ಬೆಳೆ ಹಾನಿ ಸಮೀಕ್ಷೆ ಕಾರ್ಯ ಇನ್ನೂ ಪ್ರಗತಿಯಲ್ಲಿದೆ!


Team Udayavani, Sep 14, 2022, 6:50 AM IST

ಬೆಳೆ ಹಾನಿ ಸಮೀಕ್ಷೆ ಕಾರ್ಯ ಇನ್ನೂ ಪ್ರಗತಿಯಲ್ಲಿದೆ!

ಜುಲೈ, ಆಗಸ್ಟ್‌ ತಿಂಗಳಲ್ಲಿ ರಾಜ್ಯದ ಹಲವೆಡೆ ಸುರಿದ ಸತತ ಮಳೆ ಹಾಗೂ ನೆರೆಯಿಂದ ಕೃಷಿ, ತೋಟಗಾರಿಕೆ ಬೆಳೆ ಸೇರಿ ಮೂಲಸೌಕರ್ಯ ಹಾಗೂ ಅಪಾರ ಪ್ರಮಾಣದಲ್ಲಿ ಜೀವ ಹಾನಿ ಸಂಭವಿಸಿದೆ. ಈ ಬಗ್ಗೆ ಸಮಗ್ರ ವರದಿ ತಯಾರಿಸಿರುವ ಜಿಲ್ಲಾಡಳಿತಗಳು ಸರಕಾರಕ್ಕೆ ವರದಿ ಸಲ್ಲಿಸಿ, ನೆರವಿನ ನಿರೀಕ್ಷೆಯಲ್ಲಿವೆ. ಇನ್ನು ಕೆಲವು ಜಿಲ್ಲೆಗಳಲ್ಲಿ ಬೆಳೆ ಹಾನಿ ಸಮೀಕ್ಷೆ ಮುಂದುವರಿದಿದೆ. ಕೆಲವೆಡೆ ಜಿಲ್ಲಾಡಳಿತಗಳಿಗೆ ಸರಕಾರ ಬಿಡುಗಡೆ ಮಾಡಿರುವ ಅತಿವೃಷ್ಟಿಯ ಪರಿಹಾರ “ರಾವಣನ ಹೊಟ್ಟೆಗೆ ಅರೆಕಾಸಿನ ಮಜ್ಜಿಗೆ’ ಎಂಬಂತಾಗಿದೆ.

ತತ್ತರಿಸಿದ ಮೈಸೂರು
ಮೈಸೂರು: ಭಾರೀ ಮಳೆಯಿಂದಾಗಿ ಮೈಸೂರು ನಗರ ಸೇರಿ ಜಿಲ್ಲೆಯಲ್ಲಿ ಬೆಳೆ, ಮೂಲ ಸೌಕರ್ಯ ಹಾನಿಯಿಂದ 200 ಕೋಟಿ ರೂ. ನಷ್ಟವಾಗಿದ್ದು, ಸೂಕ್ತ ಅನುದಾನಕ್ಕಾಗಿ ಜಿಲ್ಲಾಡಳಿತ ಸರ್ಕಾರಕ್ಕೆ ವರದಿ ಸಲ್ಲಿಸಿದೆ. ಜಿಲ್ಲೆಯಲ್ಲಿ ಸುರಿದ ಭಾರೀ ಮಳೆಗೆ ಕೃಷಿ, ತೋಟಗಾರಿಕೆ ಬೆಳೆ ಸೇರಿದಂತೆ, ಮೂಲಸೌಕರ್ಯ, ಜೀವ ಹಾನಿ ಸಂಭವಿಸಿದ್ದು, ಈ ಬಗ್ಗೆ ಸಮ್ರಗ ವರದಿ ಸಿದ್ಧಪಡಿಸಿರುವ ಜಿಲ್ಲಾಡಳಿತ, ಕಳೆದ ಜುಲೈಯಿಂದ ಸೆಪ್ಟೆಂಬರ್‌ 5ರವರೆಗೆ ಮಳೆಯಿಂದಾಗಿ ಆಗಿರುವ ಅನಾಹುತದ ಬಗ್ಗೆ ಮಾಹಿತಿ ಸಂಗ್ರಹಿಸಿ 200 ಕೋಟಿ ರೂ. ನಷ್ಟವಾಗಿದೆ ಎಂದು ಕೇಂದ್ರ ಸರ್ಕಾರಕ್ಕೆ ವರದಿ ನೀಡಿದೆ.

ಈ ವರ್ಷ ಶೇ.72 ಹೆಚ್ಚು ಮಳೆ
ಹಾಸನ: ಜಿಲ್ಲೆಯಲ್ಲಿ ಈ ವರ್ಷ ಆಗಸ್ಟ್‌ ಅಂತ್ಯದವರೆಗೆ ವಾಡಿಕೆಗಿಂತ ಶೇ.72 ಹೆಚ್ಚು ಮಳೆಯಾಗಿದೆ. ಪರಿಣಾಮ 6237 ಹೆಕ್ಟೇರ್‌ ಕೃಷಿ ಬೆಳೆಗಳು ಹಾಗೂ 49 ಸಾವಿರ ಹೆಕ್ಟೇರ್‌ ವಾಣಿಜ್ಯ ಬೆಳೆಗಳಿಗೆ ಹಾನಿ ಸಂಭವಿಸಿದೆ. ಪ್ರಾಥಮಿಕ ಅಂದಾಜಿನ ಪ್ರಕಾರ 800 ಕೋಟಿ ರೂ. ಬೆಳೆ ಹಾನಿಯಾಗಿರಬಹುದು ಎಂದು ಅಂದಾಜಿಸಲಾಗಿದೆ. ಜಿಲ್ಲೆಯಲ್ಲಿ ಆಗಸ್ಟ್‌ ಅಂತ್ಯದವರೆಗೆ 827 ಮಿ.ಮೀ. ಮಳೆಯಾಗಬೇಕಾಗಿತ್ತು. ಆದರೆ 1418 ಮಿ.ಮೀ. ಮಳೆ ಸುರಿದಿದೆ. ಎನ್‌ಡಿಆರ್‌ಎಫ್ ಮಾರ್ಗದರ್ಶಿ ಸೂತ್ರಗಳ ಪ್ರಕಾರ ಕೇವಲ 4.36 ಕೋಟಿ ರೂ. ನಷ್ಟದ ಅಂದಾಜು ಮಾಡಿದೆ. ರಾಜ್ಯ ಸರ್ಕಾರ 15 ಕೋಟಿ ರೂ.ಗಳನ್ನು ಪರಿಹಾರ ಕಾರ್ಯಗಳಿಗೆ ಬಿಡುಗಡೆ ಮಾಡಿದೆ.

ಉತ್ತರ ಕನ್ನಡದಲ್ಲಿ 12 ಮಂದಿ ಸಾವು
ಕಾರವಾರ: ಮುಂಗಾರು ಮಳೆ ಈ ಸಲ ಸಾಕಷ್ಟು ಹಾನಿಯನ್ನುಂಟು ಮಾಡಿದೆ. ಪ್ರಕೃತಿ ವಿಕೋಪದಿಂದ 12 ಜನ ಜೀವ ಕಳೆದುಕೊಂಡಿದ್ದರೆ, 82 ಮನೆಗಳು ಪೂರ್ಣ ಕುಸಿದಿವೆ. 362 ಮನೆಗಳು ಸರಿಪಡಿಸಲಾಗದ ಸ್ಥಿತಿಯಲ್ಲಿ ಜಖಂಗೊಂಡಿವೆ. 362 ಮನೆಗಳ ಮಾಲೀಕರಿಗೆ ತಲಾ 95 ಸಾವಿರದಂತೆ ಪರಿಹಾರ ವಿತರಿಸಲಾಗಿದೆ. 636 ಮನೆಗಳ ಮಾಲೀಕರಿಗೆ ರಿಪೇರಿಗಾಗಿ ತಲಾ 50 ಸಾವಿರ ರೂ.ನಂತೆ ನೀಡಲಾಗಿದೆ. ಮನೆಗಳ ರಿಪೇರಿಗೆ ಒಟ್ಟು 7.40 ಕೋಟಿ ರೂ. ಜಿಲ್ಲಾಡಳಿತ ನೀಡಿದೆ. ಪ್ರವಾಹದಿಂದ ನೊಂದ 6721 ಕುಟುಂಬಗಳಿಗೆ ತಲಾ ಹತ್ತು ಸಾವಿರದಂತೆ 6.72 ಕೋಟಿ ರೂ.,45 ಜಾನುವಾರು ಸಾವಿಗೆ 9.86 ಲಕ್ಷ ರೂ. ಪರಿಹಾರ ನೀಡಲಾಗಿದೆ. ಕೃಷಿ ಭೂಮಿ ನಷ್ಟದ ಅಂದಾಜು ಲೆಕ್ಕ ಹಾಕಲಾಗಿದೆ. ಪರಿಹಾರ ನೀಡಿಲ್ಲ.

ಶಿವಮೊಗ್ಗದಲ್ಲಿ 181 ಕೋಟಿ ರೂ. ಹಾನಿ
ಶಿವಮೊಗ್ಗ: ಮಳೆಗೆ ಮೆಕ್ಕೆಜೋಳ ಬೆಳೆದ ರೈತರು ನಷ್ಟ ಅನುಭವಿಸಿದ್ದಾರೆ. ಜಿಲ್ಲೆಯಲ್ಲಿ 16083 ಮಂದಿ ರೈತರು ಮೆಕ್ಕೆಜೋಳ ಬೆಳೆವಿಮೆಗೆ ನೋಂದಣಿ ಮಾಡಿಸಿದ್ದರು. ಅದರಲ್ಲಿ 12,495 ಮಂದಿ ಈ ವರೆಗೆ ಬೆಳೆ ನಷ್ಟ ಪರಿಹಾರಕ್ಕೆ ಅರ್ಜಿ ಸಲ್ಲಿಸಿದ್ದಾರೆ (12076 ಹೆಕ್ಟೇರ್‌). ಮೆಕ್ಕೆಜೋಳ, ರಾಗಿ, ಭತ್ತ ಸೇರಿ 3211.20 ಹೆಕ್ಟೇರ್‌, ತೋಟಗಾರಿಕೆ ಬೆಳೆಗಳಾದ ಅಡಕೆ, ಶುಂಠಿ, ಬಾಳೆ, ತರಕಾರಿ, ಪಪ್ಪಾಯ ಸೇರಿ 79.75 ಹೆಕ್ಟೇರ್‌ ಬೆಳೆ ನಷ್ಟವಾಗಿದೆ. ಒಟ್ಟಾರೆ ಮಳೆಯಿಂದ ಆದ ಬೆಳೆ ನಷ್ಟದ ಮೌಲ್ಯ 27 ಕೋಟಿ ಎಂದು ಅಂದಾಜಿಸಲಾಗಿದೆ. ಜಿಲ್ಲಾಡಳಿತ ನಷ್ಟ ಪರಿಹಾರಕ್ಕೆ ಅರ್ಜಿ ಸಲ್ಲಿಸಿದ್ದು 5650 ರೈತರಿಗೆ ಎನ್‌ಡಿಆರ್‌ಎಫ್‌ ನಿಧಿ ಯಿಂದ 2.33 ಕೋಟಿ ಪರಿಹಾರ ಬರಬೇಕಿದೆ. ರಾಜ್ಯ ಸರಕಾರ ಕೂಡ ಪರಿಹಾರ ಕೊಟ್ಟರೆ ಪರಿಹಾರ ಮೊತ್ತ ದುಪ್ಪಟ್ಟಾಗಲಿದೆ.

597.51 ಕೋಟಿ ರೂ. ಹಾನಿ
ಹಾವೇರಿ: ನೆರೆಯಿಂದ ಬೆಳೆ, ಮನೆ ಹಾಗೂ ಮೂಲ ಸೌಕರ್ಯಗಳು ಸೇರಿ ಒಟ್ಟು 597.51 ಕೋಟಿ ರೂ. ಹಾನಿ ಸಂಭವಿಸಿದೆ. 60,933.66 ಹೆಕ್ಟೇರ್‌ ಕೃಷಿ ಮತ್ತು ತೋಟಗಾರಿಕೆ ಬೆಳೆ ಹಾನಿಯಾಗಿದ್ದು, ಅಂದಾಜು 161.23 ಕೋಟಿ ರೂ. ನಷ್ಟ ಉಂಟಾಗಿದೆ. ಜಿಲ್ಲೆಯಲ್ಲಿ 4,663 ಮನೆಗಳಿಗೆ ಹಾನಿ ಸಂಭವಿಸಿದ್ದು, ಈ ಪೈಕಿ 2,827 ಮನೆಗಳ ವರದಿಯನ್ನು ರಾಜೀವ ಗಾಂಧಿ ಹೌಸಿಂಗ್‌ ಕಾರ್ಪೋರೇಷನ್‌ ತಂತ್ರಾಂಶದಲ್ಲಿ ಅಪ್‌ಲೋಡ್‌ ಮಾಡಲಾಗಿದೆ. ಈವರೆಗೆ 23.87 ಕೋಟಿ ರೂ. ಪರಿಹಾರ ನೀಡಲಾಗಿದೆ. 97.19 ಕಿಮೀ ರಾಜ್ಯ ಹೆದ್ದಾರಿ ಹಾಗೂ 218.7 ಕಿಮೀ ಜಿಲ್ಲಾ ಮುಖ್ಯ ರಸ್ತೆಗಳು ಹಾಗೂ 67 ಸೇತುವೆಗಳಿಗೆ ಹಾನಿಯಾಗಿದೆ. ಅಂದಾಜು 244.34 ಕೋಟಿ ನಷ್ಟವಾಗಿದೆ.

ಸರ್ವೇ ಕಾರ್ಯ ಇನ್ನೂ ಪ್ರಗತಿಯಲ್ಲಿದೆ!
ಗದಗ: ಜಿಲ್ಲೆಯಲ್ಲಿ ಹಾನಿಯ ಪ್ರಮಾಣವನ್ನು 811.26 ಕೋಟಿ ರೂ. ಎಂದು ಅಂದಾಜಿಸಲಾಗಿದೆ. ಹಾನಿಯ ಸಮೀûಾ ಕಾರ್ಯ ಇನ್ನೂ ಪ್ರಗತಿಯಲ್ಲಿದೆ. ಈವರೆಗೆ ಜಿಲ್ಲೆಯಲ್ಲಿ 1,48,000 ಹೆಕ್ಟೇರ್‌ ಕೃಷಿ ಭೂಮಿಯಲ್ಲಿ ಬೆಳೆ ಹಾನಿಯಾಗಿದೆ. 195 ಕೋಟಿ ರೂ.ಗೂ ಅಧಿ ಕ ಬೆಳೆ ನಾಶವಾಗಿದ್ದು, ಇನ್ನೂ ಸರ್ವೇ ಕಾರ್ಯ ಪ್ರಗತಿಯಲ್ಲಿದೆ. ಬೆಳೆ ಹಾನಿ ಕುರಿತು ಜಿಲ್ಲೆಯಲ್ಲಿ 83 ಸಾವಿರ ರೈತರು ನೋಂದಣಿ ಮಾಡಿಸಿದ್ದಾರೆ. ಜಿಲ್ಲೆಯಲ್ಲಿ 2022ರ ಮುಂಗಾರು ಹಂಗಾಮಿಗೆ 1,14,000 ರೈತರು ಬೆಳೆ ವಿಮೆ ಮಾಡಿಸಿದ್ದಾರೆ. ಕಳೆದ ಅವ ಧಿಯಲ್ಲಿನ ಹಿಂಗಾರು ವಿಮೆ ಜಮೆಯಾದ ನಂತರ, ಪ್ರಸಕ್ತ ಮುಂಗಾರು ಹಂಗಾಮಿನ ಬೆಳೆ ವಿಮೆ ಜಮೆಯಾಗುತ್ತದೆ ಎಂದು ಜಂಟಿ ಕೃಷಿ ನಿರ್ದೇಶಕ ಜಿಯಾವುಲ್ಲಾ ಕೆ. ಮಾಹಿತಿ ನೀಡಿದ್ದಾರೆ.

ಮೂಲಸೌಕರ್ಯಗಳ ಹಾನಿಯೇ ಹೆಚ್ಚು
ಯಾದಗಿರಿ: ಇದುವರೆಗೆ ಸುರಿದ ಭಾರೀ ಮಳೆಗೆ 37,588 ಹೆಕ್ಟೇರ್‌ ಬೆಳೆ ಹಾನಿಯಾಗಿದೆ. ಹತ್ತಿ, ತೊಗರಿ, ಭತ್ತ ಸೇರಿ ಹಲವು ಬೆಳೆಗಳು ಅತಿವೃಷ್ಟಿಯಿಂದ ನಲುಗಿಹೋಗಿದ್ದು, ರಸ್ತೆ, ವಿದ್ಯುತ್‌ ಕಂಬ, ವಿದ್ಯುತ್‌ ಪರಿವರ್ತಕ ಸೇರಿ ವಿವಿಧ ಮೂಲ ಸೌಕರ್ಯಗಳ ಹಾನಿಯೇ ಅಂದಾಜು 53 ಕೋಟಿ ರೂ.ಗಳಾಗಿದೆ. ಜಿಲ್ಲೆಯ ವಡಗೇರಾ, ಹುಣಸಗಿ, ಸುರಪುರ, ಶಹಾಪುರ, ಗುರುಮಠಕಲ್‌, ಯಾದಗಿರಿ ತಾಲೂಕು ಸೇರಿ ನಗರ ಪ್ರದೇಶದ ಜನರು ಮಳೆಯಿಂದಾದ ಹಾನಿಗೆ ತತ್ತರಗೊಂಡಿದ್ದಾರೆ.

ದಾವಣಗೆರೆಯಲ್ಲಿ ದಾಖಲೆ ಮಳೆ
ದಾವಣಗೆರೆ: ಜಿಲ್ಲೆಯಾದ್ಯಂತ 1261.18 ಲಕ್ಷ ರೂ. ಮೌಲ್ಯದ ಕೃಷಿ, ತೋಟಗಾರಿಕೆ ಬೆಳೆ ಹಾನಿಯಾಗಿದೆ. ಕೆರೆ, ರಸ್ತೆ, ಸೇತುವೆ, ಶಾಲೆ, ಅಂಗನವಾಡಿ ಕಟ್ಟಡ, ವಿದ್ಯುತ್‌ ಕಂಬಗಳಂತಹ ಮೂಲ ಸೌಕರ್ಯಕ್ಕೂ ಅಪಾರ ಹಾನಿ ಉಂಟಾಗಿದೆ. ಆಗಸ್ಟ್‌ನಲ್ಲಿ 99 ಮಿ.ಮೀ.ವಾಡಿಕೆ ಮಳೆಗೆ 230 ಮಿ.ಮೀ. ಮಳೆ ದಾಖಲಾಗಿದೆ. ದಾವಣಗೆರೆ ತಾಲೂಕಿನ ಮಾಯಕೊಂಡದಲ್ಲಿ ಒಂದೇ ದಿನ 176.2 ಮಿ.ಮೀ. ದಾಖಲೆ ಮಳೆಯಾಗಿದೆ. ಮಳೆ ಅಬ್ಬರದಿಂದ ಜಿಲ್ಲೆಯಲ್ಲಿ 15934.57 ಹೆಕ್ಟೇರ್‌ ಪ್ರದೇಶದಲ್ಲಿನ ಭತ್ತ, ಮೆಕ್ಕೆಜೋಳ, ಹತ್ತಿ, ಸೋಯಾಬಿನ್‌ ಒಳಗೊಂಡಂತೆ ಇತರೆ ಬೆಳೆಗಳು ಹಾನಿಗೊಳಗಾಗಿವೆ. 342.40 ಹೆಕ್ಟೇರ್‌ ಪ್ರದೇಶದಲ್ಲಿನ ತೋಟಗಾರಿಕಾ ಬೆಳೆ ಹಾಳಾಗಿದೆ.

ಕಾಫಿ ನಾಡಿನಲ್ಲೂ ಅಪಾರ ಹಾನಿ
ಚಿಕ್ಕಮಗಳೂರು: ಕಾಫಿನಾಡಿನಲ್ಲಿ 391.57 ಕೋಟಿ ರೂ. ನಷ್ಟ ಸಂಭವಿಸಿದೆ ಎಂದು ಅಂದಾಜಿಸಿ ಜಿಲ್ಲಾಡಳಿತ ರಾಜ್ಯ ಸರ್ಕಾರಕ್ಕೆ ವರದಿ ಸಲ್ಲಿಸಿದೆ. ಮನೆ ಹಾನಿಯಿಂದ 18 ಕೋಟಿ ರೂ. ನಷ್ಟವಾಗಿದೆ ಎಂದು ಅಂದಾಜಿಸಲಾಗಿದೆ. ಮನೆ ಹಾನಿಗೆ ಜಿಲ್ಲಾಡಳಿತದಿಂದ ಇದುವರೆಗೂ 5 ಕೋಟಿ ರೂ. ಪರಿಹಾರ ವಿತರಣೆ ಮಾಡಿದೆ. ಬಾಕಿ ಮನೆಗಳಿಗೆ ಪರಿಹಾರ ನೀಡಲು ಮುಂದಾಗಿದೆ. ಜಿಲ್ಲಾದ್ಯಂತ 9,815 ಹೆಕ್ಟೇರ್‌ ಪ್ರದೇಶದಲ್ಲಿ ಕೃಷಿ ಮತ್ತು ತೋಟಗಾರಿಕೆ ಬೆಳೆ ಮಳೆಯಿಂದ ನಷ್ಟವಾಗಿದ್ದು, 136 ಕೋಟಿ ರೂ. ನಷ್ಟವಾಗಿದೆ ಎಂದು ಅಂದಾಜಿಸಲಾಗಿದೆ. ಮಳೆಯಿಂದ 6 ಜನ ಮೃತಪಟ್ಟಿದ್ದು ಪರಿಹಾರ ನೀಡಲಾಗಿದೆ. ಸರ್ಕಾರದಿಂದ 12 ಕೋಟಿ ರೂ. ಬಿಡುಗಡೆಯಾಗಿದ್ದು ಶೇ.90 ಪರಿಹಾರ ವಿತರಣೆ ಮಾಡಲಾಗಿದೆ.

ಎರಡು ಹಂತದಲ್ಲಿ ಪರಿಹಾರ
ಕೋಲಾರ: ಕೃಷಿ ಮತ್ತು ತೋಟಗಾರಿಕೆ ಸೇರಿ ಒಟ್ಟು 790 ಹೆಕೆcàರ್‌ ಬೆಳೆ ಹಾನಿಯಾಗಿದ್ದು, ಬೆಳೆ ಹಾನಿ ಅಂದಾಜು ಮಾಡುವ ಜಂಟಿ ಸರ್ವೇ ಕಾರ್ಯ ಇನ್ನೂ ಮುಂದುವರಿದಿದೆ. ಸದ್ಯಕ್ಕೆ ಮಳೆಯಿಂದ 662 ಹೆಕ್ಟೇರ್‌ ತೋಟಗಾರಿಕೆ ಬೆಳೆ ಮತ್ತು 128 ಹೆಕ್ಟೇರ್‌ ಕೃಷಿ ಬೆಳೆ ಹಾನಿಯಾಗಿರುವ ಮಾಹಿತಿ ಲಭ್ಯವಾಗಿದೆ. ಜಿಲ್ಲೆಗೆ ಕೇಂದ್ರ ಸರಕಾರದಿಂದ ಎರಡು ಹಂತಗಳಲ್ಲಿ ಒಮ್ಮೆ 5 ಕೋಟಿ ರೂ. ಮತ್ತು ಮತ್ತೂಂದು ಹಂತದಲ್ಲಿ 2 ಕೋಟಿ ರೂ.ಗಳನ್ನು ಆಗಸ್ಟ್‌ನಲ್ಲಿ ಬಿಡುಗಡೆ ಮಾಡಲಾಗಿದೆ.

ಸರ್ಕಾರದ ನೆರವಿನ ನಿರೀಕ್ಷೆ
ಧಾರವಾಡ: ಜಿಲ್ಲೆಯಲ್ಲಿ ಸೆ.10ರವರೆಗೂ ಒಟ್ಟು 1.42ಲಕ್ಷ ಹೆಕ್ಟೇರ್‌ ಬೆಳೆ ಹಾನಿಯಾಗಿದ್ದು, ಈ ಕುರಿತು ಜಿಲ್ಲಾಡಳಿತ ಈಗಾಗಲೇ ಸಮೀಕ್ಷೆ ಕಾರ್ಯ ಮುಗಿಸಿದ್ದು, ಸರ್ಕಾರಕ್ಕೆ ವರದಿ ಸಲ್ಲಿಸಿದೆ. ಮೊದಲ ಹಂತದಲ್ಲಿ ಅಂದರೆ ಜುಲೈ ಮತ್ತು ಆಗಸ್ಟ್‌ ತಿಂಗಳಿನಲ್ಲಿ ಒಟ್ಟು 96 ಲಕ್ಷ ಹೆಕ್ಟೇರ್‌ ಹಾಗೂ ಸೆಪ್ಟೆಂಬರ್‌ ತಿಂಗಳಿನಲ್ಲಿ ಒಟ್ಟು 46 ಸಾವಿರ ಹೆಕ್ಟೇರ್‌ನಲ್ಲಿ ಹೆಸರು, ಹತ್ತಿ, ಉದ್ದು, ಶೇಂಗಾ, ಭತ್ತ ಸೇರಿದಂತೆ ಮುಂಗಾರು ಬೆಳೆಗಳು ತೀವ್ರ ಹಾನಿಗೆ ಒಳಗಾಗಿವೆ.

ರೈತರು, ಜನಸಾಮಾನ್ಯರಿಗೆ ಸಂಕಷ್ಟ
ಚಿಕ್ಕಬಳ್ಳಾಪುರ: ಮಳೆಯಿಂದಾಗಿ ಕೃಷಿ, ತೋಟಗಾರಿಕೆ, ರೇಷ್ಮೆ ಬೆಳೆಗಳು, ಜಾನುವಾರು ಜೀವ ಹಾನಿ, ರಸ್ತೆ, ವಿದ್ಯುತ್‌ ಕಂಬ, ಅಂಗನವಾಡಿ ಕಟ್ಟಡ, ಶಾಲಾ ಕಟ್ಟಡ, ಮನೆ ಹಾನಿ ಸೇರಿದಂತೆ ವಿವಿಧ ತೆರನಾದ ಹಾನಿಗೆ ಜಿಲ್ಲೆ ಒಳಗಾಗಿದೆ. ಮಳೆಯಿಂದ ರೈತರು ಮತ್ತು ಜನಸಾಮಾನ್ಯರು ಸಂಕಷ್ಟಕ್ಕೆ ಗುರಿಯಾಗಿದ್ದಾರೆ ಸರ್ಕಾರ 10 ಕೋಟಿ ರೂ. ಅನುದಾನ ಬಿಡುಗಡೆ ಮಾಡಿದ್ದು ಆ ಪೈಕಿ 87 ಲಕ್ಷ 95 ಸಾವಿರ 196 ರೂ.ಗಳ ಪರಿಹಾರವನ್ನು 612 ಫಲಾನುಭವಿಗಳಿಗೆ ನೀಡಲಾಗಿದೆ. ಬೆಳೆವಿಮೆಗೆ ಇಲಾಖಾ ಧಿಕಾರಿಗಳ ವರದಿ ಆಧರಿಸಿ ರೈತರ ಬ್ಯಾಂಕ್‌ ಖಾತೆಗಳಿಗೆ ನೇರವಾಗಿ ಹಣ ಜಮೆಯಾಗಲಿದೆ.

3756 ಹೆಕ್ಟೇರ್‌ ಬೆಳೆ ಹಾನಿ
ತುಮಕೂರು: ಜಿಲ್ಲೆಯಲ್ಲಿ ಕೃಷಿ, ತೋಟಗಾರಿಕೆಗೆ ಸೇರಿದ 3756 ಹೆಕ್ಟೇರ್‌ ಬೆಳೆ ಹಾನಿಯಾಗಿದ್ದು ಎನ್‌ಡಿಆರ್‌ಎಫ್ ನಿಯಮದ ಪ್ರಕಾರ ಕೃಷಿ ಬೆಳೆ 383.73 ಲಕ್ಷ ರೂ ನಷ್ಟ ಉಂಟಾಗಿದೆ ಎಂದು ಅಂದಾಜಿಸಲಾಗಿದೆ. ಆಗಸ್ಟ್‌ನಿಂದ ಇಲ್ಲಿಯವರೆಗೆ ಜಿಲ್ಲೆಯಲ್ಲಿ 362 ಮಿ.ಮೀ. ಮಳೆಯಾಗಬೇಕಾಗಿತ್ತು ಆದರೆ 1034 ಮಿ.ಮೀ. ಮಳೆಯಾಗಿದೆ. ಇದರಿಂದಾಗಿ ಜಿಲ್ಲೆಯಲ್ಲಿ 1800 ಕ್ಕೂ ಹೆಚ್ಚು ಕೆರೆಗಳು ತುಂಬಿ ಕೋಡಿ ಬಿದ್ದಿವೆ. ಜಲಾಶಯಗಳು ತುಂಬಿವೆ. 2900 ಹೆಕ್ಟೇರ್‌ ಶೇಂಗಾ, ಹತ್ತಿ, ಜೋಳ, ರಾಗಿ ಬೆಳೆ ಹಾನಿಯಾಗಿದೆ, ಉಳಿದಂತೆ 856 ಹೆಕ್ಟೇರ್‌ ಬಾಳೆ, ಅಡಿಕೆ,ತರಕಾರಿ, ಹೂ ಬೆಳೆ ನಷ್ಟವಾಗಿದೆ.

ಬೆಳೆ ವಿಮೆ ಸಿಕ್ಕಿಲ್ಲ
ರಾಯಚೂರು: ಜಿಲ್ಲೆಯಲ್ಲಿ 1753 ಹೆಕ್ಟೇರ್‌ ಬೆಳೆ ಹಾನಿ ಸಂಭವಿಸಿದೆ. ಅಂದಾಜು 73.57 ಕೋಟಿ ರೂ.ನಷ್ಟು ಹಾನಿ ಸಂಭವಿಸಿದ್ದು, ಜಿಲ್ಲಾಡಳಿತ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಿದೆ. ಸೆಪ್ಟೆಂಬರ್‌ನಲ್ಲಿ ಸುರಿದ ಮಳೆಗೂ ಸಾಕಷ್ಟು ಹಾನಿ ಸಂಭವಿಸಿದ್ದು, ಬೆಳೆ ಹಾನಿ ಸಮೀಕ್ಷೆ ಮುಂದುವರಿಸಲಾಗಿದೆ. ಅದರಲ್ಲಿ ಹೆಚ್ಚಾಗಿ 1258 ಹೆಕ್ಟೇರ್‌ ಹತ್ತಿ ಬೆಳೆ ಹಾನಿಯಾಗಿದೆ. 132 ಹೆಕ್ಟೇರ್‌ ತೊಗರಿ, 280 ಹೆಕ್ಟೇರ್‌ ಸೂರ್ಯಕಾಂತಿ, 72 ಹೆಕ್ಟೇರ್‌ ಭತ್ತ ಹಾನಿಯಾಗಿದೆ. ಜಿಲ್ಲಾಡಳಿತ ಅಂದಾಜು 73.57 ಕೋಟಿ ರೂ. ಹಾನಿಯಾಗಿದೆ ಎಂದು ಸರ್ಕಾರಕ್ಕೆ ವರದಿ ಸಲ್ಲಿಸಿದೆ. ಇನ್ನು ಬೆಳೆ ವಿಮೆ ಕೂಡ ಸಾಕಷ್ಟು ರೈತರು ಪಾವತಿಸಿದ್ದು, ಕೆಲವರಿಗೆ ನಿರೀಕ್ಷಿತ ಮಟ್ಟದಲ್ಲಿ ಸಿಕ್ಕಿಲ್ಲ.

ಬಿ,ಸಿ ಕೆಟಗರಿಗಳಿಗೆ ಪರಿಹಾರ
ಕೊಪ್ಪಳ: ಜಿಲ್ಲೆಯಲ್ಲಿ ಪ್ರಸಕ್ತ ಜನವರಿಯಿಂದ ಸೆ.12ರವರೆಗೂ ವಾಡಿಕೆಯಂತೆ 363 ಮಿಮೀ ಮಳೆಯಾಗಬೇಕಿತ್ತು. ಆದರೆ 524 ಮಿಮೀ ಮಳೆಯಾಗಿದೆ. ಶೇ.44 ಮಳೆ ಹೆಚ್ಚು ಸುರಿದಿದೆ. ಇನ್ನು ಮುಂಗಾರು ಹಂಗಾಮಿನಲ್ಲಿ ಜೂನ್‌ನಿಂದ ಇಲ್ಲಿವರೆಗೂ 281 ಮಿಮೀ ವಾಡಿಕೆಯ ಮಳೆಯಾಗಬೇಕಿತ್ತು. ಆದರೆ 385 ಮಿಮೀ ಮಳೆಯಾಗಿ ಶೇ.37 ಹೆಚ್ಚುವರಿ ಮಳೆಯಾಗಿದೆ. ಜಿಲ್ಲೆಯಲ್ಲಿ ಈವರೆಗೂ 600 ಮನೆಗಳು ಹಾನಿಯಾಗಿವೆ. ಮನೆಗಳ ಹಾನಿಗೆ ಸರ್ಕಾರದಿಂದ ಜಿಲ್ಲಾಡಳಿತಕ್ಕೆ 11 ಕೋಟಿ ರೂ. ಬಿಡುಗಡೆ ಮಾಡಿದ್ದು, ಬಿ, ಸಿ ಕೆಟಗರಿಗಳಿಗೆ ಪರಿಹಾರ ವಿತರಣೆ ನಡೆದಿದೆ.

79 ಕೋಟಿ ರೂ. ಮಾತ್ರ ಪರಿಹಾರಕ್ಕೆ ಅನ್ವಯ
ಬೆಳಗಾವಿ: ಕೃಷಿ ಮತ್ತು ತೋಟಗಾರಿಕೆ ಬೆಳೆ, ರಸ್ತೆಗಳು, ಶಾಲಾ ಕೊಠಡಿಗಳು, ಅಂಗನವಾಡಿ, ವಿದ್ಯುತ್‌ ಕಂಬಗಳು ಮತ್ತು ಮಾರ್ಗಗಳು ಸೇರಿದಂತೆ ಒಟ್ಟು 355 ಕೋಟಿ ರೂ. ಹಾನಿಯಾಗಿದೆ ಎಂದು ಜಿಲ್ಲಾಡಳಿತದ ಮಾಹಿತಿ ನೀಡಿದ್ದು, ಆದರೆ ಎನ್‌ಡಿಆರ್‌ಎಫ್‌ ಮಾರ್ಗಸೂಚಿ ಪ್ರಕಾರ ಇದರಲ್ಲಿ 79 ಕೋಟಿ ರೂ. ಮಾತ್ರ ಪರಿಹಾರಕ್ಕೆ ಅನ್ವಯವಾಗಲಿದೆ. 27340 ಹೆಕ್ಟೇರ್‌ ಕೃಷಿ ಬೆಳೆ, 124.81 ಹೆಕ್ಟೇರ್‌ ತೋಟಗಾರಿಕೆ ಬೆಳೆ, 1330.79 ಕಿಮೀ ರಸ್ತೆಗಳು, 23 ಸೇತುವೆಗಳು, 326 ವಿದ್ಯುತ್‌ ಕಂಬಗಳು, 94.1 ಕಿಮೀ ವಿದ್ಯುತ್‌ ಮಾರ್ಗಗಳು, 972 ಶಾಲಾ ಕೊಠಡಿಗಳು, 820 ಅಂಗನವಾಡಿಗಳು, 1570 ಮನೆಗಳು ಅತಿವೃಷ್ಟಿಯಿಂದ ಹಾನಿಗೀಡಾಗಿವೆ.

ಬೆಳೆ ಪರಿಹಾರದ ನಿರೀಕ್ಷೆ
ವಿಜಯಪುರ: ಭಾರೀ ಮಳೆಗೆ ವಿಜಯಪುರ ಜಿಲ್ಲೆ ತತ್ತರಿಸಿದ್ದು ಕೃಷ್ಣೆ, ಭೀಮೆ, ಡೋಣಿ ಸೇರಿದಂತೆ ಜಿಲ್ಲೆಯ ಮೂರು ನದಿಗಳು ಪ್ರವಾಹ ಸೃಷ್ಟಿಸುತ್ತಲೇ ಇವೆ. ಜುಲೈ-ಆಗಸ್ಟ್‌ ತಿಂಗಳಲ್ಲಿನ ಹಾನಿಯ ಸಮೀಕ್ಷೆ, ನಷ್ಟ ಪರಿಹಾರ ಕ್ರಮಗಳು ಜಾರಿಯಲ್ಲಿವೆ. ಇದೀಗ ಸೆಪ್ಟೆಂಬರ್‌ ಮೊದಲ ವಾರದಿಂದ ಮತ್ತೆ ಮಳೆಯ ಅವಾಂತರ ಜೋರಾಗಿದ್ದು ಸಮೀಕ್ಷೆಯೂ ಮುಂದುವರಿದಿದೆ. ಜಿಲ್ಲೆಯ 5 ಸಾವಿರ ಹೆಕ್ಟೇರ್‌ ಕೃಷಿ ಬೆಳೆ ಹಾಗೂ 202 ಹೆಕ್ಟೇರ್‌ ತೋಟಗಾರಿಕೆ ಬೆಳೆ ಹಾನಿಯಾಗಿದೆ. ಈ ವಾರದೊಳಗೆ ಸುಮಾರು 2.50 ಕೋಟಿ ರೂ. ಬೆಳೆ ಪರಿಹಾರ ರೈತರ ಖಾತೆಗೆ ಜಮೆ ಆಗುವ ನಿರೀಕ್ಷೆ ಇದೆ.

ರೈತರ ಖಾತೆಗೆ ನೇರವಾಗಿ ಹಣ
ಬೆಳಗಾವಿ: ಜುಲೈ, ಆಗಸ್ಟ್‌ ತಿಂಗಳಲ್ಲಿ ಉಂಟಾದ ಅತಿವೃಷ್ಟಿಯಿಂದ 27 ಸಾವಿರ ಹೆಕ್ಟೇರ್‌ ಪ್ರದೇಶದಲ್ಲಿನ ಬೆಳೆ ಹಾನಿಯಾಗಿದೆ. ತಕ್ಷಣವೇ ಕೃಷಿ, ಕಂದಾಯ ಮತ್ತು ತೋಟಗಾರಿಕೆ ಇಲಾಖೆಗಳು ಜಂಟಿಯಾಗಿ ನಡೆಸಿದ ಸಮೀಕ್ಷೆಯಂತೆ ಪರಿಹಾರ ಒದಗಿಸಲು ಕ್ರಮ ಕೈಗೊಳ್ಳಲಾಗಿದೆ. ಸರಕಾರದ ಮಾರ್ಗಸೂಚಿಯ ಪ್ರಕಾರ 11234 ರೈತರಿಗೆ 17.01 ಕೋಟಿ ರೂ. ಪರಿಹಾರ ಬಿಡುಗಡೆಯಾಗಿದ್ದು ರೈತರ ಖಾತೆಗೆ ನೇರವಾಗಿ ಹಣ ಸೇರಲಿದೆ ಎಂದು ಜಿಲ್ಲಾಧಿಕಾರಿ ನಿತೇಶ ಪಾಟೀಲ ತಿಳಿಸಿದ್ದಾರೆ.

ಕೇಂದ್ರ ತಂಡದಿಂದ ಪರಿಶೀಲನೆ
ಕಲಬುರಗಿ: ಮಳೆಯಿಂದ 1.78 ಲಕ್ಷ ಹೆಕ್ಟೇರ್‌ನಲ್ಲಿ ಬೆಳೆದ ತೊಗರಿ, ಸೋಯಾಬಿನ್‌, ಹೆಸರು, ಉದ್ದು, ಹತ್ತಿ ಬೆಳೆ ಹಾನಿಯಾಗಿದೆ. 800 ಎಕರೆ ತೋಟಗಾರಿಕಾ ಬೆಳೆ ಹಾನಿಯಾಗಿದೆ. ಈಗಾಗಲೇ ಅತಿವೃಷ್ಟಿಯಿಂದ ಆಗಿರುವ ಬೆಳೆ ಹಾನಿ ಕೇಂದ್ರ ಅಧ್ಯಯನ ತಂಡ ಆಗಮಿಸಿ ಖುದ್ದಾಗಿ ಪರಿಶೀಲನೆ ನಡೆಸಿದೆ. ಪ್ರಸಕ್ತ ಜಿಲ್ಲೆಯಲ್ಲಿ ಬೆಳೆವಿಮೆ ಸಹ ರೈತರು ದಾಖಲೆ ಮಾಡಿಸಿದ್ದು, 2.14 ಲಕ್ಷ ರೈತರು ಬೆಳೆವಿಮೆಗೆಂದು ಪ್ರಿಮಿಯಂ ತುಂಬಿದ್ದು, ಈಗಾಗಲೇ ಇದರಲ್ಲಿ 80 ಸಾವಿರ ರೈತರು ಅತಿವೃಷ್ಟಿಯಿಂದ ತಮ್ಮ ಬೆಳೆಹಾನಿಯಾಗಿದೆ ಎಂದು ಅರ್ಜಿ ಸಲ್ಲಿಸಿದ್ದಾರೆ.

489 ಮನೆಗಳಿಗೆ ಪರಿಹಾರ
ಬಾಗಲಕೋಟೆ: ಮಳೆ ಹಾಗೂ ಮೂರು ನದಿಗಳ ಪ್ರವಾಹದಿಂದ ಬರೋಬ್ಬರಿ 158.90 ಕೋಟಿ (15890.86 ಲಕ್ಷ) ಮೊತ್ತದ ಬೆಳೆ ಹಾಗೂ ಮೂಲಭೂತ ಸೌಲಭ್ಯಗಳ ಹಾನಿಗೀಡಾಗಿವೆ. 33 ಶಾಲೆಗಳ 92 ಕೊಠಡಿಗಳಿಗೆ ಹಾನಿಯಾಗಿದ್ದರೆ, 206 ಅಂಗನವಾಡಿ ಕಟ್ಟಡಗಳು ಬಿದ್ದಿವೆ. 1 ಎ ಮಾದರಿ, 100 ಬಿ ಮಾದರಿ ಹಾಗೂ 388 ಸಿ ಮಾದರಿ ಮನೆಗಳು ಬಿದ್ದಿವೆ. ಎ ಮತ್ತು ಬಿ ಮಾದರಿ ಮನೆಗಳಿಗೆ 95,100 ರೂ. ಹಾಗೂ ಸಿ ಮಾದರಿ ಮನೆಗಳಿಗೆ ತಲಾ 50 ಸಾವಿರ ಸೇರಿದಂತೆ 489 ಮನೆಗಳಿಗೆ ಪರಿಹಾರ ನೀಡಲಾಗಿದೆ.

ಜಿಲ್ಲಾಡಳಿತದಿಂದ ಪರಿಹಾರ ವಿತರಣೆ
ಬಳ್ಳಾರಿ: ಬಳ್ಳಾರಿ/ವಿಜಯನಗರ ಜಿಲ್ಲೆಯಲ್ಲಿ 306.39 ಹೆಕ್ಟೇರ್‌ ಬೆಳೆ ಹಾನಿಯಾಗಿದ್ದು, ನಾಲ್ವರು ಮಹಿಳೆಯರು ಮೃತಪಟ್ಟಿದ್ದಾರೆ. ಪ್ರವಾಹದಿಂದ ನೂರಾರು ಮನೆಗಳಿಗೆ ನೀರುನುಗ್ಗಿದ್ದು, ಜಿಲ್ಲಾಡಳಿತದಿಂದ ಪರಿಹಾರ ವಿತರಣಾ ಕಾರ್ಯವೂ ಮುಂದುವರಿದಿದೆ. ಕಳೆದ ಜುಲೈ ತಿಂಗಳಲ್ಲಿ 70.38 ಮಿಮೀ ಆಗಬೇಕಿದ್ದ ವಾಡಿಕೆ ಮಳೆಗಿಂತ 119.34 ಮಿಮೀ ಮಳೆಯಾಗಿದೆ. ಸಿಡಿಲು ಬಡಿದು, ಗೋಡೆ ಕುಸಿದು ಮೃತಪಟ್ಟಿದ್ದ ನಾಲ್ವರು ಮಹಿಳೆಯರಿಗೆ ತಲಾ ಐದು ಲಕ್ಷ ರೂ.ಗಳಂತೆ 20 ಲಕ್ಷ ರೂ.ಗಳ ಪರಿಹಾರ ವಿತರಿಸಲಾಗಿದೆ.

ಬೆಳೆ ವಿಮೆ ತಲುಪೋದು ತಡ
ಚಿತ್ರದುರ್ಗ: ಈವರೆಗೆ 83 ಸಾವಿರ ಹೆಕ್ಟೇರ್‌ ಪ್ರದೇಶದಲ್ಲಿ ಕೃಷಿ ಹಾಗೂ ತೋಟಗಾರಿಕಾ ಬೆಳೆಗಳು ಹಾನಿಯಾಗಿವೆ ಎಂದು ಸರ್ಕಾರಕ್ಕೆ ವರದಿ ಸಲ್ಲಿಕೆಯಾಗಿದೆ. 1200 ಮನೆಗಳು ಹಾನಿಗೊಳಗಾಗಿವೆ. ಕಂದಾಯ ಇಲಾಖೆ ಅ ಧಿಕಾರಿಗಳು ಸ್ಥಳಕ್ಕೆ ತೆರಳಿ ಜಿಪಿಎಸ್‌ ಫೋಟೋ ಮತ್ತಿತರ ಮಾಹಿತಿಯನ್ನು ಆನ್‌ಲೈನ್‌ ಮೂಲಕ ಅಪ್‌ಲೋಡ್‌ ಮಾಡಿದ ತಕ್ಷಣ ನೇರವಾಗಿ ಫಲಾನುಭವಿಯ ಖಾತೆಗೆ ಹಣ ಪಾವತಿಯಾಗುತ್ತಿದೆ. 1,00434 ರೈತರು ಬೆಳೆ ವಿಮೆ ಪಾವತಿಸಿದ್ದಾರೆ. ಆದರೆ ಇನ್ನೂ ಕ್ರಾಪ್‌ ಕಟಿಂಗ್‌ ಪ್ರಯೋಗ ನಡೆಯದ ಕಾರಣ ವಿಮೆ ಹಣ ತಲುಪುವುದು ತಡವಾಗಬಹುದು ಎನ್ನಲಾಗಿದೆ.

ರಾಜ್ಯ ಸರಕಾರಕ್ಕೆ ಹಾನಿ ವರದಿ
ಉಡುಪಿ: ಮಾರ್ಚ್‌ನಿಂದ ಈವರೆಗೆ ಜಿಲ್ಲೆಯಲ್ಲಿ ಇಬ್ಬರು ಮೃತಪಟ್ಟು, 65 ಮನೆಗಳಿಗೆ ಪೂರ್ಣ ಪ್ರಮಾಣದಲ್ಲಿ, 424 ಮನೆಗಳಿಗೆ ಭಾಗಶಃ ಹಾನಿಯಾಗಿದೆ. 1,239.73 ಹೆಕ್ಟೇರ್‌ನಷ್ಟು ಬೆಳೆಹಾನಿ ಉಂಟಾಗಿದೆ. ಮೂಲ ಸೌಕರ್ಯಗಳಿಗೆ ಅಂದಾಜು 263.91 ಕೋ.ರೂ. ಹಾನಿ ಉಂಟಾಗಿದೆ. ಜುಲೈಯಿಂದ ಈವರೆಗೆ ಎಸ್‌ಡಿಆರ್‌ಎಫ್ ಅಡಿಯಲ್ಲಿ ಪ್ರವಾಹ ಪರಿಹಾರಕ್ಕಾಗಿ 25 ಕೋ.ರೂ. ಅನುದಾನ ಬಿಡುಗಡೆ ಮಾಡಲಾಗಿದೆ. 1,239.73 ಹೆಕ್ಟೇರ್‌ ಬೆಳೆಹಾನಿ (ಭತ್ತ ಹಾಗೂ ವಾಣಿಜ್ಯ ಬೆಳೆ ಸೇರಿ) ಮತ್ತು 263.91 ಕೋ.ರೂ. ಮೂಲಸೌಕರ್ಯದ ಹಾನಿಯ ವರದಿಯನ್ನು ಜಿಲ್ಲಾಡಳಿತದಿಂದ ರಾಜ್ಯ ಸರಕಾರಕ್ಕೆ ಸಲ್ಲಿಸಲಾಗಿದೆ.

ದ.ಕ ಜಿಲ್ಲೆಯಲ್ಲಿ 311 ಕೋ.ರೂ .ನಷ್ಟ
ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಅತಿವೃಷ್ಟಿಯಿಂದ ಒಟ್ಟು 311 ಕೋಟಿ. ರೂ. ನಷ್ಟ ಅಂದಾಜಿಸಲಾಗಿದೆ. ಆದರೆ ಎಸ್‌ಡಿಆರ್‌ಎಫ್‌/ ಎನ್‌ಡಿಆರ್‌ಎಫ್‌ ಮಾರ್ಗಸೂಚಿಗಳನ್ವಯ 28.95 ಕೋ.ರೂ. ನಷ್ಟದ ಲೆಕ್ಕ ನೀಡಲಾಗಿದೆ. ಒಟ್ಟು 1,182 ರೈತರು ಮಳೆಹಾನಿಯ ಪರಿಹಾರಕ್ಕಾಗಿ ಅರ್ಜಿ ಹಾಕಿದ್ದು, ಜಿಲ್ಲಾಡಳಿತದಿಂದ ಇನ್ನಷ್ಟೇ ಅಂತಿಮ ಅನುಮೋದನೆ ನೀಡಬೇಕಾಗಿದೆ. ಒಟ್ಟು 228.36 ಹೆಕ್ಟೇರ್‌ನಷ್ಟು ಪ್ರದೇಶದಲ್ಲಿ ಬೆಳೆಹಾನಿ (ಅಡಿಕೆ ಹಾಗೂ ಕಾಳುಮೆಣಸು ಸೇರಿದಂತೆ) ಉಂಟಾಗಿರುವುದಾಗಿ ಪ್ರಾಥಮಿಕ ಮಾಹಿತಿ ಲಭ್ಯವಾಗಿದೆ. ಜಿಲ್ಲಾಧಿಕಾರಿಯವರ ಅನುಮೋದನೆಯ ಬಳಿಕ ನೇರವಾಗಿ ರೈತರ ಖಾತೆಗಳಿಗೆ ಸರಕಾರದಿಂದ ಪರಿಹಾರ ನೀಡುವ ನಿರೀಕ್ಷೆ ಇದೆ.

ರೇಷ್ಮೆ ಯಂತ್ರೋಪಕರಣಗಳಿಗೆ ಹಾನಿ
ರಾಮನಗರ: ಜಿಲ್ಲೆಯಲ್ಲಿ ಕಳೆದ ಬಾರಿಗಿಂತ ಆಗಸ್ಟ್‌ ಹಾಗೂ ಸೆಪ್ಟೆಂಬರ್‌ನಲ್ಲಿ ಸಾಮಾನ್ಯಕ್ಕಿಂತ ಶೇ.2.5 ಪಟ್ಟು ಹೆಚ್ಚು ಮಳೆಯಾಗಿದೆ. ರಾಷ್ಟ್ರೀಯ ಹೆದ್ದಾರಿ ಹಾಗೂ ರಾಮನಗರ ಟೌನ್‌ ಪ್ರದೇಶಗಳಿಗೆ ನೀರು ನುಗ್ಗಿ ಅತಿವೃಷ್ಟಿ ಹಾಗೂ ಪ್ರವಾಹದಿಂದ ಹಾನಿ ಸಂಭವಿಸಿದೆ. ಈಗಾಗಲೇ ಅತಿವೃಷ್ಟಿಯಿಂದ 3,500 ಮನೆಗಳಿಗೆ ನೀರು ನುಗ್ಗಿದ್ದು, ಕೃಷಿ ಪ್ರದೇಶ, ರೇಷ್ಮೆ ಯಂತ್ರೋಪಕರಣಗಳು ಮಳೆಗೆ ಹಾನಿಯಾಗಿದೆ. ಇಲಾಖೆಯ ಅಂಕಿಅಂಶಗಳ ಪ್ರಕಾರ 540 ಹೆಕ್ಟೇರ್‌ನಲ್ಲಿ ಬೆಳೆ ಹಾಳಾಗಿದೆ. ಮಂಚನಬೆಲೆ ಜಲಾಶಯದಿಂದ ಪ್ರಸ್ತುತ 5,500 ಕ್ಯೂಸೆಕ್‌ನಷ್ಟು ಮಾತ್ರ ನೀರು ಹೊರಬಿಡಲಾಗುತ್ತಿದೆ. ಇನ್ನೂ ಹೆಚ್ಚು ನೀರು ಹೊರಬಿಟ್ಟರೆ ಕೆಲವು ಪ್ರದೇಶಗಳಿಗೆ ಹಾನಿಯಾಗುವ ಸಾಧ್ಯತೆಯಿದೆ.

ಟಾಪ್ ನ್ಯೂಸ್

Delhi-Stamp

Mahakumbh Rush: ಗೊಂದಲಕಾರಿ ಪ್ರಕಟಣೆಯಿಂದ ರೈಲು ನಿಲ್ದಾಣದಲ್ಲಿ ಕಾಲ್ತುಳಿತ: ಪೊಲೀಸರು

ಜರ್ಮನಿ ಅಧ್ಯಕ್ಷರ ಎಕ್ಸ್‌ ಖಾತೆ ಹ್ಯಾಕ್‌: ಬಿಹಾರ ಇಲಾಖೆ ಹೆಸರಿಟ್ಟ ಕಿಡಿಗೇಡಿಗಳು

ಜರ್ಮನಿ ಅಧ್ಯಕ್ಷರ ಎಕ್ಸ್‌ ಖಾತೆ ಹ್ಯಾಕ್‌: ಬಿಹಾರ ಇಲಾಖೆ ಹೆಸರಿಟ್ಟ ಕಿಡಿಗೇಡಿಗಳು

Kuruburu-Shanta

Air Lift: ಪಂಜಾಬ್‌ನಲ್ಲಿ ರೈತ ಮುಖಂಡ ಶಾಂತಕುಮಾರ್‌ಗೆ ಅಪಘಾತ; ಬೆಂಗಳೂರಿಗೆ ಏರ್‌ಲಿಫ್ಟ್‌

Kollywood: ಖ್ಯಾತ ನಟ ಯೋಗಿ ಬಾಬು ಕಾರು ಅಪಘಾತ?: ನಟ ಹೇಳಿದ್ದೇನು?

Kollywood: ಖ್ಯಾತ ನಟ ಯೋಗಿ ಬಾಬು ಕಾರು ಅಪಘಾತ?: ನಟ ಹೇಳಿದ್ದೇನು?

naki

Naki Sumo: ಮಗುವನ್ನು ಅಳಿಸುವ ವಿಚಿತ್ರ ಆಚರಣೆ !; ನಡೆಯುವುದಾದರು ಎಲ್ಲಿ?

mohan bhagwat

RSS; ಹಿಂದೂ ಸಮಾಜ ದೇಶದ ಜವಾಬ್ದಾರಿಯುತ ಸಮುದಾಯ: ಮೋಹನ್ ಭಾಗವತ್

IPL 2025: ಐಪಿಎಲ್‌ ವೇಳಾಪಟ್ಟಿ ಪ್ರಕಟ; KKR vs RCB ಮೊದಲ ಮುಖಾಮುಖಿ- ಇಲ್ಲಿದೆ ಪಟ್ಟಿ

IPL 2025: ಐಪಿಎಲ್‌ ವೇಳಾಪಟ್ಟಿ ಪ್ರಕಟ; KKR vs RCB ಮೊದಲ ಮುಖಾಮುಖಿ- ಇಲ್ಲಿದೆ ಪಟ್ಟಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Jagadish Shettar: ಯಾವಾಗ ಬೇಕಾದರೂ ಸರ್ಕಾರ ಪತನ: ಶೆಟ್ಟರ್‌

Jagadish Shettar: ಯಾವಾಗ ಬೇಕಾದರೂ ಸರ್ಕಾರ ಪತನ: ಶೆಟ್ಟರ್‌

Politics: ಸಿದ್ದರಾಮಯ್ಯ 5 ವರ್ಷವೂ ಸಿಎಂ: ಕೊತ್ತೂರು ಮಂಜುನಾಥ್‌

Politics: ಸಿದ್ದರಾಮಯ್ಯ 5 ವರ್ಷವೂ ಸಿಎಂ: ಕೊತ್ತೂರು ಮಂಜುನಾಥ್‌

Kuruburu-Shanta

Air Lift: ಪಂಜಾಬ್‌ನಲ್ಲಿ ರೈತ ಮುಖಂಡ ಶಾಂತಕುಮಾರ್‌ಗೆ ಅಪಘಾತ; ಬೆಂಗಳೂರಿಗೆ ಏರ್‌ಲಿಫ್ಟ್‌

1-sidda

Mahakumbh; ಸಿದ್ದರಾಮಯ್ಯನವರೇ 5 ವರ್ಷ ಸಿಎಂ ಆಗಿರಲಿ: ಅಭಿಮಾನಿಯ ಪ್ರಾರ್ಥನೆ

1-congress

Congress ಪಕ್ಷಕ್ಕೆ ಮರು ಸೇರ್ಪಡೆಯಾದ ಎಲ್.ಆರ್.ಶಿವರಾಮೇಗೌಡ, ಬ್ರಿಜೇಶ್ ಕಾಳಪ್ಪ

MUST WATCH

udayavani youtube

ನಿಮ್ಮ ಅಚ್ಚುಮೆಚ್ಚಿನ ; ಆರೋಗ್ಯಕರ ಪಾನಿಪುರಿ ಸವಿಯಲು ಇಲ್ಲಿಗೆ ಬನ್ನಿ

udayavani youtube

ಭೀಕರ ಹಿಟ್ & ರನ್ ಸಂತ್ರಸ್ತರ ಪರ ನಿಂತ ಪುತ್ತೂರು ಶಾಸಕ ಅಶೋಕ್ ರೈ

udayavani youtube

ಶ್ರೀ ಬ್ರಹ್ಮಬೈದರ್ಕಳ ನೇಮೋತ್ಸವ, ಮಾಣಿಬಾಲೆ ನೇಮೋತ್ಸವ

udayavani youtube

ಸಾಹಿತ್ಯಾಸಕ್ತಿಯ ಚಹಾ ಅಂಗಡಿ

udayavani youtube

ಇಲ್ಲಿ ಪ್ರತಿಯೊಂದು ಗೋವುಗಳಿಗೂ ವಿಭಿನ್ನ ಹೆಸರಿದೆ

ಹೊಸ ಸೇರ್ಪಡೆ

crimebb

Kasaragod: ಹಲ್ಲೆ ಪ್ರಕರಣ; ಕೇಸು ದಾಖಲು

Jagadish Shettar: ಯಾವಾಗ ಬೇಕಾದರೂ ಸರ್ಕಾರ ಪತನ: ಶೆಟ್ಟರ್‌

Jagadish Shettar: ಯಾವಾಗ ಬೇಕಾದರೂ ಸರ್ಕಾರ ಪತನ: ಶೆಟ್ಟರ್‌

Delhi-Stamp

Mahakumbh Rush: ಗೊಂದಲಕಾರಿ ಪ್ರಕಟಣೆಯಿಂದ ರೈಲು ನಿಲ್ದಾಣದಲ್ಲಿ ಕಾಲ್ತುಳಿತ: ಪೊಲೀಸರು

WPL: ಮುಂಬೈ-ಡೆಲ್ಲಿ ಪಂದ್ಯದಲ್ಲಿ ರನೌಟ್‌ ವಿವಾದ

WPL: ಮುಂಬೈ-ಡೆಲ್ಲಿ ಪಂದ್ಯದಲ್ಲಿ ರನೌಟ್‌ ವಿವಾದ

de

Vitla: ಕಾಲು ಜಾರಿ ಕೆರೆಗೆ ಬಿದ್ದು ಯುವಕ ಸಾವು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.