ಒಂದು ರಾಗದ ನೆನಪಿನ ಬಣ್ಣ !
Team Udayavani, May 19, 2021, 2:04 PM IST
ನಾವು ವಾಸವಾಗಿರುವ ಅಪಾರ್ಟ್‌ಮೆಂಟ್‌ನ ಗ್ರೌಂಡ್ ಫ್ಲೋರ್‌ನಲ್ಲಿ ಅಂಗಡಿಗಳಿವೆ. ಚಿಕ್ಕ ಸೂಪರ್ ಮಾರ್ಕೆಟ್, ಲಾಂಡ್ರಿ, ಫ್ಲೋರಿಸ್ಟ್ ಶಾಪ್, ಒಂದು ಚಿಕ್ಕ ಬೇಕರಿ. ಇಲ್ಲಿ ನೆಲೆಸಿರುವವರ ಅನುಕೂಲಕ್ಕಾಗಿ. ಅದೊಂದು ದಿನ ಬೆಳಗ್ಗೆ ಯುನಿವರ್ಸಿಟಿಗೆ ಹೊರಟಿದ್ದೆ. ಲಿಫ್ಟ್ನಿಂದ ಹೊರಬಂದು ಹೂವಿನ ಅಂಗಡಿ ಎದುರು ಬರುತ್ತಿದ್ದಂತೆ ಇಂಪಾದ ಹಿತವಾದ ಹಿಂದಿಯ ಹಾಡೊಂದು ತೇಲಿಬಂತು.
ಅಪಾರ್ಟ್ ಮೆಂಟ್ ರಿಸೆಪ್ಶನಿಗೆ ತಾಗಿಕೊಂಡಿರುವ ಮೊದಲನೇ ಅಂಗಡಿಯೇ ಹೂವಿನದು. ಅಂಗಡಿಯನ್ನು ನೋಡುವುದೇ ಸಂತಸ. ಅಷ್ಟು ಚೆಂದವಾಗಿದೆ. ಅಲ್ಲಿ ಮೂವರು ಫಿಲಿಫಿನಿ ಜನರು ಕೆಲಸ ಮಾಡುತ್ತಾರೆ. ಮಾಲಕ ಸೌದಿ ಅರೇಬಿಯಾದವರು. ಅವರು ಹಿಂದಿ ಹಾಡುಗಳ ಅಭಿಮಾನಿ. ಅವರ ಮೊಬೈಲಿಂದ ತೇಲಿಬಂದ ಹಾಡು, ನಾನು ಕಾರಿನೊಳಗೆ ಕುಳಿತು ಯುನಿವರ್ಸಿಟಿಗೆ ಸಾಗುತ್ತಿರುವಾಗ ಹಳೆಯದೊಂದು ಅವಿಸ್ಮರಣೀಯ ನೆನಪು ರಂಗು ಪಡೆಯಲು ಪ್ರೇರೇಪಿಸಿತು.
ಅಂದು ಬೆಳಗ್ಗೆ ದಿ| ಪಂಡಿತ ಕುಮಾರ ಗಂಧರ್ವರ ಮಗಳು ಕಲಾಪಿನಿ ಕೊಂಮಕಾಳಿ ಧಾರವಾಡದ ನಮ್ಮ ಮನೆಗೆ ಆಗಮಿಸಿದ್ದರು. ಬೆಳಗಿನ ತಿಂಡಿಯ ಅನಂತರ ನಾವೆಲ್ಲ ಹರಟುತ್ತ ಕುಳಿತಿದ್ದಾಗ ಕಲಾಪಿನಿ ಅವರು ಕುಮಾರ ಗಂಧರ್ವರ Tribute to Kumar Gandharva ಎಂಬ 1993ರಲ್ಲಿ ಬಿಡುಗಡೆಯಾದ ಧ್ವನಿಸುರುಳಿಯನ್ನು ನಮ್ಮ ಕೈಗಿತ್ತರು. ಅಂದು ಕಲಾಪಿನಿಯವರ ಸಂಗೀತ ಕಛೇರಿಯಿತ್ತು.
ಆ ದಿನ ಕಾರ್ಯಕ್ರಮದಲ್ಲಿ ಪಾಲ್ಗೊಂಡ ನಾವು ಮಾರನೇ ದಿನ ಅವರು ತೆರಳಿದ ಅನಂತರ ನಮಗಿತ್ತ ರೆಕಾರ್ಡಿಂಗ್ ಕೇಳತೊಡಗಿದೆವು. ಹಾಡು ಪ್ರಾರಂಭವಾಗಿ ಐದಾರು ನಿಮಿಷವಾಗಿರಬಹುದು. ಆಗ ಮನೆ ಯಲ್ಲಿದ್ದ 8 ತಿಂಗಳ ನನ್ನ ಪುಟ್ಟ ಮಗು ದಾಮಿನಿ, ಹಾಡಿಗೆ ನೃತ್ಯ ಮಾಡುವಂತೆ ಕೈಕಾಲು ಜೋರಾಗಿ ಬಡಿಯಲು ಪಾಾÅರಂಭಿಸಿದಳು. ಒಂದೆರಡು ಶಬ್ಧ ಮಾತನಾಡುತ್ತಿದ್ದ ನಡೆಯಲು ಬಾರದ ಮಗು ಹಾಗೂ ಹೀಗೂ ಎದ್ದು ನಿಲ್ಲುವ ಪ್ರಯತ್ನ ಸಾಗಿತ್ತು. ಸುಶ್ರಾವ್ಯವಾಗಿ ಕುಮಾರ ಗಂಧರ್ವರ ಸಿರಿ ಕಂಠದಿಂದ ಹಾಡು ಹೊಮ್ಮುತ್ತಿತ್ತು ನನ್ನ ಮಗಳು ತನ್ನದೇ ರಾಗದಲ್ಲಿ ಕಿರುಚುತ್ತಾ ಎದ್ದು ನಿಂತು ಹೆಜ್ಜೆ ಹಾಕಿ ನಡೆದು ಪ್ಲೇಯರ್ ತಬ್ಬಿಕೊಂಡಳು.
ಇದು ಇಂದಿಗೂ ನಮಗೆ ಮತ್ತೆ ಮತ್ತೆ ಕನಸಿನಂತೆ ಕಣ್ಣೆದುರು ಬರುವು ದೃಶ್ಯವಿದು. ಸ್ವರದ ಸ್ಪಂದನೆಯ ಶಕ್ತಿಯ ವಿಚಾರ ಅಲ್ಲೆಲ್ಲಿಯೋ ಓದಿ ತಿಳಿದುಕೊಂಡ ನಮಗೆ, ಭಾಷೆ ಅರಿಯದವರ ಮೇಲೂ ಸಂಗೀತ ಪ್ರಭಾವ ಬೀರುವುದೆನ್ನುವ ಪ್ರತ್ಯಕ್ಷ ದರ್ಶನದ ಅನುಭವವಾಯಿತು. ನಾನು ಉರುಳಿಕಾಂಚನ ನಿಸರ್ಗ ಆಶ್ರಮ ಪುಣೆಯಲ್ಲಿ ಕೆಲವು ತಿಂಗಳು ಕೆಲಸ ಮಾಡಿದಾಗ ಸಂಗೀತ ಚಿಕಿತ್ಸೆಯನ್ನೂ ಕಲಿತಿದ್ದೆ. ಶಿವಪುತ್ರ ಸಿದ್ಧರಾಮಯ್ಯ ಕೊಂಮಕಾಳಿಮಠ ಇವರ ಮೂಲ ನಾಮಧೇಯ, ಕುಮಾರ ಗಂಧರ್ವ ಇವರಿಗೆ ಅರ್ಪಿತವಾದ ಉಪಾಧಿ. 1924 ರಲ್ಲಿ ಜನ್ಮ, 1992ರಲ್ಲಿ ಮರಣ. ಬೆಳಗಾವಿಯ ಸುಲೇಭಾವಿ ಜನ್ಮಸ್ಥಳ, ಭೋಪಾಲದ ದೇವಾಸದಲ್ಲಿ ನೆಲೆಸಿದ್ದರು.
ನನ್ನ ಮಗಳು ಅವರನ್ನು ನೋಡಿಲ್ಲ, ಕೇವಲ ಸ್ವರದ ಸೆಳೆತ ಅವಳನ್ನು ಪ್ರೇರೇಪಿಸಿತು. ಸಂಗೀತ ಚೇತನ, ಸ್ವರ ಮಾಂತ್ರಿಕರು ಅವರು. ನಮ್ಮ ಭಾರತೀಯ ಶಾಸ್ತ್ರೀಯ ಸಂಗೀತಕ್ಕೆ ಪುರಾತನ ಹಿನ್ನೆಲೆಯಿದೆ. ವೇಳೆಗೆ ಅನುಗುಣವಾಗಿ ಮುಂಜಾನೆ, ಸಂಜೆ, ರಾತ್ರಿಯ ರಾಗಗಳು ಮತ್ತು ರಾಗಗಳನ್ನು ಪ್ರಹರಗಳಿಗೆ ಅನುಗುಣವಾಗಿ ಹಾಡಲಾಗುತ್ತದೆ. ಇನ್ನು ಋತುಗಳಿಗೆ ಹೇಮಂತ ರಾಗ, ರಾಗ ಬಸಂತ, ರಾಗ ಮೇಘ ಮಲ್ಹಾರ ಇತ್ಯಾದಿ ಹಲವು ಪ್ರಕಾರಗಳಿವೆ. ಮನುಷ್ಯನ ಮಾನಸಿಕ ಸ್ಥಿತಿಯ ಮೇಲೆ ಪರಿಣಾಮ ಬೀರುವ ರಾಗಗಳು, ತನ್ನದೇ ಆದ ವಾತಾವರಣ ಸೃಷ್ಟಿಸುವ ವಿಶಿಷ್ಟ ಸಾಮರ್ಥ್ಯ ಹೊಂದಿವೆ. ತಾನಸೇನ ಮೇಘ ಮಲ್ಹಾರ ರಾಗ ಹಾಡಿದಾಗ ವರ್ಷಧಾರೆಯಾಗುತ್ತಿತ್ತು, ರಾಗ ದೀಪಕ ಹಾಡಿದಾಗ ಬೆಳಕು ಪ್ರಜ್ವಲಿಸುತ್ತಿತ್ತು ಅನ್ನುವ ಉಲ್ಲೇಖಖವಿದೆ.
ನಾವೆಲ್ಲ ಗಮನಿಸುವಂತೆ ಮನುಷ್ಯ ಸಂತಸವಾಗಿದ್ದಾಗಲೂ ಮತ್ತು ದುಃಖ ತಪ್ತನಾದಾಗಲೂ ಹಾಡು ಕೇಳುತಾಾ¤ನೆ. ಇದನ್ನು ನೈಸರ್ಗಿಕ ಕ್ರಿಯೆ ಎನ್ನಬಹುದು. ಯಾರು ಯಾವ ಭಾವದೊಳಗೆ ಇರುತ್ತಾರೋ ಆ ಭಾವಕ್ಕೆ ಸಂಗೀತ ಸಹ ಸ್ಪಂದಿಸುವುದು. ಭಾಷೆ ಅರ್ಥವಾಗದಿದ್ದರೂ ಸಂಗೀತ ಮನದಾಳಕ್ಕೆ ಇಳಿದುಬಿಡುವುದು.
ದೈಹಿಕ ಮತ್ತು ಮಾನಸಿಕ ಏರುಪೇರಿನ ಚಿಕಿತ್ಸೆಗೆ ರಾಗ ಚಿಕಿತ್ಸೆ ಬಳಸುತ್ತಾರೆ. ನಾದ ಯೋಗ ಮತ್ತು ರಾಗ ಚಿಕಿತ್ಸೆ ಸಂಗೀತ ಚಿಕಿತ್ಸೆಯ ಪ್ರಾಚೀನ ವ್ಯವಸ್ಥೆಯ ಬೆನ್ನೆಲುಬು. ಜಗತ್ತಿನಲ್ಲಿ ಪ್ರಥಮ ರಾಗ ಚಿಕಿತ್ಸೆ 1800ರಲ್ಲಿ ಪ್ರಾರಂಭವಾಯಿತು.
ಜೀವನದ ಅತ್ಯಂತ ಸರಳ ಪ್ರೇರಣೆ ದೊರೆಯುವುದು ಸಂಗೀತದಿಂದ. ನಾನು ಪ್ರತಿದಿನ ಕೆಲಸದಿಂದ ಮನೆಗೆ ಮರಳಿದ ಅನಂತರ ಆಯಾಸದಿಂದ ನನ್ನನ್ನು ದೂರ ಮಾಡುವುದೇ ಶಿವಕುಮಾರ ಶರ್ಮಾ ಅವರ ಸಂತೂರ, ಭೀಮಸೇನ ಜೋಶಿ ಅವರ ಗಾಯನ, ಪರವೀನ್ ಸುಲ್ತಾನರ ಹಾಡು ಹೀಗೆ ಮುಂದುವರಿಯುವ ನಮ್ಮ ದೇಶದ ಗಾನ ಗಂಧರ್ವರ ಗಾಯನಗಳು.
ಊರು, ದೇಶ ತಿರುಗುವ ನಾನು ಹಲವಾರು ದಿಗ್ಗಜರ, ಪಾಶ್ಚಾತ್ಯ ಸಂಗೀತ ಸೇರಿದಂತೆ ಅರಬ್ ರಾಷ್ಟ್ರಗಳ ಸೂಫಿ ಕಛೇರಿ ಕೇಳಿ ಆನಂದಿಸಿದ್ದೇನೆ. ಯುರೋಪ ದೇಶಗಳ ರಸೆೆ¤ಯಂಚಿನ ಮಾಡರ್ನ ವಿಧಾನದ ಸಂಗೀತವನ್ನೂ ಸವಿದಿರುವೆ.
ಸಂಗೀತದ ಸ್ವರಗಳು ಅಜರಾಮರ
ಹೀಗೆ ಸಾಗುತ್ತಿರುವಾಗ ನಾನಿರುವ ದೇಶದಲ್ಲಿ, ಇಲ್ಲ ಇನ್ನಾವುದೇ ದೇಶದಲ್ಲಿ ಮಾತೃಭೂಮಿಯ ಸ್ವರ ಮಾಧುರ್ಯ ಕಿವಿಗೆ ಬಿದ್ದರೆ ಆಗುವ ರೋಮಾಂಚನವೇ ಬೇರೆ. ಜಗತ್ತಿನ ಅದಾವುದೇ ಮೂಲೆಯಲ್ಲಿ ಎಲ್ಲಿಯೇ ಅಲೆದರೂ ಸ್ವರ ಮಾಂತ್ರಿಕರನ್ನು ಮರೆಯಲಾದೀತೆ ? ಸಂಗೀತದ ಉತ್ತುಂಗದ ಶ್ರೇಯಸ್ಸಿನ ಕುಮಾರ ಗಂಧರ್ವರನ್ನು ಮರೆಯುವುದೆಂತು…
ಇಂತಹ ಹಲವಾರು ಸಂಗೀತ ದಿಗ್ಗಜರನ್ನು ಪಡೆದ ಶ್ರೀಮಂತ ಸಾಂಸ್ಕೃತಿಕ ಹಿನ್ನೆಲೆಯ ದೇಶ ನಮ್ಮದು ಎನ್ನುವ ಹೆಗ್ಗಳಿಕೆ. ಬೆಲೆ ಕಟ್ಟಲಾಗದ ಅದ್ಭುತಗಳನ್ನು ಹೊಂದಿದ ಸಿರಿವಂತಿಕೆ ನಮ್ಮ ದೇಶದ ಆಸ್ತಿ. ನಾವು ಎಲ್ಲಿಯೇ ನೆಲೆಸಿರಲಿ ತವರಿನ ನಾಜೂಕಿನ ಸ್ವರಗಳು ಮನಸಿನ ಅದಾವುದೋ ಒಂದು ತಿರುವಿನಲ್ಲಿ ಗುನುಗುತ್ತಲೇ ಇರುತ್ತವೆ. ಜೀವಜಲದ ಹರಿವು ನಮ್ಮ ಜತೆಗೇ ಸಾಗುತ್ತಿರುತ್ತವೆ…
ಡಾ| ವಾಣಿ ಸಂದೀಪ ,ಸೌದಿ ಅರೇಬಿಯ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಜಿ.ಪಂ.,ತಾ.ಪಂ. ಚುನಾವಣೆ ವಿಳಂಬಕ್ಕೆ ಸರಕಾರವೇ ನೇರ ಹೊಣೆ, ನಾವು ಚುನಾವಣೆಗೆ ಸಿದ್ಧ: ಆಯೋಗ
ಆಪರೇಷನ್ ಬಾಂಗ್ಲಾದೇಶಿ; ಅಕ್ರಮ ವಲಸಿಗರ ಪತ್ತೆ ಹಚ್ಚುವ ಕಾರ್ಯಾಚರಣೆ ಚುರುಕು
Explainer; ಡಾ. ಚಿದಂಬರಂ & ಡಾ. ರಾಜಾ ರಾಮಣ್ಣ;ಪರಮಾಣು ವಿಜ್ಞಾನವನ್ನೂ ಮೀರಿದ ನಾಯಕತ್ವ
ಲೋಕೋಪಯೋಗಿ To ಸಾಹಿತ್ಯಕ್ಷೇತ್ರ: ಚಲನಚಿತ್ರದ ಮೂಲಕ ಖ್ಯಾತಿಗಳಿಸಿದ ನಾ.ಡಿಸೋಜ ಕಾದಂಬರಿಗಳು…
Make America Great Again: ಅಮೆರಿಕದಲ್ಲಿ ಸ್ವದೇಶಿ vs ವಲಸಿಗರು ಜಟಾಪಟಿ
MUST WATCH
ಫೋನ್ ಪೇ ಹೆಸರಿನಲ್ಲಿ ಹೇಗೆಲ್ಲಾ ಮೋಸ ಮಾಡುತ್ತಾರೆ ನೋಡಿ !
ನಿಮ್ಮ ತೋಟಕ್ಕೆ ಬೇಕಾದ ಗೊಬ್ಬರವನ್ನು ನೀವೇ ತಯಾರಿಸಬೇಕೆ ? ಇಲ್ಲಿದೆ ಸರಳ ಉಪಾಯ
ಮೈಲಾರಲಿಂಗ ಸ್ವಾಮಿ ಹೆಸರಿನಲ್ಲಿ ಒಂಟಿ ಮನೆಗಳೇ ಇವರ ಟಾರ್ಗೆಟ್ |
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಹೊಸ ಸೇರ್ಪಡೆ
2047 ರ ವೇಳೆಗೆ ದೇಶದ 50% ಜನ ನಗರ ಪ್ರದೇಶಗಳಲ್ಲಿ ವಾಸಿಸುತ್ತಾರೆ: ಸಚಿವ ಖಟ್ಟರ್
VIDEO: ಅಪ್ಪಿಕೊಳ್ಳಲು ಬಂದ ನಿರ್ದೇಶಕನನ್ನು ತಡೆದು ಕೆನ್ನೆಗೆ ಮುತ್ತು ಕೊಟ್ಟ ನಿತ್ಯಾ ಮೆನನ್
Dandeli: ಅಪ್ರಾಪ್ತ ಬಾಲಕಿಯ ಮೇಲೆ ಲೈಂಗಿಕ ಕಿರುಕುಳ : ಪೋಕ್ಸೋ ಪ್ರಕರಣದಡಿ ಓರ್ವನ ಬಂಧನ
Chhattisgarh: ಸ್ಫೋ*ಟದಲ್ಲಿ ಮೃ*ತಪಟ್ಟ 8 ಪೊಲೀಸರಲ್ಲಿ 5 ಮಂದಿ ಮಾಜಿ ನಕ್ಸಲೀಯರು
Naxalites ಶರಣಾಗತಿಯಲ್ಲಿ ಟ್ವಿಸ್ಟ್; ಚಿಕ್ಕಮಗಳೂರು ಬದಲು ಬೆಂಗಳೂರಿನಲ್ಲಿ ನಕ್ಸಲರ ಶರಣಾಗತಿ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.