ಹಾಟ್‌ಸ್ಪಾಟ್‌ಗಳಲ್ಲಿ ನಾಲ್ಕನೇ ಸ್ಥಾನ ಹೇಗಿರಲಿವೆ ಮುಂದಿನ ದಿನ?


Team Udayavani, Jun 13, 2020, 7:25 AM IST

ಹಾಟ್‌ಸ್ಪಾಟ್‌ಗಳಲ್ಲಿ ನಾಲ್ಕನೇ ಸ್ಥಾನ ಹೇಗಿರಲಿವೆ ಮುಂದಿನ ದಿನ?

ಜಗತ್ತಿನಲ್ಲಿ ಅತಿಹೆಚ್ಚು ಸೋಂಕಿತರನ್ನು ಹೊಂದಿರುವ ಟಾಪ್‌ 10 ಹಾಟ್‌ಸ್ಪಾಟ್‌ಗಳಲ್ಲಿ ಭಾರತವೀಗ 4ನೇ ಸ್ಥಾನಕ್ಕೆ ತಲುಪಿದೆ. ಕಳೆದೊಂದು ವಾರದಿಂದ ಪ್ರತಿ ದಿನ ದೇಶದಲ್ಲಿ ಸರಾಸರಿ 9 ಸಾವಿರಕ್ಕೂ ಅಧಿಕ ಪ್ರಕರಣಗಳು ಪತ್ತೆಯಾಗುತ್ತಿವೆ. ಆದರೆ, ಈಗಲೂ ಕೋವಿಡ್‌-19 ದೇಶದ ಬೆರಳೆಣಿಕೆಯ ರಾಜ್ಯಗಳಲ್ಲೇ ಹೆಚ್ಚು ಹಾವಳಿ ನಡೆಸಿದೆ. ಹಾಗೆಂದು, ಅನ್ಯ ರಾಜ್ಯಗಳು ಸಂಕಟದಿಂದ ಪಾರಾಗಿವೆ ಎಂದೇನೂ ಅರ್ಥವಲ್ಲ…

ಹೆಚ್ಚು ಸೋಂಕಿತರಿರುವ ರಾಜ್ಯಗಳಲ್ಲಿ ತಗ್ಗುತ್ತಿದೆ ಟೆಸ್ಟಿಂಗ್‌ ಸಂಖ್ಯೆ!
ಯಾವ ರಾಜ್ಯಗಳಲ್ಲಿ ಪ್ರಕರಣಗಳು ದಿನೇ ದಿನೇ ಹೆಚ್ಚುತ್ತಿವೆಯೋ ಅಲ್ಲೆಲ್ಲ ನಿತ್ಯ ಪರೀಕ್ಷೆಗಳ ಪ್ರಮಾಣ ಕಡಿಮೆಯಾಗುತ್ತಿರುವುದು ಆತಂಕ ಹೆಚ್ಚಿಸಿದೆ. ದೇಶದಲ್ಲಿ ಅತಿಹೆಚ್ಚು “ಸಕ್ರಿಯ’ ಪ್ರಕರಣಗಳು ಮಹಾರಾಷ್ಟ್ರ, ದೆಹಲಿ, ತಮಿಳುನಾಡು, ಗುಜರಾತ್‌ನಲ್ಲೇ ಇವೆ. ಶುಕ್ರವಾರ ಸಂಜೆಯ ವೇಳೆಗೆ ದೇಶದಲ್ಲಿ 1,42,763 ಸಕ್ರಿಯ ಪ್ರಕರಣಗಳಿದ್ದರೆ, ಮಹಾರಾಷ್ಟ್ರವೊಂದರಲ್ಲೇ ಈ ಸಂಖ್ಯೆ 47,980ರಷ್ಟಿದೆ. ಅಂದರೆ, 33.60 ಪ್ರತಿಶತ ಸಕ್ರಿಯ ಪ್ರಕರಣಗಳು ಮಹಾರಾಷ್ಟ್ರದಲ್ಲೇ ಇವೆ! ತಮಿಳುನಾಡು ಹೊರತುಪಡಿಸಿ ಉಳಿದ ಮೂರೂ ರಾಜ್ಯಗಳಲ್ಲಿ ಪರೀಕ್ಷೆಗಳ ಸಂಖ್ಯೆ ತಗ್ಗಿದೆ. ಆದರೆ ಈಗ ಈ ನಾಲ್ಕೂ ರಾಜ್ಯಗಳಲ್ಲೂ ಟೆಸ್ಟ್‌ ಪಾಸಿಟಿವ್‌ ರೇಟ್‌(ಪರೀಕ್ಷೆಗೊಳಪಟ್ಟವರಲ್ಲಿ ಸೋಂಕು ದೃಢಪಟ್ಟವರ ಪ್ರಮಾಣ) ಅಧಿಕವಾಗಿದೆ.

ಸಮುದಾಯ ಪ್ರಸರಣದ ಹಂತದಲ್ಲಿ ದೆಹಲಿ?
ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಮೇ ತಿಂಗಳಿಗೆ ಹೋಲಿಸಿದರೆ, ಜೂನ್‌ ತಿಂಗಳಲ್ಲಿ ನಿತ್ಯ ಪರೀಕ್ಷೆಗಳ ಪ್ರಮಾಣ 7 ಸಾವಿರದಿಂದ 5 ಸಾವಿರಕ್ಕೆ ಇಳಿದಿದೆ. ಇದನ್ನು ಖುದ್ದು ಕೇಜ್ರಿವಾಲ್‌ ಸರ್ಕಾರವೇ ಹೇಳಿದೆ. ಈ ವಿಷಯವಾಗಿ, ಶುಕ್ರವಾರ ಸುಪ್ರೀಂ ಕೋರ್ಟ್‌ ನೊಟೀಸ್‌ ಜಾರಿ ಮಾಡಿದ್ದು, ಅದೇಕೆ ಪರೀಕ್ಷೆಗಳನ್ನು ತಗ್ಗಿಸಲಾಗಿದೆ ಎಂದು ದೆಹಲಿ ಸರ್ಕಾರಕ್ಕೆ ವಿವರಣೆ ಕೇಳಿದೆ. ಇಂಡಿಯನ್‌ ಮೆಡಿಕಲ್‌ ಅಸೋಸಿಯೇಷನ್‌ನ ಮಾಜಿ ಅಧ್ಯಕ್ಷ ಡಾ|ಕೆ.ಕೆ. ಅಗರ್ವಾಲ್‌ ಅವರು, “”ದೆಹಲಿಯಲ್ಲಿ ಒಟ್ಟು 20 ಪ್ರತಿಶತಕ್ಕೂ ಹೆಚ್ಚು ಜನ ಸೋಂಕಿತರಾಗಿದ್ದರೂ ಆಗಿರಬಹುದು. ಇದೇನೂ ನನಗೆ ಅಚ್ಚರಿ ಹುಟ್ಟಿಸುವುದಿಲ್ಲ. ಈ ಹಂತದಲ್ಲಂತೂ ಪರೀಕ್ಷೆಯ ಪ್ರಮಾಣ
ತಗ್ಗಿದೆ. ಪರೀಕ್ಷೆ ಮಾಡಿಸಿಕೊಳ್ಳಲು ಮುಂದಾಗುವವರೂ ಕಡಿಮೆಯಾಗಿದ್ದಾರೆ” ಎನ್ನುತ್ತಾರೆ .

ಕಳೆದ ವಾರ ದೆಹಲಿ ಸರಕಾರ ಕೋವಿಡ್‌-19 ಪರೀಕ್ಷಣೆಗೆ ಹೊಸ ಮಾರ್ಗಸೂಚಿಯನ್ನು ಜಾರಿಗೊಳಿಸಿತ್ತು. ಅದರ ಪ್ರಕಾರ ಕೊರೊನಾ ಲಕ್ಷಣಗಳು ಕಾಣಿಸಿಕೊಂಡವರನ್ನು ಮಾತ್ರ ಪರೀಕ್ಷಿಸಬೇಕು ಎಂದಿತ್ತು. ಆದರೆ, ರಾಷ್ಟ್ರೀಯ ಮಾರ್ಗಸೂಚಿಯು, ರೋಗಿಯೊಬ್ಬನ ಮನೆಯವರು ಹಾಗೂ ಆತನ ಸಂಪರ್ಕಕ್ಕೆ ಬಂದ ಆರೋಗ್ಯ ವಲಯದ ಸಿಬ್ಬಂದಿಯ ಟೆಸ್ಟ್‌ ಮಾಡಬೇಕು(ಅವರಲ್ಲಿ ರೋಗಲಕ್ಷಣಗಳು ಕಾಣಿಸಿಕೊಳ್ಳದಿದ್ದರೂ ಸಹ) ಎನ್ನುತ್ತದೆ. ಹೀಗಾಗಿ,ಕೇಜ್ರಿವಾಲ್‌ ಸರ್ಕಾರದ ಈ ಅಪಾಯಕಾರಿ ನಿರ್ಧಾರವನ್ನು ದೆಹಲಿಯ ಲೆಫ್ಟಿನೆಂಟ್‌ ಗವರ್ನರ್‌ ರದ್ದು ಮಾಡಿದ್ದರು. ಇದೆಲ್ಲದರ ಹೊರತಾಗಿಯೂ, ಈಗಲೂ ಪ್ರತಿ ಹತ್ತು ಲಕ್ಷ ಜನಸಂಖ್ಯೆಯಲ್ಲಿ ಅತಿಹೆಚ್ಚು ಟೆಸ್ಟ್‌ಗಳನ್ನು ನಡೆಸಿದ ಪ್ರದೇಶಗಳಲ್ಲಿ ದೆಹಲಿಯೇ ಮುಂದಿದೆ. ಆದರೆ ಜುಲೈ ಅಂತ್ಯದ ವೇಳೆಗೆ ದೆಹಲಿಯೊಂದರಲ್ಲೇ ಸೋಂಕಿತರ ಸಂಖ್ಯೆ 5 ಲಕ್ಷ ದಾಟುವ ಅಂದಾಜು ಇರುವುದಾಗಿ ಖುದ್ದು ಆಪ್‌ ಸರ್ಕಾರವೇ ಹೇಳುತ್ತಿರುವುದರಿಂದ, ಟೆಸ್ಟಿಂಗ್‌ಗಳನ್ನು ಹೆಚ್ಚಿಸಲೇಬೇಕಾದ ಅನಿವಾರ್ಯವಿದೆ.

ಟಿಪಿಆರ್‌: ಮಹಾರಾಷ್ಟ್ರವನ್ನು ಹಿಂದಿಕ್ಕಿದ ರಾಷ್ಟ್ರ ರಾಜಧಾನಿ ಈಗ ದೆಹಲಿಯಲ್ಲಿ ಅತಿಹೆಚ್ಚು ಟೆಸ್ಟ್‌ ಪಾಸಿಟಿವಿಟಿ ರೇಟ್‌(ಟಿಪಿಆರ್‌) ಪತ್ತೆಯಾಗುತ್ತಿದೆ. ಪರೀಕ್ಷೆಗೊಳಪಟ್ಟವರಲ್ಲಿ “ಪಾಸಿಟಿವ್‌’ ಎಂದು ಪತ್ತೆಯಾದವರ ಪ್ರಮಾಣವನ್ನು ಟೆಸ್ಟ್‌ ಪಾಸಿಟಿವಿಟಿ ರೇಟ್‌ ಎನ್ನಲಾಗುತ್ತದೆ. ಮಹಾರಾಷ್ಟ್ರದಲ್ಲಿ ಪ್ರತಿ 5 ಟೆಸ್ಟ್‌ಗಳಿಗೆ ಒಬ್ಬ ರೋಗಿ ಪತ್ತೆಯಾದರೆ, ಈಗ ದೆಹಲಿಯಲ್ಲಿ ಪ್ರತಿ ನಾಲ್ಕು ಟೆಸ್ಟ್‌ಗಳಲ್ಲಿ ಒಬ್ಬ ಸೋಂಕಿತ ಪತ್ತೆಯಾಗುತ್ತಿದ್ದಾನೆ! ಇಂಡಿಯನ್‌ ಮೆಡಿಕಲ್‌ ಅಸೋಸಿಯೇಷನ್‌ ಮಾಜಿ ಅಧ್ಯಕ್ಷ ಡಾ|ಕೆ.ಕೆ. ಅಗರ್ವಾಲ್‌ ಅವರು “”ದೆಹಲಿಯು ಸಮುದಾಯ ಪ್ರಸರಣದ ಹಂತದಲ್ಲಿದೆ. ಟಿಪಿಆರ್‌ ಅಧಿಕವಿರುವ ಜಾಗಗಳಲ್ಲಿ ಸಮುದಾಯ ಪ್ರಸರಣದ ಸಾಧ್ಯತೆ ಅಧಿಕವಿರುತ್ತದೆ” ಎನ್ನುತ್ತಾರೆ.

ಕರ್ನಾಟಕ ಕೋವಿಡ್ ಕಥನ
ರಾಜ್ಯದಲ್ಲಿ ಪ್ರತಿ 10 ಲಕ್ಷ ಜನಸಂಖ್ಯೆಯಲ್ಲಿ 95 ಜನರಲ್ಲಿ ಸೋಂಕು ಪತ್ತೆಯಾಗುತ್ತಿದೆ. ಇದಕ್ಕೆ ಹೋಲಿಸಿದರೆ ಮಹಾರಾಷ್ಟ್ರದಲ್ಲಿ ಪ್ರತಿ 10 ಲಕ್ಷ ಜನಸಂಖ್ಯೆಯಲ್ಲಿ 799 ಜನರಲ್ಲಿ ಸೋಂಕುಪತ್ತೆಯಾದರೆ, ತಮಿಳುನಾಡಿನಲ್ಲಿ ಪ್ರತಿ ಹತ್ತು ಲಕ್ಷ ಜನರಲ್ಲಿ 511 ಜನರಲ್ಲಿ ಸೋಂಕು ಪತ್ತೆಯಾಗಿದೆ. ಕರ್ನಾಟಕದಲ್ಲಿ ಕೋವಿಡ್‌-19 ಮರಣ ಪ್ರಮಾಣ 1.15  ಪ್ರತಿಶತದಷ್ಟಿದೆ. ಅಂದರೆ, ಪ್ರತಿ 100 ಕೊರೊನಾ ಸೋಂಕಿತರಲ್ಲಿ ಒಬ್ಬರು ಸಾವನ್ನಪ್ಪುತ್ತಿದ್ದಾರೆ. ಇದಕ್ಕೆ ಹೋಲಿಸಿದರೆ ಮಹಾರಾಷ್ಟ್ರದಲ್ಲಿ ಮರಣ ಪ್ರಮಾಣ 3.68 ಪ್ರತಿಶತ, ಗುಜರಾತ್‌ನಲ್ಲಿ 6.28 ಪ್ರತಿಶತ ಹಾಗೂ ಪಶ್ಚಿಮ ಬಂಗಾಳದಲ್ಲಿ 4.52 ಪ್ರತಿಶತವಿದೆ!  ಜೂನ್‌ 11ರ, ಮಧ್ಯಾಹ್ನ 3 ಗಂಟೆಯ ವೇಳೆಗೆ ರಾಜ್ಯದಲ್ಲಿ 4 ಲಕ್ಷ 16 ಸಾವಿರ ಜನರನ್ನು ಪರೀಕ್ಷಿಸಲಾಗಿದೆ. ತನ್ಮೂಲಕ ಕರ್ನಾಟಕದಲ್ಲಿ ಪ್ರತಿ 10 ಲಕ್ಷ ಜನಸಂಖ್ಯೆಯಲ್ಲಿ 6330 ಜನರನ್ನು ಪರೀಕ್ಷಿಸಿದಂತಾಗಿದೆ. ಜೂನ್‌ 4ರಿಂದ ಜೂನ್‌ 12ರವರೆಗೆ ರಾಜ್ಯದಲ್ಲಿ ನಿತ್ಯ ಸೋಂಕಿತರ ಸಂಖ್ಯೆಯಲ್ಲಿ ಸರಾಸರಿ 4 ಪ್ರತಿಶತ ಏರಿಕೆ ಕಂಡುಬರುತ್ತಿದೆ.

ಕೆಲವು ರಾಷ್ಟ್ರಗಳಲ್ಲಿ ಭಾರತಕ್ಕಿಂತಲೂ ಕಡಿಮೆ ಸೋಂಕಿತರಿದ್ದರೂ, ಅಲ್ಲಿ ಮರಣ ಪ್ರಮಾಣ ನಮ್ಮಲ್ಲಿಗಿಂತ ಅಧಿಕವಿದೆ
ದೇಶ           ಸೋಂಕಿತರು         ಮೃತರು
ಭಾರತ         2.98 ಲಕ್ಷ              8,501
ಇರಾನ್‌        1.82 ಲಕ್ಷ               8,659
ಜರ್ಮನಿ        1.86 ಲಕ್ಷ                8,851
ಬೆಲ್ಜಿಯಂ       59.5 ಸಾವಿರ            9,646
ಮೆಕ್ಸಿಕೋ       1.33 ಲಕ್ಷ                15,944
ಫ್ರಾನ್ಸ್‌          1.55 ಲಕ್ಷ                 29,346
ಇಟಲಿ            2.36 ಲಕ್ಷ                   34,000
(ಜೂನ್‌ 12ರ ಮಧ್ಯಾಹ್ನದವರೆಗೆ)

ಟಾಪ್ ನ್ಯೂಸ್

Shocking: ಹೆರಿಗೆ ವೇಳೆ ಹೃದಯಾಘಾತ: ಮಹಿಳೆ ಮೃತ್ಯು, ಮಗುವನ್ನು ಉಳಿಸುವ ಯತ್ನವೂ ವಿಫಲವಾಯಿತು

Shocking: ಹೆರಿಗೆ ವೇಳೆ ಹೃದಯಾಘಾತ: ಮಹಿಳೆ ಮೃತ್ಯು, ಮಗುವನ್ನು ಉಳಿಸುವ ಯತ್ನವೂ ವಿಫಲವಾಯಿತು

Rohit Sharma; ಮುಗಿಯಿತಾ ರೋಹಿತ್‌ ಕ್ರಿಕೆಟ್‌ ವೃತ್ತಿಜೀವನ? ಗಂಭೀರ ಕೋಪಕ್ಕೆ ಕಾರಣವೇನು?

Rohit Sharma; ಮುಗಿಯಿತಾ ರೋಹಿತ್‌ ಕ್ರಿಕೆಟ್‌ ವೃತ್ತಿಜೀವನ? ಗಂಭೀರ ಕೋಪಕ್ಕೆ ಕಾರಣವೇನು?

Channapatna; ನ್ಯೂಇಯರ್‌ ಪಾರ್ಟಿ ಮಾಡಲು ಹೋದವನ ಕೊಲೆ ಮಾಡಿದ ಬಾವಿಗೆ ಎಸೆದರು

Channapatna; ನ್ಯೂಇಯರ್‌ ಪಾರ್ಟಿ ಮಾಡಲು ಹೋದವನ ಕೊಲೆ ಮಾಡಿದ ಬಾವಿಗೆ ಎಸೆದರು

Sydney Test; ಬದಲಾದ ನಾಯಕ; ಮುಂದುವರಿದ ಬ್ಯಾಟಿಂಗ್‌ ಪರದಾಟ

Sydney Test; ಬದಲಾದ ನಾಯಕ; ಮುಂದುವರಿದ ಬ್ಯಾಟಿಂಗ್‌ ಪರದಾಟ

Adani Case: ಅದಾನಿ ವಿರುದ್ಧದ 3 ಪ್ರಕರಣಗಳ ಜಂಟಿ ವಿಚಾರಣೆಗೆ ನ್ಯೂಯಾರ್ಕ್‌ ಕೋರ್ಟ್‌ ಆದೇಶ

Adani Case: ಅದಾನಿ ವಿರುದ್ಧದ 3 ಪ್ರಕರಣಗಳ ಜಂಟಿ ವಿಚಾರಣೆಗೆ ನ್ಯೂಯಾರ್ಕ್‌ ಕೋರ್ಟ್‌ ಆದೇಶ

6-spcl

Story Of Generations: ಪೀಳಿಗೆಗಳ ವೃತ್ತಾಂತ

train

Tragedy: ರೈಲು ಹಳಿ ಮೇಲೆ ಕೂತು PUBG ಆಡುತ್ತಿದ್ದ ಮೂವರು ಯುವಕರ ದೇಹ ಛಿದ್ರ ಛಿದ್ರ…


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

6-spcl

Story Of Generations: ಪೀಳಿಗೆಗಳ ವೃತ್ತಾಂತ

ಮಹಿಳೆ ಮೇಲೆ ತಾಲಿ ‘ಬ್ಯಾನ್‌’ !

ಮಹಿಳೆ ಮೇಲೆ ತಾಲಿ ‘ಬ್ಯಾನ್‌’ !

Astronamy-moon

Space Wonder: 2025ರಲ್ಲಿ ಜರುಗಲಿದೆ ಖಗೋಳ ವಿಶೇಷ ವಿಸ್ಮಯಗಳು!

International: Middle East ತೈಲ ಸಂಪತ್ತು…ಸಂಘರ್ಷ-ಮಧ್ಯಪ್ರಾಚ್ಯದಲ್ಲಿ ಎಷ್ಟು ದೇಶಗಳಿವೆ?

International: Middle East ತೈಲ ಸಂಪತ್ತು…ಸಂಘರ್ಷ-ಮಧ್ಯಪ್ರಾಚ್ಯದಲ್ಲಿ ಎಷ್ಟು ದೇಶಗಳಿವೆ?

4-new-year

New Year 2025:ಹಳೆ ವ್ಯಕ್ತಿಗೆ ಹೊಸ ವರ್ಷ….ಹಳೆ ವರ್ಷದಲ್ಲಿ ಕಲಿತ ಎಲ್ಲಾ ಅನುಭವ ಪಾಠವಾಗಲಿ

MUST WATCH

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

ಹೊಸ ಸೇರ್ಪಡೆ

Shimoga; ತೇಜೋವಧೆ ಮಾಡಲು ನನ್ನ ಹೆಸರಲ್ಲಿ ಕಳಪೆ ಸ್ವೀಟ್‌ ಹಂಚಿಕೆ; ಡಾ.ಸರ್ಜಿ

Shimoga; ತೇಜೋವಧೆ ಮಾಡಲು ನನ್ನ ಹೆಸರಲ್ಲಿ ಕಳಪೆ ಸ್ವೀಟ್‌ ಹಂಚಿಕೆ; ಡಾ.ಸರ್ಜಿ

7-dhaka

Father of the Nation: ಬಾಂಗ್ಲಾ ರಾಷ್ಟ್ರಪಿತನಿಗೆ ಪಠ್ಯದಿಂದಲೇ ಕೊಕ್‌!

Shocking: ಹೆರಿಗೆ ವೇಳೆ ಹೃದಯಾಘಾತ: ಮಹಿಳೆ ಮೃತ್ಯು, ಮಗುವನ್ನು ಉಳಿಸುವ ಯತ್ನವೂ ವಿಫಲವಾಯಿತು

Shocking: ಹೆರಿಗೆ ವೇಳೆ ಹೃದಯಾಘಾತ: ಮಹಿಳೆ ಮೃತ್ಯು, ಮಗುವನ್ನು ಉಳಿಸುವ ಯತ್ನವೂ ವಿಫಲವಾಯಿತು

Rohit Sharma; ಮುಗಿಯಿತಾ ರೋಹಿತ್‌ ಕ್ರಿಕೆಟ್‌ ವೃತ್ತಿಜೀವನ? ಗಂಭೀರ ಕೋಪಕ್ಕೆ ಕಾರಣವೇನು?

Rohit Sharma; ಮುಗಿಯಿತಾ ರೋಹಿತ್‌ ಕ್ರಿಕೆಟ್‌ ವೃತ್ತಿಜೀವನ? ಗಂಭೀರ ಕೋಪಕ್ಕೆ ಕಾರಣವೇನು?

Channapatna; ನ್ಯೂಇಯರ್‌ ಪಾರ್ಟಿ ಮಾಡಲು ಹೋದವನ ಕೊಲೆ ಮಾಡಿದ ಬಾವಿಗೆ ಎಸೆದರು

Channapatna; ನ್ಯೂಇಯರ್‌ ಪಾರ್ಟಿ ಮಾಡಲು ಹೋದವನ ಕೊಲೆ ಮಾಡಿದ ಬಾವಿಗೆ ಎಸೆದರು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.