ಸ್ಪರ್ಧೆ ವಯೋಮಿತಿ 18ಕ್ಕೆ ಇಳಿಕೆ: ಇನ್ನೂ ಪ್ರಬುದ್ಧತೆ ಬೇಕಾಗಬಹುದು
Team Udayavani, Aug 22, 2023, 6:20 AM IST
ಸ್ಪರ್ಧಾ ಮಿತಿಯನ್ನು 25ರಿಂದ 18ಕ್ಕೆ ಇಳಿಸುವ ಸಂಸದೀಯ ಸಮಿತಿ ಚಿಂತನೆ ಸ್ವಾಗತಾರ್ಹ. ಯುವ ಸಮುದಾಯದಲ್ಲಿ ರಾಜಕೀಯ ಪ್ರಜ್ಞೆಯೆನೋ ಸರಿ, ಆದರೆ ಇನ್ನೂ ಕಲಿಕೆಯ ಪ್ರಮುಖ ಘಟ್ಟದಲ್ಲಿ ಇರುವಂಥವರು ಚುನಾವಣ ಅಖಾಡಕ್ಕೆ ಇಳಿದರೆ ಅವರ ಭವಿಷ್ಯವು, ರಾಜಕೀಯ ವನ್ನು ವೃತ್ತಿಯಾಗಿಸಿಕೊಂಡ (ಅರೆ) ಶಿಕ್ಷಿತರ, ವಂಚಕರ ದಾಳಕ್ಕೆ ಬಲಿಯಾಗಬಹುದು.
ಕಲಿಕಾ ವಯಸ್ಸಿನಲ್ಲಿ ಸಣ್ಣ ಸಣ್ಣ ವಿಷಯಕ್ಕೆ ಖಿನ್ನತೆಗೆ ಒಳಗಾಗಿ ತಮ್ಮ ಜೀವವನ್ನು ಬಲಿ ಕೊಡುವ ಇಂದಿನ ಯುವ ಪೀಳಿಗೆಗೆ ರಾಜಕೀಯದ ಪಟ್ಟುಗಳನ್ನು ಅರಗಿಸಿಕೊಳ್ಳುವ, ತಮ್ಮನ್ನು ಆರಿಸಿ ಕಳಿಸಿದ ಜನತೆಯ ಆಶಾಭಾವನೆಗಳನ್ನು ಈಡೇರಿಸುವ ಸರಕಾರದ ವಿವಿಧ ಸೌಲಭ್ಯಗಳನ್ನು ಕ್ಲಪ್ತ ಸಮಯದಲ್ಲಿ ಜನತೆಗೆ ತಲುಪಿಸುವ ಗುರುತರವಾದ ಜವಾಬ್ದಾರಿ ಹೊರಲು ಇನ್ನೂ ಸ್ವಲ್ಪ ವಯಸ್ಸಿನ ಪ್ರಬುದ್ಧತೆ ಬರಬೇಕಾಗಬಹುದು.
ರಾಜಕೀಯದಲ್ಲಿ ಪ್ರಚಾರದಿಂದ ಹಿಡಿದು ಸಾಮಾಜಿಕ ಜಾಲತಾಣ ಗಳವರೆಗೆ ಯುವ ಜನಾಂಗ ಮಹತ್ತರ ಪಾತ್ರವಹಿ ಸುತ್ತದೆ. ಭಾರತಕ್ಕೆ ಬೇಕಾಗಿರುವುದು ಅದೇ. ಆದರೆ ಒಂದೊಂದು ಸ್ಪರ್ಧೆಗೆ ಅದರದ್ದೇ ಆದ ನಿಯಮ ಗಳಿರುವಂತೆ ರಾಜಕೀಯಕ್ಕೂ ನಿಯಮಗಳಿವೆ. ಅವುಗಳಲ್ಲಿ ಮುಖ್ಯವಾಗಿ ಅಭ್ಯರ್ಥಿಯು ಸಮಾಭಿಮುಖೀಯಾಗಿಯು, ಜನರೊಂದಿಗೆ ಮುಕ¤ವಾಗಿ ಬೆರೆಯುವಂತವರಾಗಿಯು ಸೃಜನ ಪಕ್ಷಪಾತವನ್ನು ಮಾಡದೆ ಸಮಾಜದ ಏಳಿಗೆಗೆ ಪ್ರಾಮಾ ಣಿಕವಾಗಿ ಪ್ರಯತ್ನಶೀಲರಾ ಗಿರಬೇಕು. ವಯೋಮಿತಿ ಇಳಿಕೆಯ ಶಿಫಾರಸು ಸರಿಯಾಗಿದೆ. ಅದೇ ರೀತಿ ರಾಜ ಕೀಯ ನಿವೃತ್ತಿಯನ್ನು ಚುನಾವಣ ಆಯೋಗ ಇಳಿಸದಿದ್ದರೆ ರಾಜಕೀಯದಲ್ಲಿ ಯುವಕರು ಬರಿ ಪ್ರಚಾರಕ್ಕಷ್ಟೆ ಸೀಮಿತರಾಗಬಹುದು.
-ರಾಮನಾಥ ಕಿಣಿ ಕೋಟೇಶ್ವರ
25 ವರ್ಷವೇ ಸೂಕ್ತ
ಚುನಾವಣೆಗೆ ಸ್ಪರ್ಧಿಸಲು ಈಗ ಇರುವ ಕನಿಷ್ಠ ವಯೋಮಿತಿ 25 ವರ್ಷ ಅತ್ಯಂತ ಸೂಕ್ತವಾಗಿದೆ. ನಮ್ಮ ಮಕ್ಕಳು ವಿದ್ಯಾಭ್ಯಾಸವನ್ನು ಮುಗಿಸುವಾಗ ಸಾಧಾರಣ 22/23 ವರ್ಷ ಆಗುತ್ತದೆ. ಆಗ ಅವರಲ್ಲಿ ಪ್ರಭುದ್ಧತೆಯೂ ಬರುತ್ತದೆ. ಯಾವುದೇ ಸೂಕ್ತ ನಿರ್ಣಯ ತೆಗೆದುಕೊಳ್ಳುವ ಮಟ್ಟಕ್ಕೆ ಅವರ ಬುದ್ಧಿ ಬೆಳೆದಿರುತ್ತದೆ. ಬೇಗ ಚುನಾವಣೆಗೆ ಸ್ಪರ್ಧಿಸಿ ಗೆದ್ದು ಅವರೇನು ದೊಡ್ಡ ಘನ ಕಾರ್ಯ ಮಾಡುವ ಮಟ್ಟಕ್ಕೆ ನಮ್ಮ ಇಂದಿನ ರಾಜಕೀಯ ಕ್ಷೇತ್ರ ಪಾವಿತ್ರ್ಯತೆಯನ್ನು ಉಳಿಸಿಕೊಂಡಿಲ್ಲ.
ನಿಜವಾಗಿ ಇವತ್ತಿನ ಅತ್ಯಂತ ಆವಶ್ಯಕತೆ ರಾಜಕೀಯದಲ್ಲಿ ಗರಿಷ್ಠ ವಯೋಮಿತಿಯನ್ನು ವಿಧಿಸಿ, ಇತರ ಎಲ್ಲ ಕ್ಷೇತ್ರಗಳಲ್ಲಿ ಇರುವಂತೆ ನಿವೃತ್ತಿ ವಯೋಮಿತಿಯನ್ನು ನಿಗದಿಪಡಿಸಬೇಕು. ನಮ್ಮ ಇವತ್ತಿನ ಕಲುಷಿತ ರಾಜಕೀಯ ವ್ಯವಸ್ಥೆಯಲ್ಲಿ 90+ವಯಸ್ಸಾಗಿ ಅನಾರೋಗ್ಯ ಇದ್ದರೂ ಮಂತ್ರಿಗಳಾಗಿ ಮೆರೆಯುವ ಹುಚ್ಚು. ಇವರಿಂದ ಜನರಿಗೆ ಯಾವುದೇ ಉಪಕಾರ ಇಲ್ಲ. ಕೇವಲ ಸರಕಾರದ/ಜನರ ಕರದ ಹಣ ಪೋಲಾಗುತ್ತಿದೆ. ಚುನಾವಣೆಗೆ ಸ್ಪರ್ಧಿಸಲು ಕನಿಷ್ಠ 25 ವರ್ಷ ಹಾಗೂ ಚುನಾವಣ ರಾಜಕೀಯದಿಂದ ಕಡ್ಡಾಯವಾಗಿ ನಿವೃತ್ತಿ ಹೊಂದಲು ಗರಿಷ್ಠ 70 ವರ್ಷ ನಿಗದಿಪಡಿಸಬೇಕು.
-ಬಿ.ಶಿವರಾಮ ರೈ ಬಿ.ಸಿ.ರೋಡು
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.