ಬೃಂದಾವನದಲ್ಲಿ ವಸಂತೋತ್ಸವ- 2021


Team Udayavani, May 16, 2021, 8:51 PM IST

desiswara

ಬೃಂದಾವನ ಕನ್ನಡಕೂಟ 2021 ರಂದು ಆಯೋಜಿಸಿದ ವಸಂತೋತ್ಸವ ಕಾರ್ಯಕ್ರಮ ವಿಜೃಂಭಣೆಯಿಂದ ನಡೆಯಿತು.  ಸಾಮಾನ್ಯವಾಗಿ ಬೃಂದಾವನ ಸದಸ್ಯರು ಚೈತ್ರ ಮಾಸದ ಮಾರ್ಚ್‌- ಏಪ್ರಿಲ್‌ ತಿಂಗಳಲ್ಲಿ ವಸಂತ ನವರಾತ್ರಿ ಅನಂತರ ಯಾವುದಾದರೂ ಶಾಲೆ ಯಲ್ಲಿ ವಸಂತೋತ್ಸವ ಆಚರಿಸು ತ್ತಿದ್ದರು. ಆದರೆ ಕಳೆದ ಒಂದು ವರ್ಷ ದಿಂದ ಎಲ್ಲ ಕಾರ್ಯಕ್ರಮಗಳು ಆನ್‌ಲೈನ್‌ನಲ್ಲಿ ನಡೆಯುತ್ತಿವೆ.

ಪ್ಲವ ನಾಮ ಸಂವತ್ಸರ ವಸಂತೋತ್ಸವದ ಕಾರ್ಯಕ್ರಮ ಮೂರು ದಿನಗಳ ಕಾಲ  ನಡೆಯಿತು. ಇದೇ  ಸಮಯದಲ್ಲಿ ಸುದರ್ಶನ ಬಂಟಪಲ್ಲಿ ಅವರು ನ್ಯೂಜರ್ಸಿಗೆ ಭೇಟಿ ನೀಡಿದ್ದರು.

ರಿದಂ ಗಿಟಾರಿÓr… ಆಗಿ, ಕನ್ನಡ ಚಲನಚಿತ್ರರಂಗದಲ್ಲಿ ಐವತ್ತು ವರ್ಷಕ್ಕೂ ಹೆಚ್ಚು ಅನುಭವವಿರುವ  ಸುದರ್ಶನ್‌ ಅವರು, ನಾಲ್ಕು ಸಾವಿರಕ್ಕೂ ಹೆಚ್ಚು ಕಾರ್ಯಕ್ರಮಗಳನ್ನು ಭಾರತ ಹಾಗೂ ಹೊರ ದೇಶಗಳಲ್ಲಿ ನಡೆಸಿಕೊಟ್ಟಿದ್ದಾರೆ.  ಡಾ| ರಾಜಕುಮಾರ್‌, ಮೈಸೂರ್‌ ಅನಂತ್‌ ಸ್ವಾಮಿ, ರಾಜು ಆನಂತ್‌ಸ್ವಾಮಿ, ಎಸ್‌.ಪಿ. ಬಾಲಸುಬ್ರಮಣ್ಯಂ, ಎಸ್‌. ಜಾನಕಿ, ಸಿ. ಅಶ್ವತ್ಥ್, ಹಂಸಲೇಖ.. ಹೀಗೆ ಹಲವಾರು ಪ್ರಖ್ಯಾತ ಕಲಾವಿದರ ಜತೆ ವೇದಿಕೆ ಹಂಚಿಕೊಂಡಿದ್ದರು.

ಸುದರ್ಶನ್‌ ಅವರ ಮಾರ್ಗ ದರ್ಶನದಲ್ಲಿ ನ್ಯೂಜೆರ್ಸಿಯ ಸಂಗೀತಗಾರರು ಕಾರ್ಯಕ್ರಮ ನೀಡಿದರು.  ಶ್ರೇಯಸ್‌ ಶ್ರೀಕರ್‌ ಹಾಗೂ ಲಕ್ಷ್ಮೀ ಶೈಲೇಶ್‌ ಅವರು ಸುಮಧುರವಾಗಿ ಹಾಡಿದರು.

ಇವರ ಗಾಯನಕ್ಕೆ ಹಿನ್ನೆಲೆ ಸಂಗೀತ ವಿಭಿನ್ನ ವಾದ್ಯಗಳಲ್ಲಿ  ನೀಡಿದವರು ಹರಿಪ್ರಸಾದ್‌ ಅವರು ಕಹುನ್‌ನಲ್ಲಿ, ಅನೀಶ್‌ ಆಚಾರ್ಯ ಶಿಳ್ಳೆ, ಈಶಾನ್‌ ಕೃಷ್ಣಮೂರ್ತಿ ಸ್ಯಾಕೊÕàಫೋನ್‌ ಹಾಗೂ ವೇದ್ರತ್‌ ಮೂರ್ತಿ ಡ್ರಮ್ಸ್ ನುಡಿಸಿದರು. ಈ ಕಾರ್ಯಕ್ರಮ ಎರಡು ಭಾಗದಲ್ಲಿ ವಿಂಗಡಿಸಲಾಗಿದ್ದು, ಮೊದಲು ಚಿತ್ರಗೀತೆಗಳು, ಬಳಿಕ ಭಾವಗೀತೆಗಳು.

ಬೃಂದಾವನ ಕನ್ನಡ ಕೂಟ ಮಕ್ಕಳಿಗೆ ಸದಾ ಪ್ರೋತ್ಸಾಹಿಸುತ್ತಲೇ ಬಂದಿದೆ. ಸಂಗೀತ ಸುಧೆ ಕಾರ್ಯಕ್ರಮದಲ್ಲಿ ಮೂವರು ಯುವ ಬೃಂದಾವನ ಪ್ರತಿಭೆಗಳು ಭಾಗವಹಿಸಿದರು.

ಅನಿಶ್‌ ಆಚಾರ್ಯ, ಈಶಾನ್‌  ಕೃಷ್ಣಮೂರ್ತಿ ಹಾಗೂ ವೇದ್ರತ್‌. ಇವರಿಗೆ ಕರ್ನಾಟಕದಿಂದ ಬಂದಿರುವ ಕಲಾವಿದರ ಜತೆಗೆ ವಾದ್ಯ ನುಡಿಸಲು ಅವಕಾಶವೂ ಸಿಕ್ಕಿತು. ಹಾಗೆಯೇ ಹೊಸ ಕಲಿಕೆಯ ಅನುಭವವೂ ಆಯಿತು. ಈ ಕಾರ್ಯಕ್ರಮವನ್ನು ವೀಕ್ಷಿಸಿದ ಎಲ್ಲ  ಪ್ರೇಕ್ಷಕರು ಸಂಗೀತಲೋಕದಲ್ಲಿ ಮುಳುಗಿದ್ದರು.

 

– ನಾಗಶ್ರೀ ಶಾಸ್ರೀ

ಅಮೆರಿಕದ ನ್ಯೂಜರ್ಸಿಯಲ್ಲಿ ಎ. 25ರಂದು ಬೃಂದಾವನ ಕನ್ನಡ ಕೂಟದ ಪ್ರಗತಿ ತಂಡದಿಂದ ವಸಂತೋತ್ಸವ ಕಾರ್ಯಕ್ರಮದ ಮೂಲಕ ಯುಗಾದಿ ಹಬ್ಬವನ್ನು ಸಡಗರದಿಂದ ಆಚರಿಸಲಾಯಿತು.

ಭಾರತ- ಅಮೆರಿಕ ದೇಶಗಳ ರಾಷ್ಟ್ರಗೀತೆ ಹಾಗೂ ಬೃಂದಾವನ ಕನ್ನಡ ಕೂಟದ ಸಾಂಕೇತಿಕ ಗೀತೆ ಕನ್ನಡದ ಕುಲದೇವಿ ಕಾಪಾಡು ಬಾ ತಾಯೇ  ಹಾಡನ್ನು ಹಾಡಿ  ಪುಟಾಣಿ ಮಕ್ಕಳು ಕನ್ನಡಾಂಬೆಗೆ ನಮಿಸಿದರು. ಅನಂತರ ಆಧ್ಯಾತ್ಮಿಕ ಮಾರ್ಗದರ್ಶಕರು, ತಣ್ತೀಶಾಸ್ತ್ರ, ವೇದಶಾಸ್ತ್ರ, ಜ್ಯೋತಿಷ್ಯಶಾಸ್ತ್ರ ದಲ್ಲಿ ನಿಪುಣರಾದ  ಶ್ರೀ ಕೃಷ್ಣ ವೃಂದ ಮಠದ ಪ್ರಧಾನ ಅರ್ಚಕರು ಆದ ಯೋಗೀಂದ್ರ ಭಟ್‌ ಅವರ ಆಶೀರ್ವಚನ ಮತ್ತು ಪಂಚಾಂಗ ಶ್ರವಣ ಹಬ್ಬದ ಉತ್ಸುಕತೆಯನ್ನು ಹೆಚ್ಚಿಸಿತ್ತು.

ಕಾರ್ಯಕ್ರಮದ  ಮುಖ್ಯ ಅತಿಥಿಯಾಗಿ  ಡಾ| ತೇಜಸ್ವಿನಿ ಅನಂತಕುಮಾರ್‌ ಅವರು ಪಾಲ್ಗೊಂಡು, ಅಮೆರಿಕದಲ್ಲಿ ನೆಲೆಸಿರುವ ತಾಯಿನಾಡಿನ ಮಕ್ಕಳಿಗೆ ಪರಿಸರ ಸಂರಕ್ಷಣೆ, ಹೆಚ್ಚು ಹೆಚ್ಚು ಮರಗಿಡಗಳನ್ನು ಬೆಳೆಸಿ, ಉಳಿಸಿ, ಕಡಿಮೆ ಪ್ಲಾಸ್ಟಿಕ್‌ ಉಪಯೋಗಿಸಿ ಪರಿಸರ ನೈರ್ಮಲ್ಯ ಕಾಪಾಡುವ  ಬಗ್ಗೆ ಮಾರ್ಗದರ್ಶನ ನೀಡಿದರು ಹಾಗೂ ಕಸದಿಂದ ರಸ ಎನ್ನುವಂತೆ ಡಸ್ಟ್‌ಬಿನ್‌ ಕಸಗಳನ್ನು ಬಳಸಿಕೊಂಡು ಹೇಗೆ ಇಂಧನ ತಯಾರಿಸಬಹುದು ಎನ್ನುವ  ಹೊಸ ವಿಚಾರದ ಜ್ಞಾನ ವನ್ನು ನೀಡಿದರು. ಜತೆಗೆ ಅದಮ್ಯ ಚೇತನ ಸಂಸ್ಥೆಯ ಯಶಸ್ಸಿನ ದಾರಿ ಯನ್ನು ವಿವರಿಸಿದರು. ವಿದೇಶಿ ಮಕ್ಕಳ ಕನ್ನಡ ಕಲಿಕೆಯನ್ನು ಕಂಡು ಸಂತೋಷಪಟ್ಟರು. ಭಾರತೀಯರ ಸಂಸ್ಕೃತಿ, ಆಚರಣೆ ನಮ್ಮ ಹೆಮ್ಮೆ ಇದನ್ನು ನಾವೂ ಹೇಗೆ ರೂಢಿಸಿಕೊಂಡು ಬೆಳೆಸಬಹುದು ಎಂಬುದನ್ನು ಅತ್ಯದ್ಭುತವಾಗಿ ವಿವರಿಸಿದರು.

ನ್ಯೂಜರ್ಸಿ ಬೃಂದಾವನ ಕನ್ನಡ ಶಾಲೆ ಮಕ್ಕಳ ಸಾಂಸ್ಕೃತಿಕ ಕಾರ್ಯಕ್ರಮಗಳು ವರ್ಣರಂಜಿತವಾಗಿ ಮೂಡಿಬಂದವು. ಎಡಿಸನ್‌ ಶಾಲೆ ಮಕ್ಕಳು ಜೀವನವೇ ಬೇವು ಬೆಲ್ಲ ಎನ್ನುತ್ತಾ ಅವರ ಮನೆಗಳಲ್ಲಿ ಯುಗಾದಿ ಹೇಗೆ ಆಚರಿಸುತ್ತಾರೆ ಎಂಬುದನ್ನು  ಹಾಡು, ನೃತ್ಯ, ಹಾಸ್ಯ- ಜೋತಿಷ್ಯ  ಮೂಲಕ  ತೋರಿಸಿದ್ದರು. ಹಿಲ್ಸ್‌ ಬರೋ ಶಾಲೆ ಮಕ್ಕಳು ಯುಗಾದಿಯ ಸಡಗರದ ಆಚರಣೆಯ ವಿವರಣೆಯ ಜತೆಗೆ ಸಹೋದರಿಯರು ಹಾಡಿದ ರಾಮ ನವಮಿಯನ್ನು ನೆನಪಿಸುವ ಇನ್ನಷ್ಟು ಬೇಕೆನ್ನ ಹೃದಯಕ್ಕೆ ರಾಮ ಹಾಡು ಅತ್ಯಂತ ಮಧುರವಾಗಿತ್ತು,

ಪಿಯಾನೋ ವಾದನ, ಕೀಬೋರ್ಡ್‌ ವಾದನ  ಪ್ರೇಕ್ಷಕರನ್ನು ಮಂತ್ರ ಮುಗ್ಧಗೊಳಿಸಿತ್ತು. ಹೊಸ ರುಚಿಯಲ್ಲಿ ಅವಲಕ್ಕಿ ಪಾಯಸ ಎಲ್ಲರ ಬಾಯಲ್ಲಿ ನೀರೂರಿಸಿದ್ದು ಸುಳ್ಳಲ್ಲ. ಸೌತ್‌ ಬ್ರ®Õ… ವಿಕ್‌ ಶಾಲೆಯ ಮಕ್ಕಳ ಪರೋಪಕಾರಂ ಇದಂ ಶರೀರಂ ಎಂಬ ಸಂದೇಶ ಹೊತ್ತ ಗೀತರೂಪಕ “ವಿನಮ್ರ ಹಣತೆ’ ಪ್ರೇಕ್ಷಕರ ಮನಸೂರೆಗೊಳಿಸಿತು. ಇಂಗ್ಲಿಷ್‌ ಎಷ್ಟು ಮುಖ್ಯವೋ ಅಷ್ಟೇ ಕನ್ನಡವೂ ಮುಖ್ಯ ಎಂದ ಟಿ.ಪಿ.  ಕೈಲಾಸಂ ಅವರ ಕನ್ನಡ ಪ್ರೀತಿಯನ್ನು ತೋರಿಸುವ ಕಿರುನಾಟಕವನ್ನು  ಮಾಲ್ಬೊìರೋ  ಶಾಲೆಯ ಪುಟಾಣಿ ಮಕ್ಕಳು ಸೊಗಸಾಗಿ ಅಭಿನಯಿಸಿ ತೋರಿಸಿದ್ದರು. ಮಕ್ಕಳ ಸಾಹಿತ್ಯ ರಚನೆಯ ಮೂಲಕ ಮಕ್ಕಳ ಮನಸ್ಸನ್ನು ಗೆದ್ದ ಎನ್‌. ಶ್ರೀನಿವಾಸ ಉಡುಪರ ಕುಂಭಕರ್ಣನ ನಿ¨ªೆ  ಕವನವನ್ನು ನಾಟಕದ ಮೂಲಕ

ಈಸ್ಟ್‌ವಿಂಡರ್ಸ್‌ ಶಾಲೆಯ ಮಕ್ಕಳು ಹಾಸ್ಯ ತುಂಬಿ ಅಭಿನಯಿಸಿ ತೋರಿಸಿದ್ದು,  ವಿಶೇಷವಾಗಿ ನೋಡುಗರ ಮನಸ್ಸನ್ನು ಗೆದ್ದಿತ್ತು. ಭೋ ಶಂಭೋ ಶಿವ ಶಂಭೋ ಹಾಡನ್ನು ಬೃಂದಾವನ ಯುವ ತಂಡ ಹಾಡಿದ್ದು ಅತ್ಯಂತ ಭಕ್ತಿಪೂರ್ವಕವಾಗಿತ್ತು. ಕುಟುಂಬಗಳ ನಡುವಿನ ಬಾಂಧವ್ಯ  ಬೆಸೆಯುವ ಯುಗಾದಿ ಹಬ್ಬವನ್ನು ಬೃಂದಾವನ ಕನ್ನಡ ಕೂಟದ ಸದಸ್ಯರು ಎÇÉೆಲ್ಲೂ ಹಬ್ಬ ಹಬ್ಬ- ಬಂತು ಯುಗಾದಿ ಹಬ್ಬ ಹಾಡನ್ನು ಹಾಡುತ್ತಾ, ಬೃಂದಾವನ ಕನ್ನಡ ಕೂಟದ ಸುಂದರ ಕುಟುಂಬಗಳನ್ನು ಪರಿಚಯಿಸುವ ಪ್ರಯತ್ನ ವಸಂತೋತ್ಸವಕ್ಕೆ  ಹೆಚ್ಚಿನ ಮೆರಗನ್ನು ನೀಡಿತ್ತು.

“ಒಂದು ಲಾಕ್‌ ಡೌನ್‌ ಕಥೆ’ ಈ ಕಿರುನಾಟಕ ಕುಟುಂಬ ಎಂಬ ಪುಟ್ಟ ಜಗತ್ತಿನಲ್ಲಿ ಲಾಕ್‌ ಆದಾಗ ಹೇಗೆ ಹೊಸ ಜಗತ್ತು ತೋರುತ್ತದೆ ಎಂಬ ಸತ್ಯವನ್ನು  ಹಾಸ್ಯಮಯವಾಗಿ ಮನರಂಜಿಸಿದರು. “ಬಣ್ಣ…ಒಲವಿನ ಬಣ್ಣ’ ಹಾಡಿಗೆ ಚೆಲುವೆಯರ ಬಣ್ಣಬಣ್ಣದ ಸೀರೆಯ ಫ್ಯಾಶನ್‌ ಶೋ  ಅತ್ಯಂತ ಸುಂದರವಾಗಿ ಮೂಡಿ ಬಂದಿತ್ತು. ಪ್ರಗತಿ ತಂಡದ ಅಧ್ಯಕ್ಷರಾದ ಪದ್ಮಿನಿ ಹೇಮಂತ್‌ ಮತ್ತು ಸತೀಶ್‌ ಹೊಸನಗರ ಇವರ ಕಾರ್ಯಕ್ರಮ ನಿರೂಪಣೆ ತುಂಬಾ ಚೆನ್ನಾಗಿತ್ತು. ಹೀಗೆ ಅಮೆರಿಕಾದ ನ್ಯೂಜರ್ಸಿ ಯಲ್ಲಿ ಕನ್ನಡದ ಕಂಪು – ಇಂಪಾಗಿ ಮೂಡಿತ್ತು.

 - ಪೂರ್ಣಿಮಾ ರಮೇಶ್‌ ಭಟ್‌, ನ್ಯೂಜರ್ಸಿ

ಟಾಪ್ ನ್ಯೂಸ್

Video: ನ್ಯಾಯ ಕೇಳಲು ಬಂದ ವ್ಯಕ್ತಿಗೆ ಖಾಕಿಯಿಂದ 41 ಸೆಕೆಂಡ್‌ಗಳಲ್ಲಿ 31 ಬಾರಿ ಕಪಾಳ ಮೋಕ್ಷ

Video: ನ್ಯಾಯ ಕೇಳಲು ಬಂದ ವ್ಯಕ್ತಿಗೆ ಖಾಕಿಯಿಂದ 41 ಸೆಕೆಂಡ್‌ಗಳಲ್ಲಿ 31 ಬಾರಿ ಕಪಾಳ ಮೋಕ್ಷ

Mumbai: ಚಿಕಿತ್ಸೆಗೆಂದು ಮುಂಬೈಗೆ ಹೋಗಿದ್ದ ನಾಸಿಕ್ ನ ಒಂದೇ ಕುಟುಂಬದ ಮೂವರ ದುರಂತ ಸಾವು

Mumbai: ಚಿಕಿತ್ಸೆಗೆಂದು ಮುಂಬೈಗೆ ಹೋಗಿದ್ದ ನಾಸಿಕ್ ನ ಒಂದೇ ಕುಟುಂಬದ ಮೂವರ ದುರಂತ ಸಾ*ವು

Kadur: ದೇಗುಲ ಕಂಪೌಂಡ್‌ ಪ್ರವೇಶಿಸಿದರೆಂದು ದಲಿತರಿಗೆ ದಂಡ; ಸವರ್ಣೀಯರಿಂದ ದೇಗುಲಕ್ಕೆ ಬೀಗ

Kadur: ದೇಗುಲ ಕಂಪೌಂಡ್‌ ಪ್ರವೇಶಿಸಿದರೆಂದು ದಲಿತರಿಗೆ ದಂಡ; ಸವರ್ಣೀಯರಿಂದ ದೇಗುಲಕ್ಕೆ ಬೀಗ

0055

BBK11: ಮಂಜು ಅವರದ್ದು ಚೀಪ್ ಮೆಂಟಲಿಟಿ‌ ಎಂದ ರಜತ್; ಭವ್ಯ – ಮೋಕ್ಷಿತಾ ವಾಗ್ವಾದ

9-ullala

Ullala: ಸೇತುವೆಗೆ ತೇಪೆ ಹಚ್ಚುವ ಕಾಮಗಾರಿ; ರಾ. ಹೆದ್ದಾರಿಯಲ್ಲಿ ವಾಹನ ಸಂಚಾರ ವ್ಯತ್ಯಯ

BGT: ಆಸೀಸ್‌ ಮಾಧ್ಯಮದ ವಿರುದ್ದ ವಿರಾಟ್‌ ಗರಂ: ಏರ್‌ಪೋರ್ಟ್‌ ನಲ್ಲಿ ವರದಿಗಾರ್ತಿ ಜತೆ ಜಗಳ

BGT: ಆಸೀಸ್‌ ಮಾಧ್ಯಮದ ವಿರುದ್ದ ವಿರಾಟ್‌ ಗರಂ: ಏರ್‌ಪೋರ್ಟ್‌ ನಲ್ಲಿ ವರದಿಗಾರ್ತಿ ಜತೆ ಜಗಳ

8-belthangady

Belthangady: ಕ್ರಿಸ್ಮಸ್‌ ಹಬ್ಬಕ್ಕೆ ವಿದ್ಯುತ್ ಅಲಂಕಾರ ಮಾಡುವ ವೇಳೆ ಶಾಕ್: ಬಾಲಕ ಸಾವು


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Kannada Sahitya Sammelana: ಕಾವೇರಿ ಹೊನಲಲ್ಲಿ ಕನ್ನಡ ಉಕ್ಕಲಿ…

Kannada Sahitya Sammelana: ಕಾವೇರಿ ಹೊನಲಲ್ಲಿ ಕನ್ನಡ ಉಕ್ಕಲಿ…

One Nation, One Election;ಹಣ, ಸಮಯ ಉಳಿಯಬಹುದು…ಮುಂದಾಗುವ ಸಮಸ್ಯೆಗಳಿಗೆ ಪರಿಹಾರ ಇದೆಯಾ?

One Nation, One Election;ಹಣ, ಸಮಯ ಉಳಿಯಬಹುದು…ಮುಂದಾಗುವ ಸಮಸ್ಯೆಗಳಿಗೆ ಪರಿಹಾರ ಇದೆಯಾ?

8

Year ender: ಈ ವರ್ಷ ನಕ್ಕು ನಗಿಸಿ ಸೋಶಿಯಲ್‌ ಮೀಡಿಯಾದಲ್ಲಿ ವೈರಲ್‌ ಆದ ವಿಡಿಯೋಗಳಿವು..

ಅಪಾಯಕ್ಕೆ ಎದೆಯೊಡ್ಡಿ ವಕ್ಫ್ ವರದಿ ಮಾಡಿದ್ದು ನಾನು, ಅದರಿಂದ ಹಣ ಮಾಡಿದ್ದು ಅನೇಕರು!

ಅಪಾಯಕ್ಕೆ ಎದೆಯೊಡ್ಡಿ ವಕ್ಫ್ ವರದಿ ಮಾಡಿದ್ದು ನಾನು, ಅದರಿಂದ ಹಣ ಮಾಡಿದ್ದು ಅನೇಕರು!

ಕರಾವಳಿಯಲ್ಲಿ ಹೈಕೋರ್ಟ್‌ ಪೀಠ ಸ್ಥಾಪನೆ ­ಅತ್ಯಗತ್ಯ

ಕರಾವಳಿಯಲ್ಲಿ ಹೈಕೋರ್ಟ್‌ ಪೀಠ ಸ್ಥಾಪನೆ ­ಅತ್ಯಗತ್ಯ

MUST WATCH

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

ಹೊಸ ಸೇರ್ಪಡೆ

7

Chikkaballapur: 5 ವರ್ಷದಲ್ಲಿ 514 ತಾಯಿ-ಮಗು ಸಾವಿನ ಪ್ರಕರಣ!

ಪರ್ಯಾಯ ಶ್ರೀ ಪುತ್ತಿಗೆ ಶ್ರೀಕೃಷ್ಣ ಮಠ: ಸ್ಮೃತಿ ಪ್ರತಿಭಾ,ಗೀತಾ ತ್ರಯೋದಶಾವಧಾನ’ ಸಂಪನ್ನ

ಪರ್ಯಾಯ ಶ್ರೀ ಪುತ್ತಿಗೆ ಶ್ರೀಕೃಷ್ಣ ಮಠ: ಸ್ಮೃತಿ ಪ್ರತಿಭಾ,ಗೀತಾ ತ್ರಯೋದಶಾವಧಾನ’ ಸಂಪನ್ನ

Video: ನ್ಯಾಯ ಕೇಳಲು ಬಂದ ವ್ಯಕ್ತಿಗೆ ಖಾಕಿಯಿಂದ 41 ಸೆಕೆಂಡ್‌ಗಳಲ್ಲಿ 31 ಬಾರಿ ಕಪಾಳ ಮೋಕ್ಷ

Video: ನ್ಯಾಯ ಕೇಳಲು ಬಂದ ವ್ಯಕ್ತಿಗೆ ಖಾಕಿಯಿಂದ 41 ಸೆಕೆಂಡ್‌ಗಳಲ್ಲಿ 31 ಬಾರಿ ಕಪಾಳ ಮೋಕ್ಷ

Atlee to collaborate with Salman Khan

Atlee Kumar; ಸಲ್ಮಾನ್‌ ಖಾನ್‌ ಜತೆಗೆ ಅಟ್ಲಿ ಸಿನಿಮಾ

11-

ಪ್ರಧಾನ ಸಂಪಾದಕ ನ್ಯೂಯಾರ್ಕ್ ನ ಬೆಂಕಿ ಬಸಣ್ಣ ವಿರಚಿತ ‘ವಿಶ್ವಕನ್ನಡ ಕೂಟಗಳ ಕೈಪಿಡಿ’ ಬಿಡುಗಡೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.