ಚಂದಿರನ ಮೀಟುವೆವು…
ಚಂದ್ರಯಾನ-2
Team Udayavani, Jul 14, 2019, 5:00 AM IST
1958ರ ಆ. 17ರಂದು ಅಮೆರಿಕ ಕಳುಹಿಸಿದ್ದ ಪಯೋನಿಯರ್ ಆರ್ಬಿಟರ್‌ನ ಪ್ರಯತ್ನದಿಂದ ಹಿಡಿದು ಇಲ್ಲಿಯತನಕ ಹಲವಾರು ಬಾರಿ ಮನುಷ್ಯ ಚಂದ್ರನ ಅಧ್ಯಯನಕ್ಕೆ ಮುಂದಾಗಿದ್ದಾನೆ. ಇದರಲ್ಲಿ ಭಾರತವೂ ಹಿಂದೆ ಬಿದ್ದಿಲ್ಲ. 2008ರಲ್ಲಿ ಚಂದ್ರಯಾನ-1ರ ಮೂಲಕ ಕೇವಲ ಆರ್ಬಿಟರ್ ಕಳುಹಿಸಿ ಅದರಲ್ಲಿ ಯಶಸ್ವಿಯಾಗಿದ್ದ ಇಸ್ರೋ ಈ ಬಾರಿ ಚಂದ್ರಯಾನ-2 ಎಂಬ ಮತ್ತೂಂದು ಸಾಹಸಕ್ಕೆ ಕೈ ಹಾಕಿದೆ. ಚಂದ್ರನಲ್ಲಿಗೆ ಮೊದಲ ಬಾರಿ ವೈಜ್ಞಾನಿಕ ಉಪಕರಣವನ್ನು ಇಳಿಸುವುದು ಮಾತ್ರವಲ್ಲ, ಯಾರೂ ಈವರೆಗೆ ಮಾಡದ ಚಂದ್ರನ ದಕ್ಷಿಣ ಧ್ರುವದ ಅಧ್ಯಯನಕ್ಕೆ ನಾಂದಿ ಹಾಡಲಿದೆ ಇಸ್ರೋ. ಹಾಗಾಗಿಯೇ, ಇದು ಭಾರತದ ಹೆಮ್ಮೆ ಮಾತ್ರವಲ್ಲ ಒಂದು ಸಾತ್ವಿಕ ಗರ್ವ.
ಆರ್ಬಿಟರ್, ಲ್ಯಾಂಡರ್, ರೋವರ್‌ನಲ್ಲಿ ಏನೇನಿದೆ?
ಆರ್ಬಿಟರ್: 2,379 ಕೆ.ಜಿ.
ಟೆರೇನ್ ಮ್ಯಾಪಿಂಗ್ ಕೆಮರಾ 2 (ಟಿಎಂಸಿ 2)
ಚಂದ್ರನ ಪ್ರಾಕೃತಿಕ ಮೂಲಧಾತುಗಳ ರಾಸಾಯನಿಕ ಅಂಶ ಹಾಗೂ ರಚನೆ ವಿವರ ಅರಿಯಲು ಬಳಕೆ.
ಚಂದ್ರನ ಮೇಲ್ಮೆ„ ಅಧ್ಯಯನ ಮತ್ತು ಅದರ 3ಡಿ ಚಿತ್ರ ತಯಾರಿಕೆಗೆ ಸಹಕಾರಿ.
2. ಲಾರ್ಜ್ ಏರಿಯಾ ಸಾಫ್ಟ್ ಎಕ್ಸ್-ರೇ ಸ್ಪೆಕ್ಟ್ರೋಮೀಟರ್
ಚಂದ್ರನಲ್ಲಿ ಮೆಗ್ನೇಷಿಯಂ, ಅಲ್ಯೂಮಿನಿಯಂ, ಸಿಲಿಕಾನ್, ಕ್ಯಾಲ್ಸಿಯಂ, ಟೈಟಾನಿಯಂ, ಕಬ್ಬಿಣ ಮತ್ತು ಸೋಡಿಯಂ ಪತ್ತೆ.
ಎಕ್ಸ್‌ಆರ್‌ಎಫ್ ತಂತ್ರಜ್ಞಾನದ ನೆರವಿನಿಂದ ಚಂದ್ರನ ಮೇಲೆ ಸೂರ್ಯನ ಬೆಳಕು ಬಿದ್ದ ಅನಂತರ ಉತ್ಪತ್ತಿಯಾಗುವ ಕ್ಷ-ಕಿರಣಗಳ ಪರೀಕ್ಷೆ.
3. ಸೋಲಾರ್ ಎಕ್ಸ್‌ರೇ ಮಾನಿಟರ್ (ಎಕ್ಸ್‌ಎಸ್‌ಎಂ)
ಚಂದ್ರನ ಅಂಗಳಕ್ಕೆ ತಲುಪುವ ಎಕ್ಸ್-ರೇಗಳನ್ನು ಹೀರಿಕೊಂಡು ಚಂದ್ರನ ಪರಿಸರದ ಮೇಲೆ ಉಂಟಾಗುವ ಸೂರ್ಯನ ಪ್ರಖರತೆಯ ಪ್ರಮಾಣ ಪತ್ತೆ.
ಪಡೆದ ಮಾಹಿತಿಯನ್ನು ಸಾಫ್ಟ್ ಎಕ್ಸ್-ರೇ ಸ್ಪೆಕ್ಟ್ರೋಮೀಟರ್‌ಗೆ ರವಾನೆ.
4. ಆರ್ಬಿಟರ್ ಹೈ ರೆಸೆಲ್ಯೂಷನ್ ಕೆಮರಾ (ಒಎಚ್‌ಆರ್‌ಸಿ)
ಏಕಕಾಲದಲ್ಲಿ ಎರಡು ಕೋನಗಳಿಂದ ಛಾಯಾಚಿತ್ರ ತೆಗೆಯಬಲ್ಲ ಪರಿಕರ. ವಿಕ್ರಮ್ ಲ್ಯಾಂಡರ್ ಇಳಿಯಬೇಕಾದ ಜಾಗದ ಬಗ್ಗೆ ನೆರವು.
5. ಇಮೇಜಿಂಗ್ ಐಆರ್ ಸ್ಪೆಕ್ಟ್ರೋಮೀಟರ್ (ಐಐಆರ್‌ಎಸ್)
ಚಂದ್ರನ ಮೇಲ್ಮೆ„ ಮೇಲಿನ ಮಣ್ಣಿನ ಖನಿಜಗಳ ಪರೀಕ್ಷೆಗೆ ಸಹಾಯಕ.
ನೀರಿನ ಅಥವಾ ಹೈಡ್ರಾಕ್ಸಿಲ್ ಅಂಶಗಳ ಪತ್ತೆ.
6. ಡ್ಯುಯಲ್ ಫ್ರೀಕ್ವೆನ್ಸಿ ಸಿಂಥೆಟಿಕ್ ಅಪೆರ್ಚರ್ ರೇಡಾರ್ (ಎಸ್‌ಎಆರ್)
ನೆಲದಿಂದ 5 ಮೀಟರ್‌ವರೆಗಿನ ಆಳದಲ್ಲಿ ಇರುವ ಲವಣ, ಖನಿಜಗಳು, ತೇವಾಂಶ ಪತ್ತೆ. ಧ್ರುವಗಳಲ್ಲಿನ ನೀರು, ಮಂಜುಗಡ್ಡೆ ಅಧ್ಯಯನ.
ಚಂದ್ರನ ಶಾಶ್ವತ ಕತ್ತಲು ಭಾಗಗಳಲ್ಲಿನ ಮಾಹಿತಿಗಳ ಸಂಗ್ರಹ. ದಕ್ಷಿಣ ಧ್ರುವದಲ್ಲಿ ಹೈ-ರೆಸೂಲ್ಯೂಷನ್ ಛಾಯಾಚಿತ್ರ ಹಾಗೂ ಅಧ್ಯಯನ.
7. ಅಟಾಸ್ಪಿಯರಿಕ್ ಕಾಂಪೋನಿಷಿನಲ್ ಎಕ್ಸ್‌ಪ್ಲೋರರ್ 2 (ಚೇಸ್ 2)
ಚಂದ್ರನ ಎಕ್ಸೋಸ್ಪಿಯರ್‌ನಲ್ಲಿರುವ ಅಂಶ ಪತ್ತೆಗೆ ಬಳಕೆ. ಮಾಸ್ ಸ್ಪೆಕ್ಟ್ರೋಮೀಟರ್‌ನಿಂದ ವಾತಾವರಣದ ಪರೀಕ್ಷೆ.ಪ್ರಾಕೃತಿಕ ಏರುಪೇರುಗಳ ಅಧ್ಯಯನ.
8. ಡ್ಯುಯಲ್ ಫ್ರೀಕ್ವೆನ್ಸಿ ರೇಡಿಯೋ ಸೈನ್ಸ್ ಎಕ್ಸ್‌ಪೆರಿಮೆಂಟ್ ಡಿವೈಸ್
ವಾತಾವರಣದ ಒತ್ತಡವನ್ನು ಅಳೆಯುವುದು. ಪಡೆದ ಮಾಹಿತಿ ಉಪಗ್ರಹಕ್ಕೆ ರವಾನೆ.
ವಿಕ್ರಮ್ (ಲ್ಯಾಂಡರ್): 1,471 ಕೆ.ಜಿ.
1. ರೇಡಿಯೋ ಅನಾಟಮಿ ಆಫ್ ಮೂನ್ ಕಾರ್ಯಾಚರಣೆ
ಪ್ಲಾಸ್ಮಾ, ವಾತಾವರಣದ ಎಲೆಕ್ಟ್ರಾನುಗಳ ಸಾಂದ್ರತೆ, ಉಷ್ಣಾಂಶ ಪತ್ತೆ .
2. ಸಫೇìಸ್ ಥರ್ಮೋ-ಫಿಸಿಕಲ್ ಎಕ್ಸ್‌ಪೆರಿಮೆಂಟ್ (ಎಸ್‌ಟಿಇ)
ಉಷ್ಣಾಂಶ, ಶಾಖ ಉತ್ಪನ್ನವಾಗುವ ಕ್ರಮ ಕಂಡುಹಿಡಿಯುವಿಕೆ
ಪ್ಯಾಸಿವ್ ಮತ್ತು ಆ್ಯಕ್ಟಿವ್ ಆಯಾಮಗಳಲ್ಲಿ ಕೆಲಸ ಮಾಡಬಲ್ಲದು.
3. ಇನ್ಸ್ಟ್ರುಮೆಂಟ್ ಆಫ್ ಲೂನಾರ್ ಸೀಸ್ಮಿಕ್ ಆ್ಯಕ್ಟಿವಿಟಿ (ಐಎಲ್‌ಎಸ್‌ಎ)
ರೋವರ್ಸ್ ರೇಂಜ್, ಫೈನ್-ರೇಂಜ್ ಸೆನ್ಸರ್‌ಗಳಿಂದ ಚಂದ್ರನ ನೆಲದ ಕಂಪನಗಳ ಅಧ್ಯಯನ.
ಪ್ರಜ್ಞಾನ್ (ರೋವರ್): 27 ಕೆ.ಜಿ.
1. ಆಲ್ಫಾ ಪಾರ್ಟಿಕಲ್ ಎಕ್ಸ್-ರೇ ಸ್ಪೆಕ್ಟ್ರೋಮೀಟರ್ (ಎಪಿಎಕ್ಸ್‌ಎಸ್)
ಇದರಲ್ಲಿನ ಎಕ್ಸ್-ರೇ ಫ್ಲೋರಸೆಂಟ್ ಸ್ಪೆಕ್ಟೋಗ್ರಫಿಯಿಂದ ಚಂದ್ರನ ಮೇಲ್ಮೆ„ನ ಮೂಲಧಾತುಗಳ ಅಧ್ಯಯನ.
ಚಂದ್ರನಲ್ಲಿನ ಮಣ್ಣಿನ ಹೆಂಟೆಗಳನ್ನು ಮುಂದೆ ಕಲ್ಲುಗಳನ್ನಾಗಿ ಮಾರ್ಪಡಿಸಬಲ್ಲ ಧಾತುಗಳನ್ನು ಪತ್ತೆ. ಅವುಗಳ ಮಾಹಿತಿ ರವಾನೆ.
2. ಲೇಸರ್ ಇಂಡ್ನೂಸ್ಡ್ ಬ್ರೇಕ್‌ಡೌನ್ ಸ್ಪೆಕ್ಟ್ರೋಮೀಟರ್
ಲೇಸರ್‌ನಿಂದ ಲ್ಯಾಂಡಿಂಗ್ ಜಾಗದ ಸುತ್ತಲ ಪರಿಸರದ ಮಾಹಿತಿ.
ಪ್ಲಾಸ್ಮಾ ಅಂಶವು ಕೊಳೆಯುವುದರಿಂದ ಉಂಟಾಗುವ ವಿಕಿರಣಗಳ ಅಧ್ಯಯನ.
978 ಕೋಟಿ ರೂ. ಚಂದ್ರಯಾನ-2 ಒಟ್ಟಾರೆ ಬಜೆಟ್
ಯೋಜನೆಯ ಪ್ರಮುಖ 4 ಹಂತಗಳು
1. ಲಾಂಚರ್
ಜಿಎಸ್‌ಎಲ್‌ವಿ ಎಂಕೆ – 3 ಹೆಸರಿನ ರಾಕೆಟ್, ಚಂದ್ರನ ಅಧ್ಯಯನಕ್ಕೆ ಬೇಕಾಗುವ ಪರಿಕರಗಳೆಲ್ಲವನ್ನೂ ಹೊತ್ತೂಯ್ಯಲಿದೆ. ಜಗತ್ತಿನಲ್ಲಿ ಈಗ ಲಭ್ಯವಿರುವ ರಾಕೆಟ್‌ಗಳಲ್ಲೇ ಅತಿ ಶಕ್ತಿಶಾಲಿ ರಾಕೆಟ್‌ಗಳಲ್ಲಿ ಇದೂ ಒಂದು. ಸ್ವದೇಶಿಯಾಗಿಯೇ ಇದನ್ನು ನಿರ್ಮಿಸಿರುವ ಹೆಗ್ಗಳಿಕೆ ಇಸ್ರೋನದ್ದು. ಇದರಲ್ಲಿ, ಎಸ್2000 ಸಾಲಿಡ್ ರಾಕೆಟ್ ಬೂಸ್ಟರ್‌ಗಳು, ಎಲ್110 ಲಿಕ್ವಿಡ್ ಸ್ಟೇಜ್ ಹಾಗೂ ಸಿ 25 ಅಪ್ಪರ್ ಸ್ಟೇಜ್ ಎಂಬ ಮೂರು ವಿಭಾಗಗಳಿವೆ.
2. ಆರ್ಬಿಟರ್
ಚಂದ್ರನ ಮೇಲ್ಮೆ„ ಮೇಲೆ ಕೈಗೊಳ್ಳಲಾಗುವ ಅಧ್ಯಯನಗಳ ಎಲ್ಲಾ ಮಾಹಿತಿಗಳನ್ನು ನಿರಂತರವಾಗಿ ಭೂಮಿಗೆ ರವಾನಿಸುವುದು ಇದೇ ಪರಿಕರ. ಚಂದ್ರನ ಧ್ರುವೀಯ ಕಕ್ಷೆಯಿಂದ 100 ಕಿ.ಮೀ. ದೂರದಲ್ಲಿ ಚಂದ್ರನನ್ನು ಪರಿಭ್ರಮಿಸಲಿರುವ ಇದು, “ಇಂಡಿಯನ್ ಡೀಪ್ ಸ್ಪೇಸ್ ನೆಟ್‌ವರ್ಕ್’ (ಐಡಿಎಸ್‌ಎನ್) ತಂತ್ರಜ್ಞಾನದ ಸಹಾಯದಿಂದ ಬೆಂಗಳೂರಿನ ಬ್ಯಾಲಾಳುವಿನಲ್ಲಿರುವ ಇಸ್ರೋ ಕೇಂದ್ರಕ್ಕೆ ಮಾಹಿತಿ ರವಾನಿಸುತ್ತದೆ. ಜತೆಗೆ, ಚಂದ್ರನ ಮೇಲೆ ಲ್ಯಾಂಡ್ ಆಗಲಿರುವ ಪರಿಕರವಾದ ವಿಕ್ರಮ್ ಲ್ಯಾಂಡರ್‌ಗೂ ಇಸ್ರೋದ ಸೂಚನೆಗಳನ್ನು ರವಾನಿಸುತ್ತದೆ. ಒಂದು ವರ್ಷದವರೆಗೆ ಚಂದ್ರನನ್ನು ಸುತ್ತಲಿರುವ ಇದರ ತೂಕ 2,379 ಕೆ.ಜಿ. ಇದರಲ್ಲಿ ಉತ್ಪಾದನೆಯಾಗುವ ವಿದ್ಯುತ್ ಪ್ರಮಾಣ 1,000 ವ್ಯಾಟ್.
3. ವಿಕ್ರಮ್ (ಲ್ಯಾಂಡರ್)
ಭಾರತೀಯ ಬಾಹ್ಯಾಕಾಶ ಸಂಸ್ಥೆಯ (ಇಸ್ರೋ) ಸಂಸ್ಥಾಪಕ ವಿಕ್ರಮ್ ಸಾರಾಭಾಯ್ ಅವರ ಸ್ಮರಣಾರ್ಥ ಈ ಪರಿಕರಕ್ಕೆ ಅವರ ಹೆಸರನ್ನೇ ಇಡಲಾಗಿದೆ. ಇದರ ಕಾರ್ಯಾವಧಿ ಚಂದ್ರ ಮೇಲ್ಮೆ„ ಮೇಲಿನ ಒಂದು ದಿನದ ಅವಧಿಗೆ ಮಾತ್ರ ಸೀಮಿತ. ಚಂದ್ರನ ಒಂದು ದಿನವೆಂದರೆ, ಭೂಮಿಯ 14 ದಿನಗಳಿಗೆ ಸಮ! ಚಂದ್ರನ ಮೇಲೆ ಅತ್ಯಂತ ನಿಧಾನವಾಗಿ ಇಳಿಯುವಂತೆ ಇದನ್ನು ವಿನ್ಯಾಸಗೊಳಿಸಲಾಗಿದ್ದು, ಇದು ಐಡಿಎಸ್‌ಎನ್ ವತಿಯಿಂದ ಆರ್ಬಿಟರ್, ರೋವರ್ ಹಾಗೂ ಬ್ಯಾಲಾಳುವಿನಲ್ಲಿರುವ ಇಸ್ರೋ ಕೇಂದ್ರದ ನಡುವಿನ ಸಂವಹನಕ್ಕೆ ಸಹಕಾರಿಯಾಗಲಿದೆ. ಇದರ ತೂಕ 1,471 ಕೆಜಿ ಮತ್ತು ಇದರ ವಿದ್ಯುತ್ ಉತ್ಪಾದನಾ ಸಾಮರ್ಥ್ಯ 650 ವ್ಯಾಟ್.
4. ಪ್ರಜ್ಞಾನ್ (ರೋವರ್)
ಚಂದ್ರನ ಮೇಲ್ಮೆ„ನಲ್ಲಿ ಓಡಾಡುತ್ತಾ ಅಲ್ಲಿ ನಾನಾ ವಿಧದ ಪರೀಕ್ಷೆಗಳನ್ನು ನಡೆಸಲಿರುವುದು ಇದೇ ಯಂತ್ರ. ಕೃತಕ ಬುದ್ಧಿಮತ್ತೆಯ ಆಧಾರದಲ್ಲಿ ರಚನೆಯಾದ ಈ ರೋಬೋಟಿಕ್ ವಾಹನ, ಒಮ್ಮೆ ಚಲನೆ ಆರಂಭಿಸಿದರೆ ಸತತವಾಗಿ 500 ಮೀಟರ್‌ವರೆಗೆ (ಅರ್ಧ ಕಿ.ಮೀ.) ಚಲಿಸಬಲ್ಲದು. ಸೌರಶಕ್ತಿಯಿಂದ ಕೆಲಸ ಮಾಡಲಿರುವ ಇದು, ತಾನು ಕಂಡುಕೊಂಡ ಮಾಹಿತಿಯ ಎಲ್ಲಾ ವಿವರಗಳನ್ನು ರೋವರ್‌ಗೆ ರವಾನಿಸುತ್ತದೆ. ಅಲ್ಲಿಂದ ಆ ಮಾಹಿತಿ ಆರ್ಬಿಟರ್‌ಗೆ ಹೋಗಿ ಆನಂತರ ಅದು ಇಸ್ರೋಕ್ಕೆ ಲಭಿಸುತ್ತದೆ. ಇದರ ಅತಿ ವಿಶೇಷವೆಂದರೆ, ಇದರ ಸಂವಹನ ಭಾಷೆ ಸಂಸ್ಕೃತ!
ಟೈಮ್‌ಲೈನ್
ಸೆ. 28, 2008: ಚಂದ್ರಯಾನ-2ಕ್ಕೆ ಕೇಂದ್ರ ಸರಕಾರದಿಂದ ಒಪ್ಪಿಗೆ
ಜು. 9-ಜು. 16, 2019: ಯೋಜನೆ ಅನುಷ್ಠಾನದ ಅವಧಿ
ಸೆ. 6, 2019: ಚಂದ್ರನ ಮೇಲೆ ಇಳಿಯಲಿರುವ ವಿಕ್ರಮ್ ಲ್ಯಾಂಡರ್; ರೋವರ್‌ನಿಂದ ಪ್ರಯೋಗಗಳು ಆರಂಭ
ಸೆ. 5, 2020: ಆರ್ಬಿಟರ್‌ನಿಂದ
1 ವರ್ಷದ ಕಾರ್ಯಾಚರಣೆ ಮುಕ್ತಾಯದ ಅಂದಾಜು ದಿನ.
ಪ್ರಮುಖ ವಿಶೇಷತೆಗಳು
ಅನ್ಯ ಆಕಾಶಕಾಯವೊಂದರ ಮೇಲೆ ತನ್ನ ಯಂತ್ರವನ್ನು ಇಳಿಸಿ ಅಧ್ಯಯನ ನಡೆಸುವಲ್ಲಿ ಭಾರತದ ಮೊದಲ ಪ್ರಯತ್ನ.
ಇದೇ ಮೊದಲ ಬಾರಿಗೆ ಚಂದ್ರನ ಅಧ್ಯಯನ ಸಂಪೂರ್ಣ ಸ್ವದೇಶಿ ತಂತ್ರಜ್ಞಾನದೊಂದಿಗೆ.
ಅನ್ಯ ಗ್ರಹದ ಮೇಲೆ ಸಾಫ್ಟ್
ಲ್ಯಾಂಡಿಂಗ್ ಆಗುತ್ತಿರುವ ಇಸ್ರೋದ ಮೊದಲ ಸ್ವದೇಶಿ ತಂತ್ರಜ್ಞಾನದ ಪರಿಕರ.
ಚಂದ್ರನ ಮೇಲೆ ಕಾಲಿಟ್ಟ ನಾಲ್ಕನೇ ರಾಷ್ಟ್ರವೆಂಬ ಹೆಗ್ಗಳಿಕೆ ಭಾರತಕ್ಕೆ
3.8ಟನ್: ಚಂದ್ರಯಾನ 2ರ ಪರಿಕರಗಳ ಒಟ್ಟಾರೆ ತೂಕ
3,82,000 ಕಿ.ಮೀ. ಭೂಮಿಯಿಂದ ಚಂದ್ರನವರೆಗೆ ಇರುವ ದೂರ
63ದಿನ. ಉಡಾವಣೆಗೊಂಡ ನಂತರ ಚಂದ್ರನ ಮೇಲಿಳಿಯಲು ತೆಗೆದುಕೊಳ್ಳುವ ಸಮಯ.
ಚಂದ್ರಯಾನಕ್ಕೆ ಮಹಿಳಾ ಕಾಣಿಕೆ
ಚಂದ್ರಯಾನ-2 ಯೋಜನೆಯಲ್ಲಿ ಇಬ್ಬರು ಮಹಿಳಾ ವಿಜ್ಞಾನಿಗಳು ಯೋಗದಾನ ನೀಡುತ್ತಿರುವುದು ವಿಶೇಷ. ಅವರ ಹೆಸರು, ರಿತು ಕರಿದಾಳ್ ಮತ್ತು ಮುತ್ತಯ್ಯ ವನಿತಾ. ಇಸ್ರೋದಿಂದ ನಡೆಸಲಾಗುತ್ತಿರುವ ಮೂರನೇ ಅಂತರ ಗ್ರಹ ಯೋಜನೆಯಿದು. ಮಂಗಳಯಾನದಲ್ಲೂ ಕರಿಧಾಲ್ ಇದ್ದರು. ಆ ಯೋಜನೆಯಲ್ಲಿ, ಅವರ ಜತೆಗೆ ಟಿ.ಕೆ. ಅನುರಾಧ, ನಂದಿನಿ ಹರಿನಾಥ್ ಎಂಬ ಮತ್ತಿಬ್ಬರು ವಿಜ್ಞಾನಿಗಳು ಇದ್ದರು.
ನಿಮಗಿದು ಗೊತ್ತೇ?
ಭೂಮಿಯ ದಕ್ಷಿಣ ಧ್ರುವವನ್ನು ಮಾನವ ಮೊದಲು ತಲುಪಿದ್ದು 1909ರಲ್ಲಿ. ಈ ಮಹಾಪಯಣಕ್ಕೆ 10 ತಿಂಗಳು, 9 ದಿನ ಬೇಕಾಗಿತ್ತು. ಅಲ್ಲಿನ ವಾತಾವರಣದ ಉಷ್ಣಾಂಶ -60 ಡಿಗ್ರಿ ಸೆಲ್ಸಿಯಸ್‌ನಿಂದ -10 ಡಿಗ್ರಿ ಸೆಲ್ಸಿಯಸ್‌ವರೆಗೆ ಉಷ್ಣಾಂಶ ಇರುವ ಆ ಸ್ಥಳಕ್ಕೆ ತೆರಳಿದ್ದು 16 ವಿಜ್ಞಾನಿಗಳು.
ಅದಾಗಿ, 110 ವರ್ಷಗಳ ನಂತರ, ಮಾನವ ಈಗ ಚಂದ್ರನ ದಕ್ಷಿಣ ಧ್ರುವವನ್ನು ಪರೀಕ್ಷಿಸಲು ಕೈ ಹಾಕಿದ್ದಾನೆ. ಈ ಪಯಣಕ್ಕೆ 2 ತಿಂಗಳು ಬೇಕಿದೆ. 14 ದಿನ ಪರೀಕ್ಷೆ ನಡೆಯಲಿದೆ. -157 ಡಿಗ್ರಿ ಸೆ. ನಿಂದ 121 ಡಿಗ್ರಿ ಸೆಲ್ಸಿಯಸ್ ಉಷ್ಣಾಂಶ ಇರುವ ಅಲ್ಲಿ ಕಾಲು ಇಡುತ್ತಿರುವುದು ಭಾರತ ಮಾತ್ರ.
ಭಾರತ
ಸಮಯ: ಜುಲೈ 14 -15 ಮಧ್ಯರಾತ್ರಿ 2.51ಕ್ಕೆ
ಸತೀಶ್ ಧವನ್ ಉಡಾವಣಾ ಕೇಂದ್ರ
ಶ್ರೀ ಹರಿಕೋಟ
365
ಆರ್ಬಿಟರ್ ಕಾರ್ಯಾಚರಣೆ ನಡೆಸಲಿರುವ ದಿನಗಳು
1 ಚಂದ್ರನ ದಿನ
ಲ್ಯಾಂಡರ್, ರೋವರ್ ಕಾರ್ಯಾಚರಣೆ ಅವಧಿ (ಭೂಮಿಯ 14 ದಿನಕ್ಕೆ ಸಮ)
500 ಮೀ.
ಚಂದ್ರನ ಮೇಲೆ ರೋವರ್ ಕಾರ್ಯಾಚರಣೆ ವ್ಯಾಪ್ತಿ
ಸೆ.6 ಚಂದ್ರನಲ್ಲಿ ಲ್ಯಾಂಡರ್ ಕಾಲಿಡುವ ದಿನ
ಈವರೆಗೆ ಚಂದ್ರನ ಅಧ್ಯಯನಗಳು ನಡೆದ ಜಾಗ
ಲೂನಾ 2 (1959)
ಲೂನಾ 9 (1966)
ಲೂನಾ 13 (1966)
ಲೂನಾ 16 (1970)
ಲೂನಾ 17 (1970)
ಲೂನಾ 20 (1972)
ಲೂನಾ 21 (1973)
ಲೂನಾ 24 (1976)
ಅಮೆರಿಕ
ಅಪೊಲೊ 11 (1959)
ಅಪೊಲೊ 12 (1969)
ಅಪೊಲೊ 14 (1971)
ಅಪೊಲೊ 15 (1971)
ಅಪೊಲೊ 16 (1972)
ಅಪೊಲೊ 17 (1972)
ಸರ್ವೇಯರ್ 1 (1966)
ಸರ್ವೇಯರ್ 3 (1967)
ಸರ್ವೇಯರ್ 5 (1967)
ಸರ್ವೇಯರ್ 6 (1967)
ಸರ್ವೇಯರ್ 7 (1968)
ಮಾಹಿತಿ: ಚೇತನ್ ಓ. ಆರ್. ವಿನ್ಯಾಸ: ಮಹಾಂತೇಶ ಎಸ್.ಟಿ.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.