ಕೋವಿಡ್ 19 , ಜೈವಿಕ ಶಸ್ತ್ರಾಗಾರದ ನೂತನ ಅಸ್ತ್ರವೇ?
Team Udayavani, Mar 29, 2020, 6:30 AM IST
ರೋಮನ್ ನಾಗರಿಕತೆಯಲ್ಲಿ ಸತ್ತ ಪ್ರಾಣಿಗಳನ್ನು ಬಾವಿಗೆಸೆದು ನೀರನ್ನು ವಿಷಯುಕ್ತವನ್ನಾಗಿ ಮಾಡಲಾಗುತ್ತಿತ್ತು. 14ನೇ ಶತಮಾನದಲ್ಲೂ ಮುಂದು ವರಿದು ಗಡ್ಡೆಯೇಳುವ ಪ್ಲೇಗನ್ನು ಬಳಸಿ, ಶತ್ರು ನಗರಗಳಿಗೆ ಹರಡುವಂತೆ ಮಾಡಿದರೆ, ಸೋಂಕಿನ ಭೀತಿಗೆ ಹೆದರಿದ ನಿವಾಸಿಗಳು ಊರನ್ನೇ ತೆರವುಗೊಳಿಸುತ್ತಾರೆ. 1710ರಲ್ಲಿ ರಷ್ಯಾನ್ನರು ಸ್ವೀಡಿಶ್ ನಗರಗಳನ್ನು ವಶಪಡಿಸಲು ಇದೇ ತಂತ್ರವನ್ನು ಬಳಸಿದ್ದರು. ನೆಪೋಲಿಯನ್ ಹಳದಿ ಜ್ವರ ಮತ್ತು ಸಿಡುಬು ಪೀಡಿತ ರೋಗಿಗಳ ಬಟ್ಟೆಗಳನ್ನು ಅಮೆರಿಕಕ್ಕೆ ಮಾರಿದ್ದನು.
ಮಾರಕವಾದ ಜೈವಿಕ ಶಕ್ತಿಯನ್ನು ಬಳಸುವುದು ಒಂದು ಪ್ರಾಚೀನ ತಂತ್ರವೇ. ಬಿಲ್ಲುಗಾರರು ವಿಷಭರಿತ ಬಾಣಗಳನ್ನು ಮಲಿನ ರಕ್ತದಲ್ಲಿ ಅದ್ದಿಡುವ ಘಟನೆಗಳು ಚರಿತ್ರೆಯಲ್ಲಿ ಕಂಡು ಬರುತ್ತವೆ. ಒಂದನೇ ಮಹಾಯುದ್ಧದಲ್ಲೂ ಇಂತಹ ಅಸ್ತ್ರಗಳನ್ನು ಬಳಸುತ್ತಿದ್ದರು. ಮುಂದುವರಿದ ರಾಷ್ಟ್ರಗಳು ಹಿಂದಿಗಿಂತಲೂ ಈಗ ಮಾರಕ ಜೈವಿಕ ಅಸ್ತ್ರಗಳನ್ನು ಬಳಸುವತ್ತ ಗಮನ ಹರಿಸುತ್ತಿವೆ. ಶತ್ರುಗಳ ಎದೆ ನಡುಗಿಸುವ ಭೀಕರ ಅಸ್ತ್ರಗಳಿವು. ಇಂತಹ ಜೈವಿಕ ಅಸ್ತ್ರಗಳಲ್ಲಿ ಸೂಕ್ಷ್ಮ ಜೀವಿಗಳು ಅಥವಾ ಜೀವಾಣುವಿನಲ್ಲಿ ಉತ್ಪನ್ನವಾಗುವ ವಿಷವು ಒಳಗೊಂಡಿದ್ದು ಅವು ಸಾವು ಅಥವಾ ಅಶಕ್ತತೆಯನ್ನುಂಟು ಮಾಡುತ್ತವೆ.
ಶತಮಾನಗಳಿಂದ ಇಂತಹ ಯುದ್ಧ ತಂತ್ರಗಳನ್ನು ಹೂಡಲಾಗುತ್ತಿತ್ತು. ರೋಮನ್ ನಾಗರಿಕತೆಯಲ್ಲಿ ಸತ್ತ ಮತ್ತು ಕೊಳೆತ ಪ್ರಾಣಿಗಳನ್ನು ಬಾವಿಗೆಸೆದು ನೀರನ್ನು ವಿಷಯುಕ್ತವನ್ನಾಗಿ ಮಾಡಲಾಗುತ್ತಿತ್ತು. 14ನೇ ಶತಮಾನದಲ್ಲೂ ಅದು ಮುಂದು ವರಿದು ಗಡ್ಡೆಯೇಳುವ ಪ್ಲೇಗನ್ನು ಬಳಸಿ, ಶತ್ರು ನಗರಗಳಿಗೆ ಹರಡುವಂತೆ ಮಾಡಿದರೆ, ಸೋಂಕಿನ ಭೀತಿಗೆ ಹೆದರಿದ ನಿವಾಸಿಗಳು ಊರನ್ನೇ ತೆರವುಗೊಳಿಸುತ್ತಾರೆ.1710ರಲ್ಲಿ ರಶ್ಯನರು ಸ್ವೀಡಿಷ್ ನಗರಗಳನ್ನು ವಶಪಡಿಸಲು ಇದೇ ತಂತ್ರವನ್ನು ಬಳಸಿದ್ದರು. ನೆಪೋಲಿಯನ್ನನು ಹಳದಿ ಜ್ವರ ಮತ್ತು ಸಿಡುಬು ಪೀಡಿತ ರೋಗಿಗಳ ಬಟ್ಟೆಗಳನ್ನು ಅಮೆರಿಕಕ್ಕೆ ಮಾರಿದ್ದನು. ಅದೇ ಸಮಯದಲ್ಲಿ ಇಂತಹ ಅಸ್ತ್ರಗಳ ಅಪಾಯವನ್ನು ಗುರುತಿ ಸಲಾಯ್ತು. ಪರಿಣಾಮವಾಗಿ 1874 ಮತ್ತು 1899 ರಲ್ಲಿ ಬ್ರುಸೆಲ್ಸ್ ಮತ್ತು ಹೇಗ್‌ನಲ್ಲಿ ಎರಡು ಅಂತರಾಷ್ಟ್ರೀಯ ಘೋಷಣೆಗಳ ಮೂಲಕ ವಿಷಭರಿತ ಅಸ್ತ್ರಗಳ ಬಳಕೆಯನ್ನು ನಿರ್ಬಂಧಿಸಿತು. ಇದರ ಹೊರತಾಗಿಯೂ ಜರ್ಮನಿ ಮತ್ತು ಫ್ರೆಂಚ್ ಏಜೆಂಟರು ಒಂದನೇ ಮಹಾಯುದ್ಧದಲ್ಲಿ ಗ್ಲಾಂಡರ್ ಮತ್ತು ಅಂತ್ರಾಕ್ಸ್‌ನ್ನು ಬಳಸಿದ್ದರು.
ಯುದ್ಧದಲ್ಲಿ ವಿಷ, ಇತರ ಅನಿಲಗಳ ಬಳಕೆ, ಬ್ಯಾಕ್ಟೀರಿಯ ವನ್ನೊಳಗೊಂಡ ಯುದ್ಧ ವಿಧಾನವನ್ನು ನಿರ್ಬಂಧಿಸುವ 1928ರ ಜಿನೇವಾ ಶಿಷ್ಟಾಚಾರ (ಪ್ರೊಟೊಕಾಲ್)ವಿದ್ದರೂ ಜೈವಿಕ ಅಸ್ತ್ರಗಳ ಉತ್ಪಾದನೆಯನ್ನಾಗಲಿ, ಬಳಕೆಯನ್ನಾಗಲಿ ನಿಯಂತ್ರಿಸಲಾಗಲಿಲ್ಲ. 1930 ಮತ್ತು 1940ರಲ್ಲಿ ಜಪಾನೀಯರು ಪ್ಲೇಗನ್ನು ಚೀನ- ಜಪಾನ್ ಯುದ್ಧದಲ್ಲಿ ಜೈವಿಕ ಅಸ್ತ್ರವನ್ನಾಗಿ ಬಳಸಿದರು. ಬಾಂಬ್‌ನಲ್ಲಿ ಪ್ಲೇಗ್ ಸೋಂಕಿನ ಕ್ರಿಮಿಗಳನ್ನು ತುಂಬಿಸಿ, ಚೀನ ನಗರಗಳ ಮೇಲೆ ಎಸೆದರು. ಅವರು ದಾಳಿಯಲ್ಲಿ ಕಾಲರಾ ಮತ್ತು ಶಿಗೆಲ್ಲಾವನ್ನು ಅಸ್ತ್ರವನ್ನಾಗಿ ಬಳಸಿದ್ದರು. ಪರಿಣಾಮವಾಗಿ ಸುಮಾರು 5.8 ಲಕ್ಷ ಚೀನೀಯರು ಕೊಲ್ಲಲ್ಪಟ್ಟರು. 20ನೇ ಶತಮಾನದಲ್ಲಿ ಅಮೆರಿಕ ಜೈವಿಕ ಯುದ್ಧಕ್ಕೆ ಉಪಕ್ರಮಿಸಿತು. ಅಂತ್ರಾಕ್ಸ್, ಬೊಟುಲಿನಂ ಟಾಕ್ಸಿನ್ ಮುಂತಾದ ಜೈವಿಕ ಏಜೆಂಟ್ ಮತ್ತು ಅಸ್ತ್ರವನ್ನು ತಯಾರಿಸಿತು. ಆದರೆ ಅದನ್ನು ಬಿಕ್ಕಟ್ಟಿನ ಸಂದರ್ಭಗಳಲ್ಲಿ ಉಪಯೋಗಿಸಲಿಲ್ಲ ಮತ್ತು ಜೈವಿಕ ಅಸ್ತ್ರಗಳನ್ನು ನಾಶಪಡಿಸಿದೆವು ಎಂದು ಘೋಷಿಸಿತು. ಸೋವಿಯತ್ ರಶ್ಯವು ತನ್ನ ಜೈವಿಕ ಅಸ್ತ್ರ ಯೋಜನೆಯಲ್ಲಿ ಅಪಾರ ಪ್ರಮಾಣದ ಸಿಡುಬು ವೈರಸ್ ಮತ್ತಿತರ ರೋಗಕಾರಕ ಏಜೆಂಟುಗಳನ್ನು ತಯಾರಿಸಿದೆ. ಅಂತ್ರಾಕ್ಸ್ ಯುದ್ಧ ಕಾರ್ಯಕ್ರಮದ ಪ್ರಾಯೋಜಕತ್ವವನ್ನು ವಹಿಸಿದ್ದ ಸೋವಿಯೆಟ್ ಯೂನಿಯನ್ 1979 ರಲ್ಲಿ ಅಕಸ್ಮಾತ್ತಾಗಿ ಅಂತ್ರಾಕ್ಸ್ ಅಸ್ತ್ರವನ್ನು ಪ್ರಾಯೋಗಿಕವಾಗಿ ಬಿಡುಗಡೆಗೊಳಿಸಿದ ಪರಿಣಾಮ 70 ಜನರು ಅಸುನೀಗಿದರು. ಬಳಿಕ ಅದು ಅಸ್ತ್ರಗಳ ದಾಸ್ತಾನನ್ನು ನಾಶಪಡಿಸಿ ಯೋಜನೆಯನ್ನೇ ಸ್ಥಗಿತಗೊಳಿಸಿತು. ಇರಾಕ್ ತನ್ನ ಶಸ್ತ್ರಗೃಹದಲ್ಲಿ 1000 ಟನ್ ಬೊಟುಲಿನಂ ಟಾಕ್ಸಿನ್ ದಾಸ್ತಾನು ಇದೆ ಎಂದು ಒಪ್ಪಿಕೊಂಡಿದೆ. ಗಲ್ಫ್ ಯುದ್ಧದ ಬಳಿಕ ಇರಾಕ್ ತನ್ನ ಜೈವಿಕ ಅಸ್ತ್ರ ಕಾರ್ಯಕ್ರಮವನ್ನು ತೊರೆದರೂ ಅದು ಹೊಂದಿದ ಜೈವಿಕ ಸರಕುಗಳು ಎಲ್ಲಿವೆ ಎಂಬುದು ನಿಗೂಢ ವಾಗಿದೆ. ಜೈವಿಕ ಶಕ್ತಿಗಳನ್ನು ಮೂರು ವರ್ಗಗಳನ್ನಾಗಿ ಮಾಡಬಹುದು. 1) ಅಂತ್ರಾಕ್ಸ್, ಬೊಟುಲಿನಂ ಹೆಮೋರ್ಗಿಕ್ ಜ್ವರ, ಪ್ಲೇಗ್, ಸಿಡುಬು, ಟುಲರೇಮಿಯಾ ಎಂಬ ಸಾರ್ವಜನಿಕ ಅಪಾಯಕಾರೀ ವಸ್ತುಗಳು 2) ಕಾಲರಾ, ಬ್ರುಸೆಲ್ಲೋಸಿಸ್, ಎನ್ಸೆಫಾಲಿಟಿಸ್ ಇತ್ಯಾದಿ ಏಜೆಂಟುಗಳು. 3) ಪೆಥೋಜೀನ್ಸ್. ಜಿನೆಟಿಕ್ ತಂತ್ರಜ್ಞಾನದ ಮೂಲಕ ಪೆಥೋಜೀನ್ಸ್ ಮಾರಕ ವಾಗಬಲ್ಲುದು. ಹಂಟಾ ವೈರಸ್, ನಿಫಾ ವೈರಸ್, ಎನ್ಸೆಫಾಲಿಟಿಸ್, ಹೆಮೋರ್ಗಿಕ್ ಜ್ವರ, ಹಳದಿ ಜ್ವರ, ಬಹು ಔಷಧಿ ತಡೆ ಬ್ಯಾಕ್ಟೀರಿಯಾ, ಇತ್ಯಾದಿ ಜೈವಿಕ ಅಸ್ತ್ರಗೃಹಗಳು.
ಕೋವಿಡ್ 19 ವೈರಸ್: ಚೀನದ ವುಹಾನ್ ನಗರದಲ್ಲಿ ಪತ್ತೆ ಯಾದ ವೈರಸ್ ಇದು. ಕೋವಿಡ್ 19 ಹೆಸರು ಲ್ಯಾಟಿನ್ ಪದದಿಂದ ಬಂದಿದೆ. ಕ್ರೌನ್ ಅಥವಾ ಗಾರ್ಲಾಂಡ್ ಎಂದರ್ಥ. ಸೂಕ್ಷ್ಮದರ್ಶಕ ಯಂತ್ರದಲ್ಲಿ ಈ ವೈರಸ್ ಸೌರ ಕೋವಿಡ್ 19ದಂತೆ ಗೋಚರಿಸುತ್ತದೆ. ಈಗಾಗಲೇ ಅದರ ರೋಗ ಲಕ್ಷಣಗಳನ್ನು ಪತ್ತೆಮಾಡಲಾಗಿದೆ. ಕಳೆದ ಡಿಸೆಂಬರ್‌ನಲ್ಲಿ ವುಹಾನ್ ನಗರದಲ್ಲಿ ಮೊದಲಿಗೆ ಸುಮಾರು 40 ಮಂದಿಗೆ ವೈರಸ್ ಸೋಂಕು ತಗಲಿದ್ದು, ಬಳಿಕ 3000ಕ್ಕೂ ಅಧಿಕ ಜನರು ಅದರಿಂದ ಸಾವನ್ನಪ್ಪಿದ್ದಾರೆ. ಇದೀಗ ವೈರಸ್ ಪಿಡುಗು ಬಹುತೇಕ ಎಲ್ಲ ರಾಷ್ಟ್ರಗಳಲ್ಲೂ ವ್ಯಾಪಿಸಿದೆ. ಚೀನ ನೂತನ ವೈರಸ್‌ಗೆ ಕೊವಿಡ್- 19 ಎಂಬ ಅಧಿಕೃತ ಹೆಸರನ್ನಿಟ್ಟಿದೆ. ವುಹಾನಿನ ಸಮುದ್ರ ಆಹಾರ ಮಾರುಕಟ್ಟೆಯಿಂದ ಈ ವೈರಸ್ ಹುಟ್ಟಿರಬಹುದೆಂದು ಚೀನದ ಆರೋಗ್ಯ ಅಧಿಕಾರಿಗಳು ಹೇಳುತ್ತಾರೆ.
ಚೀನದಲ್ಲಿ ಸೂಕ್ಷ್ಮ ಜೈವಿಕ ಲ್ಯಾಬ್‌ಗಳ ಸ್ಥಾಪನೆ
ಚೀನ ವುಹಾನಿನಲ್ಲಿ ಅತ್ಯಂತ ಆಧುನಿಕ ಸೂಕ್ಷ್ಮ ಜೈವಿಕ ಪ್ರಯೋಗಾಲಯವನ್ನು ಸ್ಥಾಪಿಸಿದೆ. ವುಹಾನಿನಲ್ಲಿ ಕೋವಿಡ್ 19 ಮೂಲದ ಬಗ್ಗೆ ಭಿನ್ನಾಭಿಪ್ರಾಯಗಳಿದ್ದರೂ ವೈರಸ್ ಮೂಲದ ನಿಖರ ಕಾರಣಗಳನ್ನು ಅಂತಾರಾಷ್ಟ್ರೀಯ ಸಮುದಾಯ ಮತ್ತು ವಿಶ್ವ ಆರೋಗ್ಯ ಸಂಸ್ಥೆಯ ತೀರ್ಮಾನಕ್ಕೆ ಬಿಡೋಣ. ವೈರಸ್ ಸೋಂಕುಳ್ಳ ಚೀನಿಯರ ಪ್ರವೇಶದಿಂದ ಈ ಹೊಸ ವೈರಸ್ ಪ್ರತಿಯೊಂದು ರಾಷ್ಟ್ರಕ್ಕೆ ಒಂದು ಸವಾಲಾಗಿ ಪರಿಣಮಿಸಿದೆ. ವಿಜ್ಞಾನಿಗಳು ಈ ಕಾಯಿಲೆಯು ಹರಡದಂತೆ ಲಸಿ ಕೆಯ ಶೋಧನೆಯಲ್ಲಿ ತೊಡಗಿದ್ದಾರೆ. 2021ರೊಳಗೆ ಮಾರುಕಟ್ಟೆಯಲ್ಲಿ ಲಸಿಕೆ ಲಭ್ಯವಾಗುವ ಭರವಸೆಯನ್ನು ನೀಡಿದ್ದಾರೆ.
ಕೋವಿಡ್ 19 ವೈರಸ್‌ನ ಸೂಕ್ಷ್ಮ ಪರೀಕ್ಷೆಯಿಂದ ಅದರ ಬಾಧಕದಂಶದ ಪರಿಚಯವಾಗುತ್ತದೆ. ಅದನ್ನು ಜೈವಿಕ ಯುದ್ಧದ ಶಸ್ತ್ರಾಗಾರದ ಒಂದು ಉಪಕರಣ ಎಂದು ಪರಿಗಣಿಸಬಹುದು. ಕೋವಿಡ್ 19ದ ಮರಣ ಪ್ರಮಾಣವು ಫೂಗಿಂತ 20 ಪಟ್ಟು ಅಧಿಕ. ಸಾಕಷ್ಟು ರೋಗ ನಿರೋಧಕ ಚುಚ್ಚುಮದ್ದು ಇನ್ನೂ ಸಂಶೋಧನೆಯ ಹಂತದಲ್ಲಿರುವಾಗ ಜೈವಿಕ ಭಯೋತ್ಪಾದ ನೆಯಲ್ಲಿ ಹೊಸ ಕೋವಿಡ್ 19ವೈರಸ್ ಭೀತಿಯು ಈಗ ಇಮ್ಮಡಿ ಗೊಂಡಿದೆ. ಆದ್ದರಿಂದ 21ನೇ ಶತಮಾನದ ನೂತನ ಜೈವಿಕ ಅಸ್ತ್ರವನ್ನು ತಡೆಯುವ ಎಲ್ಲ ಪ್ರಯತ್ನಗಳು ನಡೆಯಬೇಕು.
ಕೃಪೆ : ಆರ್ಗನೈಸರ್
ಜಲಂಚಾರು ರಘುಪತಿ ತಂತ್ರಿ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
udupi: ಮಗನ ಅರಸುತ್ತಾ ಬಂದ ತಾಯಿ: ಇಬ್ಬರು ಮಕ್ಕಳ ಸಹಿತ ವೃದ್ಧೆಯ ರಕ್ಷಣೆ
Health Department: ಸರಕಾರಿ ಆಸ್ಪತ್ರೆ, ಕೇಂದ್ರಗಳಲ್ಲಿ ಔಷಧ ಕೊರತೆ ಇಲ್ಲ: ಸಚಿವ ದಿನೇಶ್
Mysuru: ಕೋವಿಡ್ ವೇಳೆ ಔಷಧ ಖರೀದಿಯಲ್ಲಿ ನನ್ನ ಪಾತ್ರವಿಲ್ಲ: ಡಾ.ಸಿ.ಎನ್.ಮಂಜುನಾಥ್
Inquiry Report: ಬಿಜೆಪಿಗೆ ’40 ಪರ್ಸೆಂಟ್’ ಕ್ಲೀನ್‌ಚಿಟ್ ಸಿಕ್ಕಿಲ್ಲ: ಸಚಿವ ಪ್ರಿಯಾಂಕ್
Udupi: ಚಿನ್ನ, ವಜ್ರಾಭರಣ ಕದ್ದು ಹೋಂ ನರ್ಸ್ ಪರಾರಿ!
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.