ತಾಯ್ನಾಡಿನ ಸಂಕಷ್ಟಕ್ಕೆ ಮಿಡಿದ ಅನಿವಾಸಿ ಮನ
Team Udayavani, Jun 2, 2021, 8:28 PM IST
ಭಾರತ ಸೇರಿ ಇಂದು ಜಗತ್ತಿನಾ ದ್ಯಂತ ಅದರಲ್ಲೂ ಮುಖ್ಯವಾಗಿ ಕರ್ನಾಟಕದಲ್ಲಿ ಕೋವಿಡ್ ಎರಡನೇ ಅಲೆಯಿಂದ ಜನರು ಬಹಳ ಸಂಕಷ್ಟಕ್ಕೆ ಒಳಗಾಗಿರುವುದನ್ನು ನಾವೆಲ್ಲ ನೋಡು ತ್ತಿದ್ದೇವೆ. ಇತ್ತೀಚೆಗೆ ಬೆಂಗಳೂರಿನಲ್ಲಿ ಕೊರೊನಾ ಪೀಡಿತರ ಸಂಖ್ಯೆ ದಿನದಿಂದ ದಿನಕ್ಕೆ ಏರಿಕೆಯಾಗುತ್ತಲೇ ಇದ್ದು, ಔಷಧ, ಆಸ್ಪತ್ರೆಯಲ್ಲಿ ಬೆಡ್, ಲಸಿಕೆ… ಹೀಗೆ ಎಲ್ಲದರಲ್ಲೂ ಕೊರತೆ ಮಾತ್ರವಲ್ಲ, ಪ್ರಾಣವಾಯು ಸಿಗದೇ, ಜೀವ ಉಳಿಸಿಕೊಳ್ಳಲಾಗದಿರುವುದನ್ನು ಕಂಡು ಕೇಳಿ ಮರುಗಿದವರೇ ಹೆಚ್ಚು. ತಮ್ಮ ತಾಯ್ನಾಡಿನಲ್ಲಿ ನಡೆಯುತ್ತಿರುವ ಈ ದುಸ್ಥಿತಿಯ ಬಗ್ಗೆ ತಿಳಿದು ವಿದೇಶದಲ್ಲಿರುವ ಕನ್ನಡಿಗರು ನಲುಗಿ ಹೋದರು. ತಾವು ಊರಿಗೂ ಮರಳಲಾರದೆ ನಿಸ್ಸಹಾಯಕರಾಗಿ ಪರಿಸ್ಥಿತಿಯನ್ನು ಕಾಣಬೇಕಾಯಿತು.
ಇಂತಹ ಸಂದರ್ಭದಲ್ಲಿ ಕೆನಡಾ ದೇಶದಲ್ಲಿರುವ ಕರ್ನಾಟಕ ಮೂಲದ ಕನ್ನಡಿಗರ ಮನಗಳು ಒಂದುಗೂಡತೊಡಗಿದವು. ಜಗತ್ತಿನಲ್ಲೇ ಎರಡನೇ ಅತಿದೊಡ್ಡ ದೇಶವಾಗಿರುವ ಕೆನಡಾದ ಪೂರ್ವದಿಂದ ಪಶ್ಚಿಮದವರೆಗೂ ಜನ ಸಂಪರ್ಕ ಸಾಧಿಸಲಾಯಿತು. ಸಾಮಾಜಿಕ ತಾಣಗಳು ಕನ್ನಡಿಗರ ಸಂಪರ್ಕ ಮಾಧ್ಯಮವಾಯಿತು. ಒಂದು ಸಣ್ಣ ಸಮಿತಿ ರಚನೆಯಾಯಿತು. ಸಹೃದಯ ಕನ್ನಡಿಗರು ತಮ್ಮಿಂದ ಸಾಧ್ಯವಾಗುವ ಸಹಾಯವನ್ನು ಮಾಡಲು ನಿರ್ಧರಿಸಿದರು. ಆ ನಿರ್ಧಾರ ಒಂದು ಸೇವಾ ಕಾರ್ಯಕ್ಕೆ ನಾಂದಿಯೂ ಆಯಿತು.
ಆರಂಭದಲ್ಲಿ 15,000 ಡಾಲರುಗಳ ಸಂಗ್ರಹ ಉದ್ದೇಶವಿಟ್ಟುಕೊಂಡು ಧನ ಸಂಗ್ರಹ ಆರಂಭವಾಯಿತು. ಕೆನಡಾದ ಕನ್ನಡಿಗರು ತಮ್ಮ ಸಾಮರ್ಥ್ಯಕ್ಕೆ ಅನುಸಾರವಾಗಿ ಸಹಾಯ ಮಾಡತೊಡಗಿದರು. ಧನ ಸಂಗ್ರಹ ಆರಂಭವಾದ ಎರಡೇ ಎರಡು ದಿನಗಳಲ್ಲಿ 15,000 ಡಾಲರುಗಳ ಸಂಗ್ರಹವೂ ಆಯಿತು. ಹೀಗೇ ಧನಸಹಾಯ ಹರಿದು ಬರುತ್ತಲೇ ಇತ್ತು. ಮುಂದಕ್ಕೆ 30,000 ಡಾಲರುಗಳ ಗುರಿ ಇಟ್ಟುಕೊಳ್ಳಲಾಯಿತು.
ಸೇವಾ ಕೆನಡಾ
ಈ ಮಧ್ಯೆ ಸಂಗ್ರಹಿಸಿದ ಧನ ಸಹಾಯವನ್ನು ಕರ್ನಾಟಕಕ್ಕೆ ಸುಕ್ಷೇಮ ವಾಗಿ ತಲುಪಿಸುವುದಾದರೂ ಹೇಗೆ ಎಂಬ ಚಿಂತೆ ಮೂಡಿತು. ಆಗ ಪರಿಗಣಿಸಲ್ಪಟ್ಟ ಇನ್ನೊಂದು ಸಂಸ್ಥೆ ಅಂದರೆ ಸೇವಾ ಕೆನಡ. ಇತ್ತೀಚೆಗೆ ಕೆಲವು ವರ್ಷಗಳಿಂದ ಹಲವು ಬಾರಿ ದೇಶ ವಿದೇಶಗಳಲ್ಲಿ ಜೀವನಾವಶ್ಯಕ ಸೇವೆಯನ್ನು ಮಾಡುತ್ತಿರುವ ಸೇವಾ ಕೆನಡಾದ ಜತೆಗೆ ಮಾತುಕತೆ ನಡೆಸಿ ಅವರಿಂದ ಕರ್ನಾಟಕಕ್ಕೆ ಸಹಾಯ ಒದಗಿಸುವ ಒಪ್ಪಂದವಾಯಿತು.
ಕೊರೊನಾ ಎರಡನೇ ಅಲೆಯಲ್ಲಿ ಕಂಡು ಬಂದಿರುವ ಆಮ್ಲಜನಕದ ಕೊರತೆ ನೀಗಿಸಲು ಹೇಗಾದರೂ ಸಹಾಯ ಮಾಡಬೇಕು.
ಈಗಿನ ಪರಿಸ್ಥಿತಿಯಲ್ಲಿ ಅತ್ಯಾ ವಶ್ಯವಾದ ಆಮ್ಲಜನಕ ಉತ್ಪಾದನಾ ಸಾಧನವನ್ನು ಕರ್ನಾಟಕಕ್ಕೆ ತಲುಪಿಸಿದರೆ ಹಲವರ ಪ್ರಾಣ ಉಳಿಸಬಹುದು ಎಂದು ಭಾವಿಸಿದ ಕೆನಡಾ ಕನ್ನಡಿಗರು ಕರ್ನಾಟಕಕ್ಕೆ ಪ್ರಾಣವಾಯು ತಲು
ಪಿಸುವ ಪಣತೊಟ್ಟರು. ಈ ಕಾರ್ಯ ಕ್ಕಾಗಿ ಗ್ರೂಪ್ ಒ2 ಸಂಸ್ಥೆಯನ್ನು ಸಂಪ ರ್ಕಿಸಲಾಗಿ ಅವರಿಂದ ಆಮ್ಲಜನಕ ಉತ್ಪಾದನಾ ಯಂತ್ರಗಳನ್ನು ಕಳುಹಿಸಿ ಕೊಡುವ ಒಪ್ಪಂದವಾಯಿತು.
ಮುಂದಿನ ಗುರಿ
ಕೆನಡಾದ ಕನ್ನಡಿಗರ ಮುಂದಿನ ಗುರಿ 40,000 ಡಾಲರುಗಳೆಂದು ನಿರ್ಧ ರಿಸಲಾಯಿತು. ಇಂದಿಗೆ ಸುಮಾರು 39,659 ಡಾಲರುಗಳ ಸಂಗ್ರಹವೂ ಆಗಿದೆ. ಸೀಮಂತ್ ಕುಮಾರ್ ಸಿಂಗ್ ಅವರೇ ಕೆನಡಾ ಕನ್ನಡಿಗರ ಸಮಿತಿ ಯೊಂದಿಗೆ ನೇರ ಸಂಭಾಷಣೆಯಲ್ಲಿ ತಮ್ಮ ಅನಿಸಿಕೆಗಳನ್ನು ಹಂಚಿಕೊಂಡರು. ಸಮಿತಿಯಿಂದ ಹೊಸ ರೀತಿಯ ಸಹಾಯ ಹಸ್ತದ ಪ್ರಸ್ತಾಪ ಮಾಡಲಾಯಿತು. ಕಷ್ಟಕಾಲದಲ್ಲಿ ಕರ್ನಾಟಕಕ್ಕೆ ಸಹಾಯ ಮಾಡುವ ಒಂದು ಸೇವಾ ಸಂಸ್ಥೆಯನ್ನು ಕಟ್ಟುವ ಮಾತೂ ಆಯಿತು.
ಸೇವಾ ಕಾರ್ಯದ ಸ್ವಯಂ ಸೇವಕರು
ಆರಂಭದಿಂದ ಇಂದಿನವರೆಗೂ ಎಲ್ಲರನ್ನು ಸಂಘಟಿಸಿ, ಧನ ಸಂಗ್ರಹಿಸಿ, ಕರ್ನಾಟಕ ಮತ್ತು ಕೆನಡಾದ ಸಂಪರ್ಕ ಸೇತುವಾಗಿ, ಸೇವಾ ಉದ್ದೇಶವನ್ನು ಕಾರ್ಯರೂಪಕ್ಕೆ ತರುವುದರಲ್ಲಿ ಮುಂದಾಳತ್ವ ವಹಿಸಿದವರಲ್ಲಿ ನಂದ ಕುಮಾರ್ ಚೌಡಪ್ಪ ಅವರ ಪಾಲು ಬಹಳ ಮುಖ್ಯವಾಗಿದೆ.ಇದರೊಂದಿಗೆ ಆಮ್ಲಜನಕ ಯಂತ್ರಗಳನ್ನು ಅವಶ್ಯಕತೆ ಇರುವವರಿಗೆ ತಲುಪಿಸುವಲ್ಲಿ ಸಹಾಯಕರಾದವರಲ್ಲಿ ಸೇವಾ ಕೆನಡಾದ ವಿನೋದ್ ವರಪ್ರವನ್, ಟೀಮ್ ಒ2 ನ ದೀಪ್ತಿ ಕಾಟ್, ಕಮಲ್ ಕೆದಿಯ, ಶುಭಾಷ್ ಕೆದಿಯ, ಡಾ| ಕಿಶೋರ್ ಭಟ್, ಡಿಸಿ, ಐಆರ್‌ಎಸ್ ಒಂದೆಡೆಯಾದರೆ, ಉಸಿರಾಡಲಿ ಕರ್ನಾಟಕ ಪ್ಯಾನೆಲ್ ಸದಸ್ಯರಾದ ಡಾ| ಅರುಣ್ ಪ್ರಕಾಶ್, ಡಾ| ಹೊಸಹಳ್ಳಿ ರಾಮಸ್ವಾಮಿ, ದಿನೇಶ್ ಬೆಂಗಳೂರು, ಹಿತೇಶ್ ಪೊಡನೊಳಣ, ಕಾರ್ತಿಕ್ ಗೌಡ, ಕಿರಣ್ ಭರ್ತುರ್, ಕೃಷ್ಣಪ್ರಸಾದ್ ಬಾಳಿಕೆ, ನದೀಮ್ ಖಾಝಿ, ನಾಗೇಂದ್ರ ಕೃಷ್ಣಮೂರ್ತಿ, ನವೀನ ಕುಮಾರ್, ಪ್ರಭಾಕರ ರಾಯಪ್ಪ, ಪ್ರಶಾಂತ್ ಸುಬ್ಬಣ್ಣ, ರಶ್ಮಿ ರಾಮಣ್ಣ, ರವೀಂದ್ರ ಕುಮಾರ್, ರೂಪ ಕಿಕ್ಕೇರಿ, ಸಚಿನ್ ಭಟ್ – ಸೇವಾ ಕೆನಡಾ, ಸಂತೋಷ್ ಮಂಜುನಾಥ್, ಸಂತೋಷ್ ಪಟ್ಟಣ ಶೆಟ್ಟರ್, ಶ್ರುತಿ ಕೀರ್ತಿ (ಸೇವಾ), ಸುಬ್ರಹ್ಮಣ್ಯ ಶಿಶಿಲ, ಸುಧಿ ಹಾಗಲವಾಡಿ, ವೆಂಕಿ ಮೈಸೂರು, ವಿನಾಯಕ್ ಹೆಗ್ಡೆ, ವಿಶಾಲ್ ಗಿರಿಸಾಗರ್ ಮುಂತಾದವರು ಎಲ್ಲ ರೀತಿಯ ಪ್ರೋತ್ಸಾಹ, ಸಲಹೆ, ಸೂಚನೆಗಳನ್ನು ಕೊಡುತ್ತಿದ್ದರು. ಈ ಸಂದರ್ಭದಲ್ಲಿ ಸುಮಾರು 40,000 ಡಾಲರುಗಳಷ್ಟು ಧನ ಸಹಾಯವನ್ನು ಮಾಡಿದ ಎಲ್ಲ ದಾನಿಗಳು ಅಭಿನಂದನೆಗೆ ಅರ್ಹರಾಗಿರುವರು.
ಎರಡನೇ ಹಂತ
ಉಸಿರಾಡಲಿ ಕರ್ನಾಟಕ ತಂಡದಿಂದ ಮುಂದೆ ಅತ್ಯವಶ್ಯ ಸಹಾಯಗಳನ್ನು ನಡೆಸಲು ಸಿದ್ಧತೆಗಳು ನಡೆಯುತ್ತಿವೆ. ಧನ ಸಂಗ್ರಹಕ್ಕಾಗಿಯೇ ಈಗಾಗಲೇ ಒಂದು ಕಾರ್ಯಕ್ರಮ ಏರ್ಪಡಿಸಲಾಗಿತ್ತು. ಇದೇ ಬರುವ ಜೂನ್ 12 ರಂದು “ಉಸಿರಾಡಲಿ ಕರ್ನಾಟಕ’ ಎಂಬ ಒಂದು ಸಂಗೀತ ಕಾರ್ಯಕ್ರಮವನ್ನು ಏರ್ಪಡಿಸಲಾಗುತ್ತಿದೆ.
- ಸುಬ್ರಹ್ಮಣ್ಯ ಶಿಶಿಲ, ಟೊರೊಂಟೊ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Court Notice: 2002ರ ಹ*ತ್ಯೆ ಪ್ರಕರಣ: ಡೇರಾ ಸೌಧ ಮುಖ್ಯಸ್ಥ ಗುರ್ಮೀತ್‌ಗೆ ನೋಟಿಸ್
Madikeri: ಬೈಕ್‍ನಲ್ಲಿ ತೆರಳುತ್ತಿದ್ದ ವೇಳೆ ಕಾಡಾನೆ ದಾಳಿ; ಇಬ್ಬರಿಗೆ ಗಾಯ
Madikeri ಅಪರಿಚಿತ ವಾಹನ ಡಿಕ್ಕಿ: ಚಿಕಿತ್ಸೆ ಫಲಿಸದೆ ವ್ಯಕ್ತಿ ಸಾವು
Madikeri: ಲಾರಿಯಿಂದ ಹಾರಿದ ಚಾಲಕ: ಚಕ್ರದಡಿಗೆ ಸಿಲುಕಿ ಸಾವು
Vande Bharat Sleeper Train: ಪರೀಕ್ಷಾರ್ಥ ಓಡಾಟದಲ್ಲಿ ಗಂಟೆಗೆ 180 ಕಿ.ಮೀ ವೇಗ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.