ಕೊರೊನಾ: ಚೀನ ಸರ್ವಾಧಿಕಾರವೇ ಕಾರಣ


Team Udayavani, Feb 6, 2020, 6:15 AM IST

sam-35

ಅಪಾಯಕಾರಿ ಕೊರೊನಾ ವೈರಸ್‌ ವಿರುದ್ಧದ ಸಮರದಲ್ಲಿ ಗೆಲುವು ಸಾಧಿಸಿದ ಸುದ್ದಿಯನ್ನು ಘೋಷಿಸುವಾಗ ಚೀನದ ನಾಯಕರೆಲ್ಲ ನಿಸ್ಸಂಶಯವಾಗಿಯೂ, ಕ್ಸಿ ಜಿನ್‌ಪಿಂಗ್‌ರ ಕಮ್ಯುನಿಸ್ಟ್‌ ಪಾರ್ಟಿ ಆಫ್ ಚೀನಕ್ಕೆ ಈ ಗೆಲುವಿನ ಶ್ರೇಯಸ್ಸು ನೀಡಲಿದ್ದಾರೆ. ಆದರೆ ಸತ್ಯ ಇದಕ್ಕೆ ತದ್ವಿರುದ್ಧವಾಗಿದೆ. ಈ ಪ್ರಾಣಾಂತಕ ಕಾಯಿಲೆ ಹರಡಿದ್ದಕ್ಕೆ ಕಮ್ಯುನಿಸ್ಟ್‌ ಪಾರ್ಟಿ ಆಫ್ ಚೀನವೇ ಕಾರಣ.

ಚೀನದ ವುಹಾನ್‌ ನಗರಿಯಿಂದ ಆರಂಭವಾಗಿ ತನ್ನ ಬಾಹುಗಳನ್ನು ಚಾಚುತ್ತಿರುವ ಅಪಾಯಕಾರಿ ಕೊರೊನಾ ವೈರಸ್‌ ಈಗಾಗಲೇ 24 ಸಾವಿರಕ್ಕೂ ಹೆಚ್ಚು ಜನರನ್ನು ರೋಗಗ್ರಸ್ತವಾಗಿಸಿರುವುದಷ್ಟೇ ಅಲ್ಲದೇ(ಬಹುಪಾಲು ಚೀನದಲ್ಲಿ) 500ಕ್ಕೂ ಹೆಚ್ಚು ಜನರನ್ನು ಬಲಿತೆಗೆದುಕೊಂಡಿದೆ. ಚೀನದ ಇತಿಹಾಸವನ್ನು ತೆರೆದು ನೋಡಿದಾಗ, ಈ ರೀತಿಯ ಅಪಾಯಕಾರಿ ರೋಗಗಳ ಅನೇಕ ಉದಾಹರಣೆಗಳು ಸಿಗುತ್ತವೆ. ಉದಾ, ಸಾರ್ಸ್‌ ಮತ್ತು ಆಫ್ರಿಕನ್‌ ಸ್ವೆನ್‌ ಫೀವರ್‌ಗಳು ಹಬ್ಬಿದ್ದು ಚೀನದಿಂದಲೇ. ಈ ರೀತಿಯ ರೋಗಗಳ ಹರಡುವಿಕೆಯ ಬಗ್ಗೆ  ಅರಿವಿದ್ದರೂ, ಅಂಥವನ್ನು ಎದುರಿಸಿದ್ದರೂ ಅದೇಕೆ ಚೀನ ಕೊರೊನಾವನ್ನು ಬೇರುಮಟ್ಟದಲ್ಲೇ ಹತ್ತಿಕ್ಕಲು ವಿಫ‌ಲವಾಯಿತು ಎಂಬ ಪ್ರಶ್ನೆ ಉದ್ಭವಿಸುವುದು ಸಹಜವೇ.

ಆದರೆ, ಈ ಸಂಗತಿ ಆಶ್ಚರ್ಯವನ್ನೇನೂ ಹುಟ್ಟಿಸದು. ಏಕೆಂದರೆ, ಚೀನ ಮತ್ತೆ ಹಳೆಯ ಕೆಟ್ಟ ಗುಣವನ್ನು ಮುಂದುವರಿಸಿದೆ ಎಂಬುದು ಇದರರ್ಥ. “ದೇಶದಲ್ಲಿ ಎಲ್ಲವೂ ಸುಸೂತ್ರವಾಗಿದೆ, ಪರಿಸ್ಥಿತಿ ನಿಯಂತ್ರಣದಲ್ಲಿದೆ, ಏನೂ ತೊಂದರೆ ಇಲ್ಲ’ ಎಂದು ಜನರನ್ನು ನಂಬಿಸುವ ಭರದಲ್ಲಿ ಚೀನದ ಆಡಳಿತ ಅಗತ್ಯ ರೀತಿಯಲ್ಲಿ ರೋಗದ ವಿರುದ್ಧ ಹೋರಾಡಲೇ ಇಲ್ಲ. ಬದಲಾಗಿ, ಕಮ್ಯುನಿಸ್ಟ್‌ ಪಾರ್ಟಿ ಆಫ್ ಚೀನದ ಇಮೇಜ್‌ಗೆ ಧಕ್ಕೆಯಾಗದಂತೆ ರೋಗದ ತೀವ್ರತೆಯನ್ನು ಮುಚ್ಚಿಹಾಕುವ ವಿಫ‌ಲ ಯತ್ನ ಮಾಡುತ್ತಲೇ ಬಂದಿತು.

ಚೀನಿ ಸರ್ಕಾರವನ್ನು ರಕ್ಷಣೆ ಮಾಡುವ ಸಲುವಾಗಿ ಅತ್ಯಂತ ಗೌಪ್ಯತೆ ಕಾಪಾಡಿಕೊಳ್ಳುವ ಈ ಗುಣವು, ಸಾಂಕ್ರಾಮಿಕ ರೋಗಗಳನ್ನು ತಡೆಗಟ್ಟುವಲ್ಲಿ ಅಧಿಕಾರ ವರ್ಗಕ್ಕೆ ದೊಡ್ಡ ಅಡ್ಡಿಯಾಗಿ ಪರಿಣಮಿಸಿದೆ. 2002-2003ರಲ್ಲಿ ಜಗತ್ತನ್ನು ನಡುಗಿಸಿದ ಸಾರ್ಸ್‌ ಸಾಂಕ್ರಾಮಿಕದ ಪ್ರಮಾಣವನ್ನು ಚೀನದ ಆರೋಗ್ಯ ಸಚಿವರು ಸೇರಿದಂತೆ, ಚೀನಿ ಆಡಳಿತ ಪ್ರಾರಂಭಿಕ ಹಂತದಲ್ಲಿ ಗೌಪ್ಯವಾಗಿ ಇಡಲು ಪ್ರಯತ್ನಿಸಿದ್ದರಿಂದಲೇ, ಅದು ಅಷ್ಟೊಂದು ಅಪಾಯಕಾರಿಯಾಗಿ ಪರಿಣಮಿಸಿತು. ಯಾವಾಗ ಸರಿಯಾದ ರೋಗ ನಿಂತ್ರಣ ಮತ್ತು ತಡೆ ಕ್ರಮಗಳನ್ನು ಅನುಷ್ಠಾನಕ್ಕೆ ತರಲಾಯಿತೋ, ಕೆಲವೇ ತಿಂಗಳಲ್ಲೇ ಸಾರ್ಸ್‌ ಅನ್ನು ಹತ್ತಿಕ್ಕಲು ಸಾಧ್ಯವಾಯಿತು.

ಆದರೂ ಚೀನ ತನ್ನ ತಪ್ಪುಗಳಿಂದ ಇನ್ನೂ ಪಾಠ ಕಲಿತಿಲ್ಲ. ಆದಾಗ್ಯೂ ಸಾರ್ಸ್‌ ಬಂದ ಸಮಯಕ್ಕೂ, ಈ ಸಮಯಕ್ಕೂ ಬಹಳ ಅಂತರವಿದೆ. ಇಂದು ವೈದ್ಯಕೀಯ ತಂತ್ರಜ್ಞಾನ ಬಹಳ ಮುಂದುವರಿದಿದೆ, ಕ್ಷಣಾರ್ಧದಲ್ಲಿ ರೋಗಪತ್ತೆ ಮಾಡುವಂಥ ತಂತ್ರಜ್ಞಾನಗಳಿವೆ. ಇಷ್ಟಿದ್ದರೂ ಕೊರೊನಾ ಈ ಪ್ರಮಾಣದಲ್ಲಿ ಹರಡುತ್ತಿದೆಯೆಂದರೆ, ಇದಕ್ಕೆ ಕಾರಣ ಆಡಳಿತವೇ ಅಲ್ಲವೇ? ಜನವರಿ ತಿಂಗಳ ಮಧ್ಯಭಾಗದಿಂದೀಚೆಗೆ, ಚೀನಿ ಆಡಳಿತ ಕೊರೊನಾ ವಿಷಯದಲ್ಲಿ ಮುಕ್ತವಾಗಿ ತನಾಡುತ್ತಿದೆಯಾದರೂ(ಅನಿವಾರ್ಯತೆಯಿಂದ), ಈ ರೋಗ ಪತ್ತೆಯಾದದ್ದು ನವೆಂಬರ್‌-ಡಿಸೆಂಬರ್‌ ತಿಂಗಳಲ್ಲಿಯೇ ಎನ್ನುವುದು ಅನೇಕರಿಗೆ ಗೊತ್ತಿರಲಿಕ್ಕಿಲ್ಲ. ವುಹಾನ್‌ನ ಸ್ಥಳೀಯಾಡಳಿತವಂತೂ, ಈ ಸಮಸ್ಯೆಯ ಗಂಭೀರತೆಯನ್ನು ಅಲ್ಲಗಳೆಯುವಲ್ಲೇ ಮೊದಲ ತಿಂಗಳನ್ನು ಸವೆಸಿತು. ಈ ಹೊಸ ರೋಗವು ಮನುಷ್ಯರಿಂದ ಮನುಷ್ಯರಿಗೆ ಹರಡುತ್ತದೆ ಎನ್ನುವುದಕ್ಕೆ ಯಾವುದೇ ಆಧಾರವಿಲ್ಲ ಎಂದೇ ಆರಂಭದಲ್ಲಿ ಹೇಳಿತ್ತು. ಡಿಸೆಂಬರ್‌ 8ರಂದೇ, ಕೊರೊನಾ ಬಗ್ಗೆ ವೈದ್ಯರು ವರದಿ ಮಾಡಿದ್ದರೂ, ವುಹಾನ್‌ನ ನಗರಸಭೆಯ ಆರೋಗ್ಯ ಆಯೋಗವು ಈ ಕುರಿತು ನೊಟೀಸ್‌ ಜಾರಿ ಮಾಡಲು ಹಲವು ವಾರಗಳನ್ನು ತೆಗೆದುಕೊಂಡಿತು. ಇನ್ನು ಜನವರಿ 5ರಂದು ಕೂಡ ವುಹಾನ್‌ನ ಆರೋಗ್ಯ ಆಯೋಗವು, ರೋಗದ ಗಂಭೀರತೆಯನ್ನು ಅಲ್ಲಗಳೆಯುವ ಹೇಳಿಕೆಯನ್ನೇ ಪುನರುಚ್ಚರಿಸಿತು. ಅಷ್ಟರಲ್ಲಾಗಲೇ 59ಕ್ಕೂ ಹೆಚ್ಚು ಕೇಸುಗಳು ಪತ್ತೆಯಾಗಿದ್ದವು. ಜನವರಿ 11 ರಂದು ಕೊರೊನಾದಿಂದ ವ್ಯಕ್ತಿಯೊಬ್ಬರು ಮೃತಪಟ್ಟ ಸುದ್ದಿ ಬಂದಾಗಲೂ, ಆರೋಗ್ಯ ಆಯೋಗ, ಈ ರೋಗ ಮನುಷ್ಯರಿಂದ ಮನುಷ್ಯರಿಗೆ ಹರಡುತ್ತದೆ ಎನ್ನುವುದಕ್ಕೆ ಪುರಾವೆ ಇಲ್ಲ ಎಂದೇ ವಾದಿಸಿತು!

ಈ ಅಪಾಯಕಾರಿ ಸಮಯದಲ್ಲಿ, ಸುದ್ದಿ ಪ್ರಸಾರವನ್ನೂ ಚೀನಿ ಆಡಳಿತ ಹತ್ತಿಕ್ಕಿತು. ಈಚಿನ ವರ್ಷಗಳಲ್ಲಂತೂ ಚೀನ ಸರಕಾರ ಸಾಮಾಜಿಕ ಮಾಧ್ಯಮಗಳ ಮೇಲೆ ಹಾಗೂ ನಾಗರಿಕ ಸಮಾಜದ ಮೇಲೆ ಬಿಗಿ ಹಿಡಿತ ಸಾಧಿಸಿದೆ. ಹೀಗಾಗಿ, ಕೊರೊನಾ ಬಗ್ಗೆ ಮಾಹಿತಿ ಹಂಚಿಕೊಂಡವರನ್ನೆಲ್ಲ ಚೀನಿ ಪೊಲೀಸರು ಪೀಡಿಸಿದ್ದಾರೆ. ಆರಂಭಿಕ ಹಂತದಲ್ಲಿ ಇದನ್ನು ಪತ್ತೆ ಹಚ್ಚಿದ ವೈದ್ಯನನ್ನು ಚೀನಿ ಪೊಲೀಸರು ಪೀಡಿಸಿದರು, ಆತ ನೀಡಿದ ಎಚ್ಚರಿಕೆಯನ್ನು “ಸುಳ್ಳು ಸುದ್ದಿ’ ಎಂದು ಸ್ಥಳೀಯಾಡಳಿತ ಕರೆಯಿತು. ಬಲವಂತವಾಗಿ, ಆತನಿಂದ ತಪ್ಪೊಪ್ಪಿಗೆ ಬರೆಸಿಕೊಂಡಿತು. ಈಗ ಆ ವೈದ್ಯನೂ ಕೊರೊನಾದಿಂದ ಪೀಡಿತನಾಗಿದ್ದು, ಸ್ಥಳೀಯ ಆಡಳಿತ, ಪೊಲೀಸರು ಹೇಗೆ ತನ್ನನ್ನು ಹತ್ತಿಕ್ಕಲು ಪ್ರಯತ್ನಿಸಿದರು ಎನ್ನುವುದನ್ನು ಮುಕ್ತವಾಗಿ ಹೇಳುತ್ತಿದ್ದಾನೆ. ಈತನೆಂದಷ್ಟೇ ಅಲ್ಲ, ಚೀನದ ಸಾಮಾಜಿಕ ಜಾಲತಾಣದಲ್ಲೂ ಚೀನಿ ಸರಕಾರ ಕಣ್ಗಾವಲಿಟ್ಟು, ಯಾರ್ಯಾರು ಕೊರೊನಾ ಬಗ್ಗೆ ಮಾತನಾಡುತ್ತಾರೋ ಅವರನ್ನೆಲ್ಲ ಪೀಡಿಸಿದೆ, ಅವರ ಪೋಸ್ಟ್‌ಗಳನ್ನು ಡಿಲೀಟ್‌ ಮಾಡಿದೆ.

ಒಂದು ಅಧ್ಯಯನದ ಪ್ರಕಾರ ಚೀನದಲ್ಲಿನ ಪ್ರಖ್ಯಾತ
ಮೆಸೇಜಿಂಗ್‌ ಆ್ಯಪ್‌ ಆಗಿರುವ ಗಛಿಇಜಚಠಿನಲ್ಲಿ ಸ್ಥಳೀಯ ಜನರಿಂದ ಡಿಸೆಂಬರ್‌ 30ರಿಂದ ಜನವರಿ 4ರವರೆಗೆ ಈ ರೋಗದ ಬಗ್ಗೆ ಬಹಳ ಚರ್ಚೆಗಳು ನಡೆದವು. ಆದರೆ ತದನಂತರದ ದಿನಗಳಲ್ಲಿ, ಈ ರೀತಿ ರೋಗದ ಕುರಿತು ಮಾತನಾಡುವವರನ್ನು “ಸುಳ್ಳು ಸುದ್ದಿ ಹರಡುವ’ ಆರೋಪದಲ್ಲಿ ವಿಚಾರಣೆ ನಡೆಸಲಾಯಿತು, ಕೊರೊನಾ ಕುರಿತು ಮಾಡಿದ್ದ ಪೋಸ್ಟ್‌ಗಳು, ಚಿತ್ರಗಳೆಲ್ಲ ಬಹುತೇಕ ಡಿಲೀಟ್‌ ಆಗಿಬಿಟ್ಟವು. ಜನವರಿ 11ರಂದು ಮೊದಲ ಸಾವು ವರದಿಯಾದಾಗ ಮತ್ತೆ ಈ ರೋಗದ ಕುರಿತು ಮೆಸೇಜ್‌ಗಳು ಹರಿದಾಡಲಾರಂಭಿಸಿದವಾದರೂ, ಒಂದೆರಡೇ ದಿನಗಳಲ್ಲಿ ಅವೂ ಕಾಣೆಯಾದವು. ಆದರೆ ಜನವರಿ 20ರಂದು, ಅಂದರೆ ವುಹಾನ್‌ನಲ್ಲಿ 136ಕ್ಕೂ ಹೆಚ್ಚು ಹೊಸ ರೋಗಿಗಳು ಪತ್ತೆಯಾದ ನಂತರ, ಹಾಗೂ ಬೀಜಿಂಗ್‌ನಲ್ಲೂ ರೋಗ ಹರಡಿದ ನಂತರ, ಸರ್ಕಾರವು ಅಂತರ್ಜಾಲದ ಮೇಲಿನ ಹಿಡಿತವನ್ನು ತಗ್ಗಿಸಿತು. ಕೂಡಲೇ ಕೊರೊನಾ ವೈರಸ್‌ ಕುರಿತು ಜನರಿಂದ ಪೋಸ್ಟ್‌ಗಳ
ಸಾಗರವೇ ಹರಿದಾಡಿತು.

ಈಗ ತನ್ನ ಗೇರ್‌ ಬದಲಿಸಿರುವ ಚೀನದ ಸರಕಾರ, ತಾನು ರೋಗ ತಡೆಗೆ ಎಷ್ಟು ಪ್ರಯತ್ನ ಮಾಡುತ್ತಿದ್ದೇನೆ ಎಂದು ತೋರಿಸಲು ಪ್ರಯತ್ನಿಸುತ್ತಾ, ವುಹಾನ್‌ ಮತ್ತು ಹತ್ತಿರದ ಹುಬೈ ಪ್ರದೇಶಕ್ಕೆ ಜನಪ್ರವೇಶವನ್ನು ನಿಷೇಧಿಸಿದೆ. ಜಿನ್‌ಪಿಂಗ್‌ ಸರ್ಕಾರದ ಈ ಕ್ರಮಗಳು ಯಾವ ಮಟ್ಟದಲ್ಲಿ ಪರಿಣಾಮಕಾರಿ ಎನ್ನುವುದು ಈಗಂತೂ ಸ್ಪಷ್ಟವಾಗುತ್ತಿಲ್ಲ. ಆದರೆ, ಆರಂಭಿಕ ಸಮಯದಲ್ಲಿ ಅದು ಇಟ್ಟ ತಪ್ಪುಹೆಜ್ಜೆಗಳಿಂದಾಗಿ, ಸಾವಿರಾರು ಜನರು ರೋಗಗ್ರಸ್ತರಾಗಲಿದ್ದಾರೆ, ಇನ್ನೂ ನೂರಾರು ಜನ
ಸಾಯಬಹುದು ಮತ್ತು ಈಗಾಗಲೇ ಸಾಲ ಮತ್ತು ವ್ಯಾಪಾರ ಯುದ್ಧದಿಂದ ದುರ್ಬಲವಾಗಿರುವ ಆರ್ಥಿಕತೆಗೂ ಮತ್ತೂಂದು ಬಲವಾದ ಪೆಟ್ಟು ಬೀಳಬಹುದು.

ಆದರೆ, ಈ ಕಥೆಯ ದುರಂತ ಅಂಶವೇನು ಗೊತ್ತೇ? ಇಷ್ಟೆಲ್ಲ ಆದಮೇಲೂ, ಚೀನ ಆಡಳಿತ ಬದಲಾಗುವುದಿಲ್ಲ, ಮುಂದಿನ ಬಾರಿ ಪರಿಸ್ಥಿತಿ ಭಿನ್ನವಾಗಿ ಇರುವುದಿಲ್ಲ ಎನ್ನುವುದು! ಚೀನದಲ್ಲಿ ಒಂದೇ ಪಕ್ಷ ಅಸ್ತಿತ್ವದಲ್ಲಿದೆ. ಆ ಪಕ್ಷ ಅಸ್ತಿತ್ವದಲ್ಲಿ ಉಳಿಯುವುದು ಗೌಪ್ಯತೆ, ಮಾಧ್ಯಮಗಳ ಹತ್ತಿಕ್ಕುವಿಕೆ, ನಾಗರಿಕ ಸ್ವಾತಂತ್ರÂಗಳ ಮೇಲಿನ ನಿರ್ಬಂಧಗಳನ್ನು ಆಧರಿಸಿದೆ. ಹೀಗಾಗಿ, ಸದ್ಯಕ್ಕೆ ಜಿನ್‌ಪಿಂಗ್‌ ತಮ್ಮ ಸರಕಾರ ಪ್ರಮುಖ ಅಪಾಯಗಳನ್ನು ಎದುರಿಸುವಲ್ಲಿ ಮತ್ತಷ್ಟು ಸಜ್ಜಾಗಲಿದೆ ಎಂದು ಎಷ್ಟೇ ಹೇಳಲಿ, ಕಮ್ಯುನಿಸ್ಟ್‌ ಪಾರ್ಟಿ ಆಫ್ ಚೀನದ ಆಡಳಿತವನ್ನು ಭದ್ರವಾಗಿಡುವುದಕ್ಕಾಗಿ ಅವರ ಆಡಳಿತ ಚೀನಿ ಮತ್ತು ಪ್ರಪಂಚದ ಜನರ ಸುರಕ್ಷತೆಯನ್ನು ಕಡೆಗಣಿಸಲಿದೆ. ಆಗಲೇ ಹೇಳಿದಂತೆ, ಅಪಾಯಕಾರಿ ಕೊರೊನಾ ವೈರಸ್‌ ವಿರುದ್ಧದ ಸಮರದಲ್ಲಿ ಗೆಲುವು ಸಾಧಿಸಿದ ಸುದ್ದಿಯನ್ನು ಘೋಷಿಸುವಾಗ ಚೀನದ ನಾಯಕರೆಲ್ಲ ನಿಸ್ಸಂಶಯವಾಗಿಯೂ, ಕ್ಸಿ ಜಿನ್‌ಪಿಂಗ್‌ರ ಕಮ್ಯುನಿಸ್ಟ್‌ ಪಾರ್ಟಿ ಆಫ್ ಚೀನಕ್ಕೆ ಈ ಗೆಲುವಿನ ಶ್ರೇಯಸ್ಸು ನೀಡಲಿದ್ದಾರೆ. ಆದರೆ ಸತ್ಯ ಇದಕ್ಕೆ ತದ್ವಿರುದ್ಧವಾಗಿದೆ. ಈ ಪ್ರಾಣಾಂತಕ ಕಾಯಿಲೆ ಪಸರಿಸುವುದಕ್ಕೆ ಕಮ್ಯುನಿಸ್ಟ್‌ ಪಾರ್ಟಿಯೇ ಕಾರಣ.

(ಲೇಖಕರು ಪೀಪಲ್ಸ್‌ ರಿಪಬ್ಲಿಕ್‌ ಆಫ್ ಚೀನ ಆಡಳಿತದ ಕುರಿತ ವಿಮರ್ಶಕರಾಗಿದ್ದು, ಪ್ರಸಕ್ತ ಅಮೆರಿಕದ ಕ್ಯಾಲಿಫೋರ್ನಿಯಾದ ಕ್ಲಾéರೆಮಾಂಟ್‌ ಮೆಕೆನ್ನಾ ಕಾಲೇಜಿನಲ್ಲಿ ಸ್ಟ್ರಾಟೆಜಿಕ್‌ ಸ್ಟಡೀಸ್‌ ವಿಭಾಗದ ನಿರ್ದೇಶಕರಾಗಿದ್ದಾರೆ)

(ಕೃಪೆ: ಮಿಡ್‌ಲಿಂಕ್ಸ್‌ಸ್ಲಿದರ್‌.ಕಾಂ)
 ಮಿಂಕ್ಸಿನ್‌ ಪೇ

ಟಾಪ್ ನ್ಯೂಸ್

PM Modi

PM Care Fund:ಈ ವರ್ಷ ದೇಣಿಗೆ ಕುಸಿತ

Memorial Space: ಡಾ.ಸಿಂಗ್‌ರ ಸ್ಮಾರಕ ನಿರ್ಮಾಣ ಮಾಡಲು ಕೇಂದ್ರ ಸರ್ಕಾರ ಸಮ್ಮತಿ

Memorial Space: ಡಾ.ಸಿಂಗ್‌ರ ಸ್ಮಾರಕ ನಿರ್ಮಾಣ ಮಾಡಲು ಕೇಂದ್ರ ಸರ್ಕಾರ ಸಮ್ಮತಿ

ದಿಲ್ಲೀಲಿ ಚಳಿಗಾಲದಲ್ಲೇ ದಾಖಲೆ 4 ಸೆ.ಮೀ. ಮಳೆ: 101 ವರ್ಷದಲ್ಲೇ ಮೊದಲು

ದಿಲ್ಲೀಲಿ ಚಳಿಗಾಲದಲ್ಲೇ ದಾಖಲೆ 4 ಸೆ.ಮೀ. ಮಳೆ: 101 ವರ್ಷದಲ್ಲೇ ಮೊದಲು

Putin Apologizes: ಅಜರ್‌ಬೈಜಾನ್‌ ವಿಮಾನ ದುರಂತ… ಕ್ಷಮೆಯಾಚಿಸಿದ ರಷ್ಯಾ ಅಧ್ಯಕ್ಷ !

Putin Apologizes: ಅಜರ್‌ಬೈಜಾನ್‌ ವಿಮಾನ ದುರಂತ… ಕ್ಷಮೆಯಾಚಿಸಿದ ರಷ್ಯಾ ಅಧ್ಯಕ್ಷ !

Uttar Pradesh: ತಂದೆ, ಅಜ್ಜ, ಚಿಕ್ಕಪ್ಪನಿಂದಲೇ ಅಪ್ರಾಪ್ತೆ ಮೇಲೆ ಅತ್ಯಾಚಾರ!

Uttar Pradesh: ತಂದೆ, ಅಜ್ಜ, ಚಿಕ್ಕಪ್ಪನಿಂದಲೇ ಅಪ್ರಾಪ್ತೆ ಮೇಲೆ ಅತ್ಯಾಚಾರ!

PUNJAB

Jagjit Singh Dallewal: ರೈತ ನಾಯಕನನ್ನು ಆಸ್ಪತ್ರೆಗೆ ದಾಖಲಿಸಲು ಡಿ.31ರ ಗಡುವು

Madikeri: ಹಲಸಿನ ಮರವೇರಿದ ಕಾರ್ಮಿಕನ ಮೇಲೆ ಗುಂಡು… ಆಸ್ಪತ್ರೆ ದಾರಿ ಮಧ್ಯೆ ಮೃತ್ಯು

Madikeri: ಹಲಸಿನ ಮರವೇರಿದ ಕಾರ್ಮಿಕನ ಮೇಲೆ ಗುಂಡು… ಆಸ್ಪತ್ರೆ ದಾರಿ ಮಧ್ಯೆ ಮೃತ್ಯು


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

7-

Cooking Oil: ಅಡುಗೆ ಎಣ್ಣೆ ಆಮದು ಸವಾಲು

Ex PM:ಪ್ರಚಾರದಿಂದ ದೂರ- ದೇಶ ಕಂಡ ಸರಳ, ಸಜ್ಜನಿಕೆಯ ಮೊದಲ ಆರ್ಥಿಕ ತಜ್ಞ ಪ್ರಧಾನಿ

Ex PM:ಪ್ರಚಾರದಿಂದ ದೂರ- ದೇಶ ಕಂಡ ಸರಳ, ಸಜ್ಜನಿಕೆಯ ಮೊದಲ ಆರ್ಥಿಕ ತಜ್ಞ ಪ್ರಧಾನಿ

MM-Singh-ACC-Pm

Accidental Prime Minister: ದ ಮೇಕಿಂಗ್‌ ಆ್ಯಂಡ್‌ ಅನ್‌ಮೇಕಿಂಗ್‌ ಆಫ್ ಡಾ.ಸಿಂಗ್‌

MM-Singh–Bush

Tribute Dr.Singh: ಡಾ.ಸಿಂಗ್‌ ಅವಧಿಯಲ್ಲಿ ಭಾರತ-ಅಮೆರಿಕ ನಡುವೆ ಅಣ್ವಸ್ತ್ರ ಒಪ್ಪಂದ

MM-Singh-Sonia

Tribute Dr.Singh: ಆರ್ಥಿಕ ಭಾಗ್ಯ ವಿಧಾತ…ಡಾ.ಮನಮೋಹನ್‌ ಸಿಂಗ್‌

MUST WATCH

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

ಹೊಸ ಸೇರ್ಪಡೆ

PM Modi

PM Care Fund:ಈ ವರ್ಷ ದೇಣಿಗೆ ಕುಸಿತ

1-kambala

Mangaluru Kambala; ಬಂಗ್ರಕೂಳೂರಿನಲ್ಲಿ ಚಾಲನೆ, ನಾಳೆ ಸಮಾರೋಪ

Memorial Space: ಡಾ.ಸಿಂಗ್‌ರ ಸ್ಮಾರಕ ನಿರ್ಮಾಣ ಮಾಡಲು ಕೇಂದ್ರ ಸರ್ಕಾರ ಸಮ್ಮತಿ

Memorial Space: ಡಾ.ಸಿಂಗ್‌ರ ಸ್ಮಾರಕ ನಿರ್ಮಾಣ ಮಾಡಲು ಕೇಂದ್ರ ಸರ್ಕಾರ ಸಮ್ಮತಿ

ದಿಲ್ಲೀಲಿ ಚಳಿಗಾಲದಲ್ಲೇ ದಾಖಲೆ 4 ಸೆ.ಮೀ. ಮಳೆ: 101 ವರ್ಷದಲ್ಲೇ ಮೊದಲು

ದಿಲ್ಲೀಲಿ ಚಳಿಗಾಲದಲ್ಲೇ ದಾಖಲೆ 4 ಸೆ.ಮೀ. ಮಳೆ: 101 ವರ್ಷದಲ್ಲೇ ಮೊದಲು

Putin Apologizes: ಅಜರ್‌ಬೈಜಾನ್‌ ವಿಮಾನ ದುರಂತ… ಕ್ಷಮೆಯಾಚಿಸಿದ ರಷ್ಯಾ ಅಧ್ಯಕ್ಷ !

Putin Apologizes: ಅಜರ್‌ಬೈಜಾನ್‌ ವಿಮಾನ ದುರಂತ… ಕ್ಷಮೆಯಾಚಿಸಿದ ರಷ್ಯಾ ಅಧ್ಯಕ್ಷ !

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.