ಆತ್ಮನಿರ್ಭರತೆಯ ಹರಿಕಾರ, ಶುದ್ಧ ಆಡಳಿತಗಾರ


Team Udayavani, Sep 17, 2021, 6:50 AM IST

ಆತ್ಮನಿರ್ಭರತೆಯ ಹರಿಕಾರ, ಶುದ್ಧ ಆಡಳಿತಗಾರ

ಪ್ರಧಾನಿ ನರೇಂದ್ರ ಮೋದಿ ದೇಶ ಕಂಡ ಅತ್ಯಂತ ಸಮರ್ಥ ನಾಯಕ. ಅವರು ಭಾರತದ ಯುವ ಜನತೆಯಲ್ಲಿ ಹೊಸ ಕನಸುಗಳನ್ನು ಬಿತ್ತಿ ದರು, ನನಗಿಂತ ದೇಶ ಮೊದಲು ಎಂಬ ಸಂದೇಶ ಸಾರಿದರು. ಭಾರತವನ್ನು ಜಗತ್ತಿ ನಲ್ಲಿಯೇ ಮಾದರಿ ದೇಶವನ್ನಾಗಿಸುವ ಹಂಬಲ ಉಳ್ಳವರು. ಭಾರತವನ್ನು ವಿಶ್ವಗುರು ಆಗಬೇಕು ಎಂಬ ಅವರ ಹೆಬ್ಬಯಕೆ ಸಾಕಾರಗೊಳಿಸುವ ನಿಟ್ಟಿನಲ್ಲಿಯೇ ಅವರು ದೇಶದಲ್ಲಿ ಅತ್ಯುತ್ತಮವಾದ ಸ್ವತ್ಛ ಆಡಳಿತ ನೀಡುತ್ತಿದ್ದಾರೆ.

ಪ್ರಧಾನಿ ನರೇಂದ್ರ ಮೋದಿ ಅವರ ನಾಯಕ ತ್ವದ ಹಾದಿ ಆರಂಭವಾದದ್ದು ಗುಜರಾತಿನಿಂದ. ಗುಜರಾತ್‌ ಮುಖ್ಯಮಂತ್ರಿಯಾದಾಗ ನರೇಂದ್ರ ಮೋದಿ ಅವರು ಅನೇಕ ಕಟು ಟೀಕೆಗಳನ್ನು ಎದುರಿಸಿ ಸಮರ್ಥ ನಾಯಕತ್ವ  ಬೆಳೆಸಿಕೊಂಡರು. ಇಡೀ ದೇಶದಲ್ಲಿಯೇ  ಗುಜರಾತನ್ನು ಅಭಿವೃದ್ದಿಗೆ  ಮಾದರಿ ರಾಜ್ಯ ಆಗುವಂತೆ ಮಾಡಿದರು.

ಮೋದಿ ಅವರ ದಿಟ್ಟ ನಿರ್ಧಾರ, ಚಾಣಾಕ್ಷ ಆಡಳಿತದ ಕಾರ್ಯವೈಖರಿ, ಗಟ್ಟಿ ನಿಲುವು ಹಾಗೂ ದಕ್ಷ ಆಡಳಿತ ಎಲ್ಲ ರಾಜ್ಯಗಳನ್ನು ಗುಜರಾತಿನತ್ತ ನೋಡುವಂತೆ ಮಾಡಿದವು. ಅಧಿಕಾರ ದೊರೆತಾಗ ಜನರ ಅಭಿವೃದ್ಧಿ ಆಗಬೇಕು. ಜನಸಾಮಾನ್ಯರ ಬದುಕು ಬದಲಾಗ ಬೇಕು. ಈ ಉದ್ದೇಶದಿಂದ ಗುಜರಾತ್‌ ಮುಖ್ಯ ಮಂಯಾಗಿದ್ದ ಸಂದರ್ಭ ದಲ್ಲಿ ಹಲವಾರು ಪ್ರಮುಖ ಯೋಜನೆಗಳನ್ನು ಮೋದಿಜಿ ಜಾರಿಗೊಳಿಸಿದರು.

ಮರಳುಗಾಡಿನ ಜನರಿಗೆ 400 ಕಿ.ಮೀ. ದೂರದಿಂದ ನೀರು ನೀಡುವ ಯೋಜನೆ ಜಾರಿ ಮಾಡಿದರು. ಸಾಬರಮತಿ ನದಿಯ ಒಡಲನ್ನು ಸ್ವತ್ಛಗೊಳಿಸಿದರು. ವಿದ್ಯುತ್‌ ಉತ್ಪಾದನೆಯಲ್ಲಿ ಗುಜರಾತ್‌ ರಾಜ್ಯವನ್ನು ಸ್ವಾವಲಂಬಿಯನ್ನಾಗಿ ಮಾಡಿದರು. ಹೆಚ್ಚುವರಿಯಾಗಿ ಉತ್ಪಾದನೆ ಯಾಗುವ ವಿದ್ಯುತ್‌ ಔದ್ಯೋಗೀಕರಣಕ್ಕೆ ನಾಂದಿ ಹಾಡಿತು. ರಾಜ್ಯ ಆರ್ಥಿಕವಾಗಿ ಹೆಚ್ಚು ಸಶಕ್ತ ಆಗಬೇಕು. ಈ ಉದ್ದೇಶದಿಂದ ಪ್ರವಾಸೋ ದ್ಯಮಕ್ಕೆ ಹೆಚ್ಚು ಉತ್ತೇಜನ ನೀಡುವ ರಣ್‌ ಉತ್ಸವ ಸೇರಿದಂತೆ ಹಲವಾರು  ವಿಶೇಷ ಯೋಜನೆಗಳನ್ನು ಅನುಷ್ಠಾನಕ್ಕೆ ತಂದರು. ಜಗತ್ತಿನಾದ್ಯಂತದ  ಪ್ರವಾಸಿಗರನ್ನು ತನ್ನ ರಾಜ್ಯದತ್ತ  ಸೆಳೆಯುವಲ್ಲಿ ಯಶಸ್ವಿಯಾದರು.

ನರೇಂದ್ರ ಮೋದಿ ಅವರು ಅತ್ಯಂತ ಸೂಕ್ಷ್ಮ ಮತ್ತು  ಭಾವನಾತ್ಮಕ ಜೀವಿ. ಗುಜರಾತಿನ ಆದಿವಾಸಿಗಳ ಅಭ್ಯುದಯಕ್ಕಾಗಿ ಟೊಂಕ ಕಟ್ಟಿ ನಿಂತರು.  ಅವರನ್ನು ಸಮಾಜದ ಮುಖ್ಯವಾಹಿ ನಿಗೆ ತರಬೇಕೆನ್ನುವ ಉದ್ದೇಶದಿಂದ ಅವರ ಆರೋಗ್ಯ ಮತ್ತು ಶಿಕ್ಷಣಕ್ಕೆ ಒತ್ತು ನೀಡಿದರು. ಅದರೊಂದಿಗೆ ಅವರ ಪಾರಂಪರಿಕ ಹಾಗೂ ಸಾಂಸ್ಕೃತಿಕ ಪರಂಪರೆಯನ್ನು ಉಳಿಸಿ ಬೆಳೆಸು ವಲ್ಲಿ ಮೋದಿ ಪಾತ್ರ ಮಹತ್ವದ್ದು ಎಂದರೆ ತಪ್ಪಾಗಲಾರದು. ಗುಜರಾತಿನಲ್ಲಿ ಅವರು ಕೈಗೊಂಡ ಅಭಿವೃದ್ಧಿ ಕಾರ್ಯಗಳು ಹಾಗೂ ಹಲವಾರು ದಿಟ್ಟ ನಿರ್ಧಾರಗಳು ಅವರ ನಾಯ ಕತ್ವವನ್ನು ಗಟ್ಟಿಗೊಳಿಸಿತು. ಇದೇ ಕಾರಣಕ್ಕೆ ಭಾರತೀಯ ಜನತಾ ಪಕ್ಷ ಮೋದಿ ಅವರನ್ನು ಪ್ರಧಾನಿ ಅಭ್ಯರ್ಥಿ ಎಂದು ಘೋಷಣೆ ಮಾಡಿತು. ಆ ನಿರ್ಧಾರ ಇಡೀ ಭಾರತದಲ್ಲಿ ಸಂಚಲನ ಸೃಷ್ಟಿ ಮಾಡಿತು. ಇದಕ್ಕೆ ಸಾಕ್ಷಿ ಎಂಬಂತೆ ಭಾರತೀಯ ಜನತಾ ಪಕ್ಷ 2014ರಲ್ಲಿ ಕೇಂದ್ರದಲ್ಲಿ ಬಹುಮತದೊಂದಿಗೆ ಅಧಿಕಾರಕ್ಕೆ ಬಂದಿತು. ಅಲ್ಲದೇ ಎನ್‌.ಡಿ.ಎ ಮಿತ್ರ ಪಕ್ಷದ ಅನೇಕ ಸದಸ್ಯರು ಜಯಭೇರಿ ಬಾರಿಸಿದರು.

ದೇಶ ಅಭಿವೃದ್ದಿಯತ್ತ ಸಾಗಬೇಕಾದರೆ ಉತ್ಪಾದನ ವಲಯ ಹೆಚ್ಚು ಗಟ್ಟಿಯಾಗಬೇಕು. ಇದನ್ನು ಮನಗಂಡ ಪ್ರಧಾನಿ ಮೇಕ್‌ ಇನ್‌ ಇಂಡಿಯಾ ಪರಿಕಲ್ಪನೆಯನ್ನು ಹುಟ್ಟು ಹಾಕಿದರು. ಭಾರತ ಆತ್ಮ ನಿರ್ಭರತೆಯಿಂದ ಎಲ್ಲ ವಲಯಗಳಲ್ಲಿ ಇಂದು ಮುನ್ನುಗ್ಗುತ್ತಿದೆ. ಆಮದು ಪ್ರಮಾಣ ಕಡಿಮೆ ಆಗಿದೆ. ಸ್ವದೇಶಿ ಉತ್ಪನ್ನಗಳಿಗೆ ಹೆಚ್ಚು ಬೇಡಿಕೆ ಬರುತ್ತಿದೆ. ಇದರಿಂದಾಗಿ ಉದೋಗ ಸೃಷ್ಟಿಯು ಹೆಚ್ಚುತ್ತಿದೆ. ಪ್ರಧಾನಿ ಅವರ ನಾಯಕತ್ವ, ಆಲೋಚನೆಗಳು ಹಾಗೂ ಅವರ ಯೋಜನೆಗಳು ಮುಂದಿನ ಪೀಳಿಗೆ ಇಂದು ಭದ್ರವಾದ ಬುನಾದಿ ಹಾಕಿವೆ. ದೇಶವನ್ನು ಅಭಿವೃದ್ಧಿಯ ಪಥದಲ್ಲಿ ಸಾಗುವಂತೆ ಮಾಡಲು ಪ್ರಧಾನಿ ಹೆಚ್ಚು ಗಮನಹರಿಸಿದ್ದಾರೆ.

ದೇಶದ ಪ್ರತಿಯೊಬ್ಬರೂ ಬ್ಯಾಂಕ್‌ ಖಾತೆ ಹೊಂದಬೇಕು.  ಈ ಉದ್ದೇಶದಿಂದ ಜನ್‌  ಧನ್‌ ಯೋಜನೆ ಜಾರಿ ಮಾಡಿದರು. ಸರಕಾರ‌ ಯೋಜನೆಗಳು ನೇರವಾಗಿ ಪಲಾನುಭವಿಗಳಿಗೆ ತಲುಪಬೇಕು. ನೇರ ನಗದು ಯೋಜನೆಯ ಹಣ ಯಾವುದೇ ರೀತಿಯ ಮಧ್ಯವರ್ತಿಗಳ ಹಾವಳಿ ಇಲ್ಲದೇ ನೇರವಾಗಿ ಫ‌ಲಾನುಭವಿಗಳ ಬ್ಯಾಂಕ್‌ ಖಾತೆಗೆ ಜಮೆಯಾಗಬೇಕು ಎಂಬುದು ಈ ಜನಧನ್‌ ಯೋಜನೆಯ ಉದ್ದೇಶ. ಇದುವರೆಗೆ ದೇಶದಲ್ಲಿ 40 ಕೋಟಿ ಗಿಂತಲೂ ಹೆಚ್ಚು ಜನ  ಖಾತೆ ತೆರೆದಿದ್ದಾರೆ.

ಕೌಶಲ ಭಾರತ, ಸ್ಮಾರ್ಟ್‌ ಇಂಡಿಯಾ, ಆಯುಷ್ಮಾನ್‌ ಭಾರತ, ರೈತ ಸಮ್ಮಾನ್‌ ಯೋಜನೆ,  ಉಜ್ವಲ ಯೋಜನೆ, ಅಟಲ್‌ ಪಿಂಚಣಿ ಯೋಜನೆ, ಪ್ರಧಾನಮಂತ್ರಿ ಆವಾಸ್‌ ಯೋಜನೆ ಹೀಗೆ ಅನೇಕ ಜನಪರ ಯೋಜನೆಗಳನ್ನು ಭಾರತಕ್ಕೆ ನೀಡಿದ್ದಾರೆ. ಆಯು ಷ್ಮಾನ್‌ ಭಾರತ ಯೋಜನೆ ಅಡಿಯಲ್ಲಿ ಇಂದು 50 ಕೋಟಿಗೂ ಹೆಚ್ಚು ಜನ ಆರೋಗ್ಯ ಸೇವೆಯನ್ನು ಪಡೆದು ಕೊಳ್ಳುತ್ತಿದ್ದಾರೆ. ಭಾರತದಲ್ಲಿ ಪ್ರತಿ ಯೊಬ್ಬರು ತಮ್ಮದೇ ಆದ ಸೂರನ್ನು ಪಡೆದುಕೊಳ್ಳಬೇಕೆನ್ನುವ ಉದ್ದೇಶದಿಂದ ಗ್ರಾಮೀಣ ಮತ್ತು ನಗರ ಪ್ರದೇಶದ ಜನರಿಗೆ ಪ್ರಧಾನಮಂತ್ರಿ ಆವಾಸ್‌ ಯೋಜನೆ ಪರಿಚಯಿಸಿದ್ದಾರೆ.

ವಿಮಾನ ನಿಲ್ದಾಣ, ರೈಲ್ವೇ ನಿಲ್ದಾಣ, ಬಂದರು ಗಳ ಅಭಿವೃದ್ಧಿಗೆ ಆದ್ಯತೆ ನೀಡಿದ್ದಾರೆ. ಆ  ಮೂಲಕ ದೇಶದ ಸಾರಿಗೆ ವ್ಯವಸ್ಥೆ ಉತ್ತಮ ಗೊಂಡಿದೆ. ಇದರಿಂದ ವ್ಯಾಪಾರ ವಹಿವಾಟಿಗೆ ಅನುಕೂಲವಾಗಿದೆ. ದೇಶದಲ್ಲಿ ಎಲ್ಲರಿಗೂ ಆಹಾರ, ಆಶ್ರಯ, ಆರೋಗ್ಯ ಮತ್ತು ಅಕ್ಷರ ಯೋಜನೆಗಳು ಜನರಿಗೆ ತಲುಪಬೇಕು ಎಂಬುದು ಪ್ರಧಾನಿ ಯವರ ಬಯಕೆ.

ನಮ್ಮೆಲ್ಲರಿಗೂ ಸ್ಫೂರ್ತಿ :

ಮೋದಿಯವರ ಬದ್ದತೆ, ದಕ್ಷತೆ ಸದಾ ಕಾಲ ನಮ್ಮನ್ನು ಕಾರ್ಯೋನ್ಮುಖರಾಗುವಂತೆ ಮಾಡುವಲ್ಲಿ ಅವರ ಹುಟ್ಟು ಹಬ್ಬ ನಮಗೆಲ್ಲ ಪ್ರೇರಣೆಯಾಗಿದೆ. ಭವ್ಯ ಭಾರತ, ಬಲಿಷ್ಟ ಭಾರತ ನಿರ್ಮಾಣದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ತೋರುತ್ತಿರುವ ಬದ್ಧತೆ ನಮ್ಮೆಲ್ಲರಿಗೂ ಸ್ಫೂರ್ತಿಯಾಗಲಿ.

ಬಸವರಾಜ ಬೊಮ್ಮಾಯಿ,ಮುಖ್ಯಮಂತ್ರಿ

 

ಟಾಪ್ ನ್ಯೂಸ್

congress

Ambedkar; ಅವಮಾನ ಖಂಡಿಸಿ ಕಾಂಗ್ರೆಸ್‌ ಆಂದೋಲನ

1-sara

Hindi ಹೇರಿದರೆ ಗೋಕಾಕ್‌ ಮಾದರಿ ಹೋರಾಟ: ಸಾ.ರಾ.ಗೋವಿಂದು

ಈ ರಾಶಿಯವರಿಗಿಂದು ಬರಬೇಕಾದ ಬಾಕಿ ಕೈಸೇರಿದ ಸಮಾಧಾನ

Horoscope: ಈ ರಾಶಿಯವರಿಗಿಂದು ಬರಬೇಕಾದ ಬಾಕಿ ಕೈಸೇರಿದ ಸಮಾಧಾನ

1-vvv

Virtual university ಸ್ಥಾಪಿಸಿ: ಚಿದಾನಂದ ಗೌಡ ಒತ್ತಾಯ..ಏನಿದು?

1-ausi

Australia; ‘ವನ್‌ ಡೇ ಕಪ್‌’ಗೆ ಡೀನ್‌ ಜೋನ್ಸ್‌  ಹೆಸರು

ravishankar-guruji

Meditation; ಜಾಗತಿಕ ಶಾಂತಿ, ಏಕತೆಗೆ ಧ್ಯಾನ ಮುಖ್ಯ ಸಾಧನ: ಶ್ರೀ ಶ್ರೀ ರವಿಶಂಕರ್‌

Ramalinga-reddy

Distribution: ಕೆಎಸ್ಸಾರ್ಟಿಸಿ ನಿವೃತ್ತ ಸಿಬಂದಿಗೆ 224 ಕೋಟಿ ರೂ. ಪಾವತಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Mandya :ಗಂಡ ಗದ್ಯ, ಹೆಂಡತಿ ಪದ್ಯ ಮಕ್ಕಳು ರಗಳೆ: ಹಾಸ್ಯ ಸಾಹಿತಿ ವೈ.ವಿ.ಗುಂಡೂರಾವ್‌

Mandya :ಗಂಡ ಗದ್ಯ, ಹೆಂಡತಿ ಪದ್ಯ, ಮಕ್ಕಳು ರಗಳೆ!: ಹಾಸ್ಯ ಸಾಹಿತಿ ವೈ.ವಿ.ಗುಂಡೂರಾವ್‌

Mandya Sahitya Sammelana: ಅಕ್ಷರ ಜಾತ್ರೆಯಲ್ಲಿ “ಹವಾ’ ಎಬ್ಬಿಸಿದ ತೊಟ್ಟಿ ಮನೆ..!

Mandya Sahitya Sammelana: ಅಕ್ಷರ ಜಾತ್ರೆಯಲ್ಲಿ “ಹವಾ’ ಎಬ್ಬಿಸಿದ ತೊಟ್ಟಿ ಮನೆ..!

Mandya: ನುಡಿ ಹಬ್ಬದ ಔತಣ ಸವಿಯಲು ಜನವೋ ಜನ- ವೃದ್ಧರಿಗೆ ವಿಶೇಷ ಕೌಂಟರ್‌

Mandya: ನುಡಿ ಹಬ್ಬದ ಔತಣ ಸವಿಯಲು ಜನವೋ ಜನ- ವೃದ್ಧರಿಗೆ ವಿಶೇಷ ಕೌಂಟರ್‌

ravishankar-guruji

World Meditation Day; ಶರೀರಕ್ಕೆ ಊಟ, ಆತ್ಮಕ್ಕೆ ಧ್ಯಾನ

1-dhyan

Meditation; ಮಾನಸಿಕ ಆರೋಗ್ಯಕ್ಕೆ ದಿವ್ಯೌಷಧ: ಡಿ.21ರಂದೇ ಏಕೆ ಧ್ಯಾನ ದಿನ?

MUST WATCH

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

ಹೊಸ ಸೇರ್ಪಡೆ

congress

Ambedkar; ಅವಮಾನ ಖಂಡಿಸಿ ಕಾಂಗ್ರೆಸ್‌ ಆಂದೋಲನ

1-sara

Hindi ಹೇರಿದರೆ ಗೋಕಾಕ್‌ ಮಾದರಿ ಹೋರಾಟ: ಸಾ.ರಾ.ಗೋವಿಂದು

ಈ ರಾಶಿಯವರಿಗಿಂದು ಬರಬೇಕಾದ ಬಾಕಿ ಕೈಸೇರಿದ ಸಮಾಧಾನ

Horoscope: ಈ ರಾಶಿಯವರಿಗಿಂದು ಬರಬೇಕಾದ ಬಾಕಿ ಕೈಸೇರಿದ ಸಮಾಧಾನ

1-vvv

Virtual university ಸ್ಥಾಪಿಸಿ: ಚಿದಾನಂದ ಗೌಡ ಒತ್ತಾಯ..ಏನಿದು?

1-ausi

Australia; ‘ವನ್‌ ಡೇ ಕಪ್‌’ಗೆ ಡೀನ್‌ ಜೋನ್ಸ್‌  ಹೆಸರು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.