ಪರಿಸರ ಸ್ನೇಹಿ ದೀಪಗಳ ಜತೆ ಬೆಳಕಿನ ಹಬ್ಬ

ದೇಶೀ ದೀಪಾವಳಿಗೆ ವಿವಿಧ ದೀಪಗಳ ಮೆರಗು, ಸ್ವದೇಶಿ ದೀಪ ಸೃಜಿಸಲು ಒತ್ತು

Team Udayavani, Nov 10, 2020, 12:48 PM IST

ಪರಿಸರ ಸ್ನೇಹಿ ದೀಪಗಳ ಜತೆ ಬೆಳಕಿನ ಹಬ್ಬ

ದೀಪಗಳಹಬ್ಬಕ್ಕೆ ಕೆಲವೇ ದಿನಗಳು ಬಾಕಿಯಿದೆ. ಕೋವಿಡ್ ಸಂಕಷ್ಟದ ನಡುವೆ ನಗರವಾಸಿಗಳು ಸರಳ ಆಚರಣೆಗೆ ಮನಸ್ಸು ಮಾಡಿದ್ದಾರೆ. ಸರ್ಕಾರವಂತೂ ಪಟಾಕಿ ಸುಡುವುದನ್ನು ನಿಷೇಧಿಸಿ ಸರಳಹಬ್ಬಕ್ಕೆ ನಾಂದಿಹಾಡಿದೆ.ಇನ್ನು ದೇಶೀ ಹಬ್ಬಕ್ಕಾಗಿ ಸುಲಭವಾಗಿ ಮನೆಯಲ್ಲೇ ದೀಪಗಳನ್ನು ತಯಾರಿಸಬಹುದಾಗಿದ್ದು, ಸುಲಭ ಮತ್ತು ವೈವಿಧ್ಯಮಯ ಮಾದರಿಗಳನ್ನು ನೀವು ಹಬ್ಬಕ್ಕೆಬಳಸಬಹುದಾಗಿದೆ.

ಬೆಂಗಳೂರು: ಬೆಳಕಿನ ಹಬ್ಬ ದೀಪಾವಳಿಯನ್ನು ಮತ್ತಷ್ಟು ಪರಿಸರ ಪ್ರಿಯವಾಗಿ ಆಚರಿಸುವ ನಿಟ್ಟಿನಲ್ಲಿ ಸಿದ್ಧತೆಗಳು ಸಾಗಿವೆ. ದೀಪಾವಳಿ ಸಂಬಂಧಿತ ಚೀನಾ ವಸ್ತುಗಳನ್ನುಕೊಳ್ಳದೆ ದೇಶಿ ಉತ್ಪನ್ನಗಳ ನ್ನು ಬಳಸಲು ಕೇಂದ್ರ ಸಲಹೆ ನಿಡಿದೆ. ರಾಜ್ಯ ಸರ್ಕಾರವೂ ಹಸಿರು ಪಟಾಕಿ ಮಾರಾಟಕ್ಕೆ ಅನುಮತಿ ನೀಡಿದೆ. ಇದಕ್ಕೆಪೂರಕ ಎಂಬಂತೆ ಸ್ವದೇ ಶಿ ಉತ್ಪನ್ನಗಳೂ ಮಾರುಕಟ್ಟೆಗೆ ಆಗಮಿಸಿವೆ. ಅದರಲ್ಲಿ ಸ್ವದೇಶಿತನದಿಂದಲೇ ರೂಪಗೊಂಡಿರುವ ದೀಪಗಳು ಸೇರಿವೆ.

ಸಗಣಿಯಿಂದ ವಿನ್ಯಾಸಗೊಂಡಿರುವ ದೀಪವೂ ಇದರಲ್ಲಿದೆ. ಮನೆಯಲ್ಲೇ ವಿಧ ಹಿಟ್ಟಿನಿಂದ, ಅಡಿಕೆ ಸಿಪ್ಪೆಯಿಂದ ದೀಪಗಳನ್ನು ಅಣಿಗೊಳಿಸಬಹುದಾಗಿದೆ. ಜತೆಗೆ ನಿಂಬೆ ಹಣ್ಣು, ಕಿತ್ತಲೆ ಹಣ್ಣು ಮತ್ತು ಅಲೂಗಡ್ಡೆ ಗಳ ಮೂಲಕವೂ ದೇವರಿಗೆ ಪ್ರಿಯವಾದ ಪರಿಸರ ಸ್ನೇಹಿ ಹಣತೆಗಳನ್ನು ವಿನ್ಯಾಸಗೊಳಿಸಬಹುದಾಗಿದೆ. ಆ ಮೂಲಕ ನೈಸರ್ಗಿಕ ಹಸಿರು ದೀಪಾವಳಿಗೆ ಆದ್ಯತೆ ನೀಡಬಹುದಾಗಿದೆ. ಇಂತಹ ದೀಪಗಳು ಪರಿಸರಕ್ಕೆ ತೊಂದರೆಕೊಡದೆ ಮಣ್ಣಿನಲ್ಲಿ ಬೇಗನೆ ಬೆರೆಯಲಿವೆ. ಈ ಎಲ್ಲಾ ಅಂಶಗಳನ್ನು ಮನದಲ್ಲಿಟ್ಟುಕೊಂಡು ಬೆಳಕಿನ ಹಬ್ಬಕ್ಕೆ ಹೆಜ್ಜೆಯಿರಿಸಬೇಕಿದೆ.

ಅನುಪಯುಕ್ತ ವಸ್ತುಗಳಿಂದಲೂ ದೀಪ :

ದೈನಂದಿನ ಬಳಕೆ ಮಾಡುವ ವಸ್ತುಗಳಿಂದಲೂ ದೀಪಗಳನ್ನು ತಯಾರಿಸಬಹದಾಗಿದೆ. ಟೀ ಕುಡಿಯುವ ಪೇಪರ್‌ಕಪ್‌,ಪ್ಯಾಸ್ಟಿಕ್‌ ಬಾಟಲ್‌, ಸಿಡಿಗಳು, ಲೋಹ ಸಂಬಂಧಿತ ಅನುಪಯುಕ್ತ ವಸ್ತುಗಳನ್ನು ಬಳಸಿ, ಅಂದವಾಗಿ ಪೇಯಿಂಟ್‌ ಮಾಡಿ ವಿದ್ಯುತ್‌ ದೀಪಗಳನ್ನು ಅಳವಡಿಸಿಯೂ ದೀಪಗಳನ್ನು ತಯಾರಿಸಬಹುದಾಗಿದೆ. ಇದನ್ನು ಹಲವು ಹಬ್ಬ ಗಳಲ್ಲಿ ವರ್ಷಾನುಗಟ್ಟಲೆ ಬಳಸಬಹುದಾಗಿದೆ.

ಹಣತೆ ಸಿದ್ಧಪಡಿಸುವುದು  ಹೇಗೆ? :

ಸಗಣಿ ದೀಪ : ಈ ದೀಪ ಪವಿತ್ರ ಎಂಬ ಪ್ರತೀತಿ ಹಳ್ಳಿಗಳಲ್ಲಿದೆ. ಇಂತಹದೀಪಗಳಿಂದ ಬೆಳಗಿದಾಗ ಸಕಾರತ್ಮಕ ಭಾವನೆ ಮನದ ಸ್ಮತಿಪಟಲದಲ್ಲಿ ಮೂಡಲಿದೆ. ಹಸುವಿನ ಸಗಣಿ ದೀಪವನ್ನು ಗೋ ಮೂತ್ರ ಮತ್ತು ಗೋದಿಹಿಟ್ಟು ಬೆರೆಸಿ ವಿನ್ಯಾಸ ಪಡಿಸಲಾಗುತ್ತಿದೆ. ಈ ಹಣತೆ ಮಣ್ಣಿನಲ್ಲಿ ಬೇಗನೆ ಬೆರೆಯುವ ಕಾರಣಪರಿಸರಕ್ಕೂ, ಮಾನವನಿಗೂ ಯಾವುದೇ ತೊಂದರೆಯಾಗದು.

ಲಿಂಬೆಹಣ್ಣಿನ ಹಣತೆ : ಹಲವು ಕಡೆಗಳಲ್ಲಿ ನಿಂಬೆ ಹಣ್ಣಿನಿಂದ ದೀಪ ಹಚ್ಚುವ ಸಂಪ್ರದಾಯ ಈಗಲೂ ಇದೆ. ನಿಂಬೆ ಹಣ್ಣಿನಲ್ಲೂ ಅತ್ಯಂತ ಸುಲಭ ರೀತಿಯಲ್ಲಿಹಣತೆಗೆ ಜೀವ ನೀಡಬಹುದಾಗಿದೆ.ದೇವರಿಗೆ ಲಿಂಬೆಹಣ್ಣಿನ ದೀಪ ಶ್ರೇಷ್ಠ ಅಂತ ಹೇಳಲಾಗುತ್ತಿದೆ. ದೀಪಾವಳಿಯಲ್ಲೂ ಸುಲಭ ಖರ್ಚಿನಲ್ಲಿ ನಿಂಬೆ ಹಣ್ಣಿನಿಂದ ದೀಪ ಸಿದ್ಧಪಡಿಸಬಹುದಾಗಿದೆ.

ಅಡಿಕೆ ಸಿಪ್ಪೆಯಿಂದ ಹಣತೆ : ಅಡಿಕೆ ಸಿಪ್ಪೆಗೂ ಹಣತೆ ರೂಪ ನೀಡಬಹುದಾಗಿದೆ. ಸಿಪ್ಪೆ ಇರುವ ಅಡಿಕೆಯನ್ನು ಎರಡು ಭಾಗವನ್ನಾಗಿ ಕತ್ತರಿಸಿ ಆ ನಂತರ ಅಡಿಕೆ ಹೊರತರಬೇಕು. ಆ ನಂತರ ಉಳಿಯುವ ಸಿಪ್ಪೆಯಲ್ಲಿ ಭಿನ್ನ ರೂಪದ ದೀಪ ಹಚ್ಚ ಬಹುದಾಗಿದೆ. ಸಾಮಾನ್ಯವಾಗಿ ಕರಾವಳಿ ಮತ್ತು ಮಲೆನಾಡಿನ ಭಾಗಗಳಲ್ಲಿ ಅಡಿಕೆ ಸಿಪ್ಪೆಯ ಹಣತೆ ಪ್ರಸಿದ್ಧಿ ಪಡೆದುಕೊಂಡಿದೆ. ಯಾವು ದೇ ರೀತಿಯಖರ್ಚಿಲ್ಲದೆ ಅಡಿಕೆ ಸಿಪ್ಪೆ ಹಣತೆಯನ್ನು ಸುಲಭ ರೀತಿಯಲ್ಲಿ ಮಾಡಬಹುದಾಗಿದೆ.

ಕಿತ್ತಲೆ ಹಣ್ಣಿನ ಹಣತೆ : ನಿಂಬೆಯಂತೆಯೇ ಕಿತ್ತಲೆ ಹಣ್ಣಿನಿಂದಲೂ ದೀಪ ಹಚ್ಚಬಹುದು.ನಿಂಬೆ ಹಣ್ಣಿಗಿಂತಲೂ ಹೆಚ್ಚು ಎಣ್ಣೆ ಹಾಕುವ ಅವಕಾಶಕಿತ್ತಲೆ ಹಣ್ಣಿನ ದೀಪದಲ್ಲಿರುತ್ತದೆ. ದೀಪವಾಗಿ ಬಳಕೆ ಮಾಡುವ ಒಂದೆರಡು ದಿನದ ಮೊದಲು ಕಿತ್ತಲೆ ಹಣ್ಣಿನ ಸಿಪ್ಪೆಯನ್ನು ಬಿಸಿಲಿನಲ್ಲಿ ಒಣಗಿಸಿ ಇಟ್ಟುಕೊಳ್ಳಬೇಕು. ಜತೆಗೆ ಸಿಪ್ಪೆಗೆ ನಮಗೆ ಬೇಕಾದ ಬಣ್ಣವನ್ನು ಹಚ್ಚಿ ಕೂಡ ಇಷ್ಟವಾದ ರೀತಿಯಲ್ಲಿ ಅಣಿಗೊಳಿಸಬಹುದಾಗಿದೆ.

ಆಲೂಗಡ್ಡೆ ದೀಪ : ಮನೆಯಲ್ಲೇ ಆಲೂಗಡ್ಡೆಯಿಂದಲೂ ಭಿನ್ನ ಶೈಲಿಯ ದೀಪವನ್ನು ರೂಪಿಸಬಹುದಾಗಿದೆ.ಆಲೂಗಡ್ಡೆ ತೆಗೆದುಕೊಂಡು ಅದರ ಮಧ್ಯ ಭಾಗದಲ್ಲಿ ಹೋಲ್‌ ಮಾಡಿ ಹಣತೆ ಆಕಾರ ನೀಡಬಹುದು. ಆಲೂಗಡ್ಡೆಯ ಸಿಪ್ಪೆ ತೆಗೆಯದೇ ಇದ್ದರೆ ನಾವು ಹಾಕುವ ಎಣ್ಣೆ ಹೆಚ್ಚು ಹೊತ್ತು ಇರುತ್ತದೆ. ನೀಟಾಗಿ ಆಲೂಗಡ್ಡೆಗೆ ಹಣತೆಯ ರೂಪ ನೀಡಿ ಎಣ್ಣೆ ಹಾಕಿ ಹಚ್ಚಿದರೆ ಇತರೆ ಹಣತೆಯಂತೆಯೇ ಉರಿಯಲಿದೆ.

ಪಟಾಕಿ ಸಿಡಿಸುವುದಕ್ಕಿಂತಲೂ ಪ್ರಕೃತಿದತ್ತವಾಗಿ ದೊರೆಯುವ ಎಣ್ಣೆಗಳಿಂದ ದೀಪ ಬೆಳಗಿಸುವುದು ಉತ್ತಮ.ಈ ದೀಪಗಳಿಂದ ಹೊರಹೊಮ್ಮುವ ಹೊಗೆಯು ನಮ್ಮ ಸುತ್ತಮುತ್ತಲಿರುವ ಅಪಾಯಕಾರಿ ಬ್ಯಾಕ್ಟೀರಿಯಾಗಳ ಸಾವಿಗೆ ಕಾರಣವಾಗುತ್ತದೆ.ಈ ಬಗ್ಗೆ ಜನರು ಹೆಚ್ಚು ಆಲೋಚನೆ ಮಾಡಬೇಕು. ಡಾ.ಯಲ್ಲಪ್ಪ ರೆಡ್ಡಿ, ಪರಿಸರ ತಜ್ಞ

ಪಟಾಕಿ ಮಾರ್ಗಸೂಚಿ ಉಲ್ಲಂಘಿಸಿದರೆಕ್ರಮ :

ಬೆಂಗಳೂರು: ದೀಪಾವಳಿ ಸಂದರ್ಭದಲ್ಲಿ ಹಸಿರು ಪಟಾಕಿ ಹೊರತುಪಡಿಸಿ ಬೇರೆ ಪಟಾಕಿ ಸಿಡಿಸುವವರ ವಿರುದ್ಧ ವಿಪತ್ತು ನಿರ್ವಹಣೆ ಕಾಯ್ದೆಯಡಿ ಪ್ರಕರಣ ದಾಖಲಿಸಲಾಗುವುದು ಎಂದು ಬಿಬಿಎಂಪಿ ಆಯುಕ್ತ ಎನ್‌. ಮಂಜುನಾಥ್‌ ಪ್ರಸಾದ್‌ ಅವರು ಎಚ್ಚರಿಕೆ ನೀಡಿದ್ದಾರೆ.

ಈ ಸಂಬಂಧ ಪ್ರತಿಕ್ರಿಯಿಸಿದ ಆಯುಕ್ತರು, ಕೋವಿಡ್ ಸೋಂಕು ಹಬ್ಬುವ ಭೀತಿ ಹಾಗೂಮಾಲಿನ್ಯ ನಿಯಂತ್ರಿಸುವ ಉದ್ದೇಶದಿಂದ ಈ ಬಾರಿ ದೀಪಾವಳಿ ಸಂದರ್ಭದಲ್ಲಿ ಪಟಾಕಿ ಸಿಡಿಸುವುದನ್ನು ನಿಷೇಧಿಸಲಾಗಿದೆ. ಸರ್ಕಾರ ಪಟಾಕಿ ಮಾರಾಟ ಮತ್ತು ಹಚ್ಚುವ ಸಂಬಂಧ ಸ್ಪಷ್ಟವಾದ ಮಾರ್ಗಸೂಚಿ ಹೊರಡಿಸಿದೆ.ಈನಿಯಮಗಳ ಆಧಾರದ ಮೇಲೆ ಪಟಾಕಿ ಮಾರಾಟ ಮಾಡುವವರಿಗೂ ಪರವಾನಗಿ ನೀಡಲಾಗುತ್ತಿದೆ. ಪಾಲಿಕೆಯಿಂದ ಪರವಾನಗಿ ಪಡೆದವರು ಹಸಿರು ಪಟಾಕಿಯನ್ನು ಮಾತ್ರ ಮಾರಾಟ ಮಾಡಬೇಕು. ನಿಯಮ ಉಲ್ಲಂ ಸಿ ಅನ್ಯ ಪಟಾಕಿ ಮಾರಾಟ ಮಾಡಿದರೆ, ಮಾರಾಟಗಾರರ ಮೇಲೂ ಕ್ರಮ ತೆಗೆದುಕೊಳ್ಳಲಾಗುವುದು ಎಂದರು.

ಟಾಪ್ ನ್ಯೂಸ್

Turkey: ಟೇಕ್‌ ಆಫ್‌ ವೇಳೆ ಆಂಬ್ಯುಲೆನ್ಸ್ ಹೆಲಿಕಾಪ್ಟರ್ ಪತನ; ನಾಲ್ವರು ಮೃ*ತ್ಯು

Turkey: ಟೇಕ್‌ ಆಫ್‌ ವೇಳೆ ಆಂಬ್ಯುಲೆನ್ಸ್ ಹೆಲಿಕಾಪ್ಟರ್ ಪತನ; ನಾಲ್ವರು ಮೃ*ತ್ಯು

87th Kannada Sahitya Sammelana: ದೃಶ್ಯರಂಗ ತಂಡದವರಿಂದ ಸಿನಿಮಾಗಾಗಿ “ನಿಧಿ ’ ಮಾರಾಟ!

87th Kannada Sahitya Sammelana: ದೃಶ್ಯರಂಗ ತಂಡದವರಿಂದ ಸಿನಿಮಾಗಾಗಿ “ನಿಧಿ ’ ಮಾರಾಟ!

ಕಲಬುರಗಿ- ಮೈಸೂರಲ್ಲಿ ನಿಮ್ಹಾನ್ಸ್ ಮತ್ತು ಡಯಾಬಿಟಾಲಜಿ ಘಟಕ ಸ್ಥಾಪನೆಗೆ ಕ್ರಮ: ಸಿಎಂ ಭರವಸೆ

ಕಲಬುರಗಿ- ಮೈಸೂರಲ್ಲಿ ನಿಮ್ಹಾನ್ಸ್ ಮತ್ತು ಡಯಾಬಿಟಾಲಜಿ ಘಟಕ ಸ್ಥಾಪನೆಗೆ ಕ್ರಮ: ಸಿಎಂ ಭರವಸೆ

Nagpur: ʼಪುಷ್ಪ-2ʼ ನೋಡುತ್ತಿದ್ದಾಗಲೇ ಥಿಯೇಟರ್‌ಗೆ ಪೊಲೀಸರ ಎಂಟ್ರಿ; ಸ್ಮಗ್ಲರ್ ಬಂಧನ

Nagpur: ʼಪುಷ್ಪ-2ʼ ನೋಡುತ್ತಿದ್ದಾಗಲೇ ಥಿಯೇಟರ್‌ಗೆ ಪೊಲೀಸರ ಎಂಟ್ರಿ; ಸ್ಮಗ್ಲರ್ ಬಂಧನ

9

Mumbai: ಕಾರು ಢಿಕ್ಕಿ; ರಸ್ತೆ ಬದಿ ಆಡುತ್ತಿದ್ದ 4ರ ಬಾಲಕ ಸ್ಥಳದಲ್ಲೇ ಮೃ*ತ್ಯು

CT Ravi; ಚಿಕ್ಕಮಗಳೂರಿಗೆ ಬಂದ ಕೂಡಲೇ ಟೆಂಪಲ್‌ ರನ್ ಆರಂಭಿಸಿದ ಸಿ.ಟಿ.ರವಿ

CT Ravi; ಚಿಕ್ಕಮಗಳೂರಿಗೆ ಬಂದ ಕೂಡಲೇ ಟೆಂಪಲ್‌ ರನ್ ಆರಂಭಿಸಿದ ಸಿ.ಟಿ.ರವಿ

Minister Priyank Kharge stays away from Jayadeva Hospital inauguration ceremony

Jayadeva Hospital ಉದ್ಘಾಟನಾ ಸಮಾರಂಭದಿಂದ ದೂರ ಉಳಿದ ಸಚಿವ ಪ್ರಿಯಾಂಕ್ ಖರ್ಗೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Tragic: ಗಂಡನ ಮೇಲೆ ಅನುಮಾನ: ಹೆಂಡತಿ ನೇಣಿಗೆ ಶರಣು

Tragic: ಗಂಡನ ಮೇಲೆ ಅನುಮಾನ: ಹೆಂಡತಿ ನೇಣಿಗೆ ಶರಣು

4

Bengaluru: ಹಫ್ತಾ ನೀಡಲು ವ್ಯಾಪಾರಿಗೆ ಜೈಲಿನಿಂದಲೇ ಧಮ್ಕಿ!

Bengaluru: ಚಿನ್ನದಂಗಡಿಯಲ್ಲಿ 3 ಕೆಜಿ ಚಿನ್ನ ದೋಚಿದ ಮಹಿಳೆ

Bengaluru: ಚಿನ್ನದಂಗಡಿಯಲ್ಲಿ 3 ಕೆಜಿ ಚಿನ್ನ ದೋಚಿದ ಮಹಿಳೆ

Expensive wedding: ಭಾರತದ ಅದ್ಧೂರಿ ಮದುವೆ ಮೇಲೆ ಈಗ ಐಟಿ ಕಣ್ಣು!

Expensive wedding: ಭಾರತದ ಅದ್ಧೂರಿ ಮದುವೆ ಮೇಲೆ ಈಗ ಐಟಿ ಕಣ್ಣು!

virat-Hotel

BBMP Notice: ವಿರಾಟ್‌ ಕೊಹ್ಲಿ ಸಹ ಮಾಲಿಕತ್ವದ ರೆಸ್ಟೋರೆಂಟ್‌ಗೆ ಬಿಬಿಎಂಪಿ ನೋಟಿಸ್‌

MUST WATCH

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

ಹೊಸ ಸೇರ್ಪಡೆ

7

Malpe: ಮನೆ ಮನೆಗಳಲ್ಲಿ ಕ್ಯಾರೋಲ್‌ ಗಾಯನ

Turkey: ಟೇಕ್‌ ಆಫ್‌ ವೇಳೆ ಆಂಬ್ಯುಲೆನ್ಸ್ ಹೆಲಿಕಾಪ್ಟರ್ ಪತನ; ನಾಲ್ವರು ಮೃ*ತ್ಯು

Turkey: ಟೇಕ್‌ ಆಫ್‌ ವೇಳೆ ಆಂಬ್ಯುಲೆನ್ಸ್ ಹೆಲಿಕಾಪ್ಟರ್ ಪತನ; ನಾಲ್ವರು ಮೃ*ತ್ಯು

87th Kannada Sahitya Sammelana: ದೃಶ್ಯರಂಗ ತಂಡದವರಿಂದ ಸಿನಿಮಾಗಾಗಿ “ನಿಧಿ ’ ಮಾರಾಟ!

87th Kannada Sahitya Sammelana: ದೃಶ್ಯರಂಗ ತಂಡದವರಿಂದ ಸಿನಿಮಾಗಾಗಿ “ನಿಧಿ ’ ಮಾರಾಟ!

6

Mangaluru: ಕ್ರಿಸ್ಮಸ್‌ ಸಂಭ್ರಮ; ‘ಮಿನುಗು ತಾರೆ’ಗಳ ಮೆರುಗು

5

Health: ಶೀಘ್ರ ಕ್ಯಾನ್ಸರ್‌ ಪತ್ತೆ, ಶಸ್ತ್ರಚಿಕಿತ್ಸೆ ತಿಳಿವಳಿಕೆ ಯಾಕೆ ಮುಖ್ಯ?

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.