Coast of Karnataka ಭತ್ತದ ಕಣಜವಾಗಿತ್ತು


Team Udayavani, Dec 16, 2023, 5:52 AM IST

1-sdads

ಕರ್ನಾಟಕದ ಕರಾವಳಿಯ ಈಗಿನ ಭೌಗೋಳಿಕ ದಕ್ಷಿಣ ಕನ್ನಡ, ಉತ್ತರ ಕನ್ನಡ, ಉಡುಪಿ (ಆಗಿನ ಕಾಸರಗೋಡು) ಜಿಲ್ಲೆಗಳು ವಸ್ತುಶಃ ಸುಮಾರು 4 ದಶಕಗಳ ಹಿಂದಿನವರೆಗೂ ಭತ್ತದ ಬೆಳೆಯ ಕಣಜವೇ ಆಗಿತ್ತು. ಸಮೃದ್ಧವಾದ ಭತ್ತದ ಬೆಳೆ, ಎಲ್ಲಿ ನೋಡಿದರೂ ಭತ್ತದ ತೆನೆಗಳು ತೂಗಾಡು ತ್ತಿರುವ ಮೊದಲು ಹಸುರು ಬಳಿಕ ಚಿನ್ನಣ ವರ್ಣದ ಭತ್ತದ ತೆನೆ. ಭತ್ತ ಕೃಷಿ ಕಾರ್ಯಕ್ಕೆ ಸಂಬಂಧಿಸಿದ ಬಗೆಬಗೆಯ ಕೈಂಕರ್ಯ, ಬಗೆ ಬಗೆಯ ಕಾಯಕ, ಬಗೆ ಬಗೆಯ ಉದ್ಯೋಗ ಅವಕಾಶಗಳೂ ಕೂಡ.

ಸಾಮಾನ್ಯವಾಗಿ 3 ಬೆಳೆಗಳಲ್ಲಿ ಭತ್ತದ ಕೃಷಿ ಕಾರ್ಯ ನಡೆಯುತ್ತಿತ್ತು. ಎಣಿಲು, ಸುಗ್ಗಿ ಹೀಗೆ ಮಳೆಗಾಲವನ್ನೇ ಅಂದರೆ ಮಳೆ ನೀರನ್ನೇ ಆಧರಿಸಿದ ಒಂದು ಬೆಳೆ. ಸ್ವಲ್ಪ ನೀರಾಶ್ರಯವಿದ್ದು ಎರಡನೆಯ ಬೆಳೆ. ನದಿ ಬದಿ ಇತ್ಯಾದಿ ಅವಲಂಬಿತ ಸಂಪೂರ್ಣ ನೀರಾಶ್ರಯವಿರುವ 3ನೆಯ ಬೆಳೆ. ಎರಡು ಮೂರನೆಯ ಫ‌ಸಲಿನಲ್ಲಿ ಉದ್ದು ಬೆಳೆ ಯುವವರಿದ್ದಾರೆ. ಬಹು ಬಗೆಯ ತರಕಾರಿಗಳನ್ನು ಬೆಳೆಸುವವರೂ ಇದ್ದಾರೆ.

ಭತ್ತದ ಕೃಷಿ ಎಂದರೆ ಮಳೆ ಆರಂಭದ ಸಂದರ್ಭ ದಲ್ಲಿ ಖಾಲಿ ಗದ್ದೆಯನ್ನು ಉತ್ತು ಹದಗೊಳಿಸುವುದು. ಎರಡನೆಯ ಹಂತದಲ್ಲಿ ಭತ್ತದ ಬೀಜ ಬಿತ್ತುವುದು. ಮೂರನೆಯ ಹಂತದಲ್ಲಿ ಈ ಬೆಳೆಯನ್ನು ಕಿತ್ತು ನೇಜಿಯ ಸ್ವರೂಪದಲ್ಲಿ ಕಟ್ಟಿ ಉತ್ತು ಹದಗೊಂಡ ಗದ್ದೆಯಲ್ಲಿ ನಾಟಿ ಕಾರ್ಯ. ಮುಂದೆ ಫ‌ಸಲು ಬೆಳೆದ ಮೇಲೆ ತೆನೆ ಕೊçಯುವುದು. ಮುಂದೆ ಅದನ್ನು ಅಂಗಳದ ಪಡಿಮಂಚದಲ್ಲಿ ಬಡಿದು ಭತ್ತ ಬೇರೆ ಬೈಹುಲ್ಲು ಬೇರೆ. ಭತ್ತವನ್ನು ಮುಂದೆ ಅಕ್ಕಿಯನ್ನಾಗಿಸುವ ಪ್ರಕ್ರಿಯೆ. ಬೈಹುಲ್ಲು ದನಗಳಿಗೆ. ಇದು ಸಾಮಾನ್ಯವಾದ ಭತ್ತದ ಬೆಳೆಯ ಪ್ರಕ್ರಿಯೆ. ಈ ಎಲ್ಲ ಸಂದರ್ಭಗಳಲ್ಲೂ ಗದ್ದೆಯ ತುಂಬಾ ಕೃಷಿ ಕಾರ್ಮಿಕರ ಪಾಡªನ ಇತ್ಯಾದಿ ಪರಂಪರೆಯ ಹಾಡುಗಳ ಸೊಗಸು. ಸಮಗ್ರ ಗದ್ದೆಗಳಲ್ಲಿ ಅದರ ಪ್ರತಿಧ್ವನಿ ಕೇಳುವುದೇ ಅಪ್ಯಾಯಮಾನ ಅನುಭವ.

ಆಧುನೀಕರಣ
ಆಧುನೀಕರಣದ ಪ್ರಭಾವ ಭತ್ತದ ಕೃಷಿಗಾರಿಕೆ ಯನ್ನೂ ತಟ್ಟಿದೆ. ಒಂದು ಹಂತದಲ್ಲಿ ಭತ್ತದ ಗದ್ದೆಗಳು ವಾಣಿಜ್ಯ ಉದ್ದೇಶಕ್ಕೆ ಬಳಕೆಯಾಗುತ್ತಾ ಬಂದವು. ನಿರ್ಮಾಣ ಕಾರ್ಯ ಇತ್ಯಾದಿ ಇಲ್ಲಿ ನಡೆದು ಕೃಷಿ ಭೂಮಿಯ ಪ್ರಮಾಣ ಇಳಿಮುಖ ವಾಯಿತು. ತೋಟಗಾರಿಕೆಗೂ ಈ ಗದ್ದೆಗಳು ಬಳಕೆಯಾದರೂ ಅದು ವಾಣಿಜ್ಯ ಬೆಳೆಗಳ ಮೂಲಕ ರೈತರಿಗೆ ಆರ್ಥಿಕ ಶಕ್ತಿಯೂ ಆಯಿತು. ಮುಂದಿನ ದಿನಗಳಲ್ಲಿ ಭತ್ತದ ಕೃಷಿ ಕಾರ್ಯಕ್ಕೆ ಕಾರ್ಮಿಕರ ಸಂಖ್ಯೆ ಕಡಿಮೆಯಾಗುತ್ತಾ ಒಂದಿಷ್ಟು ಅಳಿದುಳಿದ ಗದ್ದೆಗಳ ಕಾರ್ಯಕ್ಕೆ ಟಿಲ್ಲರ್‌, ಟ್ರಾÂಕ್ಟರ್‌ ಇತ್ಯಾದಿ ಆಧುನಿಕ ತಂತ್ರಜ್ಞಾನದ ಬಳಕೆ ಯಾಯಿತು. ಶ್ರಮ ಇಲ್ಲಿ ಕಡಿಮೆಯಾದರೂ ಫ‌ಸಲು ಇಳಿಮುಖವಾಗುತ್ತಾ ಬಂತು. ಒಂದಿಷ್ಟು ವೆಚ್ಚದಾಯಕ ಕೂಡ.

ಗದ್ದೆ ನಾಟಿ ಕಾರ್ಯಗಳಿಗೆ ಬಳಸಲಾಗುತ್ತಿದ್ದ ಪಾರಂಪರಿಕ ವಸ್ತುಗಳು ಈಗ ಸುಲಭವಾಗಿ ಕಾಣಿಸುತ್ತಿಲ್ಲ. ನೊಗ, ನಾಯರ್‌, ಪಲಾಯಿ, ಪಡಿಮಂಚ, ತುಪ್ಪೆ, ದಿಕ್ಕೆಲ್‌, ಮುಟ್ಟಾಳೆ ಇತ್ಯಾದಿ ಪಾರಂಪರಿಕ ಸಲಕರಣೆಗಳು ಕೂಡ ಈಗ ತೀರಾ ಎಂಬಷ್ಟು ಕಡಿಮೆಯಾಗಿದೆ.

ಕರಾವಳಿಯ ಪ್ರಧಾನ ಆಹಾರ ಅಕ್ಕಿ. ಆದರೆ ಈಗ ಒಂದು ಕಾಲದ ಸ್ವಾವಲಂಬನೆಯಿಂದ ಈಗ ಪರಾ ಪಲಂಬನೆ ಅನಿವಾರ್ಯವಾಗಿದೆ. ಆಯಾ ಜಿಲ್ಲೆ ಗಳಿಗೆ ಸಾಕಷ್ಟು ಅಕ್ಕಿಯನ್ನು ಉತ್ಪಾದನೆ ಮಾಡ ಲಾಗುತ್ತಿತ್ತು. ಆದರೆ ಈಗ ಸುಮಾರು ಶೇ. 30ರಷ್ಟು ಬೇರೆ ಜಿಲ್ಲೆ, ರಾಜ್ಯಗಳಿಂದ ಆಮದು ಮಾಡಿ ಕೊಳ್ಳು ವುದು ಅನಿವಾರ್ಯವಾಗಿದೆ. ಸಾಂಪ್ರದಾಯಿಕ ಗುಣಮಟ್ಟ ತನ್ಮೂಲಕ ವ್ಯತ್ಯಾಸಗೊಳ್ಳುತ್ತಿದೆ.

ಕೃಷಿ ಕಾರ್ಯಕ್ಕೆ ಸಂಬಂಧಿಸಿದ ರೋಮಾಂಚ ನವು ತನ್ಮೂಲಕ ಮರೆಯಾಗಿದೆ. ಅದಕ್ಕೆ ಉತ್ತ ಗದ್ದೆಯಲ್ಲಿ ಹಲಗೆ ಹಾಕುವ ವೇಳೆ ಎಳೆಯರು ಕುಳಿತು ಆನಂದ ಅನುಭವಿಸುತ್ತಿದ್ದ ದಿನಗಳಿದ್ದವು. (ತತ್‌ಕ್ಷಣ ಗದ್ದೆಯ ನಡುವೆ ಒಳ್ಳೆ ಮುಂತಾದ ನೀರ ಹಾವುಗಳನ್ನು ಕಂಡು ತಿರುಚಿ ಓಡಿ ಬರುವ ಮಕ್ಕಳೂ ಇದ್ದರು) ಪೈರು ಬೆಳೆಯುತ್ತಿದ್ದಂತೆ ಹಂದಿ ಮತ್ತಿತರ ಪ್ರಾಣಿ ಪಕ್ಷಿಗಳ ದಾಳಿ ತಡೆಗಟ್ಟಲು ದೊಡ್ಡ ಗದ್ದೆಯ ನಡುವೆ ಸ್ಥಳೀಯ ಭಾಷೆಗಳಲ್ಲಿ ಗುಡುಮು ಎಂದು ಕರೆಯಲಾಗುತ್ತಿದ್ದ ಪುಟ್ಟ ಗುಡಿಸಲು ನಿರ್ಮಾಣ ಮಾಡುತ್ತಿದ್ದರು. ರೈತರು ಇಲ್ಲಿ ರಾತ್ರಿಯಲ್ಲಿ ಪಾಳಿ ಸಹಿತ ಕುಳಿತು ಡಬ್ಬಿ ಇತ್ಯಾದಿ ಶಬ್ದ ಬರುವ ಪರಿಕರಗಳನ್ನು ಬಡಿದು ಈ ಪ್ರಾಣಿ ಪಕ್ಷಿಗಳನ್ನು ಓಡಿಸುವ ಕಾಯಕವಿತ್ತು. ಅಂತೆಯೇ ಪ್ರಾಣಿಗಳನ್ನು ಬೆದರಿಸಲು ಗದ್ದೆ ನಡುವೆ ಬೆರ್ಚಪ್ಪನ ಸ್ಥಾಪನೆಯಾಗುತ್ತಿತ್ತು.

ಅಕ್ಕಿಯೇ ಮೂಲ ಆಹಾರ
ಕರಾವಳಿಯಲ್ಲಿ ಅಕ್ಕಿಯೇ ಪ್ರಧಾನ ಆಹಾರ ವಾಗಿದ್ದು, ಬೆಳ್ತಿಗೆ ಅಕ್ಕಿಯು ಸ್ವಲ್ಪಮಟ್ಟಿಗೆ ಬಳಕೆ ಯಾಗುತ್ತಿದೆ. ಬಗೆಬಗೆಯ ತಿಂಡಿಗಳಿಗೆ ಈ ಕುಚ್ಚಲಕ್ಕಿ ಮತ್ತು ಬೆಳ್ತಿಗೆ ಅಕ್ಕಿ ಬಳಕೆಯಾಗುವುದು ಇಲ್ಲಿನ ಸಂಪ್ರದಾಯ.
ಆಯಾ ಪ್ರಾದೇಶಿಕತೆಗೆ ಅನುಗುಣವಾಗಿ ಭತ್ತದ ತಳಿಯನ್ನು ಬಳಸುವುದಿದೆ. ಬಾಕ್ಯಾರು, ಕೊಳಂಬೆ, ನೀರಕೊಳಂಬೆ, ಮಜಲು, ಕಲ್ಲೊಟ್ಟೆ ಮಜಲು, ಹೊಸಕಂಡ ಹೀಗೆಲ್ಲ ಗದ್ದೆಗಳ ವೈವಿಧ್ಯಕ್ಕೆ ಅನುಗುಣವಾಗಿ ತಳಿಗಳ ಬಳಕೆ. ಬಾಕ್ಯಾರುನಂತ ದೊಡ್ಡ ಗದ್ದೆಗಳಲ್ಲಿ ಎತ್ತರಕ್ಕೆ ಬೆಳೆಯುವ ಕರಿಯದಡಿ, ಮಜಲುಗಳಲ್ಲಿ ಕಾಯಮೆ, ಸಣ್ಣ ಗದ್ದೆಗಳಲ್ಲಿ ಸಣ್ಣಕ್ಕೆ ಬೆಳೆಯುವ ಹೊಸ ತಳಿಗಳಾದ ಐಆರ್‌8, ಜಯ, ಪದ್ಮ ಇತ್ಯಾದಿ ತಳಿಗಳಿದ್ದರೆ ಈಗ ಕೃಷಿ ಸಂಶೋಧನ ಕೇಂದ್ರಗಳಿಂದ ಬಗೆಬಗೆಯ ಹೊಸ ಹೈಬ್ರಿಡ್‌ ತಳಿಗಳ ಉತ್ಪಾದನೆಯಾಗುತ್ತಿದೆ.

ಅಂದಹಾಗೆ ಭತ್ತದ ತಳಿಗಳದ್ದೆ ಒಂದು ಅದ್ಭುತ ಕಥಾನಕ. ಗಂಧಸಾಲೆ ಎಂಬ ಬಹು ಪರಿಮಳದ ತಳಿಯು ಪರಾಗಸ್ಪರ್ಶಕ್ಕೆ ಇಲ್ಲಿನ ಗದ್ದೆಗಳಲ್ಲಿ ಕಾಣಿಸುವುದಿದೆ. ಭತ್ತದ ತಳಿಗಳ ಕೃಷಿಋಷಿ ಬಿರುದಾಂಕಿತ, ರಾಷ್ಟ್ರಪತಿಗಳಿಂದ ಮತ್ತು ಕೃಷಿ ಸಂಬಂಧಿತ ಎಲ್ಲ ಪುರಸ್ಕಾರ ಪಡೆದಿರುವ ಬೆಳ್ತಂಗಡಿ ಕಿಲ್ಲೂರಿನ ಕೆ. ದೇವರಾವ್‌ ಅವರ ಬಳಿ +250ಕ್ಕೂ ಹೆಚ್ಚು ಭತ್ತದ ತಳಿಗಳ ಸಂಗ್ರಹವಿರುವುದು ರಾಷ್ಟ್ರೀಯ ದಾಖಲೆ.

ಮನೋಹರ ಪ್ರಸಾದ್‌

ಟಾಪ್ ನ್ಯೂಸ್

1-chilly

Surat; ವಂಚಿಸಿ ಸಂಗ್ರಹಿಸಿಟ್ಟಿದ್ದ 6 ಲಕ್ಷ ಮೌಲ್ಯದ ಒಣಮೆಣಸಿನಕಾಯಿ ಪತ್ತೆ

army

J&K:ಪಾಕ್ ಮೂಲದ ಎಲ್‌ಇಟಿ ಉನ್ನತ ಕಮಾಂಡರ್ ನನ್ನ ಹೊಡೆದುರುಳಿಸಿದ ಸೇನೆ

Pushpa2: ಅಲ್ಲು ಅರ್ಜುನ್‌ ‘ಪುಷ್ಪ-2’ ಐಟಂ ಹಾಡಿಗೆ ಹಜ್ಜೆ ಹಾಕಲಿದ್ದಾರೆ ಈ ಇಬ್ಬರು ನಟಿಯರು?

Pushpa2: ಅಲ್ಲು ಅರ್ಜುನ್‌ ‘ಪುಷ್ಪ-2’ ಐಟಂ ಹಾಡಿಗೆ ಹಜ್ಜೆ ಹಾಕಲಿದ್ದಾರೆ ಈ ಇಬ್ಬರು ನಟಿಯರು?

owaisi (2)

Owaisi; ತಿರುಪತಿಯಲ್ಲಿ ಮುಸ್ಲಿಂ ಸ್ಟಾಫ್ ಇಲ್ಲದಿರುವಾಗ ವಕ್ಫ್ ನಲ್ಲೇಕೆ ಹಿಂದೂಗಳು

farukh abdulla

Sparks Row; ಉಗ್ರರನ್ನು ಹ*ತ್ಯೆ ಮಾಡಬಾರದು…: ಫಾರೂಕ್ ಅಬ್ದುಲ್ಲಾ ಹೇಳಿಕೆ

Shivaji Satam: ಕ್ಯಾಷಿಯರ್‌ ಆಗಿದ್ದ ಹುಡುಗ ಟಿವಿ ಲೋಕದ ʼಸಿಐಡಿʼಯಾಗಿ ಬೆಳೆದು ಬಂದದ್ದೇಗೆ?

Shivaji Satam: ಕ್ಯಾಷಿಯರ್‌ ಆಗಿದ್ದ ಹುಡುಗ ಟಿವಿ ಲೋಕದ ʼಸಿಐಡಿʼಯಾಗಿ ಬೆಳೆದು ಬಂದದ್ದೇಗೆ?

1-jmm

INDIA bloc; ಜಾರ್ಖಂಡ್ ಸೀಟು ಹಂಚಿಕೆ ಒಪ್ಪಂದ ಅಂತಿಮ: ಜೆಎಂಎಂಗೆ 43 ಸ್ಥಾನ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

18-festival

Deepawali: ಬಾಂಬಿನ ಸದ್ದು ಮತ್ತು ಅಪ್ಪನ ಗುದ್ದು!

Akshaya Patra: ಗ್ಯಾರಂಟಿಗಳೆಂದರೆ ಆರ್ಥಿಕ ಶಕ್ತಿ ತುಂಬುವ ಅಕ್ಷಯ ಪಾತ್ರೆ

Akshaya Patra: ಗ್ಯಾರಂಟಿಗಳೆಂದರೆ ಆರ್ಥಿಕ ಶಕ್ತಿ ತುಂಬುವ ಅಕ್ಷಯ ಪಾತ್ರೆ

“ರಾಜೀ’ಕೀಯದಿಂದ ಗಡಿ ಸಮಸ್ಯೆ ಜೀವಂತ… 6 ರಾಜ್ಯಗಳ ಗಡಿಭಾಗದಲ್ಲೂ ಒಂದಲ್ಲ ಒಂದು ಸಮಸ್ಯೆ

“ರಾಜೀ’ಕೀಯದಿಂದ ಗಡಿ ಸಮಸ್ಯೆ ಜೀವಂತ… 6 ರಾಜ್ಯಗಳ ಗಡಿಭಾಗದಲ್ಲೂ ಒಂದಲ್ಲ ಒಂದು ಸಮಸ್ಯೆ

Balipadyami: ಅನ್ನದಾತೆ ಆರಾಧನೆಯ ಬಲಿಪಾಡ್ಯಮಿ… ಇಂದು ಬಲಿಪಾಡ್ಯಮಿ, ಗೋಪೂಜೆ

Balipadyami: ಅನ್ನದಾತೆ ಆರಾಧನೆಯ ಬಲಿಪಾಡ್ಯಮಿ… ಇಂದು ಬಲಿಪಾಡ್ಯಮಿ, ಗೋಪೂಜೆ

8-book

Karnataka Rajyotsava: ಮನೆ ತುಂಬಾ 5 ಲಕ್ಷ ಕನ್ನಡ ಪುಸ್ತಕ: ಹರಿಹರಪ್ರಿಯರ ಪ್ರಪಂಚ!

MUST WATCH

udayavani youtube

ಗೋವಿನ ಪೂಜೆ ಯಾಕಾಗಿ ಮಾಡಬೇಕು?

udayavani youtube

ಮೇಲುಕೋಟೆಯಲ್ಲಿ ದೀಪಾವಳಿ ಆಚರಿಸುವುದಿಲ್ಲ ಎಂಬ ಮಾತು ನಿಜವೋ ಸುಳ್ಳೋ

udayavani youtube

ಗಣಪತಿ ಸಹಕಾರಿ ವ್ಯವಸಾಯಕ ಸಂಘ ‘ನಿ.’ ಕೆಮ್ಮಣ್ಣು ಶತಾಭಿವಂದನಂ ಸಮಾರೋಪ ಸಂಭ್ರಮ ಸಂಪನ್ನ

udayavani youtube

ಉದಯವಾಣಿ’ಚಿಣ್ಣರ ಬಣ್ಣ -2024

udayavani youtube

ಹಬ್ಬದ ಊಟವೇ ಈ ಹೋಟೆಲ್ ನ ಸ್ಪೆಷಾಲಿಟಿ

ಹೊಸ ಸೇರ್ಪಡೆ

1-chilly

Surat; ವಂಚಿಸಿ ಸಂಗ್ರಹಿಸಿಟ್ಟಿದ್ದ 6 ಲಕ್ಷ ಮೌಲ್ಯದ ಒಣಮೆಣಸಿನಕಾಯಿ ಪತ್ತೆ

attack

Subrahmanya; ಅನ್ಯಕೋಮಿನ ವಿದ್ಯಾರ್ಥಿನಿಗೆ ಮೆಸೇಜ್: ಗುಂಪಿನಿಂದ ಯುವಕನಿಗೆ ಥಳಿತ

1-reeee

Kundapura; ನಿಯಂತ್ರಣ ತಪ್ಪಿ ಗದ್ದೆಗೆ ಉರುಳಿದ ಬೈಕ್: ಸವಾರ ದುರ್ಮರ*ಣ

army

J&K:ಪಾಕ್ ಮೂಲದ ಎಲ್‌ಇಟಿ ಉನ್ನತ ಕಮಾಂಡರ್ ನನ್ನ ಹೊಡೆದುರುಳಿಸಿದ ಸೇನೆ

Pushpa2: ಅಲ್ಲು ಅರ್ಜುನ್‌ ‘ಪುಷ್ಪ-2’ ಐಟಂ ಹಾಡಿಗೆ ಹಜ್ಜೆ ಹಾಕಲಿದ್ದಾರೆ ಈ ಇಬ್ಬರು ನಟಿಯರು?

Pushpa2: ಅಲ್ಲು ಅರ್ಜುನ್‌ ‘ಪುಷ್ಪ-2’ ಐಟಂ ಹಾಡಿಗೆ ಹಜ್ಜೆ ಹಾಕಲಿದ್ದಾರೆ ಈ ಇಬ್ಬರು ನಟಿಯರು?

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.