ಕಾನೂನುಗಳಿದ್ದರೂ ಸಫಾಯಿ ಕರ್ಮಚಾರಿ ಪದ್ಧತಿ ಇನ್ನೂ ಜೀವಂತ

ವಿಶ್ವ ಆರೋಗ್ಯ ಸಂಸ್ಥೆ ವರದಿಯಲ್ಲಿ ಭಾರತದ ಸ್ಥಿತಿಗತಿ ಅನಾವರಣ

Team Udayavani, Nov 24, 2019, 4:48 AM IST

mm-24

ಹಲವು ಕ್ಷೇತ್ರಗಳಲ್ಲಿ ಭಾರತ ಮುಂಚೂಣಿಯಲ್ಲಿದ್ದರೂ, ಕೈಯಲ್ಲೇ ಶೌಚಗುಂಡಿ ಶುಚಿಗೊಳಿಸುವ ಅನಾಗರಿಕ ಪದ್ಧತಿಗೆ ಇನ್ನೂ ನಿಯಂತ್ರಣ ಹಾಕಲು ಸಾಧ್ಯವಾಗಿಲ್ಲ. ಕಾನೂನುಗಳಿದ್ದರೂ ಅದರ ಪರಿಣಾಮಕಾರಿ ಅನುಷ್ಠಾನವೂ ಆಗಿಲ್ಲ ಎಂಬುದನ್ನು ವಿಶ್ವ ಆರೋಗ್ಯ ಸಂಸ್ಥೆ ವರದಿ ಬೊಟ್ಟು ಮಾಡಿದೆ. ಆರೋಗ್ಯ, ಸುರಕ್ಷತೆ ಮತ್ತು ನೈರ್ಮಲ್ಯ ಕಾರ್ಮಿಕರ ಘನತೆ ಎಂಬ ಸಮೀಕ್ಷೆ ಹಲವು ವಿಚಾರಗಳನ್ನು ತೆರೆದಿಟ್ಟಿದೆ. ಹಾಗಾದರೆ ಅದರಲ್ಲೇನಿದೆ? ಮಾಹಿತಿ ಇಲ್ಲಿದೆ.

ಅಂತಾರಾಷ್ಟ್ರೀಯ ಕಾರ್ಮಿಕ ಸಂಸ್ಥೆ, ವಾಟರ್‌ಏಡ್‌, ವಿಶ್ವಬ್ಯಾಂಕ್‌ ಮತ್ತು ವಿಶ್ವ ಆರೋಗ್ಯ ಸಂಸ್ಥೆ ಜಂಟಿಯಾಗಿ ರಚಿಸಿರುವ ಈ ವರದಿಯಲ್ಲಿ, ಕಡಿಮೆ ಮತ್ತು ಮಧ್ಯಮ ಆದಾಯ ಹೊಂದಿರುವ ದೇಶಗಳಾದ ಭಾರತ, ಬಾಂಗ್ಲಾದೇಶ, ಬೊಲಿವಿಯಾ, ಬುರ್ಕಿನಾ ಫಾಸೊ, ಹೈಟಿ, ಕೀನ್ಯಾ, ಸೆನೆಗಲ್, ದಕ್ಷಿಣ ಆಫ್ರಿಕಾ ಮತ್ತು ಉಗಾಂಡಾ ದೇಶಗಳಲ್ಲಿ ಅತಿ ಹೆಚ್ಚು ಶೌಚಗುಂಡಿ ಶುಚಿಗೊಳಿಸುವ ಸಫಾಯಿ ಕರ್ಮಚಾರಿಗಳಿದ್ದಾರೆ ಎಂದು ಹೇಳಿದೆ.

ನಿಗದಿತ ವೇತನ ಇಲ್ಲ
ಈ ಕಾರ್ಮಿಕರಿಗೆ ನಿಗದಿತ ವೇತನ ಎಂಬುದು ಇರುವುದಿಲ್ಲ ಮತ್ತು ಹೆಚ್ಚಿನ ಸಂದರ್ಭದಲ್ಲಿ ಇವರು ಸುಲಿಗೆಗೆ ಬಲಿಯಾಗುತ್ತಾರೆ. ಇನ್ನೂ ಶೋಚನೀಯ ಸ್ಥಿತಿ ಎಂದರೆ ಕೆಲವು ಕಾರ್ಮಿಕರು ಆಹಾರ ಪದಾರ್ಥಗಳ ರೂಪದಲ್ಲಿ ಸಂಬಳ ಪಡೆಯುತ್ತಿದ್ದು, ಆರೋಗ್ಯ, ಶಿಕ್ಷಣ, ಉದ್ಯೋಗ ಮತ್ತು ವೇತನಗಳಲ್ಲಿ ತಾರತಮ್ಯ ಅನುಭವಿಸುತ್ತಿದ್ದಾರೆ ಎಂದು ವರದಿ ಹೇಳಿದೆ.

1500 ಜನರ ಸಾವು
1993 ರಿಂದ ಇಲ್ಲಿಯವರೆಗೆ ದೇಶಾದ್ಯಂತ ಶೌಚಗುಂಡಿಯನ್ನು ಸ್ವತ್ಛಗೊಳಿಸುವ ವೇಳೆ ಸುಮಾರು 1500 ಜನರು ಸಾವನ್ನಪಿದ್ದು, 1993ರಿಂದ ಲೆಕ್ಕಹಾಕಿದರೆ ತಮಿಳುನಾಡಿನಲ್ಲಿ 206 ಕಾರ್ಮಿಕರು ಶೌಚಗುಂಡಿ ಶುಚಿಗೊಳಿಸುವ ವೇಳೆ ಮೃತಪಟ್ಟಿದ್ದಾರೆ.

4,32,000 ಸಾವು
ನೈರ್ಮಲ್ಯದ ಕೊರತೆಯಿಂದಾಗಿ ದೈಹಿಕ ಮತ್ತು ಮಾನಸಿಕ ಕಾಯಿಲೆಗೆ ಶೌಚಗುಂಡಿ ಕಾರ್ಮಿಕರು ತುತ್ತಾಗುತ್ತಿದ್ದು, ಅತಿಸಾರ ರೋಗದಿಂದ 4,32,000 ರಷ್ಟು ಜನರು ಸಾವನ್ನಪ್ಪಿದ್ದಾರೆ.

ಇದರೊಂದಿಗೆ ತಲೆನೋವು, ತಲೆತಿರುಗುವಿಕೆ, ಜ್ವರ, ಆಯಾಸ, ಆಸ್ತಮಾ, ಶ್ವಾಸಕೋಶ ಸಂಬಂಧಿ ಕಾಯಿಲೆ, ಕಾಲರಾ, ಟೈಫಾಯಿಡ್‌, ಹೆಪಟೈಟಿಸ್‌, ಚರ್ಮದ ಕಾಯಿಲೆ ಇತ್ಯಾದಿಗಳಿಗೆ ಇದು ದಾರಿ ಮಾಡಿಕೊಡುತ್ತಿದೆ. ಸಮರ್ಪಕ ಆರೋಗ್ಯ ಮತ್ತು ಸೂಕ್ತ ಸುರಕ್ಷತೆ ಸೌಲಭ್ಯ ದೊರಕದೇ ಕಾರ್ಮಿಕರು ಗಾಯ, ಸೋಂಕು ರೋಗಗಳಿಂದ ಬಳಲುತ್ತಿದ್ದಾರೆ. ಮಾನಸಿಕ ಆರೋಗ್ಯ ಸಮಸ್ಯೆಗಳಿಂದಲೂ ಸಾವಿಗೀಡಾ ಗುತ್ತಿದ್ದಾರೆ ಎಂದು ವರದಿ ಹೇಳಿದೆ.

50 ಸಾವಿರಕ್ಕೂ ಹೆಚ್ಚು ಮಂದಿ
ದೇಶಾದ್ಯಂತ 1993 ರಿಂದ 2019 ರ ಅವಧಿಯ ಪ್ರಕಾರ ಒಟ್ಟು 50,000 ಹೆಚ್ಚು ಶೌಚಗುಂಡಿ ಕಾರ್ಮಿಕರಿದ್ದಾರೆ.

7 ಸಾವಿರ ಹೆಚ್ಚಳ
2014 ರಿಂದ 2017 ರ ಅವಧಿಯಲ್ಲಿ ಶೌಚಗುಂಡಿ ಕಾರ್ಮಿಕರ ಪ್ರಮಾಣದಲ್ಲಿ ಸುಮಾರು 7 ಸಾವಿರದಷ್ಟು ಜನರ ಹೆಚ್ಚಳವಾಗಿದೆ.

ಈ ವರ್ಷ ಸತ್ತವರೆಷ್ಟು ?
ಕಳೆದ 9 ತಿಂಗಳಿಂದ 50 ಜನ ಕಾರ್ಮಿಕರು ಕಾರ್ಯ ನಿರತವಾಗಿರುವಾಗಲೇ ಸಾವಿಗೀಡಾಗಿದ್ದಾರೆ.
ಉತ್ತರ ಪ್ರದೇಶದಲ್ಲಿ ಹೆಚ್ಚು
2018 ರ ಅಂಕಿ ಅಂಶದ ಪ್ರಕಾರ ಸುಮಾರು 6,126 ಶೌಚಗುಂಡಿ ಕಾರ್ಮಿಕರಿದ್ದಾರೆ.

ರಾಜ್ಯದಲ್ಲಿ 1744 ಕಾರ್ಮಿಕರು
ರಾಜ್ಯದಲ್ಲಿ ಸುಮಾರು 1744 ಶೌಚಗುಂಡಿ ಸ್ವತ್ಛ ಕಾರ್ಮಿಕರಿದ್ದು, ಸದ್ಯ ನಮ್ಮ ರಾಜ್ಯ ಮೂರನೇ ಸ್ಥಾನದಲ್ಲಿದೆ.

ಈ ರಾಜ್ಯಗಳಲ್ಲಿ ಹೆಚ್ಚು
ರಾಷ್ಟ್ರೀಯ ಸಫಾರಿ ಕರ್ಮಾಚಾರಿ ಹಣಕಾಸು ಹಾಗೂ ಪ್ರಗತಿ ಸಹಕಾರಿ ಸಂಘದ ಅಂಕಿ-ಅಂಶಗಳ ಪ್ರಕಾರ ಈ ರಾಜ್ಯಗಳಲ್ಲಿ ಅತ್ಯಧಿಕ ಮಂದಿ ಕೆಲಸದವರಿದ್ದಾರೆ.
ಉತ್ತರ ಪ್ರದೇಶ 6,126
ಮಧ್ಯಪ್ರದೇಶ 5,269
ಕರ್ನಾಟಕ 1,744

ನೂತನ ಯೋಜನೆ
ಶೌಚಗುಂಡಿ ಸ್ವತ್ಛತೆಯ ಹೊಣೆಗಾರಿಕೆಯನ್ನು ನಗರಪಾಲಿಕೆಗಳಿಗೆ ವಹಿಸಿದ್ದು, ಈ ನಿಯಮ ಖಾಸಗಿ ಒಡೆತನದ ಸಂಸ್ಥೆಗಳಿಗೂ ಅನ್ವಯ. ಯಂತ್ರಗಳ ಮೂಲಕವೇ ಶೌಚಗುಂಡಿ ಸ್ವತ್ಛಗೊಳಿಸಬೇಕೆಂಬ ಕಾನೂನು ಮಾಡಿರುವ ಸರಕಾರ, ಅವುಗಳ ಖರೀದಿಗೆ ನಗರಪಾಲಿಕೆಗಳಿಗೆ ಸಾಲವನ್ನು ನೀಡುವುದಾಗಿ ತಿಳಿಸಿದೆ.

ದುರ್ಬಲ ಕಾನೂನು
ದುರ್ಬಲ ಕಾನೂನು ರಕ್ಷಣೆ ಮತ್ತು ಅಸ್ತಿತ್ವದಲ್ಲಿರುವ ನಿಯಮಗಳು ಪರಿಣಾಮಕಾರಿಯಾಗಿ ಜಾರಿಗೊಳ್ಳದೇ ಇರುವುದು ಇದಕ್ಕೆ ಪ್ರಮುಖ ಕಾರಣವಾಗಿದ್ದು, ಅಭಿವೃದ್ಧಿಶೀಲ ದೇಶಗಳು ಸೇರಿದಂತೆ ಪ್ರಪಂಚಾದ್ಯಂತ ಶೌಚಗುಂಡಿ ಕಾರ್ಮಿಕ ಪದ್ಧತಿ ಚಾಲ್ತಿ ಅಲ್ಲಿದೆ.

ಸಮಸ್ಯೆಗೆ ಕಾರಣಗಳೇನು?
· ಬಡತನ ಹಾಗೂ ನಿರ್ದಿಷ್ಟ ಜನಾಂಗದವರೇ ಈ ಕಾರ್ಯಗಳಲ್ಲಿ ತೊಡಗಬೇಕೆಂಬ ಪೂರ್ವಾಗ್ರಹ
· ಕಾರ್ಮಿಕರಿಗೆ ಸುರಕ್ಷಾ ಸಲಕರಣೆಗಳನ್ನು ನೀಡದಿರುವುದು.
· ಆಧುನಿಕ ಯಂತ್ರಗಳು ಲಭ್ಯವಿದ್ದರೂ ಅವುಗಳ ಬಳಕೆ ಇಲ್ಲ.
· ಕಾನೂನು ನಿಯಮವನ್ನು ಜಾರಿಗೆ ತರುವಲ್ಲಿ ವಿಫ‌ಲ .
· ಈ ಉದ್ಯೋಗದ ಕುರಿತು ಸರಿಯಾದ ಮಾಹಿತಿ ಇಲ್ಲ.

- ಸುಶ್ಮಿತಾ ಜೈನ್‌

ಟಾಪ್ ನ್ಯೂಸ್

Wrong Spelling: ಅಪಹರಣದ ಪತ್ರದಲ್ಲಿ ಅಕ್ಷರ ತಪ್ಪು ಬರೆದು ಸಿಕ್ಕಿಬಿದ್ದ ಭೂಪ!

Wrong Spelling: ಅಪಹರಣದ ಪತ್ರದಲ್ಲಿ ಅಕ್ಷರ ತಪ್ಪು ಬರೆದು ಸಿಕ್ಕಿಬಿದ್ದ ಭೂಪ!

Hubballi: ಸಂಪೂರ್ಣ ಬಂದ್… ರಸ್ತೆಗಿಳಿದ ವಾಹನಗಳ ಚಕ್ರದ ಗಾಳಿ ತೆಗೆದು ಪ್ರತಿಭಟನೆ

Hubballi: ಸಂಪೂರ್ಣ ಬಂದ್… ರಸ್ತೆಗಿಳಿದ ವಾಹನಗಳ ಚಕ್ರದ ಗಾಳಿ ತೆಗೆದು ಪ್ರತಿಭಟನೆ

ಚಂದ್ರಯಾನ, ಗಗನಯಾನ: ಇಸ್ರೋದ ಮಹತ್ವದ ಪ್ಲಾನ್‌: ವಿ.ನಾರಾಯಣನ್‌

ಚಂದ್ರಯಾನ, ಗಗನಯಾನ: ಇಸ್ರೋದ ಮಹತ್ವದ ಪ್ಲಾನ್‌: ವಿ.ನಾರಾಯಣನ್‌

Los Angeles wildfires: ಕ್ಯಾಲಿಫೋರ್ನಿಯಾದಲ್ಲಿ ಕಾಳ್ಗಿಚ್ಚು… ಐವರು ಸಾವು

Los Angeles wildfires: ಕ್ಯಾಲಿಫೋರ್ನಿಯಾದಲ್ಲಿ ಕಾಳ್ಗಿಚ್ಚು… ಐವರು ಸಾವು

naxal-file

Naxal Activity Calm: ಪಶ್ಚಿಮ ಘಟ್ಟದ ಕಾನನದಲ್ಲಿ ನಕ್ಸಲ್‌ ನಿಶ್ಶಬ್ದ

purushotham-bilimale

Language Development: ಕನ್ನಡ ಕೆಲಸಕ್ಕೆ ಅಭಿವೃದ್ಧಿ ಪ್ರಾಧಿಕಾರದಲ್ಲಿ ಹಣವೇ ಇಲ್ಲ!

Naxals-CM-Office

Naxals Surrender: ಶರಣಾದ ನಕ್ಸಲರ ಪ್ರಕರಣಗಳಿಗೆ ತ್ವರಿತ ನ್ಯಾಯಾಲಯ: ಸಿಎಂ ಸಿದ್ದರಾಮಯ್ಯ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

naxal-file

Naxal Activity Calm: ಪಶ್ಚಿಮ ಘಟ್ಟದ ಕಾನನದಲ್ಲಿ ನಕ್ಸಲ್‌ ನಿಶ್ಶಬ್ದ

EC-Comm-sangreshi1

ಜಿ.ಪಂ.,ತಾ.ಪಂ. ಚುನಾವಣೆ ವಿಳಂಬಕ್ಕೆ ಸರಕಾರವೇ ನೇರ ಹೊಣೆ, ನಾವು ಚುನಾವಣೆಗೆ ಸಿದ್ಧ: ಆಯೋಗ

Bangla-immigrtnst

ಆಪರೇಷನ್‌ ಬಾಂಗ್ಲಾದೇಶಿ; ಅಕ್ರಮ ವಲಸಿಗರ ಪತ್ತೆ ಹಚ್ಚುವ ಕಾರ್ಯಾಚರಣೆ ಚುರುಕು

Explainer; ಭಾರತದ ಪರಮಾಣು ಯುಗದ ರೂವಾರಿಗಳು: ಡಾ. ಆರ್ ಚಿದಂಬರಂ & ಡಾ. ರಾಜಾ ರಾಮಣ್ಣ

Explainer; ಡಾ. ಚಿದಂಬರಂ & ಡಾ. ರಾಜಾ ರಾಮಣ್ಣ;ಪರಮಾಣು ವಿಜ್ಞಾನವನ್ನೂ ಮೀರಿದ ನಾಯಕತ್ವ

ಲೋಕೋಪಯೋಗಿ To ಸಾಹಿತ್ಯಕ್ಷೇತ್ರ: ಚಲನಚಿತ್ರದ ಮೂಲಕ ಖ್ಯಾತಿಗಳಿಸಿದ ನಾ.ಡಿಸೋಜ ಕಾದಂಬರಿಗಳು…

ಲೋಕೋಪಯೋಗಿ To ಸಾಹಿತ್ಯಕ್ಷೇತ್ರ: ಚಲನಚಿತ್ರದ ಮೂಲಕ ಖ್ಯಾತಿಗಳಿಸಿದ ನಾ.ಡಿಸೋಜ ಕಾದಂಬರಿಗಳು…

MUST WATCH

udayavani youtube

ಕೇರಳದ ಉತ್ಸವದ ಆನೆ ರೌದ್ರಾವತಾರ: ಹಲವರಿಗೆ ಗಾಯ | ವಿಡಿಯೋ ಸೆರೆ

udayavani youtube

ಫೋನ್ ಪೇ ಹೆಸರಿನಲ್ಲಿ ಹೇಗೆಲ್ಲಾ ಮೋಸ ಮಾಡುತ್ತಾರೆ ನೋಡಿ !

udayavani youtube

ನಿಮ್ಮ ತೋಟಕ್ಕೆ ಬೇಕಾದ ಗೊಬ್ಬರವನ್ನು ನೀವೇ ತಯಾರಿಸಬೇಕೆ ? ಇಲ್ಲಿದೆ ಸರಳ ಉಪಾಯ

udayavani youtube

ಮೈಲಾರಲಿಂಗ ಸ್ವಾಮಿ ಹೆಸರಿನಲ್ಲಿ ಒಂಟಿ ಮನೆಗಳೇ ಇವರ ಟಾರ್ಗೆಟ್ |

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

ಹೊಸ ಸೇರ್ಪಡೆ

Wrong Spelling: ಅಪಹರಣದ ಪತ್ರದಲ್ಲಿ ಅಕ್ಷರ ತಪ್ಪು ಬರೆದು ಸಿಕ್ಕಿಬಿದ್ದ ಭೂಪ!

Wrong Spelling: ಅಪಹರಣದ ಪತ್ರದಲ್ಲಿ ಅಕ್ಷರ ತಪ್ಪು ಬರೆದು ಸಿಕ್ಕಿಬಿದ್ದ ಭೂಪ!

Hubballi: ಸಂಪೂರ್ಣ ಬಂದ್… ರಸ್ತೆಗಿಳಿದ ವಾಹನಗಳ ಚಕ್ರದ ಗಾಳಿ ತೆಗೆದು ಪ್ರತಿಭಟನೆ

Hubballi: ಸಂಪೂರ್ಣ ಬಂದ್… ರಸ್ತೆಗಿಳಿದ ವಾಹನಗಳ ಚಕ್ರದ ಗಾಳಿ ತೆಗೆದು ಪ್ರತಿಭಟನೆ

ಚಂದ್ರಯಾನ, ಗಗನಯಾನ: ಇಸ್ರೋದ ಮಹತ್ವದ ಪ್ಲಾನ್‌: ವಿ.ನಾರಾಯಣನ್‌

ಚಂದ್ರಯಾನ, ಗಗನಯಾನ: ಇಸ್ರೋದ ಮಹತ್ವದ ಪ್ಲಾನ್‌: ವಿ.ನಾರಾಯಣನ್‌

Los Angeles wildfires: ಕ್ಯಾಲಿಫೋರ್ನಿಯಾದಲ್ಲಿ ಕಾಳ್ಗಿಚ್ಚು… ಐವರು ಸಾವು

Los Angeles wildfires: ಕ್ಯಾಲಿಫೋರ್ನಿಯಾದಲ್ಲಿ ಕಾಳ್ಗಿಚ್ಚು… ಐವರು ಸಾವು

naxal-file

Naxal Activity Calm: ಪಶ್ಚಿಮ ಘಟ್ಟದ ಕಾನನದಲ್ಲಿ ನಕ್ಸಲ್‌ ನಿಶ್ಶಬ್ದ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.