ಸಹಜ ಪ್ರೀತಿ.. ಅದೇ ರೀತಿ..
Team Udayavani, Apr 3, 2022, 3:26 PM IST
ಕಾಲೇಜಿನಲ್ಲಿ ಪ್ರೀತಿ-ಪ್ರೇಮ ಎನ್ನುವುದು ಸಹಜ. ನನಗೂ ಒಬ್ಬ ಸ್ನೇಹಿತಳಿದ್ದಳು. ಯಾವಾಗಲೂ ತನ್ನ ಪ್ರೀತಿಯ ಬಗ್ಗೆ ವಿವರಿಸುತ್ತಿದ್ದಳು. ನಾನು ಬಹಳ ಕುತೂಹಲಕಾರಿಯಾಗಿ ಕೇಳುತ್ತಿದ್ದೆ. ಒಂದು ದಿನ ಅವಳು ಹೇಳುವ ಅನುಭವ ನನಗೂ ಆಗತೊಡಗಿತು.
ಒಮ್ಮೆ ನಾನು ಬಹಳ ಭಯಭೀತರಾಗಿ ಕಾಲೇಜಿನಲ್ಲಿ ಅಳುಮುಖ ಮಾಡಿಕೊಂಡು ಕೂತಿದ್ದೆ. ಆಗ ನನ್ನ ಸ್ನೇಹಿತರು ಎಷ್ಟೇ ಸಮಾಧಾನ ಮಾಡಿದರು ನನ್ನ ಕಾರಂಜಿ ನಿಲ್ಲಲಿಲ್ಲ. ನನ್ನ ಸೀನಿಯರ್ ಬಂದು ಧೈರ್ಯ ತುಂಬಲು ಹೇಳಿದ ಮಾತುಗಳು ನನ್ನಲ್ಲಿ ಬದಲಾವಣೆ ತಂದವು. ಅಲ್ಲಿಂದ ನನಗೆ ತಿಳಿಯದೆ ಪ್ರತಿನಿತ್ಯ ನನ್ನ ಕಣ್ಣುಗಳು ಅವರನ್ನು ಹುಡುಕಲಾರಂಭಿಸಿದವು. ಕಾಲೇಜಿಗೆ ಹೋದಾಗ ಅವನನ್ನು ನೋಡದಿದ್ದರೆ ನನಗೆ ಕ್ಲಾಸ್ ಕೇಳಲು ಮನಸ್ಸೇ ಬರುತ್ತಿರಲಿಲ್ಲ. ಮನಸ್ಸು ತುಂಬಾ ಅವನೇ ಆವರಿಸುತ್ತಿದ್ದ. ನನ್ನ ಸುತ್ತಮುತ್ತಲಿನ ಪ್ರಪಂಚದಲ್ಲಿ ಅವನೇ ತುಂಬಿದ್ದ. ಅವರು ಕಂಡಾಗೆಲ್ಲ ನನ್ನ ಮುಖದಲ್ಲಿ ನನಗರಿವಿಲ್ಲದೆಯೇ ಪುಟ್ಟ ನಗೆ ಬೀರುತ್ತಿತ್ತು. ಅವನು ಮಾತನಾಡುವಾಗ ಪ್ರಪಂಚವನ್ನೇ ಮರೆತು ಬಿಡುತ್ತಿದ್ದೆ. ನನಗೆ ತಿಳಿಯದೆ ಪ್ರೀತಿ ಹುಟ್ಟಿತೆನೋ..! ಅವನು ನನ್ನ ಎಲ್ಲಾ ಸ್ನೇಹಿತರನ್ನು ಮಾತನಾಡಿಸುವಾಗ ತುಂಬಾ ಕೋಪ ಬರುತ್ತಿತ್ತು. ನಾನು ಅವನನ್ನು ಎಂದಿಗೂ ಮಾತನಾಡಿಸಿರಲಿಲ್ಲ.
ಏಕೋ ನನಗೆ ಅವನೊಟ್ಟಿಗೆ ಮಾತನಾಡಲು ಬಹಳ ಭಯ. ಪ್ರತಿನಿತ್ಯ ಹೀಗೆ ಆಗುತ್ತಿತ್ತು. ಒಂದು ದಿನ ಬೀಳ್ಕೊಡುಗೆ ಸಮಾರಂಭ ಬಂದೇಬಿಡ್ತು. ನಾನು ಅದನ್ನು ಕೇಳಿಯೇ ದಂಗಾಗಿಹೋದೆ. ಅಯ್ಯೋ ಇನ್ನು ಮುಂದೆ ನಾನು ನೋಡಲಿಕ್ಕೆ ಆಗೋದಿಲ್ವಾ? ಮಾತನಾಡಿಸಲು ಆಗಲ್ವಾ? ಅವನು ಸಿಗಲ್ವಾ? ಎಂಬ ಭಯ ಮತ್ತಷ್ಟು ನನ್ನನ್ನು ಕಾಡತೊಡಗಿತು. ಬೀಳ್ಕೊಡುಗೆ ದಿನ ಎಲ್ಲವನ್ನೂ ಹೇಳಿಕೊಳ್ಳಬೇಕು ಎಂದು ಹೊರಟೆ. ತುಂಬಾ ಚೆನ್ನಾಗಿ ಕಾಣಬೇಕು. ಅವನನ್ನು ಮೆಚ್ಚಿಸಬೇಕೆಂದು ಬಹಳ ಪ್ರೀತಿಯಿಂದ ರೆಡಿಯಾದೆ. ಅವನನ್ನು ನೋಡಿ ನಾನು ನಿಜಕ್ಕೂ ಒಮ್ಮೆ ದಿಗ್ಭ್ರಾಂತಳಾದೆ. ಅವನು ಅಷ್ಟು ಜನರ ನಡುವೆ ಕಪ್ಪು ಕಾಗೆ ಗಳ ನಡುವೆ ಬಿಳಿ ಪಾರಿವಾಳದಂತೆ ಇದ್ದ. ಆ ದಿನ ಅವನನ್ನು ನೋಡಿ ನಿಜಕ್ಕೂ ಪ್ರಪಂಚದ ಅದ್ಭುತಗಳಲ್ಲಿ ಅವನು ಒಬ್ಬನೆನಿಸಿತು. ನನ್ನ ಭಾವನೆಗಳನ್ನು ಇನ್ನೇನು ಹೇಳಿಕೊಳ್ಳಬೇಕು ಎಂದು ಹೋಗುವುದರಲ್ಲಿ ಒಬ್ಬ ಹುಡುಗಿ ತನ್ನ ಪ್ರೀತಿಯ ಭಾವನೆಗಳನ್ನು ಅವನೊಟ್ಟಿಗೆ ಹೇಳಿಕೊಂಡಳು. ಅದನ್ನು ಕೇಳಿ ನನಗೆ ಆಕಾಶವೇ ಕಳಚಿ ಬಿದ್ದಂತಾಯಿತು. ಅವನಿಗೂ ಕೂಡ ಈ ಪ್ರೀತಿ ಬಗ್ಗೆ ನಂಬಿಕೆಗಳಿಲ್ಲ ಎಂಬ ಮಾತು ನನಗೆ ತಿಳಿಯಿತು. ಆ ಕ್ಷಣ ನನಗೆ ಪ್ರಪಂಚವೇ ಬೇಡವೆನಿಸಿತು. ಆದರೆ ಅವನಿಗೆ ತನ್ನ ತಂದೆ-ತಾಯಿಗಳ ಬಗ್ಗೆ ಇದ್ದ ಪ್ರೀತಿ ಕಾಳಜಿ ಕೇಳಿ ಖುಷಿಯಾಯಿತು. ಆದರೂ ನನ್ನ ಮನಸ್ಸು ಅವನಿಗಾಗಿಯೇ ಪರಿತಪಿಸುತ್ತಿದೆ. ನನ್ನ ಭಾವನೆಗಳನ್ನು ಒಮ್ಮೆ ಅವನಲ್ಲಿ ಹೇಳಿಕೊಳ್ಳ ಬೇಕಿತ್ತೇನೋ.. ಎಂದು ನನ್ನ ಮನಸ್ಸು ಕಾಡುತ್ತಿದೆ. ತಿಳಿದೋ ತಿಳಿಯದೇನೋ..
ಅವನನ್ನು ಬಹಳಷ್ಟು ಮೆಚ್ಚಿಕೊಂಡೆ. ಆ ಪ್ರೀತಿ ನನಗೆ ಮತ್ತೊಮ್ಮೆ ಬೇಕೆನಿಸಿದೆ. ನನ್ನ ಮನಸ್ಸು ಈಗಲೂ ಅವನಿಗಾಗಿಯೇ ಕಾಯ್ದಿರಿಸಿದೆ. ಒಮ್ಮೆ ಅವನನ್ನು ಮಾತನಾಡಿಸಬೇಕು ನನ್ನ ಪ್ರೀತಿಯನ್ನು ಹಂಚಿಕೊಳ್ಳಬೇಕು. ಹೀಗೆ ಏನೆಲ್ಲಾ ಭಾವನೆಗಳು ನನ್ನಲ್ಲಿ ಹುಟ್ಟುತ್ತಿವೆ. ನೀ ಎಲ್ಲಿದ್ದರೂ ಒಮ್ಮೆ ನನ್ನನ್ನು ಭೇಟಿಮಾಡುವ ಗೆಳೆಯಾ…
-ಐಶ್ವರ್ಯ ಕೋಣನ, ವಿಜಯನಗರ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Hukkeri: ಮೀನು ಹಿಡಿಯಲು ಹೋಗಿದ್ದ ತಂದೆ, ಇಬ್ಬರು ಮಕ್ಕಳು ನೀರುಪಾಲು
Karkala: ಪಶು ಗಣತಿಯಲ್ಲಿ ಬೆಕ್ಕುಗಳ ಅವಗಣನೆ !
Emergency: ಹತ್ತಾರು ವಿಳಂಬದ ಬಳಿಕ ಕೊನೆಗೂ ಕಂಗನಾ ʼಎಮರ್ಜೆನ್ಸಿʼ ರಿಲೀಸ್ ಗೆ ಡೇಟ್ ಫಿಕ್ಸ್
IPL Mega Auction: ಮೆಗಾ ಹರಾಜಿನಲ್ಲಿ 13ರ ಬಾಲಕ: ಯಾರಿದು ವೈಭವ್ ಸೂರ್ಯವಂಶಿ
Mangaluru: ಹೆದ್ದಾರಿ ಬದಿ ನಿಲ್ಲುವ ವಾಹನ; ಅಪಾಯಕ್ಕೆ ಆಹ್ವಾನ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.