ಜಾಗತೀಕರಣದ ನೆರಳಲ್ಲಿ ರಕ್ಷಣಾತ್ಮಕ ಆಟ


Team Udayavani, May 2, 2017, 4:39 AM IST

02-ankana-1.jpg

ಜಾಗತೀಕರಣದ ಫ‌ಲವಾಗಿ ಉಂಟಾಗುವ ಸಮಸ್ಯೆಗಳನ್ನು ನಿಯಂತ್ರಿಸಲು ದೊಡ್ಡಣ್ಣ – ಸಣ್ಣಣ್ಣ ಎಂಬ ಭೇದವಿಲ್ಲದೆ ಎಲ್ಲ ದೇಶಗಳೂ ಒಂದಲ್ಲೊಂದು ತಂತ್ರಗಳನ್ನು ಅನುಸರಿಸುತ್ತಲೇ ಇರುತ್ತವೆ. ವಲಸೆ ನಿರ್ಬಂಧ ಅಂಥವುಗಳಲ್ಲಿ ಒಂದು. 

ಜಾಗತೀಕರಣವೆಂಬುದು ಪ್ರತಿನಿತ್ಯ ಕೇಳಿ ಬರುವ ಪರಿಚಿತ ಪದ. ಈ ಪ್ರಕ್ರಿಯೆ 16 ಮತ್ತು 17ನೇ ಶತಮಾನದಲ್ಲಿಯೂ ಚಲಾವಣೆಯಲ್ಲಿತ್ತು. ಆದರೆ ಅದು ಜಾಗತೀಕರಣವೆಂಬುದು ನಮಗೆ ತಿಳಿದದ್ದು ಇತ್ತೀಚೆಗಷ್ಟೇ. ಇದರ ಕುರುಹುಗಳು ಈಜಿಪ್ಟ್, ಬ್ಯಾಬಿಲೋನ್‌, ಗ್ರೀಕ್‌ ಮತ್ತು ರೋಮನ್‌ ನಾಗರಿಕತೆಯಲ್ಲಿ ಕಂಡುಬರುತ್ತವೆ. ತದನಂತರದ ವರುಷಗಳಲ್ಲಿ ಜಾಗತೀಕರಣದ ಹೆಜ್ಜೆ ಡಚ್ಚರು, ಬ್ರಿಟಿಷರು ಭಾರತಕ್ಕೆ ವ್ಯಾಪಾರ ಮಾಡಲು ಬರುವುದರೊಂದಿಗೆ ಪ್ರಾರಂಭಗೊಂಡಿತು. ಜನರು ಒಂದು ದೇಶದಿಂದ ಮತ್ತೂಂದು ದೇಶಕ್ಕೆ ವಲಸೆ ಹೋಗುವುದು ವ್ಯಾಪಾರದ ಉದ್ದೇಶದಿಂದ. ಬ್ರಿಟಿಷರು ಭಾರತಕ್ಕೆ ಬಂದ ಮುಖ್ಯ ಉದ್ದೇಶ ಇದೇ ಆಗಿದ್ದರೂ ನಂತರ ಅವರೇ ನಮ್ಮನ್ನು ಆಳಲು ಶುರು ಮಾಡಿದರು.  ವ್ಯಾಪಾರಕ್ಕಾಗಿ, ಜತೆಗೆ ಲಾಭದ ಗಳಿಕೆಗಾಗಿ ವಸ್ತುಗಳು, ಸರಕುಗಳು, ಶ್ರಮ ಮತ್ತು ಬಂಡವಾಳಗಳು ಒಂದು ರಾಷ್ಟ್ರದಿಂದ ಮತ್ತೂಂದು ರಾಷ್ಟ್ರಕ್ಕೆ ಚಲಿಸುವುದು ಮತ್ತು ವಲಸೆ ಹೋಗುವ ಪ್ರಕ್ರಿಯೆಗೆ ಜಾಗತೀಕರಣದ ರಂಗನ್ನು ನೀಡಿದ್ದು ಇತ್ತೀಚಿನ ವರುಷಗಳಲ್ಲಷ್ಟೇ. ನಮ್ಮ ಸುತ್ತಮುತ್ತಲಿನ ಪ್ರತಿಯೊಂದು ಆಗುಹೋಗುಗಳಿಗೆ ನಾವಿವತ್ತು ಜಾಗತೀಕರಣದ ಬಣ್ಣವನ್ನು ಹಚ್ಚುತ್ತಿದ್ದೇವಷ್ಟೇ.

ಜಾಗತೀಕರಣದ ಆರ್ಥಿಕ ನೀತಿಯನ್ವಯ ಸರಕುಗಳು, ಸೇವೆಗಳು ಮತ್ತು ಶ್ರಮದ ಚಲನೆ ಸರಾಗ. ಮೊದಲೆಲ್ಲ ವಿದ್ಯಾರ್ಜನೆಗೆ/ ಉದ್ಯೋಗಕ್ಕಾಗಿ ದೂರದೂರಿಗೆ ಅಥವಾ ಮತ್ತೂಂದು ದೇಶಕ್ಕೆ ಹೋಗುವುದೆಂದರೆ ಒಂದು ರೀತಿಯ ಅಳುಕು ನಮ್ಮಲ್ಲಿತ್ತು. ನಾವು ಹೋಗುವ ದೇಶ ಬೇರೆ, ಭಾಷೆ ಬೇರೆ, ಅಲ್ಲಿನ ರೀತಿನೀತಿ ಬೇರೆ, ಹವಾಮಾನ ಭಿನ್ನ ಎಂಬೆಲ್ಲ ಹಿಂಜರಿಕೆಗಳಿದ್ದವು. ಕಾಲಕ್ರಮೇಣ ಜನರು ಸುಶಿಕ್ಷಿತರಾದಂತೆ, ಜಾಗತೀಕರಣವನ್ನು ಅಪ್ಪಿಕೊಂಡ ಮೇಲೆ ವಲಸೆಯಲ್ಲಿನ ತಡೆಗೋಡೆ ಅಳಿದುಹೋಗಿದೆ. ಹಿಂದೆಲ್ಲ ಊರಲ್ಲೊಬ್ಬರೋ ಇಬ್ಬರೋ ಪರದೇಶಕ್ಕೆ ಹೊಗಿ ನೆಲೆಸುವುದರೆಂದರೆ ಅಥವಾ ಅಮೆರಿಕಕ್ಕೆ ಹೋಗಿ ಬಂದರೆಂದರೆ ಅದು ದೊಡ್ಡ ಸುದ್ದಿ. ಇವತ್ತು ಮನೆಮನೆಯಲ್ಲಿ ವಿದೇಶದಲ್ಲಿ ನೆಲೆಸಿರುವ  ಮಂದಿಯಿದ್ದಾರೆ. 

ಇವತ್ತು ಜಾಗತಿಕವಾಗಿ ನಮ್ಮನ್ನು ಉದ್ಯೋಗ ಮಾರುಕಟ್ಟೆಯಲ್ಲಿ ಮಾರ್ಕೆಟಿಂಗ್‌ ಮಾಡಿಕೊಳ್ಳುವುದರ ಜತೆಗೆ ಹೆಚ್ಚಿನ ಸಂಪತ್ತನ್ನು ಗಳಿಸಬೇಕೆಂಬ ನಮ್ಮ ಹಂಬಲ ಜಾಗತಿಕ ವಲಸೆಗೆ ಕಾರಣವಾಗಿದೆ. ಇದಕ್ಕೆ ಭಾರತ ಹೊರತಾಗಿಲ್ಲ. ನಮ್ಮ ದೇಶದಲ್ಲಿ ವಿದ್ಯಾರ್ಜನೆ ಮಾಡಿ ಬೇರೆ ದೇಶದಲ್ಲಿ ದುಡಿಯುವುದರಿಂದ ಲಾಭವೂ ಇದೆ. ಉದಾಹರಣೆಗೆ, 2015ರ ಸಾಲಿನಲ್ಲಿ ನಮ್ಮವರು ಸುಮಾರು 68.9 ಬಿಲಿಯನ್‌ ಡಾಲರ್‌ಗಳಷ್ಟು ಹಣವನ್ನು ವಿದೇಶದಲ್ಲಿ ದುಡಿದು ನಮ್ಮ ದೇಶಕ್ಕೆ ವಿದೇಶ ವಿನಿಮಯವಾಗಿ ಸಂಪಾದಿಸಿಕೊಟ್ಟಿದ್ದಾರೆ. ನಮ್ಮವರು ಬೇರೆ ದೇಶಕ್ಕೆ ಹೋಗುವುದರ ಜತೆಗೆ ಭಾರತವನ್ನು ಶ್ರೀಮಂತಗೊಳಿಸಿದ್ದಾರೆ. ನಮ್ಮವರು ಇಲ್ಲಿ ಕಲಿತು ಹೊರ ದೇಶದಲ್ಲಿ ದುಡಿದರೆ ಅವರ ಸೇವೆ ನಮ್ಮ ದೇಶಕ್ಕೆ ಸಿಗದಿರುವುದೇ ನಮಗಾಗುವ ನಷ್ಟ. ಜಾಗತಿಕವಾಗಿ ಅವಕಾಶವಿರುವಾಗ ವಿದೇಶಕ್ಕೆ ಹೋಗುವುದರಲ್ಲಿ ತಪ್ಪೇನಿಲ್ಲ. ಇವತ್ತು ಹೆತ್ತವರಿಗೆ ಮಕ್ಕಳು ವಿದೇಶದಲ್ಲಿದ್ದಾರೆಂದರೆ ಅದು ಪ್ರತಿಷ್ಠೆಯ ಸಂಕೇತವೂ ಆಗಿದೆ. ಮಕ್ಕಳು ಹತ್ತಿರವಿಲ್ಲದಿದ್ದರೂ ಪರವಾಗಿಲ್ಲ, ಹೇಳಿಕೊಳ್ಳಲಿಕ್ಕಿದೆ. ದೇಶದೊಳಗಿದ್ದುಕೊಂಡು ಸಾಧಿಸಲು ಅಸಾಧ್ಯವಾದುದನ್ನು ಜಾಗತಿಕವಾಗಿ ಸಾಧಿಸಬಹುದಾಗಿದೆ ಇವತ್ತು. ಇಲ್ಲದಿದ್ದರೆ ಮೈಕ್ರೋಸಾಫ್ಟ್ನ ಸತ್ಯ ನಾದೆಳ್ಲ, ಗೂಗಲ್‌ನ ಸುಂದರ ಪಿಚೈ, ಪೆಪ್ಸಿಕೋದ ಇಂದ್ರಾಣಿ ನೂಯಿಯವರಂತಹ ಪ್ರತಿಭೆಗಳು ಜಾಗತಿಕವಾಗಿ ಪ್ರಸಿದ್ಧಿ ಪಡೆಯುತ್ತಿರಲಿಲ್ಲವೇನೋ?

ಜಾಗತೀಕರಣದ ಮುಕ್ತ ಆರ್ಥಿಕ ವಾತಾವರಣದಲ್ಲಿ ನಾವು ಜಾಗತಿಕವಾಗಿ ನಮ್ಮ ಸಾಮರ್ಥ್ಯವನ್ನು ಒರೆಗೆ ಹಚ್ಚಲು ಅವಕಾಶವಿದೆ. ವಸುದೈವ ಕುಟುಂಬಕಮ್‌ ಎಂಬ ಮಾತಿಗೆ ಮನ್ನಣೆಯಂತೆ ದೇಶ-ದೇಶಗಳೊಳಗಿನ ವಲಸೆ ಜಾಗತೀಕರಣದ ಪ್ರಕ್ರಿಯೆಗೆ ಹೆದ್ದಾರಿ.
ಇತ್ತೀಚಿನ ದಿನಗಳಲ್ಲಿ, ಅದರಲ್ಲೂ ಅಮೆರಿಕದಲ್ಲಿ ಡೊನಾಲ್ಡ್‌ ಟ್ರಂಪ್‌ ಅಧ್ಯಕ್ಷ ಪದವಿಯನ್ನು ಅಲಂಕರಿಸಿದ ಬೆನ್ನಲ್ಲೇ ಅಮೆರಿಕ ಸಹಿತ ಜಗತ್ತಿನ ರಾಷ್ಟ್ರಗಳು ಶ್ರಮದ – ಕಾರ್ಮಿಕರ ವಲಸೆಗೆ ಅನೇಕ ಪ್ರತಿರೋಧಗಳನ್ನು ಒಡ್ಡುತ್ತಿರುವುದು ಹೆಚ್ಚಿದೆ. ಇತ್ತೀಚೆಗೆ ಅಮೆರಿಕ, ಬ್ರಿಟನ್‌, ಸಿಂಗಾಪುರದಂತಹ ಮುಂದುವರಿದ ರಾಷ್ಟ್ರಗಳು ವೀಸಾ ನಿಯಮಗಳನ್ನು ಕಠಿಣಗೊಳಿಸಿದ್ದನ್ನು ಇಲ್ಲಿ ನೆನಪಿಸಿಕೊಳ್ಳಬಹುದು. ಆಸ್ಟ್ರೇಲಿಯದಲ್ಲೂ ವೀಸಾ ನಿಯಮ ಬಿಗಿಯಾಗಿದೆ. ಜಾಗತಿಕ ಮಟ್ಟದಲ್ಲಿ ಪರಿಣಾಮ ಬೀರಬಲ್ಲ ವೀಸಾ ನಿಯಮಗಳನ್ನು ಅಮೆರಿಕ, ಬ್ರಿಟನ್‌ ಸರಕಾರಗಳು ಜಾರಿಗೊಳಿಸಿವೆ. ಈ ನಿಲುವಿನ ಉದ್ದೇಶ ತಮ್ಮ ನಾಗರಿಕರ ಹಿತಾಸಕ್ತಿಗಳನ್ನು ಸಂರಕ್ಷಿಸುವುದು. ವಲಸೆ ನೀತಿ ಕಠಿಣವಾದರೆ ಹೊರದೇಶಗಳಿಂದ ಉದ್ಯೋಗಿಗಳು ಸಿಗದ ಹಿನ್ನೆಲೆಯಲ್ಲಿ ಅನಿವಾರ್ಯವಾಗಿ ಸ್ಥಳೀಯರ ಮೊರೆಹೋಗಬೇಕಾಗುತ್ತದೆ. “ಮೊದಲು ಅಮೆರಿಕ’, “ಮೇಡ್‌ ಇನ್‌ ಅಮೆರಿಕವನ್ನೇ ಕೊಳ್ಳಿರಿ’, “ಅಮೆರಿಕ ಬಿಟ್ಟು ತೊಲಗಿ’ ಎಂಬೆಲ್ಲ ಘೋಷಣೆಗಳ ಮರ್ಮ ದೇಶಿಗರನ್ನು ಸಂರಕ್ಷಿಸುವುದು. ವೀಸಾ ನಿಯಮವನ್ನು ಬಿಗಿಗೊಳಿಸುವ ಮೂಲಕ ಟ್ರಂಪ್‌ ಆಡಳಿತವು ಭಾರತೀಯ ಐಟಿ ಉದ್ಯಮಕ್ಕೆ ಭಾರೀ ಆಘಾತ ನೀಡಿದೆ. ಸಿಂಗಾಪುರವೂ ಭಾರತೀಯ ಐಟಿ ಉದ್ಯೋಗಿಗಳಿಗೆ ಕೆಲಸದ ವೀಸಾ ನಿರಾಕರಿಸಿ ಸ್ಥಳೀಯ ಉದ್ಯೋಗಿಗಳಿಗೆ ಆದ್ಯತೆ ನೀಡಬೇಕೆಂದು ಐಟಿ ಕಂಪೆನಿಗಳಿಗೆ ಸೂಚಿಸಿದೆ. ಭಾರತದ ಎಚ್‌ಸಿಎಲ್‌, ಟಿಸಿಎಸ್‌, ಇನ್ಫೋಸಿಸ್‌, ವಿಪ್ರೋ, ಎಲ್‌ ಆಂಡ್‌ಟಿ, ಇನ್ಫೋಟೆಕ್‌ ಮುಂತಾದ ಐಟಿ ಕಂಪೆನಿಗಳು ಸಿಂಗಾಪುರದಲ್ಲಿ ಕಚೇರಿಗಳನ್ನು ಹೊಂದಿವೆ. ಅಲ್ಲಿನ ಹೆಚ್ಚಿನ ಉದ್ಯೋಗಿಗಳು ಭಾರತೀಯರು. ಸಿಂಗಾಪುರ ಸರಕಾರದ ನೀತಿಯಿಂದಾಗಿ ಅಲ್ಲಿನ ಭಾರತೀಯ ಐಟಿ ಕಂಪೆನಿಗಳು ತೊಂದರೆ ಅನುಭವಿಸಲಿವೆ. ಸ್ಥಳೀಯ ಉದ್ಯೋಗಿಗಳನ್ನು ನೇಮಿಸಿಕೊಂಡು ಸಿಂಗಾಪುರದಲ್ಲಿ ಉದ್ಯಮ ನಡೆಸುವುದು ಕಷ್ಟ. ಭಾರತದ ತಂತ್ರಜ್ಞರ ಗುಣಮಟ್ಟಕ್ಕೆ ಸಮನಾಗಿ ಅವರು ಕೆಲಸ ಮಾಡುವುದಿಲ್ಲ ಎಂದು ತಜ್ಞರ ಅಭಿಪ್ರಾಯ.

ಆದರೆ ಸ್ಥಳೀಯರಲ್ಲಿ ಅಗತ್ಯವಿರುವ ಕೌಶಲವಿಲ್ಲದಿದ್ದರೆ ಮುಂದೊಂದು ದಿನ ಮತ್ತೆ ವಿದೇಶಿ ಉದ್ಯೋಗಿಗಳ ಮೇಲಿನ ಅವಲಂಬನೆ ಅನಿವಾರ್ಯವಾಗಲಿದೆಯೇನೋ? ಕೌಶಲವಿದ್ದರೆ ಅಮೆರಿಕ ಅಲ್ಲದಿದ್ದರೆ ಬೇರೆ ದೇಶ. ಸ್ಕಿಲ್‌ ಇದ್ದರೆ ನೂರಾರು ದಾರಿಗಳಿವೆ. ದೇಶದೊಳಗೆ ಸ್ಥಳೀಯ ಉದ್ಯೋಗಿಗಳಿಂದ ಅಸಾಧ್ಯವಾದುದರಿಂದಲೇ ಅಲ್ಲವೇ ಅಮೆರಿಕದಂತಹ ರಾಷ್ಟ್ರಗಳ ಕಂಪೆನಿಗಳು ವಿದೇಶಿ ಉದ್ಯೋಗಿಗಳನ್ನು ಅವಲಂಬಿಸಿದ್ದು? ಈ ಸ್ಥಿತಿಯಲ್ಲಿ ಬೇರೆ ದೇಶದ ಉದ್ಯೋಗಿಗಳ ವಲಸೆಯನ್ನು ನಿರ್ಬಂಧಿಸುವುದು ಎಷ್ಟು ಸರಿ? ಇದು ಎಷ್ಟು ದಿನ ಮುಂದುವರಿಯಬಹುದು? ಒಂದೆಡೆ ಉದಾರೀಕರಣ, ಮುಕ್ತ ವ್ಯಾಪಾರ, ನಿರ್ಬಂಧವಿಲ್ಲದ ಸರಕು ಸೇವೆಯ ವಲಸೆ ಎಂದೆಲ್ಲ ಆರ್ಥಿಕ ನೀತಿಗೆ ಉತ್ತೇಜನ. ಮತ್ತೂಂದೆಡೆ ವಲಸೆಗೆ ಕಠಿಣ ನಿಯಮಾವಳಿಗಳು- ಹೀಗೆ ಜಾಗತೀಕರಣ ತದ್ವಿರುದ್ಧ ನಡೆಯನ್ನು ಕಾಣುತ್ತಿದೆ. ಅಮೆರಿಕದಂತಹ ರಾಷ್ಟ್ರಗಳು ವೀಸಾ ನಿಯಮಾವಳಿಗಳನ್ನು ಕಠಿಣಗೊಳಿಸಿದ ಬೆನ್ನಲ್ಲೇ ಭಾರತವು ಆರ್ಥಿಕತೆಯ ವೇಗ ಹೆಚ್ಚಿಸಲು ಉದ್ಯೋಗದ ನಿಮಿತ್ತ ಪಡೆಯುವ ವೀಸಾ ನೀತಿಯನ್ನು ಸರಳಗೊಳಿಸಿ ವಿದೇಶೀ ಹೂಡಿಕೆದಾರರಿಗೆ ರತ್ನಗಂಬಳಿಯ ಸ್ವಾಗತ ಕೋರಲು ಪ್ರಯತ್ನ ನಡೆಸಿದೆ. ಮುಕ್ತ ವ್ಯಾಪಾರ, ವ್ಯಾಪಾರ ವ್ಯವಹಾರ ಸರಾಗ ಅನ್ನುವುದು ಬಾಯಿಮಾತಿನಲ್ಲಿ ಮಾತ್ರ; ಅನುಸರಣೆಯಲ್ಲಿ ಸಂರಕ್ಷಣೆಯ ಆಟ. ಜಾಗತಿಕವಾಗಿ ನಮ್ಮನ್ನು ನಾವು ತೆರೆದಿರಿಸುವಾಗ ಎದುರಾಗಬಹುದಾದ ಸಮಸ್ಯೆಗಳನ್ನು ಪರಿಹರಿಸಿಕೊಳ್ಳುವುದಕ್ಕೆ ದೊಡ್ಡಣ್ಣ -ಸಣ್ಣಣ್ಣ ಎಂಬ ಬೇಧವಿಲ್ಲದೆ ಜಗತ್ತಿನ ರಾಷ್ಟ್ರಗಳು ಒಂದಲ್ಲೊಂದು ಉಪಾಯವನ್ನು ಹೂಡುತ್ತಲೇ ಇರುತ್ತವೆ. ಅಂಥ ತಂತ್ರಗಳ ಪಟ್ಟಿಯಲ್ಲಿ ವಿದೇಶಿಯರನ್ನು ನಿರ್ಬಂಧಿಸುವ ವಲಸೆ ನೀತಿ ಹೊಸತಷ್ಟೇ. ಅದನ್ನು ನಾವು ಮೆಟ್ಟಿ ನಿಂತರಷ್ಟೇ ಸ್ಪರ್ಧೆಯಲ್ಲಿ ಗೆಲ್ಲಬಹುದು.

ರಾಘವೇಂದ್ರ ರಾವ್‌, ಬೈಲ್‌

ಟಾಪ್ ನ್ಯೂಸ್

WTC 25; India’s Test Championship finals road gets tough; Here’s the calculation

WTC 25; ಕಠಿಣವಾಯ್ತು ಭಾರತದ ಟೆಸ್ಟ್‌ ಚಾಂಪಿಯನ್‌ಶಿಪ್‌ ಫೈನಲ್‌ ಹಾದಿ; ಹೀಗಿದೆ ಲೆಕ್ಕಾಚಾರ

Supreme Court: ಬಹುಸಂಖ್ಯಾತರಂತೆ ದೇಶ ನಡೀಬೇಕು ಎಂದಿದ್ದ ಜಡ್ಜ್ಗೆ ಕೊಲಿಜಿಯಂ ಛೀಮಾರಿ

Supreme Court: ಬಹುಸಂಖ್ಯಾತರಂತೆ ದೇಶ ನಡೀಬೇಕು ಎಂದಿದ್ದ ಜಡ್ಜ್ಗೆ ಕೊಲಿಜಿಯಂ ಛೀಮಾರಿ

Jammu – Kashmir: ಬೆಳ್ಳಂಬೆಳಗ್ಗೆ ಕುಲ್ಗಾಮ್ ನಲ್ಲಿ ಎನ್‌ಕೌಂಟರ್‌… 5 ಭಯೋತ್ಪಾದಕರು ಹತ

Encounter: ಬೆಳ್ಳಂಬೆಳಗ್ಗೆ ಜಮ್ಮು ಕಾಶ್ಮೀರದಲ್ಲಿ ಗುಂಡಿನ ದಾಳಿ; 5 ಭಯೋತ್ಪಾದಕರು ಹತ

22 Villages: ಡೋಕ್ಲಾಂನಲ್ಲಿ ಚೀನದಿಂದ 22 ಗ್ರಾಮಗಳ ನಿರ್ಮಾಣ?

22 Villages: ಡೋಕ್ಲಾಂನಲ್ಲಿ ಚೀನದಿಂದ 22 ಗ್ರಾಮಗಳ ನಿರ್ಮಾಣ?

Vijay Mallya: ಮಲ್ಯ 14,000 ಕೋ. ರೂ. ಆಸ್ತಿ ಬ್ಯಾಂಕುಗಳಿಗೆ ವಾಪಸ್‌

Vijay Mallya: ಮಲ್ಯ 14,000 ಕೋ. ರೂ. ಆಸ್ತಿ ಬ್ಯಾಂಕುಗಳಿಗೆ ವಾಪಸ್‌

Mangalore_Airport-NewTerminal

Mangaluru AirPort: ಬಜಪೆ ವಿಮಾನ ನಿಲ್ದಾಣ ರನ್‌ವೇಗಿಲ್ಲ ರೇಸಾ ಸುರಕ್ಷೆ

H-1B visa: ಎಚ್‌1ಬಿ ವೀಸಾ ನಿಯಮ ಸಡಿಲಿಕೆ… ಭಾರತೀಯ ಟೆಕ್ಕಿಗಳಿಗೆ ಸಂತಸ

H-1B visa: ಎಚ್‌1ಬಿ ವೀಸಾ ನಿಯಮ ಸಡಿಲಿಕೆ… ಭಾರತೀಯ ಟೆಕ್ಕಿಗಳಿಗೆ ಸಂತಸ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Kannada Sahitya Sammelana: ಕಾವೇರಿ ಹೊನಲಲ್ಲಿ ಕನ್ನಡ ಉಕ್ಕಲಿ…

Kannada Sahitya Sammelana: ಕಾವೇರಿ ಹೊನಲಲ್ಲಿ ಕನ್ನಡ ಉಕ್ಕಲಿ…

One Nation, One Election;ಹಣ, ಸಮಯ ಉಳಿಯಬಹುದು…ಮುಂದಾಗುವ ಸಮಸ್ಯೆಗಳಿಗೆ ಪರಿಹಾರ ಇದೆಯಾ?

One Nation, One Election;ಹಣ, ಸಮಯ ಉಳಿಯಬಹುದು…ಮುಂದಾಗುವ ಸಮಸ್ಯೆಗಳಿಗೆ ಪರಿಹಾರ ಇದೆಯಾ?

8

Year ender: ಈ ವರ್ಷ ನಕ್ಕು ನಗಿಸಿ ಸೋಶಿಯಲ್‌ ಮೀಡಿಯಾದಲ್ಲಿ ವೈರಲ್‌ ಆದ ವಿಡಿಯೋಗಳಿವು..

ಅಪಾಯಕ್ಕೆ ಎದೆಯೊಡ್ಡಿ ವಕ್ಫ್ ವರದಿ ಮಾಡಿದ್ದು ನಾನು, ಅದರಿಂದ ಹಣ ಮಾಡಿದ್ದು ಅನೇಕರು!

ಅಪಾಯಕ್ಕೆ ಎದೆಯೊಡ್ಡಿ ವಕ್ಫ್ ವರದಿ ಮಾಡಿದ್ದು ನಾನು, ಅದರಿಂದ ಹಣ ಮಾಡಿದ್ದು ಅನೇಕರು!

ಕರಾವಳಿಯಲ್ಲಿ ಹೈಕೋರ್ಟ್‌ ಪೀಠ ಸ್ಥಾಪನೆ ­ಅತ್ಯಗತ್ಯ

ಕರಾವಳಿಯಲ್ಲಿ ಹೈಕೋರ್ಟ್‌ ಪೀಠ ಸ್ಥಾಪನೆ ­ಅತ್ಯಗತ್ಯ

MUST WATCH

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

udayavani youtube

ಮನೆ ತೊರೆದಿದ್ದ ವ್ಯಕ್ತಿ 14 ವರ್ಷಗಳ ಬಳಿಕ ಮರಳಿ ಗೂಡಿಗೆ.

ಹೊಸ ಸೇರ್ಪಡೆ

WTC 25; India’s Test Championship finals road gets tough; Here’s the calculation

WTC 25; ಕಠಿಣವಾಯ್ತು ಭಾರತದ ಟೆಸ್ಟ್‌ ಚಾಂಪಿಯನ್‌ಶಿಪ್‌ ಫೈನಲ್‌ ಹಾದಿ; ಹೀಗಿದೆ ಲೆಕ್ಕಾಚಾರ

Supreme Court: ಬಹುಸಂಖ್ಯಾತರಂತೆ ದೇಶ ನಡೀಬೇಕು ಎಂದಿದ್ದ ಜಡ್ಜ್ಗೆ ಕೊಲಿಜಿಯಂ ಛೀಮಾರಿ

Supreme Court: ಬಹುಸಂಖ್ಯಾತರಂತೆ ದೇಶ ನಡೀಬೇಕು ಎಂದಿದ್ದ ಜಡ್ಜ್ಗೆ ಕೊಲಿಜಿಯಂ ಛೀಮಾರಿ

Jammu – Kashmir: ಬೆಳ್ಳಂಬೆಳಗ್ಗೆ ಕುಲ್ಗಾಮ್ ನಲ್ಲಿ ಎನ್‌ಕೌಂಟರ್‌… 5 ಭಯೋತ್ಪಾದಕರು ಹತ

Encounter: ಬೆಳ್ಳಂಬೆಳಗ್ಗೆ ಜಮ್ಮು ಕಾಶ್ಮೀರದಲ್ಲಿ ಗುಂಡಿನ ದಾಳಿ; 5 ಭಯೋತ್ಪಾದಕರು ಹತ

22 Villages: ಡೋಕ್ಲಾಂನಲ್ಲಿ ಚೀನದಿಂದ 22 ಗ್ರಾಮಗಳ ನಿರ್ಮಾಣ?

22 Villages: ಡೋಕ್ಲಾಂನಲ್ಲಿ ಚೀನದಿಂದ 22 ಗ್ರಾಮಗಳ ನಿರ್ಮಾಣ?

Vijay Mallya: ಮಲ್ಯ 14,000 ಕೋ. ರೂ. ಆಸ್ತಿ ಬ್ಯಾಂಕುಗಳಿಗೆ ವಾಪಸ್‌

Vijay Mallya: ಮಲ್ಯ 14,000 ಕೋ. ರೂ. ಆಸ್ತಿ ಬ್ಯಾಂಕುಗಳಿಗೆ ವಾಪಸ್‌

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.