ಖರ್ಜೂರ  ಗಲ್ಫ್  ನಾಡಿನ ಕಲ್ಪವೃಕ್ಷ


Team Udayavani, Jun 30, 2021, 11:46 PM IST

desiswara

ಗಲ್ಫ್ ಎಂದರೆ ಮನಸ್ಸಿನಲ್ಲಿ ಮೂಡುವುದು ಮರುಭೂಮಿ ಚಿತ್ರಣ, ಅರೇಬಿಕ್‌ ಭಾಷೆಯನ್ನಾಡುವ ಅರಬ್ಬರು. ಗಲ್ಫ್ ನಾಡಿಗೆ ಆಗಮಿಸುವ ಪ್ರವಾಸಿಗರಿಗೆ ಆಕಾಶದೆತ್ತರದಿಂದಲೇ ವಿಹಂಗಮನ ನೋಟದಲ್ಲಿ ಕಾಣುವ ದೃಶ್ಯ ವಿಶಾಲ ಮರುಭೂಮಿ, ಸಾವಿರಾರು ಎಕರೆ ಪ್ರದೇಶಗಳಲ್ಲಿ  ಬೆಳೆದು ನಿಂತಿರುವ ಖರ್ಜೂರ ಮರಗಳ ವನರಾಶಿ. ಮರಳುಗಾಡನ್ನು ಹಸುರು ಭೂಮಿಯನ್ನಾಗಿ ಪರಿವರ್ತಿಸಿದ ಜ್ಞಾನ ವಿಜ್ಞಾನದ ಕ್ರಿಯಾರೂಪದ ಅಧುನಿಕ ನಗರ. ರಾಷ್ಟ್ರೀಯ ಹೆ¨ªಾರಿಗಳ ಇಕ್ಕೆಲಗಳಲ್ಲಿ ಸಾಲು ಸಾಲು ಖರ್ಜೂರ ಮರಗಳು ಹಾಗೂ ಬುಡಗಳ ಸುತ್ತಲೂ ವಿವಿಧ ರೀತಿಯ ಹೂವಿನ ಗಿಡಗಳು ಅರಬ್ಬರ ಸೌಂಧರ್ಯ ಪ್ರಜ್ಞೆಗೆ ಸಾಕ್ಷಿಯಾಗಿದೆ.

ಪಾವಿತ್ರ್ಯತೆ

ಅರಬ್ಬರ ನಾಡಿನಲ್ಲಿ ಖರ್ಜೂರ ಮರವನ್ನು ಪೂಜನೀಯ ಭಾವನೆಯಿಂದ ನೋಡಲಾಗುತ್ತದೆ. ಪವಿತ್ರ ಕುರಾನ್‌ನಲ್ಲಿ ಖರ್ಜೂರ ಮರ ಸ್ವರ್ಗಲೋಕದಲ್ಲಿನ ಮರವೆಂದು ಉÇÉೇಖವಿದೆ. ಇಲ್ಲಿನ ಕಾನೂನಿನಲ್ಲಿ ಖರ್ಜೂರ  ಮರಗಳನ್ನು ಕಡಿಯುವುದು  ನಿಷೇಧಿಸಿದ್ದು, ಕಾನೂನು ಮುರಿದರೆ ಜೈಲು ವಾಸದೊಂದಿಗೆ ಕಠಿನ ಶಿಕ್ಷೆ ವಿಧಿಸಲಾಗುತ್ತದೆ.

ಇತಿಹಾಸ

ಖರ್ಜೂರ ಮರಗಳು ಸಾವಿರಾರು ವರ್ಷಗಳಿಂದ ಮರುಭೂಮಿ ಹಾಗೂ ಉಷ್ಣ ಹವೆ ಇರುವ ಈಜಿಪ್ಟ್, ಇರಾನ್‌, ಸೌದಿ ಅರೇಬಿಯಾ, ಅರಬ್‌ ಸಂಯುಕ್ತ ಸಂಸ್ಥಾನ, ಅಲ್ಜಿರಿಯಾ, ಸುಡಾನ್‌, ಓಮಾನ್‌, ಲಿಬಿಯಾ, ಟುನೇಶಿಯಾ, ಇರಾಕ್‌, ಭಾರತ ಮತ್ತು  ಪಾಕಿಸ್ತಾನದಲ್ಲಿ ಬೆಳೆಯುತ್ತದೆ. ಖರ್ಜೂರ ಮರ ಹೆಚ್ಚಾಗಿ ಮಳೆ ಬೀಳುವ ಪ್ರದೇಶಗಳಲ್ಲಿ ಬೆಳೆಯುವುದಿಲ್ಲ.  ಖರ್ಜೂರ ಮರಕ್ಕೆ ಬಿಸಿಲಿನ ಬೇಗೆ ಹೆಚ್ಚು ಬೇಕಾಗಿರುವುದರಿಂದ ಮರಳುಗಾಡಿನಲ್ಲಿ ಸೊಂಪಾಗಿ ಬೆಳೆಯುತ್ತದೆ. ಕನಿಷ್ಠ ನೀರಿನ ತೇವಾಂಶವನ್ನು ಪಡೆದು ಬೆಳೆದು ಹಲವಾರು ವರ್ಷಗಳ ಕಾಲ ಫ‌ಲ ಕೊಡುತ್ತಿರುತ್ತದೆ.

ಸುಮಾರು  15ರಿಂದ 25 ಮೀಟರ್‌ವರೆಗೆ ಎತ್ತರ ಬೆಳೆಯುವ ಖರ್ಜೂರ ಮರದ ಗರಿ 3- 5 ಮೀಟರ್‌ ಉದ್ದವಿರುತ್ತದೆ. ಒಂದು ಗರಿಯಲ್ಲಿ 150 ಎಲೆಗಳಿದ್ದು ಮೂವತ್ತು ಸೆ.ಮಿ. ಉದ್ದ ಎರಡು ಸೆ.ಮಿ. ಅಗಲವಿರುತ್ತದೆ.

ಯು.ಎನ್‌.ಒ. ಪ್ರಥಮ ಬಾರಿಗೆ 1959ರಲ್ಲಿ ಖರ್ಜೂರ ಸಮ್ಮೇಳನ ಆಯೋಜಿಸಿ, ಖರ್ಜೂರ ಬೆಳೆ ಬೆಳೆಯಲು ಹೆಚ್ಚಿನ ಪ್ರೋತ್ಸಾಹ ನೀಡುವಂತೆ ಕರೆ ನೀಡಲಾಯಿತು. ಖರ್ಜೂರ ಮರಗಳಲ್ಲಿ ಗಂಡು, ಹೆಣ್ಣು ಮರಗಳಿರುತ್ತದೆ. ಗಂಡು ಮರಗಳಲ್ಲಿ ಪರಾಗ ಪುಡಿ  ಕೊಂಬಿನ ರೂಪದಲ್ಲಿ ಉತ್ಪತಿಯಾಗುತ್ತದೆ. ಅದನ್ನು ಕತ್ತರಿಸಿ ಗಾಳಿಯಾಡದಂತೆ ಸುರಕ್ಷಿತವಾಗಿ ಸಂಗ್ರಹಿಸಿ ಇಡಲಾಗುತ್ತದೆ. ಅನಂತರ ಕೆಚಪ್‌ ಬಾಟಲಿಗಳಲ್ಲಿ ತುಂಬಿಸಿ ಹೆಣ್ಣು ಮರದಲ್ಲಿ ಅರಳುವ ಪುಷ್ಪಗಳ ಮೇಲೆ ಸಿಂಪಡಿಸಲಾಗುತ್ತದೆ.

ಪ್ರತಿ ವರ್ಷ ಫೆಬ್ರವರಿ ತಿಂಗಳಿನಲ್ಲಿ ಉತ್ಪತ್ತಿಯಾಗುವ ಪರಾಗ ಪುಡಿಯನ್ನು ಸಂಗ್ರಹಿಸಿ ಮಾರ್ಚ್‌ ತಿಂಗಳಿನಲ್ಲಿ ಹೆಣ್ಣು ಮರದ ಪುಷ್ಪಗಳ ಮೇಲೆ ಉದುರಿಸುತ್ತಾರೆ ಅನುಭವಿ ಕೃಷಿಕರು. ಏಪ್ರಿಲ್‌ ತಿಂಗಳಿನಲ್ಲಿ ಹೆಣ್ಣು ಮರಗಳ ಪುಷ್ಪಗಳಲ್ಲಿ ಖರ್ಜೂರ ಕಾಯಿಗಳು ಉತ್ಪತಿಯಾಗುತ್ತವೆ. ಮೇ ತಿಂಗಳಿನಿಂ¨ ಬಲಿತು ಅಗಸ್ಟ್‌ ತಿಂಗಳಿನಲ್ಲಿ ಹಣ್ಣಾಗುತ್ತದೆ.

ಬೆಳವಣಿಗೆಯ ಹಂತಗಳು

ಇತ್ತೀಚಿನ ವರ್ಷಗಳಲ್ಲಿ ನೂತನ ತಂತ್ರಜ್ಞಾನ ಬಳಸಿ ಹನಿ ನಿರಾವರಿ ಪದ್ಧತಿಯನ್ನು ಪ್ರತಿ ಮರದ ಬುಡದಲ್ಲಿ ಸೆನ್ಸಾರ್‌ ಉಪಕರಣವನ್ನು ಅಳವಡಿಸುತ್ತಾರೆ. ಈ ನವ್ಯ ತಂತ್ರಜ್ಞಾನದಿಂದ ಮಾನವ ಕೆಲಸದ ಅಗತ್ಯವಿಲ್ಲ. ಜತೆಗೆ ನೀರಿನ ತೇವಾಂಶ ನಿರಂತರವಾಗಿರುವುದರಿಂದ ಕ್ರಿಮಿಕೀಟಗಳ ಉಪಟಳವಿರುವುದಿಲ್ಲ.

ಕೀಟಗಳ ಬಾಧೆಯೂ ಇದೆ

ಖರ್ಜೂರ ಹೂ ಬಿಡುವ ಹಂತದಲ್ಲಿ ಕೀಟಗಳು ಹೆಚ್ಚಾಗಿ ದಾಳಿ ಮಾಡುತ್ತದೆ. ಇದಕ್ಕಾಗಿ ಖರ್ಜೂರ ಮರಗಳ ಬುಡದಲ್ಲಿ ಸರಳ ವಿನ್ಯಾಸದ ಪ್ಲಾಸ್ಟಿಕ್‌ ಡಬ್ಬಗಳನ್ನು ಇರಿಸಲಾಗುತ್ತದೆ. ಡಬ್ಬದ ಒಳಭಾಗದಲ್ಲಿ ಕೀಟಗಳನ್ನು ವಿಶೇಷ ದ್ರವ್ಯವನ್ನು ಸಿಂಪಡಿಸಲಾಗುತ್ತದೆ. ರಾತ್ರಿ ವೇಳೆಯಲ್ಲಿ ಕೀಟಗಳನ್ನು ಆಕರ್ಷವಾಗುವಂತೆ  ದೀಪದ ವ್ಯವಸ್ಥೆ ಮಾಡಲಾಗಿರುತ್ತದೆ. ಹಗಲಿನಲ್ಲಿ ದ್ರವ್ಯ ಸುವಾಸನೆಯು ಕೀಟಗಳು ತನ್ನೆಡೆ ಬರುವಂತೆ ಮಾಡಿದರೆ, ರಾತ್ರಿಯಲ್ಲಿ ದೀಪದ ಬೆಳಕಿಗೆ ಅಕರ್ಷಣೆಯಾಗಿ ಕೀಟಗಳು ಕೊಳವೆಯ ಮೂಲಕ ಡಬ್ಬದ ತಳಭಾಗ ಸೇರುತ್ತದೆ.

ಅಲ್ಲಿರುವ ದ್ರವ್ಯದ ಸುವಾಸನೆಗೆ ಉನ್ಮಾದಗೊಂಡು ಕೆಲವೇ ಸಮಯದಲ್ಲಿ ಅವಸಾನಗೊಳ್ಳುತ್ತದೆ. ಮರುದಿನ ತೋಟಗಾರ ಅದನ್ನು ನಾಶ ಪಡಿಸುತ್ತಾನೆ.

ಮರದ ಬುಡದಲ್ಲಿ ಸುತ್ತಲು ಸಸಿಯು ಮೂಲ ಮರದ ಜತೆಯಾಗಿ ಹುಟ್ಟಿಕೊಳ್ಳುತ್ತದೆ. ಆರರಿಂದ ಎಂಟು ವರ್ಷಗಳ ಗಿಡಗಳನ್ನು ಬೇರ್ಪಡಿಸಿ ಬೇರೆ ಜಾಗದಲ್ಲಿ ನೆಡಲಾಗುತ್ತದೆ. ಗಿಡ ನೆಟ್ಟು ಆರು ಏಳು ವರ್ಷಗಳ ಅನಂತರ ಫ‌ಸಲು ಪಡೆಯಬಹುದು. ಹನಿ ನಿರಾವರಿ ಮೂಲಕ ಮರಗಳನ್ನು ಬೆಳೆಸಲಾಗುತ್ತದೆ.

ಖರ್ಜೂರ ಮರಗಳು ಐದು ಸಾವಿರ ವರ್ಷಗಳ ಹಿಂದೆಯೇ ಮಧ್ಯಪ್ರಾಚ್ಯ, ಸಿಂಧೂ ಕಣಿವೆ, ಸೌದಿ ಅರೇಬಿಯಾ, ಸುಡಾನ್‌, ಮೆಸಪೋಟೆಮಿಯಾ, ಈಜಿಪ್ಟ್, ಒಮಾನ್‌, ಟುನೇಶಿಯಾ, ಏಷ್ಯಾ, ಉತ್ತರ ಅಮೆರಿಕ, ಸ್ಪೆನ್‌, ಮೆಕ್ಸಿಕೊ, ಕ್ಯಾಲಿಫೋರ್ನಿಯಾದಲ್ಲಿ ಬೆಳೆಯಲಾಗುತಿತ್ತು.

ಕೊಯ್ಲಿಗೆ ಮೊದಲು ರಕ್ಷಣೆ

ಖರ್ಜೂರ ಹಣ್ಣಿನ ಗೊಂಚಲು ಕಾಯಿಯಾಗಿ ರುವಾಗಲೇ ಪ್ರತಿಗೊಂಚಲಿಗೆ ಮಸ್ಲಿನ್‌ ಬಟ್ಟೆಯಿಂದ ತಯಾರಿಸಲಾದ ಬ್ಯಾಗ್‌ಗಳನ್ನು ಕಟ್ಟಲಾಗುತ್ತದೆ. ಕೀಟಗಳಿಂದ ರಕ್ಷಣೆ ಮಾಡುವುದರ ಜತೆಗೆ ಗೊಂಚಲು ಭಾರವಾಗಿರುವುದರಿಂದ ಮೇಲಿರುವ ಕೊಂಬೆಗಳಿಗೆ ಕಟ್ಟಿ ಗೊಂಚಲು ಮುರಿಯುವುದನ್ನು ತಪ್ಪಿಸಲಾಗುತ್ತದೆ. ಖರ್ಜೂರ ಹಣ್ಣು ಕೊಯ್ಲಿಗೆ ಬಂದ ಅನಂತರ ಪ್ರತಿ ಗೊಂಚಲಿನ ಕೆಳಗೆ ಬಾಸ್ಕೆಟ್‌ ಇರಿಸಿ ಅಲುಗಾಡಿಸಲಾಗುತ್ತದೆ. ಉದುರುವ ಹಣ್ಣುಗಳು ಬಿದ್ದ ಬಳಿಕ ಗೊನೆಯನ್ನು ಕತ್ತರಿಸಲಾಗುತ್ತದೆ. ಹೆಚ್ಚು ಹೆಚ್ಚು ಮರಗಳನ್ನು ಬೆಳೆಸಿರುವ ತೋಪಿನಲ್ಲಿ ಪೋರ್ಕ್‌ ಲಿಫ್ಟ್ ವಾಹನವನ್ನು ಬಳಸಿಕೊಂಡು ವೇಗವಾಗಿ ಹಣ್ಣುಗಳನ್ನು ಸಂಗ್ರಹಿಸಿ ತರಲಾಗುತ್ತದೆ.

ಸಾಮನ್ಯವಾಗಿ ಹಣ್ಣುಗಳನ್ನು ಕೀಳುವಾಗ ಕಡು ಹಳದಿ ಅಥವಾ ಕಡು ಕೆಂಪು ಬಣ್ಣದಲ್ಲಿರುತ್ತದೆ. ಅನಂತರ ಕೆಲವು ದಿನಗಳಲ್ಲಿ ಅದರ ಬಣ್ಣ ಬದಲಾಗುತ್ತದೆ. ಪ್ರತಿಯೊಂದು ಹಂತಗಳಲ್ಲೂ ಪರಿಕ್ಷಿಸಿದ ಅನಂತರವೇ ಸಂಸ್ಕರಣೆ ಮಾಡಲಾಗುತ್ತದೆ. ಖರ್ಜೂರ ಸಂಸ್ಕರಣ ಕಾರ್ಖಾನೆಯಲ್ಲಿ ಅತ್ಯಾಧುನಿಕ ಯಂತ್ರೋಪಕರಣದ ಮೂಲಕವೇ ಸಂಸ್ಕರಿಸಲಾಗುತ್ತದೆ.

ಖರ್ಜೂರಗಳ ಪ್ರಭೇದಗಳಲ್ಲಿ ಅಜ್ವಾ ಖರ್ಜೂರಕ್ಕೆ ಹೆಚ್ಚಿನ ಪ್ರಾಮುಖ್ಯ ನೀಡಲಾಗಿದೆ. ಈ ಖರ್ಜೂರವನ್ನು ಹೆಚ್ಚಾಗಿ ಸೌದಿ ಅರೇಬಿಯಾದಲ್ಲಿ ಬೆಳೆಯಲಾಗುತ್ತದೆ.

ಖರ್ಜೂರ ಮರಗಳನ್ನು ಯಾವುದೇ ಕಾರಣಕ್ಕೂ ಕೊಡಲಿ ಅಥವಾ ಯಂತ್ರದ ಮೂಲಕ ಕತ್ತರಿಸುವುದಿಲ್ಲ. ಬೃಹತ್‌ ಯಂತ್ರ ಬಳಸಿ ಬುಡ ಸಮೇತ ಬೇರೆಡೆಗೆ ಸ್ಥಳಾಂತರಗೊಳಿಸುತ್ತಾರೆ. ತಾನಾಗಿ ಬಿದ್ದ ಮರಗಳನ್ನು ಮಾತ್ರ ಇನ್ನಿತರ ಸಾಮಗ್ರಿಗಳಾಗಿ ಬಳಸುತ್ತಾರೆ.

ಕೆಲವು ಗಲ್ಫ್ ರಾಷ್ಟ್ರಗಳ ಧ್ವಜ, ಲಾಂಛನಗಳಲ್ಲೂ  ಖರ್ಜೂರ ಮರದ ಚಿತ್ರ ಸ್ಥಾನ ಪಡೆದಿದೆ. ಖರ್ಜೂರ ಮರದ ಆಕೃತಿಯನ್ನು ರಚಿಸಿ ದೂರಸಂಪರ್ಕದ ಮೊಬೈಲ್‌ ಟವರ್‌ ಆಗಿ ಗಲ್ಫ್ ವಾಸ್ತುಶಿಲ್ಪದ ಸ್ಥಾನವನ್ನು ಪಡೆದಿದೆ.

ಖರ್ಜೂರದಿಂದ ತಯಾರಿಸಲಾದ ವೈವಿಧ್ಯಮಯ ಅಹಾರೋತ್ಪನ್ನಗಳು, ವಿವಿಧ ಉಡುಗೊರೆಗಳು ಮಾರುಕಟ್ಟೆಯಲ್ಲಿ ಲಭ್ಯವಿವೆ. ಖರ್ಜೂರ ಮರಗಳ ಕಾಂಡ ಮತ್ತು ಗರಿಗಳಿಂದ ವಿವಿಧ ಪೀಠೊಪಕಣಗಳನ್ನು ತಯಾರಿಸಲಾಗುತ್ತದೆ.

ಪ್ರವಾಸಿಗರ ಆಕರ್ಷಣೆ

ವಿಶೇಷವಾಗಿ ಗಲ್ಫ್ ನಾಡಿನಲ್ಲಿ ಮೇ ತಿಂಗಳಿನಿಂದ ಆಗಸ್ಟ್‌ ವರೆಗೆ ತಲೆ ಎತ್ತಿ ನಿಲ್ಲುವ ಖರ್ಜೂರ ವೃಕ್ಷ ರಾಶಿಯಲ್ಲಿ ಹೂ ಗೊಂಚಲು, ಕಾಯಿಗಳು ಹಳದಿ, ಕಡು ಕೆಂಪು ಬಣ್ಣದ ಖರ್ಜೂರ ಗೊಂಚಲುಗಳು ಪ್ರವಾಸಿಗರನ್ನೂ ಆಕರ್ಷಿಸುತ್ತವೆ. ಅರಬ್‌ ಪ್ರಜೆಗಳ ಸೌಂದರ್ಯ ಪ್ರಜ್ಞೆಯೊಂದಿಗೆ ಪರಿಸರ ಕಾಳಜಿ ಮರ ಗಿಡಗಳ ಮೇಲಿರುವ ಅಪಾರ ಪ್ರೀತಿಗೆ ಸಾಕ್ಷಿಯಾಗಿ ಮರಳುನಾಡು ಹಸುರುನಾಡಾಗಿ ಕಂಗೊಳಿಸುತಿದೆ.

 

ಬಿ.ಕೆ. ಗಣೇಶ್‌  ರೈ, 

ದುಬೈ

ಟಾಪ್ ನ್ಯೂಸ್

Stories: ಹಾಡಿನಂಥ ಕಾಡುವಂಥ ಕಥೆಗಳು

Stories: ಹಾಡಿನಂಥ ಕಾಡುವಂಥ ಕಥೆಗಳು

Pushpa-2: ಸಂಕ್ರಾಂತಿಗೆ ಓಟಿಟಿಗೆ ಬರುತ್ತಾ ʼಪುಷ್ಪ-2ʼ?: ಸ್ಪಷ್ಟನೆ ನೀಡಿದ ನಿರ್ಮಾಣ ಸಂಸ್ಥೆ

Pushpa-2: ಸಂಕ್ರಾಂತಿಗೆ ಓಟಿಟಿಗೆ ಬರುತ್ತಾ ʼಪುಷ್ಪ-2ʼ?: ಸ್ಪಷ್ಟನೆ ನೀಡಿದ ನಿರ್ಮಾಣ ಸಂಸ್ಥೆ

Bengaluru: ಚಿನ್ನದಂಗಡಿಯಲ್ಲಿ 3 ಕೆಜಿ ಚಿನ್ನ ದೋಚಿದ ಮಹಿಳೆ

Bengaluru: ಚಿನ್ನದಂಗಡಿಯಲ್ಲಿ 3 ಕೆಜಿ ಚಿನ್ನ ದೋಚಿದ ಮಹಿಳೆ

Expensive wedding: ಭಾರತದ ಅದ್ಧೂರಿ ಮದುವೆ ಮೇಲೆ ಈಗ ಐಟಿ ಕಣ್ಣು!

Expensive wedding: ಭಾರತದ ಅದ್ಧೂರಿ ಮದುವೆ ಮೇಲೆ ಈಗ ಐಟಿ ಕಣ್ಣು!

T20 Asia Cup: ಬಾಂಗ್ಲಾ ವಿರುದ್ದ ಅಂಡರ್‌ 19 ವನಿತಾ ಏಷ್ಯಾಕಪ್‌ ಚಾಂಪಿಯನ್‌ ಆದ ಭಾರತ

T20 Asia Cup: ಬಾಂಗ್ಲಾ ವಿರುದ್ದ ಅಂಡರ್‌ 19 ವನಿತಾ ಏಷ್ಯಾಕಪ್‌ ಚಾಂಪಿಯನ್‌ ಆದ ಭಾರತ

BBK11: ವೀಕ್ಷಕರಿಗೆ ಸರ್ಪ್ರೈಸ್;‌ ಮತ್ತೆ‌ ಬಿಗ್ ಬಾಸ್‌ಗೆ ಗೋಲ್ಡ್‌ ಸುರೇಶ್

BBK11: ವೀಕ್ಷಕರಿಗೆ ಸರ್ಪ್ರೈಸ್;‌ ಮತ್ತೆ‌ ಬಿಗ್ ಬಾಸ್‌ಗೆ ಗೋಲ್ಡ್‌ ಸುರೇಶ್

BGT 2024: Team India faces injury problems ahead of Melbourne match

BGT 2024: ಮೆಲ್ಬೋರ್ನ್‌ ಪಂದ್ಯಕ್ಕೂ ಟೀಂ ಇಂಡಿಯಾಗೆ ಗಾಯಾಳುಗಳ ಸಮಸ್ಯೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Mandya :ಗಂಡ ಗದ್ಯ, ಹೆಂಡತಿ ಪದ್ಯ ಮಕ್ಕಳು ರಗಳೆ: ಹಾಸ್ಯ ಸಾಹಿತಿ ವೈ.ವಿ.ಗುಂಡೂರಾವ್‌

Mandya :ಗಂಡ ಗದ್ಯ, ಹೆಂಡತಿ ಪದ್ಯ, ಮಕ್ಕಳು ರಗಳೆ!: ಹಾಸ್ಯ ಸಾಹಿತಿ ವೈ.ವಿ.ಗುಂಡೂರಾವ್‌

Mandya Sahitya Sammelana: ಅಕ್ಷರ ಜಾತ್ರೆಯಲ್ಲಿ “ಹವಾ’ ಎಬ್ಬಿಸಿದ ತೊಟ್ಟಿ ಮನೆ..!

Mandya Sahitya Sammelana: ಅಕ್ಷರ ಜಾತ್ರೆಯಲ್ಲಿ “ಹವಾ’ ಎಬ್ಬಿಸಿದ ತೊಟ್ಟಿ ಮನೆ..!

Mandya: ನುಡಿ ಹಬ್ಬದ ಔತಣ ಸವಿಯಲು ಜನವೋ ಜನ- ವೃದ್ಧರಿಗೆ ವಿಶೇಷ ಕೌಂಟರ್‌

Mandya: ನುಡಿ ಹಬ್ಬದ ಔತಣ ಸವಿಯಲು ಜನವೋ ಜನ- ವೃದ್ಧರಿಗೆ ವಿಶೇಷ ಕೌಂಟರ್‌

ravishankar-guruji

World Meditation Day; ಶರೀರಕ್ಕೆ ಊಟ, ಆತ್ಮಕ್ಕೆ ಧ್ಯಾನ

1-dhyan

Meditation; ಮಾನಸಿಕ ಆರೋಗ್ಯಕ್ಕೆ ದಿವ್ಯೌಷಧ: ಡಿ.21ರಂದೇ ಏಕೆ ಧ್ಯಾನ ದಿನ?

MUST WATCH

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

ಹೊಸ ಸೇರ್ಪಡೆ

ಕೊಡುವುದರಿಂದ ಕೊರತೆಯಾಗದು!

ಕೊಡುವುದರಿಂದ ಕೊರತೆಯಾಗದು!

Stories: ಹಾಡಿನಂಥ ಕಾಡುವಂಥ ಕಥೆಗಳು

Stories: ಹಾಡಿನಂಥ ಕಾಡುವಂಥ ಕಥೆಗಳು

Pushpa-2: ಸಂಕ್ರಾಂತಿಗೆ ಓಟಿಟಿಗೆ ಬರುತ್ತಾ ʼಪುಷ್ಪ-2ʼ?: ಸ್ಪಷ್ಟನೆ ನೀಡಿದ ನಿರ್ಮಾಣ ಸಂಸ್ಥೆ

Pushpa-2: ಸಂಕ್ರಾಂತಿಗೆ ಓಟಿಟಿಗೆ ಬರುತ್ತಾ ʼಪುಷ್ಪ-2ʼ?: ಸ್ಪಷ್ಟನೆ ನೀಡಿದ ನಿರ್ಮಾಣ ಸಂಸ್ಥೆ

Tragic: ಗಂಡನ ಮೇಲೆ ಅನುಮಾನ: ಹೆಂಡತಿ ನೇಣಿಗೆ ಶರಣು

Tragic: ಗಂಡನ ಮೇಲೆ ಅನುಮಾನ: ಹೆಂಡತಿ ನೇಣಿಗೆ ಶರಣು

4

Bengaluru: ಹಫ್ತಾ ನೀಡಲು ವ್ಯಾಪಾರಿಗೆ ಜೈಲಿನಿಂದಲೇ ಧಮ್ಕಿ!

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.