ಮಕ್ಕಳಲ್ಲಿ ಮಾನವೀಯತೆ ಬೆಳೆಸಿ; ಮನೆಯೇ ಮೊದಲ ಪಾಠಶಾಲೆಯಾಗಲಿ
ಯಾರಾದರೂ ಸಹಾಯ ಮಾಡಿದರೆ ಅವರಿಗೆ ಕೃತಜ್ಞತೆ ಸಲ್ಲಿಸಲು ಮಕ್ಕಳಿಗೆ ತಿಳಿಸಿ.
Team Udayavani, Nov 28, 2020, 12:05 PM IST
Representative Image
ಮಕ್ಕಳಿಗೆ ಮನೆಯೇ ಮೊದಲ ಪಾಠಶಾಲೆ. ಹೀಗಾಗಿ ತಂದೆ-ತಾಯಿಯೇ ಮೊದಲ ಗುರು. ಅದ್ದರಿಂದ ಮಕ್ಕಳಿಗೆ ಮನೆಯಲ್ಲಿ ಏನು ಹೇಳಿಕೊಡಬೇಕು, ಯಾವ ರೀತಿಯ ಸಂಸ್ಕಾರ ನೀಡಬೇಕು, ಅವರನ್ನು ಹೇಗೆ ಬೆಳೆಸಬೇಕು ಎಂಬುದನ್ನು ಮೊದಲು ಹೆತ್ತವರು ತಿಳಿದುಕೊಂಡಿರಬೇಕು. ತಮ್ಮನ್ನೇ ಮಕ್ಕಳು ಅನುಸರಿಸುತ್ತಾರೆ ಎಂಬ ಎಚ್ಚರಿಕೆ ಅವರಲ್ಲಿರಬೇಕು. ಮಕ್ಕಳ ತಪ್ಪುಗಳನ್ನು ಸಣ್ಣ ವಯಸ್ಸಿನಲ್ಲೇ ತಿದ್ದಿ ಉತ್ತಮ ನಡತೆ ಕಲಿಸಿಕೊಟ್ಟರೆ ಮುಂದೆ ಅವರು
ಒಳ್ಳೆಯ ವ್ಯಕ್ತಿಯಾಗಿ ಬೆಳೆಯಲು ಸಾಧ್ಯವಿದೆ.
ಕೃತಜ್ಞತೆ ಸಲ್ಲಿಸುವುದನ್ನು ತಿಳಿಸಿ
ಯಾರಾದರೂ ಸಹಾಯ ಮಾಡಿದರೆ ಅವರಿಗೆ ಕೃತಜ್ಞತೆ ಸಲ್ಲಿಸಲು ಮಕ್ಕಳಿಗೆ ತಿಳಿಸಿ. ಇದರಿಂದ ಮುಂದೆ ಕಷ್ಟಕಾಲದಲ್ಲಿರುವವರಿಗೆ ಸಹಾಯ ಮಾಡಲು ಅವರೂ ಮುಂದಾಗುತ್ತಾರೆ. ಮನೆ, ಬಟ್ಟೆ, ಊಟದ ಬಗ್ಗೆ ಕಾಳಜಿ, ಗೌರವವನ್ನು ಹೊಂದುವಂತೆ ಅವರಿಗೆ ತಿಳಿವಳಿಕೆ ಹೇಳಿ. ಹೀಗಾಗಿ ಇದರೊಂದಿಗೆ ಮಗುವಿನ ಸಂಬಂಧ ಗಟ್ಟಿಯಾಗುತ್ತಾ ಹೋಗುತ್ತದೆ. ಅಲ್ಲದೇ ಮಗುವಿನ ಬೆಳವಣಿಗೆಗೆ ಒಳ್ಳೆಯ ವಾತಾವರಣ ಕಲ್ಪಿಸಿದಂತಾಗುತ್ತದೆ.
ಸಮಾನತೆ ತಿಳಿಸಿ
ಎಲ್ಲರೂ ಸಮಾನರು ಎಂಬುದನ್ನು ಮಕ್ಕಳಿಗೆ ಸಣ್ಣ ವಯಸ್ಸಿನಲ್ಲೇ ಹೇಳಿಕೊಡಬೇಕು. ಪ್ರತಿಯೊಂದು ಜೀವಿಗೂ ಅಸ್ತಿತ್ವ ಇದೆ. ಅದರ ಮೌಲ್ಯದ ಬಗ್ಗೆ ಹೇಳಿಕೊಟ್ಟರೆ ಯಾವುದೇ ವಸ್ತುವನ್ನು ಮಗು ಹಾಳು ಮಾಡಲು ಮುಂದಾಗುವುದಿಲ್ಲ. ಪುರುಷರು, ಮಹಿಳೆಯರು, ದೊಡ್ಡವರು, ಸಣ್ಣವರು ಎನ್ನದೆ ಎಲ್ಲರಿಗೂ ಸಮಾನವಾಗಿ ಗೌರವ ಕೊಡುವುದನ್ನು ಕಲಿಸಿ. ಇದರಿಂದ ಸಮಾನತೆಯ ಪಾಠ ಮಕ್ಕಳಿಗೆ ಮನೆಯಲ್ಲೇ ಸಿಗುತ್ತದೆ. ಅಲ್ಲದೆ ಹಂಚಿ ತಿನ್ನುವ ಅಭ್ಯಾಸ ಬೆಳೆಯುತ್ತದೆ.
ಇದನ್ನೂ ಓದಿ:ಕಿವೀಸ್ ಪ್ರವಾಸದಲ್ಲಿರುವ ಪಾಕ್ ತಂಡದ ಏಳು ಸದಸ್ಯರಿಗೆ ಕೋವಿಡ್ ಸೋಂಕು: ಛೀಮಾರಿ ಹಾಕಿದ ಕಿವೀಸ್
ವರ್ತನೆಯನ್ನು ತಿದ್ದಿ
ಈಗಿನ ಮಕ್ಕಳು ವಯಸ್ಸಿಗೆ ಮೀರಿ ವರ್ತಿಸುತ್ತಾರೆ. ಹೀಗಾಗಿ ಆದಷ್ಟು ಎಚ್ಚರಿಕೆ ಇರುವುದು ಅಗತ್ಯ. ಮಕ್ಕಳು ಎಂಬ ಉದಾಸೀನ ತೋರದೆ ಅವರ ತಪ್ಪುಗಳನ್ನು ಕೂಡಲೇ ತಿದ್ದಿ. ಇಲ್ಲಸಲ್ಲದ ಮಾತುಗಳಿಗೆ ಬ್ರೇಕ್ ಹಾಕಿ. ಕೋಪವನ್ನು ಕಡಿಮೆ ಮಾಡಲು ತಿಳಿ ಹೇಳಿ. ದೊಡ್ಡವರ ಮಾತಿಗೆ ಗೌರವ ಕೊಡುವುದನ್ನು ಕಲಿಸಿ. ಅದರಂತೆ ನಡೆಯಲು ತಿಳಿಸಿ. ವಯಸ್ಸಾದವರಿಗೆ ಸಹಾಯ ಮಾಡಲು ಮಕ್ಕಳನ್ನು ಸಜ್ಜುಗೊಳಿಸಿ. ಮಾನವೀಯತೆಯನ್ನು ಕಲಿಸಿಕೊಡಿ.
ಸಹಾಯ ಮಾಡಲು ಹೇಳಿ
ಮನೆಯಲ್ಲಿ ಪ್ರತಿಯೊಂದು ಕಾರ್ಯದಲ್ಲೂ ಮಕ್ಕಳ ಸಹಾಯವನ್ನು ಕೇಳಿ. ಆಗ ಅವರಲ್ಲಿ ಸಹಾಯ ಮಾಡುವ ಗುಣ ತನ್ನಿಂತಾನೇ ಬೆಳೆಯುತ್ತದೆ. ದಾನ ಧರ್ಮದ ಕಾರ್ಯದಲ್ಲಿ ಅವರನ್ನೂ ತೊಡಗಿಸಿಕೊಳ್ಳಿ. ವೃದ್ಧಾಶ್ರಮ, ಅಂಗವಿಕಲ ಮಕ್ಕಳ ಬಳಿಗೆ ಕರೆದುಕೊಂಡು ಹೋಗಿ. ಆಗ ಅವರಲ್ಲಿ ಮಾನವೀಯತೆಯ ಬೀಜ ಬಿತ್ತಲು ಸಾಧ್ಯವಾಗುತ್ತದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Kannada: ಅಂತರ್ಜಾಲದಲ್ಲಿ ಕನ್ನಡದ ಕುಸುಮ ಮತ್ತಷ್ಟು ಅರಳಲಿ
Karnataka: ಕನ್ನಡ ಅಧ್ಯಯನ ಪೀಠಗಳ ವೈಭವದ ದಿನಗಳು ಮರಳಲಿ
Naxal: ನಕ್ಸಲರ ನೆತ್ತರ ಹೆಜ್ಜೆ..: ರಾಜ್ಯದಲ್ಲಿ ನಕ್ಸಲ್ ಅಟ್ಟಹಾಸದ ಕರಾಳ ಇತಿಹಾಸ ಇಲ್ಲಿದೆ
Assembly Election: ಮಹಾರಾಷ್ಟ್ರ ಕದನದಲ್ಲಿ ಘಟಾನುಘಟಿಗಳ ಭವಿಷ್ಯ ಪಣಕ್ಕೆ
ಸ್ವಾವಲಂಬಿ ಬದುಕು, ಹೆಣ್ಣು ಮಕ್ಕಳ ಶಿಕ್ಷಣ ಪ್ರವರ್ತಕ ಅಮ್ಮೆಂಬಳ ಸುಬ್ಬರಾವ್ ಪೈ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.