Charan Singh ರೈತ ನಾಯಕ, ಅನ್ನದಾತರ ಭಾಗ್ಯವಿಧಾತ
ಜಮೀನ್ದಾರಿ ಪದ್ಧತಿ ರದ್ದುಪಡಿಸಿದ ಧೀಮಂತ, ರೈತರ ಹಕ್ಕಿಗಾಗಿ ಜೀವನ ಮುಡಿಪಾಗಿಟ್ಟ ನಾಯಕ
Team Udayavani, Feb 10, 2024, 6:10 AM IST
ರೈತ ನಾಯಕ ಮಾಜಿ ಪ್ರಧಾನಿ ಚೌಧರಿ ಚರಣ್ ಸಿಂಗ್ ಅವರಿಗೆ ಕೇಂದ್ರ ಸರಕಾರ ಮರಣೋತ್ತರವಾಗಿ ಭಾರತ ರತ್ನ ಘೋಷಿಸಿದೆ. ರೈತರ ಹಕ್ಕುಗಳು ಮತ್ತು ಶ್ರೇಯೋಭಿವೃದ್ಧಿಗಾಗಿ ತಮ್ಮ ಜೀವನ ವನ್ನೇ ಮುಡಿಪಿಟ್ಟ ಜನತಾ ಪರಿವಾರದ ಚೌಧರಿ ಚರಣ್ ಸಿಂಗ್ ಅವರು ದೇಶದ ಐದನೇ ಪ್ರಧಾನಿಯಾಗಿದ್ದರು.
1902ರ ಡಿ.23ರಂದು ಉತ್ತರ ಪ್ರದೇಶದ ಕೃಷಿ ಕುಟುಂಬ ದಲ್ಲಿ ಸಿಂಗ್ ಜನಿಸಿದರು. ಇವರ ಜನ್ಮ ದಿನದಂದೇ ದೇಶಾದ್ಯಂತ ಪ್ರತೀ ವರ್ಷ “ರೈತರ ದಿನ’ ಆಚರಿಸಲಾಗುತ್ತದೆ. ಜೀವನದುದ್ದಕ್ಕೂ ರೈತರ ಪರವಾದ ರಾಜ ಕೀಯ ನಿಲು ವನ್ನೇ ತಳೆಯುತ್ತಿದ್ದ ಚರಣ್ ಸಿಂಗ್, ಉತ್ತರ ಪ್ರದೇಶದಲ್ಲಿನ ಜಮೀನ್ದಾರ ರಿಂದ ರೈತರ ಮೇಲಾಗು ತ್ತಿ ರುವ ದೌರ್ಜನ್ಯಗಳ ವಿರುದ್ಧ ದನಿ ಎತ್ತಿ ದರು. ಛಪ್ರೌಲಿ ಯಿಂದ 1937ರಲ್ಲಿ ಮೊದಲ ಬಾರಿಗೆ ಶಾಸಕ ರಾಗಿ ಆಯ್ಕೆಯಾದ ಸಿಂಗ್, ಕಾಂಗ್ರೆಸ್‌ನ ಪ್ರಮುಖ ನಾಯಕ ರಾಗಿ ಹೊರ ಹೊಮ್ಮಿದರು. ಉತ್ತರ ಪ್ರದೇಶದಲ್ಲಿ ವಿವಿಧ ಸರಕಾರದ ಅವಧಿ ಯಲ್ಲಿ ಸಚಿವÃ ಾ ಗಿ ಸೇವೆ ಸಲ್ಲಿಸಿದರು. ಅನಂತರ ಕಾಂಗ್ರೆಸ್ ಪಕ್ಷದ ಶಾಸಕರನ್ನು ಒಗ್ಗೂಡಿಸಿ ಬಂಡೆದ್ದು ಪಕ್ಷದಿಂದ ಹೊರಬಂದ ಸಿಂಗ್. ಇತರ ಪಕ್ಷಗಳ ಸಹಕಾರದೊಂದಿಗೆ 1967ರ ಎ.3 ರಂದು ಮೊದಲ ಬಾರಿಗೆ ಸಿಂಗ್ ಉತ್ತರ ಪ್ರದೇಶ ಮುಖ್ಯಮಂತ್ರಿ ಯಾ ದರು. ಆ ಮೂಲಕ ಮೊದಲ ಕಾಂಗ್ರೆಸೇತರ ಸಿಎಂ ಎನಿಸಿಕೊಂಡರು. 1968ರ ಫೆ.17ರಂದು ಸಿಎಂ ಸ್ಥಾನಕ್ಕೆ ರಾಜೀನಾಮೆ ನೀಡಿದರು. ಅನಂತರ 1970ರಲ್ಲಿ ಕಾಂಗ್ರೆಸ್ ಬೆಂಬಲ ದೊಂದಿಗೆ 2ನೇ ಬಾರಿ ಉತ್ತರ ಪ್ರದೇಶ ಸಿಎಂ ಆದರು. ಐತಿಹಾಸಿಕ ಜಮೀನ್ದಾರಿ ಪದ್ಧತಿ ನಿರ್ಮೂಲನೆ ಹಾಗೂ ಭೂಮಿತಿ ಕಾಯ್ದೆ ಜಾರಿಗೊಳಿಸುವು ದರಲ್ಲಿ ಚರಣ್ ಸಿಂಗ್ ಪಾತ್ರ ಪ್ರಮುಖ.
170 ದಿನಗಳ ಪ್ರಧಾನಿ
ಜನತಾ ಪಕ್ಷ 1977ರಲ್ಲಿ ಕೇಂದ್ರದಲ್ಲಿ ಅಧಿಕಾರಕ್ಕೆ ಬಂತು. ಆದರೆ ಜನತಾ ಪಕ್ಷ ಇಬ್ಭಾಗವಾದಾಗ ಮೊರಾರ್ಜಿ ದೇಸಾಯಿ ಪ್ರಧಾನಿ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿ ದರು. ಬಳಿಕ ಕಾಂಗ್ರೆಸ್‌ನ ಬಾಹ್ಯ ಬೆಂಬಲ ದೊಂದಿಗೆ ಚೌಧರಿ ಚರಣ್ ಸಿಂಗ್ ಸರಕಾರ ರಚಿಸಿದರು. ಅವರು 1979ರ ಜು.28ರಂದು ಪ್ರಧಾನಿಯಾಗಿ ಪ್ರಮಾಣ ವಚನ ಸ್ವೀಕರಿದರು. ಆದರೆ ಕಾಂಗ್ರೆಸ್ ತನ್ನ ಬಾಹ್ಯ ಬೆಂಬಲ ಹಿಂಪಡೆದ ಕಾರಣ, 1979ರ ಆ.20ರಂದು ಅವರು ರಾಜೀ ನಾಮೆ ಸಲ್ಲಿಸಿದರು. ಒಟ್ಟು 170 ದಿನಗಳು ಪ್ರಧಾನಿಯಾಗಿ ಆಡಳಿತ ನಡೆಸಿದರು. 1979ರ ಸೆ.26ರಂದು ಜನತಾ ಪಕ್ಷ(ಜಾತ್ಯತೀತ), ಸಮಾಜವಾದಿ ಪಕ್ಷ ಮತ್ತು ಒರಿಸ್ಸಾ ಜನತಾ ಪಕ್ಷ ಒಟ್ಟುಗೂಡಿಸಿ ಲೋಕ ದಳ ಸ್ಥಾಪಿಸಿದರು.
ಜಾಟ್ ಸಮುದಾಯದ ಅವರ ಪುತ್ರ ಅಜಿತ್ ಸಿಂಗ್ ರಾಷ್ಟ್ರೀಯ ಲೋಕದಳ (ಆರ್‌ಎಲ್‌ಡಿ)ವನ್ನು ಸ್ಥಾಪಿಸಿ ದ್ದು, ಕೇಂದ್ರ ಸಚಿವರಾಗಿ ಕಾರ್ಯನಿರ್ವ ಹಿಸಿದ್ದರು, ಇವರ ಪುತ್ರ ಜಯಂತ್ ಈಗ ಪಕ್ಷವನ್ನು ಮುನ್ನಡೆಸುತ್ತಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Mandya :ಗಂಡ ಗದ್ಯ, ಹೆಂಡತಿ ಪದ್ಯ, ಮಕ್ಕಳು ರಗಳೆ!: ಹಾಸ್ಯ ಸಾಹಿತಿ ವೈ.ವಿ.ಗುಂಡೂರಾವ್
Mandya Sahitya Sammelana: ಅಕ್ಷರ ಜಾತ್ರೆಯಲ್ಲಿ “ಹವಾ’ ಎಬ್ಬಿಸಿದ ತೊಟ್ಟಿ ಮನೆ..!
Mandya: ನುಡಿ ಹಬ್ಬದ ಔತಣ ಸವಿಯಲು ಜನವೋ ಜನ- ವೃದ್ಧರಿಗೆ ವಿಶೇಷ ಕೌಂಟರ್
World Meditation Day; ಶರೀರಕ್ಕೆ ಊಟ, ಆತ್ಮಕ್ಕೆ ಧ್ಯಾನ
Meditation; ಮಾನಸಿಕ ಆರೋಗ್ಯಕ್ಕೆ ದಿವ್ಯೌಷಧ: ಡಿ.21ರಂದೇ ಏಕೆ ಧ್ಯಾನ ದಿನ?
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Turkey: ಟೇಕ್ ಆಫ್ ವೇಳೆ ಆಂಬ್ಯುಲೆನ್ಸ್ ಹೆಲಿಕಾಪ್ಟರ್ ಪತನ; ನಾಲ್ವರು ಮೃ*ತ್ಯು
87th Kannada Sahitya Sammelana: ದೃಶ್ಯರಂಗ ತಂಡದವರಿಂದ ಸಿನಿಮಾಗಾಗಿ “ನಿಧಿ ’ ಮಾರಾಟ!
Mangaluru: ಕ್ರಿಸ್ಮಸ್ ಸಂಭ್ರಮ; ‘ಮಿನುಗು ತಾರೆ’ಗಳ ಮೆರುಗು
Health: ಶೀಘ್ರ ಕ್ಯಾನ್ಸರ್ ಪತ್ತೆ, ಶಸ್ತ್ರಚಿಕಿತ್ಸೆ ತಿಳಿವಳಿಕೆ ಯಾಕೆ ಮುಖ್ಯ?
ಕಲಬುರಗಿ- ಮೈಸೂರಲ್ಲಿ ನಿಮ್ಹಾನ್ಸ್ ಮತ್ತು ಡಯಾಬಿಟಾಲಜಿ ಘಟಕ ಸ್ಥಾಪನೆಗೆ ಕ್ರಮ: ಸಿಎಂ ಭರವಸೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.