯದಲ್ಲಿ ಕವಿದಿರುವ ಕಲ್ಮಷವನ್ನು ತೊಳೆದು ಶುಚಿರ್ಭೂತ ರನ್ನಾಗಿ ಮಾಡುವ ಪಣತೊಟ್ಟರು. ಶ್ರೀ ಚೈತನ್ಯ ಪ್ರಭುಗಳು ಬರೆದದ್ದು ಎಂಟು ಶ್ಲೋಕಗಳನ್ನು ಮಾತ್ರ, ಅದನ್ನು “ಶಿಷ್ಟಕ’ ಎಂದು ಕರೆಯಲಾಗುತ್ತದೆ. ಉಳಿದಂತೆ ಅವರ ಜೀವನದ ವಿವರಗಳು, ಸಾಧನೆಗಳು ಲಭ್ಯವಾಗುವುದು ಮುಖ್ಯವಾಗಿ ಕೃಷ್ಣದಾಸ ಕವಿರಾಜ ವಿರಚಿತ “ಚೈತನ್ಯ ಚರಿತಾಮೃತ ಎಂಬ ಕಾವ್ಯಕೃತಿಯ ಮೂಲಕವೇ. ಈ ಶ್ಲೋಕಕಾವ್ಯವು ಬಂಗಾಳಿ ಭಾಷೆಯಲ್ಲಿದ್ದು ಹಲವಾರು ಭಾಷೆಗಳಿಗೆ ಅನುವಾದವಾಗಿದೆ. ಶ್ರೀ ಚೈತನ್ಯರ ಬದುಕಿನಲ್ಲಿ ನೂರಾರು ದುರ್ಭರ ಪ್ರಸಂಗಗಳು ಎದುರಾಗಿವೆ. ಸಣ್ತೀಪೂರ್ಣವಾದ, ಬದುಕಿಗೊಂದು ಪಾಠವನ್ನು ಒದಗಿಸಬಲ್ಲ, ಪ್ರಾತಿನಿಧಿಕವಾಗಿ ಮುಖ್ಯವಾದ ಕೆಲವು, ದೃಷ್ಟಾಂತ  ಗಳನ್ನಷ್ಟೇ ಆಯ್ದು ಬರೆದಿರುವ “ಶ್ರೀ ಚೈತನ್ಯ ಚರಿತಾಮೃತ ಮಹಾ ಕಾವ್ಯ’ವು ಭಕ್ತಿಪಂಥದ ಒಂದು ಪ್ರಮುಖ ಕೃತಿಯಾಗಿದೆ.

ಭಾರತದಲ್ಲಿ ಐನೂರು ವರ್ಷಗಳ ಹಿಂದೆ ಪ್ರಾರಂಭವಾದ ಒಂದು ಮಹಾನ್‌ ಸಾಮಾಜಿಕ ಮತ್ತು ಧಾರ್ಮಿಕ ಆಂದೋಲನಕ್ಕೆ ಶ್ರೀ ಚೈತನ್ಯ ಮಹಾಪ್ರಭುಗಳು ನಾಂದಿ ಹಾಡಿದರು. ಅದು ಭಾರತದಲ್ಲಷ್ಟೇ ಅಲ್ಲದೆ ಜಗತ್ತಿನಾದ್ಯಂತ ಮುಂದಿನ ಧಾರ್ಮಿಕ ಮತ್ತು ದಾರ್ಶನಿಕ ಚಿಂತನಾಕ್ರಮದ ಮೇಲೆ ಪ್ರತ್ಯಕ್ಷವಾಗಿ ಮತ್ತು ಪರೋಕ್ಷವಾಗಿ ಪ್ರಭಾವವನ್ನು ಬೀರಿತು. ಚೈತನ್ಯ ಮಹಾಪ್ರಭು ಗಳು ಶ್ರೀಕೃಷ್ಣನಿಗೆ ಅನುರೂಪವಾಗಿದ್ದು, ಅಧಃಪತನಕ್ಕಿಳಿದ ಕಲಿಯುಗದ ಪತಿತಾತ್ಮರಿಗೆ “ಹರೇ ಕೃಷ್ಣ, ಹರೇ ಕೃಷ್ಣ, ಕೃಷ್ಣ ಕೃಷ್ಣ ಹರೇ ಹರೇ/ಹರೇ ರಾಮ, ಹರೇ ರಾಮ, ರಾಮ ರಾಮ, ಹರೇ ಹರೇ’ ಎಂಬ ಮಹಾಮಂತ್ರವನ್ನು ಸಾಮೂಹಿಕವಾಗಿ ಉದಾರ  ವಾಗಿ ಅನುಗ್ರಹಿಸಿದರು.

ಚೈತನ್ಯ ಮಹಾಪ್ರಭುಗಳ ತಂದೆ ಶ್ರೀ ಜಗನ್ನಾಥಮಿಶ್ರರು ವಿದ್ವದ್‌ ಬ್ರಾಹ್ಮಣರು. ಸಿಲ್ಮೆಟ್‌ ಜಿಲ್ಲೆಯವರಾದ ಶ್ರೀ ಜಗನ್ನಾಥ  ಮಿಶ್ರರು ಆ ಕಾಲಕ್ಕೆ ಶಿಕ್ಷಣ ಮತ್ತು ಸಾಂಸ್ಕೃತಿಕ ಕೇಂದ್ರವೆಂದು ಹೆಸರುವಾಸಿಯಾಗಿದ್ದ ನವದ್ವೀಪದಲ್ಲಿ ವಿದ್ಯಾರ್ಥಿಯಾಗಿ ಬಂದು ನೆಲೆಸಿದರು. ನವದ್ವೀಪದ ಮಹಾನ್‌ ವಿದ್ವಾಂಸರಾದ ಶ್ರೀ ನೀಲಾಂಬರ ಚಕ್ರವರ್ತಿಯವರ ಪುತ್ರಿ ಶ್ರೀಮತಿ ಶಚೀದೇವಿಯನ್ನು ವಿವಾಹ ಮಾಡಿಕೊಂಡ ಅವರು ಗಂಗಾತೀರದಲ್ಲಿ ವಾಸ್ತವ್ಯ ಹೂಡಿದರು.

ಜಗನ್ನಾಥಮಿಶ್ರರಿಗೆ ತಮ್ಮ ಪತ್ನಿ ಶಚೀದೇವಿಯಲ್ಲಿ ಅನೇಕ ಪುತ್ರಿಯರ ಜನನವಾಯಿತು. ಆದರೆ, ಇವರಲ್ಲಿ ಬಹಳ ಪುತ್ರಿಯರು ಚಿಕ್ಕವಯಸ್ಸಿನಲ್ಲೇ ಮರಣ ಹೊಂದಿದರು. ಉಳಿದ ಇಬ್ಬರು ಪುತ್ರರಾದ ಶ್ರೀವಿಶ್ವರೂಪ ಮತ್ತು ವಿಶ್ವಂಭರರು ಕೊನೆಗೆ ಪಿತೃವಾತ್ಸಲ್ಯಕ್ಕೆ ಪಾತ್ರರಾದರು. ಹತ್ತನೆಯ ಹಾಗೂ ಕೊನೆಯ ಮಗನಾದ ವಿಶ್ವಂಭರನು ಮುಂದೆ ನಿಮಾಯಿ ಪಂಡಿತನೆಂದೂ ಸಂನ್ಯಾಸಾಶ್ರಮ ಸ್ವೀಕರಿಸಿದ ಅನಂತರ ಭಗವಾನ್‌ ಶ್ರೀ ಚೈತನ್ಯ ಮಹಾಪ್ರಭು ಎಂದೂ ವಿಖ್ಯಾತಗೊಂಡನು. ಮಗುವು ಚಿನ್ನದ ಬಣ್ಣದಿಂದ ಕಂಗೊಳಿಸುತ್ತಿದ್ದುದರಿಂದ ನೆರೆಹೊರೆಯ ಮಹಿಳೆಯರು “ಗೌರಾಂಗ’ ಎಂದು ಕರೆದರು.

***
ಬದುಕಿನ ಪ್ರಾರಂಭಾವಸ್ಥೆಯಲ್ಲೇ ದ್ವೆ„ತ ಅಥವಾ ವೈವಿಧ್ಯ ವನ್ನು ಹೇಳುವ ವೈಷ್ಣವ ಸಿದ್ಧಾಂತವನ್ನು ವ್ಯಕ್ತಿಗೆ ಬೋಧಿಸಿದರೆ ಅಂತಹ ವ್ಯಕ್ತಿಯನ್ನು ಏಕದೇವತಾವಾದವು ಅಷ್ಟಾಗಿ ಬಾಧಿಸು ವುದಿಲ್ಲ. ವಾಸ್ತವವಾಗಿ ಸೃಷ್ಟಿಯಲ್ಲಿನ ಪ್ರತಿಯೊಂದೂ ಪರಮ ಮೂಲದ ಉದ್ಗಮಗಳು (ಜನ್ಮಾದ್ಯಸ್ಯ ಯತಃ). ಮೂಲ ಶಕ್ತಿಯು ಹಲವು ವೈವಿಧ್ಯಗಳಲ್ಲಿ ಪ್ರಕಾಶಕ್ಕೆ ಬರುತ್ತದೆ. ಸೂರ್ಯನಿಂದ ಹೊಮ್ಮುವ (ಸೂರ್ಯ) ಪ್ರಕಾಶವು ಶಾಖ ಹಾಗೂ ಬೆಳಕುಗಳಾಗಿ ಪ್ರಕಟವಾಗುವುದಿಲ್ಲವೆ? ಮೂಲ ಶಕ್ತಿಯ ವೈವಿಧ್ಯವೂ ತದ್ವತ್ತು ಹಾಗೆಯೇ. ಬೆಳಕನ್ನು ಶಾಖವೆಂದು ಅಥವಾ ಶಾಖವನ್ನು ಬೆಳಕೆಂದು ಯಾರೂ ಹೇಳುವ ಹಾಗಿಲ್ಲ. ಆದ್ದರಿಂದ ಚೈತನ್ಯ ಮಹಾಪ್ರಭುಗಳು ಅಚಿಂತ್ಯ ಭೇದಾಭೇದ ಅನೂಹ್ಯ ಅಖಂಡತೆ ಹಾಗೂ ಭಿನ್ನತೆ ಎನ್ನುವ ಸಿದ್ಧಾಂತವನ್ನು ಬೋಧಿಸಿದರು. ಎರಡು ಭೌತಿಕ ಕ್ರಿಯೆಗಳಾದ ಬೆಳಕು ಹಾಗೂ ಶಾಖಕ್ಕೆ ಪರಸ್ಪರ ಸಂಬಂಧ ಇರುವುದು ಹೌದಾದರೂ ಅವುಗಳಲ್ಲಿ ವ್ಯತ್ಯಾಸ ಉಂಟೇ ಉಂಟು. ಇದೇ ರೀತಿ ಇಡೀ ವ್ಯಕ್ತ ಜಗತ್ತು ಭಗವಂತನ ಶಕ್ತಿಯ ಪ್ರಕಟರೂಪವಾದರೂ, ಆತನ ಶಕ್ತಿಯಂತೂ ನಾನಾ ತೆರದ ರೂಪಗಳಲ್ಲಿ ತನ್ನನ್ನು ತೋರಗೊಡುತ್ತದೆಂದು ಎಲ್ಲರಿಗೂ ಚೈತನ್ಯರು ಮನವರಿಕೆ ಮಾಡಿಕೊಟ್ಟರು.

ಕೃಷ್ಣದಾಸ ಕವಿರಾಜರ “ಚೈತನ್ಯ ಚರಿತಾಮೃತ’ವು ಮಧ್ಯಕಾಲೀನ ಬಂಗಾಳಿಯ ಬೃಹತ್‌ಕಾವ್ಯ. ಇದು ಕನ್ನಡಕ್ಕೆ ಇಸ್ಕಾನ್‌ ಸಂಸ್ಥೆಯ ಮೂಲಕ ಈ ಹಿಂದೆ ಪ್ರಕಟವಾಗಿದೆ. ಕನ್ನಡದಲ್ಲಿ ಚೈತನ್ಯ ಸಾಹಿತ್ಯ ಹೆಚ್ಚಾಗಿಲ್ಲ. ಕುವೆಂಪು ಅವರು ತಮ್ಮ ನಾಡಗೀತೆಯಲ್ಲಿ ಚೈತನ್ಯರನ್ನು ಮೊದಲು ಪ್ರಸ್ತಾಪಿಸಿದ್ದಾರೆ. ನಮ್ಮ ಕನ್ನಡ ಕವಿಗಳು ಚೈತನ್ಯ ಮಹಾಪ್ರಭುಗಳ ಮೇಲುನೆಲೆಯನ್ನು ಮಾತ್ರ ಸ್ಪರ್ಶಿಸಿದ್ದಾರೆ. ಇಸ್ಕಾನ್‌ ಸಂಸ್ಥೆ ತಂದಿರುವ ಪರಿಚಯಾತ್ಮಕ ಕಿರುಪುಸ್ತಿಕೆಯು ಸಾಮಾನ್ಯವಾದ ವಿವರಗಳನ್ನು ನೀಡುತ್ತದೆ. ಚೈತನ್ಯರ ಭಕ್ತಿ ಪ್ರವಾಹದ ಚಳವಳಿ ಬಡವರೆನ್ನದೆ, ಶ್ರೀಮಂತರೆನ್ನದೆ ಸಮಸ್ತ ರನ್ನೂ ತನ್ನ ತೆಕ್ಕೆಗೆ ತೆಗೆದುಕೊಂಡಿದೆ; ಚೈತನ್ಯ ಚರಿತಾಮೃತ ಕೃತಿ ಯಲ್ಲಿ ಹದಿನೇಳನೆಯ ಶತಮಾನದ ಎಲ್ಲಾ ಚಾರಿತ್ರಿಕ, ಸಾಂಸ್ಕೃತಿಕ ಮತ್ತು ಧಾರ್ಮಿಕ ವಿವರಗಳು ಸಂಪೂರ್ಣವಾಗಿ ಬಂದಿವೆ. ಆ ಕಾಲ ದಲ್ಲಿ ಮುಸ್ಲಿಮರ ರಾಜಕೀಯ ಪ್ರಭಾವ ಪ್ರಬಲವಾಗಿತ್ತು. 

ಅನೇಕ ಸಂಸ್ಥಾನಿಕರು ಅಲ್ಲಲ್ಲಿ ಆಳುತ್ತಿದ್ದರು. ಆ ಕಾಲದಲ್ಲಿ ಶಿಷ್ಟರು ಇರುವಂತೆ ದುಷ್ಟರೂ ಇರುತ್ತಿದ್ದರು. ಚೈತನ್ಯ ಮಹಾಪ್ರಭುಗಳು ದುಷ್ಟರನ್ನು ಶಿಷ್ಟರನ್ನಾಗಿಸುವ ಮನಃಪರಿವರ್ತನೆ ಅಲ್ಲಲ್ಲಿ ನಮಗೆ ಕಾಣುತ್ತದೆ! ಪ್ರತಿಯೊಬ್ಬನಲ್ಲೂ ದುಷ್ಟತನದ ನಾನಾ ರೂಪಗಳು ಅಡಗಿರುತ್ತವೆ. ಅವುಗಳನ್ನು ಕ್ರಮಶಃ ಮನಸ್ಸಿನಿಂದ ಹೊರಹಾಕಬೇಕು ಅಷ್ಟೆ. ಇದಕ್ಕೆ ಭಕ್ತಿಯೊಂದೇ ಸಾಧನ. ಅದು ಕೂಡಾ ಸಗುಣರೂಪದಿಂದ ಸಾಧ್ಯ ಎಂಬ ತಿಳಿಯಾದ ತಣ್ತೀವನ್ನು ಚೈತನ್ಯ ಮಹಾಪ್ರಭುಗಳು ತಮ್ಮ ದೈನಂದಿನ ಬದುಕಿನ ವಿರಾಟ್‌ ಕಥನದ ಮೂಲಕವೇ ನಮ್ಮ ಅರಿವಿಗೆ ತಂದುಕೊಟ್ಟಿದ್ದಾರೆ.
(ಶ್ರೀ ಚೈತನ್ಯ ಸಂಭ್ರಮ ಪುಸ್ತಕದ ಆಯ್ದ ಭಾಗ)
*ಪೊ. ಮಲ್ಲೇಪುರಂ ಜಿ. ವೆಂಕಟೇಶ

ಟಾಪ್ ನ್ಯೂಸ್

Nara Ramamurthy: ಆಂಧ್ರ ಸಿಎಂ ಚಂದ್ರಬಾಬು ನಾಯ್ಡು ಸಹೋದರ ನಾರಾ ರಾಮಮೂರ್ತಿ ನಾಯ್ಡು ನಿಧನ

Nara Ramamurthy: ಆಂಧ್ರ ಸಿಎಂ ಚಂದ್ರಬಾಬು ನಾಯ್ಡು ಸಹೋದರ ನಾರಾ ರಾಮಮೂರ್ತಿ ನಾಯ್ಡು ನಿಧನ

13-notes-1

Mangaluru: ನೋಟು ಬ್ಯಾನ್‌ಗೆ 8 ವರ್ಷ: ಹುಂಡಿಗೆ ಹಾಕೋದು ನಿಂತಿಲ್ಲ!

Desi Swara@150:ವಿದೇಶ ನೆಲದಲ್ಲಿ ಕರ್ನಾಟಕದ ಖಾದ್ಯವನ್ನು ಉಣಬಡಿಸುತ್ತಿರುವ ದಂಪತಿ

Desi Swara@150:ವಿದೇಶ ನೆಲದಲ್ಲಿ ಕರ್ನಾಟಕದ ಖಾದ್ಯವನ್ನು ಉಣಬಡಿಸುತ್ತಿರುವ ದಂಪತಿ

Maharashtra Election: Focus on winning the booth: Modi’s Mantra to Workers

Maharashtra Election: ಬೂತ್‌ ಗೆಲ್ಲುವತ್ತ ಗಮನ ಹರಿಸಿ: ಕಾರ್ಯಕರ್ತರಿಗೆ ಮೋದಿ ಕರೆ

Desi Swara@150: ದಾಸರೆಂದರೆ ದಾಸರಯ್ಯಾ…ಸಾಹಿತ್ಯ ಲೋಕದಲ್ಲಿ “ಕನ್ನಡ ಮತ್ತು ಕರ್ನಾಟಕ’

Desi Swara@150: ದಾಸರೆಂದರೆ ದಾಸರಯ್ಯಾ…ಸಾಹಿತ್ಯ ಲೋಕದಲ್ಲಿ “ಕನ್ನಡ ಮತ್ತು ಕರ್ನಾಟಕ’

1

Lawyer Jagadish: ಮತ್ತೆ ಬಿಗ್‌ ಬಾಸ್‌ಗೆ ಕಾರ್ಯಕ್ರಮಕ್ಕೆ ಲಾಯರ್‌ ಜಗದೀಶ್‌ ಎಂಟ್ರಿ..!

6

Bengaluru: ಕಸವನ್ನು ಗೊಬ್ಬರವಾಗಿಸುವ “ಕಪ್ಪು ಸೈನಿಕ ನೊಣ’!


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

1-sugama

Music; ಸುಗಮ ಸಂಗೀತಕ್ಕೆ ನವೋದಯ ಸಾಹಿತ್ಯ ಬುನಾದಿ

3-kananda-1

Kannada: ಕನ್ನಡನಾಡಲ್ಲಿ ಕನ್ನಡ ಕಲಿಕೆಯ ಹಾಡು-ಪಾಡು

India: ಭಾರತದಲ್ಲಿ ರಹಸ್ಯ ವಾಸ್ತವ್ಯ, ಬಿಗಿ ಭದ್ರತೆ…ಶೇಖ್‌ ಹಸೀನಾ ಆಶ್ರಯ ಪಡೆದು 100 ದಿನ!

India: ಭಾರತದಲ್ಲಿ ರಹಸ್ಯ ವಾಸ್ತವ್ಯ, ಬಿಗಿ ಭದ್ರತೆ…ಶೇಖ್‌ ಹಸೀನಾ ಆಶ್ರಯ ಪಡೆದು 100 ದಿನ!

ಯಕ್ಷಗಾನದ ಕನ್ನಡ ಭಾಷಾ ಸಂಪದ ಉಳಿಸಿ, ಬೆಳೆಸೋಣ

ಯಕ್ಷಗಾನದ ಕನ್ನಡ ಭಾಷಾ ಸಂಪದ ಉಳಿಸಿ, ಬೆಳೆಸೋಣ

ರಾಷ್ಟ್ರೀಯ ಆರ್ಥಿಕ ಉತ್ಥಾನದ ಪದದರ್ಶಿ ಸಹಕಾರಿ ಸಂಸ್ಥೆಗಳು

ರಾಷ್ಟ್ರೀಯ ಆರ್ಥಿಕ ಉತ್ಥಾನದ ಪದದರ್ಶಿ ಸಹಕಾರಿ ಸಂಸ್ಥೆಗಳು

MUST WATCH

udayavani youtube

ಕಾರಿನ ಟಯರ್ ಒಳಗಿತ್ತು ಬರೋಬ್ಬರಿ 50 ಲಕ್ಷ

udayavani youtube

ಹೊಸ ತಂತ್ರಜ್ಞಾನಕ್ಕೆ ತೆರೆದುಕೊಂಡ ತುಳುನಾಡ ಕಂಬಳ

udayavani youtube

ಉಡುಪಿಯ ಶ್ರೀ ಕೃಷ್ಣ ಮಠದಲ್ಲಿ ಕಾರ್ತಿಕ ಲಕ್ಷದೀಪೋತ್ಸವ

udayavani youtube

ಪುಂಗನೂರು ತಳಿಯ ಹಾಲು ಯಾವೆಲ್ಲ ಕಾಯಿಲೆಗಳನ್ನು ಗುಣಪಡಿಸುತ್ತದೆ ?

udayavani youtube

ಪುಸ್ತಕ ನೋಡುವುದಿಲ್ಲ, ಗುರುವಿಲ್ಲ ಆದರೂ ಕಲೆ ತಾನಾಗಿಯೇ ಒಲಿದು ಬಂತು

ಹೊಸ ಸೇರ್ಪಡೆ

Nara Ramamurthy: ಆಂಧ್ರ ಸಿಎಂ ಚಂದ್ರಬಾಬು ನಾಯ್ಡು ಸಹೋದರ ನಾರಾ ರಾಮಮೂರ್ತಿ ನಾಯ್ಡು ನಿಧನ

Nara Ramamurthy: ಆಂಧ್ರ ಸಿಎಂ ಚಂದ್ರಬಾಬು ನಾಯ್ಡು ಸಹೋದರ ನಾರಾ ರಾಮಮೂರ್ತಿ ನಾಯ್ಡು ನಿಧನ

14-darshan

Actor Darshan ವಿರುದ್ದ ಸುಪ್ರೀಂನಲ್ಲಿ ಮೇಲ್ಮನವಿ: ಬೆಂಗ್ಳೂರು ಕಮೀಷನರ್‌

13-notes-1

Mangaluru: ನೋಟು ಬ್ಯಾನ್‌ಗೆ 8 ವರ್ಷ: ಹುಂಡಿಗೆ ಹಾಕೋದು ನಿಂತಿಲ್ಲ!

Desi Swara@150:ವಿದೇಶ ನೆಲದಲ್ಲಿ ಕರ್ನಾಟಕದ ಖಾದ್ಯವನ್ನು ಉಣಬಡಿಸುತ್ತಿರುವ ದಂಪತಿ

Desi Swara@150:ವಿದೇಶ ನೆಲದಲ್ಲಿ ಕರ್ನಾಟಕದ ಖಾದ್ಯವನ್ನು ಉಣಬಡಿಸುತ್ತಿರುವ ದಂಪತಿ

Maharashtra Election: Focus on winning the booth: Modi’s Mantra to Workers

Maharashtra Election: ಬೂತ್‌ ಗೆಲ್ಲುವತ್ತ ಗಮನ ಹರಿಸಿ: ಕಾರ್ಯಕರ್ತರಿಗೆ ಮೋದಿ ಕರೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.