ಗೀತಾನಂದಾಶ್ರಮ
Team Udayavani, Jun 20, 2021, 12:00 PM IST
ಬ್ರಹ್ಮಮ್ ಸರ್ವಮಯಂ ಜಗತ್ ಎನ್ನುವುದಕೆೆR ಯುರೋಪ್ ಖಂಡದ ಇಟಲಿಯಲ್ಲಿರುವ ಗೀತಾನಂದಾಶ್ರಮ ಒಂದು ಅತ್ಯುತ್ತಮ ಉದಾಹರಣೆ. ಹಸುರು ಸಿರಿಯ ಮಧೆೆ ದೇಗುಲದ ಆವರಣದೊಳಗಿರುವ ದೊಡ್ಡ ದೊಡ್ಡ ದೇವರ ಮೂರ್ತಿಗಳು ನಡುವೆ ದೇವಿಯ ಗರ್ಭ ಗುಡಿ. ಆಶ್ರಮಕೆೆR ಹೋಗುವ ದಾರಿ ಕಿರಿದಾಗಿದ್ದು ಒಂದು ಸಣ್ಣ ಕಾರು ಮಾತ್ರ ಹೋಗಬಹುದು. ಆದರೆ ಇಷ್ಟು ಬೃಹತ್ ಗಾತ್ರದ ದೇವರ ಮೂರ್ತಿಗಳು, ನವಗ್ರಹಗಳು ಭಾರತದಿಂದ ಇಲ್ಲಿಗೆ ತಲುಪಿ¨ªಾದರೂ ಹೇಗೆ ಎನ್ನುವ ಪ್ರಶ್ನೆ ನಮ್ಮನ್ನು ಕಾಡದೆ ಇರಲಾರದು. ಆಶ್ರಮ ನಿರ್ಮಾಣದ ರೋಚಕ ಸನ್ನಿವೇಶಗಳ ಕುರಿತು ಸ್ವಾಮಿನಿ ಹಂಸಾನಂದ ಗಿರಿ ಅವರು ಹೇಳುತ್ತಿದ್ದರೆ ಮಂತ್ರಮುಗ್ಧರಾಗಿ ಕೇಳುತ್ತಲೇ ಇರಬೇಕು ಎನ್ನುವ ಭಾವನೆ ಮೂಡದೇ ಇರಲಾರದು.
ಜಯ: ಗೀತಾನಂದಾಶ್ರಮದ ಬಗ್ಗೆ ತಿಳಿದುಕೊಳ್ಳಬಹುದೇ?
ಹಂಸಾನಂದ: ಖಂಡಿತ. ಈ ಆಶ್ರಮ ಭಾರತದ ಒಂದು ಕೋನ. ಇದು ಇಟಲಿಯ ಲಿಗೋರಿಯ ಪ್ರಾಂತ್ಯದ, ಪಶ್ಚಿಮ ಭಾಗದಲ್ಲಿನ ಬೆಟ್ಟಗಳ ಮೇಲೆ ಮರ ಗಿಡಗಳಿಂದ ಕೂಡಿದ ಪ್ರಕೃತಿಯ ಆವರಣದಲ್ಲಿ ಕಟ್ಟಲ್ಪಟ್ಟಿದೆ. ಇಲ್ಲಿಗೆ
ಸೇರುವ ದಾರಿ ಇಕ್ಕಟ್ಟಾಗಿದೆ. ಇಕೆೆRಲಗಳಲ್ಲಿ ಕಣಿವೆ ಗಳೂ ಇವೆ. ವಾಹನಗಳನ್ನು ದೂರದಲ್ಲಿ ನಿಲ್ಲಿಸಿ ಪಾದಯಾತೆೆÅಯ ಮೂಲಕವೇ ಬರಬೇಕು.
ಜಯ: ನನಗೊಂದು ಅಚ್ಚರಿ ಸಿಕ್ಕಿದೆ ಇಲ್ಲಿ. ಇಲ್ಲಿರುವ ಇಷ್ಟು ದೊಡ್ಡದೊಡ್ಡ ದೇವರ ಮೂರ್ತಿಗಳನ್ನು ಇಂಥ ಸಣ್ಣ ದಾರಿಯಲ್ಲಿ ಹೇಗೆ ಬಂದು ತಲುಪಿದವು ?
ಹಂಸಾನಂದ: ಗರ್ಭಗುಡಿಯೊಳಗಿರುವ ಬೃಹದಾಕಾರದ ದೇವರ ವಿಗ್ರಹಗಳು ತಮಿಳುನಾಡಿನ ಕಲಾಕಾರರ ಹಾಗೂ ಶಿಲ್ಪಿಗಳ ಕೌಶಲ. ದೇವಸ್ಥಾನ ಕೂಡ ವಾಸ್ತು ಪ್ರಕಾರ ಕಟ್ಟಲಾಗಿದೆ. ಎಲ್ಲ ಪ್ರತಿಮೆಗಳು ಭಾರತದÇÉೇ ಮಾಡಿ ಇಲ್ಲಿಗೆ ಹಡಗುಗಳ ಮೂಲಕ ಜೆನೋವ ಬಂದರಿಗೆ ತರಲಾಯಿತು. ಅಲ್ಲಿಂದ ದೊಡ್ಡ ಲಾರಿಗಳು ಹತ್ತಿರವೇ ಇರುವ ದೊಡ್ಡ ನಗರ ಸವೋನಗೆ ತಲುಪಿಸಿದವು. ದೊಡ್ಡ ಚಿಂತೆ ನಮಗಿದ್ದದ್ದು ಮುಂದೆ ಬೆಟ್ಟದ ಮೇಲೆ ಹೇಗೆ ತರುವುದು ಎಂದು. ಆದರೆ ದೈವಾನುಗ್ರಹ ಜತೆಯಿತ್ತು. ಚಿಕ್ಕ ಲಾರಿಗಳು ಒಂದೊಂದೇ ವಿಗ್ರಹಗಳನ್ನು ಸಣ್ಣ ದಾರಿಯÇÉೇ ನಿಧಾನವಾಗಿ ಚಲಿಸುತ್ತ ಮೇಲೆ ತಂದವು. ವ್ಯವಸಾಯಕೆೆR ಬಳಸುವ ಟ್ರ್ಯಾಕ್ಟರ್‌ಗಳೂ ಭಾಗಿಯಾದವು. ಒಟ್ಟಿನಲ್ಲಿ ಎಲ್ಲ ಮೂರ್ತಿಗಳು ಸಕುಶಲವಾಗಿ ಪವಿತ್ರಸ್ಥಾನ ತಲುಪಿದವು.
ಜಯ: ಇಲ್ಲಿರುವವರನ್ನು ಪರಿಚಯಿಸುವಿರಾ?
ಹಂಸಾನಂದ: ನಾವೆಲ್ಲರೂ ಬ್ರಹ್ಮಚಾರಿಣಿ ಸನ್ಯಾಸಿನಿಗಳು. ನಮ್ಮ ಜೀವನದ ಗುರಿ ಧರ್ಮದ ಹಾದಿಯಲ್ಲಿ ನಡೆದು ಪ್ರಕೃತಿ ಹಾಗೂ ಪ್ರಾಣಿಗಳ ಸಂಗಡ ಪರೋಪಕಾರಿಗಳಾಗಿ ಜೀವನ ಸಾರ್ಥಕ್ಯ ಮಾಡಿಕೊಳ್ಳುವುದು. ಹಿಂದೂ ಮತದ ತಣ್ತೀಗಳನ್ನು ಪಾಲಿಸುವ ಗುರಿ ಇದೆ. ಈ ನಿಟ್ಟಿನಲ್ಲಿ ಅತಿಥಿ ದೇವೋಭವ ಎಂದು ಇಲ್ಲಿಗೆ ಬರುವ ಭಕ್ತರಿಗೆ, ಸಂಶೋಧಕರಿಗೆ, ಕಲಾಕಾರರಿಗೆ, ಅಧಿಕಾರಿಗಳಿಗೆ ಸ್ವಾಗತ ನೀಡಿ ಸತ್ಕಾರ ಮಾಡುತ್ತೇವೆ. ಈ ಮೂಲಕ ಅವರು ಕ್ಷಣಗಳ ಕಾಲವಾದರೂ ಇಲ್ಲಿಯ ನಿವಾಸಿಗಳಲ್ಲಿ ಒಂದಾಗುತ್ತಾರೆ.
ಜಯ: ಆಶ್ರಮ ನಿರ್ಮಾಣದ ಹಿಂದಿರುವ ಕಥೆಯೇನು?
ಹಂಸಾನಂದ: ಪರಮಹಂಸಯೋಗ ಶ್ರೀ ಸ್ವಾಮಿ ಯೋಗಾನಂದಗಿರಿ ಅವರು 1984ರಲ್ಲಿ ಈ ಆಶ್ರಮವನ್ನು ಸ್ಥಾಪಿಸಿದರು. ಅವರೇ ಮಠಾಧಿಕಾರಿ. ಗೀತಾನಂದ ಆಶ್ರಮದ ಹೆಸರು. ಕಳೆದ ಶತಮಾನದಲ್ಲಿ ಜನಿಸಿದ್ದ ಯೋಗ ಋಷಿ ಸ್ವಾಮಿ ಯೋಗಾನಂದಗಿರಿ ಅವರ ಗೌರವಾರ್ಥ ಇಟಲಿಯ ಸನಾತನ ಧರ್ಮ ಸಂಘ ಸ್ಥಾಪಿಸಿದ ಕೀರ್ತಿ ಇವರಿಗೆ ಸಲ್ಲುತ್ತದೆ.
ಜಯ: ಆಶ್ರಮದ ಮುಖ್ಯ ಉದ್ದೇಶಗಳೇನು?
ಹಂಸಾನಂದ: ಇಟಲಿಯಲ್ಲಿ ಹಿಂದೂ ಧರ್ಮದ ಕುರಿತು ಅರಿವು ಮೂಡಿಸುವುದಲ್ಲದೆ ಭಾರತದ ಸಂಸ್ಕೃತಿ, ಕಲೆ, ವಿಜ್ಞಾನಗಳ ಬಗ್ಗೆ ಭಾಷಣ, ಕಲಾ ಪ್ರದರ್ಶನಗಳ ಮೂಲಕ ಜನರಿಗೆ ತಿಳಿಸುವುದು. ಇಲ್ಲಿ ಭರತನಾಟ್ಯ ಶಾಲೆಯನ್ನು ಆತ್ಮಾನಂದ ಅವರು ನಡೆಸುತ್ತಿದ್ದಾರೆ. ಇÇÉೇ ಹುಟ್ಟಿ ಬೆಳೆದ ಭರತನಾಟ್ಯ ಪ್ರವೀಣೆ ಯುವತಿ ಆತ್ಮಾನಂದ ಅವರು ವೈಜಯಂತಿ ಕಾಶಿ ಅವರ ಶಿಷೆೆÂ. ಇವರ ಹೆಸರು ದೇಶ ವಿದೇಶಗಳಲ್ಲಿ ಪ್ರಸಿದ್ಧಿ. ನಮ್ಮ ಸೇವೆ ಇಟಲಿಗೆ ವಾಸ ಮಾಡಲು ಬರುವ ಬಡಬಗ್ಗರಿಗೆ ಸಹಾಯ ಮಾಡುವುದು. ಇದಕ್ಕಾಗಿ ಅವರಿಗಾಗಿ ಒಂದು ಸಂಘ ಇದೆ. ಆಶ್ರಮ ವಾಸಿಗಳು ಆಸ್ಪತೆೆÅಗಳಿಗೆ ಹೋಗಿ ರೋಗಿಗಳ ಸೇವೆ ಹಾಗೂ ಶಾಲೆಗಳಿಗೆ ಹೋಗಿ ಮಕ್ಕಳಲ್ಲಿ ಧರ್ಮದ ಕುರಿತು ಶ್ರದೆೆœ ಮೂಡಿಸಿ ಅದರ ಪಾತ್ರ ಅವರ ವಿದ್ಯಾಭ್ಯಾಸದಲ್ಲಿ ಎಷ್ಟು ಮುಖ್ಯ ಎಂದು ತಿಳಿಸುತ್ತಾರೆ. ನಮ್ಮ ಸಂಪರ್ಕ ಭಾರತ ಹಾಗೂ ಇಟಲಿಯ ರಾಯಭಾರಿ ಕಚೇರಿಗಳಲ್ಲಿ ಇರುವುದರಿಂದ ಎರಡು ದೇಶಗಳ ಯೋಜನೆಗಳಲ್ಲಿ ಪಾಲುಗೊಂಡು ಕೆಲಸ ಮಾಡುತ್ತೇವೆ. ಭಾರತ ಸರಕಾರ ನಮಗೆ “ವಿಶಿಷ್ಟ ಸೇವಾ’ ಬಿರುದನ್ನೂ ನೀಡಿದೆ. ಅಷ್ಟೇ ಅಲ್ಲದೆ ಕಂಚಿಯ ಮಠಾಧಿಕಾರಿಗಳು ಪಾರಿತೋಷಕ ನೀಡಿ ನಮ್ಮನ್ನು ಅಭಿನಂದಿಸಿದ್ದಾರೆ
ಜಯ: ದೇವಿ ದೇವಾಲಯದ ಬಗ್ಗೆ ತಿಳಿಸುವಿರಾ?
ಹಂಸಾನಂದ: ಈ ಊರಿನ ಹೆಸರೇ ಆಲ್ತಾರೆ ಅಂದರೆ ದೇವರಿರುವ ಜಾಗ. ಶ್ರೀ ಲಲಿತಾ ತ್ರಿಪುರಸುಂದರಿ ದೇವಿಗೆ ಸ್ಥಾಪಿಸಿರುವ ದೇವಾಲಯ ಇದು. ಪ್ರವೇಶ ದ್ವಾರ ದÇÉೇ ನವಗ್ರಹಗಳ ಚಿಕ್ಕ ಗುಡಿ. ಮುಖ್ಯ ದೇವಿಯ ಗುಡಿ ಅಲ್ಲದೆ ಆಶ್ರಮದ ಸುಂದರ ಆವರಣದಲ್ಲಿ ಚಿಕ್ಕ ಚಿಕ್ಕ ದೇವಾಲಯಗಳು ಬೇರೆ ದೇವರಿಗಾಗಿ ಕಟ್ಟಲ್ಪಟ್ಟಿದೆ. ಒಂದೊಂದು ಚಿಕ್ಕ ಗುಡಿ ಒಂದೊಂದು ದೇವರಿಗೆ ಪ್ರತ್ಯೇಕವಾಗಿದೆ. ಈ ಬಗೆಯ ಅನೇಕ ದೇವಾಲಯಗಳು ಒಂದೇ ಆವರಣದಲ್ಲಿರುವುದು ಕಾಣಸಿಗುವುದು ವಿಶೇಷ. ಇಲ್ಲಿ ಮುಖ್ಯ ಹಬ್ಬಗಳಾದ ಗಣೇಶ ಚತುರ್ಥಿ, ನವರಾತ್ರಿ, ಗುರುಪೂರ್ಣಿಮೆ, ದೀಪಾವಳಿ ಹಬ್ಬ ಗಳನ್ನು ಆಚರಿಸುತ್ತೇವೆ. ಇಷ್ಟಲ್ಲದೆ ಹಿಂದೂ ಪದ್ಧತಿ ವಿವಾಹಗಳನ್ನು ಶಾಸ್ತ್ರಾನುಸಾರ ನಡೆಸುತ್ತೇವೆ. ಈ ವಿವಾಹ ಗಳನ್ನು ಇಟಲಿ ಸರಕಾರ ಮನ್ನಿಸುತ್ತದೆ.
ಜಯ: ವಿನಾಯಕ ಚತುರ್ಥಿಯ ಆಚರಣೆ ವೈಭವದಿಂದ ನಡೆಯುತ್ತದೆ ಎಂದು ಕೇಳಿದ್ದೇನೆ. ಈ ಬಗೆೆY ತಿಳಿಸಿ.
ಹಂಸಾನಂದ: ಈ ಹಬ್ಬದ ವೇಳೆ ಭಕ್ತರು ಇಟಲಿಯಿಂದ ಅಷ್ಟೇ ಅಲ್ಲದೇ ಯುರೋಪ್ ಹಾಗೂ ಶ್ರೀಲಂಕಾದಿಂದ ಬರುತ್ತಾರೆ. ಈ ಸಂದರ್ಭದಲ್ಲಿ ಸಂಪೂರ್ಣ ಊರನ್ನೇ ಅಲಂಕರಿಸಲಾಗುತ್ತದೆ. ಆಶ್ರಮದಲ್ಲಿ ತಳಿರು ತೋರಣಗಳು, ಹೂವಿನ ಹಾರಗಳು ಹಾಗೂ ರಾತ್ರಿ ವಿದ್ಯುದ್ದೀಪಗಳು ಭಕ್ತ ವೃಂದವನ್ನು ತಣಿಸುತ್ತದೆ. ಭಕ್ತರು ಹಬ್ಬದ ದಿನ ಬೆಳಗಿನ ಜಾವದಲ್ಲಿ ನಗರ ಸಂಕೀರ್ತನೆ ಆಶ್ರಮದ ಆವರಣದಲ್ಲಿ ಮಾಡುತ್ತಾರೆ. ಉತ್ಸವದ ಮೂಲಕ ಗಣೇಶನ ವಿಗ್ರಹ ತರುತ್ತೇವೆ. ಅನಂತರ ಪುರೋಹಿತರಿಂದ ಪೂಜೆ ನಡೆಯುತ್ತದೆ. ಕಡುಬು ನೈವೇದ್ಯ ಮಾಡಿ ಸಮರ್ಪಿಸಲಾಗುತ್ತದೆ. ಸಂಜೆ ಆತ್ಮಾನಂದ ಅವರ ನೃತ್ಯ ಹಾಗೂ ಕೀರ್ತನೆಗಳು ಇರುತ್ತವೆ. ಗಣೇಶನಿಗೆ ಹೋಮ ಕೂಡ ಜರಗುತ್ತದೆ. ಈ ಉತ್ಸವದಲ್ಲಿ ಭಾರತದ ರಾಯಭಾರಿಯ ಅಧಿಕಾರಿಗಳು ಹಾಗೂ ಇಟಲಿಯ ಪ್ರಮುಖರು ಭಾಗವಹಿಸುತ್ತಾರೆ.
ಜಯ: ಆಶ್ರಮದ ದಿನಚರಿಯ ಕುರಿತು ವಿವರಿಸಬಹುದೇ?
ಹಂಸಾನಂದ: ಆಶ್ರಮ ಬೆಟ್ಟಗಳ ಮೇಲಿರುವುದರಿಂದ ಚಳಿಗಾಲದಲ್ಲಿ ತುಂಬಾ ಹಿಮ ಬೀಳುತ್ತದೆ. ಆಗ ಆಶ್ರಮ ಚಿಕ್ಕ ಹಿಮಾಲಯ ಆಗಿ ತನ್ನದೇ ಆದ ಸೌಂದರ್ಯದಿಂದ ಶೋಭಿಸುತ್ತದೆ. ಬ್ರಹ್ಮ ಮುಹೂರ್ತದಲ್ಲಿ ಗಂಟೆಗಳ ನಾದಗಳೊಂದಿಗೆ ಸುಪ್ರಭಾತ, ಓಂಕಾರ, ಪೂಜೆ, ಧ್ಯಾನ ನೈವೇದ್ಯ, ಮಂಗಳಾರತಿ, ಅನಂತರ ಮಧ್ಯಾಹ್ನ ದೇವಿಗೆ ಮಹಾ ನೈವೇದ್ಯ, ಸಂಜೆ ಭಜನ ಕಾರ್ಯ ಕ್ರಮಗಳು ನಡೆಯುತ್ತವೆ. ಅಷ್ಟೇ ಅಲ್ಲದೇ ಯೋಗ ಪಾಠಗಳು, ಪವಿತ್ರ ಗ್ರಂಥಗಳ ಪಠಣ, ವಾರದ ಕೊನೆಯಲ್ಲಿ ಅನೇಕ ಜನರು ಬರುವುದರಿಂದ ಊಟೋಪಚಾರ ವ್ಯವಸ್ಥೆ ಇರುತ್ತದೆ. ನಿಮ್ಮೊಡನೆ ಮಾತನಾಡಿದ್ದು ಬಹಳ ಸಂತೋಷವಾಯಿತು. ಬನ್ನಿ ದೇವರ ಆಶೀರ್ವಾದ ಪಡೆಯೋಣ.
ದತ್ತೋರೆಸ್ಸ ಜಯಮೂರ್ತಿ, ಇಟಲಿ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಜಿ.ಪಂ.,ತಾ.ಪಂ. ಚುನಾವಣೆ ವಿಳಂಬಕ್ಕೆ ಸರಕಾರವೇ ನೇರ ಹೊಣೆ, ನಾವು ಚುನಾವಣೆಗೆ ಸಿದ್ಧ: ಆಯೋಗ
ಆಪರೇಷನ್ ಬಾಂಗ್ಲಾದೇಶಿ; ಅಕ್ರಮ ವಲಸಿಗರ ಪತ್ತೆ ಹಚ್ಚುವ ಕಾರ್ಯಾಚರಣೆ ಚುರುಕು
Explainer; ಡಾ. ಚಿದಂಬರಂ & ಡಾ. ರಾಜಾ ರಾಮಣ್ಣ;ಪರಮಾಣು ವಿಜ್ಞಾನವನ್ನೂ ಮೀರಿದ ನಾಯಕತ್ವ
ಲೋಕೋಪಯೋಗಿ To ಸಾಹಿತ್ಯಕ್ಷೇತ್ರ: ಚಲನಚಿತ್ರದ ಮೂಲಕ ಖ್ಯಾತಿಗಳಿಸಿದ ನಾ.ಡಿಸೋಜ ಕಾದಂಬರಿಗಳು…
Make America Great Again: ಅಮೆರಿಕದಲ್ಲಿ ಸ್ವದೇಶಿ vs ವಲಸಿಗರು ಜಟಾಪಟಿ
MUST WATCH
ಫೋನ್ ಪೇ ಹೆಸರಿನಲ್ಲಿ ಹೇಗೆಲ್ಲಾ ಮೋಸ ಮಾಡುತ್ತಾರೆ ನೋಡಿ !
ನಿಮ್ಮ ತೋಟಕ್ಕೆ ಬೇಕಾದ ಗೊಬ್ಬರವನ್ನು ನೀವೇ ತಯಾರಿಸಬೇಕೆ ? ಇಲ್ಲಿದೆ ಸರಳ ಉಪಾಯ
ಮೈಲಾರಲಿಂಗ ಸ್ವಾಮಿ ಹೆಸರಿನಲ್ಲಿ ಒಂಟಿ ಮನೆಗಳೇ ಇವರ ಟಾರ್ಗೆಟ್ |
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಹೊಸ ಸೇರ್ಪಡೆ
2047 ರ ವೇಳೆಗೆ ದೇಶದ 50% ಜನ ನಗರ ಪ್ರದೇಶಗಳಲ್ಲಿ ವಾಸಿಸುತ್ತಾರೆ: ಸಚಿವ ಖಟ್ಟರ್
VIDEO: ಅಪ್ಪಿಕೊಳ್ಳಲು ಬಂದ ನಿರ್ದೇಶಕನನ್ನು ತಡೆದು ಕೆನ್ನೆಗೆ ಮುತ್ತು ಕೊಟ್ಟ ನಿತ್ಯಾ ಮೆನನ್
Dandeli: ಅಪ್ರಾಪ್ತ ಬಾಲಕಿಯ ಮೇಲೆ ಲೈಂಗಿಕ ಕಿರುಕುಳ : ಪೋಕ್ಸೋ ಪ್ರಕರಣದಡಿ ಓರ್ವನ ಬಂಧನ
Chhattisgarh: ಸ್ಫೋ*ಟದಲ್ಲಿ ಮೃ*ತಪಟ್ಟ 8 ಪೊಲೀಸರಲ್ಲಿ 5 ಮಂದಿ ಮಾಜಿ ನಕ್ಸಲೀಯರು
Naxalites ಶರಣಾಗತಿಯಲ್ಲಿ ಟ್ವಿಸ್ಟ್; ಚಿಕ್ಕಮಗಳೂರು ಬದಲು ಬೆಂಗಳೂರಿನಲ್ಲಿ ನಕ್ಸಲರ ಶರಣಾಗತಿ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.