Freedom Struggle: ಕರಾವಳಿ- ಸ್ವಾತಂತ್ರ್ಯ ಹೋರಾಟದ ಪವಿತ್ರ ಇತಿಹಾಸ


Team Udayavani, Aug 11, 2023, 11:42 PM IST

co

ಭಾರತದ ಸ್ವಾತಂತ್ರ್ಯ ಹೋರಾಟದ ಇತಿಹಾಸದಲ್ಲಿ ಕರ್ನಾಟಕ ಕರಾವಳಿಯು ತನ್ನದೇ ಆದ ಅಧ್ಯಾಯವನ್ನು ಹೊಂದಿದೆ. ಅದು ತ್ಯಾಗಮಯ, ಪವಿತ್ರ, ಹೋರಾಟ ಮಯ ಬದ್ಧತೆಯ ಇತಿಹಾಸ ಕೂಡ ಹೌದು. ಇಲ್ಲಿ ಕರಾ ವಳಿ ಅಂದರೆ ಈಗಿನ ಭೌಗೋಳಿಕ ದಕ್ಷಿಣ ಕನ್ನಡ, ಉಡುಪಿ, ಉತ್ತರ ಕನ್ನಡ ಮತ್ತು ಆಗ ರಾಜ್ಯದ ಭಾಗವೇ ಆಗಿದ್ದ ಕಾಸರಗೋಡು. ಈ ಎಲ್ಲ ಪ್ರದೇಶಗಳಲ್ಲಿ ಬ್ರಿಟಿಷರ ವಿರುದ್ಧ ಕೆಚ್ಚೆದೆಯಿಂದ ಎದ್ದು ನಿಂತವರು ಜಿಲ್ಲೆಯ ಜನರು ಪೊಲೀಸರ ಲಾಠಿಗೆ ಅವರು ಬೆದರಲಿಲ್ಲ. ಗುಂಡೇಟಿಗೆ ಹೆದರಲಿಲ್ಲ. ಜೈಲು ಶಿಕ್ಷೆಗೆ ಒಳಗಾದವರು ಅನೇಕ ಮಂದಿ. ವೈಯಕ್ತಿಕ ಹಿತಾಸಕ್ತಿಗಳನ್ನು ದೂರವಿಟ್ಟು, ಉನ್ನತ ಹುದ್ದೆಗಳನ್ನು ಬದಿಗಿಟ್ಟು, ಸಂಪತ್ತಿನ ಮುಖವನ್ನು ನೋಡದೆ ಸ್ವಾತಂತ್ರ್ಯಕ್ಕಾಗಿಯೇ ಅವರು ಅನವರತ ದುಡಿ ದವರು.

ದೇಶಾದ್ಯಂತ 1900ರ ವೇಳೆ ಬ್ರಿಟಿಷರ ವಿರುದ್ಧ ಹೋ ರಾಟಕ್ಕೆ ತಾರ್ಕಿಕ ಸ್ವರೂಪ ದೊರೆಯುತ್ತಿದ್ದಂತೆ ಇಲ್ಲಿ ಜನ ಜಾಗೃತಿಯಾಯಿತು. ಕರಾವಳಿಯ ಸ್ವಾತಂತ್ರ್ಯ ಹೋರಾ ಟಗಾರರ ತ್ಯಾಗಕ್ಕೆ ಇಲ್ಲಿ ನಿದರ್ಶನವಾಗಿ ದೇಶಭಕ್ತ ಕಾರ್ನಾಡು ಸದಾಶಿವ ರಾಯರನ್ನು ಸಾಂಕೇತಿಕವಾಗಿ ಉಲ್ಲೇಖೀಸಬಹುದು. ಗಾಂಧೀಜಿಯವರ ಕರೆಯಿಂದ ಪ್ರಭಾವಿತರಾಗಿ ಅಹಿಂಸಾತ್ಮಕ ಹೋರಾಟದಿಂದ ಪ್ರೇರೇಪಿತರಾಗಿ ಸದಾಶಿವ ರಾಯರು ಇಲ್ಲಿ ಅನೇಕ ಹೋರಾಟಗಾರರನ್ನು ಸಂಘಟಿಸಿದರು. ವಿವಿಧ ಪ್ರದೇ ಶಗಳ ಮನೆತನ ಕುಟುಂಬಗಳೂ ಕೂಡ ಹೋರಾಟದಲ್ಲಿ ಭಾಗವಹಿಸಲು ಈ ಮೂಲಕ ಸ್ಫೂರ್ತಿಯಾದರು. ಆಗರ್ಭ ಶ್ರೀಮಂತ ಕುಟುಂಬದಲ್ಲಿ ಜನಿಸಿದ ಅವರು ಸರ್ವಸ್ವವನ್ನು ಸ್ವಾತಂತ್ರ್ಯ ಹೋರಾಟಕ್ಕೆ ತ್ಯಾಗ ಮಾಡಿದರು. ಅವರ ಈ ನಿಸ್ವಾರ್ಥ ತ್ಯಾಗಕ್ಕಾಗಿಯೇ ದೇಶಭಕ್ತ ಎಂಬ ಗೌರವವನ್ನು ಸಂಪಾದಿಸಿದವರು. ಇಂದಿಗೂ ಕೂಡ ದೇಶದ ಸ್ವಾತಂತ್ರ್ಯ ಹೋರಾಟದ ಇತಿಹಾಸದಲ್ಲಿ ಅವರಿಗೆ ಗೌರವದ ಸ್ಥಾನ ಪ್ರಾಪ್ತವಿದೆ.

ಕರಾವಳಿಯಲ್ಲಿ ಬ್ರಿಟಿಷರ ವಿರುದ್ಧ ಸ್ವಾತಂತ್ರ್ಯ ಹೋ ರಾಟಕ್ಕೆ ಮಹಾತ್ಮಾ ಗಾಂಧೀಜಿಯವರು ವಿಶೇಷ ಸ್ಫೂರ್ತಿಯನ್ನು ನೀಡಿದ್ದು ಇಲ್ಲಿ ಉಲ್ಲೇಖನೀಯ. ಸದಾಶಿವ ರಾಯರ ಆಮಂತ್ರಣದಂತೆ 1920ರ ಆ. 19ರಂದು ಗಾಂಧೀಜಿಯವರು ಮಂಗಳೂರಿಗೆ ಮೊದಲ ಭೇಟಿ ಯನ್ನು ನೀಡಿದ್ದರು. 1927ರಲ್ಲಿ ಅವರು 2ನೆಯ ಬಾರಿ ಬಂದರು. ಈ ಭೇಟಿಯ ಸಂದರ್ಭಗಳಲ್ಲಿ ಮಂಗಳೂರಲ್ಲಿ ಗಾಂಧೀಜಿ ಮತ್ತು ಪರಿವಾರದ ಕಾರ್ಯಕ್ರಮಗಳ ವ್ಯವಸ್ಥೆ ಮಾಡುವಲ್ಲಿ ಸದಾಶಿವ ರಾಯರೇ ನೇತೃತ್ವ ವಹಿಸಿದ್ದರು. ಈ ಎರಡು ಭೇಟಿಯ ಸಂದರ್ಭದಲ್ಲಿ ಗಾಂಧೀಜಿಯವರ ಮಂಗಳೂರಿನ ಕೇಂದ್ರ ಮೈದಾನಿನ ಕಾರ್ಯಕ್ರಮಕ್ಕೆ ಸಹಸ್ರಾರು ಮಂದಿ ಭಾಗವಹಿಸಿದ್ದರು. ಆಗಿನ ಕಾಲದಲ್ಲಿ ಈಗಿನಂತೆ ಯಾವುದೇ ರೀತಿಯ ಆಧು ನಿಕ ಸಂಚಾರ ಸಂಪರ್ಕ ವ್ಯವಸ್ಥೆಗಳಿರಲಿಲ್ಲ ಎಂಬುದು ಇಲ್ಲಿ ಗಮನಾರ್ಹ.

1934ರಲ್ಲಿ 3ನೆಯ ಮತ್ತು ಅಂತಿಮ ಬಾರಿಗೆ ಕರಾ ವಳಿಗೆ ಗಾಂಧೀಜಿ ಆಗಮಿಸಿದ್ದರು. ಕೊಡಗು ಗಡಿಯ ಸಂಪಾಜೆಯಿಂದ ಕಾರಿನ ಮೂಲಕ ಆರಂಭವಾದ ಅವರ ಪಯಣ 3 ದಿನಗಳ ಕಾಲ ಕರಾವಳಿಯ ವಿವಿಧ ಪ್ರದೇಶಗಳಲ್ಲಿ ಅವರ ಭೇಟಿಗೆ ಕಾರಣವಾಯಿತು. ಕೊನೆಯ ದಿನ ಕುಂದಾಪುರದಿಂದ ಅವರು ಪುಟ್ಟ ನೌಕೆಯ ಮೂಲಕ ಕಾರವಾರಕ್ಕೆ ತೆರಳಿದರು. ಅವರ ಪ್ರತೀ ಭೇಟಿಯ ಸಂದರ್ಭದಲ್ಲಿ ಕರಾಳಿಯ ಜನತೆ ಸ್ವಯಂಸ್ಫೂರ್ತಿಯಿಂದ ಸ್ವಾತಂತ್ರ್ಯ ಹೋರಾಟಕ್ಕೆ ತಮ್ಮಲ್ಲಿದ್ದ ಹಣ, ಮಹಿಳೆಯರು ಮತ್ತು ಮಕ್ಕಳು ಕೂಡ ತಮ್ಮಲ್ಲಿದ್ದ ಒಡವೆಗಳನ್ನು ಸಮರ್ಪಿಸಿದರು. ಈ ಬಗ್ಗೆ ಗಾಂಧೀಜಿಯವರೇ ಜಿಲ್ಲೆಯ ಜನತೆಯನ್ನು ಅಭಿನಂ ದಿಸಿದ್ದರು.

3ನೆಯ ಬಾರಿ ಅವರು ಸಂಪಾಜೆಯಿಂದ ಕುಂದಾಪುರದವರೆಗೆ ವಿವಿಧೆಡೆ ಜನರನ್ನುದ್ದೇಶಿಸಿ ಮಾತ ನಾಡಿ ಹೋರಾಟಕ್ಕೆ ಕರೆ ನೀಡಿದರು. ಅಸ್ಪೃಶ್ಯತೆಯ ವಿರುದ್ಧ ಜನಾಭಿಪ್ರಾಯ ಮೂಡಿಸಿದ್ದರು. “ಸತ್ಯಕ್ಕಾಗಿ ಜಾಗೃತರಾಗಿರಿ, ಸ್ವಾತಂತ್ರ್ಯ ಕ್ಕಾಗಿ ಅಹಿಂಸಾತ್ಮಕ ಹೋರಾಟಕ್ಕೆ ಮುಂದಾಗಿ. ಅದಕ್ಕಾಗಿ ಯಾವ ಬೆಲೆಯನ್ನು ಕೊಡಲು ಸಿದ್ಧರಾಗಿರಿ’ ಎಂಬ ಹಿತವಚನ ನೀಡಿದ್ದರು. ಉಡುಪಿ ಯಲ್ಲಿ ಗಾಂಧೀಜಿಯವರ ಕಾರ್ಯಕ್ರಮದಲ್ಲಿ ಮಾನ ಪತ್ರ ಓದಿದ ನಿರುಪಮಾ ಎಂಬ ಬಾಲಕಿ ತನ್ನ ಬಳೆಗಳನ್ನು ಮತ್ತು ಚಿನ್ನದ ಸರವನ್ನು ಗಾಂಧೀಜಿಯವರಿಗೆ ನೀಡಿ ದರು. ಆದರೆ ಆ ಬಾಲಕಿಯ ಕಣ್ಣಲ್ಲಿ ತುಸು ಚಿಂತೆ ಗಮನಿ ಸಿದ ಗಾಂಧೀಜಿ ಅದನ್ನು ಹಿಂದೆ ಕೊಟ್ಟರು. ಆದರೆ ಬಳಿಕ ಗಾಂಧೀಜಿ ತಂಗಿದ್ದ ಮನೆಗೇ ಬಂದ ಈ ನಿರುಪಮಾ ಮತ್ತೆ ಆ ಆಭರಣಗಳನ್ನು ಹಿಂದಿರುಗಿಸಿದಳು. ಮುಂದೆ ಬದುಕಿನಾದ್ಯಂತ ಗಾಂಧೀ ತತ್ತ್ವವನ್ನೇ ಆಕೆ ತನ್ನ ಉಸಿರಾ ಗಿಸಿಕೊಂಡಿದ್ದರು ಎಂಬುದು ಇಲ್ಲಿನ ಜನತೆಯ ತ್ಯಾಗದ ಪ್ರಾತಿನಿಧಿಕ ಘಟನೆ.

ಜೈಲು ವಾಸ ಅನುಭವಿಸಿದವರು, ಪೊಲೀಸರ ಹಿಂಸೆಗೆ ಗುರಿಯಾದವರು, ಜಾತಿಮತ ಭೇದವಿಲ್ಲದೆ ಸಂಘ ಟಿತರಾಗಿ ಹೋರಾಡಿದವರು ಕರಾವಳಿಯಲ್ಲಿ
ಸಹಸ್ರಾರು ಮಂದಿ.

ನೋವಿನ ಸಂಗತಿ ಎಂದರೆ ಗಾಂಧೀಜಿಯವರ ಭೇಟಿ ಸಹಿತ ಜಿಲ್ಲೆಯ ಸ್ವಾತಂತ್ರ್ಯ ಹೋರಾಟಕ್ಕೆ ಸಂಬಂಧಿಸಿದ ಯಾವುದೇ ಮ್ಯೂಸಿಯಂ ಸ್ಥಾಪನೆಯಾಗಿಲ್ಲ ಅನ್ನುವುದು. ಗಾಂಧೀಜಿ ಭೇಟಿ ನೀಡಿದ ವಿವಿಧ ಸಂಘ ಸಂಸ್ಥೆಗಳಲ್ಲಿ ಕೆಲವು ದಾಖಲೆಗಳಿವೆ. ಆದರೆ ಒಟ್ಟು ಹೋರಾಟಕ್ಕೆ ಸಂಬಂಧಿಸಿದ ಇತಿಹಾಸವನ್ನು ಪಡಿಮೂಡಿಸುವ ಯಾ ವುದೇ ಕಾರ್ಯ ಈ ಪ್ರದೇಶದ ಆಡಳಿತ ವ್ಯವಸ್ಥೆಯಿಂದ ನಡೆದಿಲ್ಲ. ಈ ಪವಿತ್ರ ಹೋರಾಟದ ಇತಿಹಾಸವನ್ನು ಮುಂದಿನ ಪೀಳಿಗೆಗೆ ದಾಖಲಿಸುವುದು ಈ ಮೂಲಕ ಅಸಾಧ್ಯವಾಗಿದೆ. ಕರಾವಳಿಯ ಜನತೆ ಉಪ್ಪಿನ ಸತ್ಯಾ ಗ್ರಹದಲ್ಲಿ ಪಾಲ್ಗೊಂಡರು. ಕ್ವಿಟ್‌ ಇಂಡಿಯಾ ಚಳ ವಳಿಯಲ್ಲಿ ಭಾಗವಹಿಸಿ ಪೊಲೀಸರ ಏಟಿಗೆ ಗುರಿಯಾದರು. ಜೈಲುವಾಸವನ್ನೂ ಜನತೆ ಲೆಕ್ಕಿಸದೆ ಗಾಂಧೀಜಿಯವರ ಮತ್ತು ಸ್ವಾತಂತ್ರ್ಯ ಹೋರಾಟದ ನಾಯಕರ ಕರೆಯನ್ನು ಅನುಸರಿಸಿದರು.

ಆದ್ದರಿಂದಲೇ ಕರಾವಳಿಯ ಸ್ವಾತಂತ್ರ್ಯ ಹೋರಾಟದ ಹೆಜ್ಜೆ ಗುರುತು ಗಳನ್ನು ದಾಖಲಿಸಲು ಇದು ಸಕಾಲ ಎಂದೇ ಹೇಳ ಬಹುದು. ಇನ್ನೊಂದು ವಿಶೇಷವೆಂದರೆ ಭಾರತದ ರಾಷ್ಟ್ರ ಗೀತೆ ಜನಗಣ ಮನವನ್ನು ಬರೆದವರು ಕವಿ ರವೀಂ ದ್ರನಾಥ ಠಾಗೂರ್‌ ಅವರು. ಅವರು ಮೊದಲು ಬರೆದಿದ್ದ ಗೀತೆಯನ್ನು ಸ್ವಾತಂತ್ರ್ಯ ನಂತರ ರಾಷ್ಟ್ರಗೀ ತೆಯಾಗಿ ಅಂಗೀಕರಿಸಲಾಯಿತು. 1925ರಲ್ಲಿ ಅವರು ಮಂಗಳೂರಿಗೆ ಬಂದಿದ್ದರು. ಇಲ್ಲಿ 3 ದಿನ ತಂಗಿದ್ದರು. ಆಗಿನ ಸರಕಾರಿ- ಈಗಿನ ವಿವಿ ಕಾಲೇಜಿನಲ್ಲಿ ಕವಿತೆಗಳನ್ನು ಬರೆದಿದ್ದರು. ಅವರು ಭೇಟಿ ನೀಡಿ ಆಗ ಸಾಧ್ಯವಿದ್ದ ಸೂರ್ಯಾಸ್ತವನ್ನು ವೀಕ್ಷಿಸಿದ ಬಾವುಟಗುಡ್ಡೆ ಉದ್ಯಾನಕ್ಕೆ ಮುಂದೆ ಠಾಗೂರ್‌ ಪಾರ್ಕ್‌ ಎಂದು ಹೆಸರಿಸಲಾಯಿತು. ವಿಶೇಷವೆಂದರೆ ಭಾರತದ ರಾಷ್ಟ್ರಗೀತೆ ಜನ ಗಣ ಮನ ಮತ್ತು ಬಾಂಗ್ಲಾದೇಶದ ರಾಷ್ಟ್ರಗೀತೆ ಅಮರ್‌ ಸೋನಾರ್‌ ಬಾಂಗ್ಲಾಗಳನ್ನು ಬರೆದವರು ಠಾಗೂರ್‌ ಅವರೇ. ಎರಡು ದೇಶಗಳಿಗೆ ಓರ್ವರದ್ದೇ ರಾಷ್ಟ್ರಗೀತೆ ಎಂಬ ನಿದರ್ಶನ ಇದೊಂದೇ ಆಗಿದೆ. ಅವರ ಆಂಗ್ಲಗೀತೆಯ ಕನ್ನಡ ಅನುವಾದ “ಎಲ್ಲಿ ಮನಕಳುಕಿರದು’ ಬಳಿಕ ಕೆನರಾ ಸಮೂಹ ಸಂಸ್ಥೆಗಳ ಪ್ರಾರ್ಥನಾ ಗೀತೆಯಾಯಿತು.

ಮಹಾತ್ಮಾ ಗಾಂಧೀಜಿಯವರು ಬಳಸುತ್ತಿದ್ದ ನಡಿಗೆ ಕೋಲನ್ನು ಅವರಿಗೆ ನೀಡಿದವರು ರಾಷ್ಟ್ರಕವಿ ಮಂಜೇಶ್ವರ ಗೋವಿಂದ ಪೈ ಅವರು. ಉಪ್ಪಿನ ಸತ್ಯಾಗ್ರಹದ ದಿನದಿಂದ ಜೀವಿತಾಂತ್ಯದವರೆಗೂ ಗಾಂಧೀಜಿ ಇದೇ ನಡಿಗೆ ಕೋಲನ್ನು ಬಳಸಿದ್ದರು.

ಬಹುಬಗೆಯ ಹೋರಾಟದಲ್ಲಿ ಸ್ವಯಂಸ್ಫೂರ್ತಿ ಯಿಂದ ಭಾಗವಹಿಸಿದ ಕರಾವಳಿಯ ಜನತೆ ಸಂಪೂರ್ಣ ಅಹಿಂಸಾತ್ಮಕ ಹೋರಾಟದಲ್ಲಿ ತಮ್ಮನ್ನು ತೊಡಗಿ ಸಿಕೊಂಡಿದ್ದರು.
1947ರ ಆ. 15ರಂದು ದೇಶಕ್ಕೆ ಸ್ವಾತಂತ್ರ್ಯ ದೊರೆತಾಗ ಕರಾವಳಿಯ ನಗರಗಳಲ್ಲಿ ಮತ್ತು ತಾಲೂಕಿನ ಎಲ್ಲ ಪ್ರಮುಖ ಕೇಂದ್ರಗಳಲ್ಲಿ ಸ್ವಾತಂತ್ರೊತ್ಸವ ಸಂಭ್ರ ಮೋಲ್ಲಾಸದಿಂದ ನೆರವೇರಿತು. ಮಂಗಳೂರಿನ ಕೇಂದ್ರ ಮೈದಾನಿನಲ್ಲಿ ತಳಿರು ತೋರಣಗಳಿಂದ ಅಲಂಕೃತ ಚಪ್ಪರದಲ್ಲಿ ಈ ಉತ್ಸವ ಜರಗಿತೆಂದು ದಾಖಲೆಗಳು ತಿಳಿಸುತ್ತವೆ.

ಅಂದಹಾಗೆ:
ಸ್ವಾತಂತ್ರ್ಯ ಹೋರಾಟದ ಸಂದರ್ಭದಲ್ಲಿ ನರ್ಕಳ ಮಾರಪ್ಪ ಶೆಟ್ಟಿ ಅವರ ತುಳು ಕವಿತೆಯೊಂದು ಸಾಮೂಹಿಕ ಗೀತೆಯಾಗಿತ್ತು. “ಗಂಗಸರೊ ಗಂಗಸರೊ ಪರಡೆ ಕಲಿ ಗಂಗಸರೊ, ಕೆಬಿತ ಮುರು ದೆತ್‌ದ್‌ ಕೊರು ಪರ್‌ಂಡ ಕಲಿ ಗಂಗಸರೊ, ಕಿದೆತ ಎರು ಗಿತ್‌ದ್‌ ಕೊರು ಪರ್‌ಂಡ ಕಲಿ ಗಂಗಸರೊ, ಅಟ್ಟದ ಬಿತ್ತ್ ದೆತ್ತ್ದ್‌ ಕೊರು ಪರ್‌ಂಡ ಕಲಿ ಗಂಗಸರೊ’

ಮನೋಹರ ಪ್ರಸಾದ್‌

ಟಾಪ್ ನ್ಯೂಸ್

Eye Surgeries: ಪದವಿ ಪೂರ್ಣಗೊಳಿಸದೆ 44 ಕಣ್ಣಿನ ಶಸ್ತ್ರಚಿಕಿತ್ಸೆ ನಡೆಸಿದ ವೈದ್ಯ…

Eye Surgeries: ವೈದ್ಯಕೀಯ ಪದವಿ ಪೂರ್ಣಗೊಳಿಸದೇ 44 ಕಣ್ಣಿನ ಶಸ್ತ್ರಚಿಕಿತ್ಸೆ ನಡೆಸಿದ ವೈದ್ಯ

Perth test: ಜೈಸ್ವಾಲ್-ರಾಹುಲ್‌ ಅಜೇಯ ಆಟ; ಪರ್ತ್‌ ನಲ್ಲಿ ಭಾರತದ ಮೇಲಾಟ

Perth test: ಜೈಸ್ವಾಲ್-ರಾಹುಲ್‌ ಅಜೇಯ ಆಟ; ಪರ್ತ್‌ ನಲ್ಲಿ ಭಾರತದ ಮೇಲಾಟ

lakxmi

Belagavi: ಗ್ಯಾರಂಟಿ ವಿರೋಧಿಸಿದ ವಿಪಕ್ಷಗಳಿಗೆ ಸ್ಪಷ್ಟ ಉತ್ತರ ನೀಡಿದ ಮತದಾರ: ಹೆಬ್ಬಾಳ್ಕರ್

Kalaburagi: Shigavi result unexpected; We do not agree: C.T. Ravi

Kalaburagi: ಶಿಗ್ಗಾವಿ ಫಲಿತಾಂಶ ಅನಿರೀಕ್ಷಿತ; ನಾವು ಒಪ್ಪುವುದಿಲ್ಲ: ಸಿ.ಟಿ.ರವಿ

Channaptna Result: ಕೊನೆ ಕ್ಷಣದಲ್ಲಿ ಪಕ್ಷ ಬದಲಿಸಿದರೂ ಗೆದ್ದ ಸೈನಿಕ: ನೆರವಾದ ಡಿಕೆ ತಂತ್ರ

Channaptna Result: ಕೊನೆ ಕ್ಷಣದಲ್ಲಿ ಪಕ್ಷ ಬದಲಿಸಿದರೂ ಗೆದ್ದ ಸೈನಿಕ: ನೆರವಾದ ಡಿಕೆ ತಂತ್ರ

11-kambala

Kambala ಋತುವಿನ ಪ್ರಥಮ ಕಂಬಳ; ಕೊಡಂಗೆ ವೀರ-ವಿಕ್ರಮ ಜೋಡುಕರೆ ಬಯಲು ಕಂಬಳಕ್ಕೆ ಚಾಲನೆ

Wayanad Results 2024:ವಯನಾಡ್‌ ನಲ್ಲಿ ಪ್ರಿಯಾಂಕಾಗೆ 3.68 ಲಕ್ಷಕ್ಕೂ ಅಧಿಕ ಮತಗಳ ಮುನ್ನಡೆ!

Wayanad Results 2024:ವಯನಾಡ್‌ ನಲ್ಲಿ ಪ್ರಿಯಾಂಕಾಗೆ 3.68 ಲಕ್ಷಕ್ಕೂ ಅಧಿಕ ಮತಗಳ ಮುನ್ನಡೆ!


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

1-kannada

Kannada; ಅನಿವಾಸಿ ಕನ್ನಡಿಗರ ಮಕ್ಕಳಲ್ಲೂ ಕನ್ನಡ ಚಿಗುರಲಿ

1-kanchi

Kanchi swamiji; ದೇವಸ್ಥಾನಗಳ ಭೂಮಿ ದೇವಸ್ಥಾನಗಳಿಗೇ ಇರಲಿ

1-reee

ದಿ| ದಾಮೋದರ ಆರ್‌. ಸುವರ್ಣ: ಬಡಜನರ ಕಣ್ಣೀರಿಗೆ ಸ್ಪಂದಿಸಿದ ಹೃದಯ ಸಿರಿವಂತ

ಕನ್ನಡ ಅನ್ನ ನೀಡುವ ಭಾಷೆಯಾಗಿ ಬೆಳೆಯಬೇಕು

Education: ಕನ್ನಡ ಅನ್ನ ನೀಡುವ ಭಾಷೆಯಾಗಿ ಬೆಳೆಯಬೇಕು

Kannada: ಅಂತರ್ಜಾಲದಲ್ಲಿ ಕನ್ನಡದ ಕುಸುಮ ಮತ್ತಷ್ಟು ಅರಳಲಿ

Kannada: ಅಂತರ್ಜಾಲದಲ್ಲಿ ಕನ್ನಡದ ಕುಸುಮ ಮತ್ತಷ್ಟು ಅರಳಲಿ

MUST WATCH

udayavani youtube

ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?

udayavani youtube

ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್‌ |

udayavani youtube

ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್

udayavani youtube

ಉಡುಪಿ ಶ್ರೀ ಕೃಷ್ಣ ಮಠದಲ್ಲಿ ಬೃಹತ್ ಗೀತೋತ್ಸವಕ್ಕೆ ಅದ್ದೂರಿ ಚಾಲನೆ|

udayavani youtube

ಲಾಭದಾಯಕ ಗುಲಾಬಿ ಕೃಷಿ ಮಾಡುವ ವಿಧಾನ

ಹೊಸ ಸೇರ್ಪಡೆ

16-uv-fusion

Discipline: ಬದುಕಿನಲ್ಲಿ ಶಿಸ್ತಿರಲಿ

15-

Chikkamagaluru: ಆಕಸ್ಮಿಕ ಬೆಂಕಿ ತಗುಲಿ ಸಂಪೂರ್ಣ ಸುಟ್ಟು ಭಸ್ಮವಾದ ಗುಡಿಸಲು

Eye Surgeries: ಪದವಿ ಪೂರ್ಣಗೊಳಿಸದೆ 44 ಕಣ್ಣಿನ ಶಸ್ತ್ರಚಿಕಿತ್ಸೆ ನಡೆಸಿದ ವೈದ್ಯ…

Eye Surgeries: ವೈದ್ಯಕೀಯ ಪದವಿ ಪೂರ್ಣಗೊಳಿಸದೇ 44 ಕಣ್ಣಿನ ಶಸ್ತ್ರಚಿಕಿತ್ಸೆ ನಡೆಸಿದ ವೈದ್ಯ

Perth test: ಜೈಸ್ವಾಲ್-ರಾಹುಲ್‌ ಅಜೇಯ ಆಟ; ಪರ್ತ್‌ ನಲ್ಲಿ ಭಾರತದ ಮೇಲಾಟ

Perth test: ಜೈಸ್ವಾಲ್-ರಾಹುಲ್‌ ಅಜೇಯ ಆಟ; ಪರ್ತ್‌ ನಲ್ಲಿ ಭಾರತದ ಮೇಲಾಟ

14-uv-fusion

Mother: ಅಮ್ಮನ ಜೀವನವೇ ಆದರ್ಶ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.