ದಿ| ದಾಮೋದರ ಆರ್‌. ಸುವರ್ಣ: ಬಡಜನರ ಕಣ್ಣೀರಿಗೆ ಸ್ಪಂದಿಸಿದ ಹೃದಯ ಸಿರಿವಂತ


Team Udayavani, Nov 23, 2024, 6:26 AM IST

1-reee

“ಯೋಗಿ ಅನ್ನಿಸಿಕೊಳ್ಳುವುದಕ್ಕಿಂತ ಉಪ ಯೋಗಿ ಅನ್ನಿಸಿಕೊಳ್ಳುವುದು ಉತ್ತಮ. ಪ್ರಭಾವ ವೃದ್ಧಿಸಿಕೊಳ್ಳಲು ಪ್ರಯತ್ನಿಸುವುದಕ್ಕಿಂತ ಸ್ವಭಾವ ಉತ್ತಮಗೊಳಿಸುವುದು ಅತ್ಯುತ್ತಮ.’ ಈ ನುಡಿಮುತ್ತುಗಳಿಗೆ ಪರ್ಯಾಯ ಪದ ವಾಗಿ ಮಾಣಿಕ್ಯದಂತೆ ಬದುಕಿದವರು ದಾಮೋ ದರ ಆರ್‌. ಸುವರ್ಣ ಎಂಬ ಮೇರು ವ್ಯಕ್ತಿತ್ವದ ಮಹಾನುಭಾವ.

1924ರ ಸೆ. 24ರಂದು ಜನಿಸಿದ ಅವರ ಜನ್ಮಶತಾಬ್ದಿಯ ಈ ವರುಷದಲ್ಲಿ ಅವರ ಬದು ಕಿನ ಆದರ್ಶದ ಹಾದಿಯಂತೆ ಸಮಾಜದ ದೀನ ದಲಿತರಿಗೆ ಸಹಾಯದ ಹಸ್ತವನ್ನು ನೀಡುವ ಮೂಲಕ ಸ್ಮರಣೀಯವಾಗಿ ಆಚರಿಸಲು ಸಕಲ ಸಿದ್ಧತೆಗಳು ನಡೆದಿವೆ.

ದಿ| ದಾಮೋದರ ಆರ್‌. ಸುವರ್ಣ ಅವರ ಜನ್ಮಶತಾಬ್ದಿ ಸಂಭ್ರಮ ಕಾರ್ಯಕ್ರಮವು ನ.24ರ ರವಿವಾರದಂದು ಕುದ್ರೋಳಿ ಶ್ರೀ ಗೋಕರ್ಣನಾಥ ಕ್ಷೇತ್ರದ ಸಭಾಂಗಣದಲ್ಲಿ ನಡೆ ಯಲಿದೆ. ಸುಮಾರು 50 ಲಕ್ಷ ರೂ. ಹೆಚ್ಚು ಮೊತ್ತದ ವಿದ್ಯಾರ್ಥಿ ವೇತನವನ್ನು ಆರ್ಥಿಕ ಬಡ ಕುಟುಂಬದ ವಿದ್ಯಾರ್ಥಿಗಳಿಗೆ ನೀಡ ಲಾಗುವುದು.

ವ್ಯವಹಾರಿಕ ಕ್ಷೇತ್ರದಲ್ಲಿ ತನ್ನದೇ ಆದ ಛಾಪನ್ನು ಮೂಡಿಸಿದ ಅವರು ಕೇವಲ ಸ್ವಂತ ಕ್ಕಾಗಿ ಯೋಚಿಸದೆ ಸಮಾಜದ ಹಿತಚಿಂತನೆಗಾಗಿ ಮನಸ್ಸು, ಹೃದಯವನ್ನು ತೆರೆದಿಟ್ಟ ಕರ್ಮ ಯೋಗಿ. ತನ್ನ ಅವಿರತ ಪರಿಶ್ರಮ ಮತ್ತು ಬದ್ಧತೆ ಯಿಂದ ಹಲವಾರು ಕಂಪೆನಿ ಮತ್ತು ಸಂಸ್ಥೆಗಳನ್ನು ಕಟ್ಟಿ ಬೆಳೆಸಿದವರು. ಜಿಲ್ಲೆ ಮಾತ್ರವಲ್ಲದೆ ರಾಜ್ಯ, ಪರರಾಜ್ಯಗಳಲ್ಲೂ ತಮ್ಮ ಉದ್ಯಮ ಸಂಸ್ಥೆಗಳ ಶಾಖೆಗಳನ್ನು ಸ್ಥಾಪಿಸುವ ಮೂಲಕ ಸಾವಿರಾರು ಜನರಿಗೆ ಉದ್ಯೋಗದಾತರಾಗಿ ಲಕ್ಷಾಂತರ ಜನರಿಗೆ ಅನ್ನದಾತರಾಗಿ ಆವತ್ತಿನ ಕಾಲದಲ್ಲೇ ಮಹನೀಯರಾಗಿ ಗುರುತಿಸಿಕೊಂಡವರು.

1976ರಲ್ಲಿ ಬಿಲ್ಲವರ ಮಾತೃಸಂಸ್ಥೆಯಾದ ಅಖೀಲ ಭಾರತ ಬಿಲ್ಲವರ ಯೂನಿಯನ್‌ನ ಅಧ್ಯಕ್ಷರಾಗಿ ಆಯ್ಕೆಯಾದರು. ಅದೇ ವರ್ಷ ಮೂಲ್ಕಿಯಲ್ಲಿ ಬಿಲ್ಲವರ ಐತಿಹಾಸಿಕ ಮಹಾ ಸಮ್ಮೇಳನವನ್ನು ಸಂಘಟಿಸಿ ಅಂದಿನ ಮುಖ್ಯ ಮಂತ್ರಿಗಳಾಗಿದ್ದ ದೇವರಾಜ ಅರಸು ಅವರನ್ನು ಕರೆಸಿ ಅವರ ಸಮ್ಮುಖದಲ್ಲಿ ಬಿಲ್ಲವರಿಗೆ ರಾಜಕೀಯದಲ್ಲಿ ಮರೀಚಿಕೆಯಾಗಿದ್ದ ಸೂಕ್ತ ಸ್ಥಾನಮಾನಕ್ಕಾಗಿ ಪ್ರಬಲ ಹಕ್ಕೊತ್ತಾಯವನ್ನು ಮಂಡಿಸಿದವರು. ಅದರ ಪ್ರಯೋಜನವನ್ನು ಸ್ವಹಿತಕ್ಕೆ ಬಳಸದೆ ಸಮಾಜದಲ್ಲಿ ನಾಯಕತ್ವವನ್ನು ಬೆಳೆಸಲು ಶ್ರಮಿಸಿದರು. ಪರಿಣಾಮವಾಗಿ ಜಿಲ್ಲೆ ಯಲ್ಲಿ ಬಿಲ್ಲವರು ರಾಜಕೀಯದಲ್ಲಿ ಮಹತ್ವದ ಹುದ್ದೆಗಳನ್ನು ಪಡೆಯಲು ಕಾರಣೀಕರ್ತ ರಾದರು. ಶೈಕ್ಷಣಿಕ ಕ್ಷೇತ್ರದಲ್ಲಿ ಬಡ ಕುಟುಂಬದ ಮಕ್ಕಳಿಗೂ ಆಂಗ್ಲ ಮಾಧ್ಯಮದ ಶಿಕ್ಷಣ ದೊರೆಯಬೇಕೆಂಬ ಮಹತ್ವಾಕಾಂಕ್ಷೆಯಿಂದ 1977ರಲ್ಲಿ ತನ್ನ ಸ್ವಂತ ದುಡಿಮೆಯ ಹಣದಿಂದ ಕುದ್ರೋಳಿಯಲ್ಲಿ ನಾರಾಯಣ ಗುರು ಶಿಕ್ಷಣ ಸಂಸ್ಥೆಯನ್ನು ಪ್ರಾರಂಭಿಸಿದರು. ಪ್ರಸ್ತುತ ಪದವಿಪೂರ್ವ, ಪದವಿ, ತಾಂತ್ರಿಕ ಶಿಕ್ಷಣ ದೊಂದಿಗೆ ಸಾವಿರಕ್ಕೂ ಮಿಕ್ಕಿ ವಿದ್ಯಾರ್ಥಿಗಳು ಈ ಶಿಕ್ಷಣ ಸಂಸ್ಥೆಗಳಲ್ಲಿ ಕಲಿಯುತ್ತಿದ್ದಾರೆ.

ಉಚಿತ ಸಾಮೂಹಿಕ ವಿವಾಹ, ಸ್ತ್ರೀಯರಿಗೆ ಸ್ವ ಉದ್ಯೋಗಕ್ಕೆ ಪ್ರೋತ್ಸಾಹ, ಮೂರ್ತೆದಾರರ ಹೋರಾಟಕ್ಕೆ ಬೆಂಬಲ, ಗ್ರಾಮ ಗ್ರಾಮಗಳಲ್ಲಿ ಬಿಲ್ಲವ ಸಂಘಗಳ ಸ್ಥಾಪನೆ ಜತೆಯಲ್ಲಿ ಆರ್ಥಿಕ ನೆರವು, ನಾಟಕ ಕಲಾವಿದರ ಸಮ್ಮೇಳನ, ಶ್ರೀ ನಾರಾಯಣ ಗುರು ಸಂಚಾರಿ ಆಸ್ಪತ್ರೆ, ತಾಲೂಕು ಮಟ್ಟದ ಸಮ್ಮೇಳನಗಳು, ಗುರು ವಾಣಿ ಮಾಸಪತ್ರಿಕೆ, ನಾರಾಯಣ ಗುರು ಸಂಸ್ಕೃತ ಶಾಲೆ ಇಂತಹ ಪ್ರಮುಖ ಕಾರ್ಯ ಕ್ರಮಗಳ ಮೂಲಕ ಸಮಾಜದಲ್ಲಿ ಪರಿವರ್ತ ನೆಯ ಸುವರ್ಣ ಕಾಲಕ್ಕೆ ಮೂರ್ತರೂಪ ನೀಡಿ ದವರು. ಈ ದಿವ್ಯಚೇತನದ ಆತ್ಮ 1993ರ ಎ. 11ರಂದು ಪರಮಾತ್ಮನಲ್ಲಿ ಲೀನವಾಯಿತು.

ಹುಟ್ಟು ಆಕಸ್ಮಿಕ, ಮರಣ ನಿಶ್ಚಿತ, ಜನನ ಮರಣಗಳ ನಡುವಿನ ಜೀವನದ ಬದುಕು, ಸಾಧನೆ ಸಾವಿನ ಬಳಿಕವೂ ಜನಮನದಲ್ಲಿ ಅಮರತ್ವವನ್ನು ಪಡೆಯುವ ಪುಣ್ಯ ಕಾರ್ಯ ಮುಖ್ಯ. ಆ ರೀತಿಯಲ್ಲಿ ತನ್ನ 69 ವರುಷಗಳ ಜೀವನವನ್ನು ಶ್ರೀಗಂಧದ ರೀತಿ ತೇಯ್ದು ಸಮಾಜಕ್ಕೆ ಸುಗಂಧದ ಪರಿಮಳವನ್ನು ನೀಡಿ ಸಾರ್ಥಕವಾಗಿ ಬದುಕಿದ, ಬಡಜನರ ಕಣ್ಣೀರಿಗೆ ಸ್ಪಂದಿಸಿದ ಹೃದಯ ಸಿರಿವಂತ ದಾಮೋದರ ಆರ್‌. ಸುವರ್ಣ ಅವರು ಇಂದಿಗೂ ಜನಮಾನಸದಲ್ಲಿ ಅಮರತ್ವವನ್ನು ಪಡೆದವರು.

ಜೀವನ್‌ ಕುಮಾರ್‌, ತೊಕ್ಕೊಟ್ಟು

ಟಾಪ್ ನ್ಯೂಸ್

Bengal

Filmmaker Died: ಖ್ಯಾತ ಸಿನಿಮಾ ನಿರ್ದೇಶಕ ಶ್ಯಾಂ ಬೆನಗಲ್‌ ವಿಧಿವಶ

Mangaluru: ವಿಎ ತಾತ್ಕಾಲಿಕ ಆಯ್ಕೆ ಪಟ್ಟಿ ಪ್ರಕಟ

Mangaluru: ವಿಎ ತಾತ್ಕಾಲಿಕ ಆಯ್ಕೆ ಪಟ್ಟಿ ಪ್ರಕಟ

CTR-Wife-pallavi

ಸುಮ್ನೆ ಬ್ಯಾಂಡೇಜ್‌ ಹಾಕಿಕೊಳ್ಳಲು ಯಾರಿಗೂ ತಲೆ ಕೆಟ್ಟಿಲ್ಲ: ಸಿ.ಟಿ.ರವಿ ಪತ್ನಿ ಪಲ್ಲವಿ

CKM-CTR

ಬಿಜೆಪಿ, ಕಾಂಗ್ರೆಸ್‌ಗೆ ಪ್ರತ್ಯೇಕ ಕಾನೂನಿಲ್ಲ, ನನ್ನ ದೂರಿಗೆ ಕ್ರಮವಿಲ್ಲವೇಕೆ?: ಸಿ.ಟಿ.ರವಿ

Ankola; ಕಾರು ಢಿಕ್ಕಿ: ಪಾದಚಾರಿ ಮೃತ್ಯು; ಮೂವರಿಗೆ ಗಾಯ

Ankola; ಕಾರು ಢಿಕ್ಕಿ: ಪಾದಚಾರಿ ಮೃತ್ಯು; ಮೂವರಿಗೆ ಗಾಯ

Road Mishap: ಬೈಕ್‌- ಬಸ್ ಡಿಕ್ಕಿ; 8 ವರ್ಷದ ವಿದ್ಯಾರ್ಥಿನಿ ಸಾವು

Road Mishap: ಬೈಕ್‌- ಬಸ್ ಡಿಕ್ಕಿ; 8 ವರ್ಷದ ವಿದ್ಯಾರ್ಥಿನಿ ಸಾವು

Missing Case ಶಿರ್ವ: ವ್ಯಕ್ತಿ ನಾಪತ್ತೆ; ಪ್ರಕರಣ ದಾಖಲು

Missing Case ಶಿರ್ವ: ವ್ಯಕ್ತಿ ನಾಪತ್ತೆ; ಪ್ರಕರಣ ದಾಖಲು


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಇಂದು ರಾಷ್ಟ್ರೀಯ ರೈತ ದಿನ: ರೈತರ ಬದುಕು ಹಸನಾದರಷ್ಟೇ ಉಳಿದೀತು ಕೃಷಿ ಸಂಸ್ಕೃತಿ

ಇಂದು ರಾಷ್ಟ್ರೀಯ ರೈತ ದಿನ: ರೈತರ ಬದುಕು ಹಸನಾದರಷ್ಟೇ ಉಳಿದೀತು ಕೃಷಿ ಸಂಸ್ಕೃತಿ

Mandya :ಗಂಡ ಗದ್ಯ, ಹೆಂಡತಿ ಪದ್ಯ ಮಕ್ಕಳು ರಗಳೆ: ಹಾಸ್ಯ ಸಾಹಿತಿ ವೈ.ವಿ.ಗುಂಡೂರಾವ್‌

Mandya :ಗಂಡ ಗದ್ಯ, ಹೆಂಡತಿ ಪದ್ಯ, ಮಕ್ಕಳು ರಗಳೆ!: ಹಾಸ್ಯ ಸಾಹಿತಿ ವೈ.ವಿ.ಗುಂಡೂರಾವ್‌

Mandya Sahitya Sammelana: ಅಕ್ಷರ ಜಾತ್ರೆಯಲ್ಲಿ “ಹವಾ’ ಎಬ್ಬಿಸಿದ ತೊಟ್ಟಿ ಮನೆ..!

Mandya Sahitya Sammelana: ಅಕ್ಷರ ಜಾತ್ರೆಯಲ್ಲಿ “ಹವಾ’ ಎಬ್ಬಿಸಿದ ತೊಟ್ಟಿ ಮನೆ..!

Mandya: ನುಡಿ ಹಬ್ಬದ ಔತಣ ಸವಿಯಲು ಜನವೋ ಜನ- ವೃದ್ಧರಿಗೆ ವಿಶೇಷ ಕೌಂಟರ್‌

Mandya: ನುಡಿ ಹಬ್ಬದ ಔತಣ ಸವಿಯಲು ಜನವೋ ಜನ- ವೃದ್ಧರಿಗೆ ವಿಶೇಷ ಕೌಂಟರ್‌

ravishankar-guruji

World Meditation Day; ಶರೀರಕ್ಕೆ ಊಟ, ಆತ್ಮಕ್ಕೆ ಧ್ಯಾನ

MUST WATCH

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

ಹೊಸ ಸೇರ್ಪಡೆ

court

Kasaragod; ಯುವಕನ ಕೊಲೆ: 6 ಮಂದಿಗೆ ಜೀವಾವಧಿ

death

Puttur: ಅಪಘಾತದಲ್ಲಿ ಗಾಯಾಳಾಗಿದ್ದ ಬೈಕ್‌ ಸಹ ಸವಾರ ಸಾವು

arrested

BC Road; ಎರಡು ತಂಡಗಳ ಮಧ್ಯೆ ಮಾರಾಮಾರಿ: ಇಬ್ಬರ ಬಂಧನ

1-bhatru

Subrahmanya: ಅರ್ಚಕರ ಮನೆಯಿಂದ ನಗ-ನಗದು ಕಳವು

police crime

Gangolli, Ajekaru; ಮಹಿಳೆಯರಿಗೆ ಜೀವ ಬೆದರಿಕೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.