ಐತಿಹಾಸಿಕ ದಿನಕ್ಕೆ ಸಾಕ್ಷಿಯಾಗಿತ್ತು ಅಮೆರಿಕದ 50ನೇ ಸ್ವಾತಂತ್ರೋತ್ಸವ


Team Udayavani, Jul 17, 2021, 7:32 PM IST

desiswara

ನ್ಯೂಯಾರ್ಕ್‌ :ವಿಶ್ವದ ಅಭಿವೃದ್ಧಿಯಲ್ಲಿ ಅತ್ಯಂತ ಉನ್ನತ ಸ್ಥಾನವನ್ನು ಗಳಿಸಿರುವ ರಾಷ್ಟ್ರ ಅಮೆರಿಕ ಅಂದರೆ ಅಮೆರಿಕ ಸಂಯುಕ್ತ ಸಂಸ್ಥಾನ (ಯುನೈಟೆಡ್‌ ಸ್ಟೇಟ್ಸ್‌ ಆಫ್ ಅಮೆರಿಕ) ಇತ್ತೀಚೆಗಷ್ಟೇ ಅಂದರೆ ಜು. 4ರಂದು ಸ್ವಾತಂತ್ರೊéàತ್ಸವವನ್ನು ಆಚರಿಸಿತು. ಈ ಸಂದರ್ಭದಲ್ಲಿ ಹಳೆಯ ಘಟನೆಯೊಂದು ನೆನಪಾಯಿತು.

1776ರ ಜುಲೈ 4ರಂದು ಪೆನ್ಸಿಲ್ವೇನಿಯಾದ ಫಿಲಿಡೆಲ್ಫಿಯಾದಲ್ಲಿ, ಕಾಂಟಿನೆಂಟಲ್‌ ಕಾಂಗ್ರೆಸ್‌ ಸ್ವಾತಂತ್ರ್ಯ ಘೋಷಣೆಯನ್ನು ಅಂಗೀಕರಿಸಿದ ಅನಂತರ ಗ್ರೇಟ್‌ ಬ್ರಿಟನ್‌ ಮತ್ತು ಅದರ ರಾಜನಿಂದ ಯುನೈಟೆಡ್‌ ಸ್ಟೇಟ್ಸ್‌ ಆಫ್ ಅಮೆರಿಕ ದೇಶದ ಸ್ವಾತಂತ್ರ್ಯವನ್ನು ಘೋಷಿಸಲಾಯಿತು. 1826ರ ಜು. 4ರಂದು ಅಮೆರಿಕದ ಇಬ್ಬರು ಮಾಜಿ ಅಧ್ಯಕ್ಷರ ಕೆಲವೇ ಗಂಟೆಗಳ ಅಂತರದಲ್ಲಿ ನಿಧನರಾದರು. ಇದು ಕಾಕತಾಳೀಯವೋ, ದೇಶಭಕ್ತಿಯೋ, ಪವಾಡವೋ ಅಥವಾ ರಾಜಕೀಯ ತಂತ್ರವೋ ಎಂದು ಬಹಳಷ್ಟು ಮಂದಿ ಆಶ್ಚರ್ಯಪಟ್ಟಿದ್ದರು. ಇದೇ ದಿನ ಅಮೆರಿಕ ದೇಶವು 50 ವರ್ಷಗಳ ಸ್ವಾತಂತ್ರೋತ್ಸವವನ್ನು ಆಚರಿಸಿತ್ತು. ಇದಾದ ಕೆಲವೇ ಗಂಟೆಗಳ ಅಂತರದಲ್ಲಿ, ಈ ದೇಶದ ಹಿಂದಿನ ಇಬ್ಬರು ಪ್ರಖ್ಯಾತ ಅಧ್ಯಕ್ಷರಾದ  83 ವರ್ಷದ ಥಾಮಸ್‌ ಜೆಫ‌ರ್ಸನ್‌ ಮತ್ತು 90 ವರ್ಷದ ಜಾನ್‌ ಆಡಮ್ಸ… ಅವರು ನಿಧನರಾದರು. ಇಬ್ಬರೂ ಅನಾರೋಗ್ಯದಿಂದ ಬಳಲುತ್ತಿದ್ದರೂ, ಅವರ ಸಾವು ಸಾಕಷ್ಟು ಕುತೂಹಲವನ್ನು ಉಂಟುಮಾಡಿತ್ತು. ಯಾಕೆಂದರೆ ಈ ದಿನಾಂಕಕ್ಕೆಂದು ಅವರು ಪರಸ್ಪರ ಹೊಂದಾಣಿಕೆ ಮಾಡಿಕೊಂಡರೋ ಎಂಬ ವಿಷಯವಾಗಿ ಸಾಕಷ್ಟು ಚರ್ಚೆಗಳೂ ನಡೆದಿತ್ತು.

ಅನಂತರದ ದಿನಗಳಲ್ಲಿ ಇವರಿಬ್ಬರ ಹಠಾತ್‌ ನಿಧನದಿಂದ ದೇಶಕ್ಕೆ ಆದ ನಷ್ಟಕ್ಕೆ ಅಮೆರಿಕನ್ನರು ಬೇರೆಬೇರೆ ಕಾರಣಗಳನ್ನು ನೀಡಿದರು. ಕೆಲವರು ಇದನ್ನು ಕಾಕತಾಳೀಯ ಎಂದು ಬರೆದಿದ್ದರೂ ಸಹ, ಅನೇಕರು ಇದನ್ನು ಒಂದು ದೈವಿಕ ವಿನ್ಯಾಸದ ಪ್ರಸಂಗ ಎಂದು ಪುರಾವೆ ನೀಡಿದರು. ಅವರು ವಿಧವಶರಾದ ಒಂದು ತಿಂಗಳ ಅನಂತರ ನೀಡಿದ ಶ್ಲಾಘನೆಯಲ್ಲಿ ಡೇನಿಯಲ್‌ ವೆಬ್‌ಸ್ಟರ್‌ ಈ ಸಂಗತಿಯನ್ನು ಗಮನಾರ್ಹ ಮತ್ತು ಅಸಾಧಾರಣ ಎಂದು ವಿಶ್ಲೇಷಿಸುತ್ತಾ, ಇದು ಕಾಕತಾಳೀಯತೆಯನ್ನು ಸೂಚಿಸುತ್ತದೆ ಎಂದು ಆಶ್ಚರ್ಯ ವ್ಯಕ್ತಪಡಿಸಿದರು.

ಅಮೆರಿಕನ್ನರ ಜೀವನವು ಪ್ರಾವಿಡೆನ್ಸ್‌ನಿಂದ (ಇಲ್ಲಿ ಪ್ರಾವಿಡೆ®Õ… ಅಂದರೆ ದೈವಿಕತೆ ಎಂದು) ಯುನೈಟೆಡ್‌ ಸ್ಟೇಟ್ಸ್‌ಗೆ ದೊರಕಿದ ಉಡುಗೊರೆಗಳಾಗಿವೆ ಎಂದು ಅವರು ಅಭಿಪ್ರಾಯಪಟ್ಟಿದ್ದರು.

ಥಾಮಸ್‌ ಜೆಫ‌ರ್ಸನ್‌ ಮತ್ತು ಜಾನ್‌ ಆ್ಯಡಮ್ಸ… ಅವರ ಜೀವನವು ಯುನೈಟೆಡ್‌ ಸ್ಟೇಟ್ಸ್‌ಗೆ ದೈವಿಕ ಶಕ್ತಿಯಿಂದ ನೀಡಲ್ಪಟ್ಟ ಉಡುಗೊರೆಗಳಾಗಿವೆ. ಅವರು ಸುದೀರ್ಘ‌ ಮತ್ತು ಸಂತೃಪ್ತಿಯ ಜೀವನವನ್ನು ಪೂರೈಸಿ ಅವರ ಜೀವನ ಯಾತ್ರೆಯನ್ನು ಸಂತೋಷದಿಂದ ಮುಗಿಸಿ ನಿರ್ಗಮಿಸಿದರು. ನಮ್ಮ ದೇಶದ ಸಮಸ್ತ ಜನರು ಸರ್ವಶಕ್ತನ ದೈವಿಕ ರಕ್ಷಣೆಯಲ್ಲಿ ಸುರಕ್ಷಿತವಾಗಿದ್ದಾರೆ ಎಂಬುದು ಪುರಾವೆಯಾಗಿದೆ.

ಇದು ಕಾಕತಾಳೀಯ ಅಥವಾ ದೈವೀಕತೆಯ ಹಸ್ತಕ್ಷೇಪವಲ್ಲದಿದ್ದರೆ ಬೇರೆ ಯಾವ ವಿವರಣೆಗಳಿರ ಬಹುದು? ಆಧುನಿಕ ವಿದ್ವಾಂಸರು ಕೆಲವೊಮ್ಮೆ ಇಂತಹ ಅಸಂಭವ ಘಟನೆಗಳು ಸಂಖ್ಯಾಶಾಸ್ತ್ರದ ದೃಷ್ಟಿಯಿಂದ ಸಂಭವಿಸಿರಬಹುದು ಎಂಬುದನ್ನು ಗುರುತಿಸಲು ಪ್ರಯತ್ನಿಸಿದ್ದಾರೆ.

ಜೆಫ‌ರ್ಸನ್‌ ಮತ್ತು ಆಡಮ್ಸ… ಅವರ ಒಂದೇ ದಿನದಲ್ಲಿನ ಸಾವು ವರ್ಷದ ದಿನಗಳ ಶೇ. 365 ರಲ್ಲಿ 1 ಅಂಶದ ಸಂಭವನೀಯತೆಯಿದೆ. ಅವರು ಒಂದು ಮಹತ್ವದ ದಿನಾಂಕ ಮತ್ತು ಐತಿಹಾಸಿಕ ವಾರ್ಷಿಕೋತ್ಸವದಂದು ನಿಧನರಾದರು. ಕಾಕತಾಳೀಯತೆಯ ಮನವಿಗಳು ಸಾಕಷ್ಟಿಲ್ಲದಿದ್ದಾಗ, 2005ರ ಬುಲೆಟಿನ್‌ ಆಫ್ ದಿ ಹಿಸ್ಟಾರಿಕ್‌ ಸೊಸೈಟಿ ವರದಿಯಲ್ಲಿ ಮಾರ್ಗರೇಟ್‌ ಪಿ. ಬ್ಯಾಟಿನ್‌ ಅವರು “ನಾವು ಸಾಮಾನ್ಯ ಸಂದರ್ಭಗಳಲ್ಲಿ ಅಥವಾ ಸಾಮಾನ್ಯ ಕಾರಣಗಳಲ್ಲಿ ಒಂದು ಪ್ರಕರಣದಿಂದ ಇನ್ನೊಂದಕ್ಕೆ ವಿವರಣೆಯನ್ನು ಹುಡುಕಬೇಕು’ ಎಂದು ಬರೆಯುತ್ತಾರೆ.

ಒಂದು ಸಂಭಾವ್ಯ ವಿವರಣೆಯನ್ನು ಹೀಗೆ ಉತ್ತಮವಾಗಿ ದಾಖಲಿಸಲಾಗಿದೆ.

ಜೆಫ‌ರ್ಸನ್‌ ಮತ್ತು ಆಡಮ್ಸ… ಉದ್ದೇಶ ಪೂರ್ವಕವಾಗಿ ತಮ್ಮ ಜೀವವನ್ನು ಹಿಡಿದಿಟ್ಟು ಕೊಂಡಿ¨ªಾರೆ ಎಂದು ಪ್ರಸ್ತಾಪಿಸುತ್ತಾ, ತಾವು ಪ್ರೀತಿಸಿದ ನಾಡು ಮತ್ತು ನಾಡಿನ ಜನತೆಗೆ ವಿದಾಯ ಹೇಳುವ ಪ್ರೀತಿ ಮತ್ತು ಸಮಯವನ್ನು ತಮ್ಮಲ್ಲಿ ಹುದುಗಿರುವ ವಿಶೇಷ ಶಕ್ತಿಯಿಂದ ಮತ್ತು ದೇಶಭಕ್ತಿಯಿಂದ, ತಮ್ಮ ಜೀವವನ್ನು ಹಿಡಿದಿಟ್ಟುಕೊಂಡು, ಒಂದು ಅಮೃತ ಘಳಿಗೆಯಲ್ಲಿ ಕೊನೆಯ ಉಸಿರೆಳೆದಿ¨ªಾರೆ.

ಆಡಮ್ಸ… ಮತ್ತು ಜೆಫ‌ರ್ಸನ್‌ ಅವರ ಬದುಕುವ ಆಕಾಂಕ್ಷೆ ಜುಲೈ 4ರ ಮುಂಚಿನ ಆ ಅಂತಿಮ ದಿನಗಳಲ್ಲಿ ಮುಂದುವರಿಯುವ ಸಾಧ್ಯತೆ ಸಂಪೂರ್ಣವಾಗಿ ಸಾಧ್ಯವಿದೆ. ಆದರೆ ಜುಲೈ 4ರ ಅನಂತರ ಅವರನ್ನು ಜೀವಂತವಾಗಿಡಲು ಯಾವುದೇ ಶಕ್ತಿಗೂ ಸಾಧ್ಯವಿರಲಿಲ್ಲ.

ವಾಸ್ತವವಾಗಿ, ಸಮಕಾಲೀನ ಮೇಧಾವಿ ಗಳೂ ಸಹ- ಇದು ಪ್ರಜ್ಞಾಪೂರ್ವಕ ನಿರ್ಧಾರ ವಾಗಿರಬಹುದು ಎಂದು ಭಾವಿಸಿದ್ದರು.

1876 ರ ಜುಲೈ ತಿಂಗಳ ಮಧ್ಯದಲ್ಲಿ ನ್ಯೂಯಾರ್ಕ್‌ ನಲ್ಲಿ ಜೆಫ‌ರ್ಸನ್‌ಗೆ ನೀಡಿದ ಶ್ಲಾಘನೆಯಲ್ಲಿ, ಉದ್ಯಮಿ ಮತ್ತು ರಾಜಕಾರಣಿ ಚರ್ಚಿಲ್‌ ಸಿ. ಕ್ಯಾಂಬ್ರೆಲೆಂಗ್‌ ಹೀಗೆ ಹೇಳಿರುವುದನ್ನು ದಾಖಲಿಸಲಾಗಿದೆ.

“ದೇಹವು ಹೇಗೂ ವ್ಯರ್ಥವಾಯಿತು; ಆದರೆ ಅಪಾರ ಶಕ್ತಿಯುತ ಆಂತರಿಕ ಮನಸ್ಸಿನ ಆಕಾಂಕ್ಷೆಗಳು, ಪ್ರಕೃತಿಯ ಅವಧಿ ಮುಗಿಯುವುದರೊಂದಿಗೆ ಹೋರಾಡುತ್ತಾ, ಒಂದು ಅಪೂರ್ವ ಕಾಂತಿ ಕಿರಣದಂತೆ ಅವರನ್ನು ಜೀವಂತವಾಗಿರಿಸಿತು; ನಮ್ಮ ದೇಶದ 50ನೇ ವಾರ್ಷಿಕೋತ್ಸವದ ದಿನ ಸೂರ್ಯನ ಪ್ರಕಾಶಮಾನವಾದ ಕಿರಣಗಳು ಅಮೆರಿಕ ರಾಷ್ಟ್ರದ ಮೇಲೆ, ತನ್ನ ಅಪೂರ್ವ ಕಾಂತಿಯ ಬೆಳಕು ಚಿಮ್ಮಿ ಹೊಮ್ಮುವ ಕ್ಷಣಗಳನ್ನು ನೋಡಿದ ಅನಂತರವೇ ಕಡೆ ಉಸಿರೆಳೆಯುವ ಘೋಷಣೆಯನ್ನು ಪ್ರಸಿದ್ಧ ಜೆಫ‌ರ್ಸನ್‌ ಮತ್ತು ಜಾನ್‌ ಆ್ಯಡಮ್ಸ…   ಜಗತ್ತಿಗೆ ನೀಡಿದರು’ ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಅವರ ಏಕಕಾಲಿಕ ಸಾವಿನ ಬಗ್ಗೆ ಅನೇಕ ಪಿತೂರಿ ಸಿದ್ಧಾಂತಗಳು ಸಹ ಆ ವೇಳೆ ಮತ್ತು ಅನಂತರದ ಶತಮಾನಗಳಲ್ಲಿ ಪ್ರಸಾರವಾಗಿವೆ. ಆದರೆ ಈ ಎಲ್ಲ ವಿವರಣೆಗಳು ಒಂದು ಅಥವಾ ಇನ್ನೊಂದರ ಇತಿ ಮಿತಿಗಳನ್ನು ಹೊಂದಿವೆ. ವಿಶೇಷವಾಗಿ ಐತಿಹಾಸಿಕ ಪುರಾವೆಗಳು ಇಲ್ಲಿ ಸಿಗುವುದು ತುಂಬಾ ವಿರಳ. ಇದರ ಹಿಂದಿನ ಕಾರಣ ಏನೇ ಇರಲಿ, ಹೇಗೇ ಆಗಿರಲಿ ಈ ಸಾವುಗಳು ಮತ್ತು ಅವುಗಳು ಜರಗಿದ ದಿನಾಂಕ  ಮಾತ್ರ ಅತ್ಯಂತ ಗಮನಾರ್ಹವಾದ, ಅಜರಾಮರವಾದ, ಅಪರೂಪದ, ಬಹುಶಃ ಮುಂದೆಂದೂ ಬಾರದ ಇತಿಹಾಸದ ಘಟನೆಗಳೆಂದು ಸಮಸ್ತ ರೀತಿಯಿಂದ ಸಮ್ಮತಿಯಾಗಿದೆ.

 

ಡಾ|ಬ.ರಾ. ಸುರೇಂದ್ರ,

ಟಾಪ್ ನ್ಯೂಸ್

Udupi: ಗೀತಾರ್ಥ ಚಿಂತನೆ-163: ದ್ವಂದ್ವ ಇದ್ದಾಗ ಅನುಭವವೇ ಉತ್ತರ

Udupi: ಗೀತಾರ್ಥ ಚಿಂತನೆ-163: ದ್ವಂದ್ವ ಇದ್ದಾಗ ಅನುಭವವೇ ಉತ್ತರ

KSD-

Kasaragodu: ಆದೂರು ಶ್ರೀಭಗವತಿ ದೈವಸ್ಥಾನ: 351 ವರ್ಷ ಬಳಿಕ ಪೆರುಂಕಳಿಯಾಟ ಸಂಭ್ರಮ

Police

Kodagu: ಬ್ಯಾಂಕ್‌ ಅಧಿಕಾರಿಗಳು, ಜುವೆಲರಿ ಮಾಲಕರ ಜೊತೆ ಎಸ್‌ಪಿ ಸಭೆ

cOurt

Mangaluru: ಪೋಕ್ಸೋ ಪ್ರಕರಣದ ಆರೋಪಿ ದೋಷಮುಕ್ತ

ಹೆಬ್ಬಾಳ್ಕರ್‌ಗೆ ರವಿ ಅಶ್ಲೀಲ ಪದ ಬಳಸಿದ್ದು ನಿಜ: ಯತೀಂದ್ರ ಹೇಳಿಕೆ

ಹೆಬ್ಬಾಳ್ಕರ್‌ಗೆ ರವಿ ಅಶ್ಲೀಲ ಪದ ಬಳಸಿದ್ದು ನಿಜ: ಯತೀಂದ್ರ ಹೇಳಿಕೆ

MLA ಮುನಿರತ್ನ ವಿರುದ್ಧ ಮತ್ತೊಂದು ಜಾತಿ ನಿಂದನೆ ಪ್ರಕರಣMLA ಮುನಿರತ್ನ ವಿರುದ್ಧ ಮತ್ತೊಂದು ಜಾತಿ ನಿಂದನೆ ಪ್ರಕರಣ

MLA ಮುನಿರತ್ನ ವಿರುದ್ಧ ಮತ್ತೊಂದು ಜಾತಿ ನಿಂದನೆ ಪ್ರಕರಣ

ಸಮಾಜಘಾತಕ ಶಕ್ತಿಗಳ ವಿರುದ್ಧ ಗಂಭೀರ ಕ್ರಮ: ಸಿದ್ದರಾಮಯ್ಯ ಎಚ್ಚರಿಕೆ

ಸಮಾಜಘಾತಕ ಶಕ್ತಿಗಳ ವಿರುದ್ಧ ಗಂಭೀರ ಕ್ರಮ: ಸಿದ್ದರಾಮಯ್ಯ ಎಚ್ಚರಿಕೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Maha Kumbh Mela 2025: ಛತ್ತೀಸ್‌ ಗಢ ಟು ಪ್ರಯಾಗ್‌ ರಾಜ್;‌ ಸ್ಕೇಟಿಂಗ್‌ ಮೂಲಕ ಕುಂಭಮೇಳಕ್ಕೆ ಆಗಮಿಸಿದ ಯುವಕ

Maha Kumbh: ಛತ್ತೀಸ್‌ ಗಢ ಟು ಪ್ರಯಾಗ್‌;‌ ಸ್ಕೇಟಿಂಗ್‌ ಮೂಲಕ ಕುಂಭಮೇಳಕ್ಕೆ ಆಗಮಿಸಿದ ಯುವಕ

mahatma-gandhi

Belagavi Congress Session: “ತ್ರಿಸೂತ್ರ’ವೇ ನವಭಾರತದ ಮಂತ್ರ!

Work-Time

Work Time Issue: ವಾರಕ್ಕೆ 90 ಗಂಟೆ ಕೆಲಸ ಸಲೀಸಾ?

Jalachara-4

Winter Season: ಚಳಿಗಾಲದಲ್ಲಿ ಕಡಲಿಗೆ ಇಳಿಯುವ ಮುನ್ನ…

CO2

ಶೂನ್ಯ ಇಂಗಾಲದ ಗುರಿ: ಜಾಗತಿಕ ಸಹಭಾಗಿತ್ವ ಅಗತ್ಯ

MUST WATCH

udayavani youtube

ಕಡಿಮೆ ಜಾಗದಲ್ಲಿ ಉತ್ತಮ ಅನಾನಸ್ ಕೃಷಿ ಮಾಡಲು ಇಲ್ಲಿದೆ ಮಾಹಿತಿ

udayavani youtube

ಮಂಗಳೂರು | ಸ್ಥಳೀಯ ಮನೆಯಂಗಳಕ್ಕೆ ಹರಿಯುತ್ತಿರುವ ಡ್ರೈನೇಜ್ ಕೊಳಚೆ

udayavani youtube

|ಹೂವಿನ ತೋಟದಲ್ಲಿ ಅರಳಿದೆ ರಾಮಾಯಣ ಕಥನ

udayavani youtube

ಮಿದುಳು ನಿಷ್ಕ್ರಿಯಗೊಂಡಿದ್ದ ಮಹಿಳೆಯ ಅಂಗಾಂಗ ದಾನ

udayavani youtube

ಅಮೇರಿಕಾದಲ್ಲಿ ವೈಕುಂಠ ಏಕಾದಶಿ ಸಂಭ್ರಮ

ಹೊಸ ಸೇರ್ಪಡೆ

Suside-Boy

Manipal: ಪಶ್ಚಿಮ ಬಂಗಾಲದ ವ್ಯಕ್ತಿಯ ಶವ ಪತ್ತೆ

Udupi: ಗೀತಾರ್ಥ ಚಿಂತನೆ-163: ದ್ವಂದ್ವ ಇದ್ದಾಗ ಅನುಭವವೇ ಉತ್ತರ

Udupi: ಗೀತಾರ್ಥ ಚಿಂತನೆ-163: ದ್ವಂದ್ವ ಇದ್ದಾಗ ಅನುಭವವೇ ಉತ್ತರ

Frud

Udupi: ಷೇರು ಮಾರುಕಟ್ಟೆಯಲ್ಲಿ 21ಲಕ್ಷ ರೂ. ಹೂಡಿಕೆ: ವಂಚನೆ

balaparadha

Kumbale: ಮೊಬೈಲ್‌ ಫೋನ್‌ ಕಳವು: ಆರೋಪಿ ಸೆರೆ

Suside-Boy

Vitla: ಅನಂತಾಡಿ: ಸೀರೆಗೆ ಬೆಂಕಿ ತಗಲಿ ಗಾಯಗೊಂಡಿದ್ದ ಮಹಿಳೆ ಸಾವು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.