ಹೆಸರಿನಲ್ಲೇನಿದೆ..?


Team Udayavani, Jun 11, 2021, 12:59 PM IST

desiswara

ಪುರಾತನ ಕಾಲದಿಂದ ನಡೆದು ಬಂದ ಪದ್ಧತಿಯ ಪ್ರಕಾರ ಅಜ್ಜನ ಹೆಸರು ಮೊಮ್ಮಗನಿಗೆ ಹಾಕುತ್ತಿದ್ದರು ಮತ್ತು ಈಗಲೂ ಹಾಕುತಿದ್ದಾರೆ. ಅದೇ ರೀತಿ ಅಜ್ಜಿಯ ಹೆಸರನ್ನು ಮೊಮ್ಮಗಳಿಗೆ ಇಡುವುದೂ ಸರ್ವೇ ಸಾಮಾನ್ಯ. ಇದೇ ರೀತಿ ಇನ್ನೊಬ್ಬ ಅಜ್ಜನ (ಅಮ್ಮನ ಅಪ್ಪ) ಹೆಸರನ್ನು ಎರಡನೇ ಮಗನಿಗೆ ಇಡುವುದು, ಇನ್ನೊಬ್ಬ ಅಜ್ಜಿಯ ಹೆಸರನ್ನು ಎರಡನೇ ಮಗಳಿಗೆ ಇಡುವುದು ಕೂಡ ಸಾಮಾನ್ಯ.

ಒಂದು ಮಗುವಿಗೆ ನಾಮಕರಣ ಮಾಡುವಾಗ ನಾವು ಎಷ್ಟು ಯೋಚಿಸುತ್ತೇವೆಯೋ ಅಷ್ಟೇ ಪರಿಣಾಮ ಆ ಮಗುವಿನ ಭವಿಷ್ಯದ ಮೇಲೆ ಆಗುತ್ತದೆ ಎಂದರೆ ಆಶ್ಚರ್ಯವಾಗಬಹುದು. ಪುರಾತನ ಕಾಲದಿಂದ ನಡೆದು ಬಂದ ಪದ್ಧತಿಯ ಪ್ರಕಾರ ಅಜ್ಜನ ಹೆಸರು ಮೊಮ್ಮಗನಿಗೆ ಹಾಕುತ್ತಿದ್ದರು ಮತ್ತು ಈಗಲೂ ಹಾಕುತಿದ್ದಾರೆ. ಅದೇ ರೀತಿ ಅಜ್ಜಿಯ ಹೆಸರನ್ನು ಮೊಮ್ಮಗಳಿಗೆ ಇಡುವುದೂ ಸರ್ವೇ ಸಾಮಾನ್ಯ. ಇದೇ ರೀತಿ ಇನ್ನೊಬ್ಬ ಅಜ್ಜನ (ಅಮ್ಮನ ಅಪ್ಪ) ಹೆಸರನ್ನು ಎರಡನೇ ಮಗನಿಗೆ ಇಡುವುದು, ಇನ್ನೊಬ್ಬ ಅಜ್ಜಿಯ ಹೆಸರನ್ನು ಎರಡನೇ ಮಗಳಿಗೆ ಇಡುವುದು ಕೂಡ ಸಾಮಾನ್ಯ.

ನನ್ನ ಹೆಸರು ರಾಮ ಅಂತ. ನಾನು ಎರಡನೇ ಮಗನಾದ್ದರಿಂದ ಇದು ನನ್ನ ಇನ್ನೊಬ್ಬ ಅಜ್ಜನ (ಅಮ್ಮನ ಅಪ್ಪನ)  ಹೆಸರು. ಇದರ ಜತೆಗೆ, ನನ್ನ ಜನ್ಮ ರಾಶಿ ಧನು. ಹೀಗಾಗಿ ನಾನು ಸಣ್ಣವನಿರುವಾಗಲೇ  ಬಿಲ್ಲು ಬಾಣಗಳೊಡನೆ ಆಡುವುದೆಂದರೆ ಬಹಳ ಇಷ್ಟವಾಗಿತ್ತು ರಾಮಾಯಣದ ರಾಮನ ತರಹ. ಗುಡ್ಡದಿಂದ ಬಿಲ್ಲಿಗೆ ಯೋಗ್ಯ ಕೋಲುಗಳನ್ನಾಯ್ದು ಹಾಗೆಯೇ ಬಾಣಗಳನ್ನು ತಯಾರಿಸಿ ಆಡುತ್ತಿದ್ದೆ. ಹೀಗೆ ಹೆಸರಿನ ಪ್ರಭಾವ ವ್ಯಕ್ತಿಯ ಮೇಲೆ ಪ್ರರಿಣಾಮ ಬೀರುವುದಕ್ಕೆ ಇದೊಂದು ಸಣ್ಣ ಉದಾಹರಣೆ.

ನಮ್ಮ ಎರಡನೇ ಮಗಳ ಹೆಸರು ಅಪರ್ಣಾ. ಕೇವಲ ಶಬ್ದಾರ್ಥವನ್ನು ನೋಡಿದರೆ ಎಲೆ ಇಲ್ಲ ಎಂದಾದರೂ ಇದು ಪಾರ್ವತಿ ದೇವಿಯ ಒಂದು ಹೆಸರು ಲಲಿತಾ ಸಹಸ್ರನಾಮದ ಪ್ರಕಾರ. ದಾûಾಯಿಣಿಯು ಅಪ್ಪ ದಕ್ಷನ ಆಮಂತ್ರಣವಿಲ್ಲದೆ ಅವನು ಮಾಡುತ್ತಿದ್ದ ಯಾಗಕ್ಕೆ ಬರುತ್ತಾಳೆ. ದಕ್ಷನು ಅವಳ ಆಗಮನವನ್ನು  ಅಲಕ್ಷÂ ಮಾಡಿದ. ಅಪಮಾನವನ್ನು ತಡೆಯಲಾರದ ದಾûಾಯಿಣಿ ಯಾಗದ ಕುಂಡದಲ್ಲಿ ಪ್ರವೇಶಿಸಿ ದೇಹತ್ಯಾಗ ಮಾಡಿದಳು. ಮುಂದಿನ ಜನ್ಮದಲ್ಲಿ ಆಕೆ ಪರ್ವತರಾಜನ ಮಗಳು ಪಾರ್ವತಿಯಾದಳು. ಪ್ರಾಪ್ತ ವಯಸ್ಸಿಗೆ ಬಂದಾಗ ತಾನು ಶಿವನನ್ನೇ ವಿವಾಹವಾಗಬೇಕೆಂದು ದೃಢ ನಿರ್ಧಾರವನ್ನು ತೊಟ್ಟಳು. ಶಿವನು ದಾಕ್ಷಾಯಿಣಿಯನ್ನು ಕಳೆದುಕೊಂಡ ಮೇಲೆ ಕಠೊರ ತಪಸ್ಸಿಗೆ ಕುಳಿತುಕೊಂಡಿದ್ದನು.

ಪಾರ್ವತಿಯು ಪ್ರತಿದಿನ ಅವನು ತಪಸ್ಸು ಮಾಡುವಲ್ಲಿಗೆ ಬಂದು ಆತನ ಸೇವೆ ಮಾಡುತ್ತಿದ್ದಳು. ಶಿವನನ್ನು ಒಲಿಸಿಕೊಳ್ಳಲೆಂದು ಆಹಾರವನ್ನು ತ್ಯಜಿಸಿ ಬರಿಯ ಹಣ್ಣುಗಳನ್ನು ಮತ್ತು ಸೊಪ್ಪುಸದೆಗಳನ್ನು ತಿಂದುಕೊಡು ಘೋರ ತಪಸ್ಸು ಮಾಡುತ್ತಿದ್ದಳು ಮತ್ತೂ ಶಿವನು ಒಲಿಯದಿರಲು ಪಾರ್ವತಿಯು ಹಣ್ಣುಹಂಪಲುಗಳನ್ನು ತ್ಯಜಿಸಿ ಕೇವಲ ಸೊಪ್ಪುಗಳನ್ನು ತಿಂದು ತಪಸ್ಸನ್ನಾಚರಿಸಿದಳು. ಅದನ್ನು ನೋಡಿ ಆಕೆಯ ಅಮ್ಮನ ಹೆತ್ತ ಕರುಳು ಸಹಿಸಲಿಲ್ಲ. ಆಕೆ, ಉಮಾ, ಅಂದರೆ ಹೀಗೆ ಮಾಡಬೇಡ ಮಗಳೇ ಎಂದು ಹೇಳಿದಳು.  ಆದರೆ ಪಾರ್ವತಿ ತಾಯಿಯ ಕರೆಯನ್ನು ಮನ್ನಿಸದೆ ತನ್ನ ಉಪವಾಸದ ನೇಮವನ್ನು ಮುಂದುವರಿಸಿದಳು. ಕೊನೆಗೆ ಸೊಪ್ಪುಗಳನ್ನೂ ತ್ಯಜಿಸಿ ತನ್ನ ತಪಸ್ಸನ್ನು ಮುಂದುವರಿಸಿದಳು. ಎಲೆಗಳನ್ನು ತಿನ್ನುವುದನ್ನೂ ತ್ಯಜಿಸಿ ತಪಸ್ಸು ಮಾಡುತ್ತಿದ್ದ ಪಾರ್ವತಿಯನ್ನು ಲೋಕ ಅಪರ್ಣಾ ಅಂದರೆ ಎಲೆಗಳನ್ನೂ ಮುಟ್ಟದೆ ಕಟೋರ ತಪಸ್ಸು ಮಾಡಿದವಳು ಎಂದು ಕೊಂಡಾಡಿತು. ಅಪರ್ಣಾ ಎನ್ನುವ ಹೆಸರು, ಧ್ಯೇಯದತ್ತ ತಲಪುವ  ಛಲವುಳ್ಳ ಗುಣ, ದೃಢಮನಸ್ಸಿನ ವ್ಯಕ್ತಿ, ಗುರಿಯತ್ತ ಸೇರುವ ನಿರ್ಧಾರವುಳ್ಳ ವ್ಯಕ್ತಿ ಎಂದು ಸೂಚಿಸುತ್ತದೆ.

ನಾನು ನಮ್ಮ ಮಗಳ ಹೆಸರಿನ ಹಿನ್ನೆಲೆಯನ್ನು ಅವಳಿಗೆ ಹೇಳಿದಾಗ ಆಕೆಗೆ ತುಂಬಾ ಹೆಮ್ಮೆಯಾಯಿತು. ತನ್ನ ಹೆಸರು ಬರಿಯ ವ್ಯಕ್ತಿಯನ್ನು ಗುರುತಿಸುವ ಕ್ರಮ ಮಾತ್ರವಲ್ಲ, ಆ ಹೆಸರಿನ ವ್ಯಕ್ತಿ ಹೇಗೆ ಕೃತಿಯಲ್ಲಿ ಅವಳ ಹೆಸರಿಗೆ ತಕ್ಕಂತೆ ನಡೆದುಕೊಂಡಳು ಎಂದು ಹೆಮ್ಮೆ ಪಡುವಂತೆ ಮಾಡಿತು. ಇನ್ನೊಂದು ಕತೆ ಕೂಡ ಹೆಸರಿನ ಪ್ರಭಾವ ವ್ಯಕ್ತಿಯ ಜೀವನದ ಮೇಲೆ ಯಾವರೀತಿ ಪರಿಣಾಮ ಮಾಡುತ್ತದೆಯಂದು ತೋರಿಸುತ್ತದೆ.

ರಾಷ್ಟ್ರಕವಿ ಕುವೆಂಪು ಅವರು ಬರೆದ ಒಂದು ಹಾಡು ತುಂಬಾ ಜನಪ್ರಿಯವಾಗಿತ್ತು ಅನಿಕೇತನ ಎಂಬ ಹಾಡು. ಒಂದು ಯುವ ದಂಪತಿ ಅವರ ಮಗನಿಗೆ ಅನಿಕೇತನ ಎಂಬ ಹೆಸರಿಟ್ಟರು. ಆ ಹುಡುಗ ದೊಡ್ಡವನಾದಾಗ ಯಾರೋ ಗೆಳೆಯರು ಅನಿಕೇತನ ಎಂದರೆ ಮನೆಯಿಲ್ಲದವನು ಎಂದು ಹೇಳಿದಾಗ ಆ ದಂಪತಿಗೆ ತುಂಬಾ ಬೇಸರವಾಯಿತು, ಹೋಗಿ ಹೋಗಿ ಮಗನಿಗೆ ಮನೆಯಿಲ್ಲದವನು ಎಂದು ಹೆಸರಿಟ್ಟೆವಲ್ಲ ಎಂದು. ಒಂದು ದಿನ ಅವರು ಒಬ್ಬ ಯೋಗಿಗಳನ್ನು ಭೇಟಿ ಮಾಡಿ ತಮ್ಮ ದುಃಖವನ್ನು ತೋಡಿಕೊಂಡರು. ಆಗ ಆ ಯೋಗಿಗಳು ಹೇಳಿದ ಮಾತುಗಳನ್ನು ಕೇಳಿ ಅವರ ದುಃಖ ನಿವಾರಣೆಯಾಯಿತು. ಆ ಯೋಗಿ ಹೇಳಿದ ಪ್ರಕಾರ, ಅನಿಕೇತನ ಎಂದರೆ ಮನೆಯಿಲ್ಲದವನು ಅಂತ ಹೌದು. ಆದರೆ ದೇವರಿಗೂ ಮನೆಯಿಲ್ಲ, ಇಡಿಯ ವಿಶ್ವವೇ ಅವನಾಗಿರುವಾಗ ಅವನಿಗೆ ಪ್ರತ್ಯೇಕ ಮನೆಯ ಅಗತ್ಯವೇ ಇಲ್ಲ. ಹಾಗಾಗಿ ಅನಿಕೇತನ ಎಂಬ  ಹೆಸರು ಅತ್ಯಂತ ಒಳ್ಳೆಯ ಹೆಸರು ಎಂದು. ಆ ದಂಪತಿ ಬಹಳ ಸಂತೋಷ ಪಟ್ಟು ಹಿಂದಿರುಗಿದರು.

ನನ್ನ ಪರಿಚಯದ ಒಬ್ಬ ಎಂಜಿನಿಯರ್‌ ಅವರ ಹೆಸರು ಮಿಸ್ಟರ್‌ ರಾಂಗ್‌ ಎಂದಾಗಿತ್ತು. ಸಣ್ಣ ವಯಸ್ಸಿನಿಂದಲೇ ಆ ಹೆಸರನ್ನು ಧರಿಸಿಕೊಂಡು ಜೀವಿಸಬೇಕಾದರೆ ಆ ವ್ಯಕ್ತಿಗೆ ಎಷ್ಟು ಕಷ್ಟವಾಗಿರಬೇಕೆಂದು ನಮಗೆ ಅರ್ಥವಾಗಬಹುದು. ಇನ್ನೊಂದು ಉದಾಹರಣೆಯಲ್ಲಿ, ಒಂದು ಭಾಷೆಯಲ್ಲಿ ಚೆನ್ನಾಗಿರುವ ಹೆಸರು ಇನ್ನೊಂದು ಭಾಷೆಯಲ್ಲಿ ಆಭಾಸವಾಗಿರುತ್ತದೆ. ಉದಾಹರಣೆಗೆ ಚಾಗ್ರಿನ್‌ ಎನ್ನುವ ಹೆಸರು. ಹೀಬ್ರೂ ಭಾಷೆಯಲ್ಲಿ ಈ ಹೆಸರು ಒಳ್ಳೆಯ ಅರ್ಥಪೂರ್ಣವಾಗಿದ್ದರೆ ಆಂಗ್ಲ ಭಾಷೆಯಲ್ಲಿ ಅಷ್ಟೊಂದು ಚೆನ್ನಾಗಿರುವುದಿಲ್ಲ.

ಇನ್ನೊಂದು ಚಂದದ ಹೆಸರು ತನ್ವಿ. ಇದರ ಅರ್ಥ ಚೆಲುವೆಯೆಂದು. ಇದು ದುರ್ಗಾ ದೇವಿಯ ಹೆಸರು ಹೌದು. ಈ ಮಗು ದೊಡ್ಡವಳಾಗುವಾಗ ತನ್ನ ಹೆಸರನ್ನು ಅಭಿಮಾನದಿಂದ ಹೊತ್ತು ಬರಲು ಸಾಧ್ಯ. ನಮ್ಮ ಮಗಳು ಅಪರ್ಣ ಮತ್ತು ಅಳಿಯ ಹರಿತ್ಸ ನಮ್ಮ ಮೊಮ್ಮಗನಿಗೆ ಬೇರೆ ಕೆಲವು ಹೆಸರುಗಳ ಜತೆಗೆ ಆಕಾಶ್‌ ಎನ್ನುವ ಹೆಸರನ್ನೂ ಸೇರಿಸಿದ್ದರು. ಕುಟುಂಬದ ಇತರ ಹಿರಿಯರ ಅಭಿಪ್ರಾಯವನ್ನು ಕೇಳಿಕೊಂಡು ಕೊನೆಗೆ ಆಕಾಶ್‌ ಎಂಬ ಹೆಸರನ್ನು ಆಯ್ಕೆ ಮಾಡಿದರು.

ಆಕಾಶ್‌ ಎನ್ನುವ ಹೆಸರನ್ನು ಆಯ್ಕೆ  ಮಾಡಲು ಅನೇಕ ಕಾರಣಗಳ ಜತೆಗೆ ಈ ಕೆಳಗಿನ ಕಾರಣಗಳೂ ಸೇರಿದ್ದವು. 1. ವಿಶಾಲ,  ಅನಂತ, ಗುರುತರ ಎನ್ನುವ ಗುಣಗಳನ್ನು ಹೊಂದಿದ ಹೆಸರು ಆಕಾಶ. 2. ಮನುಷ್ಯ ಶರೀರ ಪಂಚಭೂತಗಳಾದ ಭೂಮಿ, ನೀರು, ಬೆಂಕಿ, ಗಾಳಿ ಮತ್ತು ಆಕಾಶ ಇವುಗಳಿಂದ ಮಾಡಲ್ಪಟ್ಟಿದ್ದು ಆಕಾಶವೆಂದರೆ ಇವುಗಳಲ್ಲಿ ಶ್ರೇಷ್ಠ ಸ್ಥಾನವನ್ನು ಪಡೆದ ಅಂಶ. 3. ಆಕಾಶವೆಂದ ಕೂಡಲೇ ನಮಗೆ ಮನಸ್ಸಿಗೆ ಬರುವುದು ಹಕ್ಕಿಗಳು, ನಕ್ಷತ್ರಗಳು, ಸೂರ್ಯ ಮತ್ತು ಚಂದ್ರರು. 4. ಆಕಾಶವೆಂದರೆ ಕೇವಲ ನಾವು ಕಾಣಬಹುದಾದ ಭೂಮಿಯ ಮೇಲೆ ಕಾಣುವ ಭಾಗ ಮಾತ್ರವಲ್ಲ, ಗ್ರಹಗಳ ಮತ್ತು ನಕ್ಷತ್ರಗಳ ನಡುವಣ ವಿಶಾಲ ಅಂತರಿಕ್ಷ. ಈ ಮೇಲಣ ದೃಷ್ಟಿಕೋನದಿಂದ ನೋಡಿದರೆ ಆಕಾಶ ಅನಂತ ಮತ್ತು ಸರ್ವಾಂತರ್ಯಾಮಿ ಭಗವಂತನನ್ನೇ ಮನಸ್ಸಿಗೆ ತೋರಿಸುತ್ತದೆ.

ಮಕ್ಕಳಿಗೆ ಸಣ್ಣವರಿರುವಾಗ ಪ್ರೀತಿಯಿಂದ, ಪುಟ್ಟ, ಮುದ್ದು ಎಂದೆಲ್ಲ ಕೂಗುವುದು ಸ್ವಾಭಾವಿಕ. ಹಾಗೆಯೇ ದೇವರುಗಳ ಹೆಸರುಗಳನ್ನಿಡುವುದೂ ವಾಡಿಕೆ. ಹಾಗೆಯೇ ವಿಷ್ಣು ಸಹಸ್ರನಾಮ ಮತ್ತು ಲಲಿತಾ ಸಹಸ್ರನಾಮದಿಂದ

ಆಯ್ದ ದೇವಿಯ ಹೆಸರುಗಳನ್ನೂ ಇಡುವ ಉದಾಹರಣೆಗಳು ಅನೇಕ. ಕೊನೆಯಲ್ಲಿ ಇಷ್ಟು ಮಾತ್ರ ಖಂಡಿತ, ಮಗು ಬೆಳೆದು ದೊಡ್ಡವನಾದಾಗ ಅಥವಾ ದೊಡ್ಡವಳಾದಾಗ ತನಗಿಟ್ಟ ಹೆಸರನ್ನು ಹೆಮ್ಮೆಯಿಂದ ತಲೆಯೆತ್ತಿ ಧರಿಸುವಂತಾಗಿರಬೇಕು.

 

ಬಾಳಿಕೆ ರಾಮ ಭಟ್‌, 

ಮಾಂಟ್ರಿಯಾಲ್, ಕೆನಡಾ

ಟಾಪ್ ನ್ಯೂಸ್

BBMP-ED

illegal Investigation: ಬಿಬಿಎಂಪಿ ಮುಖ್ಯ ಎಂಜಿನಿಯರ್‌ ಕಚೇರಿ ಮೇಲೆ ಇ.ಡಿ. ದಾಳಿ

Bjp-Rijiju

Waqf Report: ಅಮಿತ್‌ ಶಾ ಅಂಗಳಕ್ಕೆ ಭಿನ್ನರ ವಕ್ಫ್ ವರದಿ: ಕಿರಣ್‌ ರಿಜಿಜು ಮೂಲಕ ಸಲ್ಲಿಕೆ

Udupi:ಗೀತಾರ್ಥ ಚಿಂತನೆ 149: ಜಗತ್ತಿನಲ್ಲಿ ಇಷ್ಟೊಂದು ವ್ಯತ್ಯಾಸವೇಕೆ? ಪ್ರಶ್ನೆಗುತ್ತರವಿಲ್ಲ

Udupi:ಗೀತಾರ್ಥ ಚಿಂತನೆ 149: ಜಗತ್ತಿನಲ್ಲಿ ಇಷ್ಟೊಂದು ವ್ಯತ್ಯಾಸವೇಕೆ? ಪ್ರಶ್ನೆಗುತ್ತರವಿಲ್ಲ

ಮಮ್ತಾಜ್‌ ಅಲಿ ಆತ್ಮಹ*ತ್ಯೆ ಪ್ರಚೋದನೆ ಆರೋಪ: ಆರೋಪಿಗಳ ವಿರುದ್ದ ಆರೋಪ ಪಟ್ಟಿ ಸಲ್ಲಿಕೆ

ಮಮ್ತಾಜ್‌ ಅಲಿ ಆತ್ಮಹ*ತ್ಯೆ ಪ್ರಚೋದನೆ ಆರೋಪ: ಆರೋಪಿಗಳ ವಿರುದ್ದ ಆರೋಪ ಪಟ್ಟಿ ಸಲ್ಲಿಕೆ

Udupi: ಅವಕಾಶಗಳ ಸದ್ಬಳಕೆಗೆ ಮಹಿಳೆಯರು ಹಿಂಜರಿಯಬಾರದು: ಪ್ರಜ್ವಲಾ

Udupi: ಅವಕಾಶಗಳ ಸದ್ಬಳಕೆಗೆ ಮಹಿಳೆಯರು ಹಿಂಜರಿಯಬಾರದು: ಪ್ರಜ್ವಲಾ

Train; ಗೋಮಟೇಶ್ವರ ಎಕ್ಸ್‌ಪ್ರೆಸ್‌ ಮಂಗಳೂರು ಸೆಂಟ್ರಲ್‌ಗೆ ವಿಸ್ತರಿಸಲು ಕ್ಯಾ| ಚೌಟ ಪತ್ರ

Train; ಗೋಮಟೇಶ್ವರ ಎಕ್ಸ್‌ಪ್ರೆಸ್‌ ಮಂಗಳೂರು ಸೆಂಟ್ರಲ್‌ಗೆ ವಿಸ್ತರಿಸಲು ಕ್ಯಾ| ಚೌಟ ಪತ್ರ

Dakshina Kannada ಜಿಲ್ಲಾ ಕಾಂಗ್ರೆಸ್‌ ಅಧ್ಯಕ್ಷ ಸ್ಥಾನಕ್ಕೆ ಐವರ ಹೆಸರು

Dakshina Kannada ಜಿಲ್ಲಾ ಕಾಂಗ್ರೆಸ್‌ ಅಧ್ಯಕ್ಷ ಸ್ಥಾನಕ್ಕೆ ಐವರ ಹೆಸರು


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Bangla-immigrtnst

ಆಪರೇಷನ್‌ ಬಾಂಗ್ಲಾದೇಶಿ; ಅಕ್ರಮ ವಲಸಿಗರ ಪತ್ತೆ ಹಚ್ಚುವ ಕಾರ್ಯಾಚರಣೆ ಚುರುಕು

Explainer; ಭಾರತದ ಪರಮಾಣು ಯುಗದ ರೂವಾರಿಗಳು: ಡಾ. ಆರ್ ಚಿದಂಬರಂ & ಡಾ. ರಾಜಾ ರಾಮಣ್ಣ

Explainer; ಡಾ. ಚಿದಂಬರಂ & ಡಾ. ರಾಜಾ ರಾಮಣ್ಣ;ಪರಮಾಣು ವಿಜ್ಞಾನವನ್ನೂ ಮೀರಿದ ನಾಯಕತ್ವ

ಲೋಕೋಪಯೋಗಿ To ಸಾಹಿತ್ಯಕ್ಷೇತ್ರ: ಚಲನಚಿತ್ರದ ಮೂಲಕ ಖ್ಯಾತಿಗಳಿಸಿದ ನಾ.ಡಿಸೋಜ ಕಾದಂಬರಿಗಳು…

ಲೋಕೋಪಯೋಗಿ To ಸಾಹಿತ್ಯಕ್ಷೇತ್ರ: ಚಲನಚಿತ್ರದ ಮೂಲಕ ಖ್ಯಾತಿಗಳಿಸಿದ ನಾ.ಡಿಸೋಜ ಕಾದಂಬರಿಗಳು…

Trump-Maga

Make America Great Again: ಅಮೆರಿಕದಲ್ಲಿ ಸ್ವದೇಶಿ vs ವಲಸಿಗರು ಜಟಾಪಟಿ

Na-Dsoza-Family

ಸಾಹಿತ್ಯದಾಚೆಗೂ ಬೆಳೆದು ನಿಂತ ಸಾಗರದ ನಾ.ಡಿ’ಸೋಜಾ!

MUST WATCH

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

ಹೊಸ ಸೇರ್ಪಡೆ

BBMP-ED

illegal Investigation: ಬಿಬಿಎಂಪಿ ಮುಖ್ಯ ಎಂಜಿನಿಯರ್‌ ಕಚೇರಿ ಮೇಲೆ ಇ.ಡಿ. ದಾಳಿ

Bjp-Rijiju

Waqf Report: ಅಮಿತ್‌ ಶಾ ಅಂಗಳಕ್ಕೆ ಭಿನ್ನರ ವಕ್ಫ್ ವರದಿ: ಕಿರಣ್‌ ರಿಜಿಜು ಮೂಲಕ ಸಲ್ಲಿಕೆ

Udupi:ಗೀತಾರ್ಥ ಚಿಂತನೆ 149: ಜಗತ್ತಿನಲ್ಲಿ ಇಷ್ಟೊಂದು ವ್ಯತ್ಯಾಸವೇಕೆ? ಪ್ರಶ್ನೆಗುತ್ತರವಿಲ್ಲ

Udupi:ಗೀತಾರ್ಥ ಚಿಂತನೆ 149: ಜಗತ್ತಿನಲ್ಲಿ ಇಷ್ಟೊಂದು ವ್ಯತ್ಯಾಸವೇಕೆ? ಪ್ರಶ್ನೆಗುತ್ತರವಿಲ್ಲ

ಮಮ್ತಾಜ್‌ ಅಲಿ ಆತ್ಮಹ*ತ್ಯೆ ಪ್ರಚೋದನೆ ಆರೋಪ: ಆರೋಪಿಗಳ ವಿರುದ್ದ ಆರೋಪ ಪಟ್ಟಿ ಸಲ್ಲಿಕೆ

ಮಮ್ತಾಜ್‌ ಅಲಿ ಆತ್ಮಹ*ತ್ಯೆ ಪ್ರಚೋದನೆ ಆರೋಪ: ಆರೋಪಿಗಳ ವಿರುದ್ದ ಆರೋಪ ಪಟ್ಟಿ ಸಲ್ಲಿಕೆ

Udupi: ಅವಕಾಶಗಳ ಸದ್ಬಳಕೆಗೆ ಮಹಿಳೆಯರು ಹಿಂಜರಿಯಬಾರದು: ಪ್ರಜ್ವಲಾ

Udupi: ಅವಕಾಶಗಳ ಸದ್ಬಳಕೆಗೆ ಮಹಿಳೆಯರು ಹಿಂಜರಿಯಬಾರದು: ಪ್ರಜ್ವಲಾ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.