![Turkey: ಟೇಕ್ ಆಫ್ ವೇಳೆ ಆಂಬ್ಯುಲೆನ್ಸ್ ಹೆಲಿಕಾಪ್ಟರ್ ಪತನ; ನಾಲ್ವರು ಮೃ*ತ್ಯು](https://www.udayavani.com/wp-content/uploads/2024/12/15-7-415x249.jpg)
Yakshagana ಆಯುಧ ವೇಷದ ಲಕ್ಷಣ ಸೂಚಕ; ಪರಾಮರ್ಶೆ ಇಂದಿನ ಅಗತ್ಯ
ಕಲಾವಿದರು ಎದ್ದು, ಬಿದ್ದು ರಂಗಸ್ಥಳದಲ್ಲಿ ಹೊರಳಾಡಿ ಅಭಿನಯಿಸುವ ಔಚಿತ್ಯವೇನು?
Team Udayavani, Sep 20, 2024, 1:45 AM IST
![Yaksha](https://www.udayavani.com/wp-content/uploads/2024/09/Yaksha-620x410.jpg)
ಯಕ್ಷಗಾನದಲ್ಲಿ ಪುರುಷ ವೇಷಗಳು, ಆ ವೇಷಗಳಿಗನುಸಾರ ಆಯುಧ ಧರಿಸಿ ಕಾಣಿಸಿಕೊಳ್ಳುವುದು ರೂಢಿ. ಉದಾ: ಈಶ್ವರನ ವೇಷ. ಸದಾ ತ್ರಿಶೂಲಧಾರಿಯಾಗಿರುತ್ತಾನೆ. ತ್ರಿಶೂಲ ಇಲ್ಲವಾದರೆ ಅದು ಈಶ್ವರನ ವೇಷ ಎಂದು ಅನ್ನಿಸುವುದೇ ಇಲ್ಲ. ಹಾಗೆ ಕಿರೀಟ, ಮುಂಡಾಸಿನ, ಕೇದಿಗೆ ಮುಂದಲೆ ವೇಷಗಳು ಹಾಗೂ ಕಸೆ ಸ್ತ್ರೀ ವೇಷಗಳು ಬಿಲ್ಲು ಬಾಣ, ಖಡ್ಗ ಇತ್ಯಾದಿ ಆಯುಧಗಳನ್ನು ಹಿಡಿದು ನಿರ್ವಹಣೆ ನೀಡುವುದು ಲಾಗಾಯ್ತಿ ನಿಂದ ಬಂದ ಕ್ರಮ.
ಆಯುಧ ಆ ವೇಷದ ಲಕ್ಷಣವನ್ನು ಸಾಂಕೇತಿ ಸುತ್ತದೆ. ಅದು ವೇಷ ಕ್ರಮ. ಸದಾ ಇರತಕ್ಕದ್ದು. ಇತ್ತೀಚೆಗೆ ಕೆಲವು ವೇಷ ಧಾರಿಗಳು ಕೆಲವು ಸಂದರ್ಭಗಳಲ್ಲಿ ಆಯುಧಗಳನ್ನು ಬದಿಗಿರಿಸಿ ಕುಣಿದು ಅಭಿನಯಿಸುವುದನ್ನು ಕಾಣುತ್ತಿದ್ದೇವೆ. ಇದರ ಯುಕ್ತಾ ಯುಕ್ತತೆಯ ಪರಾಮರ್ಶೆ ಇಂದಿನ ಅಗತ್ಯ.
ಆಯುಧ ಅಭಿನಯಕ್ಕೆ ತೊಡಕಾ ಗುತ್ತದೆ ಎಂಬ ಅಭಿಪ್ರಾಯ ಈಗಿನ ಕೆಲವು ಕಲಾವಿದರಿಗೆ ಇರಬಹುದು. ವಸ್ತುವಿನ ಸ್ಥಾಯೀಭಾವವನ್ನು ಮನೋಜ್ಞವಾಗುವಂತೆ ಪ್ರಕಟಿಸಿ, ಪ್ರೇಕ್ಷಕರಲ್ಲಿ ಸದಭಿರುಚಿಯನ್ನು ಪ್ರೇರೇಪಿ ಸುವುದು ದೃಶ್ಯ ಮಾಧ್ಯ ಮದ ಉದ್ದೇಶ. ಈ ಬಗ್ಗೆ ಆಂಗಿಕ ಚಲನೆ, ಸಂಜ್ಞೆ, ಸಂಕೇತ ಹಾಗೂ ಸ್ವರಗಳು ಸಹಕಾರಿ. ಸರಳವಾಗಿ ಹೇಳುವುದಾದರೆ ಅದುವೇ ಅಭಿ ನಯ ಹಾಗೂ ಉದ್ದೇಶ. ಗೀತ, ವಾದನ, ನರ್ತನ, ಆಹಾರ್ಯ ಹಾಗೂ ವಾಚಿಕ ಎಂಬ ಐದು ಪರಿಕರ ಗಳಿವೆ. ಇವುಗಳೆಲ್ಲವೂ ಏಕಕಾಲದಲ್ಲಿ ಸ್ಥಾಯೀಭಾವದ ಅಭಿವ್ಯಕ್ತಿಗೆ ಪೂರಕವಾಗಿ ಕಾರ್ಯನಿರ್ವ ಹಿಸುತ್ತವೆ. ಈ ಐದರ ನಡುವೆ ಇರುವ ನರ್ತನ, ಯಕ್ಷಗಾನದ ವಾಡಿಕೆಯ ಭಾಷೆಯಲ್ಲಿ ಕುಣಿತವು, ತಾಳ ಪ್ರಧಾನವಾದ, ಲಯ ವಿನ್ಯಾ ಸದ, ವಿವಿಧ ನಡೆ ಮತ್ತು ಗತಿ ಭೇದಗಳಿಂದ ಕೂಡಿದ, ಮುಖ, ದೃಷ್ಟಿ ಹಾಗೂ ಹಸ್ತಯುಕ್ತವಾದುದು.
ಮುದ್ರೆಗಳ ಬಳಕೆ ಯಕ್ಷಗಾನದಲ್ಲಿ ಇಲ್ಲ. ಸಾಮಾನ್ಯವಾಗಿ ಅಗೋಚರ ವಸ್ತುವಿನ ವರ್ಣನೆಗೆ ಮುದ್ರೆ ಬಳಕೆ ಹೊರತು ಎದುರಿಗಿರುವ ಕಮಲ ಮುಖೀಯ ವರ್ಣನೆಗೆ ಅಲ್ಲ ಎಂಬುದು ವಿದ್ವಾಂಸರ ಅಭಿಮತ. ಯಕ್ಷಗಾನದಲ್ಲಿ ಅದರ ಬಳಕೆ ಹೇಗೆ ಹಾಗೂ ಯಾವ ಪ್ರಮಾಣದಲ್ಲಿ ಸೂಕ್ತ ಎಂಬ ಬಗ್ಗೆ ಚಿಂತನ-ಮಥನಕ್ಕೆ ಅವಕಾಶವಿದೆ. ಆದರೆ ಕೈಯಲ್ಲಿ ಆಯುಧ ಸಹಿತವಾಗಿಯೂ ಅಚ್ಚು ಕಟ್ಟಾಗಿ ಪಾತ್ರ ನಿರ್ವಹಿಸಲು ಸಾಧ್ಯ ಎಂಬುದನ್ನು ಹಿಂದಿನ ಕಲಾವಿದರು ತೋರಿಸಿದ್ದಾರೆ.
“ಮಾನಿನಿ ಮಣಿಯೇ ಬಾರೇ…’ ಎಂಬ ಪದಕ್ಕೆ ವೀರಭದ್ರ ನಾಯ್ಕರು ಆಯುಧ ಸಹಿತ ಕುಣಿದು ನಿರ್ವಹಿಸಿದ ರೀತಿಯನ್ನು ಕಂಡ ನೆನಪು ಸದಾ ಹಸುರು. ಉತ್ತಮ ನಿದರ್ಶನ. ಮಾದರಿ ಅಭಿನಯವೇ ಸರ್ವಸ್ವವಲ್ಲ. ಪಾತ್ರ ಪೋಷಣೆಗೆ ಇತರ ಅಂಗಗಳು ಇವೆ. ಅವುಗಳನ್ನು ಸಮರ್ಥವಾಗಿ ಬಳಸುವುದನ್ನು ಬಿಟ್ಟು ಕಲಾವಿದರು ಎದ್ದು, ಬಿದ್ದು ರಂಗಸ್ಥಳದಲ್ಲಿ ಹೊರಳಾಡಿ ಅಭಿನಯಿಸುವ ಔಚಿತ್ಯವೇನು? ಅಭಿನಯಕ್ಕೆ ಹೆಚ್ಚು ಒತ್ತು ನೀಡಿದ ಹಾಗೆ ಹೆಜ್ಜೆಗಳು ಲುಪ್ತವಾಗುವ ಸಾಧ್ಯತೆಯನ್ನು ಲಕ್ಷ್ಯದಲ್ಲಿ ಇರಿಸಿಕೊಳ್ಳಬೇಕಾಗಿದೆ. ಹಾರಾಡಿ ಕುಷ್ಟ ಗಾಣಿಗರಂಥವರ ಕುಣಿತ ಕಣ್ಮರೆಯಾಗಿದೆ. ಯಾರೂ ಕಲಿತು ಮುಂದುವರಿಸಲಿಲ್ಲ. ಒಂದು ಬಂದು ಇನ್ನೊಂದು ಹೋದರೆ ಸುಧಾರಣೆ ಎಂದಾದೀತೇ!
ಅಭಿನಯದ ನೆಪದಲ್ಲಿ ಈಗ ಕಿರೀಟ, ಮುಂಡಾಸಿನ ವೇಷಗಳು ಅತಿಯಾದ ಬಾಗು ಬಳಕುವಿಕೆ ಪ್ರದರ್ಶಿಸುತ್ತಿವೆ. ಇದು ಕಲಿಕೆಯ ದೋಷವೂ ಇರಬಹುದು. ಹಿಂದೆ ಯಕ್ಷಗಾನದ ಕುಣಿತ ಅಭ್ಯಾಸ ಮಾಡುವಾಗ ಎರಡು ಸೇರು ಅಕ್ಕಿ (2ಕೆ.ಜಿ.) ಮೂಟೆ ತಲೆ ಮೇಲಿಟ್ಟು ಕೊಂಡು ಅಭ್ಯಾಸ ಮಾಡಬೇಕಿತ್ತಂತೆ. ಆಗ ಅವಯವಗಳು, ನಡು, ಗ್ರೀವ ಚಲನೆಗಳು ನಿಯಂತ್ರಣದಲ್ಲಿ ಇರುತ್ತವೆ. ನಾವು ಯಕ್ಷಗಾನದಲ್ಲಿ ರಾಜ ಮಹಾರಾಜರನ್ನು ತೋರಿಸು ತ್ತೇವೆ. ಅವರು ಪ್ರಭುಗಳು, ಪ್ರಜೆಗಳಿಗೆ ಸಿಂಹಪ್ರಾಯರು, ಪ್ರಜಾ ರಕ್ಷಣೆಯಲ್ಲಿ ಯೋಧರು. ಅವರ ನಡೆ, ನುಡಿ, ಆಂಗಿಕ ಚಲನೆ ಮತ್ತು ಸುಖ-ದುಃಖ, ಮೋಹ ಇತ್ಯಾದಿ ಭಾವಗಳಲ್ಲಿಯೂ ಗಾಂಭೀರ್ಯ ತುಂಬಿಕೊಂಡಿರುತ್ತದೆ ಎಂಬ ಗ್ರಹಿಕೆ ಕಲಾವಿದರಲ್ಲಿ ಇರಬೇಕಾದುದು ವಿಹಿತ.
-ಬೇಳೂರು ರಾಘವ ಶೆಟ್ಟಿ
ಟಾಪ್ ನ್ಯೂಸ್
![Turkey: ಟೇಕ್ ಆಫ್ ವೇಳೆ ಆಂಬ್ಯುಲೆನ್ಸ್ ಹೆಲಿಕಾಪ್ಟರ್ ಪತನ; ನಾಲ್ವರು ಮೃ*ತ್ಯು](https://www.udayavani.com/wp-content/uploads/2024/12/15-7-415x249.jpg)
![](https://www.udayavani.com/wp-content/uploads/2024/03/IndianClicks_GVega_300x250_03212024_1_3.gif)
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
![Mandya :ಗಂಡ ಗದ್ಯ, ಹೆಂಡತಿ ಪದ್ಯ ಮಕ್ಕಳು ರಗಳೆ: ಹಾಸ್ಯ ಸಾಹಿತಿ ವೈ.ವಿ.ಗುಂಡೂರಾವ್](https://www.udayavani.com/wp-content/uploads/2024/12/Gundu-150x97.jpg)
Mandya :ಗಂಡ ಗದ್ಯ, ಹೆಂಡತಿ ಪದ್ಯ, ಮಕ್ಕಳು ರಗಳೆ!: ಹಾಸ್ಯ ಸಾಹಿತಿ ವೈ.ವಿ.ಗುಂಡೂರಾವ್
![Mandya Sahitya Sammelana: ಅಕ್ಷರ ಜಾತ್ರೆಯಲ್ಲಿ “ಹವಾ’ ಎಬ್ಬಿಸಿದ ತೊಟ್ಟಿ ಮನೆ..!](https://www.udayavani.com/wp-content/uploads/2024/12/House1-150x64.jpg)
Mandya Sahitya Sammelana: ಅಕ್ಷರ ಜಾತ್ರೆಯಲ್ಲಿ “ಹವಾ’ ಎಬ್ಬಿಸಿದ ತೊಟ್ಟಿ ಮನೆ..!
![Mandya: ನುಡಿ ಹಬ್ಬದ ಔತಣ ಸವಿಯಲು ಜನವೋ ಜನ- ವೃದ್ಧರಿಗೆ ವಿಶೇಷ ಕೌಂಟರ್](https://www.udayavani.com/wp-content/uploads/2024/12/Mandya-k1-150x78.jpg)
Mandya: ನುಡಿ ಹಬ್ಬದ ಔತಣ ಸವಿಯಲು ಜನವೋ ಜನ- ವೃದ್ಧರಿಗೆ ವಿಶೇಷ ಕೌಂಟರ್
![ravishankar-guruji](https://www.udayavani.com/wp-content/uploads/2024/12/ravishankar-guruji-150x88.jpg)
World Meditation Day; ಶರೀರಕ್ಕೆ ಊಟ, ಆತ್ಮಕ್ಕೆ ಧ್ಯಾನ
![1-dhyan](https://www.udayavani.com/wp-content/uploads/2024/12/1-dhyan-150x85.jpg)
Meditation; ಮಾನಸಿಕ ಆರೋಗ್ಯಕ್ಕೆ ದಿವ್ಯೌಷಧ: ಡಿ.21ರಂದೇ ಏಕೆ ಧ್ಯಾನ ದಿನ?
MUST WATCH
![udayavani youtube](https://i.ytimg.com/vi/NdljxpTr0n8/mqdefault.jpg)
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
![udayavani youtube](https://i.ytimg.com/vi/Ge2mbEcT0j0/mqdefault.jpg)
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
![udayavani youtube](https://i.ytimg.com/vi/qW7fcwKh15I/mqdefault.jpg)
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
![udayavani youtube](https://i.ytimg.com/vi/rXflDn9gBE4/mqdefault.jpg)
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
![udayavani youtube](https://i.ytimg.com/vi/OPoFL9bnOqc/mqdefault.jpg)
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
![Turkey: ಟೇಕ್ ಆಫ್ ವೇಳೆ ಆಂಬ್ಯುಲೆನ್ಸ್ ಹೆಲಿಕಾಪ್ಟರ್ ಪತನ; ನಾಲ್ವರು ಮೃ*ತ್ಯು](https://www.udayavani.com/wp-content/uploads/2024/12/15-7-150x90.jpg)
Turkey: ಟೇಕ್ ಆಫ್ ವೇಳೆ ಆಂಬ್ಯುಲೆನ್ಸ್ ಹೆಲಿಕಾಪ್ಟರ್ ಪತನ; ನಾಲ್ವರು ಮೃ*ತ್ಯು
![87th Kannada Sahitya Sammelana: ದೃಶ್ಯರಂಗ ತಂಡದವರಿಂದ ಸಿನಿಮಾಗಾಗಿ “ನಿಧಿ ’ ಮಾರಾಟ!](https://www.udayavani.com/wp-content/uploads/2024/12/14-9-150x90.jpg)
87th Kannada Sahitya Sammelana: ದೃಶ್ಯರಂಗ ತಂಡದವರಿಂದ ಸಿನಿಮಾಗಾಗಿ “ನಿಧಿ ’ ಮಾರಾಟ!
![6](https://www.udayavani.com/wp-content/uploads/2024/12/6-41-150x80.jpg)
Mangaluru: ಕ್ರಿಸ್ಮಸ್ ಸಂಭ್ರಮ; ‘ಮಿನುಗು ತಾರೆ’ಗಳ ಮೆರುಗು
![5](https://www.udayavani.com/wp-content/uploads/2024/12/5-42-150x80.jpg)
Health: ಶೀಘ್ರ ಕ್ಯಾನ್ಸರ್ ಪತ್ತೆ, ಶಸ್ತ್ರಚಿಕಿತ್ಸೆ ತಿಳಿವಳಿಕೆ ಯಾಕೆ ಮುಖ್ಯ?
![ಕಲಬುರಗಿ- ಮೈಸೂರಲ್ಲಿ ನಿಮ್ಹಾನ್ಸ್ ಮತ್ತು ಡಯಾಬಿಟಾಲಜಿ ಘಟಕ ಸ್ಥಾಪನೆಗೆ ಕ್ರಮ: ಸಿಎಂ ಭರವಸೆ](https://www.udayavani.com/wp-content/uploads/2024/12/13-15-150x90.jpg)
ಕಲಬುರಗಿ- ಮೈಸೂರಲ್ಲಿ ನಿಮ್ಹಾನ್ಸ್ ಮತ್ತು ಡಯಾಬಿಟಾಲಜಿ ಘಟಕ ಸ್ಥಾಪನೆಗೆ ಕ್ರಮ: ಸಿಎಂ ಭರವಸೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.