ಶುಭಕೃತ್ ಸಂವತ್ಸರದ ಚಾತುರ್ಮಾಸ್ಯ
Team Udayavani, Jul 12, 2022, 6:10 AM IST
ಆಷಾಢ ಮಾಸದ ಶುಕ್ಲ ಪಕ್ಷದ ಹುಣ್ಣಿಮೆಯ ದಿನವಾದ ಜು.13ರಂದು “ಗುರು ಪೂರ್ಣಿಮೆ’ ಆಚರಿಸಲಾಗುತ್ತಿದೆ. ಈ ದಿನ ನಾಡಿನ ಬಹುತೇಕ ಮಠಾಧೀಶರು, ಸನ್ಯಾಸಿಗಳು ವ್ಯಾಸಪೂಜೆ ನೆರವೇರಿಸಿ ಚಾತುರ್ಮಾಸ್ಯ ವ್ರತದ ಸಂಕಲ್ಪ ಕೈಗೊಳ್ಳಲಿದ್ದಾರೆ. ಈ ಸಂದರ್ಭದಲ್ಲಿ ಅವರು ಆಧ್ಯಾತ್ಮಿಕ, ಧಾರ್ಮಿಕ, ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಕೈಗೊಂಡು ಬಂದಂತಹ ಭಕ್ತರನ್ನು ಹರಸಲಿದ್ದಾರೆ.
ಶೃಂಗೇರಿ ಶ್ರೀಗಳ ಚಾತುರ್ಮಾಸ್ಯ
ಶೃಂಗೇರಿ: ದಕ್ಷಿಣಾಮ್ನಾಯ ಶ್ರೀ ಶಾರದಾ ಪೀಠದ ಜಗದ್ಗುರುಗಳಾದ ಶ್ರೀ ಭಾರತೀತೀರ್ಥ ಸ್ವಾಮೀಜಿ ಹಾಗೂ ಶ್ರೀ ವಿಧುಶೇಖರ ಭಾರತೀ ಸ್ವಾಮೀಜಿಗಳ ಚಾತುರ್ಮಾಸ್ಯ ವ್ರತವನ್ನು ಶ್ರೀ ಮಠದ ಗುರುನಿವಾಸದಲ್ಲಿ ಆಷಾಢ ಪೂರ್ಣಿಮೆ ದಿನವಾದ ಜು.13ರಂದು ಕೈಗೊಳ್ಳಲಿದ್ದಾರೆ. ಶ್ರೀ ಭಾರತೀತೀರ್ಥ ಸ್ವಾಮೀಜಿ 48ನೇ ಚಾತುರ್ಮಾಸ್ಯ ವ್ರತ ಹಾಗೂ ಅವರ ಉತ್ತರಾ ಧಿಕಾರಿ ಕಿರಿಯ ಸ್ವಾಮೀಜಿಗಳಾದ ಶ್ರೀ ವಿಧುಶೇಖರ ಭಾರತೀ ಸ್ವಾಮೀಜಿ 7ನೇ ವ್ರತದ ಸಂಕಲ್ಪ ಕೈಗೊಳ್ಳಲಿದ್ದಾರೆ. ಚಾತುರ್ಮಾಸ್ಯ ವ್ರತದಲ್ಲಿ ಜಗದ್ಗುರುಗಳು ಸಂಚಾರ ಕೈಗೊಳ್ಳದೆ ಗುರುಭವನದಲ್ಲಿ ಧ್ಯಾನ, ಪೂಜೆಯಲ್ಲಿ ನಿರತರಾಗಿರುತ್ತಾರೆ. ವ್ರತವು ಸೆ.10ರ ಶ್ರೀ ಉಮಾಮಹೇಶ್ವರ ವ್ರತದಂದು ಸಂಪನ್ನಗೊಳ್ಳಲಿದ್ದು, ಅಂದು ಸೀಮೋಲ್ಲಂಘನ ಆಚರಿಸಲಾಗುತ್ತದೆ. ನರಸಿಂಹವನದ ಗುರುನಿವಾಸದಲ್ಲಿ ಜು.13ರಂದು ವ್ಯಾಸಪೂಜೆ ಮತ್ತು ಚಾತುರ್ಮಾಸ್ಯ ವ್ರತ ನೆರವೇರಲಿದೆ. ಶ್ರೀ ಶಾರದಾ ಪೀಠದ ಕಿರಿಯ ಜಗದ್ಗುರು ಶ್ರೀ ವಿಧುಶೇಖರ ಭಾರತೀ ಸ್ವಾಮೀಜಿಗಳ 30ನೇ ವರ್ಧಂತಿ ಕಾರ್ಯಕ್ರಮ ಶ್ರಾವಣ ಶುಕ್ಲ ಪಂಚಮಿ ಆ.2ರಂದು ಶ್ರೀಮಠದ ಗುರು ಭವನದಲ್ಲಿ ನಡೆಯಲಿದೆ.
ಗಾಣಗಾಪುರದಲ್ಲಿ ಕರ್ಕಿ ಶ್ರೀಗಳ ವ್ರತ
ಹೊನ್ನಾವರ: ಸಮಸ್ತ ದೈವಜ್ಞ ಬ್ರಾಹ್ಮಣ ಸಮಾಜದ ಏಕೈಕ ಪೀಠವಾದ ಕರ್ಕಿ ಜ್ಞಾನೇಶ್ವರಿ ಪೀಠದ ಶ್ರೀ ಸಚ್ಚಿದಾನಂದ ಜ್ಞಾನೇಶ್ವರ ಭಾರತೀ ಸ್ವಾಮಿಗಳು ಈ ವರ್ಷದ ಚಾತುರ್ಮಾಸ್ಯ ವ್ರತವನ್ನು ದತ್ತಾತ್ರೇಯ ಕ್ಷೇತ್ರವಾದ ಕಲಬುರಗಿ ಜಿಲ್ಲೆ ಅಫಜಲಪುರ ತಾಲೂಕಿನ ದೇವಲ ಗಾಣಗಾಪುರದಲ್ಲಿ ಕೈಗೊಳ್ಳಲಿದ್ದಾರೆ. ಇದು ಶ್ರೀಗಳ 37ನೇ ಚಾತುರ್ಮಾಸ್ಯ ವ್ರತವಾಗಿದ್ದು ಜು.13ರಿಂದ ಸೆ.10ರವರೆಗೆ ದೇವಲ ಗಾಣಗಾಪುರದ ಸಂಗಮ ರಸ್ತೆಯಲ್ಲಿರುವ ಶ್ರೀ ಜಗದ್ಗುರು ಆದಿ ಶಂಕರಾಚಾರ್ಯ ಮಠದಲ್ಲಿ ಚಾತುರ್ಮಾಸ್ಯ ವ್ರತ ನಡೆಯಲಿದೆ. ಚಾತುರ್ಮಾಸ್ಯ ವ್ರತದಲ್ಲಿ ಭಕ್ತರಿಗೆ ಗಾಣಗಾಪುರದ ಗುರು ದತ್ತಾತ್ರೇಯರ ಪಾದುಕೆ ದರ್ಶನ ಭಾಗ್ಯವೂ ದೊರೆಯಲಿದೆ. ಜು.13ರಂದು ವ್ಯಾಸ ಪೂಜೆಯೊಂದಿಗೆ ಆರಂಭಗೊಳ್ಳುವ ಚಾತುರ್ಮಾಸ್ಯ ವ್ರತಾಚರಣೆ ಸೆ.10ಕ್ಕೆ ಸೀಮೋಲ್ಲಂಘನದೊಂದಿಗೆ ಸಂಪನ್ನವಾಗಲಿದೆ.
ಮಾಹಿತಿಗೆ ಮೊ.9448317779.
12ರಿಂದ ಹಲಗಾದಲ್ಲಿ ಪಾವನ ವರ್ಷಾಯೋಗ
ಬೆಳಗಾವಿ: ತಾಲೂಕಿನ ಹಲಗಾ ಗ್ರಾಮದ ಸುವರ್ಣ ವಿಧಾನಸೌಧ ಬಳಿಯ ಭ. 1008 ಮುನಿಸುವ್ರತ ದಿಗಂಬರ ಜೈನ ಮಂದಿರದಲ್ಲಿ ಚಾತುರ್ಮಾಸ್ಯ ನಿಮಿತ್ತ ಪಾವನ ವರ್ಷಾಯೋಗ-2022 ಜು. 12ರಿಂದ ಹಮ್ಮಿಕೊಳ್ಳಲಾಗಿದೆ. ಬಾಲಾಚಾರ್ಯ ಶ್ರೀ 108 ಸಿದ್ಧಸೇನ ಮುನಿ ಮಹಾರಾಜ, ಆಚಾರ್ಯ ಶ್ರೀ 108 ಶಾಂತಿಸೇನ ಮುನಿ ಮಹಾರಾಜ, ಶ್ರೀ ಮಲ್ಲಿಸೇನ ಮುನಿ ಮಹಾರಾಜ, ಜಿನಮತಿ ಮಾತಾಜಿ, ಬ್ರಹ್ಮಚಾರಿಣಿ ಪದ್ಮರಾಗಾ ದೀದಿ, ಮಣಿಪ್ರಭಾ ದೀದಿ ಅವರು ಚಾತುರ್ಮಾಸ್ಯ ಕೈಗೊಂಡಿದ್ದಾರೆ. ಜು.12ರಿಂದ ಚಾತುರ್ಮಾಸ್ಯ ಆರಂಭವಾಗಲಿದ್ದು, ವಿವಿಧ ಧಾರ್ಮಿಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ. ಮಾಹಿತಿಗೆ ಮೊ: 9686538108.
ರಾಘವೇಶ್ವರ ಶ್ರೀ 29ನೇ ಚಾತುರ್ಮಾಸ್ಯ
ಕುಮಟಾ: ಶ್ರೀ ರಾಮಚಂದ್ರಾಪುರ ಮಠದ ಮಠಾಧೀಶ ಶ್ರೀ ರಾಘವೇಶ್ವರ ಭಾರತೀ ಮಹಾಸ್ವಾಮಿಗಳ 29ನೇ ಚಾತುರ್ಮಾಸ್ಯ ಜು.13ರಿಂದ ಸೆ.10ರವರೆಗೆ ತಾಲೂಕಿನ ಗೋಕರ್ಣದ ಅಶೋಕೆಯಲ್ಲಿ ನಡೆಯಲಿದೆ. ಸೆ.10ರಂದು ಸಿಮೋಲ್ಲಂಘನದೊಂದಿಗೆ ವ್ರತ ಸಂಪನ್ನವಾಗಲಿದೆ.
ಪರ್ತಗಾಳಿ ಮಠಾಧೀಶರ ಚಾತುರ್ಮಾಸ್ಯ
ಕುಮಟಾ: ಶ್ರೀ ಸಂಸ್ಥಾನ ಪರ್ತಗಾಳಿ ಜಿವೋತ್ತಮ ಮಠದ ವಿದ್ಯಾಧೀಶ ತೀರ್ಥರ ಚಾತುರ್ಮಾಸ್ಯ ವ್ರತವು ಜು.20ರಿಂದ ಸೆ.10ರವರೆಗೆ ಕುಮಟಾ ಪಟ್ಟಣದ ರಥಬೀದಿಯ ಶಾಂತೇರಿ ಕಾಮಾಕ್ಷಿ ದೇವಸ್ಥಾನದಲ್ಲಿ ನಡೆಯಲಿದ್ದು ಗುರು ಭಕ್ತರು ಶ್ರೀಗಳವರ ದರ್ಶನ ಪಡೆದು ತಮ್ಮ ಸೇವೆ ಸಲ್ಲಿಸಬಹುದಾಗಿದೆ. ಸೆ.10ರಂದು ಮೃತ್ತಿಕಾ ವಿಸರ್ಜನೆ, ಸಿಮೋಲ್ಲಂಘನದೊಂದಿಗೆ ವ್ರತ ಸಂಪನ್ನವಾಗಲಿದೆ.
ಶೃಂಗೇರಿಯಲ್ಲಿ ಪ್ರಥಮ ವ್ರತಾಚರಣೆ
ಸಿದ್ದಾಪುರ: ತಾಲೂಕಿನ ಶ್ರೀಮನ್ ನೆಲೆಮಾವು ಮಠದ ಗುರುಗಳಾದ ಶ್ರೀ ಮಾಧವಾನಂದ ಭಾರತಿ ಸ್ವಾಮಿಗಳು ತಮ್ಮ ಪ್ರಥಮ ಚಾತುರ್ಮಾಸ್ಯವನ್ನು ಶೃಂಗೇರಿ ಮಠದಲ್ಲಿ ಅಲ್ಲಿನ ಶ್ರೀಗಳ ಮಾರ್ಗದರ್ಶನದಲ್ಲಿ ಜು. 13ರಂದು ಕೈಗೊಳ್ಳಲಿದ್ದಾರೆ.
ಸತ್ಯಾತ್ಮ ತೀರ್ಥರ 27ನೇ ಚಾತುರ್ಮಾಸ್ಯ
ಬೆಂಗಳೂರು: ಉತ್ತರಾದಿ ಮಠದ ಶ್ರೀ ಸತ್ಯಾತ್ಮತೀರ್ಥ ಸ್ವಾಮೀಜಿ ಗಳು ತಮ್ಮ 27ನೇ ಚಾತುರ್ಮಾಸ್ಯ ವ್ರತವನ್ನು ಆಂಧ್ರಪ್ರದೇಶದ ಸಂತೇಬಿದನೂರಿನ ಉತ್ತರಾದಿ ಮಠದಲ್ಲಿ ಕೈಗೊಳ್ಳಲಿದ್ದಾರೆ. ಜು. 23ರಿಂದ ಸೆ.10ರವರೆಗೆ ವ್ರತ ಕೈಗೊಳ್ಳಲಿದ್ದಾರೆ.
ವಜ್ರದೇಹಿ ಸ್ವಾಮೀಜಿ
ಮಂಗಳೂರು: ಗುರುಪುರ ಶ್ರೀ ವಜ್ರದೇಹಿ ಮಠಾ ಧೀಶರಾದ ಶ್ರೀರಾಜಶೇಖರಾ ನಂದ ಸ್ವಾಮೀಜಿಯವರು ಗುರುಪುರ ಮಠದಲ್ಲಿ 23ನೇ ಚಾತುರ್ಮಾಸ್ಯ ವ್ರತವನ್ನು ಜುಲೈ 23ರಂದು ವಿವಿಧ ಧಾರ್ಮಿಕ ಕಾರ್ಯಕ್ರಮ ಗಳೊಂದಿಗೆ ಆರಂಭಿಸಲಿದ್ದಾರೆ. ವ್ರತವು ಆಗಸ್ಟ್ 21ರವರೆಗೆ ನಡೆಯಲಿದೆ. ಈ ಸಂದರ್ಭದಲ್ಲಿ ವಿವಿಧ ಧಾರ್ಮಿಕ ಹಾಗೂ ಸಾಮಾಜಿಕ ಸತ್ಕರ್ಮಗಳು ಜರಗಲಿದೆ.
ಸ್ವರ್ಣವಲ್ಲೀ ಶ್ರೀಗಳ 32ನೇ ವ್ರತ ಸಂಕಲ್ಪ
ಶಿರಸಿ : ಹಸುರು ಸ್ವಾಮೀಜಿ ಎಂದೇ ಪ್ರಸಿದ್ಧರಾದ ಸೋಂದಾ ಸ್ವರ್ಣವಲ್ಲೀ ಮಠಾಧೀಶ ಶ್ರೀಗಂಗಾಧರೇಂದ್ರ ಸರಸ್ವತೀ ಮಹಾಸ್ವಾಮೀಜಿಗಳು ಜು. 13ರಂದು ಸೋಂದಾ ಸ್ವರ್ಣವಲ್ಲೀ ಮಹಾಸಂಸ್ಥಾನದಲ್ಲಿ ತಮ್ಮ 32ನೇ ಚಾತುರ್ಮಾಸ್ಯ ವ್ರತವನ್ನು ಸಂಕಲ್ಪಿಸಲಿದ್ದಾರೆ. ಅದೇ ದಿನ ಚಾತುರ್ಮಾಸ್ಯದುದ್ದಕ್ಕೂ ನಡೆಯುವ ವಿವಿಧ ಕಾರ್ಯಕ್ರಮಗಳಿಗೆ ಚಾಲನೆ ನೀಡಲಿದ್ದಾರೆ. ಅಂದು ಮುಂಜಾನೆ 10 ಘಂಟೆಗೆ ಶ್ರೀಗಳು ವ್ಯಾಸಪೂಜೆ ನೆರವೇರಿಸಿ ಚಾತುರ್ಮಾಸ್ಯ ವ್ರತ ಸಂಕಲ್ಪಿಸುವರು. ಮಧ್ಯಾಹ್ನ ದೇವರಿಗೆ ಮಹಾಮಂಗಳಾರತಿ, ತೀರ್ಥಪ್ರಸಾದ ವಿತರಣೆಯಾದ ಅನಂತರ ಅನ್ನಪ್ರಸಾದ ನೆರವೇರಲಿದೆ.
ಮಾರುತಿ ಗುರೂಜಿ ಚಾತುರ್ಮಾಸ್ಯ
ಹೊನ್ನಾವರ: ಗೇರುಸೊಪ್ಪಾ ಬಂಗಾರಮಕ್ಕಿಯಲ್ಲಿ ಶ್ರೀ ಮಾರುತಿ ಗುರೂಜಿ ಅವರ ಚಾತುರ್ಮಾಸ್ಯ ವ್ರತಾಚರಣೆ ಆಷಾಢಶುದ್ಧ ಪೂರ್ಣಿಮೆ ಜು.13ರಿಂದ ವ್ಯಾಸಪೂಜೆಯೊಂದಿಗೆ ಆರಂಭವಾಗುತ್ತದೆ. ಸೆ.10ರಂದು ಸೀಮೋಲ್ಲಂಘನ ಹಾಗೂ ಗುರುವಂದನ ಕಾರ್ಯಕ್ರಮದೊಂದಿಗೆ ಮುಕ್ತಾಯವಾಗುತ್ತದೆ.
ಭಂಡಾರಕೇರಿ ಮಠಾಧೀಶರು
ಭಂಡಾರಕೇರಿ ಮಠದ ಶ್ರೀವಿದ್ಯೆಶತೀರ್ಥ ಶ್ರೀಪಾದರು 43ನೆಯ ವ್ರತ ದೀಕ್ಷೆಯನ್ನು ಜು. 18ರಿಂದ ಸೆ. 10ರ ವರೆಗೆ ಬೆಂಗಳೂರು ಗಿರಿನಗರದ ಭಾಗವತ ಕೀರ್ತಿ ಧಾಮದಲ್ಲಿ (ಶಾಖಾ ಮಠ) ಕೈಗೊಳ್ಳುವರು. ಬಡಾವಣೆಗಳಲ್ಲಿ ಭಾಗವತ ಸಂದೇಶ ಸಹಿತ ವಿವಿಧ ಜ್ಞಾನ ಕಾರ್ಯಗಳು, ಸಾಂಸ್ಕೃತಿಕ ಕಾರ್ಯಕ್ರಮ, ದಾಸ ಸಾಹಿತ್ಯ ಶಿಬಿರಗಳನ್ನು ಆಯೋಜಿಸಲಾಗಿದೆ.
ಸಂಪರ್ಕ ಸಂಖ್ಯೆ : 9449852515
ಪಲಿಮಾರು ಉಭಯ ಮಠಾಧೀಶರು
ಉಡುಪಿ: ಬೆಂಗಳೂರಿನ ಮಲ್ಲೇಶ್ವರಂನಲ್ಲಿರುವ ಪಲಿಮಾರು ಮಠದಲ್ಲಿ ಶ್ರೀವಿದ್ಯಾಧೀಶತೀರ್ಥ ಶ್ರೀಪಾದರು, ಕಾಪು ತಾಲೂಕಿನ ಪಲಿಮಾರು ಮೂಲ ಮಠದಲ್ಲಿ ಪಲಿಮಾರು ಕಿರಿಯ ಶ್ರೀವಿದ್ಯಾರಾಜೇಶ್ವರತೀರ್ಥ ಶ್ರೀಪಾದರು ದಶಮಿ ತಿಥಿ ಜು. 23ರಿಂದ ಆರಂಭಿಸಿ ಸೆ. 10ರ ವರೆಗೆ ಚಾತುರ್ಮಾಸ್ಯವ್ರತ ಕೈಗೊಳ್ಳುವರು. ಬೆಂಗಳೂರಿನ ವಿವಿಧ ಬಡಾವಣೆಗಳಲ್ಲಿ ಪ್ರವಚನ, ಸಾಂಸ್ಕೃತಿಕ ಕಾರ್ಯಕ್ರಮಗಳು, ಸಂಸ್ಥಾನದ ಪೂಜೆಗಳನ್ನು ನಡೆಸುವರು. ಸಂಪರ್ಕ ಸಂಖ್ಯೆ: 9449934567
ಅದಮಾರು ಉಭಯ ಶ್ರೀಗಳು
ಉಡುಪಿ : ಅದಮಾರು ಮಠದ ಶ್ರೀವಿಶ್ವಪ್ರಿಯತೀರ್ಥ ಶ್ರೀಪಾದರು ಜು. 23ರಿಂದ ಪಾಜಕ ಕ್ಷೇತ್ರದ ಕುಂಜಾರುಗಿರಿ ದೇವಸ್ಥಾನದಲ್ಲಿ, ಕಿರಿಯ ಶ್ರೀಪಾದರಾದ ಶ್ರೀಈಶಪ್ರಿಯತೀರ್ಥ ಶ್ರೀಪಾದರು ಜು. 18ರಿಂದ ಬಂಟ್ವಾಳ ತಾಲೂಕು ಕಟಿಲ ಮಠದಲ್ಲಿ ಚಾತುರ್ಮಾಸ್ಯ ವ್ರತ ಕೈಗೊಳ್ಳುವರು. ಕುಂಜಾರುಗಿರಿಯಲ್ಲಿ ಪ್ರವಚನ, ಪೂಜೆ, ಪರ್ವದಿನಗಳಂದು ವಿಶೇಷ ಪೂಜೆಗಳು ನಡೆಯಲಿವೆ. ಸಂಪರ್ಕ ಸಂಖ್ಯೆ: 94485 48125
ಅವಧೂತ ದತ್ತ ಪೀಠ
ಮೈಸೂರು: ಇಲ್ಲಿನ ಅವಧೂತ ದತ್ತ ಪೀಠದ ಶ್ರೀ ದತ್ತ ವಿಜಯಾನಂದ ತೀರ್ಥ ಸ್ವಾಮೀಜಿ ಅವರು ಜುಲೈ 13 ರಿಂದ ಸೆಪ್ಟೆಂಬರ್ 10ರ ವರೆಗೆ ಮೈಸೂರಿನ ಗಣಪತಿ ಸಚ್ಚಿದಾನಂದ ಆಶ್ರಮದಲ್ಲಿ ಚಾತುರ್ಮಾಸ್ಯ ವ್ರತ ಕೈಗೊಳ್ಳಲಿದ್ದಾರೆ.
ವಿದ್ಯಾರಣ್ಯ ಭಾರತಿ ಶ್ರೀ ವ್ರತಾಚರಣೆ
ಬಳ್ಳಾರಿ: ಐತಿಹಾಸಿಕ, ಧಾರ್ಮಿಕ ಹಿನ್ನೆಲೆಯುಳ್ಳ ಹಂಪಿಯ ವಿದ್ಯಾರಣ್ಯ ಭಾರತಿ ಸ್ವಾಮೀಜಿಗಳು ಹಂಪಿಯ ವಿದ್ಯಾರಣ್ಯ ಮಠದಲ್ಲೇ ಜು.13ರಂದು ಚಾತುರ್ಮಾಸ್ಯ ವ್ರತಾಚರಣೆ ಆರಂಭಿಸಲಿದ್ದಾರೆ. ಜು.13ರಂದು ಆರಂಭವಾಗುವ ಚಾತುರ್ಮಾಸ್ಯ ವ್ರತಾಚರಣೆ ನ.8ರಂದು ಮುಕ್ತಾಯಗೊಳ್ಳಲಿದೆ. ಈ ನಾಲ್ಕು ತಿಂಗಳ ಕಾಲ ಮಠದಲ್ಲೇ ವಿರೂಪಾಕ್ಷ, ಪಂಪಾಂಬಿಕೆ ದೇವಿಗೆ ವಿಶೇಷ ಪೂಜೆ, ಅಭಿಷೇಕ ಕಾರ್ಯಗಳನ್ನು ಕೈಗೊಳ್ಳಲಿದ್ದಾರೆ. ಪ್ರತಿದಿನ ಐದು ರಾಜ್ಯಗಳಿಂದ ಬರುವ ಸುಮಾರು 500 ಭಕ್ತರಿಗೆ ಆಶೀರ್ವಾದ ಮಾಡುವುದಾಗಿ ಸ್ವಾಮೀಜಿಗಳು ತಿಳಿಸಿದ್ದಾರೆ. ಹೆಚ್ಚಿನ ಮಾಹಿತಿಗೆ ಮೊ.9448444733 ಸಂಪರ್ಕಿಸಬಹುದು.
ಕಾಶೀ ಮಠಾಧೀಶರು
ಮಂಗಳೂರು: ಕಾಶೀ ಮಠ ಸಂಸ್ಥಾನದ ಶ್ರೀಸಂಯಮೀಂದ್ರತೀರ್ಥ ಶ್ರೀಪಾದರು ಮಂಗಳೂರು ವೀರವೆಂಕಟೇಶ ದೇವಸ್ಥಾನದಲ್ಲಿ ಜು. 18ರಂದು ಚಾತುರ್ಮಾಸ್ಯವ್ರತ ಕೈಗೊಳ್ಳುವರು. ನಾಲ್ಕು ತಿಂಗಳ ಕಾಲ ನಿರಂತರ ರಾಮಾಯಣ ಪಾರಾಯಣ, ಸುಂದರ ಕಾಂಡ ಹೋಮಗಳು, ಸಾಂಸ್ಕೃತಿಕ ಕಾರ್ಯಕ್ರಮಗಳ ಅಂಗವಾಗಿ ಹರಿಕಥೆ, ಸಂಗೀತ, ಭಜನೆಗಳು ನಡೆಯಲಿವೆ. ಜು. 14ರಂದು ಶ್ರೀಸುಕೃತೀಂದ್ರತೀರ್ಥರ ಆರಾಧನೆ, ಪೂಜೆ, ಜು. 16-17ರಂದು ಸಾನಿಧ್ಯ ಹವನ, ಮೃತ್ತಿಕಾ ಪೂಜೆ, ಪವಮಾನಾಭಿಷೇಕ, ಆಶೀರ್ವಚನಗಳು ನಡೆಯಲಿವೆ. ಸಂಪರ್ಕ ಸಂಖ್ಯೆ: 9845082646
ಹೊಂಬುಜದ ಡಾ|ದೇವೇಂದ್ರಕೀರ್ತಿ ಭಟ್ಟಾರಕ ಸ್ವಾಮೀಜಿ ಚಾತುರ್ಮಾಸ್ಯ
ಶಿವಮೊಗ್ಗ: ಜಿಲ್ಲೆಯ ರಿಪ್ಪನ್‌ಪೇಟೆಯ ಅತಿಶಯ ಶ್ರೀಕ್ಷೇತ್ರ ಹೊಂಬುಜದಲ್ಲಿ ಡಾ|ದೇವೇಂದ್ರ ಕೀರ್ತಿ ಭಟ್ಟಾರಕ ಸ್ವಾಮೀಜಿಗಳು ಜು. 12ರಿಂದ ಚಾತುರ್ಮಾಸ್ಯ ವ್ರತ ಕೈಗೊಳ್ಳಲಿದ್ದಾರೆ. ಈ ನಾಲ್ಕು ತಿಂಗಳ ಅವಧಿಯಲ್ಲಿ ವ್ರತ-ನೋಂಪಿ, ಪರ್ವಗಳ ಜತೆಗೆ ಧಾರ್ಮಿಕ, ಸಾಂಸ್ಕೃತಿಕ ವಿಶೇಷ ಕಾರ್ಯಕ್ರಮಗಳನ್ನು ಶ್ರೀಕ್ಷೇತ್ರದಲ್ಲಿ ಆಯೋಜಿಸಲಾಗಿದೆ. ಮಾಹಿತಿಗೆ 94814 53653.
ಪೇಜಾವರ ಶ್ರೀ ವ್ರತ
ಉಡುಪಿ: ಉಡುಪಿ ಪೇಜಾವರ ಮಠದ ಶ್ರೀವಿಶ್ವಪ್ರಸನ್ನತೀರ್ಥ ಶ್ರೀಪಾದರು ಹೈದರಾಬಾದ್ ಬಾಗಲಿಂಗಪಲ್ಲಿ ಶ್ರೀರಾಘವೇಂದ್ರ ಮಠದಲ್ಲಿ ಜು. 13ರಿಂದ ಸೆ. 10ರವರೆಗೆ ವ್ರತ ಕೈಗೊಳ್ಳುವರು. ಪ್ರಾತಃಕಾಲ ಮತ್ತು ಅಪರಾಹ್ನ ಶ್ರೀಮನ್ನಾéಯಸುಧಾ ಗ್ರಂಥದ ಪಾಠ, ಬ್ರಹ್ಮಸೂತ್ರ ಭಾಷ್ಯ ಪಾಠ, ಮಹಾಭಾರತ ತಾತ್ಪರ್ಯ ನಿರ್ಣಯ ಪ್ರವಚನ ನಡೆಸುವರು. ಮೊ: 9440112171
ಚಿತ್ರಾಪುರ ಮಠದ ಶ್ರೀವಿದ್ಯೆàಂದ್ರತೀರ್ಥ ಶ್ರೀಪಾದರು
ದಕ್ಷಿಣ ಕನ್ನಡದ ಸುರತ್ಕಲ್ ಕುಳಾಯಿ ಸಮೀಪದ ಚಿತ್ರಾಪುರ ಮಠದಲ್ಲಿ ಶ್ರೀವಿದ್ಯೆàಂದ್ರ ತೀರ್ಥ ಶ್ರೀಪಾದರು ಜು. 18ರಂದು ಚಾತುರ್ಮಾಸ್ಯ ವ್ರತ ಕೈಗೊಳ್ಳುವರು. ಸೆ.10ರಂದು ಅನಂತನವ್ರತದ ಮರುದಿನ ಚಾತು ರ್ಮಾಸ್ಯವ್ರತ ಮುಕ್ತಾಯಗೊಳ್ಳಲಿದೆ. ಈ ಅವಧಿಯಲ್ಲಿ ಚಿತ್ರಾಪುರ ದೇವಸ್ಥಾನ ಮತ್ತು ಮಠದಲ್ಲಿ ವಿಶೇಷ ಪೂಜೆ, ಅನುಷ್ಠಾನ, ಉಪನ್ಯಾಸ, ಗಣೇಶ ಚತುರ್ಥಿ, ನಾಗರ ಪಂಚಮಿ, ಕೃಷ್ಣಾಷ್ಟಮಿ ಮೊದಲಾದ ಪರ್ವದಿನಗಳ ಪೂಜೆಗಳು ನಡೆಯಲಿವೆ. ಮೊ: 9353455374
ಬ್ರಹ್ಮಾನಂದ ಸರಸ್ವತಿ ಶ್ರೀ ವ್ರತ
ಬೆಳ್ತಂಗಡಿ: ಕನ್ಯಾಡಿ ಶ್ರೀ ರಾಮಕ್ಷೇತ್ರ ಮಹಾಸಂಸ್ಥಾನದ ಜಗದ್ಗುರು ಪೀಠದ ಶ್ರೀ ಬ್ರಹ್ಮಾನಂದ ಸರಸ್ವತಿ ಸ್ವಾಮೀಜಿ ಅವರು ತಮ್ಮ ಮೂಲ ಮಠ ಶ್ರೀ ರಾಮಕ್ಷೇತ್ರ ಮಹಾಸಂಸ್ಥಾನದ ಶ್ರೀ ಗುರುದೇವ ಮಠ ದೇವರಗುಡ್ಡೆಯಲ್ಲಿ ಜು.13ರಂದು ಲೋಕ ಕಲ್ಯಾಣಾರ್ಥವಾಗಿ ಚಾತುರ್ಮಾಸ್ಯ ವ್ರತ ಆಚರಿಸಲಿದ್ದಾರೆ. ಪ್ರತಿದಿನ ಬೆಳಗ್ಗೆ 10 ರಿಂದ 11ಗಂಟೆವರೆಗೆ ಭಜನ ಸತ್ಸಂಗ, 12ರಿಂದ 1 ಗಂಟೆಯವರೆಗೆ ಗುರುಪಾದುಕಾ ಪೂಜೆ ಬಳಿಕ ಅನ್ನಸಂತರ್ಪಣೆ ನೆರವೇರಲಿದೆ. ಆ.29ರಂದು ಸೀಮೋಲ್ಲಂಘನ ಕಾರ್ಯಕ್ರಮ ನೆರವೇರಲಿದೆ.
ಪಡುಕುತ್ಯಾರಿನಲ್ಲಿ ಆನೆಗುಂದಿ ಶ್ರೀ ವ್ರತ
ಕಾಪು: ಶ್ರೀಮತ್ ಜಗದ್ಗುರು ಆನೆಗುಂದಿ ಮಹಾ ಸಂಸ್ಥಾನ ಸರಸ್ವತಿ ಪೀಠಾಧೀಶ್ವರ ಜಗದ್ಗುರು ಅನಂತ ಶ್ರೀ ವಿಭೂಷಿತ ಕಾಳಹಸ್ತೇಂದ್ರ ಸರಸ್ವತಿ ಮಹಾಸ್ವಾಮೀಜಿಯವರ 18ನೇ ವರ್ಷದ ಚಾತುರ್ಮಾಸ್ಯ ವ್ರತಾಚರಣೆ ಜು.13ರಿಂದ ಪಡುಕುತ್ಯಾರಿನ ಮಹಾಸಂಸ್ಥಾನದಲ್ಲಿ ನಡೆಯಲಿದೆ. ಸೆ. 10ರಂದು ವ್ರತವನ್ನು ಸಮಾಪ್ತಿಗೊಳಿಸಲಿದ್ದಾರೆ.
ಶ್ರೀಕೃಷ್ಣಮಠದಲ್ಲಿ ಕೃಷ್ಣಾಪುರ, ಕಾಣಿಯೂರು ಮಠಾಧೀಶರು
ಉಡುಪಿ: ಉಡುಪಿ ಶ್ರೀಕೃಷ್ಣಮಠದಲ್ಲಿ ಪರ್ಯಾಯ ಕೃಷ್ಣಾಪುರ ಮಠದ ಶ್ರೀವಿದ್ಯಾಸಾಗರತೀರ್ಥ ಶ್ರೀಪಾದರು, ಕಾಣಿಯೂರು ಮಠದ ಶ್ರೀವಿದ್ಯಾವಲ್ಲಭತೀರ್ಥ ಶ್ರೀಪಾದರು ಟೀಕಾಚಾರ್ಯರ ಪುಣ್ಯತಿಥಿ ಪಂಚಮಿ ಜು. 18ರಂದು ಚಾತುರ್ಮಾಸ್ಯ ವ್ರತ ದೀಕ್ಷೆಯನ್ನು ಕೈಗೊಳ್ಳುವರು. ಸಂಪರ್ಕ ಸಂಖ್ಯೆ: ಕೃಷ್ಣಾಪುರ ಮಠ 9448982934, ಕಾಣಿಯೂರು ಮಠ 9448312242
ವರದಪುರದಲ್ಲಿ ಗುರುಪೂರ್ಣಿಮೆ
ಸಾಗರ: ನಾಡಿನ ಸುಕ್ಷೇತ್ರ ವರದಹಳ್ಳಿಯಲ್ಲಿ ಚಾತುರ್ಮಾಸ್ಯ ಕಾರ್ಯಕ್ರಮಗಳು ಜು.13ರಿಂದ ಆರಂಭಗೊಳ್ಳಲಿವೆ. ಶ್ರೀ ಶ್ರೀಧರ ಸ್ವಾಮಿಗಳು ಮುಕ್ತರಾದ ನಂತರವೂ ತಾಲೂಕಿನ ಭಕ್ತಿ ಕ್ಷೇತ್ರ ವರದಪುರದಲ್ಲಿ ಸ್ವಾಮಿಗಳು ಇದ್ದು ಚಾತುರ್ಮಾಸ್ಯ ಮಾಡುತ್ತಿದ್ದಾರೆಂದು ಪರಿಭಾವಿಸಿ ಶ್ರೀಧರ ಸ್ವಾಮಿಗಳ ಚಾರ್ತುರ್ಮಾಸ್ಯ ವಿಧಿ-ವಿಧಾನಗಳನ್ನು ನಡೆಸಲಾಗುತ್ತದೆ. ಜು.13ರಂದು ಶ್ರೀಧರಾಶ್ರಮದಲ್ಲಿ ಗುರುಪೂರ್ಣಿಮೆ ಅಂಗವಾಗಿ ವ್ಯಾಸ ಪೂಜೆ, ರಾಮ ತಾರಕ ಹವನ, ವಿಶೇಷ ಪೂಜೆ ಮುಂತಾದವುಗಳನ್ನು ಹಮ್ಮಿಕೊಳ್ಳಲಾಗಿದೆ. ನಾಲ್ಕು ತಿಂಗಳ ನಂತರ ಚಾತುರ್ಮಾಸ್ಯ ಮುಕ್ತಾಯದ ಸಂದರ್ಭದಲ್ಲಿಯೂ ಹಲವು ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುತ್ತದೆ ಎಂದು ಶ್ರೀಧರ ಮಹಾಮಂಡಲದ ಕಾರ್ಯದರ್ಶಿ ಶ್ರೀಧರ ಹೆಗಡೆ ಕಾನಲೆ ತಿಳಿಸಿದ್ದಾರೆ.
ಎಡನೀರು ಶ್ರೀಗಳ ಚಾತುರ್ಮಾಸ್ಯ
ಕುಂಬಳೆ: ಎಡನೀರು ಮಠದ ಶ್ರೀಸಚ್ಚಿದಾನಂದ ಭಾರತೀ ಸ್ವಾಮೀಜಿ ಅವರ ದ್ವಿತೀಯ ಚಾತುರ್ಮಾಸ್ಯ ಕಾರ್ಯಕ್ರಮಗಳು ಜು. 13 ರಿಂದ ಸೆ.10ರ ತನಕ ವಿವಿಧ ಧಾರ್ಮಿಕ, ತಾಂತ್ರಿಕ, ಸಾಂಸ್ಕೃತಿಕ ಕಾರ್ಯಕ್ರಮಗಳೊಂದಿಗೆ ಜರಗಲಿದೆ. ಜು.13 ರಂದು ಚಾತುರ್ಮಾಸ್ಯ ವ್ರತಾಚರಣೆಯು ಗಣಪತಿ ಹೋಮದೊಂದಿಗೆ ಪ್ರಾರಂಭಗೊಳ್ಳಲಿದೆ. ಅಂದು ಬೆಳಗ್ಗೆ 8 ರಿಂದ ವ್ಯಾಸ ಪೂಜೆಯೊಂದಿಗೆ ಆರಂಭವಾಗಿ ಮಧ್ಯಾಹ್ನ ಮಹಾಪೂಜೆ, ಅನ್ನದಾನ ಕಾರ್ಯಕ್ರಮಗಳು ಜರಗಲಿದೆ.
ಬ್ರಹ್ಮಾನಂದ ಸರಸ್ವತಿ ಶ್ರೀ ವ್ರತ
ಬೆಳ್ತಂಗಡಿ: ಕನ್ಯಾಡಿ ಶ್ರೀ ರಾಮಕ್ಷೇತ್ರ ಮಹಾಸಂಸ್ಥಾನದ ಜಗದ್ಗುರು ಪೀಠದ ಶ್ರೀ ಬ್ರಹ್ಮಾನಂದ ಸರಸ್ವತಿ ಸ್ವಾಮೀಜಿ ಅವರು ತಮ್ಮ ಮೂಲ ಮಠ ಶ್ರೀ ರಾಮಕ್ಷೇತ್ರ ಮಹಾಸಂಸ್ಥಾನದ ಶ್ರೀ ಗುರುದೇವ ಮಠ ದೇವರಗುಡ್ಡೆಯಲ್ಲಿ ಜು.13ರಂದು ಲೋಕ ಕಲ್ಯಾಣಾರ್ಥವಾಗಿ ಚಾತುರ್ಮಾಸ್ಯ ವ್ರತ ಆಚರಿಸಲಿದ್ದಾರೆ. ಪ್ರತಿದಿನ ಬೆಳಗ್ಗೆ 10 ರಿಂದ 11ಗಂಟೆವರೆಗೆ ಭಜನ ಸತ್ಸಂಗ, 12ರಿಂದ 1 ಗಂಟೆಯವರೆಗೆ ಗುರುಪಾದುಕಾ ಪೂಜೆ ಬಳಿಕ ಅನ್ನಸಂತರ್ಪಣೆ ನೆರವೇರಲಿದೆ. ಆ.29ರಂದು ಸೀಮೋಲ್ಲಂಘನ ಕಾರ್ಯಕ್ರಮ ನೆರವೇರಲಿದೆ.
ಕಾಶೀ ಮಠಾಧೀಶರು
ಮಂಗಳೂರು: ಕಾಶೀ ಮಠ ಸಂಸ್ಥಾನದ ಶ್ರೀಸಂಯಮೀಂದ್ರತೀರ್ಥ ಶ್ರೀಪಾದರು ಮಂಗಳೂರು ವೀರವೆಂಕಟೇಶ ದೇವಸ್ಥಾನದಲ್ಲಿ ಜು. 18ರಂದು ಚಾತುರ್ಮಾಸ್ಯವ್ರತ ಕೈಗೊಳ್ಳುವರು. ನಾಲ್ಕು ತಿಂಗಳ ಕಾಲ ನಿರಂತರ ರಾಮಾಯಣ ಪಾರಾಯಣ, ಸುಂದರ ಕಾಂಡ ಹೋಮಗಳು, ಸಾಂಸ್ಕೃತಿಕ ಕಾರ್ಯಕ್ರಮಗಳ ಅಂಗವಾಗಿ ಹರಿಕಥೆ, ಸಂಗೀತ, ಭಜನೆಗಳು ನಡೆಯಲಿವೆ. ಜು. 14ರಂದು ಶ್ರೀಸುಕೃತೀಂದ್ರತೀರ್ಥರ ಆರಾಧನೆ, ಪೂಜೆ, ಜು. 16-17ರಂದು ಸಾನಿಧ್ಯ ಹವನ, ಮೃತ್ತಿಕಾ ಪೂಜೆ, ಪವಮಾನಾಭಿಷೇಕ, ಆಶೀರ್ವಚನಗಳು ನಡೆಯಲಿವೆ. ಸಂಪರ್ಕ ಸಂಖ್ಯೆ: 9845082646
13ರಿಂದ ಶಿವಾನಂದ ಸರಸ್ವತಿ ಶ್ರೀ ಚಾತುರ್ಮಾಸ್ಯ
ಶಿವಮೊಗ್ಗ: ಕೈವಲ್ಯ ಮಠಾಧೀಶರಾದ ಶ್ರೀ ಶಿವಾನಂದ ಸರಸ್ವತಿ ಸ್ವಾಮೀಜಿಗಳು ಸಾಗರ-ಶಿರವಂತೆ ಗೌಡ ಸಾರಸ್ವತ ಬ್ರಾಹ್ಮಣ ಸಮಾಜದ ಮನವಿ ಮೇರೆಗೆ ಸಾಗರದ ಲಕ್ಷ್ಮೀವೆಂಕಟರಮಣ ದೇವಸ್ಥಾನದಲ್ಲಿ ಜು.13ರಿಂದ ವ್ರತ ಕೈಗೊಳ್ಳಲಿದ್ದಾರೆ. ಚಾತುರ್ಮಾಸ್ಯ ಆರಂಭ ಪ್ರಯುಕ್ತ ದೇವಸ್ಥಾನದಲ್ಲಿ ಜು.18ರಿಂದ 25ರವರೆಗೆ ಅಖಂಡ ಭಜನ
ಸಪ್ತಾಹ ಕೂಡ ನಡೆಯಲಿದೆ. ಹೆಚ್ಚಿನ ಮಾಹಿತಿಗೆ 9739726877.
ಶ್ರೀ ವಿದ್ಯಾಪ್ರಸನ್ನ ತೀರ್ಥ ಸ್ವಾಮೀಜಿ
ಸುಬ್ರಹ್ಮಣ್ಯ: ಶ್ರೀ ವಿದ್ಯಾಪ್ರಸನ್ನ ತೀರ್ಥ ಸ್ವಾಮೀಜಿ ಅವರ ಚಾತುರ್ಮಾಸ್ಯ ವ್ರತ ಜುಲೈ 18ರಿಂದ ಸೆಪ್ಟಂಬರ್10ರ ವರೆಗೆ ಕುಕ್ಕೆ ಸುಬ್ರ ಹ್ಮಣ್ಯ ಮೂಲ ಮಠದಲ್ಲಿ ನಡೆಯಲಿದೆ. ಈ ಸಂದರ್ಭದಲ್ಲಿ ಎಲ್ಲ ಭಕ್ತರಿಗೂ ಅವಕಾಶವಿದೆ. ಸಂಕೀರ್ತನೆ, ಶಾಸ್ತ್ರೀಯ ಹಾಡು, ಸಂಗೀತ, ಭರತನಾಟ್ಯ, ಪ್ರವಚನಗಳು ಇತ್ಯಾದಿ ಭಾರತೀಯ ಸಂಸ್ಕೃತಿಗೆ ಅನುಗುಣವಾದ ಕಾರ್ಯಕ್ರಮ ನಡೆಯಲಿವೆ. ಮಾಹಿತಿಗೆ: ಗುರುಪ್ರಸಾದ್: 7899812997
ಪರ್ತಗಾಳಿ ಮಠಾಧೀಶರ ಚಾತುರ್ಮಾಸ್ಯ
ಕುಮಟಾ: ಶ್ರೀ ಸಂಸ್ಥಾನ ಪರ್ತಗಾಳಿ ಜಿವೋತ್ತಮ ಮಠದ ವಿದ್ಯಾಧೀಶ ತೀರ್ಥರ ಚಾತುರ್ಮಾಸ್ಯ ವ್ರತವು ಜು.20ರಿಂದ ಸೆ.10ರವರೆಗೆ ಕುಮಟಾ ಪಟ್ಟಣದ ರಥಬೀದಿಯ ಶಾಂತೇರಿ ಕಾಮಾಕ್ಷಿ ದೇವಸ್ಥಾನದಲ್ಲಿ ನಡೆಯಲಿದ್ದು ಗುರು ಭಕ್ತರು ಶ್ರೀಗಳವರ ದರ್ಶನ ಪಡೆದು ತಮ್ಮ ಸೇವೆ ಸಲ್ಲಿಸಬಹುದಾಗಿದೆ. ಸೆ.10ರಂದು ಮೃತ್ತಿಕಾ ವಿಸರ್ಜನೆ, ಸಿಮೋಲ್ಲಂಘನದೊಂದಿಗೆ ವ್ರತ ಸಂಪನ್ನವಾಗಲಿದೆ.
ರಾಘವೇಶ್ವರ ಶ್ರೀ 29ನೇ ಚಾತುರ್ಮಾಸ್ಯ
ಕುಮಟಾ : ಶ್ರೀ ರಾಮಚಂದ್ರಾಪುರ ಮಠದ ಮಠಾಧೀಶ ಶ್ರೀ ರಾಘವೇಶ್ವರ ಭಾರತೀ ಮಹಾಸ್ವಾಮಿಗಳ 29ನೇ ಚಾತುರ್ಮಾಸ್ಯ ಜು.13ರಿಂದ ಸೆ.10ರವರೆಗೆ ತಾಲೂಕಿನ ಗೋಕರ್ಣದ ಅಶೋಕೆಯಲ್ಲಿ ನಡೆಯಲಿದೆ. ಸೆ.10ರಂದು ಸಿಮೋಲ್ಲಂಘನದೊಂದಿಗೆ ವ್ರತ ಸಂಪನ್ನವಾಗಲಿದೆ.
ಸಿಂಧದುರ್ಗದಲ್ಲಿ ವ್ರತ
ಹೊನ್ನಾವರ: ಶ್ರೀ ಸಂಸ್ಥಾನ ಹಳದೀಪುರ ಮಠದ ಶಾಂತಾಶ್ರಮ ಮಠಾಧೀಶರಾದ ಶ್ರೀ ವಾಮನಾಶ್ರಮ ಸ್ವಾಮೀಜಿಯವರ 19ನೇ ಚಾತುರ್ಮಾಸ್ಯ ವ್ರತಾಚರಣೆ ಮಹಾರಾಷ್ಟ್ರದ ಸಿಂಧದುರ್ಗದ ಕನಕವಲ್ಲಿಯ ಮುಡೆಡೋಂಗರಿಯ ವಾಳಕೇಶ್ವರ ಮಂಗಲ ಕಾರ್ಯಾಲಯದಲ್ಲಿ ಜು.13ರಿಂದ ಸೆ.10ರವರೆಗೆ ಜರಗಲಿದೆ. ವೈಶ್ಯವಾಣಿ ಸಮಾಜದ ಏಕೈಕ ಮಠವಾದ ಹಳದೀಪುರ ಮಠಕ್ಕೆ ದೇಶಾದ್ಯಂತ ಭಕ್ತರಿದ್ದಾರೆ. ವ್ಯಾಸ ಪೂಜೆಯೊಂದಿಗೆ ಆರಂಭವಾಗುವ ಕಾರ್ಯಕ್ರಮ ನಿತ್ಯ ಧಾರ್ಮಿಕ ಕಾರ್ಯಕ್ರಮಗಳೊಂದಿಗೆ ನಡೆಯಲಿದೆ. ಎಲ್ಲ ದಿನಗಳಲ್ಲಿ ದೇವರ ನಾಮ ಸಂಕೀರ್ತನೆ, ಶ್ರೀಗಳ ಪಾದುಕಾ ಪೂಜೆ, ಮೊದಲಾದ ಸೇವೆಗಳಿಗೆ ಭಕ್ತರಿಗೆ ಅವಕಾಶವಿದೆ. ಹೆಚ್ಚಿನ ಮಾಹಿತಿಗಾಗಿ 8951467395 ಸಂರ್ಕಿಸಬಹುದು.
12ರಿಂದ ಹಲಗಾದಲ್ಲಿ ಪಾವನ ವರ್ಷಾಯೋಗ
ಬೆಳಗಾವಿ : ತಾಲೂಕಿನ ಹಲಗಾ ಗ್ರಾಮದ ಸುವರ್ಣ ವಿಧಾನಸೌಧ ಬಳಿಯ ಭ. 1008 ಮುನಿಸುವ್ರತ ದಿಗಂಬರ ಜೈನ ಮಂದಿರದಲ್ಲಿ ಚಾತುರ್ಮಾಸ್ಯ ನಿಮಿತ್ತ ಪಾವನ ವರ್ಷಾಯೋಗ-2022 ಜು. 12ರಿಂದ ಹಮ್ಮಿಕೊಳ್ಳಲಾಗಿದೆ. ಬಾಲಾಚಾರ್ಯ ಶ್ರೀ 108 ಸಿದ್ಧಸೇನ ಮುನಿ ಮಹಾರಾಜ, ಆಚಾರ್ಯ ಶ್ರೀ 108 ಶಾಂತಿಸೇನ ಮುನಿ ಮಹಾರಾಜ, ಶ್ರೀ ಮಲ್ಲಿಸೇನ ಮುನಿ ಮಹಾರಾಜ, ಜಿನಮತಿ ಮಾತಾಜಿ, ಬ್ರಹ್ಮಚಾರಿಣಿ ಪದ್ಮರಾಗಾ ದೀದಿ, ಮಣಿಪ್ರಭಾ ದೀದಿ ಅವರು ಚಾತುರ್ಮಾಸ್ಯ ಕೈಗೊಂಡಿದ್ದಾರೆ. ಜು.12ರಿಂದ ಚಾತುರ್ಮಾಸ್ಯ ಆರಂಭವಾಗಲಿದ್ದು, ವಿವಿಧ ಧಾರ್ಮಿಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ. ಮಾಹಿತಿಗೆ ಮೊ: 9686538108.
ಎಡತೊರೆಯಲ್ಲಿ ಚಾತುರ್ಮಾಸ್ಯ
ಮೈಸೂರು: ಕೆ.ಆರ್.ನಗರ ತಾಲೂಕು ಹೆಬಸೂರು ಗ್ರಾಮದಲ್ಲಿರುವ ಜಪೆÂàಶ್ವರ ಕ್ಷೇತ್ರದ ಎಡತೊರೆ ಶ್ರೀ ಯೋಗಾನಂದೇಶ್ವರ ಸರಸ್ವತೀ ಮಠದ ಪೀಠಾಧಿಪತಿ ಶ್ರೀ ಶಂಕರ ಭಾರತೀ ಸ್ವಾಮೀಜಿ ಹಾಗೂ ಶ್ರೀ ಬ್ರಹ್ಮಾನಂದ ಭಾರತೀ ಸ್ವಾಮೀಜಿ ಅವರು ಜಪೆÂàಶ್ವರ ಕ್ಷೇತ್ರದಲ್ಲಿ ವ್ಯಾಸ ಪೂಜೆಯೊಂದಿಗೆ ಚಾತುರ್ಮಾಸ್ಯ ವ್ರತಾನುಷ್ಠಾನದ ಸಂಕಲ್ಪ ಕೈಗೊಳ್ಳಲಿದ್ದಾರೆ. ಸ್ವಾಮೀಜಿ ಅವರು ಜುಲೈ 13ರಿಂದ ಸೆ.10ರ ವರೆಗೆ ಚಾತುರ್ಮಾಸ್ಯ ಕೈಗೊಳ್ಳಲಿದ್ದಾರೆ. ಶ್ರೀ ವ್ಯಾಸಪೂಜೆ, ಉತ್ತರ ಪೂಜೆ , ಶ್ರೀ ವರಮಹಾಲಕ್ಷ್ಮೀ ವ್ರತ ನಡೆಯಲಿದೆ. ಭಕ್ತರು ಸಂಪರ್ಕಿಸಬಹುದಾದ ಸಂ: 08223-262471.
ಸೋದೆಯಲ್ಲಿ ಯತಿತ್ರಯರ ವ್ರತ
ಶಿರಸಿ: ಇಲ್ಲಿಯ ಸೋದೆ ವಾದಿರಾಜ ಮಠದ ಶ್ರೀ ವಿಶ್ವವಲ್ಲಭ ತೀರ್ಥ ಶ್ರೀಪಾದರು ಈ ಬಾರಿ ಶ್ರೀ ಮಠದಲ್ಲಿ ಆಷಾಢ ಪೂರ್ಣಿಮೆಯ ದಿನವಾದ ಜು.13ರಿಂದ ಸೆ.10ರವರೆಗೆ ಚಾತುರ್ಮಾಸ್ಯ ವ್ರತ ನಡೆಸಲಿದ್ದಾರೆ. ಭೀಮನಕಟ್ಟೆ ಮಠಾಧೀಶರಾದ ಶ್ರೀ ರಘುವರೇಂದ್ರ ತೀರ್ಥ ಶ್ರೀಪಾದಂಗಳವರು ಮತ್ತು ಶಿರೂರು ಮಠಾಧೀಶರಾದ ಶ್ರೀ ವೇದವರ್ಧನ ತೀರ್ಥ ಶ್ರೀಪಾದರು ಕೂಡ ಸೋದೆ ವಾದಿರಾಜ ಮಠದಲ್ಲಿ ಈ ಬಾರಿಯ ವ್ರತ ಕೈಗೊಳ್ಳಲಿದ್ದಾರೆ.
ಪುತ್ತಿಗೆ ಉಭಯ ಮಠಾಧೀಶರು
ಉಡುಪಿ: ಪುತ್ತಿಗೆ ಮಠದ ಶ್ರೀಸುಗುಣೇಂದ್ರತೀರ್ಥ ಶ್ರೀಪಾದರು ಅಮೆರಿಕದ ಸಾನೋಜೆ ಶಾಖಾ ಮಠದಲ್ಲಿ ಜು. 18ರಂದು, ಪುತ್ತಿಗೆ ಕಿರಿಯ ಶ್ರೀಸುಶ್ರೀಂದ್ರತೀರ್ಥ ಶ್ರೀಪಾದರು ಜು. 13ರಂದು ಹಿರಿಯಡಕ ಸಮೀಪದ ಪುತ್ತಿಗೆ ಮೂಲಮಠದಲ್ಲಿ ಚಾತುರ್ಮಾಸ್ಯವ್ರತ ಕೈಗೊಳ್ಳುವರು. ಸಾನೋಜೆ ಮಠದಲ್ಲಿ ನಿತ್ಯ ಧಾರ್ಮಿಕ ಪ್ರವಚನ, ವಿಶೇಷ ಪೂಜೆಗಳು ನಡೆಯಲಿವೆ. ಸಂಪರ್ಕ ಸಂಖ್ಯೆ: 9845043417.
ಮಂತ್ರಾಲಯ ಶ್ರೀಗಳ ಚಾತುರ್ಮಾಸ್ಯ
ರಾಯಚೂರು: ಮಂತ್ರಾಲಯದ ಶ್ರೀ ರಾಘ ವೇಂದ್ರ ಮಠದಲ್ಲಿ ಪೀಠಾಧಿಪತಿ ಶ್ರೀ ಸುಬು ಧೇಂದ್ರ ತೀರ್ಥರು ಈ ಬಾರಿಯ ಚಾತುರ್ಮಾಸ್ಯ ವ್ರತಾಚರಣೆ ಕೈಗೊಳ್ಳುವರು. ಜು.26ರಿಂದ 48 ದಿನಗಳ ಕಾಲ ಚಾತು ರ್ಮಾಸ್ಯ ದೀಕ್ಷೆ ಆಚರಿಸುವರು. ಆ.10ರಿಂದ ಶ್ರೀ ರಾಘವೇಂದ್ರ ಸ್ವಾಮಿಗಳ ಆರಾಧನೆ ಜರಗಲಿದೆ. ಹೀಗಾಗಿ ಪೀಠಾಧಿಪತಿಗಳು ಮಠದಲ್ಲೇ ಚಾತುರ್ಮಾಸ್ಯ ವ್ರತಾಚರಣೆ ಕೈಗೊಳ್ಳುವರು ಎಂದು ಶ್ರೀಮಠದ ವ್ಯವಸ್ಥಾಪಕ ವೆಂಕಟೇಶ ಜೋಶಿ ತಿಳಿಸಿದ್ದಾರೆ.
ಎಡನೀರು ಶ್ರೀಗಳ ಚಾತುರ್ಮಾಸ್ಯ
ಕುಂಬಳೆ: ಎಡನೀರು ಮಠದ ಶ್ರೀಸಚ್ಚಿದಾನಂದ ಭಾರತೀ ಸ್ವಾಮೀಜಿ ಅವರ ದ್ವಿತೀಯ ಚಾತುರ್ಮಾಸ್ಯ ಕಾರ್ಯಕ್ರಮಗಳು ಜು. 13 ರಿಂದ ಸೆ.10ರ ತನಕ ವಿವಿಧ ಧಾರ್ಮಿಕ, ತಾಂತ್ರಿಕ, ಸಾಂಸ್ಕೃತಿಕ ಕಾರ್ಯಕ್ರಮಗಳೊಂದಿಗೆ ಜರಗಲಿದೆ. ಜು.13 ರಂದು ಚಾತುರ್ಮಾಸ್ಯ ವ್ರತಾಚರಣೆಯು ಗಣಪತಿ ಹೋಮದೊಂದಿಗೆ ಪ್ರಾರಂಭಗೊಳ್ಳಲಿದೆ. ಅಂದು ಬೆಳಗ್ಗೆ 8 ರಿಂದ ವ್ಯಾಸ ಪೂಜೆಯೊಂದಿಗೆ ಆರಂಭವಾಗಿ ಮಧ್ಯಾಹ್ನ ಮಹಾಪೂಜೆ, ಅನ್ನದಾನ ಕಾರ್ಯಕ್ರಮಗಳು ಜರಗಲಿದೆ.
ವರದಪುರದಲ್ಲಿ ಗುರುಪೂರ್ಣಿಮೆ
ಸಾಗರ: ನಾಡಿನ ಸುಕ್ಷೇತ್ರ ವರದಹಳ್ಳಿಯಲ್ಲಿ ಚಾತುರ್ಮಾಸ್ಯ ಕಾರ್ಯಕ್ರಮಗಳು ಜು.13ರಿಂದ ಆರಂಭಗೊಳ್ಳಲಿವೆ. ಶ್ರೀ ಶ್ರೀಧರ ಸ್ವಾಮಿಗಳು ಮುಕ್ತರಾದ ನಂತರವೂ ತಾಲೂಕಿನ ಭಕ್ತಿ ಕ್ಷೇತ್ರ ವರದಪುರದಲ್ಲಿ ಸ್ವಾಮಿಗಳು ಇದ್ದು ಚಾತುರ್ಮಾಸ್ಯ ಮಾಡುತ್ತಿದ್ದಾರೆಂದು ಪರಿಭಾವಿಸಿ ಶ್ರೀಧರ ಸ್ವಾಮಿಗಳ ಚಾರ್ತುರ್ಮಾಸ್ಯ ವಿಧಿ-ವಿಧಾನಗಳನ್ನು ನಡೆಸಲಾಗುತ್ತದೆ. ಜು.13ರಂದು ಶ್ರೀಧರಾಶ್ರಮದಲ್ಲಿ ಗುರುಪೂರ್ಣಿಮೆ ಅಂಗವಾಗಿ ವ್ಯಾಸ ಪೂಜೆ, ರಾಮ ತಾರಕ ಹವನ, ವಿಶೇಷ ಪೂಜೆ ಮುಂತಾದವುಗಳನ್ನು ಹಮ್ಮಿಕೊಳ್ಳಲಾಗಿದೆ. ನಾಲ್ಕು ತಿಂಗಳ ನಂತರ ಚಾತುರ್ಮಾಸ್ಯ ಮುಕ್ತಾಯದ ಸಂದರ್ಭದಲ್ಲಿಯೂ ಹಲವು ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುತ್ತದೆ ಎಂದು ಶ್ರೀಧರ ಮಹಾಮಂಡಲದ ಕಾರ್ಯದರ್ಶಿ ಶ್ರೀಧರ ಹೆಗಡೆ ಕಾನಲೆ ತಿಳಿಸಿದ್ದಾರೆ.
ಶ್ರೀಕೃಷ್ಣಮಠದಲ್ಲಿ ಕೃಷ್ಣಾಪುರ, ಕಾಣಿಯೂರು ಮಠಾಧೀಶರು
ಉಡುಪಿ: ಉಡುಪಿ ಶ್ರೀಕೃಷ್ಣಮಠದಲ್ಲಿ ಪರ್ಯಾಯ ಕೃಷ್ಣಾಪುರ ಮಠದ ಶ್ರೀವಿದ್ಯಾಸಾಗರತೀರ್ಥ ಶ್ರೀಪಾದರು, ಕಾಣಿಯೂರು ಮಠದ ಶ್ರೀವಿದ್ಯಾವಲ್ಲಭತೀರ್ಥ ಶ್ರೀಪಾದರು ಟೀಕಾಚಾರ್ಯರ ಪುಣ್ಯತಿಥಿ ಪಂಚಮಿ ಜು. 18ರಂದು ಚಾತುರ್ಮಾಸ್ಯ ವ್ರತ ದೀಕ್ಷೆಯನ್ನು ಕೈಗೊಳ್ಳುವರು. ಸಂಪರ್ಕ ಸಂಖ್ಯೆ: ಕೃಷ್ಣಾಪುರ ಮಠ 9448982934, ಕಾಣಿಯೂರು ಮಠ 9448312242
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
A.B.Vajpayee Birth Century: ಭವಿಷ್ಯದ ಭಾರತಕ್ಕೆ ಅಟಲ್ ಬಿಹಾರಿ ವಾಜಪೇಯಿ ಭದ್ರ ಬುನಾದಿ
YearEnder 2024: ಪ್ರಧಾನಿ ಮೋದಿ ಅವರ ರಾಜಕೀಯ ಜೀವನದಲ್ಲಿ 2024 ಯಾಕೆ ಮಹತ್ವದ ವರ್ಷವಾಗಿದೆ?
A.B.Vajpayee Birth Century: ಅಜಾತಶತ್ರು, ಬಹುಮುಖಿ ವ್ಯಕ್ತಿತ್ವದ ಅಟಲ್ ಬಿಹಾರಿ ವಾಜಪೇಯಿ
A.B.Vajapayee Birth Century: ಸರಳತೆಯ ಸಾಕಾರಮೂರ್ತಿ ನಮ್ಮ ವಾಜಪೇಯಿ
ಮೇಲ್ಮನೆಗೆ ನಾನೇ ಫೈನಲ್, ನನ್ನ ಹಕ್ಕುಚ್ಯುತಿ ಬಗ್ಗೆ ಕಾನೂನು ತಜ್ಞರ ಜತೆ ಸಮಾಲೋಚಿಸಿ ಕ್ರಮ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.