ಸಾಮಾಜಿಕ, ಧಾರ್ಮಿಕ ಮೌಲ್ಯಗಳ ಸಂಘರ್ಷದ ಚಿತ್ರಣ
Team Udayavani, Nov 23, 2020, 5:30 AM IST
ಈ ಅಂಕಣ ರಾಜ್ಯೋತ್ಸವ ವಿಶೇಷ. ರಾಜ್ಯದ ಯುವ ಬರಹಗಾರರು ಒಂದು ಕನ್ನಡದ ಕೃತಿ ಕುರಿತು ಬರೆಯುತ್ತಾರೆ. ಇದು ಒಂದು ರೀತಿಯಲ್ಲಿ ಓದುವ ಪಂದ್ಯ.
ಪರಿಸರದ ಕಾಳಜಿಯುಳ್ಳ, ಮಲೆನಾಡಿನ ಹೆಸರಾಂತ ಕಥೆಗಾರರಾಗಿ ಕನ್ನಡ ಸಾಹಿತ್ಯ ಲೋಕದಲ್ಲಿ ವಿವಿಧ ಪ್ರಕಾರಗಳ ಸಾಹಿತ್ಯದ ಮೂಲಕ ನಾಡಿನ ಜನಮಾನಸದಲ್ಲಿ ನೆಲೆಸಿರುವ ನಾ ಡಿ’ಸೋಜ ಅವರು ಬರೆದಿರುವ “ಇಗರ್ಜಿ ಸುತ್ತಲಿನ ಹತ್ತು ಮನೆಗಳು’ ಕಾದಂಬರಿ ಕ್ರೈಸ್ತ ಸಮುದಾಯದ ಹಿನ್ನೆಲೆ, ಮಲೆನಾಡಿನಲ್ಲಿ ಅದು ಬೇರೂರಿದ ಬಗೆ ಮತ್ತು ಅದರ ಸ್ಥಿತ್ಯಂತರದ ಬೆಳಕನ್ನು ಚೆಲ್ಲಿದೆ.
ಫಾದರ್ ಗೊನ್ಸಾಲ್ವಿಸ್‌ರ ವೃದ್ದಾಪ್ಯ, ವೃದ್ಧಾಶ್ರಮದ ಚಿತ್ರಣ, 80 ಹರೆಯದಲ್ಲಿ ಅವರ ಉತ್ಸಾಹ ಮತ್ತು ಧರ್ಮದ ಬಗೆಗಿನ ಸಂವೇದ ನೆಯನ್ನು ಲೇಖಕರು ಎಳೆ
ಎಳೆಯಾಗಿ ಚಿತ್ರಿಸಿದ್ದಾರೆ. ಈ ಕಾದಂಬರಿ ಮಾನವನ ಸಾಮಾಜಿಕ, ಧಾರ್ಮಿಕ ಮೌಲ್ಯಗಳನ್ನು ಎತ್ತಿಹಿಡಿಯುವುದಲ್ಲದೆ ಅವು ಗಳ ಸಂಘರ್ಷವನ್ನು ವಿವರಿಸುತ್ತದೆ. ಎಲ್ಲವನ್ನು ತ್ಯಜಿಸಿ ಧರ್ಮಗುರುವಾಗಿ ಧಾರ್ಮಿಕ, ಸಾಮಾಜಿಕ ಕಾರ್ಯಗಳನ್ನು ನಿರ್ವಹಿಸಿದ ನೆನಪಿನ ಮೆಲುಕು ಓದುಗರ ಕೂತೂಹಲವನ್ನು ಕೆರಳಿಸಿ ಆದಿಯಿಂದ ಅಂತ್ಯದ ವರೆಗೆ ಓದುಗರ ಲಕ್ಷ್ಯವನ್ನು ಸಂಪೂರ್ಣವಾಗಿ ಹಿಡಿದಿಡುತ್ತದೆ.
ತಾನು ಕಟ್ಟಿದ ಚರ್ಚಿಗೆ ಐವತ್ತರ ಸಂಭ್ರಮ ವನ್ನು ತಿಳಿದು ಮತ್ತು ಆ ಸಮಾರಂಭಕ್ಕೆ ಆಹ್ವಾನ ವಿತ್ತಾಗ ಅವರಲ್ಲಿ ಉಂಟಾಗುವ ಸಂತೋಷ ಮತ್ತು ಅವರು ನೆನಪನ್ನು ಮೆಲುಕು ಹಾಕುವ ಪರಿ ಕಾದಂಬರಿಯನ್ನು ಸರಾಗವಾಗಿ ಓದು ವಂತೆ ಪ್ರೇರೇಪಿಸುತ್ತದೆ. ಒಪ್ಪಿಕೊಂಡಿರುವ ಕೆಲಸ ಯಾವುದಾದರೇನು? ಅದರ ನಿರ್ವ ಹಿಸುವ ಹೊಣೆಗಾರಿಕೆ ಮತ್ತು ಮಲೆನಾಡಿನಲ್ಲಿ ಕ್ರೈಸ್ತ ಧರ್ಮ ಗಟ್ಟಿಯಾಗಿ ನೆಲೆಯೂರಲು ಅವರು ಪಟ್ಟ ಪರಿಶ್ರಮ ಹಾಗೂ ಅದನ್ನು ವ್ಯಾಪ್ತಿಯ ಬಗ್ಗೆ ಮೊದಲ ಭಾಗ ತಿಳಿಸಿದರೆ ಕೊನೆಯ ಭಾಗ ಮಾನವ ಸಂಬಂಧಗಳಲ್ಲಿ ಬಿರುಕುಂಟಾಗಿ ಅವನತಿಯಾಗುವಾಗ ಫಾದರ್ ಅವರು ಹತಾಶರಾಗುವುದು ಓದು ಗನಲ್ಲಿ ದುಃಖ ಉಮ್ಮಳಿಸುವಂತೆ ಮಾಡುತ್ತದೆ.
ಕರಾವಳಿ, ಮಲೆನಾಡು ಮತ್ತು ಕೊಂಕಣಿ ಭಾಷೆಗಳ ವಿಶ್ರಣವಾಗಿ ಸರಳವಾದ ಭಾಷೆಯ ಲ್ಲಿರುವ ಈ ಕಾದಂಬರಿ ಎಲ್ಲ ರೀತಿಯ ಓದು ಗರನ್ನು ಆಕರ್ಷಿಸುವುದರಲ್ಲಿ ಸಂದೇಹವಿಲ್ಲ. ಒಬ್ಬ ಸಾಮಾನ್ಯ ವ್ಯಕ್ತಿ ಫಾದರ್ ಆಗುವ ವಿವಿಧ ಮಜಲುಗಳನ್ನು ಇಲ್ಲಿ ಬಿಚ್ಚಿಡಲಾಗಿದೆ. ಫಾದರ್ ಅವರು ಧರ್ಮಪರಿಪಾ ಲಕನಾಗಿ, ಆಧ್ಯಾತ್ಮಿಕ ಬದು ಕನ್ನು ನಿರ್ವಹಿಸುವ ಮತ್ತು ಜನರಲ್ಲಿ ವಿಶ್ವಾಸವನ್ನು ಗಿಟ್ಟಿಸಿ ಅವರ ಇರಾದೆ ಈಡೇರಿಸುವುದನ್ನು ನಿರೂಪಿಸಲಾಗಿದೆ.
ಸಿಮೋನ ಬೋನಾ ಇನಿಸಾ ರಂಗಿ, ಮೋರಿ, ಪೆದ್ರು, ವಿನ್ಸೆಂಟ್, ಫಾದರ್ ಗೊನ್ಸಾಲ್ವಿಸ್, ಫಾದರ್ ಸಿಕ್ವೇರ, ಫಾದರ್ ಡಿ’ಸೋಜ ಪಾತ್ರ ಗಳಿಗೆ ಲೇಖಕರು ಜೀವತುಂಬಿ ನೈಜತೆಯ ಭಾವವನ್ನು ಮೂಡಿಸಿದ್ದಾರೆ.
ನಂಬಿಕೆಗಳ ನಡುವೆ ನಡೆಯುವ ಮಾನಸಿಕ ಸಂಘರ್ಷವನ್ನು ಲೇಖಕರು ಮನೋಜ್ಞವಾಗಿ ಚಿತ್ರಿಸಿದ್ದಾರೆ. ಸಮಾಜದಲ್ಲಿ ನೊಂದವರ ಒಳಿತಿಗಾಗಿ ಮತ್ತು ಪರರಿಗಾಗಿಯೇ ಜೀವನ ವೆಂದು ನಂಬಿ ಬದುಕಿನ ಕೊನೆಯ ಕ್ಷಣದವರೆಗೆ ಸಾರ್ಥಕ ಜೀವನ ನಡೆಸಿದ ಫಾ| ಗೊನ್ಸಾಲ್ವಿಸರ ಪಾತ್ರವನ್ನು ಓದುಗ ಮರೆಯಲು ಅಸಾಧ್ಯ.
ಪ್ರವೀಣ್ ಪೂಜಾರಿ, ಮೂಡುಬಿದಿರೆ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Smart meters: ನೀರು ಸಂರಕ್ಷಿಸುವ ವಿಚಾರದಲ್ಲಿ ಕ್ರಾಂತಿ ಮಾಡಿದ ಸ್ಮಾರ್ಟ್ ವಾಟರ್ ಮೀಟರ್
Karnataka; ಕೇಂದ್ರ ಸ್ವಾಮ್ಯದ ಸಂಸ್ಥೆಗಳಲ್ಲಿ ಕನ್ನಡಿಗರೇಕೆ ವಿರಳ? ಆಗಬೇಕಿರುವುದೇನು?
ಬೆಳಗಾವಿ:ಬಟ್ಟೆ ಅಂಗಡಿಯಲ್ಲಿ ಕೆಲಸ ಮಾಡಿದ ಹುಡುಗ..ಜಿಲ್ಲಾ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷ
Kannada; ಅನಿವಾಸಿ ಕನ್ನಡಿಗರ ಮಕ್ಕಳಲ್ಲೂ ಕನ್ನಡ ಚಿಗುರಲಿ
Kanchi swamiji; ದೇವಸ್ಥಾನಗಳ ಭೂಮಿ ದೇವಸ್ಥಾನಗಳಿಗೇ ಇರಲಿ
MUST WATCH
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಹೊಸ ಸೇರ್ಪಡೆ
Jharkhand: ಮತ್ತೆ ಮುಖ್ಯಮಂತ್ರಿಯಾಗಿ ಜೆಎಂಎಂ ನಾಯಕ ಹೇಮಂತ್ ಸೊರೇನ್ ನ.28ಕ್ಕೆ ಪದಗ್ರಹಣ
Tourist place: ಲೇಪಾಕ್ಷಿ ಪುರಾಣದ ಕಥೆಯ ಕೈಗನ್ನಡಿ
Waqf ವಿರುದ್ದ ಮಠಾಧೀಶರು,ಯತ್ನಾಳ್ ತಂಡದಿಂದ ಮತ್ತೊಂದು ಹಂತದ ಹೋರಾಟ
Belagavi; ಕಿತ್ತೂರು ರಾಣಿ ಚನ್ನಮ್ಮ ಕಿರು ಮೃಗಾಲಯದಲ್ಲಿದ್ದ ಹುಲಿ ಶೌರ್ಯ ಇನ್ನಿಲ್ಲ
IPL Mega Auction: ಮೂರನೇ ಸೆಟ್ ನ ಆಟಗಾರರ ಹರಾಜು ಮಾಹಿತಿ ಇಲ್ಲಿದೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.