ಜೀವಿಯ ಜಂಘಾಬಲವೇ ಧೈರ್ಯ
Team Udayavani, Sep 24, 2022, 5:45 AM IST
ಧೈರ್ಯಂ ಸರ್ವತ್ರ ಸಾಧನಂ’ ಎಂಬಂತೆ ವಿನಯ, ವಿವೇಕ, ಜ್ಞಾನ, ವಿಧೇಯತೆ ಇತ್ಯಾದಿ ಸಾಧನಗಳಿಗಿಂತಲೂ ಧೈರ್ಯವು ನಮ್ಮೆಲ್ಲ ಸಾಧನೆಗೆ ಪ್ರಾಥಮಿಕ ಆಕರ. ಹೌದು, ಹುಟ್ಟಿನಿಂದ ನಾವು ಗಳಿಸಿರುವ ಬಹುಪಾಲು ಆಸ್ತಿಗಳಲ್ಲಿ ಧೈರ್ಯವೂ ಒಂದು. ಮನುಷ್ಯನ ಜನನದಿಂದ ಅವನ ಕೊನೆಯವರೆಗೂ ವಿವಿಧ ಮುಖಗಳಲ್ಲಿ ಧೈರ್ಯ ತನ್ನ ಕುರುಹುಗಳನ್ನು ತೋರಿಸುತ್ತದೆ. ಸಾಧನೆಯ ಮೂಲಮಂತ್ರವೇ ಧೈರ್ಯ. ಧೈರ್ಯವೊಂದಿದ್ದರೆ ಎಂತಹ ಸಂದಿಗ್ಧ ಪರಿಸ್ಥಿತಿಯನ್ನು ಮೆಟ್ಟಿನಿಂತು ನಮ್ಮ ಜೀವನವನ್ನು ಮೇಲುಸ್ತರಕ್ಕೆ ಕೊಂಡೊಯ್ಯಬಹುದು. ಸಾಧಕರ ಜೀವನದ ಏಳುಬೀಳುಗಳನ್ನು ಒಮ್ಮೆ ನೋಡಿದಾಗ ಅವರ ಧೈರ್ಯ ಮೆಚ್ಚುವಂಥದ್ದು. ಇಂದಿನ ತಂತ್ರಜ್ಞಾನ ಯುಗದಲ್ಲಿ ನಿತ್ಯ ನೂತನ ಆವಿಷ್ಕಾರಗಳು ಧೈರ್ಯದ ಬಿಂದುವಿನಿಂದ ಸಾಧನೆಯ ಸಿಂಧುವಾಗಿದೆ. ಧೈರ್ಯವೊಂದಿಲ್ಲದಿದ್ದರೆ ಬಹುಶಃ ಮನುಷ್ಯ ಇಷ್ಟೊಂದು ಸಾಧಿಸುತ್ತಿರಲಿಲ್ಲವೇನೋ!
ಹಾಗಾದರೆ ಧೈರ್ಯ ಮತ್ತು ಸಾಧನೆಗೆ ಏನಾದರೂ ಸಂಬಂಧವಿದೆಯಾ? ಖಂಡಿತ ಇದೆ. ಇದು ತಾಯಿ ಮಗುವಿನ ಸಂಬಂಧವನ್ನು ಪುಷ್ಟೀಕರಿಸುತ್ತದೆ. “ಧೈರ್ಯ’ ಎಂಬ ಮಗುವಿಗೆ ಚಿಕ್ಕಂದಿನಿಂದಲೇ ಸಲಹಿ ಪೋಷಿಸಿದಾಗ ಅದು ನಮ್ಮನ್ನು “ಸಾಧನೆ’ ಎಂಬ ಮಹಾತಾಯಿಯ ಸ್ಥಾನಕ್ಕೇರಿಸುತ್ತದೆ. ಧೈರ್ಯದಿಂದ ಒಂದು ಕೆಲಸಕ್ಕೆ ಕೈಹಾಕಿದರೆ ಅರ್ಧ ಕೆಲಸ ಆದಂತೆಯೇ. ಇನ್ನುಳಿದ ಕೆಲಸವು ನಮ್ಮ ಮಾನಸಿಕ ಮತ್ತು ದೈಹಿಕ ಪರಿಶ್ರಮದಿಂದ ಪೂರ್ಣಗೊಳ್ಳುತ್ತದೆ.
ಧೈರ್ಯ ಇಲ್ಲದಿದ್ದರೆ ಮನದಲ್ಲಿ ಭಯ ಆವರಿಸಿ ಖನ್ನತೆಗೆ ಒಳಗಾಗಿ ಮನೋರೋಗಿಯಾಗುವ ಸಂಭವ ಹೆಚ್ಚು. ಎಲ್ಲ ಸಮಸ್ಯೆಗಳನ್ನು ಧೈರ್ಯ, ಸ್ಥೈರ್ಯದಿಂದ ಎದುರಿಸಿದರೆ ಮಾತ್ರ ಸಾಧನೆ ಎಂಬ ಸಿಹಿಫಲ ನಮ್ಮದಾಗುತ್ತದೆ.
ಇಂಗ್ಲೆಂಡಿನ ಇತಿಹಾಸಕಾರನಾದ ಎಡ್ವರ್ಡ್ ಗಿಬ್ಬನ್ ಪ್ರಕಾರ “ಗಾಳಿ ಮತ್ತು ಸಮುದ್ರದ ಅಲೆಗಳು ಯಾವತ್ತೂ ಧೈರ್ಯವಂತ ನಾಯಕನ ಪರವಾಗಿರುತ್ತದೆ. ಧೀರ, ಶೂರನಾದವನು ಧೈರ್ಯದ ಅಡಿಪಾಯದ ಮೇಲೆ ಸಾಧನೆಯ ಮಹಾಸೌಧವನ್ನು ಕಟ್ಟುತ್ತಾನೆ. ಆದರೆ ಹೇಡಿಯು ಬದುಕಿನಲ್ಲಿ ಹಿಂದೆ ಸರಿಯುತ್ತಾನೆ’ ಎಂದಿ¨ªಾನೆ. ಬಹುಶಃ ಸಮಸ್ಯೆಗಳಿಲ್ಲದ ಪ್ರಪಂಚದ ಸೃಷ್ಟಿಯೇ ಇಲ್ಲ. ಅದನ್ನು ಧೈರ್ಯದಿಂದ ಎದುರಿಸಿದರೆ ತಾನೇ ಜೀವನದಲ್ಲಿ ಸಫಲತೆಯನ್ನು ಕಾಣಬಹುದು.
ಮಗು ಪ್ರತಿಯೊಂದು ಹೆಜ್ಜೆಯನ್ನು ಧೈರ್ಯದೊಂದಿಗೆ ಇಟ್ಟು ಮುನ್ನಡೆಯುತ್ತದೆ. ನಾವು ಅದನ್ನು ಮಾಡಬೇಡ, ಅಲ್ಲಿ ಹೋಗಬೇಡ ಎಂದು ಹಿಂದೆಳೆದರೆ ಧೈರ್ಯಗೆಡಿಸಿದರೆ ಮುಂದೆ ಆ ಮಗುವಿನ ಪರಿಸ್ಥಿತಿ ಹೇಗಾಗಬೇಡ ನೀವೇ ಯೋಚಿಸಿ. ದಿಟ್ಟತನದಿಂದ ಒಂದಡಿ ಮುಂದಿಟ್ಟಾಗ ಹಿಂದೆಳೆಯುವವರೇ ಹೆಚ್ಚು . ಬಾವಿಯಲ್ಲಿನ ಕಪ್ಪೆ ರೀತಿಯಾಗುವುದು ನಮ್ಮ ಜೀವನ. ನಿಂದಕರನ್ನು ನಮ್ಮ ಹಿತೈಷಿಗಳೆಂದು ಭಾವಿಸಿ ನಿಂದನೆಯಮಾತುಗಳನ್ನು ಧನಾತ್ಮಕವಾಗಿ ಯೋಚಿಸಿ ಧೈರ್ಯದಿಂದ ಮುಂದಡಿ ಇಟ್ಟರೆ ಯಶಸ್ಸು ಖಂಡಿತ ನಮ್ಮದೇ.
ಮಹಾಕಾವ್ಯಗಳಾದ ರಾಮಾಯಣ ಮತ್ತು ಮಹಾಭಾರತದಲ್ಲಿ ಧೈರ್ಯದ ಬಗ್ಗೆ ಉಲ್ಲೇಖಗಳಿವೆ. ರಾಮಾಯಣದಲ್ಲಿ ರಾಮನು ತನಗೊದಗಿದ ಸಮಸ್ಯೆಗಳನ್ನು ಧೈರ್ಯದಿಂದ ಎದುರಿಸಿ ಜೀವನದಲ್ಲಿ ಸಾರ್ಥಕ್ಯವನ್ನು ಹೊಂದುವನು. ಮಹಾಭಾರತದಲ್ಲಿ ಪಾಂಡವರು ತಮ್ಮ ಎಲ್ಲ ಕಷ್ಟಗಳನ್ನು ವಿನಯ, ವಿವೇಕ ಮಿಗಿಲಾಗಿ ಧೈರ್ಯದಿಂದ ಎದುರಿಸಿ ಮುಂದಿನ ಜನಾಂಗಕ್ಕೆ ದಾರಿದೀಪವಾದರು. ಧರ್ಮವೆಂಬ ಸಾಗರದಲ್ಲಿ ಧೈರ್ಯದ ಹುಟ್ಟನ್ನು ಹಿಡಿದು ಈಜಿ ಕೊನೆಗೆ ಜಯವನ್ನು ಸಾಧಿಸಿದರು. ಎಲ್ಲ ರೀತಿಯ ಅಪಾಯಗಳಿಂದಲೂ ನಮ್ಮನ್ನು ಪಾರುಮಾಡುವುದು ಯಾವುದು ಎಂದು ಯುಧಿಷ್ಠಿರನನ್ನು ಯಕ್ಷ ಕೇಳಿದಾಗ “ಧೈರ್ಯ’ ಎಂಬುದು ಯುಧಿಷ್ಠಿರನ ಉತ್ತರವಾಗಿತ್ತು. Arise, awake and stop not until the goal is reached ‘ ಎಂಬ ವಿವೇಕಾನಂದರ ದಿವ್ಯ ಸಂದೇಶದಂತೆ ನಾವು ನಿರ್ಭೀತರಾಗೋಣ. ದಿಟ್ಟತನದಿಂದ ಅಡಿ ಇಡೋಣ. ಧೈರ್ಯ ಎಂಬ ದಿವ್ಯ ಔಷಧವು ನಮ್ಮ ಮನ ಮನಸ್ಸನ್ನು ಬೆಳಗಲಿ. ಆ ಮೂಲಕ ಸಾಧನೆ ಎಂಬ ಅಮೃತವನ್ನು ಹೀರೋಣ.
-ಗಾಯತ್ರಿ ನಾರಾಯಣ ಅಡಿಗ, ಬೈಂದೂರು
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Mandya :ಗಂಡ ಗದ್ಯ, ಹೆಂಡತಿ ಪದ್ಯ, ಮಕ್ಕಳು ರಗಳೆ!: ಹಾಸ್ಯ ಸಾಹಿತಿ ವೈ.ವಿ.ಗುಂಡೂರಾವ್
Mandya Sahitya Sammelana: ಅಕ್ಷರ ಜಾತ್ರೆಯಲ್ಲಿ “ಹವಾ’ ಎಬ್ಬಿಸಿದ ತೊಟ್ಟಿ ಮನೆ..!
Mandya: ನುಡಿ ಹಬ್ಬದ ಔತಣ ಸವಿಯಲು ಜನವೋ ಜನ- ವೃದ್ಧರಿಗೆ ವಿಶೇಷ ಕೌಂಟರ್
World Meditation Day; ಶರೀರಕ್ಕೆ ಊಟ, ಆತ್ಮಕ್ಕೆ ಧ್ಯಾನ
Meditation; ಮಾನಸಿಕ ಆರೋಗ್ಯಕ್ಕೆ ದಿವ್ಯೌಷಧ: ಡಿ.21ರಂದೇ ಏಕೆ ಧ್ಯಾನ ದಿನ?
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Mangaluru: ಕ್ರಿಸ್ಮಸ್ ಸಂಭ್ರಮ; ‘ಮಿನುಗು ತಾರೆ’ಗಳ ಮೆರುಗು
Health: ಶೀಘ್ರ ಕ್ಯಾನ್ಸರ್ ಪತ್ತೆ, ಶಸ್ತ್ರಚಿಕಿತ್ಸೆ ತಿಳಿವಳಿಕೆ ಯಾಕೆ ಮುಖ್ಯ?
ಕಲಬುರಗಿ- ಮೈಸೂರಲ್ಲಿ ನಿಮ್ಹಾನ್ಸ್ ಮತ್ತು ಡಯಾಬಿಟಾಲಜಿ ಘಟಕ ಸ್ಥಾಪನೆಗೆ ಕ್ರಮ: ಸಿಎಂ ಭರವಸೆ
Harapanahalli: ಪ್ರತಿಷ್ಠೆಯ ಕಣವಾದ ಬಿ90 ಸೊಸೈಟಿ ಚುನಾವಣೆ
Nagpur: ʼಪುಷ್ಪ-2ʼ ನೋಡುತ್ತಿದ್ದಾಗಲೇ ಥಿಯೇಟರ್‌ಗೆ ಪೊಲೀಸರ ಎಂಟ್ರಿ; ಸ್ಮಗ್ಲರ್ ಬಂಧನ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.