ಇಂದು ಧನ್ವಂತರಿ ಜಯಂತಿ : ಆರೋಗ್ಯವರ್ಧನೆಗೆ ಧನ್ವಂತರಿ ಸ್ಮರಣೆ
Team Udayavani, Dec 12, 2020, 5:45 AM IST
ಸಾಂದರ್ಭಿಕ ಚಿತ್ರ
ಸಾಮಾನ್ಯವಾಗಿ ಭಗವಂತನಿಗೆ ಹತ್ತು ಅವತಾರಗಳು ಎಂದು ಹೇಳುವುದಿದೆ. ಇದು ಈ ವೈವಸ್ವತ ಮನ್ವಂತರದ ದಶಾವತಾರಗಳು. ಹಿಂದಿನ ಮನ್ವಂತ ರದ್ದೂ ಸೇರಿದಂತೆ ವೇದವ್ಯಾಸ, ಕಪಿಲ, ಮಹೀದಾಸ, ದತ್ತಾತ್ರೇಯ ಒಟ್ಟು 23 ಅವತಾರಗಳನ್ನು ಹೆಸರಿಸಲಾಗುತ್ತದೆ. ಇದ ರಲ್ಲಿ ಆಯುರ್ವೇದ ಪ್ರವರ್ತಕನೆನಿಸಿದ ಧನ್ವಂತರಿ ಅವತಾರವೂ ಒಂದು.
16 ಜನರ ಸ್ಮರಣೆಯಿಂದ ರೋಗಹರ
“ಧನ್ವಂತರಿರ್ದಿವೋದಾಸಃ ಕಾಶೀರಾ ಜೋ ಶ್ವಿನೀ ಸುತೌ| ನಕುಲಃ ಸಹದೇ ವೋ ರ್ಕಿಃ ಚ್ಯವನೋಜನಕೋ ಬುಧಃ| ಜಾಬಾಲೋ ಜಾಜಲಿಃ ಪೈಲಃ ಕರಥಃ ಅಗಸ್ತ್ಯ ಏವ ಚ| ಏತೇ ವೇದಾಂಗ ವೇದಜ್ಞಃ ಷೋಡಶ ವ್ಯಾಧಿನಾಶಕಾಃ|| ಈ 16 ಜನರನ್ನು ನಿತ್ಯ ಸ್ಮರಿಸಿದರೆ ರೋಗ ನಿವಾರಣೆಯಾಗುತ್ತದೆ ಎಂಬ ಮಾತು ಪುರಾಣಗಳಲ್ಲಿದೆ. ಇದರಲ್ಲಿ ಮೊದಲು ಇರುವುದೇ ಧನ್ವಂತರಿ ಮತ್ತು ದಿವೋದಾಸರ ಹೆಸರು.
ಪುರಾಣಗಳಲ್ಲಿ ಬರುವ ಧನ್ವಂತರಿ ಐತಿ ಹಾಸಿಕವಾಗಿ ಮತ್ತೂಮ್ಮೆ ಅವತರಿಸಿದ್ದು ಆಯುರ್ವೇದದ ಇತಿಹಾಸದಲ್ಲಿ ಕಂಡು ಬರುತ್ತದೆ. ಎರಡನೆಯ ಬಾರಿಗೆ ಜನಿಸಿದ ಧನ್ವಂತರಿ ಕಾಶೀರಾಜನಾದ ದಿವೋದಾಸ.
ಉತ್ತರ -ದಕ್ಷಿಣದ ವ್ಯತ್ಯಾಸ
ದಿವೋದಾಸ ಧನ್ವಂತರಿ ಕಾರ್ತಿಕ ಮಾಸದ ಕೃಷ್ಣಪಕ್ಷದ ತ್ರಯೋದಶಿ ದಿನ ಜನಿಸಿದ. ಉತ್ತರ ಭಾರತದಲ್ಲಿ ಧನ್ವಂತರಿ ಜಯಂತಿಯನ್ನು ಧನತ್ರಯೋದಶಿ = ಧನ್ ತೆರಾಸ್ ಎಂದು ಕರೆಯುತ್ತಾರೆ. ಉತ್ತರ ಭಾರತದಲ್ಲಿ ಕಾರ್ತಿಕ ಮಾಸ ಆರಂಭವಾಗುವುದು ಹುಣ್ಣಿಮೆಯ ಮರುದಿನದಿಂದ, ದಕ್ಷಿಣ ಭಾರತದಲ್ಲಿ ಕಾರ್ತಿಕ ಮಾಸ ಆರಂಭವಾಗುವುದು ಅಮಾ ವಾಸ್ಯೆಯಿಂದ. ಹೀಗಾಗಿ ಉತ್ತರ ಭಾರತದಲ್ಲಿ ಧನತ್ರಯೋದಶಿ ನ. 13ರಂದು ಆಚರಣೆಯಾಗಿದೆ. ಇದು ಗುಜರಾತಿನಲ್ಲಿ ಹೆಚ್ಚು ಪ್ರಚಲಿತ. ಕೇಂದ್ರ ಆಯುಷ್ ಇಲಾಖೆ ಈ ದಿನವನ್ನು ರಾಷ್ಟ್ರೀಯ ಆಯುರ್ವೇದ ದಿನವಾಗಿ 2016ರಿಂದ ಆಚರಿ ಸುತ್ತಿದೆ. ಇದು ದೀಪಾವಳಿಯ ಹಬ್ಬದ ನಡುವಿನ ತ್ರಯೋದಶಿ ಯಂದು ಘಟಿಸುತ್ತದೆ. ದಕ್ಷಿಣ ಭಾರತದಲ್ಲಿ ಡಿ. 12ರಂದು ಧನ್ವಂತರಿ ಜಯಂತಿ ಆಚರಣೆ ನಡೆಯುತ್ತಿದೆ.
ಕಾಶೀರಾಜ ದಿವೋದಾಸ ಧನ್ವಂತರಿಯನ್ನು ಸುಶ್ರುತ, ಚರಕ, ಪರಾಶರ, ಔಪಧೇನವ, ಕ್ಷಾರಪಾಣಿ ಮೊದಲಾದ ಆಯುರ್ವೇದಾಚಾರ್ಯರು ಗುರುಗಳು ಎಂದು ಪರಿ ಗಣಿಸಿದ್ದಾರೆ. ಮುಖ್ಯವಾಗಿ ಸುಶ್ರುತರು ಧನ್ವಂತರಿಯ ಉಪದೇಶವನ್ನು ತಮ್ಮ ಗ್ರಂಥದಲ್ಲಿ ದಾಖಲಿಸಿ ಆಯುರ್ವೇದ ಶಾಸ್ತ್ರಾಧ್ಯಯನ ಮಾಡುವವರಿಗೆ ಭದ್ರ ಬುನಾದಿ ಒದಗಿಸಿ ದ್ದಾರೆ. ಇದು ಪ್ರಶ್ನೋತ್ತರ ರೂಪದಲ್ಲಿದೆ.
ಧನ್ವಂತರಿ ಕಲ್ಪೋಕ್ತ ಪೂಜೆ, ಪ್ರಸಾದ
ಗರುಡ ಪುರಾಣದಲ್ಲಿ ಧನ್ವಂತರಿ ವ್ರತಕಥೆ ಇದೆ. ಇದು ಧನ್ವಂತರಿ ವ್ರತ ಕಲೊ³àಕ್ತ ಪೂಜೆಯಾಗಿದೆ. ಇದರಲ್ಲಿ ಧನ್ವಂತರಿ ಹೇಗೆ ಜನಿಸಿದ? ಧನ್ವಂತರಿ ಜಯಂತಿಯನ್ನು ಹೇಗೆ ಆಚರಿಸ ಬೇಕು? ಮಹತ್ವವೇನು? ಎಂತಹ ಪ್ರಸಾದವನ್ನು ನೈವೇದ್ಯ ಮಾಡಬೇಕು ಎಂಬಿತ್ಯಾದಿಗಳ ಬಗೆಗೆ ವಿವರವಿದೆ. ಒಂದು ಪಾಲು ಗೋಧಿ ಹಿಟ್ಟು, ಎರಡು ಪಾಲು ಹಾಲು, ನಾಲ್ಕು ಪಾಲು ತುಪ್ಪ, ಆರು ಪಾಲು ಸಕ್ಕರೆಯೊಂದಿಗೆ ಕುಂಕುಮಕೇಸರ, ಏಲಕ್ಕಿ, ಲವಂಗ, ದ್ರಾಕ್ಷಿ, ಬಾದಾಮಿ ಇತ್ಯಾದಿಗಳನ್ನು ಹಾಕಿ ಪಾಕ ಮಾಡಿ ಧನ್ವಂತರಿಗೆ ನಿವೇದಿಸಬೇಕೆಂಬ ಉಲ್ಲೇಖವಿದೆ ಎನ್ನುತ್ತಾರೆ 1978ರಿಂದ ಮನೆಯಲ್ಲಿ ಧನ್ವಂತರಿ ಜಯಂತಿಯನ್ನು ಆಚರಿಸುತ್ತಿರುವ ಉಡುಪಿ ಕುತ್ಪಾಡಿ ಎಸ್‌ಡಿಎಂ ಆಯುರ್ವೇದ ಕಾಲೇಜಿನ ನಿವೃತ್ತ ಪ್ರಾಧ್ಯಾಪಕ ಡಾ| ರೆಂಜಾಳ ಪ್ರಭಾಕರ ಉಪಾಧ್ಯಾಯ.
ಧನ್ವಂತರಿ= ಶಸ್ತ್ರಚಿಕಿತ್ಸಕ
ಭಾಗವತ, ಹರಿವಂಶದಲ್ಲಿ ಧನ್ವಂತರಿ ಅವತಾರದ ಉಲ್ಲೇಖವಿದೆ. ಪ್ರಾಚೀನ ಆಯುರ್ವೇದಾಚಾರ್ಯರು ಶಲ್ಯತಂತ್ರ ವನ್ನು (ಸರ್ಜರಿ) ಕಾಶೀರಾಜ ಧನ್ವಂತರಿ ಉಪದೇಶದಿಂದ ವಿವರಿಸಿದ್ದಾರೆ. ಶಬ್ದಾ ರ್ಥದ ಪ್ರಕಾರ (ಧನು=ಶಸ್ತ್ರ, ತರಿ=ಚಿಕಿತ್ಸಕ) ಯಾರು ಉತ್ತಮ ಶಸ್ತ್ರಚಿಕಿತ್ಸಕರೋ (ಸರ್ಜನ್ಸ್) ಅವರು ಧನ್ವಂತರಿ ಎಂಬ ಅಭಿಪ್ರಾಯವನ್ನು ಮಣಿಪಾಲ ಮುನಿಯಾಲು ಆಯು ರ್ವೇದ ಕಾಲೇಜಿನ ಪ್ರಾಂಶುಪಾಲ ಡಾ| ಸತ್ಯನಾರಾಯಣ ವ್ಯಕ್ತಪಡಿಸುತ್ತಾರೆ.
ವಿಸ್ತಾರವಾದ ಬೀಜರೂಪ
ಅಮೃತವನ್ನು ತಂದ ಅನಂತರ ಬೇರೆ ಔಷಧಗಳ ಅಗತ್ಯವೇನಿದೆ? ಔಷಧ ಲತೆಗಳ ಬಳಕೆ ಕುರಿತು ವೇದದಲ್ಲಿದೆ. ರುದ್ರದಲ್ಲಿ ರಸದ್ರವ್ಯಗಳ (ಮಿನರಲ್ಸ್) ಬಳಕೆ ಇದೆ. ಆಗ ಬೀಜರೂಪದಲ್ಲಿತ್ತು. ಮತ್ತೆ ವಿಸ್ತಾರ ವಾಯಿತು ಎಂಬ ಅಭಿಪ್ರಾಯ ಡಾ| ಪ್ರಭಾಕರ ಉಪಾ ಧ್ಯಾಯರದ್ದಾದರೆ, ವೇದದಲ್ಲಿಯೂ ದಿವೋದಾಸನ ಉಲ್ಲೇಖವಿದೆ, ಈತ ದಶರಥನ ಸಮಕಾಲೀನನಾಗಿದ್ದಾನೆ. ಪುರಾಣಗಳಲ್ಲಿ ದಿವೋದಾಸನ ಮುನ್ನವೇ ಧನ್ವಂತರಿಯ ಆಗಮನವಿದೆ. ಇವೆಲ್ಲ ಅಭಿಪ್ರಾಯಗಳು. ನಾವು ಸಮ ಗ್ರವಾಗಿ ಪರಿಗಣಿಸ ಬೇಕಾಗುತ್ತದೆ ಎಂಬ ಅಭಿಮತ
ಡಾ| ಸತ್ಯನಾರಾಯಣ ಅವರದು.
ಅಷ್ಟಾಂಗಯೋಗದ ಪ್ರವರ್ತಕ
ಪುರಾಣದಲ್ಲಿ ಮೊದಲಾಗಿ ಕಂಡುಬರುವುದು ಅಮೃತ ಕಲಶವನ್ನು ತರುವ ಧನ್ವಂತರಿ. ಇದು ನಡೆಯುವುದು ಸಮುದ್ರಮಥನ ಕಾಲದಲ್ಲಿ. ಹೀಗಾಗಿ ಅಬ್ಜ ಧನ್ವಂತರಿ ಎಂದು ಕರೆಯುತ್ತಾರೆ. ಅಬ್ಜ= ಸಮುದ್ರ, ನೀರು. ಧನ್ವ= ರೋಗ, ತರಿ= ದಾಟಿಸುವವ, ಈ ಅರ್ಥದಲ್ಲಿ ರೋಗ ನಿರ್ಮೂಲನ ಮಾಡುವವ ಎಂಬುದಾಗಿದೆ. ಅಮೃತ ಕಲಶ ತಂದಾಗ ದೈತ್ಯರು ಕೊಂಡೊಯ್ಯುತ್ತಾರೆ. ಆಗಲೇ ಭಗವಂತ ಮೋಹಿನಿ ಅವತಾರದಲ್ಲಿ ಬಂದು ಸಮಸ್ಯೆ ನಿವಾರಿಸುತ್ತಾನೆ. ದಿವೋದಾಸ ಧನ್ವಂತರಿ ತಾನು ಹಿಂದೆ ಒಮ್ಮೆ ಅವತರಿಸಿದ್ದೆ ಎಂದು ಹೇಳುವುದು ಪುರಾಣ ಕಥನದ ಕೊಂಡಿಯನ್ನು ಸಮರ್ಥಿಸುವಂತಿದೆ. ಪುರಾಣ ಕಾಲದ ಧನ್ವಂತರಿಯೂ ಕಾಯ ಚಿಕಿತ್ಸಾ (ಮೆಡಿಸಿನ್), ಕೌಮಾರ (ಬಾಲ ವಿಭಾಗ), ಶಲ್ಯ (ಸರ್ಜರಿ), ಶಾಲಕ್ಯ (ಇಎನ್‌ಟಿ, ಕಣ್ಣು), ಅಗದ (ವಿಷ ಚಿಕಿತ್ಸೆ), ಭೂತವಿದ್ಯಾ (ಮನೋರೋಗ, ಮನಃಶಾಸ್ತ್ರ), ರಸಾಯನ (ಆರೋಗ್ಯವರ್ಧನ), ವಾಜೀಕರಣ (ಸರಸಜೀವನ ಉತ್ತೇಜನ) ಹೀಗೆ ಅಷ್ಟಾಂಗಯೋಗವನ್ನು ಪ್ರವರ್ತಿಸಿದ ಎಂಬ ಸಂಕ್ಷಿಪ್ತ ವಿವರಣೆ ಇದೆ.
ಮಟಪಾಡಿ ಕುಮಾರಸ್ವಾಮಿ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಇಂದು ರಾಷ್ಟ್ರೀಯ ರೈತ ದಿನ: ರೈತರ ಬದುಕು ಹಸನಾದರಷ್ಟೇ ಉಳಿದೀತು ಕೃಷಿ ಸಂಸ್ಕೃತಿ
Mandya :ಗಂಡ ಗದ್ಯ, ಹೆಂಡತಿ ಪದ್ಯ, ಮಕ್ಕಳು ರಗಳೆ!: ಹಾಸ್ಯ ಸಾಹಿತಿ ವೈ.ವಿ.ಗುಂಡೂರಾವ್
Mandya Sahitya Sammelana: ಅಕ್ಷರ ಜಾತ್ರೆಯಲ್ಲಿ “ಹವಾ’ ಎಬ್ಬಿಸಿದ ತೊಟ್ಟಿ ಮನೆ..!
Mandya: ನುಡಿ ಹಬ್ಬದ ಔತಣ ಸವಿಯಲು ಜನವೋ ಜನ- ವೃದ್ಧರಿಗೆ ವಿಶೇಷ ಕೌಂಟರ್
World Meditation Day; ಶರೀರಕ್ಕೆ ಊಟ, ಆತ್ಮಕ್ಕೆ ಧ್ಯಾನ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Horoscope: ಈ ರಾಶಿಯವರಿಗೆ ಧೈರ್ಯ ಮತ್ತು ಸಾಹಸ ಪ್ರವೃತ್ತಿಯಿಂದ ಕಾರ್ಯಸಿದ್ಧಿ ಆಗಲಿದೆ
Priority: ಮಂಡ್ಯ ಸಾಹಿತ್ಯ ಸಮ್ಮೇಳನದಲ್ಲಿ ಅವಕಾಶ ವಂಚಿತ ಯಕ್ಷಗಾನ
Ambedkar Row: ಕಾಂಗ್ರೆಸ್ ಎಂದರೆ ಫೇಕ್ ಗಾಂಧಿಗಳ ಪಕ್ಷ: ಛಲವಾದಿ ನಾರಾಯಣಸ್ವಾಮಿ
Delhi bom*b ಬೆದರಿಕೆ; ಮಕ್ಕಳಿಗೆ ರಜೆ ಬೇಕಾಗಿತ್ತು: ಕಾರಣ ಬಿಚ್ಚಿಟ್ಟ ಪೊಲೀಸರು!
ಇಂದು ರಾಷ್ಟ್ರೀಯ ರೈತ ದಿನ: ರೈತರ ಬದುಕು ಹಸನಾದರಷ್ಟೇ ಉಳಿದೀತು ಕೃಷಿ ಸಂಸ್ಕೃತಿ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.