ಕೋವಿಡ್ ಲಸಿಕೆ: ಷರತ್ತುಬದ್ಧ ಮಾರುಕಟ್ಟೆ ಒಪ್ಪಿಗೆ
Team Udayavani, Jan 28, 2022, 6:40 AM IST
ಭಾರತೀಯ ಔಷಧ ನಿಯಂತ್ರಣಾಲಯ ಗುರುವಾರ ಕೊವಿಶೀಲ್ಡ್ ಮತ್ತು ಕೊವ್ಯಾಕ್ಸಿನ್ ಅನ್ನು ಮುಕ್ತ ಮಾರುಕಟ್ಟೆಯಲ್ಲಿ ಮಾರಾಟ ಮಾಡಲು ಷರತ್ತುಬದ್ಧ ಮಾರುಕಟ್ಟೆ ಅನುಮತಿ ನೀಡಿದೆ. ಅಂದರೆ ಇದನ್ನು ಆಸ್ಪತ್ರೆಗಳು ಮತ್ತು ಕ್ಲಿನಿಕ್‌ಗಳಲ್ಲಿ ಮಾತ್ರ ಮಾರಾಟ ಮಾಡಬಹುದು. ಆದರೆ ಮೆಡಿಕಲ್ ಸ್ಟೋರ್‌ಗಳಲ್ಲಿ ಸಿಗುವುದಿಲ್ಲ. ಹಾಗಾದರೆ ತುರ್ತು ಬಳಕೆ ಮತ್ತು ಷರತ್ತುಬದ್ಧ ಒಪ್ಪಿಗೆ ಎಂದರೆ ಏನು? ಈ ಕುರಿತ ಒಂದು ಸಂಕ್ಷಿಪ್ತ ನೋಟ ಇಲ್ಲಿದೆ…
- ತುರ್ತು ಬಳಕೆಗೆ ಅನುಮತಿ ಎಂದರೇನು? :
ಕಳೆದ ವರ್ಷದ ಆರಂಭದಲ್ಲಿ ಕೊವಿಶೀಲ್ಡ್ ಮತ್ತು ಕೊವ್ಯಾಕ್ಸಿನ್‌ಗೆ ತುರ್ತು ಬಳಕೆಯ ಅನುಮತಿ ನೀಡಲಾಗಿತ್ತು. ಅಂದರೆ ಸಾರ್ವಜನಿಕ ಆರೋಗ್ಯವನ್ನು ಗಮನಿಸಿಕೊಂಡು ಎಮರ್ಜೆನ್ಸಿ ರೀತಿಯಲ್ಲಿ ಬಳಕೆ ಮಾಡಬಹುದು ಎಂಬುದು ಇದರ ಅರ್ಥವಾಗಿತ್ತು. ಅಷ್ಟೇ ಅಲ್ಲ, ಇನ್ನೂ ಮೂರನೇ ಪ್ರಯೋಗದ ವರದಿ ಬರುವ ಮುನ್ನವೇ ಲಸಿಕೆಯೊಂದಕ್ಕೆ ಅನುಮತಿ ನೀಡಲಾಗಿತ್ತು. ಲಸಿಕೆಯ ಅನುಕೂಲತೆಗಳನ್ನು ಗಮನದಲ್ಲಿ ಇರಿಸಿಕೊಂಡು ಈ ನಿರ್ಧಾರಕ್ಕೆ ಬರಲಾಗಿತ್ತು.
- ಷರತ್ತುಬದ್ಧ ಮಾರುಕಟ್ಟೆ ಒಪ್ಪಿಗೆ ಎಂದರೇನು?
ಷರತ್ತುಬದ್ಧ ಮಾರುಕಟ್ಟೆ ಒಪ್ಪಿಗೆ ಎಂಬುದೇ ಹೊಸದು. ಈ ಕೊರೊನಾ ಸಾಂಕ್ರಾಮಿಕದ ವೇಳೆ ಹುಟ್ಟಿಕೊಂಡಿರುವಂಥದ್ದು. ಅಂದರೆ, ಒಮ್ಮೆ ಔಷಧ ಅಥವಾ ಲಸಿಕೆಗೆ ಸಂಬಂಧಪಟ್ಟ ದೇಶವೊಂದು ಷರತ್ತುಬದ್ಧ ಮಾರುಕಟ್ಟೆ ಅನುಮತಿ ನೀಡಿದರೆ ಇದನ್ನು ಔಷಧಾಲಯಗಳಲ್ಲೂ ಮಾರಾಟ ಮಾಡಬಹುದು. ಆದರೂ, ಈಗ ಭಾರತದಲ್ಲಿ ಕೊವಿಶೀಲ್ಡ್ ಮತ್ತು ಕೊವ್ಯಾಕ್ಸಿನ್‌ಗೆ ನೀಡಲಾಗಿರುವ ಷರತ್ತುಬದ್ಧ ಅನುಮತಿ ಕೊಂಚ ಬೇರೆಯೇ ರೀತಿಯಲ್ಲಿದೆ. ಅಂದರೆ:
ಎ: ಕೊವಿಶೀಲ್ಡ್ ಮತ್ತು ಕೊವ್ಯಾಕ್ಸಿನ್ ಔಷಧಾಲಯ ಅಥವಾ ಫಾರ್ಮಾಸಿಸ್ಟ್‌ಗಳಲ್ಲಿ ಸಿಗಲ್ಲ. ಆಸ್ಪತ್ರೆಗಳು, ಕ್ಲಿನಿಕ್‌ಗಳಲ್ಲಿ ಮಾತ್ರ ಲಭ್ಯ
ಬಿ: ವೈದ್ಯರ ಚೀಟಿ ಇಲ್ಲದೆಯೂ ಖಾಸಗಿ ಆಸ್ಪತ್ರೆ ಅಥವಾ ಕ್ಲಿನಿಕ್‌ಗಳಲ್ಲಿ ಈ ಲಸಿಕೆಗಳನ್ನು ಹಾಕಿಸಿಕೊಳ್ಳಬಹುದು.
ಸಿ: ಅಗತ್ಯ ದಾಖಲಾತಿಗಳು ಮತ್ತು ಪಾವತಿ ಪತ್ರಗಳು ಇಲ್ಲದೆಯೂ ಆಸ್ಪತ್ರೆಗಳು, ಕ್ಲಿನಿಕ್‌ಗಳು ಲಸಿಕೆಯನ್ನು ಶೇಖರಿಸಿ ಇಡಬಹುದು.
ಡಿ: ಕ್ಲಿನಿಕ್ ಅಥವಾ ಆಸ್ಪತ್ರೆಗಳು ಖಾಸಗಿಯಾಗಿಯೇ ಲಸಿಕೆ ನೀಡಿದರೂ
ಸರಕಾರದ ಕೋವಿನ್ ಆ್ಯಪ್‌ನಲ್ಲಿ ನಮೂದಿಸಬೇಕು.
ಇ: ತುರ್ತು ಬಳಕೆಗೆ ಅನುಮತಿ ಸಿಕ್ಕ ವಿಚಾರದಲ್ಲಿ ಪ್ರತೀ 15 ದಿನಗಳಿಗೊಮ್ಮೆ ಸುರಕ್ಷತೆ ಮತ್ತು ಸಾಮರ್ಥ್ಯದ ವರದಿ ಸಲ್ಲಿಸಬೇಕು.
ಎಫ್: ಷರತ್ತುಬದ್ಧ ಮಾರುಕಟ್ಟೆ ಒಪ್ಪಿಗೆ ವಿಚಾರದಲ್ಲಿ 6 ತಿಂಗಳಿಗೊಮ್ಮೆ ಸುರಕ್ಷತೆ ಮತ್ತು ಸಾಮರ್ಥ್ಯದ ವರದಿ ನೀಡಬೇಕಾಗುತ್ತದೆ.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.