ಸಿಎಂ ಸೀಟ್ ಮ್ಯಾಗೆ ಎಲ್ರೂ ಟವಲ್ ಹಾಕವ್ರೆ ..!
Team Udayavani, Jun 3, 2017, 10:15 PM IST
ದೇವೇಗೌಡ್ರು ಮೊನ್ನೆ ಸಮಾವೇಶದಾಗೆ, “ಸುಮ್ಕಿರು ಸಿದ್ರಾಮು, ಹೂಂ ಅನ್ನು ಸಾಕು. ರೇವಣ್ಣ ಬಂದ್ ಮಿಕ್ಕಿದ್ ಮಾತಾಡ್ತಾನೆ’ ಅಂದ್ರಂತೆ. ಅದ್ಕೆ ಸಿದ್ರಾಮಣ್ಣೋರು ಆಯ್ತು ಬಿಡಿ ಅಂತ ಕಣ್ ಮಿಟಿಕಿಸಿದ್ರಂತೆ. ಇದ್ನ ನೋಡಿ ಅಲ್ಲೇ ಇದ್ದ ಯಡ್ನೂರಪ್ನೊàರು ಫುಲ್ ಟೆನÒನ್ ಮಾಡ್ಕೊಂಡು ಭುಸ್‌ಗುಟ್‌ತಿದ್ರಂತೆ.
ಅಮಾಸೆ: ನಮಸ್ಕಾರ ಸಾ…….. ಎಲ್ಗೊ ಲಗೇಜ್ ಸಮೇತ ಹೊಂಟಂಗೈತೆ
ಚೇರ್ಮನ್ರು: ಹೌದು ಕಣಾ ಅಮಾಸೆ, ಫಾರಿನ್‌ಗೊಂಟಿದೀನಿ. ಆಸ್ಟ್ರೇಲಿಯಾ ಹೋಗಿ ಬರೂಮಾ ಅಂತಾ
ಅಮಾಸೆ: ಏನ್ ಸಾ… ವಿಷ್ಯ, ಅಲ್ಲೇನಾರಾ ಎಲೆಕ್ಷನ್ ಐತಾ?
ಚೇರ್ಮನ್ರು: ಏನಾ ಅಮಾಸೆ….ಯಾವಾಗ್ಲೂ ನಿಂಗೆ ಎಲೆಕ್ಷನ್‌ದೇ ಚಿಂತೆಯಾ
ಅಮಾಸೆ: ಹಂಗಲ್ಲಾ ಸಾ…. ಚೇರ್ಮನ್ರು ಟಾಕು ಟೀಕಾಗಿ ಹೊಂಟಿರೋದು ನೋಡಿ ಕೇಳೆ ಅಷ್ಟೆಯಾ
ಚೇರ್ಮನ್ರು: ಇನ್ನೇನಾ ವಿಸ್ಯಾ
ಅಮಾಸೆ: ಈಗೆಲ್ಲಾ ಎಲೆಕ್ಷನ್‌ದೇ ವಿಸ್ಯಾ ಸಾರ್. ಕಾಂಗ್ರೆಸ್‌ನ್ಯಾಗೆ ಪರಮೇಶ್ವರಣ್ಣೋರು ಇನ್ನೊಂದಪಾ ಕೆಪಿಸಿಸಿ ಪ್ರಸಿಡೆಂಟ್ ಆಗÌರೆ, ಸಿದ್‌ರಾಮಣ್ಣೋರ್ ಲೀಡರ್‌ಶಿಪ್‌ನ್ಯಾಗೆ ಎಲೆಕ್ಷನ್ ಅಂತಾ ಎಐಸಿಸಿನ್ಯಾಗೇ ಡಿಕ್ಲೇರ್ ಮಾಡವೆÅ, ಬಿಜೆಪಿನ್ಯಾಗೆ ಯಡ್ನೂರಪ್ನೊàರೇ ಸಿಎಂ ಅಂತಾ ಒತ್ತಿ ಒತ್ತಿ ಅಮಿತ್‌ಶಾ ಹೇಳಿಬಿಟ್ಟವೆ, ಇನ್ನು ಜೆಡಿಎಸ್‌ನ್ಯಾಗೆ ಸಿಎಂ ಕ್ಯಾಂಡಿಡೇಟ್ ಕುಮಾರಣ್ಣೋರು ಅಂತಾ ಯಾವತ್ತೋ ಫೈನಲ್ ಆಗೋಬಿಟೈತೆ. ಇನ್ನೇನಿದ್ರು ಜನ ಬರೋದು, ಓಟು ಹಾಕೋದು, ಹೊಸ ಗೌರ್‌ವೆುಂಟ್ ಬರೋದಷ್ಟೆಯಾ. ಎಲ್ರೂ ಎಲೆಕ್ಷನ್ ಯಾವಾಗ್ ಬತ್ತೈತೆ, ಸಿಎಂ ಕುರ್ಚಿ ಮ್ಯಾಗೆ ಎವಾಗ್ ಕುತ್‌ಕೊಳ್ಳೋದು, ಯಾರಾದ್ರೂ ಟವಲ್ ಹಾಕ್‌ಬಿಟ್ರೆ ಅಂತಾ ಫುಲ್ ಟೆನ್‌ಷನ್ನಾಗವೆ ಸಾ…..
ಚೇಮನ್ರು:ಟೆನನ್ ಯಾಕ್ಲಾ…
ಆಮಾಸೆ: ಅಯ್ಯೋ ರಾತ್ರೋ ರಾತ್ರಿ ಏನಾರಾ ಪೊಲಿಟಿಕಲ್ ಡೆವಲಪ್‌ಮೆಂಟ್ ಆಗಿ ಸಿಎಂ ಕ್ಯಾಂಡಿಡೇಟ್ ಬದಲಾಯ್ಸಿಬಿಟ್ರೆ?
ಚೇರ್ಮನ್ರು: ಹೇಳª ಮ್ಯಾಕೆ ಹೆಂಗ್ಲಾ ಬದ್ಲಾಯ್ಸಿತಾರೆ
ಅಮಾಸೆ: ಆ ಟೇಮ್‌ಗೆ ಯಾವ್‌ದಾದ್ರು ಕೇಸ್ ಅಮರ್‌ಕೊಂಡ್ರೆ ಏನ್‌ಮಾಡಕಾಯ್ತದೆ ಸಾ…. ಇವ್ರದೇನ್ ಒಂದಾ… ಎರಡಾ… ಕೇಸಳು
ಚೇರ್ಮನ್ರು: ನೀ ಎಲ್‌ಗಾ ಹೊಂಟೆ.
ಅಮಾಸೆ: ಒಸಿ ಕೆಪಿಸಿಸಿ ಆಫೀಸ್‌ಗಂಟಾ ಹೋಗಿ ಬರೂಮಾ ಅಂತ ಸಾ….ಪರಮೇಶ್ವರಣ್ಣೋರು,ಶಿವಕುಮಾರಣ್ಣೋರು, ಎಸ್.ಆರ್.ಪಾಟೀಲ್ ಸಾಹೇಬ್ರು ಪ್ರಸಿಡೆಂಟು, ಕೆಲ್ಸ ಮಾಡೋ ಪ್ರಸಿಡೆಂಟು, ಪ್ರಚಾರ ಮಾಡೋ ಪ್ರಸಿಡೆಂಟು ಆಗವ್ರಂತೆ. ವಿಸ್ ಮಾಡೂಮಾ ಅಂತ. ಮುಂದೆ ಬೇಕಾಯ್ತದೆ ಸಾ… ಪರಮೇಶ್ವರಣ್ಣೋರೇ ಪ್ರಸಿಡೆಂಟು ಆಗ್ಬೇಕು ಅಂತ ರಮ್ಯಾ ಮೇಡಂ ಹೈಲಿವೆಲ್‌ನ್ಯಾಗೆ ಇನ್‌ಫುಯೆನ್ಸ್ ಮಾಡಿದ್ರಂತೆ
ಚೇರ್ಮನ್ರು: ರಮ್ಯಾ ಯಾಕ್ಲಾ ಪರಮೇಶ್ವರಣ್ಣೋರೇ ಆಗ್ಬೇಕು ಅಂತ ಹೇಳಿದ್ರಂತೆ
ಅಮಾಸೆ: ಅಂಕಲ್ ಕಿಸ¡ನ್ನ ಹೇಳಿದ್ರಂತೆ, ನಮ್ ಹುಡ್ಗಾ ಪರಮೇಶ್ವರ್‌ಗೆ ಮಾಡ್ರಿ ಅಂತ ಒಸಿ ಹೇಳಮ್ಮಿ. ಮುಂದಕ್ಕೆ ಬೇಕಾಯ್ತದೆ ಅಂತ. ರಮ್ಯಾ ಮೇಡಂ ಅವ್ರು ಈಗ ಸಾಮಾನ್ಯ ಅಲ್ಲ ಸಾ… ಮಂಡ್ಯ ಟು ಡೆಲ್ಲಿ ಹೋದಮ್ಯಾಕೆ ಫುಲ್ ಚೇಂಜ್. ಅದೆಂತದೋ ಹೈಕ್ಲು ಬೆಳಗಾನ್ ಎದ್ದು ರಾತ್ರಿ ಮಕ್ಕೋಳ್ಳೋತಂಕಾ ಫೋನ್‌ನ್ಯಾಗೆ ಬೆರಳಾಡಿತಿರ್ತಾರಲ್ಲಾ ಫೇಸ್‌ಬುಕ್ಕು, ವಾಟ್ಸಾಪು, ಟೀಟರುÅ ಅದ್ರ ಮೂಲ್ಕ ಕಾಂಗ್ರೆಸ್‌ಗೆ ಓಟ್ ಹಾಕಿ, ನಮ್ ಸಾಧನೆ ಹಿಂಗೈತೆ ನೋಡಿ, ಸಿದ್‌ರಾಮಣ್ಣೋರು ಭಾಗ್ಯ ಕೊಟ್ಟ ದೇವ್ರು ಅಂತೆಲ್ಲಾ ರಮ್ಯಾ ಮೇಡಂನೋರೇ ಡೆಲ್ಲಿನ್ಯಾಗೇ ಕುತ್ಕೊಂಡ್ ಪ್ರಚಾರ ಮಾಡ್ತಾರಂತೆ.
ಚೇರ್ಮನ್ರು:ಅಲ್ಲಾ ಕಣಾ ಅಮಾಸೆ, ಕಾಂಗ್ರೆಸ್‌ನವ್ರು ಪರಮೇಶ್ವರಣ್ಣೋರ್ನ ಮತ್ತೆ ಪ್ರಸಿಡೆಂಟ್ ಮಾಡೋಕೆ ಡೆಲ್ಲಿವರೂY ಹೋಗ್ಬೇಕಿತ್ತಾ
ಅಮಾಸೆ: ಅದೇ ಸಾ… ಕಾಂಗ್ರೆಸ್ಸು, ಬಿಲ್ಡ್‌ಅಪ್ ಕೊಡ್‌ಬೇಕು. ನಾವು ದಲಿತ್ರನಾ ಬಿಟ್‌ಕೊಡೋದಿಲ್ಲಾ, ಏನೇ ಒತ್ತಡಾ ಬಂದ್ರೂ ಅಂತ ತೋರಕೊಂಡು ಸಿಎಂ ಕ್ಯಾಂಡಿಡೇಟ್ ಅಂತ ಮಾತ್ರ ಕೇಳ್ಬೇಡಿ. ಪ್ರಸಿಡೆಂಟಾಗಿ ಸೈಲಾಂಟಾಗ್ ಇದಿºಡಿ ಅಂತ ಮಾಡವೆÅ. ಆದ್ರೂ ಶಿವಕುಮಾರಣೋರ್‍ನಾ ಪ್ರಸಿಡೆಂಟ್ ಮಾಡಿದ್ರೆ ಅದ್ರ ಮಜಾನೇ ಬೇರೆ ಇರಿ¤ತ್ತು ಸಾ.
ಚೇರ್ಮನ್ರು: ಅದೆಂಗ್ಲಾ
ಅಮಾಸೆ : ಸಾ… ಏನ್ ಶಿವಕುಮಾರಣೋರು ಅಂದ್ರೆ ತಮಾಸೇನಾ. ಗೌಡ್ರ ಕುಟುಂಬ ಎದರಾಕ್ಕೊಂಡು ರಾಜಕೀಯ ಮಾಡೋದು ಸಾಧ್ಯವಾ? ಅಂತಾದ್ರರಲ್ಲಿ ಶಿವಕುಮಾರಣ್ಣೋರು ತೊಡೆತಟ್ಟಿ ಅಖಾಡಕ್ಕಿಳಿದು ಬನ್ನಿ ನೋಡೋವಾ ಅಂತ ಸವಾಲ್ ಹಾಕಿಲ್ವಾ. ಕೆಪಿಸಿಸಿ ಪ್ರಸಿಡೆಂಟ್ ಆಗಿದ್ರೆ ಜೆಡಿಎಸ್ ಓಟೆಲ್ಲಾ ಕಿತ್ಕೊಳ್ಳೋರು.
ಚೇರ್ಮನ್ರು: ಡೆಲ್ಲಿ ಲೆವೆಲ್‌ನ್ಯಾಗೆ ಲಿಂಕ್ ಇರೋ ಗೌಡ್ರು ಬಿಡ್ತಾರೇನಾ ಅಮಾಸೆ? ಮುಂದ್ಕೆ ಹಂಗ್ ಅಸೆಂಬ್ಲಿ ಆದ್ರೆ ನಾವ್ ನಿಮ್ ಜತೆ ನಿಲೆºàಕಾಬೋದು, ಕಮಲ ಪಕ್ಸಾ ಕರ್ನಾಟಕದ್ಯಾಗೇ ಫುಲ್ ಜೂಮ್‌ಲ್ಲೆ„ತೆ, ನೋಡಿ ಏನ್ ಮಾಡ್ತಿರೋ ಅಂತ ಜಾಪಾಳ ಮಾತ್ರೆ ಕೊಟ್ಟಿರ್ತಾರೆ. ಅದ್ಕೆ ಅಲ್ನೋರು ಸುಸ್ತಾಗಿ ಬೇಡ ಬುಡಿ ಸಾವಾಸ ಅಂತ. ಅಂದರಿಕಿ ಮಂಚಿವಾಡು ಪರಮೇಶ್ವರ ಅಂತ ನೀವೇ ಆಗಿ ಶಿವ ಅಂತೇಳಿ ಕಳವೆಬುಡ್ಲಾ.
ಅಮಾಸೆ: ನಿಮ್ ಮಾತೂ ದಿಟವೇ ಸಾ…..ದೇವೇಗೌಡ್ರು ಸುಮ್ಕಿರತಾರಾ. ಸಿದ್ರಾಮಣೊ°àರ್ ಜತೆಗೂ ಇತ್ತೀಚ್‌ಲಾಗೆ ತುಂಬಾ ತುಂಬಾ ಕ್ಲೋಸು. ಮೊನ್ನೆ ಸಮಾವೇಶದಾಗೆ, ಕೈ ಅದುಮಿ, ಸುಮ್ಕಿರು ಸಿದ್ರಾಮು, ನಾ ಹೇಳªಂಗ್ ಕೇಳು, ಹೂಂ ಅನ್ನು ಸಾಕು. ಅಮ್ಯಾಕೆ ಉಳಿದಿದ್ ನಾ ನೋಡ್‌ಕೋತೀನಿ. ರೇವಣ್ಣ ಬಂದ್ ಮಿಕ್ಕಿದ್ ಮಾತಾಡ್ತಾನೆ ಅಂತ ಹೇಳಿದ್ರಂತೆ. ಅದ್ಕೆ ಸಿದ್ರಾಮಣ್ಣೋರು ಆಯ್ತು ಬಿಡಿ ಅಂತ ಕಣ್ ಮಿಟಿಕಿಸಿದ್ರಂತೆ. ಇದ್ನ ನೋಡಿ ಅಲ್ಲೇ ಇದ್ದ ಯಡ್ನೂರಪ್ನೊàರು ಫುಲ್ ಟೆನನ್ ಮಾಡ್ಕೊಂಡು ಭುಸ್‌ಗುಟ್‌ತಿದ್ರಂತೆ. ಇಬ್ರೂ ಒಂದಾದ್ರೆ ಸಿಎಂ ಸೀಟ್ ಮ್ಯಾಗೆ ಇನ್ನೊಂದಪಾ ಕುತ್ಕೊಳ್ಳೋ ಪ್ರೋಗ್ರಾಂಗೆ ಹೊಗೆಯಾ ಅಂತ ಬೆಚ್‌ಬಿದ್ರಂತೆ. ಅನಂತಕುಮಾರಣ್ಣೋರು, ಸಮಾಧಾನ ಮಾಡಿ ನೀವಂದೊRಂಡಂಗೆ ಏನೂ ಆಗಲ್ಲಾ ಬಿಡಿ ಅಂತ ಇಸೆ¾„ಲ್ ಕೊಟ್ರಂತೆ. ಅದ್ಕೆ , ಅನಂತ್‌ಕುಮಾರು ಯಾವ್ ಅರ್ಥ್ದಲ್ಲಿ ಹಿಂಗೇಳಿರ್‌ಬೋದು ಅಂತ ಇನ್ನೂ ಫುಲ್‌ಟೆನನ್ ಮಾಡ್ಕೊಂಡ್ರಂತೆ.
ಚೇರ್ಮನ್ರು: ಹೌದು, ಕಣಾ ಸಿದ್‌ರಾಮಣ್ಣೋರಾ ಲೀಡರ್‌ಶಿಪ್‌ನ್ಯಾಗೆ ಎಲೆಕ್ಷನ್‌ಗೊàದ್ರೆ, ಪಾರ್ಟಿ ಅಧಿಕಾರಕ್ ಬಂದ್ರೆ ಸಿಎಂ ಯಾರಾ?
ಅಮಾಸೆ: ಅದೇ ಸಾ ಸಸ್ಪೆನ್ಸು, ಯಾರ್ ಬೇಕಾದ್ರು ಆಗ್‌ಬೋದು, ಸಿದ್‌ಮಣ್ಣೋರೇ ಮುಂದ್‌ವರಿಲೂಬೋದು, ಒಬ್ರೇ ಟವಲ್ ಹಾಕಂಗಿಲ್ಲ, ಅವರ್‌ಬಿಟ್, ಇವರ್‌ಬಿಟ್ ಇನ್ಯಾರು ಅಂತ ಆಮ್ಯಾಕೆ ಸೆಲೆಕ್ಟ್ ಆಯ್ತಾರೆ.
ಚೇರ್ಮನ್ರು: ಕಾಂಗ್ರೆಸ್‌ನ್ಯಾಗೆ ಕೆಪಿಸಿಸಿ ಪ್ರಸಿಡೆಂಟು ಯಾರಿದ್ರೆ ಅವ್ರೇ ತಾನೆ ಸಿಎಂ
ಅಮಾಸೆ: ಹೌದು, ಲಾಸ್ಟ್ ಎಲೆಕ್ಷನ್ಯಾಗೆ ಪರಮೇಶ್ವರಣ್ಣೋರು ಗೆದಿತೀನಿ ಅಂತ ಸೋತೋದ್ರು ಅದ್ಕೆ ಸಿದ್‌ರಾಮಣೋರು ಸಿಎಂ ಆದ್ರು. ಈಗ ಪರಮೇಶ್ವರಣೋರೆ ಮತ್ತೆ ಪ್ರಸಿಡೆಂಟು ಆಗವೆÅ, ಎಲೆಕ್ಷನ್‌ಗೆ ನಿಂತು ಗೆದ್ಕಳಪ್ಪಾ ಅಂದ್ರೆ, ಅಯ್ಯೋ ಬೇಡ ಬುಡಿ, ಮತ್ತೆ ಏನಾಯ್ತದೋ, ನಾ ಎಲನಾ ಗೆಲ್ಸಕೊಂಡ್ ಬತ್ತೀವ್ನಿ ಆಮ್ಯಾಕೆ ನೀವೇ ಎಲ್ಲಾರ ನಿಲ್ಸಿ ನನ್ನಾ ಗೆಲ್ಸಿ ಅಂತ ಹೈಕಮಾಂಡ್‌ಗೆ ಹೇಳವ್ರಂತೆ, ಆಮೇಲೂ ಆಗ್‌ಬೋದು, ಇಲ್ಲಾಂದ್ರೆ ಖರ್ಗೆ ಸಾಹೇಬ್ರೂ ಆಗ್‌ಬೋದು.
ಚೇರ್ಮನ್ರು: ಆಯ್ತು ಬುಡ್ಲಾ, ಏನ್ ಈಗ್ಲೆà ಕಾಂಗ್ರೆಸ್ ಅಧಿಕಾರಕ್ಕೆ ಬಂದೇ ಬಿಡು¤ ಅಂತ ಓವರ್‌ಕಾನ್ಫಿಡೆನ್ಸ್‌ನಾಗ್ ಇದಾರಲ್ಲಾ.
ಅಮಾಸೆ: ಹಂಗೇ ಇರ್ಬೇಕು ಸಾ…. ಇಲ್ಲಾಂದ್ರೆ ಈ ಪಕ್ಸದೋರೆ ವಿಸ್ವಾಸ ಇಲ್ಲಾ ಅಂತ, ಜನ ಬೇರೆ ಪಾಲ್ಟಿ ಕಡೆ ನೋಡ್‌ಬಿಡ್ತಾರೆ, ದೇಶದ್ಯಾಗೆ ಕಾಂಗ್ರೆಸ್ ಗಟ್ಟಿಯಾಗ್ ಇರೋದು ಇಲ್ಲೇ ಅಲ್ವಾ ಸಾ… ಲೂಸ್ ಮಾಡ್ಕೊಳ್ಳೋದು ಬೇಡಾ ಅಂತ ಎಲ್ರೂ ದಿಗ್ಗಂತ ಎದ್‌ಕುಂತವೆ. ಸರಿ ಬುಡಿ ಸಾ..,ಕೆಪಿಸಿಸಿ ಆಪೀಸ್‌ಗಂಟಾ ಹೋಗಿ ಅಲ್ಲೇ ಸಿವಾಜಿನಗ್ರ ಮಟನ್ ಮಾರ್ಕೆನ್ಯಾಗೆ ಕೈಮಾ ಒಡ್ಸಕೊಂಡ್ ಬತ್ತೀನಿ, ಮುದ್ರೆ-ಕೈಮಾ ತಿಂದೂ ಶ್ಯಾನೆ ದಿವಾ ಆಗೋಯ್ತು, ಬತ್ತೀನಿ ಸಾ…….
– ಎಸ್.ಲಕ್ಷ್ಮಿನಾರಾಯಣ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Naxal Activity Calm: ಪಶ್ಚಿಮ ಘಟ್ಟದ ಕಾನನದಲ್ಲಿ ನಕ್ಸಲ್ ನಿಶ್ಶಬ್ದ
ಜಿ.ಪಂ.,ತಾ.ಪಂ. ಚುನಾವಣೆ ವಿಳಂಬಕ್ಕೆ ಸರಕಾರವೇ ನೇರ ಹೊಣೆ, ನಾವು ಚುನಾವಣೆಗೆ ಸಿದ್ಧ: ಆಯೋಗ
ಆಪರೇಷನ್ ಬಾಂಗ್ಲಾದೇಶಿ; ಅಕ್ರಮ ವಲಸಿಗರ ಪತ್ತೆ ಹಚ್ಚುವ ಕಾರ್ಯಾಚರಣೆ ಚುರುಕು
Explainer; ಡಾ. ಚಿದಂಬರಂ & ಡಾ. ರಾಜಾ ರಾಮಣ್ಣ;ಪರಮಾಣು ವಿಜ್ಞಾನವನ್ನೂ ಮೀರಿದ ನಾಯಕತ್ವ
ಲೋಕೋಪಯೋಗಿ To ಸಾಹಿತ್ಯಕ್ಷೇತ್ರ: ಚಲನಚಿತ್ರದ ಮೂಲಕ ಖ್ಯಾತಿಗಳಿಸಿದ ನಾ.ಡಿಸೋಜ ಕಾದಂಬರಿಗಳು…
MUST WATCH
ಹೊಸ ಸೇರ್ಪಡೆ
ಚಂದ್ರಯಾನ, ಗಗನಯಾನ: ಇಸ್ರೋದ ಮಹತ್ವದ ಪ್ಲಾನ್: ವಿ.ನಾರಾಯಣನ್
Los Angeles wildfires: ಕ್ಯಾಲಿಫೋರ್ನಿಯಾದಲ್ಲಿ ಕಾಳ್ಗಿಚ್ಚು… ಐವರು ಸಾವು
Naxal Activity Calm: ಪಶ್ಚಿಮ ಘಟ್ಟದ ಕಾನನದಲ್ಲಿ ನಕ್ಸಲ್ ನಿಶ್ಶಬ್ದ
Language Development: ಕನ್ನಡ ಕೆಲಸಕ್ಕೆ ಅಭಿವೃದ್ಧಿ ಪ್ರಾಧಿಕಾರದಲ್ಲಿ ಹಣವೇ ಇಲ್ಲ!
Sullia: ಮಗುವಿಗೆ ಸುಟ್ಟು ಗಾಯ ಮಾಡಿದ್ದ ತಾಯಿ; ಆರೋಪ ಸಾಬೀತು; ಶಿಕ್ಷೆ ಪ್ರಕಟ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.