![ಜರ್ಮನಿ ಅಧ್ಯಕ್ಷರ ಎಕ್ಸ್ ಖಾತೆ ಹ್ಯಾಕ್: ಬಿಹಾರ ಇಲಾಖೆ ಹೆಸರಿಟ್ಟ ಕಿಡಿಗೇಡಿಗಳು](https://www.udayavani.com/wp-content/uploads/2025/02/9-21-415x249.jpg)
![ಜರ್ಮನಿ ಅಧ್ಯಕ್ಷರ ಎಕ್ಸ್ ಖಾತೆ ಹ್ಯಾಕ್: ಬಿಹಾರ ಇಲಾಖೆ ಹೆಸರಿಟ್ಟ ಕಿಡಿಗೇಡಿಗಳು](https://www.udayavani.com/wp-content/uploads/2025/02/9-21-415x249.jpg)
Team Udayavani, Jul 29, 2021, 10:10 AM IST
ಬ್ಯಾಂಕ್‌ಗಳು ಕೆಲಸ ಮಾಡುವ ಅವಧಿಯಲ್ಲಿ ಮಾತ್ರ ಕಾರ್ಯ ನಿರ್ವಹಿ ಸುವ ರಾಷ್ಟ್ರೀಯ ಸ್ವಯಂ ಚಾಲಿತ ಕ್ಲಿಯ ರಿಂಗ್ ಹೌಸ್ (ಎನ್‌ಎಸಿಎಚ್) ಸೇವೆಯು ಆಗಸ್ಟ್ 1ರಿಂದ ವಾರದ ಎಲ್ಲ ದಿನಗಳಲ್ಲೂ ಗ್ರಾಹಕರಿಗೆ ಲಭಿಸಲಿದೆ.
ಏನು ಬದಲಾವಣೆ:
ಆರ್‌ಬಿಐಯು ಎನ್‌ಎಸಿಎಚ್‌ನ ನಿಯಮಗಳನ್ನು ಬದಲಾಯಿಸಿದ್ದು, ಇದು ಮುಂದಿನ ತಿಂಗಳಿನಿಂದ ಜಾರಿಯಾಗಲಿದೆ. ಇದರಿಂದ ವಾರಾಂತ್ಯ ಮತ್ತು ರಜಾದಿನಗಳಲ್ಲೂ ಸಂಬಳ, ಪಿಂಚಣಿಯ ಪಾವತಿ ಪ್ರಕ್ರಿಯೆಗಳನ್ನು ನಡೆಸಲು ಸಾಧ್ಯವಾಗಲಿದೆ. ತಿಂಗಳ ಆರಂಭಿಕ ದಿನಗಳು ಅಥವಾ ಸಾರ್ವಜನಿಕ ರಜೆಯ ದಿನಗಳು ವಾರಾಂತ್ಯದಲ್ಲಿ ಬಂದಾಗ ವೇತನ, ಪಿಂಚಣಿ, ಇಎಂಐ ಪಾವತಿಗೆ ಸರಕಾರಿ ಇಲಾಖೆಗಳು, ಕಂಪೆನಿಗಳು ಮತ್ತು ಜನರು ಮುಂದಿನ ಕೆಲಸದ ದಿನದವರೆಗೆ ಕಾಯಬೇಕಾಗುತ್ತದೆ. ಆದರೆ ಸರಕಾರದ ಈ ನಿರ್ಧಾರದಿಂದಾಗಿ ಆಗಸ್ಟ್ 1ರಿಂದ ವಾರಾಂತ್ಯದಲ್ಲೂ ನಿಮ್ಮ ಖಾತೆಗೆ ಸಂಬಳ ಪಾವತಿಯಾಗಿರುವ ಸಂದೇಶ ನಿಮ್ಮ ಮೊಬೈಲ್‌ಗೆ ಬರಲಿದೆ.
ಜೂನ್ ತಿಂಗಳಲ್ಲಿ ನಡೆದ ಆರ್‌ಬಿಐನ ಕ್ರೆಡಿಟ್ ನೀತಿ ಪರಿಶೀಲನೆಯ ಸಂದರ್ಭದಲ್ಲಿ ಸೋಮವಾರದಿಂದ ಶುಕ್ರವಾರದ ವರೆಗೆ ಬ್ಯಾಂಕ್‌ಗಳು ತೆರೆದಿರುವಾಗ ಮಾತ್ರ ಲಭ್ಯವಿರುವ ಎನ್‌ಸಿಎಚ್ ಸೇವೆಯನ್ನು ಗ್ರಾಹಕರ ಅನುಕೂಲಕ್ಕಾಗಿ ವಾರದ ಎಲ್ಲ ದಿನಗಳಿಗೂ ವಿಸ್ತರಿಸುವುದಾಗಿ ಆರ್‌ಬಿಐ ಗವರ್ನರ್ ಶಕ್ತಿಕಾಂತ್ ದಾಸ್ ಘೋಷಿಸಿದ್ದರು.
ಎನ್‌ಎಸಿಎಚ್ ಎಂದರೇನು? :
ರಾಷ್ಟ್ರೀಯ ಸ್ವಯಂ ಚಾಲಿತ ಕ್ಲಿಯ ರಿಂಗ್ ಹೌಸ್ ಬೃಹತ್ ಪಾವತಿ ವ್ಯವಸ್ಥೆ ಯಾಗಿದ್ದು ಇದನ್ನು ನ್ಯಾಶನಲ್ ಪೇಮೆಂಟ್ಸ್ ಕಾರ್ಪೊರೇಶನ್ ಆಫ್ ಇಂಡಿಯಾ (ಎನ್‌ಪಿಸಿಐ) ನಿರ್ವಹಿಸು ತ್ತಿದೆ. ಬ್ಯಾಂಕ್, ಹಣಕಾಸು, ಕಾರ್ಪೊ ರೇಟ್ ಸಂಸ್ಥೆಗಳು ಮತ್ತು ಸರಕಾರದ ಹಣ ಕಾಸು ವ್ಯವಹಾರಕ್ಕೆ ಇದು ಅನುಕೂಲಕರ ವಾಗಿದೆ. ಇದೊಂದು ಕೇಂದ್ರೀಕೃತ ವ್ಯವಸ್ಥೆ ಯಾಗಿದ್ದು, ದೇಶಾದ್ಯಂತ ಇರುವ ಹಣಕಾಸು ಸಂಸ್ಥೆಗಳನ್ನು ಇದು ಒಂದು ಚೌಕಟ್ಟಿನಡಿ ಸೇರಿಸುತ್ತದೆ.
ಪ್ರಾರಂಭವಾಗಿದ್ದು ಯಾವಾಗ?:
2016 ಮೇ 1ರಂದು ಜಾರಿಯಾದ ಎಲೆಕ್ಟ್ರಾನಿಕ್ ಕ್ಲಿಯರಿಂಗ್ ಸೇವೆಯೊಂದಿಗೆ ಬ್ಯಾಂಕ್ ಖಾತೆಯಿಂದ ಸ್ವಯಂ ಡೆಬಿಟ್ ಸೂಚನೆಯನ್ನು ನೀಡಲು ಎನ್‌ಎಸಿಎಚ್ ಬಳಸಲಾಯಿತು. ಆಧಾರ್ ಐಡಿಗಳನ್ನು ಬಳಸಿಕೊಂಡು ಎನ್‌ಎಸಿಎಚ್ ಪಾವತಿ ವ್ಯವಹಾರವನ್ನು ನಡೆಸಲಾಗುತ್ತಿದೆ.
ಯಾರಿಗೆ ಅನುಕೂಲ? :
ಇದು ಲಾಭಾಂಶ, ಬಡ್ಡಿ, ಸಂಬಳ, ಪಿಂಚಣಿ ಪಾವತಿಯಿಂದ ಹಿಡಿದು ಸಾಲ ವರ್ಗಾವಣೆವರೆಗೂ ಅನುಕೂಲಕರ. ಸಬ್ಸಿಡಿ, ಲಾಭಾಂಶ, ಬಡ್ಡಿ, ಸಂಬಳ, ಪಿಂಚಣಿ, ವಿದ್ಯುತ್, ಅಡುಗೆ ಅನಿಲ, ದೂರವಾಣಿ, ನೀರು, ಇಎಂಐ, ಮ್ಯೂಚುವಲ್ ಫಂಡ್‌ಗಳಲ್ಲಿನ ಹೂಡಿಕೆ ಮತ್ತು ವಿಮಾ ಕಂತುಗಳ ಸಹಿತ ವಿವಿಧ ಹಣಕಾಸು ವ್ಯವಹಾರಗಳನ್ನು ಸಮಯಕ್ಕೆ ಸರಿಯಾಗಿ ಪಾವತಿಸಲು ಯಾ ನಡೆಸಲು ಸಾಧ್ಯ.
ಎನ್‌ಎಸಿಎಚ್ ಸರಕಾರದ ವಿವಿಧ ಯೋಜನೆಗಳ ಲಾನುಭವಿ ಗಳ ಖಾತೆಗೆ ನೇರ ನಗದು ವರ್ಗಾ ವಣೆಗೆ ಜನಪ್ರಿಯ ವಿಧಾನವಾಗಿ ಹೊಹೊ ಮ್ಮಿದೆ. ಇದರಿಂದ ಕೋವಿಡ್- 19 ಸಾಂಕ್ರಾಮಿಕ ಸಮಯದಲ್ಲಿ ಸರಕಾರದ ಸಬ್ಸಿಡಿಗಳನ್ನು ಸಮಯೋಚಿತವಾಗಿ ಮತ್ತು ಪಾರದರ್ಶಕವಾಗಿ ವರ್ಗಾ ಯಿಸಲು ಸಾಧ್ಯವಾಯಿತು ಎಂದು ಆರ್‌ಬಿಐ ತಿಳಿಸಿದೆ.
ಏನು ಲಾಭ? :
ಎನ್‌ಎಸಿಎಚ್‌ನಿಂದಾಗಿ ಬ್ಯಾಂಕ್‌ಗಳು, ಗ್ರಾಹಕರು, ಉದ್ಯಮಿಗಳು ತಿಂಗಳಿಗೊಮ್ಮೆ ಏಕಕಾಲಕ್ಕೆ ದೊಡ್ಡ ಮೊತ್ತದ ಹಣವನ್ನು ಪಾವತಿಸಲು ಸಾಧ್ಯವಾಗುತ್ತದೆ. ಮಾನವ ಶ್ರಮವಿಲ್ಲದೆ ನಡೆಯುವ ಕಾರ್ಯವಾದ್ದರಿಂದ ವ್ಯವಹಾರ ನಡೆಸುವುದು ಸುಲಭ.
ಡಿಜಿಟಲ್‌ನಲ್ಲಿ ಸಂಪೂರ್ಣ ಮಾಹಿತಿ ಸಿಗುವುದರಿಂದ ಪಾವತಿಗೆ ಸಂಬಂಧಿಸಿ ಯಾವುದೇ ದಾಖಲೆಗಳನ್ನು ಇಟ್ಟುಕೊಳ್ಳಬೇಕಾಗಿಲ್ಲ. ಚೆಕ್ ಕ್ಲಿಯರೆನ್ಸ್‌ನ ಆವಶ್ಯಕತೆ ಇರುವುದಿಲ್ಲ.ಪಾವತಿ ಪ್ರಕ್ರಿಯೆಗಳು ಶೀಘ್ರದಲ್ಲಿ ನಡೆಯುವುದರಿಂದ ಸಮಯ ವ್ಯರ್ಥವಾಗುವುದಿಲ್ಲ ಮಾತ್ರವಲ್ಲದೆ ಸಮಯಕ್ಕೆ ಸರಿಯಾಗಿ ಪಾವತಿ ಪ್ರಕ್ರಿಯೆಗಳು ನಡೆಯುತ್ತವೆ.
Stock market :ವಿದೇಶಿ ಬಂಡವಾಳ ಹಿಂತೆಗೆತ: ಸತತ 8ನೇ ದಿನವೂ ಸೆನ್ಸೆಕ್ಸ್ ಕುಸಿತ
New Income Tax Bill: ಹೊಸ ಆದಾಯ ತೆರಿಗೆ ಮಸೂದೆ ಮಂಡಿಸಿದ ಕೇಂದ್ರ ವಿತ್ತ ಸಚಿವೆ
Less Burden: ಆರ್‌ಬಿಐ ರೆಪೋ ದರ ಕಡಿತದ ಬೆನ್ನಲ್ಲೇ ಗೃಹ ಸಾಲಗಳಿಗೂ ರಿಲೀಫ್
Stock Market: ಷೇರುಪೇಟೆ ಸೂಚ್ಯಂಕ 448 ಅಂಕ ಏರಿಕೆ; ಜಿಗಿತಕ್ಕೆ ಈ 3 ಅಂಶಗಳು ಕಾರಣ!
Gold-Silver: ಬೆಂಗಳೂರಲ್ಲಿ 10 ಗ್ರಾಂ ಚಿನ್ನಕ್ಕೆ 710 ರೂ. ಇಳಿಕೆ, ಬೆಳ್ಳಿ ಏರಿಕೆ
ಜರ್ಮನಿ ಅಧ್ಯಕ್ಷರ ಎಕ್ಸ್ ಖಾತೆ ಹ್ಯಾಕ್: ಬಿಹಾರ ಇಲಾಖೆ ಹೆಸರಿಟ್ಟ ಕಿಡಿಗೇಡಿಗಳು
Anekal: ಪತ್ನಿಯನ್ನು ಹೊತ್ತೂಯ್ದು 2ನೇ ಮಹಡಿಯಿಂದ ತಳ್ಳಿ ಕೊಂದ!
Udayavani-MIC ನಮ್ಮ ಸಂತೆ ಸಂಭ್ರಮ: ಜೇನುಗೂಡು, ಜೇನು ಹನಿ
Air Lift: ಪಂಜಾಬ್‌ನಲ್ಲಿ ರೈತ ಮುಖಂಡ ಶಾಂತಕುಮಾರ್‌ಗೆ ಅಪಘಾತ; ಬೆಂಗಳೂರಿಗೆ ಏರ್‌ಲಿಫ್ಟ್
Kollywood: ಖ್ಯಾತ ನಟ ಯೋಗಿ ಬಾಬು ಕಾರು ಅಪಘಾತ?: ನಟ ಹೇಳಿದ್ದೇನು?
You seem to have an Ad Blocker on.
To continue reading, please turn it off or whitelist Udayavani.