ಪೌರತ್ವ ತಿದ್ದುಪಡಿ ಕಾಯಿದೆ ನಿರಾಶ್ರಿತರ ಬಾಳಿಗೆ ವರದಾನ
Team Udayavani, Dec 16, 2019, 5:59 AM IST
ಬಾಂಗ್ಲಾದೇಶ, ಅಫ್ಘಾನಿಸ್ತಾನ, ಪಾಕ್‌ನಿಂದ ಭಾರತಕ್ಕೆ ಬಂದ ಮುಸಲ್ಮಾನರು ಅಲ್ಲಿ ಧಾರ್ಮಿಕ ಹಿಂಸಾಚಾರಕ್ಕೆ ತುತ್ತಾಗಿ ಬಂದವರಲ್ಲ. ಅಕ್ರಮವಾಗಿ ನುಸುಳಿದವರು. ದೇಶಾದ್ಯಂತ ಹರಡಿ, ರೇಷನ್, ಆಧಾರ್ ಕಾರ್ಡ್, ಮತದಾನ ಚೀಟಿ ಪಡೆದುಕೊಂಡಿದ್ದಾರೆ. ಆದರೆ, ಆ ರಾಷ್ಟ್ರಗಳಲ್ಲಿ ಹಿಂಸಾಚಾರಕ್ಕೆ ತುತ್ತಾಗಿ ಭಾರತಕ್ಕೆ ಬಂದವರು ದಯನೀಯ ಸ್ಥಿತಿಯಲ್ಲಿದ್ದಾರೆ.
“”ಇದೊಂದು ಪೌರತ್ವ ನೀಡುವ ಕಾಯಿದೆಯೇ ಹೊರತು ಹಿಂಪಡೆಯುವ ಕಾಯಿದೆಯಲ್ಲ” ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ರಾಜ್ಯಸಭೆಯಲ್ಲಿ ಸ್ಪಷ್ಟವಾಗಿ ಕೊಟ್ಟ ಹೇಳಿಕೆ ಈ ಕಾಯಿದೆಯ ಮೂಲ ಉದ್ದೇಶವನ್ನು ಅನುಮಾನಕ್ಕೆ ಆಸ್ಪದವಿಲ್ಲದಂತೆ ವಿವರಿಸುತ್ತದೆ.
1955ರಲ್ಲಿ ನೆಹರೂರವರು ಪ್ರಧಾನಿಯಾಗಿದ್ದ ಸಂದರ್ಭದಲ್ಲಿ ಭಾರತೀಯ ಪೌರತ್ವ ವಿಧೇಯಕವನ್ನು ಜಾರಿಗೆ ತಂದರು. ಇದರನ್ವಯ ದೇಶ ವಿಭಜನೆಯಾದಾಗ ನೆರೆ ದೇಶಗಳಿಗೆ ವಲಸೆ ಹೋದ ಮೂಲ ಭಾರತೀಯರಿಗೆ ಮತ್ತೆ ಪೌರತ್ವ ನೀಡಲು ಇದರಲ್ಲಿ ಅವಕಾಶ ಕಲ್ಪಿಸಲಾಯಿತು. ಸೂಕ್ತ ದಾಖಲೆಗಳನ್ನು ನೀಡಿ 12 ವರ್ಷಗಳಿಂದ ಭಾರತದಲ್ಲಿ ನೆಲೆಸಿದ್ದರೆ ಅಂತಹವರಿಗೆ ಭಾರತೀಯ ಪೌರತ್ವವನ್ನು ನೀಡಲಾಗುತ್ತಿತ್ತು.
ಮೋದಿ ಸರಕಾರವು 1955ರ ಪೌರತ್ವ ವಿಧೇಯಕಕ್ಕೆ ತಿದ್ದುಪಡಿಯನ್ನು ತಂದು ಪಾಕಿಸ್ತಾನ, ಅಫ್ಘಾನಿಸ್ತಾನ ಮತ್ತು ಬಾಂಗ್ಲಾದೇಶದಲ್ಲಿ ಧಾರ್ಮಿಕ ಕಿರುಕುಳ ತಾಳ ಲಾ ರ ದೆ ಭಾರತಕ್ಕೆ ಆಶ್ರಯ ಅರಸಿ ಬಂದ ಹಿಂದೂ, ಪಾರ್ಸಿ, ಬೌದ್ಧ, ಕ್ರಿಶ್ಚಿಯನ್ ಮತ್ತು ಸಿಕ್ಖರಿಗೆ ಪೌರತ್ವ ನೀಡಲು ಅವಕಾಶ ನೀಡಿದೆ.
ಈ ಹಿಂದೆ 12 ವರ್ಷ ಭಾರತದಲ್ಲಿ ನೆಲೆಸಿದ್ದವರಿಗೆ ಪೌರತ್ವ ನೀಡಲಾಗುತ್ತಿತ್ತು. ಅದನ್ನು 5 ವರ್ಷಕ್ಕೆ ಇಳಿಸಲಾಗಿದೆ. 2014ರ ಮುನ್ನ ಯಾರು ಭಾರತದಲ್ಲಿ ನೆಲೆಸಿದ್ದಾರೋ ಅಂತಹವರಿಗೆ ಮಾತ್ರ ಪೌರತ್ವ ನೀಡಲು ತಿದ್ದಪಡಿಯಲ್ಲಿ ಅವಕಾಶವಿದೆ.
ಈ ವಿಧೇಯಕದ ತಿದ್ದುಪಡಿಗೆ ಕಾಂಗ್ರೆಸ್ ನೇತೃತ್ವದ ವಿರೋಧ ಪಕ್ಷಗಳು ಮತ್ತು ಕೆಲವು ತಥಾಕಥಿತ ಬುದ್ಧಿಜೀವಿಗಳು ತಮ್ಮ ತೀವ್ರ ವಿರೋಧವನ್ನು ವ್ಯಕ್ತಪಡಿಸುತ್ತಿದ್ದಾರೆ. ಕಾರಣ ಈ ತಿದ್ದುಪಡಿಯಲ್ಲಿ ಮುಸಲ್ಮಾನರನ್ನು ಹೊರತುಪಡಿಸಿ ಇತರರನ್ನು ಸೇರಿಸಲಾಗಿದೆ. ಇದು ದೇಶದ ಜಾತ್ಯತೀತ ತತ್ವಗಳಿಗೆ ವಿರುದ್ಧ ಎಂಬುದು ಇವರ ಅಂಬೋಣ.
1947ರಲ್ಲಿ ದೇಶ ವಿಭಜನೆಯಾಗಿದ್ದು, ಧರ್ಮದ ಆಧಾರದ ಮೇಲೆ ಎಂಬುದನ್ನು ಯಾರೂ ಅಲ್ಲಗಳೆಯಲು ಸಾಧ್ಯವಿಲ್ಲ. ಭಾರತ ಮಾತ್ರ ಎಲ್ಲಾ ಧರ್ಮೀಯರನ್ನು ಕಾಪಾಡುವ ಭರವಸೆಯನ್ನು ನೀಡಿತ್ತು. ಆದರೆ ಪಾಕಿಸ್ತಾನವು ಇಸ್ಲಾಮಿಕ್ ರಾಷ್ಟ್ರವಾಗಿ ಬದಲಾಯಿತು. ಇದರ ಪರಿಣಾಮ 1947ರಲ್ಲಿ ಹಿಂದೂಗಳ ಜನಸಂಖ್ಯೆ 23% ರಷ್ಟು ಇದ್ದದ್ದು 2011ರ ವೇಳೆಗೆ 3.7% ಕ್ಕೆ ಬಂದು ನಿಂತಿ ತು. ಹಾಗೆಯೇ ಬಾಂಗ್ಲಾದೇಶದಲ್ಲಿ 1947ರಲ್ಲಿ 23% ರಷ್ಟು ಇದ್ದ ಹಿಂದೂಗಳ ಜನಸಂಖ್ಯೆಯು 2011 ರ ವೇಳೆಗೆ 7%ಕ್ಕೆ ಕುಸಿದಿದೆ. ದೇಶ ವಿಭಜನೆಯ ಸಂದರ್ಭದಲ್ಲಿ ಪಾಕಿಸ್ತಾನದಲ್ಲಿ ನೆಲೆಸಿದ್ದ ಹಿಂದೂಗಳು ಮತ್ತು ಇತರ ಧಾರ್ಮಿಕ ಅಲ್ಪಸಂಖ್ಯಾತರು ಈ ಎರಡೂ ದೇಶಗಳಲ್ಲಿ ನಡೆಯುತ್ತಿದ್ದ ಧಾರ್ಮಿಕ ಹಿಂಸಾಚಾರ, ಮತಾಂತರಕ್ಕೆ ಬೆದರಿ ಭಾರತಕ್ಕೆ ವಲಸೆ ಬಂದು ಕಳೆದ ಹಲವಾರು ವರ್ಷಗಳಿಂದ ನಿರಾಶ್ರಿತರಾಗೇ ಉಳಿದಿದ್ದಾರೆ.
ಭಾರತ ತನ್ನ ಸಂಸ್ಕೃತಿಗನುಗುಣವಾಗಿ ಸರ್ವ ಧರ್ಮ ಸಮಭಾವ ತತ್ವದಡಿಯಲ್ಲಿ ಎಲ್ಲಾ ಧರ್ಮೀಯರನ್ನೂ ಸಮಾನವಾಗಿ ಕಾಣುತ್ತಿರುವುದರಿಂದ ಮತ್ತು ಸಮಾಜ ಮತ್ತು ಸಂವಿಧಾನದ ಬಲದಿಂದ ಇಲ್ಲಿ ಅಲ್ಪಸಂಖ್ಯಾತರು ನಿಶ್ಚಿಂತೆಯಿಂದ ತಮ್ಮ ಬದುಕು ಕಟ್ಟಿಕೊಳ್ಳಲು ವಿಭಜನೆಯ ತರುವಾಯವೂ ಸಾಧ್ಯವಾದ ಕಾರಣ 1947ರಲ್ಲಿ ಶೇ. 9.8ರಷ್ಟಿದ್ದ ಮುಸ್ಲಿಮರ ಜನಸಂಖ್ಯೆ 2011ರ ವೇಳೆ ಗೆ 15% ಕ್ಕೆ ಏರಿದೆ.
ದಶಕಗಳಿಂದ ಭಾರತ ಎರಡು ರೀತಿಯ ವಲಸಿಗರ ಸಮಸ್ಯೆಯನ್ನು ಎದುರಿಸುತ್ತಿದೆ. ಧಾರ್ಮಿಕ ಕಿರುಕುಳ ಅನುಭವಿಸಿದ ಪಾಕಿಸ್ತಾನ ಮತ್ತು ಬಾಂಗ್ಲಾದೇಶದ ಅಲ್ಪಸಂಖ್ಯಾತರು ಮತ್ತು ಬಾಂಗ್ಲಾದೇಶದಿಂದ ಅಕ್ರಮವಾಗಿ ನುಸುಳಿ ಬಂದಿರುವ ಬಾಂಗ್ಲಾದೇಶದ ಮುಸಲ್ಮಾನರು.
ಗಡಿ ಭಾಗದಲ್ಲಿ ಲಕ್ಷಾಂತರ ಸಂಖ್ಯೆಯಲ್ಲಿ ಬಾಂಗ್ಲಾದೇಶದಿಂದ ನುಸುಳಿ ಬಂದು ನೆಲೆಸಿರುವ ಕಾರಣ ಅಸ್ಸಾಂ, ಪಶ್ಚಿಮ ಬಂಗಾಳ ತ್ರಿಪುರ ಮುಂತಾದ ರಾಜ್ಯಗಳಲ್ಲಿ ಈ ಅಕ್ರಮ ನುಸುಳುಕೋರರು ತಲೆನೋವಾಗಿ ಪರಿಣಮಿಸಿದ್ದಾರೆ. ಒಂದು ಅಂದಾಜಿನ ಪ್ರಕಾರ 2 ಕೋಟಿಗೂ ಹೆಚ್ಚು ಬಾಂಗ್ಲಾದೇಶಿಯರು ದೇಶದಲ್ಲಿ ಅಕ್ರಮವಾಗಿ ವಾಸವಾಗಿದ್ದಾರೆ ಎಂದು ಹೇಳಲಾಗುತ್ತದೆ. ಗಡಿ ಪ್ರದೇಶಕ್ಕೆ ಸಿಮೀತವಾಗಿದ್ದ ಇವರ ಹಾವಳಿ ಕರ್ನಾಟಕದವರೆಗೂ ಹರಡಿರುವುದು ಪರಿಸ್ಥಿತಿಯ ಗಂಭೀರತೆಗೆ ಕನ್ನಡಿ ಹಿಡಿಯುತ್ತದೆ.
ಪ್ರಪಂಚದ ಯಾವುದೇ ದೇಶವು ಅಕ್ರಮ ನುಸುಳುಕೋರರಿಗೆ ಕೆಂಪುಗಂಬಳಿ ಹಾಕಿ ಸ್ವಾಗತಿಸುವುದಿಲ್ಲ. ಪ್ರತಿಯೊಂದು ದೇಶವೂ ತನ್ನ ನಾಗರಿಕರ ರಕ್ಷಣೆಗೆ ಬದ್ಧವಾಗಿರುತ್ತದೆ. ಅಮೆರಿಕದಂತಹ ಮುಂದುವರೆದ ರಾಷ್ಟ್ರವೂ ಮೆಕ್ಸಿಕೋ ದೇಶದ ಅಕ್ರಮ ನುಸುಳುಕೋರರನ್ನು ತಡೆಯಲು 2,100 ಮೈಲಿ ದೂರದಷ್ಟು ತಡೆಗೋಡೆಯನ್ನು ನಿರ್ಮಿಸುತ್ತಿದೆ. ಇದನ್ನು ಅಮೆರಿಕನ್ನರು “”ಟ್ರಂಪ್ ವಾಲ್” ಎಂದು ಕರೆಯುತ್ತಿದ್ದಾರೆ. ಇದಕ್ಕಾಗಿ ಅಮೆರಿಕ ಸರ್ಕಾರವು 3.3ಲಕ್ಷ ಕೋಟಿ ಹಣವನ್ನು ವೆಚ್ಚ ಮಾಡುವ ಅಂದಾಜು ಮಾಡಲಾಗಿದೆ.
ಇಸ್ರೇಲ್, ಹಂಗೇರಿ, ಸೌದಿ ಅರೇಬಿಯಾ, ಟರ್ಕಿ, ಯುಕ್ರೇನ್-ರಷ್ಯಾ, ಭಾರತವಲ್ಲದೆ ಪಾಕಿಸ್ತಾನವೂ ಕೂಡಾ ಅಫ್ಘಾನಿಸ್ತಾನದ ಸರಹದ್ದಿನಲ್ಲಿ ತಡೆಗೋಡೆ ನಿರ್ಮಾಣ ಮಾಡುತ್ತಿದೆ. ಸಾವಿರಾರು ಕೋಟಿ ಹಣವನ್ನು ವೆಚ್ಚಮಾಡಿ ತನ್ನ ದೇಶದ ಹಿತವನ್ನು ಕಾಯಲು ಪ್ರತಿಯೊಂದು ದೇಶವೂ ಸಾಧ್ಯವಿರುವ ಎಲ್ಲಾ ಕ್ರಮಗಳನ್ನು ಕೈಗೊಳ್ಳುತ್ತದೆ.
ಅಕ್ರಮ ನುಸುಳುಕೋರರು ದೇಶದ ಸಂಪನ್ಮೂಲಕ್ಕೆ ಹೊರೆ ಯಾಗುವವರು ಮತ್ತು ದೇಶದ ಭದ್ರತೆಗೆ ಹಾಗೂ ಸುರಕ್ಷತೆಗೆ ಸವಾಲು ಕೂಡಾ. ಇವರ ನುಸುಳುವಿಕೆಯು ಮಾದಕ ವಸ್ತುಗಳ ಹಾವಳಿಗೂ ಕಾರಣವಾಗುವುದು ಈಗಾಗಲೇ ಸಾಬೀತಾಗಿದೆ.
ಬೆಂಗಳೂರಿನಿಂದ 50 ಮೈಲಿ ದೂರದ ರಾಮನಗರದಲ್ಲಿ ಭಯೋತ್ಪಾದಕ ಚಟುವಟಿಕೆಯಲ್ಲಿ ತೊಡಗಿದ್ದ ಹಲವು ಬಾಂಗ್ಲಾದೇಶಿಯರನ್ನು ಎನ್‌ಐಎ ಬಂಧಿಸಿದೆ. ದೇಶದ ನಾನಾ ಕಡೆ ಇವರ ಉಪಟಳ ಇರುವುದು ತನಿಖೆಯ ಮೂಲಕ ತಿಳಿದುಬಂದಿದೆ.
ಮ್ಯಾನ್ಮಾರ್‌ನಿಂದ ಬಾಂಗ್ಲಾ ಮೂಲಕ ವಲಸೆ ಬಂದಿರುವ ರೊಹಿಂಗ್ಯಾ ಮುಸಲ್ಮಾನರು ಈಗಾಗಲೇ ದೇಶಕ್ಕೆ ತಲೆನೋವಾಗಿದ್ದಾರೆ. ಅನೇಕ ಅಕ್ರಮ ಚಟುವಟಿಕೆಗಳಲ್ಲಿ ಇವರ ಪಾತ್ರ ಬಹಿರಂಗವಾಗಿದೆ. ಪಶ್ಚಿಮ ಬಂಗಾಳದ 10 ಜಿಲ್ಲೆಗಳಲ್ಲಿ ಇವರ ಜನಸಂಖ್ಯೆಯು ಗಣನೀಯವಾಗಿ ಏರಿಕೆ ಕಂಡಿದೆ. ಈ ಎಲ್ಲಾ 10 ಜಿಲ್ಲೆಗಳು ಬಾಂಗ್ಲಾದೇಶದೊಂದಿಗೆ ಗಡಿಯನ್ನು ಹಂಚಿಕೊಂಡಿವೆ.
2005ರಲ್ಲಿಯೇ ಮಮತಾ ಬ್ಯಾನರ್ಜಿಯವರು ಬಾಂಗ್ಲಾ ನುಸುಳುಕೋರರ ಹಾವಳಿಯನ್ನು ಸಂಸತ್ತಿನಲ್ಲಿ ಪ್ರಸ್ತಾಪಿಸಿ ಇದರ ವಿರುದ್ಧ ತೀವ್ರವಾದ ಕ್ರಮಕ್ಕೆ ಒತ್ತಾಯ ಮಾಡಿದ್ದರು. ಹೂಗ್ಲಿ ನದಿಯಲ್ಲಿ ಅಂದಿಗೂ ಇಂದಿಗೂ ತುಂಬಾ ನೀರು ಹರಿದಿದೆ. ಹೀಗಾಗಿ ಅಂದು ಅಕ್ರಮ ನುಸುಳುಕೋರರ ವಿರುದ್ಧ ಧ್ವನಿ ಎತ್ತಿದ್ದ ಮಮತಾ ಇಂದು ಅಕ್ರಮ ನುಸುಳುಕೋರರ ಪರವಾಗಿ ವಾದ ಮಂಡಿಸುತ್ತಿದ್ದಾರೆ. ಓಟ್ ಬ್ಯಾಂಕ್ ರಾಜಕಾರಣವನ್ನು ಮತ್ತೂಂದು ಮಜಲಿಗೆ ಕೊಂಡೊಯ್ದಿದ್ದಾರೆ.
ಬಾಂಗ್ಲಾದೇಶದಿಂದ ನುಸುಳಿ ಬಂದ ಅಕ್ರಮ ವಲಸಿಗರು ದೇಶಾದ್ಯಂತ ಹರಡಿ ರೇಷನ್ ಕಾರ್ಡ್, ಆಧಾರ್ ಕಾರ್ಡ್ ಮತ್ತು ಮತದಾನ ಚೀಟಿಯನ್ನು ಪಡೆದುಕೊಳ್ಳಲು ಯಶಸ್ವಿಯಾಗಿದ್ದಾರೆ. ಆದರೆ ಇನ್ನೊಂದೆಡೆ ಧಾರ್ಮಿಕ ಹಿಂಸಾಚಾರಕ್ಕೆ ಮತ್ತು ಕಿರುಕುಳಕ್ಕೆ ಒಳಗಾಗಿ ಭಾರತಕ್ಕೆ ಓಡಿ ಬಂದ ವಲಸಿಗರು ದಯನೀಯವಾದ ಬದುಕನ್ನು ದಶಕಗಳಿಂದ ಕಳೆಯುತ್ತಿದ್ದಾರೆ.
ಇವರ ದುಸ್ತರ ಬದುಕನ್ನು ನೋಡಿದ ಮಾಜಿ ಪ್ರಧಾನಿ ಮನಮೋಹನ್ ಸಿಂಗ್‌ರವರು 2003ರಲ್ಲಿ ಧಾರ್ಮಿಕ ಹಿಂಸಾಚಾರಕ್ಕೆ ಒಳಗಾಗಿ ನಿರಾಶ್ರಿರಾಗಿ ವಲಸೆ ಬಂದಿರುವ ಹಿಂದೂ ಮತ್ತು ಇತರ ಅಲ್ಪಸಂಖ್ಯಾತರಿಗೆ ಭಾರತದ ಪೌರತ್ವ ನೀಡಿ ಎಂದು ಸರ್ಕಾರಕ್ಕೆ ಪತ್ರ ಬರೆದಿದ್ದರು. ಅಷ್ಟೇಕೆ 1947ರಲ್ಲಿ ಮಹಾತ್ಮ ಗಾಂಧಿಯವರು ಪಾಕಿಸ್ತಾನದಲ್ಲಿ ವಾಸ ಮಾಡುವ ಹಿಂದೂ ಮತ್ತು ಸಿಖVರು ಭಾರತಕ್ಕೆ ಬರಲು ಇಚ್ಛಿಸಿದರೆ ಅವರನ್ನು ರಕ್ಷಿಸುವ ಕೆಲಸ ನಮ್ಮದು ಎಂದು ಹೇಳಿದ್ದರು. 1955ರಲ್ಲಿ ಜಾರಿಗೆ ತಂದಿದ್ದ ಭಾರತೀಯ ಪೌರತ್ವ ಮಸೂದೆಗೆ ಈವರೆಗೆ 1986, 1992, 2003, 2005 ಮತ್ತು 2015ರಲ್ಲಿ ತಿದ್ದುಪಡಿ ಮಾಡಲಾಗಿದೆ. ವಿವಿಧ ವರ್ಗಗಳ ನಾಗರಿಕರಿಗೆ ಭಾರತೀಯ ಪೌರತ್ವ ನೀಡಲು ಈ ತಿದ್ದುಪಡಿಯನ್ನು ಮಾಡಲಾಗಿತ್ತು. 2019ರಲ್ಲಿ ತಂದಿರುವ ತಿದ್ದುಪಡಿಯು ಕಳೆದ ಹಲವಾರು ದಶಕಗಳಿಂದ ನಿರಾಶ್ರಿತರ ಪಟ್ಟ ಹೊತ್ತು ನರಳುತ್ತಿರುವ ಸಂತ್ರಸ್ತರ ನೆರವಿಗೆ ಬಂದಿದೆ.
ಕೇವಲ ಆರು ಧರ್ಮಗಳಿಗೇಕೆ ರಿಯಾಯಿತಿ?
ಕೇವಲ ಈ 6 ಧರ್ಮಗಳಿಗೆ ಮಾತ್ರ ಏಕೆ ಈ ರಿಯಾಯಿತಿ ಎಂಬ ಪ್ರಶ್ನೆ ಸಹಜವಾಗಿ ಎದ್ದೇಳುತ್ತದೆ. ದೇಶ ವಿಭಜನೆಯಾದ ಸಂದರ್ಭದಲ್ಲಿ ಪಾಕಿಸ್ತಾನದಲ್ಲಿ ನೆಲೆಸಿದ ಮೂಲ ಭಾರತೀಯರು ಧಾರ್ಮಿಕ ಕಿರುಕುಳಕ್ಕೆ ಒಳಗಾಗಿ ಭಾರತಕ್ಕೆ ಮರಳಿ ಬಂದರೆ ಅವರನ್ನು ಕಾಪಾಡುವ ಹೊಣೆಗೆ ಸರ್ಕಾರ ಬದ್ಧವಾಗಿತ್ತು.
ಮುಸಲ್ಮಾನರಿಗೆ ಯಾಕೆ ರಿಯಾಯಿತಿ ನೀಡಿಲ್ಲ? ಏಕೆಂದರೆ ಈ ಮೂರೂ ರಾಷ್ಟ್ರಗಳು(ಪಾಕಿಸ್ತಾನ, ಆಫಾYನಿಸ್ತಾನ ಮತ್ತು ಬಾಂಗ್ಲಾದೇಶ) ಇಸ್ಲಾಮಿಕ್ ರಾಷ್ಟ್ರಗಳು. ಹೀಗಾಗಿ ಮುಸಲ್ಮಾನರ ವಿರುದ್ಧವೇ ಅಲ್ಲಿ ಧಾರ್ಮಿಕ ಹಿಂಸೆ ನಡೆಯಲು ಸಾಧ್ಯವಿಲ್ಲ. ಹೀಗಿದ್ದರೂ 2014ರಿಂದ 2018ರವರೆಗೆ ರಾಜಕೀಯವಾಗಿ ಆಶ್ರಯ ಬಯಸಿದ 600ಕ್ಕೂ ಹೆಚ್ಚು ಪಾಕಿಸ್ತಾನಿ ಮುಸಲ್ಮಾನರಿಗೆ ಭಾರತ ಪೌರತ್ವವನ್ನು ನೀಡಿದೆ. ಖ್ಯಾತ ಗಾಯಕ ಆದ್ನಾನ್ ಸಾಮಿ ಉದಾಹರಣೆ ಇಲ್ಲಿ ಉಲ್ಲೇಖಾರ್ಹ.
ಪಾಕ್, ಅಫ್ಘಾ ನಿ ಸ್ತಾನ, ಬಾಂಗ್ಲಾದ ಮುಸಲ್ಮಾನರು ಧಾರ್ಮಿಕ ಹಿಂಸಾಚಾರಕ್ಕೆ ಒಳಗಾಗಿ ಆ ದೇಶಗಳಿಂದ ಭಾರತಕ್ಕೆ ವಲಸೆ ಬಂದವರಲ್ಲ. ಕೇವಲ ಅಕ್ರಮವಾಗಿ ನುಸುಳಿ ಇಲ್ಲಿ ನೆಲೆಯೂರಲು ಬಂದವರು. ಅವರನ್ನು ಪುರಸ್ಕರಿಸುವ ಯಾವುದೇ ಹೆಜ್ಜೆಯು ದೇಶದ ಸುರಕ್ಷತೆಗೆ ಮತ್ತು ದೇಶದ ಸಂಪನ್ಮೂಲಕ್ಕೆ ಭಾರವಾಗುವುದಲ್ಲದೆ ಮುಂದಿನ ದಿನಗಳಲ್ಲಿ ಇವರ ಸಂಖ್ಯೆಯು ಅಪಾರ ಪ್ರಮಾಣದಲ್ಲಿ ಹೆಚ್ಚಲು ಉತ್ತೇಜಿಸುವ ಕ್ರಮವಾಗುತ್ತದೆ.
ಕೇವಲ ಅನ್ಯ ದೇಶಗಳ ಮುಸಲ್ಮಾನರಿಗಷ್ಟೇ ಅಲ್ಲ, ಶ್ರೀಲಂಕಾದಿಂದ ಬಂದು ನೆಲೆಸಿರುವ ಹಿಂದೂಗಳಿಗೂ ಪೌರತ್ವ ನೀಡಲಾಗುತ್ತಿಲ್ಲ. ಕೇವಲ ಧಾರ್ಮಿಕ ಹಳದಿ ಕನ್ನಡಕವನ್ನು ಹಾಕಿಕೊಂಡು ನೋಡುವವರಿಗೆ ಇದು ಅರ್ಥವಾದಂತೆ ಕಂಡು ಬಂದಿಲ್ಲ.
ಭಾರತೀಯ ಮುಸ್ಲಿಮರಿಗೆ ಈ ತಿದ್ದುಪಡಿಯಿಂದ ಯಾವುದೇ ತೊಂದರೆಯ ಪ್ರಶ್ನೆಯೇ ಇಲ್ಲ ಅಥವಾ ಪೌರತ್ವ ಕಳೆದುಕೊಳ್ಳುವ ಪ್ರಮೇಯವೂ ಇಲ್ಲ. ಈ ತಿದ್ದುಪಡಿಯು ಕೇವಲ ದಶಕಗಳಿಂದ ಭಾರತದಲ್ಲಿ ವಾಸ ಮಾಡುತ್ತಿರುವ ನಿರಾಶ್ರಿತರಿಗೆ ಪೌರತ್ವ ನೀಡುವ ಕಾಯಿದೆಯಾಗಿದೆ. ಕೇವಲ ರಾಜಕೀಯ ಕಾರಣಗಳಿಗೆ ಇದನ್ನು ವಿರೋಧಿಸುವುದಲ್ಲದೆ ಅಲ್ಪಸಂಖ್ಯಾತರಲ್ಲಿ ಭಯ ನಿರ್ಮಾಣ ಮಾಡುವ ಕುಚೇಷ್ಟೆಗಳು ನಡೆಯುತ್ತಿವೆ. ಅಕ್ರಮ ನುಸುಳುಕೋರರನ್ನು ಉತ್ತೇಜಿಸದಿರುವುದು ಯಾವ ಜಾತ್ಯಾತೀತ ಸಿದ್ಧಾಂತಕ್ಕೆ ಧಕ್ಕೆ ತರುತ್ತದೆ ಎಂದು ಈ ಕಾಯಿದೆಗೆ ಆಕ್ಷೇಪ ವ್ಯಕ್ತಪಡಿಸುವವರು ಸ್ಪಷ್ಟನೆ ಕೊಡ ಬೇಕಾಗಿದೆ. ಪ್ರಪಂಚ ದ ಯಾವ ಸಂವಿಧಾನದಲ್ಲಿ ದೇಶವೊಂದರಲ್ಲಿ ಕ್ಷೊàಭೆ ಉಂಟುಮಾಡಲೆಂದೇ ಅಕ್ರಮವಾಗಿ ನೆಲೆಯೂರಿರುವವರಿಗೆ ಪೌರತ್ವ ಕೊಡಬೇಕು ಎಂದು ಹೇಳಿದೆ ಎಂಬುದನ್ನು ತಿಳಿಸಬೇಕು.
ಮುಸ್ಲಿಮರಲ್ಲಿ ಇಲ್ಲದ ಭಯವನ್ನು ಹುಟ್ಟು ಹಾಕುವ ಪ್ರಯತ್ನ ಮಾಡುತ್ತಿರುವವರಿಂದಲೇ ಇಂದು ದೇಶವನ್ನು ಒಡೆಯುವ ಕೆಲಸ ನಡೆಯುತ್ತಿದೆ ಎಂದರೆ ತಪ್ಪಾಗಲಾರದು.
ಕರ್ನಾಟಕದ ರಾಯಚೂರು ಜಿಲ್ಲೆಯಲ್ಲಿ 20,000 ಬಾಂಗ್ಲಾ ಹಿಂದೂ ನಿರಾಶ್ರಿತರು ಕಳೆದ ಹಲವಾರು ವರ್ಷಗಳಿಂದ ವಾಸಮಾಡುತ್ತಿದ್ದಾರೆ. ಈ ಕಾಯಿದೆ ಅವರಿಗೆ ನೆಮ್ಮದಿಯ ಬದುಕನ್ನು ಕಟ್ಟಿಕೊಡುತ್ತದೆ. ಇತಿಹಾಸದಲ್ಲಿ ನಡೆದಿದ್ದ ತಪ್ಪಿನಿಂದ ನೆಮ್ಮದಿಯ ಬಾಳನ್ನು ಕಳೆದುಕೊಂಡಿದ್ದ ಲಕ್ಷಾಂತರ ಸಂತ್ರಸ್ತರಿಗೆ ಹೊಸ ಬದುಕನ್ನು ಈ ಕಾಯಿದೆಯು ಒದಗಿಸುತ್ತಿದೆ. ಪ್ರಾಯಶಃ ಇಂತಹ ನಿರ್ಧಾರಗಳನ್ನು ಕೈಗೊಳ್ಳಲು ಬೇಕಾದ ರಾಜಕೀಯ ಇಚ್ಛಾಶಕ್ತಿಯು ಕೇವಲ ಮೋದಿ ಸರ್ಕಾರಕ್ಕಷ್ಟೇ ಇದೆ ಎಂದು ಮತ್ತೂಮ್ಮೆ ಸಾಬೀತಾಗಿದೆ.
– ಪ್ರಕಾಶ್ ಶೇಷ ರಾಘವಾಚಾರ್ ಬಿಜೆಪಿ ರಾಜ್ಯ ವಕ್ತಾರ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Mandya :ಗಂಡ ಗದ್ಯ, ಹೆಂಡತಿ ಪದ್ಯ, ಮಕ್ಕಳು ರಗಳೆ!: ಹಾಸ್ಯ ಸಾಹಿತಿ ವೈ.ವಿ.ಗುಂಡೂರಾವ್
Mandya Sahitya Sammelana: ಅಕ್ಷರ ಜಾತ್ರೆಯಲ್ಲಿ “ಹವಾ’ ಎಬ್ಬಿಸಿದ ತೊಟ್ಟಿ ಮನೆ..!
Mandya: ನುಡಿ ಹಬ್ಬದ ಔತಣ ಸವಿಯಲು ಜನವೋ ಜನ- ವೃದ್ಧರಿಗೆ ವಿಶೇಷ ಕೌಂಟರ್
World Meditation Day; ಶರೀರಕ್ಕೆ ಊಟ, ಆತ್ಮಕ್ಕೆ ಧ್ಯಾನ
Meditation; ಮಾನಸಿಕ ಆರೋಗ್ಯಕ್ಕೆ ದಿವ್ಯೌಷಧ: ಡಿ.21ರಂದೇ ಏಕೆ ಧ್ಯಾನ ದಿನ?
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.