Chandrayaan 3: ಶಿಶಿರನ ಮೇಲಿನ ನೀರನ್ನು ಯಾಕೆ ಹುಡುಕಬೇಕು? ಅದಕ್ಕೆ ಯಾಕಿಷ್ಟು ಮಹತ್ವ?
Team Udayavani, Aug 23, 2023, 10:53 AM IST
ಬೆಂಗಳೂರು: ಇಡೀ ವಿಶ್ವವೇ ಬೆರಗುಗಣ್ಣಿನಿಂದ ನೋಡುತ್ತಿರುವ ಭಾರತದ ಚಂದ್ರಯಾನ-3 ಇಂದು ಶಿಶಿರ ಮೈಸ್ಪರ್ಷಿಸಲಿದೆ. ಚಂದ್ರಯಾನ-3 ಮುಟ್ಟಲು ಉದ್ದೇಶಿಸಿರುವುದು ಚಂದ್ರನ ದಕ್ಷಿಣ ಧ್ರುವವನ್ನು. ಕಳೆದ ಬಾರಿ, ಚಂದ್ರಯಾನ-2 ಕೂಡ ಅಲ್ಲಿಯೇ ಇಳಿಯಲು ಪ್ರಯತ್ನಿಸಿ ವಿಫಲವಾಗಿತ್ತು. ಮೊನ್ನೆ ತಾನೇ ವಿಫಲಗೊಂಡ ರಷ್ಯಾದ ನೌಕೆಯೂ ಚಂದ್ರನ ದಕ್ಷಿಣ ಧ್ರುವದತ್ತಲೇ ಸಾಗಿತ್ತು. ಹಾಗಾದರೆ ದಕ್ಷಿಣ ಧ್ರುವದಲ್ಲಿ ಏನಿದೆ ಉತ್ತರದಲ್ಲಿಲ್ಲದ್ದು?
ನೀರಿಗಾಗಿ ಹುಡುಕಾಟ
ಚಂದ್ರನ ದಕ್ಷಿಣ ಧ್ರುವದಲ್ಲಿ ಘನೀಭವಿಸಿದ ಸ್ಥಿತಿಯಲ್ಲಿ ನೀರು ಇದೆ. ಇದು ಇಸ್ರೋವಿನ ಚಂದ್ರಯಾನ-1ರಿಂದ ದೃಢವಾಗಿದೆ. ಇದಕ್ಕೆ ಹಿಂದೆ, 1960ರ ಸುಮಾರಿಗೇ ಅಂದರೆ, ಚಂದ್ರನ ಮೇಲೆ ಮಾನವ ಸಹಿತ ಅಪೊಲೊ ನೌಕೆ ಇಳಿಯುವ ಮುನ್ನವೇ ಚಂದ್ರನ ಮೇಲೆ ನೀರು ಇರಬಹುದು ಎಂದು ವಿಜ್ಞಾನಿಗಳು ಊಹಿಸಿದ್ದರು. ಅಪೊಲೊ ಯಾನಿಗಳು ಹೊತ್ತು ತಂದ ಶಿಲೆಗಳು ಆ ಕಾಲದಲ್ಲಿ ಈ ಬಗ್ಗೆ ಯಾವುದೇ ಸುಳಿವನ್ನು ನೀಡಿರಲಿಲ್ಲ.
ಇದನ್ನೂ ಓದಿ:Rakhi Sawant: ಆತ ನನ್ನ ನಗ್ನ ವಿಡಿಯೋಗಳನ್ನು ಸೆರೆ ಹಿಡಿದು ಮಾರುತ್ತಿದ್ದ.. ನಟಿ ರಾಖಿ ಆರೋಪ
ಆದರೆ 2008ರಲ್ಲಿ ಅತ್ಯಾಧುನಿಕ ತಂತ್ರಜ್ಞಾನದೊಂದಿಗೆ ವಿಜ್ಞಾನಿಗಳು ಈ ಶಿಲೆಗಳನ್ನು ಮರುಪರೀಕ್ಷೆಗೆ ಒಳಪಡಿಸಿದಾಗ ಅವುಗಳಲ್ಲಿ ಜಲಜನಕದ ಅಂಶ ಪತ್ತೆಯಾಯಿತು. ಮರುವರ್ಷ ಅಂದರೆ 2009ರಲ್ಲಿ ಭಾರತ ಕಳುಹಿಸಿದ್ದ ಚಂದ್ರಯಾನ-1ರಲ್ಲಿ ಅಮೆರಿಕದ ನಾಸಾ ಇರಿಸಿದ್ದ ಶೋಧ ಉಪಕರಣವು ಚಂದ್ರನಲ್ಲಿನ ನೀರಿನಂಶವನ್ನು ಖಚಿತಪಡಿಸಿತ್ತು. ಅದೇ ವರ್ಷ ನಾಸಾ ಕಳುಹಿಸಿದ್ದ ಇನ್ನೊಂದು ಚಂದ್ರನೌಕೆ ಚಂದ್ರನ ದಕ್ಷಿಣ ಧ್ರುವದ ನೆಲದ ಕೆಳಗೆ ಘನೀಕೃತ ನೀರು ಇರುವುದನ್ನು ಕಂಡುಕೊಂಡಿತ್ತು. ಇದಕ್ಕೆ ಮುನ್ನ 1998ರಲ್ಲಿ ತೆರಳಿದ್ದ ಲೂನಾರ್ ಪ್ರಾಸ್ಟೆಕ್ಟರ್ ನೌಕೆಯು ಚಂದ್ರನ ದಕ್ಷಿಣ ಧ್ರುವದಲ್ಲಿ ಇರುವ, ಎಂದೂ ಸೂರ್ಯನ ಕಿರಣಗಳು ಸೋಕದ ಕುಳಿಗಳಲ್ಲಿ ನೀರು ಘನೀಭವಿಸಿದ ರೂಪದಲ್ಲಿ ದಟ್ಟವಾಗಿ ಇದೆ ಎಂದಿತ್ತು.
ಅಲ್ಲಿ ನೀರಿಗೆ ಏಕಿಷ್ಟು ಮಹತ್ವ?
ಭೂಮಿಯಲ್ಲಿ ಸೃಷ್ಟಿಯಾದ ಅನುಕೂಲಕರ ವಾತಾವರಣದಿಂದಾಗಿ ನೀರು ಉಂಟಾಯಿತು ಎನ್ನುವುದು ಒಂದು ವಾದ. ಭೂಮಿ ರೂಪುಗೊಂಡ ಬಳಿಕ ಒಂದಾನೊಂದು ಕಾಲದಲ್ಲಿ ನೀರು ಹೊಂದಿದ್ದ ಇನ್ನೊಂದು ಆಕಾಶಕಾಯ ಭೂಮಿಗೆ ಅಪ್ಪಳಿಸಿದ ಬಳಿಕ ಭೂಮಿಯಲ್ಲಿ ನೀರು ಬಂತು ಎಂಬುದು ಇನ್ನೊಂದು ವಾದ. ಚಂದ್ರನ ದಕ್ಷಿಣ ಧ್ರುವದಲ್ಲಿ ಇರುವ ನೀರಿನಂಶವನ್ನು ಅಧ್ಯಯನ ಮಾಡುವುದರಿಂದ ಚಂದ್ರನಲ್ಲಿ ಜ್ವಾಲಾಮುಖಿಗಳು ಇದ್ದವೇ, ನೀರಿನಂಶ ಬಂದದ್ದು ಎಲ್ಲಿಂದ- ಹೇಗೆ, ಭೂಮಿಗೆ ಅಪ್ಪಳಿಸಿದ ಕ್ಷುದ್ರ ಗ್ರಹ, ಆಕಾಶ ಕಾಯಗಳು ಹೊತ್ತು ತಂದ ಅಂಶಗಳು ಯಾವುವು ಎಂಬಿತ್ಯಾದಿ ವಿಷಯಗಳ ಬಗ್ಗೆ ತಿಳಿಯಲು ಸಾಧ್ಯ. ಚಂದ್ರನ ಘನೀಕೃತ ನೀರನ್ನು ರಾಸಾಯನಿಕವಾಗಿ ವಿಭಜಿಸುವುದು ಸಾಧ್ಯವಾದರೆ ಮುಂದೆ ಆ ಜಲಜನಕ ಮತ್ತು ಆಮ್ಲಜನಕಗಳನ್ನು ಚಂದ್ರನಲ್ಲಿ ಗಣಿಗಾರಿಕೆ, ಮಂಗಳಯಾನಕ್ಕೆ ಇಂಧನವಾಗಿ, ಚಂದ್ರಯಾನಿಗಳ ಉಸಿರಾಟಕ್ಕೆ ಬಳಸುವ ದೂರದೃಷ್ಟಿಯೂ ಇದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Mandya :ಗಂಡ ಗದ್ಯ, ಹೆಂಡತಿ ಪದ್ಯ, ಮಕ್ಕಳು ರಗಳೆ!: ಹಾಸ್ಯ ಸಾಹಿತಿ ವೈ.ವಿ.ಗುಂಡೂರಾವ್
Mandya Sahitya Sammelana: ಅಕ್ಷರ ಜಾತ್ರೆಯಲ್ಲಿ “ಹವಾ’ ಎಬ್ಬಿಸಿದ ತೊಟ್ಟಿ ಮನೆ..!
Mandya: ನುಡಿ ಹಬ್ಬದ ಔತಣ ಸವಿಯಲು ಜನವೋ ಜನ- ವೃದ್ಧರಿಗೆ ವಿಶೇಷ ಕೌಂಟರ್
World Meditation Day; ಶರೀರಕ್ಕೆ ಊಟ, ಆತ್ಮಕ್ಕೆ ಧ್ಯಾನ
Meditation; ಮಾನಸಿಕ ಆರೋಗ್ಯಕ್ಕೆ ದಿವ್ಯೌಷಧ: ಡಿ.21ರಂದೇ ಏಕೆ ಧ್ಯಾನ ದಿನ?
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
87th Kannada Sahitya Sammelana: ದೃಶ್ಯರಂಗ ತಂಡದವರಿಂದ ಸಿನಿಮಾಗಾಗಿ “ನಿಧಿ ’ ಮಾರಾಟ!
Mangaluru: ಕ್ರಿಸ್ಮಸ್ ಸಂಭ್ರಮ; ‘ಮಿನುಗು ತಾರೆ’ಗಳ ಮೆರುಗು
Health: ಶೀಘ್ರ ಕ್ಯಾನ್ಸರ್ ಪತ್ತೆ, ಶಸ್ತ್ರಚಿಕಿತ್ಸೆ ತಿಳಿವಳಿಕೆ ಯಾಕೆ ಮುಖ್ಯ?
ಕಲಬುರಗಿ- ಮೈಸೂರಲ್ಲಿ ನಿಮ್ಹಾನ್ಸ್ ಮತ್ತು ಡಯಾಬಿಟಾಲಜಿ ಘಟಕ ಸ್ಥಾಪನೆಗೆ ಕ್ರಮ: ಸಿಎಂ ಭರವಸೆ
Harapanahalli: ಪ್ರತಿಷ್ಠೆಯ ಕಣವಾದ ಬಿ90 ಸೊಸೈಟಿ ಚುನಾವಣೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.