ವಿಶ್ವಾದ್ಯಂತ ಹೆಚ್ಚುತ್ತಿದೆ ಇ-ಬಸ್‌ಗಳಿಗೆ ಬೇಡಿಕೆ


Team Udayavani, Feb 26, 2023, 8:05 AM IST

ವಿಶ್ವಾದ್ಯಂತ ಹೆಚ್ಚುತ್ತಿದೆ ಇ-ಬಸ್‌ಗಳಿಗೆ ಬೇಡಿಕೆ

ಕಳೆದ ಸುಮಾರು ಮೂರು ವರ್ಷಗಳಿಂದ ಇ- ಬಸ್‌ಗಳು ವಿಶ್ವದಾದ್ಯಂತ ಪ್ರಮುಖ ನಗರಗಳಲ್ಲಿ ಓಡಾಡುತ್ತಿವೆ. ಜಗತ್ತನ್ನೇ ಕಂಗೆಡಿಸಿದ ಕೊರೊನಾ ಸಾಂಕ್ರಾಮಿಕದ “ಪಾಸಿಟಿವ್‌ ಎಫೆಕ್ಟ್’ ಇದು ಎಂದರೆ ತಪ್ಪಾಗಲಾರದು. ಯಾಕೆಂದರೆ ಅಲ್ಲಿಯವರೆಗೆ ಹೊಗೆಯ ವಾತಾವರಣದಲ್ಲೇ ಬದುಕುತ್ತಿದ್ದ ನಾವು ಲಾಕ್‌ಡೌನ್‌ನಲ್ಲಿ ಮೊದಲ ಬಾರಿಗೆ ಸ್ವತ್ಛಗೊಂಡ ಪರಿಸರವನ್ನು ನೋಡಿದೆವು. ಇದರ ಪರಿಣಾಮವೇ ಭೂ ಸಾರಿಗೆ ವ್ಯವಸ್ಥೆಯಲ್ಲಿ ಎಲೆಕ್ಟ್ರಿಕ್‌ ವಾಹನ(ಇವಿ) ಕ್ರಾಂತಿಕಾರಿ ಹೆಜ್ಜೆಯನ್ನಿಡಲು ಪ್ರಾರಂಭಿಸಿತು. ಯುರೋಪ್‌ನ ಬಹುತೇಕ ಭಾಗಗಳಲ್ಲಿ ಸಾರ್ವಜನಿಕ ಸಾರಿಗೆಗೆ ಇವಿಗಳನ್ನು ಬಳಸಲಾಗುತ್ತಿದೆ. ಸಹಜವಾಗಿಯೇ ಇಲ್ಲಿನ ಮಾರುಕಟ್ಟೆಗಳಲ್ಲಿ ಇವಿಗಳಿಗೆ ಬೇಡಿಕೆ ಹೆಚ್ಚಾಗಿದೆ. ಇತ್ತೀಚಿನ ವರ್ಷಗಳಲ್ಲಿ ಏಷ್ಯಾ- ಪೆಸಿಫಿಕ್‌ ಭಾಗದ ರಾಷ್ಟ್ರಗಳಲ್ಲೂ ಸಾರ್ವಜನಿಕ ಸಾರಿಗೆಗೆ ಎಲೆಕ್ಟ್ರಿಕ್‌ ವಾಹನಗಳನ್ನು ಬಳಸುವ ಪ್ರಕ್ರಿಯೆ ಆರಂಭಗೊಂಡಿದ್ದು ಈ ರಾಷ್ಟ್ರಗಳೂ ಕೂಡ ಇವಿ ಬಸ್‌ಗಳಿಗೆ ಬಹುದೊಡ್ಡ ಮಾರುಕಟ್ಟೆ ಕ್ಷೇತ್ರವಾಗಿ ಬೆಳೆಯುತ್ತಿವೆ.

ಏನು?
ಕೊರೊನಾ ಸಾಂಕ್ರಾಮಿಕ ಹೆಚ್ಚಿದಾಗ ವಿಶ್ವದ ಪ್ರತಿಯೊಂದು ದೇಶಗಳು ಲಾಕ್‌ಡೌನ್‌ ಘೋಷಿಸಿದ್ದವು. ಕೈಗಾರಿಕೆಗಳು, ವಾಹನಗಳು ಹೊರಸೂಸುವ ಭಾರೀ ಪ್ರಮಾಣದ ಹೊಗೆಯಿಂದಾಗಿ ಎಂದೂ ಕಾಣದ ದೂರದ ಬೆಟ್ಟಗಳನ್ನು ಈ ಸಂದರ್ಭದಲ್ಲಿ ಹೆಚ್ಚಿನವರು ನೋಡಿದ್ದರು. ವಾಯುಮಾಲಿನ್ಯದಿಂದ ತತ್ತರಿಸಿ ಹೋಗಿದ್ದ ವಿಶ್ವದ ಹಲವಾರು ನಗರಗಳ ವಾತಾವರಣ ತಿಳಿಯಾಗಿ ಒಂದಿಷ್ಟು ಮಾಲಿನ್ಯರಹಿತ ಗಾಳಿಯನ್ನು ಉಸಿರಾಡಲು ನಗರವಾಸಿಗಳಿಗೆ ಸಾಧ್ಯವಾಗಿತ್ತು. ಹೀಗೆ ಕೊರೊನಾ ಸಾಂಕ್ರಾಮಿಕ ಪರೋಕ್ಷವಾಗಿ ನಮ್ಮೊಳಗಿನ ಪರಿಸರ ಪ್ರೇಮವನ್ನು ಜಾಗೃತಗೊಳಿಸಿತ್ತು. ಹೀಗಾಗಿ ನಿಧಾನವಾಗಿ ಎಲ್ಲರ ಮನಸ್ಸು ಹೊಗೆ ಸೂಸುವ ವಾಹನಗಳನ್ನು ಬಿಟ್ಟು ಎಲೆಕ್ಟ್ರಿಕ್‌ ಅಥವಾ ಕಡಿಮೆ ಮಾಲಿನ್ಯ ಉಂಟುಮಾಡುವ ವಾಹನಗಳತ್ತ ಹೊರಳತೊಡಗಿತು. ಇದರ ಪರಿಣಾಮವಾಗಿ ಸಾರ್ವಜನಿಕ ಸಾರಿಗೆ ಕ್ಷೇತ್ರದಲ್ಲಿ ಎಲೆಕ್ಟ್ರಿಕ್‌ ಬಸ್‌ಗಳು ರಸ್ತೆಗಿಳಿಯಲು ಪ್ರಾರಂಭಿಸಿದವು.

ಯಾಕೆ?
ಎಲೆಕ್ಟ್ರಿಕ್‌ ವಾಹನಗಳು ಹೊಸದಲ್ಲ. 1960ರಿಂದಲೇ ಇದು ವಿಶ್ವದ ಹಲವೆಡೆ ರಸ್ತೆಗಳಿಗೆ ಇಳಿದಿತ್ತು. ಕೆಲ ವೊಂದು ಸಮಸ್ಯೆಗಳ ಕಾರಣದಿಂದ ಅದು ಜನಸಾ ಮಾನ್ಯರಿಂದ ದೂರವಾಗಿತ್ತು. ಆದರೆ ಇದರ ಬಗ್ಗೆ ಹೆಚ್ಚಿನವರು ಯೋಚಿಸಲು ಪ್ರಾಂಭಿಸಿದ್ದು 2011ರ ಬಳಿಕ. ಇಂಧನ ವಾಹನಗಳ ಬಳಕೆಯಿಂದ ಪರಿಸರದ ಮೇಲಾಗುವ ಪರಿಣಾಮ ಒಂದು ಪ್ರಮುಖ ಕಾರಣವಾದರೆ ಎಲೆಕ್ಟ್ರಿಕ್‌ ವಾಹನಗಳ ತಂತ್ರಜ್ಞಾನ ದಲ್ಲಾದ ಮಹತ್ತರ ಬೆಳವಣಿಗೆ ಇನ್ನೊಂದು ಕಾರಣ.

ಕಾರಣ?
ಕೋವಿಡ್‌ ಸಾಂಕ್ರಾಮಿಕದ ಬಳಿಕ ವಿಶ್ವದಾದ್ಯಂತ ಸಾರ್ವಜನಿಕ ಸಾರಿಗೆ ಬಳಕೆ ಪ್ರಮಾಣ ಕಡಿಮೆಯಾಗಿದೆ. ಅಮೆರಿಕನ್‌ ಪಬ್ಲಿಕ್‌ ಟ್ರಾನ್ಸ್‌ಪೊàಟೇìಶನ್‌ ಅಸೋಸಿಯೇಶನ್‌ ಪ್ರಕಾರ 2020ರ ವೇಳೆಗೆ ಸಾರ್ವಜನಿಕ ವಾಹನಗಳ ಬಳಕೆ ಶೇ.80ರಷ್ಟು ಕಡಿಮೆಯಾಗಿ ಖಾಸಗಿ ವಾಹನ ಬಳಕೆದಾರರು ಹೆಚ್ಚಾಗಿದ್ದಾರೆ. ಈ ನಡುವೆ ನಗರ ಸಾರಿಗೆ ಬಸ್‌ಗಳು ಹೆಚ್ಚಿನ ಪ್ರಮಾಣದಲ್ಲಿ ಇಂಗಾಲದ ಡೈ ಆಕ್ಸೆ„ಡ್‌ ಅನ್ನು ಹೊರಸೂಸುತ್ತಿರುವುದು ವಾಯು ತಪಾಸಣೆ ವೇಳೆ ತಿಳಿಯಿತು. ಇದಕ್ಕಾಗಿ ಯುಎನ್‌ಇಪಿ (ಯುನೈಟೆಡ್‌ ನೇಶನ್‌ ಎನ್ವಿರಾನ್‌ಮೆಂಟ್‌ ಪ್ರೋಗ್ರಾಮ್‌) ಏಷ್ಯಾ, ಲ್ಯಾಟಿನ್‌ ಅಮೆರಿಕ, ಆಫ್ರಿಕಾದ 20 ಪ್ರಮುಖ ನಗರಗಳಲ್ಲಿ ಇ- ಬಸ್‌ ಸಹಿತ ಹೊಗೆ ಮುಕ್ತ ಅಥವಾ ಕಡಿಮೆ ಹೊಗೆ ಸೂಸುವ ವಾಹನಗಳನ್ನು ಓಡಿಸಲು ಯೋಜನೆ ಹಾಕಿಕೊಂಡಿತು.

ಪರಿಣಾಮ?
2017ಕ್ಕೆ ಹೋಲಿಸಿದರೆ 2018ರಲ್ಲಿ ಯುರೋಪ್‌ನ ಮಾರುಕಟ್ಟೆಯಲ್ಲಿ ಎಲೆಕ್ಟ್ರಿಕ್‌ ಬಸ್‌ಗಳಿಗೆ ಬೇಡಿಕೆ ಶೇ.48ರಷ್ಟು ಹೆಚ್ಚಾಗಿತ್ತು. 2019ರಲ್ಲಿ ಪಶ್ಚಿಮ ಯುರೋಪ್‌ ಭಾಗದಲ್ಲಿ ಎಲೆಕ್ಟ್ರಿಕ್‌ ಬಸ್‌ಗಳ ನೋಂದಣಿ ಸಂಖ್ಯೆ ಮೂರು ಪಟ್ಟು ಹೆಚ್ಚಾಯಿತು. ಇದೇ ಭಾಗದಲ್ಲಿ 2020ರಲ್ಲಿ ಬ್ಯಾಟರಿ ಎಲೆಕ್ಟ್ರಿಕ್‌ ಬಸ್‌ ಮಾರುಕಟ್ಟೆ ಪ್ರಮಾಣ ಶೇ.22ರಷ್ಟು ಹೆಚ್ಚಾಗಿದ್ದು, 2,062 ಇ- ಬಸ್‌ಗಳನ್ನು ನೋಂದಾಯಿಸಲಾಗಿತ್ತು. 2020ರಲ್ಲಿ ಆರು ಯುರೋಪಿಯನ್‌ ರಾಷ್ಟ್ರಗಳು ಬ್ಯಾಟರಿ ಎಲೆಕ್ಟ್ರಿಕ್‌ ಜತೆಗೆ ಇಂಧನ ಸೆಲ್‌ ಬಸ್‌ (battery-electric plus fuel cell buses)ಗಳನ್ನು ನೋಂದಾಯಿಸಿವೆ.

ಎಲ್ಲಿ?
ಇವಿಗಳ ಮೊದಲ ಹೆಜ್ಜೆಯಾಗಿ ಕಾರುಗಳು ಬಳಕೆಗೆ ಬಂದಿದ್ದರೂ ಜನಸಾಮಾನ್ಯರನ್ನು ತಲುಪುವುದು ಸುಲಭಸಾಧ್ಯವೇನಲ್ಲ. 2022ರ ಅಂಕಿಅಂಶಗಳ ಪ್ರಕಾರ ವಿಶ್ವದಲ್ಲಿ ಶೇ.68ಕ್ಕಿಂತಲೂ ಹೆಚ್ಚಿನ ಜನರು ಸಾರ್ವಜನಿಕ ಸಾರಿಗೆಯನ್ನು ಬಳಸುತ್ತಿದ್ದಾರೆ. ಹೀಗಾಗಿ ಮೊದಲು ಸಾರ್ವಜನಿಕ ಸಾರಿಗೆ ವ್ಯವಸ್ಥೆಯಲ್ಲಿ ಎಲೆಕ್ಟ್ರಿಕ್‌ ಬಸ್‌ಗಳನ್ನು ಪರಿಚಯಿಸಲು ಹಲವು ದೇಶಗಳು ಮುಂದಾಗಿವೆ. ಚೀನದಲ್ಲಿ ಪ್ರಾರಂಭವಾದ ಇದು ಪ್ರಪಂಚಕ್ಕೆ ತೆರೆದುಕೊಳ್ಳಲು ಹಲವು ವರ್ಷಗಳನ್ನೇ ತೆಗೆದುಕೊಂಡಿತು. ಆದರೆ 2020ರ ಬಳಿಕ ಯುರೋಪ್‌ ದೇಶಗಳು ಮಾತ್ರವಲ್ಲ ವಿಶ್ವದ ಅನೇಕ ರಾಷ್ಟ್ರಗಳು ಈ ನಿಟ್ಟಿನಲ್ಲಿ ಹೆಚ್ಚಿನ ಒತ್ತು ನೀಡುತ್ತಿವೆ.

ಯಾವಾಗ?
ಇಂದಿಗೂ ಪ್ರಪಂಚದ ಸುಮಾರು ಶೇ.98ರಷ್ಟು ಎಲೆಕ್ಟ್ರಿಕ್‌ ಬಸ್‌ಗಳು ಚೀನದ ನಗರಗಳಲ್ಲೇ ಓಡುತ್ತಿವೆ. ಯಾಕೆಂದರೆ 2016ರಲ್ಲೇ ಚೀನದ ನಗರಗಳಲ್ಲಿ ಪ್ರತೀ ದಿನ 340 ಎಲೆಕ್ಟ್ರಿಕ್‌ ಸಿಟಿ ಬಸ್‌ಗಳನ್ನು ನೋಂದಾಯಿಸಿಕೊಂಡಿದ್ದವು. ಅದೇ ವರ್ಷದಲ್ಲಿ ಯುರೋಪ್‌ನಲ್ಲಿ ಪ್ರತೀ ದಿನ ನಗರ ಮತ್ತು ಹೊರನಗರಗಳ ಸಂಚಾರಕ್ಕೆಂದು ಸುಮಾರು 70 ಬಸ್‌ಗಳು ಓಡಾಟ ಆರಂಭಿಸಿದ್ದವು. ಆಗ ಸಾರ್ವಜನಿಕ ಸಾರಿಗೆಗೆ ಎಲೆಕ್ಟ್ರಿಕ್‌ ಬಸ್‌ಗಳನ್ನು ಪರಿಚಯಿಸುವ ಕುರಿತಂತೆ ಯೋಜನೆಯಷ್ಟೇ ರೂಪುಗೊಳ್ಳುತ್ತಿತ್ತು.

ಹೇಗೆ ಸಾಧ್ಯ?
ಚೀನದ ಶೆನೆjನ್‌ ನಗರದಲ್ಲಿ 2017ರಲ್ಲಿ ಶೇ.100ರಷ್ಟು ಬಸ್‌ಗಳನ್ನು ಎಲೆಕ್ಟ್ರಿಕ್‌ ಬಸ್‌ಗಳಾಗಿ ಬದಲಾಯಿಸುವ ಯೋಜನೆ ರೂಪಿಸಲಾಯಿತು. ಬೀಜಿಂಗ್‌ನಲ್ಲಿ 10 ಸಾವಿರ ಎಲೆಕ್ಟ್ರಿಕ್‌ ಬಸ್‌ಗಳನ್ನು ಓಡಿಸುವ ಗುರಿಯನ್ನು ಹೊಂದಲಾಗಿದ್ದು, ಇದು ಕಳೆದ ವರ್ಷ 1,320 ಆಗಿತ್ತು. 2018ರಲ್ಲಿ ಚೀನದ ಯುಟಾಂಗ್‌ ಬಸ್‌ ತಯಾರಿಕ ಕಂಪೆನಿಯು ಫ್ರಾನ್ಸ್‌, ಯುಕೆ, ಬಲ್ಗೇರಿಯಾ, ಐಲ್ಯಾಂಡ್‌, ಚಿಲಿ, ಚೀನ, ಮಕಾವುಗಳಲ್ಲಿ ಒಟ್ಟು 90 ಸಾವಿರ ಬಸ್‌ಗಳನ್ನು ಮಾರಾಟ ಮಾಡಿದೆ. ಅದರಲ್ಲಿ 55,658 ಬಸ್‌ಗಳು ಚೀನದ ವಿವಿಧ ನಗರಗಳ ಮಾರುಕಟ್ಟೆಯಲ್ಲೇ ಮಾರಾಟವಾಗಿವೆ.

ಎಷ್ಟು?
ಯುರೋಪ್‌ ಭಾಗದಲ್ಲಿ 2020ಕ್ಕೆ ಹೋಲಿಸಿದರೆ 2021ರಲ್ಲಿ ಎಲೆಕ್ಟ್ರಿಕ್‌ ಬಸ್‌ಗಳ ನೋಂದಣಿಯಲ್ಲಿ ಶೇ. 48ರಷ್ಟು ಹೆಚ್ಚಳವಾಗಿದೆ. 2022ರಲ್ಲಿ 3,282 ಇ-ಬಸ್‌ ಗಳು ಬಿಡುಗಡೆಯಾಗಿವೆ. 2012ರಿಂದ ಒಟ್ಟು 8,500 ವಾಹನಗಳು ನೋಂದಣಿ ಯಾಗಿವೆ. ಮೊದಲ ಬಾರಿಗೆ 2021ರಲ್ಲಿ ಯುರೋಪಿನ ಮೂರು ಪ್ರಮುಖ ದೇಶಗಳು 500ಕ್ಕೂ ಹೆಚ್ಚು ಇ- ಬಸ್‌ಗಳನ್ನು ನೋಂದಣಿ ಮಾಡಿಸಿವೆ. ಅದಕ್ಕಾಗಿ ಮೊದಲ ಸ್ಥಾನದಲ್ಲಿರುವ ಜರ್ಮನಿಯು 555, ಎರಡನೇ ಸ್ಥಾನದಲ್ಲಿರುವ ಯುಕೆ 540 ಮತ್ತು 3ನೇ ಸ್ಥಾನದಲ್ಲಿರುವ ಫ್ರಾನ್ಸ್‌ 512 ಬಸ್‌ಗಳ ನೋಂದಣಿ ನಡೆಸಿದೆ.
ಭಾರತದಲ್ಲಿ 2017ರಲ್ಲಿ 70 ಸಾವಿರ ಬಸ್‌ಗಳು ಮಾರಾಟವಾಗಿವೆಯಾದರೂ ಇದರಲ್ಲಿ ಸಣ್ಣ ಪ್ರಮಾಣದಲ್ಲಷ್ಟೇ ಎಲೆಕ್ಟ್ರಿಕ್‌ ಬಸ್‌ಗಳಿಗೆ ಬೇಡಿಕೆ ಬಂದಿತ್ತು. ಆದರೆ ಜಾಗತಿಕವಾಗಿ ಎಲೆಕ್ಟ್ರಿಕ್‌ ಬಸ್‌ಗಳ ಒಟ್ಟು ಬೇಡಿಕೆಯಲ್ಲಿ ಭಾರತ ಶೇ. 10ಕ್ಕಿಂತ ಹೆಚ್ಚಿನ ಪ್ರಮಾಣವನ್ನು ಹೊಂದಿದೆ. ಇದು ಯುರೋಪ್‌ ಮತ್ತು ಉತ್ತರ ಅಮೆರಿಕ ಒಟ್ಟು ಸೇರಿ ನೀಡುವ ಬೇಡಿಕೆಗಿಂತ ಹೆಚ್ಚಾಗಿದೆ.

ಈಗಿನ ಪರಿಸ್ಥಿತಿ?
ಯುರೋಪ್‌ನ ಆಮ್‌ಸ್ಟರ್‌ಡಂ ನಗರದಲ್ಲಿ ಸಂಚರಿಸುವ ಆಮಸ್ಟೆಲ್‌ಲ್ಯಾಂಡ್‌ ಮೇರಿಲ್ಯಾಂಡೆನ್‌ ಎಲೆಕ್ಟ್ರಿಕ್‌ ಬಸ್‌ ಜಗತ್ತಿನಲ್ಲೇ ಅತೀ ದೊಡ್ಡದಾದ ಇ-ಬಸ್‌. ನೆದರ್‌ಲ್ಯಾಂಡ್‌ನ‌ಲ್ಲಿ 2025ರ ವೇಳೆಗೆ ಸಾರ್ವಜನಿಕ ಸಾರಿಗೆಯನ್ನು ಸಂಪೂರ್ಣ ಹೊಗೆ ರಹಿತವಾಗಿ ಮಾಡಲು ಯೋಜನೆ ರೂಪಿಸಿಕೊಂಡಿದೆ. 2037ರ ವೇಳೆಗೆ ಎಲ್ಲ ಬಸ್‌ಗಳನ್ನು ಹೊಗೆ ರಹಿತವನ್ನಾಗಿ ಮಾಡಲು ಯುಕೆಯಲ್ಲಿ ಯೋಜನೆ ರೂಪಿಸಲಾಗಿದೆ.

ಚೀನದ ಬಳಿಕ ಭಾರತ ವಿಶ್ವಕ್ಕೆ ಬಹುದೊಡ್ಡ ಮಾರುಕಟ್ಟೆ ಕ್ಷೇತ್ರವಾಗಿದೆ. ಭಾರತದಲ್ಲಿ ಅಂತರ್‌ ನಗರ ಸಂಚಾರಕ್ಕಾಗಿ ಇಕ್ಸಿಗೋ ಕಂಪೆನಿಯ ಸಹಯೋಗದೊಂದಿಗೆ ಬೆಂಗಳೂರು ಮೂಲದ ಇವಿ ಬಸ್‌ ಸ್ಟಾರ್ಟ್‌ ಅಪ್‌ ಈಗಾಗಲೇ ಪ್ರಮುಖ ಹೆಜ್ಜೆ ಇಟ್ಟಿದ್ದು, ಹೈದರಾಬಾದ್‌-ಬೆಂಗಳೂರು ಸಂಚಾರಕ್ಕೆ 24 ಫ್ರೆಶ್‌ ಏರ್‌ ಎಲೆಕ್ಟ್ರಿಕ್‌ ಬಸ್‌ಗಳನ್ನು ಬಿಡುಗಡೆ ಮಾಡಿದೆ. ಇದು ಮಾರ್ಚ್‌ ವೇಳೆಗೆ ರಸ್ತೆಗೆ ಇಳಿಯಲಿದೆ. ಮುಂದಿನ 2- 3 ವರ್ಷಗಳಲ್ಲಿ ಸಾವಿರ ಬಸ್‌ಗಳನ್ನು ತಯಾರಿಸುವ ಯೋಜನೆ ಹಾಕಿಕೊಂಡಿದೆ. ಪಿಎಂಐ ಎಲೆಕ್ಟ್ರೋ ಮೊಬಿಲಿಟಿ, ಒಲೆಕೆಟ್ರಾ ಗ್ರೀನ್‌ ಟೆಕ್‌, ಸ್ವಿಚ್‌ ಮೊಬಿಲಿಟಿ, ಟಾಟಾ ಮೋಟಾರ್ಸ್‌ ಸಹಿತ 10 ಪ್ರಮುಖ ಕಂಪೆನಿಗಳು ಭಾರತದಲ್ಲಿ ಎಲೆಕ್ಟ್ರಿಕ್‌ ಬಸ್‌ ತಯಾರಿಸಲು ಕ್ರಮ ಕೈಗೊಂಡಿವೆ.

ಮುಂದೇನು?
2040ರ ವೇಳೆಗೆ ಶೇ.67ರಷ್ಟು ರಸ್ತೆ ಸಾರಿಗೆಯಲ್ಲಿ ಇವಿಗಳು ಬಳಕೆಯಾಗುತ್ತವೆ. 2030ರ ವೇಳೆಗೆ ಯುರೋಪಿಯನ್‌ ಸಾರ್ವಜನಿಕ ಸಾರಿಗೆಯಲ್ಲಿ ಮೂರನೇ ಒಂದು ಭಾಗದಷ್ಟು ಅಂದರೆ ಸರಿಸುಮಾರು ಎರಡು ಲಕ್ಷ ಬಸ್‌ಗಳು ಹೊಗೆ ರಹಿತವಾಗಿರಲಿದೆ ಎನ್ನುತ್ತಾರೆ ಮಾರುಕಟ್ಟೆ ತಜ್ಞರು.

ವಿಶ್ವದ ಹಲವಾರು ರಾಷ್ಟ್ರಗಳಲ್ಲಿ ಸರಕಾರದ ಪ್ರೋತ್ಸಾಹ, ಸಾರ್ವಜನಿಕರ ಆಸಕ್ತಿಯ ಹಿನ್ನೆಲೆಯಲ್ಲಿ ಎಲೆಕ್ಟ್ರಿಕ್‌ ಬಸ್‌ಗಳಿಗೆ ಬೇಡಿಕೆ ನಿರಂತರ ಹೆಚ್ಚಾಗುತ್ತಿದೆ. 2021ರಲ್ಲಿ ವಾಹನ ಮಾರುಕಟ್ಟೆಯಲ್ಲಿ ಎಲೆಕ್ಟ್ರಿಕ್‌ ಬಸ್‌ಗಳ ಒಟ್ಟಾರೆ ವ್ಯವಹಾರವು 14,795 ಮಿಲಿಯನ್‌ ಡಾಲರ್‌ ಆಗಿದ್ದರೆ 2030ರ ವೇಳೆಗೆ ಇದು 44,309 ಮಿಲಿಯನ್‌ ಡಾಲರ್‌ಗಳಷ್ಟಾಗುವ ನಿರೀಕ್ಷೆ ಇದೆ. ಜಾಗತಿಕ ಮಾರುಕಟ್ಟೆಯಲ್ಲಿ ಬಿಇವಿ (ಬ್ಯಾಟರಿ ಎಲೆಕ್ಟ್ರಿಕಲ್‌ ವಾಹನ), ಎಫ್ಸಿಇವಿ (ಫ‌ುಯೆಲ್‌ ಸೆಲ್‌ ಎಲೆಕ್ಟ್ರಿಕ್‌ ವೆಹಿಕಲ್‌), ಪಿಎಚ್‌ಇವಿ (ಪ್ಲಗ್‌ ಇನ್‌ ಹೈಬ್ರಿಡ್‌ ಎಲೆಕ್ಟ್ರಿಕಲ್‌ ವೆಹಿಕಲ್‌) ಎಂಬ ಮೂರು ವಿಧದ ಎಲೆಕ್ಟ್ರಿಕ್‌ ಬಸ್‌ಗಳಿವೆ. ಕನಿಷ್ಠ 9 ಮೀಟರ್‌, 9- 14 ಮೀಟರ್‌, 14 ಮೀಟರ್‌ಗಳಿಂತ ಹೆಚ್ಚು ಉದ್ದದ ಗಂಟೆಗೆ 400 ಕಿ.ವ್ಯಾ.ಗಿಂತ ಕಡಿಮೆ ಮತ್ತು ಅದಕ್ಕಿಂತ ಹೆಚ್ಚು ಬ್ಯಾಟರಿ ಸಾಮರ್ಥ್ಯದ ಎಲೆಕ್ಟ್ರಿಕ್‌ ಬಸ್‌ಗಳು ಸಂಚರಿಸುತ್ತಿವೆ.

ಯುನೈಟೆಡ್‌ ಸ್ಟೇಟ್ಸ್‌, ಕೆನಡಾ, ಮೆಕ್ಸಿಕೋ, ಜರ್ಮನಿ, ಯುಕೆ, ಫ್ರಾನ್ಸ್‌, ಇಟಲಿ, ರಷ್ಯಾ, ಸ್ಪೇನ್‌, ಚೀನ, ಜಪಾನ್‌, ಕೊರಿಯಾ, ಭಾರತ, ಆಸ್ಟ್ರೇಲಿಯಾ, ಬ್ರೆಜಿಲ್‌, ಅರ್ಜೆಂಟೀನಾ, ಕೊಲಂಬಿಯಾ, ದಕ್ಷಿಣ ಆಫ್ರಿಕಾ, ಯುಎಇ, ಸೌದಿ ಅರೇಬಿಯಾ ರಾಷ್ಟ್ರಗಳಲ್ಲಿ ಇ-ಬಸ್‌ಗಳಿಗೆ ಬೇಡಿಕೆ ಹೆಚ್ಚಾಗುತ್ತಿದೆ.

-ವಿದ್ಯಾ ಇರ್ವತ್ತೂರು

ಟಾಪ್ ನ್ಯೂಸ್

Udupi: ಭಗವದ್ಗೀತೆ ಜೀವನದ ಭಾಗವಾಗಲಿ: ಸುಬ್ರಹ್ಮಣ್ಯ ಶ್ರೀ

Udupi: ಭಗವದ್ಗೀತೆ ಜೀವನದ ಭಾಗವಾಗಲಿ: ಸುಬ್ರಹ್ಮಣ್ಯ ಶ್ರೀ

Yathanal

Winter Session: ಪಂಚಮಸಾಲಿಗಳ ಮೇಲೆ ಲಾಠಿ ಬೀಸಿದವರಿಗೆ ಬಹುಮಾನ; ಶಾಸಕ ಯತ್ನಾಳ್‌ ಆಕ್ರೋಶ

BY-Vijayendra

Congress: ಸರಕಾರ ಕನ್ನಡದ ಅಭಿವೃದ್ಧಿಯನ್ನೂ ಶೂನ್ಯವಾಗಿಸಲು ಹೊರಟಿದೆ: ಬಿ.ವೈ.ವಿಜಯೇಂದ್ರ

1-deee

Allu Arjun ನಿವಾಸದಲ್ಲಿ ದಾಂಧಲೆ!; 8 ಮಂದಿ ಬಂಧನ: ಕೃತ್ಯ ಎಸಗಿದ್ದು ಯಾರು?

sullia

Davanagere: ವೃದ್ಧೆ ಮೇಲೆ ಅತ್ಯಾ*ಚಾರ; ಯುವಕನಿಗೆ 10 ವರ್ಷ ಕಠಿಣ ಶಿಕ್ಷೆ

Baduta-Mandya

Mandya: ಸಾಹಿತ್ಯ ಸಮ್ಮೇಳನದಲ್ಲಿ ಬಾಡೂಟ ಗಲಾಟೆ: ಪೊಲೀಸರೊಂದಿಗೆ ಮಾತಿನ ಚಕಮಕಿ!

1-women

ODI; ವೆಸ್ಟ್ ಇಂಡೀಸ್ ವಿರುದ್ಧ ಭಾರತದ ವನಿತೆಯರಿಗೆ 211 ರನ್ ಜಯ:ಸ್ಮೃತಿ ನರ್ವಸ್ 90


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Mandya :ಗಂಡ ಗದ್ಯ, ಹೆಂಡತಿ ಪದ್ಯ ಮಕ್ಕಳು ರಗಳೆ: ಹಾಸ್ಯ ಸಾಹಿತಿ ವೈ.ವಿ.ಗುಂಡೂರಾವ್‌

Mandya :ಗಂಡ ಗದ್ಯ, ಹೆಂಡತಿ ಪದ್ಯ, ಮಕ್ಕಳು ರಗಳೆ!: ಹಾಸ್ಯ ಸಾಹಿತಿ ವೈ.ವಿ.ಗುಂಡೂರಾವ್‌

Mandya Sahitya Sammelana: ಅಕ್ಷರ ಜಾತ್ರೆಯಲ್ಲಿ “ಹವಾ’ ಎಬ್ಬಿಸಿದ ತೊಟ್ಟಿ ಮನೆ..!

Mandya Sahitya Sammelana: ಅಕ್ಷರ ಜಾತ್ರೆಯಲ್ಲಿ “ಹವಾ’ ಎಬ್ಬಿಸಿದ ತೊಟ್ಟಿ ಮನೆ..!

Mandya: ನುಡಿ ಹಬ್ಬದ ಔತಣ ಸವಿಯಲು ಜನವೋ ಜನ- ವೃದ್ಧರಿಗೆ ವಿಶೇಷ ಕೌಂಟರ್‌

Mandya: ನುಡಿ ಹಬ್ಬದ ಔತಣ ಸವಿಯಲು ಜನವೋ ಜನ- ವೃದ್ಧರಿಗೆ ವಿಶೇಷ ಕೌಂಟರ್‌

ravishankar-guruji

World Meditation Day; ಶರೀರಕ್ಕೆ ಊಟ, ಆತ್ಮಕ್ಕೆ ಧ್ಯಾನ

1-dhyan

Meditation; ಮಾನಸಿಕ ಆರೋಗ್ಯಕ್ಕೆ ದಿವ್ಯೌಷಧ: ಡಿ.21ರಂದೇ ಏಕೆ ಧ್ಯಾನ ದಿನ?

MUST WATCH

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

ಹೊಸ ಸೇರ್ಪಡೆ

1-max

Max; ಟ್ರೈಲರ್ ಬಿಡುಗಡೆ: ಭರ್ಜರಿ ಲುಕ್ ನಲ್ಲಿ ಕಿಚ್ಚ!

Udupi: ಭಗವದ್ಗೀತೆ ಜೀವನದ ಭಾಗವಾಗಲಿ: ಸುಬ್ರಹ್ಮಣ್ಯ ಶ್ರೀ

Udupi: ಭಗವದ್ಗೀತೆ ಜೀವನದ ಭಾಗವಾಗಲಿ: ಸುಬ್ರಹ್ಮಣ್ಯ ಶ್ರೀ

Yathanal

Winter Session: ಪಂಚಮಸಾಲಿಗಳ ಮೇಲೆ ಲಾಠಿ ಬೀಸಿದವರಿಗೆ ಬಹುಮಾನ; ಶಾಸಕ ಯತ್ನಾಳ್‌ ಆಕ್ರೋಶ

sand 1

Padubidri: ಮರಳು ಅಕ್ರಮ ಸಾಗಾಟ; ವಶ

dw

Malpe: ಕಲ್ಮಾಡಿ; ಕಟ್ಟಡದಿಂದ ಬಿದ್ದು ಕಾರ್ಮಿಕ ಸಾವು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.