ನಾಳೆಯಿಂದ ಏನೇನು ಬದಲಾವಣೆ?

Team Udayavani, Sep 30, 2022, 6:45 AM IST

ನಾಳೆಯಿಂದ ಏನೇನು ಬದಲಾವಣೆ?

ಕ್ರೆಡಿಟ್‌ ಕಾರ್ಡ್‌ ಮಿತಿ :

ಅ.1ರಿಂದ ಅಂದರೆ ಶನಿವಾರದಿಂದ ಕ್ರೆಡಿಟ್‌ ಕಾರ್ಡ್‌ ವಿತರಣೆ ಮಾಡುವವರು ತಮ್ಮಿಷ್ಟದಂತೆ ಗ್ರಾಹಕರ ಕ್ರೆಡಿಟ್‌ ಕಾರ್ಡ್‌ ಮಿತಿಯನ್ನು ಹೆಚ್ಚಳ ಮಾಡುವಂತಿಲ್ಲ. ಕಾರ್ಡ್‌ದಾರನ ಲಿಖಿತ ಅನುಮತಿ ಪಡೆದ ಬಳಿಕವಷ್ಟೇ ಮಿತಿ ಹೆಚ್ಚಳ ಮಾಡಬೇಕು.

ಟೋಕನೈಸೇಶನ್‌  :

ಈವರೆಗೆ ಥರ್ಡ್‌ ಪಾರ್ಟಿ ಪೇಮೆಂಟ್‌ ಆ್ಯಪ್‌ಗಳು ನಿಮ್ಮ ಬ್ಯಾಂಕ್‌ನಿಂದ ಯಾವುದೇ ಪ್ಲಾಟ್‌ಫಾರಂಗೆ ಹಣ ಪಾವತಿ ಮಾಡಬೇಕೆಂದರೆ ನಿಮ್ಮ ಕ್ರೆಡಿಟ್‌/ಡೆಬಿಟ್‌ ಕಾರ್ಡ್‌ ನಂಬರ್‌, ನಿಮ್ಮ ಹೆಸರು, ಸಿವಿವಿಯನ್ನು ಬಳಸುತ್ತಿದ್ದವು. ಆದರೆ, ಅ.1ರಿಂದ ಆ್ಯಪ್‌ಗ್ಳಲ್ಲಿದ್ದ ನಿಮ್ಮ ಎಲ್ಲ ಮಾಹಿತಿಯೂ ಡಿಲೀಟ್‌ ಆಗಲಿದೆ. ವಹಿವಾಟಿನ ಸುರಕ್ಷತೆ ದೃಷ್ಟಿಯಿಂದ, ನಿಮ್ಮ ಕಾರ್ಡ್‌ನಲ್ಲಿರುವ ಎಲ್ಲ ವಿವರಗಳನ್ನೂ ಕಡ್ಡಾಯವಾಗಿ ನೀವು ಟೋಕನ್‌ ಆಗಿ ಪರಿವರ್ತಿಸಬೇಕು. ಆ ಟೋಕನನ್ನೇ ಬಳಸಿಕೊಂಡು ಆ್ಯಪ್‌ಗ್ಳು ಹಣ ಪಾವತಿ ಮಾಡಲಿವೆ.

ಒಟಿಪಿ :

ಕಾರ್ಡ್‌ ವಿತರಣೆಯಾಗಿ 30 ದಿನಗಳ ಬಳಿಕವೂ ಅದನ್ನು ಆ್ಯಕ್ಟಿವೇಟ್‌ ಮಾಡದೇ ಇದ್ದರೆ ಕ್ರೆಡಿಟ್‌ ಕಾರ್ಡ್‌ ವಿತರಣೆ ಮಾಡುವವರು ಕಾರ್ಡ್‌ ಹೊಂದಿರುವಾತನ ಒಪ್ಪಿಗೆಯನ್ನು ಒಟಿಪಿ (ಒನ್‌ ಟೈಂ ಪಾಸ್‌ವರ್ಡ್‌) ಮೂಲಕ ಪಡೆಯಬೇಕು. ಗ್ರಾಹಕ ಒಪ್ಪಿಗೆ ನೀಡದಿದ್ದರೆ 7 ದಿನಗಳೊಳಗಾಗಿ ಯಾವುದೇ ಶುಲ್ಕ ವಿಧಿಸದೇ ಕಾರ್ಡನ್ನು ಡೀಆ್ಯಕ್ಟಿವೇಟ್‌ ಮಾಡಬೇಕು.

ಡಿಮ್ಯಾಟ್‌ ಖಾತೆ ಲಾಗಿನ್‌ :

ಶನಿವಾರದಿಂದ ನೀವು ಡಿಮ್ಯಾಟ್‌ ಖಾತೆಗೆ ಲಾಗಿನ್‌ ಆಗಬೇಕೆಂದರೆ ಬಯೋಮೆಟ್ರಿಕ್‌ ದೃಢೀಕರಣ ಅತ್ಯಗತ್ಯ. ಈ ಪ್ರಕ್ರಿಯೆ ಮೂಲಕ ಅಥವಾ ಪಾಸ್‌ವರ್ಡ್‌, ಪಿನ್‌, ಒಟಿಪಿ, ಸೆಕ್ಯೂರಿಟಿ ಟೋಕನ್‌ ಮೂಲಕವೂ ಲಾಗಿನ್‌ ಆಗಬಹುದು.

ರಾಷ್ಟ್ರೀಯ ಪಿಂಚಣಿ ಯೋಜನೆ :

ಎನ್‌ಪಿಎಸ್‌ ಚಂದಾದಾರರ ಅನುಕೂಲಕ್ಕಾಗಿ ಯೋಜನೆಯ ಇ-ನಾಮಿನೇಶನ್‌ ಪ್ರಕ್ರಿಯೆಯಲ್ಲಿ ಬದಲಾವಣೆ ತರಲಾಗಿದೆ. ಇ-ನಾಮಿನೇಶನ್‌ ಪ್ರಕ್ರಿಯೆ ಆರಂಭಿಸಿದ ಅನಂತರ ನೋಡಲ್‌ ಕಚೇರಿಯು ಒಂದೋ ಅದನ್ನು ಸ್ವೀಕರಿಸಬೇಕು ಅಥವಾ ತಿರಸ್ಕರಿಸಬೇಕು. 30 ದಿನಗಳೊಳಗಾಗಿ ಕಚೇರಿ ಯಾವುದೇ ಕ್ರಮ ಕೈಗೊಳ್ಳದೇ ಇದ್ದರೆ, ಕೋರಿಕೆಯು ತನ್ನಿಂತಾನೇ ಸಿಆರ್‌ಎ ವ್ಯವಸ್ಥೆಯಲ್ಲಿ ಸ್ವೀಕೃತಗೊಳ್ಳುತ್ತದೆ.

ಅಟಲ್‌ ಪಿಂಚಣಿ ಯೋಜನೆ:

ಅ.1ರಿಂದ ಆದಾಯ ತೆರಿಗೆ ಪಾವತಿದಾರರು ಅಟಲ್‌ ಪಿಂಚಣಿ ಯೋಜನೆಗೆ ಅರ್ಹತೆ ಪಡೆಯುವುದಿಲ್ಲ. ಸೀಮಿತ ಸೇವಾ ಪ್ರಯೋಜನಗಳನ್ನು ಪಡೆಯುವಂಥವರಿಗೆ ಯೋಜನೆಯ ಲಾಭ ಸಿಗಬೇಕು ಎನ್ನುವುದು ಇದರ ಉದ್ದೇಶ.

ಎಲ್‌ಪಿಜಿ ದರ ಪರಿಷ್ಕರಣೆ :

ಪ್ರತೀ ತಿಂಗಳಂತೆ ಅ.1ರ ಮೊದಲ ದಿನ ಅಡುಗೆ ಅನಿಲ ಸಿಲಿಂಡರ್‌ ದರ ಏರಿಕೆ ಅಥವಾ ಇಳಿಕೆ ಆಗಬಹುದು.

ಟಾಪ್ ನ್ಯೂಸ್

Delhi-Stamp

Mahakumbh Rush: ಗೊಂದಲಕಾರಿ ಪ್ರಕಟಣೆಯಿಂದ ರೈಲು ನಿಲ್ದಾಣದಲ್ಲಿ ಕಾಲ್ತುಳಿತ: ಪೊಲೀಸರು

ಜರ್ಮನಿ ಅಧ್ಯಕ್ಷರ ಎಕ್ಸ್‌ ಖಾತೆ ಹ್ಯಾಕ್‌: ಬಿಹಾರ ಇಲಾಖೆ ಹೆಸರಿಟ್ಟ ಕಿಡಿಗೇಡಿಗಳು

ಜರ್ಮನಿ ಅಧ್ಯಕ್ಷರ ಎಕ್ಸ್‌ ಖಾತೆ ಹ್ಯಾಕ್‌: ಬಿಹಾರ ಇಲಾಖೆ ಹೆಸರಿಟ್ಟ ಕಿಡಿಗೇಡಿಗಳು

Kuruburu-Shanta

Air Lift: ಪಂಜಾಬ್‌ನಲ್ಲಿ ರೈತ ಮುಖಂಡ ಶಾಂತಕುಮಾರ್‌ಗೆ ಅಪಘಾತ; ಬೆಂಗಳೂರಿಗೆ ಏರ್‌ಲಿಫ್ಟ್‌

Kollywood: ಖ್ಯಾತ ನಟ ಯೋಗಿ ಬಾಬು ಕಾರು ಅಪಘಾತ?: ನಟ ಹೇಳಿದ್ದೇನು?

Kollywood: ಖ್ಯಾತ ನಟ ಯೋಗಿ ಬಾಬು ಕಾರು ಅಪಘಾತ?: ನಟ ಹೇಳಿದ್ದೇನು?

naki

Naki Sumo: ಮಗುವನ್ನು ಅಳಿಸುವ ವಿಚಿತ್ರ ಆಚರಣೆ !; ನಡೆಯುವುದಾದರು ಎಲ್ಲಿ?

mohan bhagwat

RSS; ಹಿಂದೂ ಸಮಾಜ ದೇಶದ ಜವಾಬ್ದಾರಿಯುತ ಸಮುದಾಯ: ಮೋಹನ್ ಭಾಗವತ್

IPL 2025: ಐಪಿಎಲ್‌ ವೇಳಾಪಟ್ಟಿ ಪ್ರಕಟ; KKR vs RCB ಮೊದಲ ಮುಖಾಮುಖಿ- ಇಲ್ಲಿದೆ ಪಟ್ಟಿ

IPL 2025: ಐಪಿಎಲ್‌ ವೇಳಾಪಟ್ಟಿ ಪ್ರಕಟ; KKR vs RCB ಮೊದಲ ಮುಖಾಮುಖಿ- ಇಲ್ಲಿದೆ ಪಟ್ಟಿ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

1-jama

Yakshagana; ಮೇಳದ ಯಜಮಾನಿಕೆ ಎಂದರೆ ಆನೆ ಸಾಕಿದ ಹಾಗೆ

9-yoga

Sattvic Diet: ಪರೀಕ್ಷಾ ಒತ್ತಡ ನಿವಾರಣೆ ಯೋಗ, ಸಾತ್ವಿಕ ಆಹಾರದ ಸರಳ ಸೂತ್ರಗಳು

8-bagappa

Bagappa Harijan: ಭೀಮಾ ತೀರದಲ್ಲಿ ಮತ್ತೆ ರಕ್ತದ ಹನಿ

Valentine’s Day: ನೀನು ಪ್ರೀತಿಸಿದ್ದೆ.. ಪ್ರೀತಿಸುತ್ತಿರುವೆ!

Valentine’s Day: ನೀನು ಪ್ರೀತಿಸಿದ್ದೆ.. ಪ್ರೀತಿಸುತ್ತಿರುವೆ!

Pamban Bridge:: ದೇಶದ ಮೊದಲ ವರ್ಟಿಕಲ್‌ ಲಿಫ್ಟ್ ರೈಲ್ವೇ ಸೇತುವೆ: ಶತಮಾನದ ಇತಿಹಾಸ!

Pamban Bridge:: ದೇಶದ ಮೊದಲ ವರ್ಟಿಕಲ್‌ ಲಿಫ್ಟ್ ರೈಲ್ವೇ ಸೇತುವೆ: ಶತಮಾನದ ಇತಿಹಾಸ!

MUST WATCH

udayavani youtube

ನಿಮ್ಮ ಅಚ್ಚುಮೆಚ್ಚಿನ ; ಆರೋಗ್ಯಕರ ಪಾನಿಪುರಿ ಸವಿಯಲು ಇಲ್ಲಿಗೆ ಬನ್ನಿ

udayavani youtube

ಭೀಕರ ಹಿಟ್ & ರನ್ ಸಂತ್ರಸ್ತರ ಪರ ನಿಂತ ಪುತ್ತೂರು ಶಾಸಕ ಅಶೋಕ್ ರೈ

udayavani youtube

ಶ್ರೀ ಬ್ರಹ್ಮಬೈದರ್ಕಳ ನೇಮೋತ್ಸವ, ಮಾಣಿಬಾಲೆ ನೇಮೋತ್ಸವ

udayavani youtube

ಸಾಹಿತ್ಯಾಸಕ್ತಿಯ ಚಹಾ ಅಂಗಡಿ

udayavani youtube

ಇಲ್ಲಿ ಪ್ರತಿಯೊಂದು ಗೋವುಗಳಿಗೂ ವಿಭಿನ್ನ ಹೆಸರಿದೆ

ಹೊಸ ಸೇರ್ಪಡೆ

Delhi-Stamp

Mahakumbh Rush: ಗೊಂದಲಕಾರಿ ಪ್ರಕಟಣೆಯಿಂದ ರೈಲು ನಿಲ್ದಾಣದಲ್ಲಿ ಕಾಲ್ತುಳಿತ: ಪೊಲೀಸರು

WPL: ಮುಂಬೈ-ಡೆಲ್ಲಿ ಪಂದ್ಯದಲ್ಲಿ ರನೌಟ್‌ ವಿವಾದ

WPL: ಮುಂಬೈ-ಡೆಲ್ಲಿ ಪಂದ್ಯದಲ್ಲಿ ರನೌಟ್‌ ವಿವಾದ

de

Vitla: ಕಾಲು ಜಾರಿ ಕೆರೆಗೆ ಬಿದ್ದು ಯುವಕ ಸಾವು

Politics: ಸಿದ್ದರಾಮಯ್ಯ 5 ವರ್ಷವೂ ಸಿಎಂ: ಕೊತ್ತೂರು ಮಂಜುನಾಥ್‌

Politics: ಸಿದ್ದರಾಮಯ್ಯ 5 ವರ್ಷವೂ ಸಿಎಂ: ಕೊತ್ತೂರು ಮಂಜುನಾಥ್‌

ಜರ್ಮನಿ ಅಧ್ಯಕ್ಷರ ಎಕ್ಸ್‌ ಖಾತೆ ಹ್ಯಾಕ್‌: ಬಿಹಾರ ಇಲಾಖೆ ಹೆಸರಿಟ್ಟ ಕಿಡಿಗೇಡಿಗಳು

ಜರ್ಮನಿ ಅಧ್ಯಕ್ಷರ ಎಕ್ಸ್‌ ಖಾತೆ ಹ್ಯಾಕ್‌: ಬಿಹಾರ ಇಲಾಖೆ ಹೆಸರಿಟ್ಟ ಕಿಡಿಗೇಡಿಗಳು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.