ಇಂದಿನ ಸಭೆಯಲ್ಲಿ ಮಹಾಮೈತ್ರಿಗೆ ಸಿಕ್ಕೀತೇ ಬ್ರೇಕ್?
Team Udayavani, Jun 23, 2023, 7:22 AM IST
ಮುಂದಿನ ವರ್ಷದ ಎಪ್ರಿಲ್, ಮೇಯಲ್ಲಿ ಲೋಕಸಭೆಯ ಚುನಾವಣೆ ನಡೆಯಲಿದೆ. ತಿಂಗಳ ಲೆಕ್ಕಾಚಾರ ನೋಡಿದರೆ ಇನ್ನೂ 11 ತಿಂಗಳು ಇದೆ. ಆದರೆ ದೇಶದ ರಾಜಕೀಯ ವಾತಾವರಣ ನೋಡಿದರೆ, ಚುನಾವಣೆ ಎಂಬ ಪಾಕಶಾಲೆಯಲ್ಲಿ ಮಹಾ ಅಡುಗೆಗೆ ಸಿದ್ಧತೆಗಳು ಶುರುವಾಗಿದೆ. ಕರ್ನಾಟಕ ವಿಧಾನಸಭೆ ಚುನಾವಣೆಯ ಬಳಿಕ ಮೇಲ್ನೋಟಕ್ಕೆ ಅಲ್ಪ ವಿರಾಮದಂತೆ ಕಂಡಿದ್ದರೂ, ನಿಧಾನಕ್ಕೆ ವ್ಯೂಹ ರಚನೆ ಲೆಕ್ಕಾಚಾರಗಳು ಶುರುವಾಗಿವೆ.
ಈ ಬಾರಿಯ ವಿಶೇಷ ಏನೆಂದರೆ ಬಿಜೆಪಿ ವರ್ಸಸ್ ವಿಪಕ್ಷಗಳು. ಅದಕ್ಕಾಗಿ ಜೂ.12ರಂದು ಪಟ್ನಾದಲ್ಲಿ ವಿಶೇಷ ಸಭೆ ನಡೆಯ ಬೇಕಾಗಿತ್ತು. ಕಾಂಗ್ರೆಸ್, ಡಿಎಂಕೆ, ಸಿಪಿಎಂ ನಾಯಕರಿಗೆ ಇದ್ದ ಪೂರ್ವ ನಿರ್ಧರಿತ ಕಾರ್ಯಕ್ರಮಗಳಿಂದ ಆ ಸಭೆ ಜೂ.23, ಶುಕ್ರವಾರಕ್ಕೆ ಮುಂದೂಡಿಕೆಯಾಗಿತ್ತು. ಬಿಜೆಪಿ ವಿರುದ್ಧ ವಿಪಕ್ಷಗಳ ಮಹಾ ಮೈತ್ರಿಕೂಟ ರಚನೆಯಾಗಬೇಕು ಎಂದು ಮುಂಚೂಣಿಯಲ್ಲಿ ಇರುವುದು ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್. ಕಾಂಗ್ರೆಸ್, ಜೆಡಿಯು, ಆರ್‌ಜೆಡಿ, ಎಸ್‌ಪಿ, ಟಿಎಂಸಿ, ಡಿಎಂಕೆ, ಸಿಪಿಎಂ, ಸಿಪಿಐ, ಆಮ್ ಆದ್ಮಿ ಪಾರ್ಟಿ, ಜೆಎಂಎಂ, ಎನ್‌ಸಿಪಿ, ಪಿಡಿಪಿ, ಉದ್ಧವ್ ಠಾಕ್ರೆ ಅವರ ಶಿವಸೇನೆಯ ಬಣ ಸೇರಿ 20 ಪಕ್ಷಗಳು ಸದ್ಯಕ್ಕೆ ಸಭೆಯಲ್ಲಿ ಭಾಗವಹಿಸಲು ನಿರ್ಧರಿಸಿವೆ.
ವಿಪಕ್ಷಗಳನ್ನು ಗುರಿಯಾಗಿ ಇರಿಸಿಕೊಂಡು ಇ.ಡಿ., ಸಿಬಿಐ ಮೂಲಕ ದಾಳಿ ನಡೆಸಲಾಗುತ್ತದೆ ಮತ್ತು ಅವರ ಧ್ವನಿಯನ್ನು ಹತ್ತಿಕ್ಕ ಲಾಗುತ್ತದೆ ಎನ್ನುವುದು ಬಿಜೆಪಿ ವಿರುದ್ಧದ ಅರೋಪ. ಅದಕ್ಕಾಗಿ “ಪ್ರಜಾಪ್ರಭುತ್ವ ಉಳಿಸಿ’ ಎಂಬ ಧ್ಯೇಯವಾಕ್ಯದ ಅನ್ವಯ ಶುಕ್ರ ವಾ ರ ಸಭೆ ನಡೆಯಲಿದೆ. ಕೆಲವು ದಿನಗಳ ಹಿಂದೆ ತಮಿಳುನಾಡಿನಲ್ಲಿ ಡಿಎಂಕೆ ಸರಕಾರದಲ್ಲಿ ಇಂಧನ ಮತ್ತು ಅಬಕಾರಿ ಸಚಿವರಾಗಿದ್ದ ವಿ.ಸೆಂಥಿಲ್ ಬಾಲಾಜಿ ಅವರನ್ನು ಇ.ಡಿ. ಬಂಧಿಸಿದ್ದು ವಿಪಕ್ಷಗಳಿಗೆ ಹೊಸ ಅಸ್ತ್ರವಾಗಿದೆ.
ಬಾಲಾಜಿ ಅವರು ಎಐಎಡಿ ಎಂಕೆ ಸರಕಾರದಲ್ಲಿ ಸಚಿವರಾಗಿದ್ದಾಗ ದಾಖಲಾಗಿದ್ದ ಪ್ರಕರಣ ಮುಂದುವರಿದು ಅಂತಿಮ ಘಟ್ಟ ತಲುಪಿತ್ತು ಎನ್ನುವುದು ಬಹಿರಂಗ ರಹಸ್ಯ. ಇನ್ನು ಆಮ್ ಆದ್ಮಿ ಪಕ್ಷಕ್ಕೆ ದ್ಲಿಲಿಯಲ್ಲಿ ಕೇಂದ್ರ ಸರಕಾರ ಅಧಿಕಾರಿಗಳ ನೇಮಕ ಮತ್ತು ಶಿಸ್ತು ಕ್ರಮ ಕೈಗೊಳ್ಳುವುದರ ವಿರುದ್ಧ ಹೊರಡಿಸಿದ ಅಧ್ಯಾದೇಶ ವಿರುದ್ಧ ಇತರ ವಿಪಕ್ಷಗಳ ಬೆಂಬಲ ಪಡೆದುಕೊಳ್ಳುವುದು ಅನಿವಾರ್ಯ. ದೀದಿಗೆ ಬಿಜೆಪಿ ವಿರುದ್ಧ ಹೋರಾಟ ನಡೆಸುವುದು ಅಸ್ತಿತ್ವದ ಅನಿವಾರ್ಯತೆ. ಹೀಗೆ ಪ್ರಸ್ತಾವಿತ ವಿಪಕ್ಷಗಳ ಮೈತ್ರಿಕೂಟಗಳಲ್ಲಿನ ಒಂದೊಂದು ಕಾರ್ಯ ಸೂಚಿಯನ್ನು ಹೊಂದಿವೆ. 1970ರ ದಶಕದ ತೃತೀಯ ರಂಗ ರಚನೆ ಮತ್ತು ಪ್ರಸಕ್ತ ಸಾಲಿನ ಪ್ರಯತ್ನಕ್ಕೆ ಕೊಂಚ ವ್ಯತ್ಯಾಸ ಇದೆ ಎಂದು ಹೇಳಬೇಕಾಗುತ್ತದೆ.
ನವೆಂಬರ್, ಡಿಸೆಂಬರ್‌ನಲ್ಲಿ ಛತ್ತೀಸ್‌ಗಢ, ಮಧ್ಯಪ್ರದೇಶ, ಮಿಜೋರಾಂ, ರಾಜಸ್ಥಾನ, ತೆಲಂಗಾಣ ವಿಧಾನಸಭೆಗೆ ಚುನಾವಣೆ ನಡೆಯಲಿದೆ. ಇಷ್ಟೂ ರಾಜ್ಯಗಳಲ್ಲಿ ಲೋಕಸಭೆಯ ಒಟ್ಟು 83 ಕ್ಷೇತ್ರಗಳು ಇವೆ. ಈ ರಾಜ್ಯಗಳ ಚುನಾವಣೆ ಬಳಿಕ ಆರೇ ತಿಂಗಳಲ್ಲಿ ಲೋಕಸಭೆಗೆ ಚುನಾವಣೆಯೂ ಇರುವುದರಿಂದ ಈ ಸಭೆ ಮಹತ್ವದ್ದು.
ಹಾಗಿದ್ದರೆ ದೇಶದ ರಾಜಕೀಯದ ಇತಿಹಾಸದಲ್ಲಿ ಹೊಸತು ಸೃಷ್ಟಿಯಾದೀತೇ? ಬಿಜೆಪಿ ಮತ್ತು ಪ್ರಧಾನಿ ನರೇಂದ್ರ ಮೋದಿ ವಿರುದ್ಧ ಮಹಾಮೈತ್ರಿ ಕೂಟ ರಚನೆ ಮತ್ತು ಅವರ ವಿರುದ್ಧ ಸಕಲ ರಿಗೂ ಸಲ್ಲುವ ಪ್ರಧಾನಿ ಅಭ್ಯರ್ಥಿ ರೂಪುಗೊಳ್ಳುವರೇ ಎನ್ನುವುದು ಕುತೂಹಲ. ಈ ಸಭೆಯಲ್ಲಿ ಚರ್ಚೆಯಾಗುವ ವಿಚಾರಗಳಾದರೂ ಏನು ಎಂಬ ಬಗ್ಗೆ ಕುತೂಹಲಗಳು ಇವೆ. ಇಬ್ಬರು ಹಿರಿಯ ನಾಯಕರ ಪ್ರಕಾರ ಶುಕ್ರವಾರದ ಸಭೆಯಲ್ಲಿ ಬಲುದೊಡ್ಡ ತೀರ್ಮಾನಕ್ಕೆ ಬರುವುದು ಅಸಾಧ್ಯ.
ಬಿಜೆಪಿ ವಿರುದ್ಧ ವಿಪಕ್ಷಗಳು ಅಥವಾ ಸಮಾನ ಮನಸ್ಕರು ಯಾವ ಕಾರಣಕ್ಕಾಗಿ ಒಂದೇ ವೇದಿಕೆಯಡಿ ಬಂದು ಅದನ್ನು ಸೋಲಿಸಬೇಕು ಮತ್ತು ಪಟ್ನಾ ದಲ್ಲಿಯೇ ಏಕೆ ಸಭೆ ನಡೆಸಲಾಗುತ್ತಿದೆ ಎಂಬ ಎರಡು ಪ್ರಾಥಮಿಕ ವಿಚಾರಗಳ ಬಗ್ಗೆ ಮಾತ್ರ ಚರ್ಚೆಯಾಗಲಿದೆ. ಬಿಜೆಪಿ ಸರಕಾರದ ಅವಧಿಯಲ್ಲಿ ಸಂವಿಧಾನಾತ್ಮಕ ಸಂಸ್ಥೆಗಳ ಮೇಲೆ ನಿರಂತರವಾಗಿ ದಾಳಿಯಾಗುತ್ತಿದೆ. ಅದನ್ನು ತಡೆಯಲು ಮತ್ತು ದೇಶದ ಜನರು ಹೊಂದಿರುವ ಹಕ್ಕುಗಳ ರಕ್ಷಣೆಯ ಬಗ್ಗೆ ಹೇಗೆ ಹೋರಾಟ ನಡೆಸ ಬಹುದು ಎಂಬುದರ ಬಗ್ಗೆ ಮಾತುಕತೆಗಳು ಕೇಂದ್ರೀಕೃತವಾಗಲಿದೆ. ಇದಲ್ಲದೆ ಪ್ರಸ್ತಾವಿತ ಮೈತ್ರಿಕೂಟ ಹೊಂದಿರಬೇಕಾದ ಜಾತ್ಯತೀತ ಮತ್ತು ಪ್ರಜಾಸತ್ತಾತ್ಮಕ ನಿಲುವುಗಳ ಬಗ್ಗೆ ಪ್ರಾಥಮಿಕ ಹಂತದ ಚರ್ಚೆಗಳು ನಡೆಯಬಹುದು.
ವರ್ಷಾಂತ್ಯದಲ್ಲಿ 5 ರಾಜ್ಯಗಳ ವಿಧಾನಸಭೆಗೆ ಚುನಾ ವಣೆಯೂ ನಡೆಯಲಿರುವುದರಿಂದ ಅಲ್ಲಿ ಸಂಭಾವ್ಯ ಮೈತ್ರಿಕೂಟ ಅಥವಾ ಕಾಂಗ್ರೆಸ್ ಪರ ಪ್ರಚಾರ ನಡೆಸುವ ಬಗ್ಗೆ ಚರ್ಚೆಗಳು ನಡೆಯಬಹುದು. ಛತ್ತೀಸ್‌ಗಢ, ರಾಜಸ್ಥಾನಗಳಲ್ಲಿ ಸದ್ಯ ಕಾಂಗ್ರೆಸ್ ಸರಕಾರ ಇದೆ. ಮಧ್ಯಪ್ರದೇಶದಲ್ಲಿ ಬಿಜೆಪಿ, ಮಿಜೋರಾಂನಲ್ಲಿ ಅಧಿಕಾರ ನಡೆಸುತ್ತಿರುವ ಝೋರಾಂತಾಂಗ ಅವರ ಮಿಜೋ ನ್ಯಾಶನಲ್ ಫ್ರಂಟ್ 2014ರಿಂದ ಈಚೆಗೆ ಎನ್‌ಡಿಎ ಜತೆಗೆ ಗುರುತಿಸಿಕೊಂಡಿದೆ. ಇನ್ನು ತೆಲಂಗಾಣದಲ್ಲಿರುವ ಭಾರತ ರಾಷ್ಟ್ರ ಸಮಿತಿ ಮೇಲ್ನೋಟಕ್ಕೆ ಕಾಂಗ್ರೆಸ್ ಮತ್ತು ಬಿಜೆಪಿಯಿಂದ ಸಮಾನ ಅಂತರ ಕಾಯ್ದು ಕೊಂಡು ಪ್ರತ್ಯೇಕವಾಗಿ ರಾಷ್ಟ್ರಮಟ್ಟದಲ್ಲಿ ಗುರುತಿಸಿಕೊಳ್ಳುವ ಮಹಾಪ್ರಯತ್ನದಲ್ಲಿದೆ. ಜತೆಗೆ ಆ ಪಕ್ಷ ಸಂಸ್ಥಾಪಕ ಮತ್ತು ತೆಲಂಗಾಣದ ಮುಖ್ಯಮಂತ್ರಿ ಕೆ.ಚಂದ್ರಶೇಖರ ರಾವ್ ತಮ್ಮದ್ದೇ ಆದ ಮೈತ್ರಿಕೂಟ ರಚನೆ ಮಾಡುವ ಪ್ರಯತ್ನಗಳನ್ನು ನಡೆಸಿದ್ದಾರೆ.
ತೃಣಮೂಲ ಕಾಂಗ್ರೆಸ್‌ನ ಸಂಸ್ಥಾಪಕಿ ಮಮತಾ ಬ್ಯಾನರ್ಜಿ ಮತ್ತು ಎಡಪಕ್ಷಗಳ ನಡುವೆ ಯಾವತ್ತಿದ್ದರೂ ಎಣ್ಣೆ ಸೀಗೆಕಾಯಿಯೇ. ಪಟ್ನಾದಲ್ಲಿ ನಡೆಯಲಿರುವ ಮೊದಲ ಸಭೆಯ ಲ್ಲಿಯೇ ಬಿಜೆಪಿ ವಿರುದ್ಧದ ಮಹಾಮೈತ್ರಿ ಘೋಷಣೆ ಕಷ್ಟವೇ. ಹೀಗೆಂದು ಅಲ್ಲಿ ಭಾಗವಹಿಸಲಿರುವವರೇ ಪಿಸುಗುಟ್ಟುತ್ತಿದ್ದಾರೆ. ಹೀಗಾಗಿ 2024ರ ಚುನಾವಣೆಗೆ ಅನ್ವಯವಾಗುವಂತೆ ಕನಿಷ್ಠ ಸಾಮಾನ್ಯ ಕಾರ್ಯಕ್ರಮ ಘೋಷಣೆ ಈಗಿನ ಕ್ಷಣಕ್ಕೆ ವಿಶ್ಲೇಷಣೆ ಮಾಡುವ ಪ್ರಕಾರ ಅಸಂಭವ. ಯುಪಿಎ ಸರಕಾರ ರಚನೆ ಯಾಗುವ ಸಂದರ್ಭದಲ್ಲಿ ಕನಿಷ್ಠ ಸಾಮಾನ್ಯ ಕಾರ್ಯಕ್ರಮ ಎನ್ನುವುದೇ ಮುನ್ನೆಲೆಗೇ ಬಂದದ್ದೇ ಅನಂತರದ ಹಂತಗಳಲ್ಲಿ. ಸಿಪಿಎಂ, ಸಿಪಿಐ ಯುಪಿಎ ಸರಕಾರಕ್ಕೆ ಬಾಹ್ಯ ಬೆಂಬಲ ಘೋಷಣೆ ಮಾಡಿ, 2009ರಿಂದ 2014ರ ಅವಧಿಯವರೆಗೆ ಸರಕಾರ ನಡೆಸ ಲಾಗಿತ್ತು.
ಜತೆಗೆ ಈ ಹಂತದಲ್ಲಿ ಅದರ ಬಗ್ಗೆ ಚರ್ಚೆ ನಡೆಸಲೂ ಕೆಲವೊಂದು ಪಕ್ಷಗಳ ನಾಯಕರಿಗೆ ವಿಶೇ ಷವಾಗಿ ತೃಣಮೂಲ ಕಾಂಗ್ರೆಸ್, ಎಡಪಕ್ಷಗಳು, ಕಾಂಗ್ರೆಸ್ ನಾಯ ಕರಿಗೆ ಮನಸ್ಸೂ ಇಲ್ಲವಂತೆ. ಆದರೆ ಎನ್‌ಸಿಪಿ ಸಂಸ್ಥಾಪಕ ಶರದ್ ಪವಾರ್ ಅವರಿಗೆ ಸಿಎಂಪಿ ರಚಿಸುವ ಹೊಣೆಯನ್ನು ನೀಡುವ ಸಾಧ್ಯತೆಗಳು ಇವೆ. ಪಟ್ನಾ ಸಭೆಯ ಬಳಿಕ ಮುಂದಿನ ಸಭೆಯ ದಿನಾಂಕ ಮತ್ತು ಸ್ಥಳ, ಆ ಸಂದರ್ಭದಲ್ಲಿನ ರಾಜಕೀಯ ವಿದ್ಯ ಮಾನಗಳ ಬಗ್ಗೆ ಚರ್ಚೆ ನಡೆಸುವುದರ ಬಗ್ಗೆ ಹೆಚ್ಚು ಒಲವು ವ್ಯಕ್ತ ವಾಗಬಹುದು.
ಅಂತೂ ಇಂತೂ ಮಹಾ ಮೈತ್ರಿಕೂಟ ರಚನೆಯಾದರೆ ಬಿಹಾ ರಕ್ಕೆ ಹೊಂದಿಕೊಂಡಂತೆ ಮಾತ್ರ ಅದು ಸೂಕ್ತ ಪರಿಣಾಮ ಬೀರ ಲಿದೆ ಎನ್ನಬಹುದು. ಏಕೆಂದರೆ ಅಲ್ಲಿ ಮಹಾಮೈತ್ರಿ ಕೂಟ ಸರಕಾರ ಇದೆ. ಕೆಲವು ದಿನಗಳ ಹಿಂದೆ ಜಿತನ್ ರಾಂ ಮಾಂಝಿ ನೇತೃತ್ವದ ಹಿಂದುಸ್ತಾನ್ ಅವಾಂ ಮೋರ್ಚಾ ನಿತೀಶ್ ಸರಕಾರದಿಂದ ಹೊರ ಬಂದು ಎನ್‌ಡಿಎ ಸೇರ್ಪಡೆಯಾಗಿದೆ. ಶಿರೋಮಣಿ ಅಕಾಲಿದಳ, ಜೆಡಿಎಸ್, ಬಿಎಸ್‌ಪಿಗೆ ಸಭೆಯ ಆಹ್ವಾನ ರವಾನೆ ಯಾಗಿಲ್ಲ.
ಅಷ್ಟಕ್ಕೂ ನಿತೀಶ್ ಕುಮಾರ್ ಯಾಕೆ ಪ್ರಸ್ತಾವಿತ ವಿಪಕ್ಷಗಳ ಒಕ್ಕೂಟ ರಚನೆಗೆ ಮುಂದಡಿ ಇರಿಸಿದ್ದಾರೆ ಎನ್ನುವುದಕ್ಕೆ ಹಲವು ವಾದಗಳಿವೆ. ಹಾಲಿ ಇರುವ ಜೆಡಿಯು-ಆರ್‌ಜೆಡಿ-ಕಾಂಗ್ರೆಸ್ ಮೈತ್ರಿಕೂಟ 2025ರ ಅಕ್ಟೋಬರ್-ನವೆಂಬರ್‌ನಲ್ಲಿ ನಡೆಯ ಲಿರುವ ವಿಧಾನಸಭೆ ಚುನಾವಣೆಯಲ್ಲಿ ಮತ್ತೆ ಅಧಿಕಾರಕ್ಕೆ ಬರು ತ್ತದೋ ಇಲ್ಲವೇ ಗೊತ್ತಿಲ್ಲ. ಏಕೆಂದರೆ ನಿತೀಶ್ ಸಾಹೇಬರು ತಮಗೆ ಎಲ್ಲಿ ಅನುಕೂಲವಾಗುತ್ತದೋ ಅವರನ್ನು ಅಪ್ಪಿಕೊಂಡು- ಒಪ್ಪಿಕೊಂಡು ರಾಜಕಾರಣ ಮಾಡುವವರು ಎಂಬುದು ಈಗ ಸಾಬೀತಾಗಿದೆ.
ಹೀಗಾಗಿ ಪದೇಪದೆ ಮೈತ್ರಿ ಬದಲಿಸಿದ ಕಳಂಕ ತೊಳೆದುಕೊಳ್ಳಲು ಎಪ್ರಿಲ್‌ನಿಂದ ಈಚೆಗೆ ಬಿಜೆಪಿ ವಿರುದ್ಧದ ಮೈತ್ರಿಕೂಟ ಎಂಬ ಕಾರಣದಿಂದ ಹೊಸದಿಲ್ಲಿ, ಮುಂಬಯಿ, ರಾಯ್‌ಪುರ, ಕೋಲ್ಕತಾಗಳಲ್ಲಿ ಖರ್ಗೆ, ರಾಹುಲ್, ಕೇಜ್ರಿವಾಲ್, ಉದ್ಧವ್ ಠಾಕ್ರೆ, ಹೇಮಂತ್ ಸೊರೇನ್, ಮಮತಾ ಬ್ಯಾನರ್ಜಿ ಯವರನ್ನು ಭೇಟಿಯಾಗುತ್ತಿದ್ದಾರೆ. ಮೇಲ್ನೋಟದ ಮಾತಿನಲ್ಲಿ “ನನಗೆ ಪ್ರಧಾನಿ ಹುದ್ದೆಯ ಆಕಾಂಕ್ಷೆ ಇಲ್ಲ’ ಎನ್ನುತ್ತಾರೆ ನಿತೀಶ್. ಅದಕ್ಕೆ ಪೂರಕವಾಗಿ ಬಿಹಾರ ವಿಧಾನಸಭೆ ಚುನಾವಣೆ ಆರ್‌ಜೆಡಿ ನಾಯಕ- ಹಾಲಿ ಡಿಸಿಎಂ ತೇಜಸ್ವಿ ಯಾದವ್ ನೇತೃತ್ವದಲ್ಲಿ ಎಂದು ಹಿಂದೊಮ್ಮೆ ಘೋಷಣೆಯನ್ನೂ ಮಾಡಿದ್ದರು. ಮತ್ತೆ ಅಧಿಕಾರಕ್ಕೆ ಬರುವ ಬಗ್ಗೆ ಖಾತರಿ ಇಲ್ಲದ್ದರಿಂದ ಹಿಂದೊಮ್ಮೆ ಟಿಡಿಪಿ ನಾಯಕ ಚಂದ್ರಬಾಬು ನಾಯ್ಡು ಕಿಂಗ್‌ಮೇಕರ್ ಆಗಿದ್ದಂತೆ ನಿತೀಶ್ ಕೂಡ ಒಂದು ಕೈ ನೋಡಲು ಮುಂದಾಗಿದ್ದಾರೆ ಎನ್ನುವ ವರಿದ್ದಾರೆ.
ಪಟ್ನಾವೇ ಏಕೆ ಎನ್ನುವುದಕ್ಕೆ ನಾವು ಕೊಂಚ ಇತಿಹಾಸದ ಪುಟಗಳನ್ನು ಹಿಂದಕ್ಕೆ ತಿರುವಿ ಹಾಕಿದಾಗ ಮನವರಿಕೆಯಾಗುತ್ತದೆ. 1974 ಮತ್ತು 1975ರ ಅವಧಿಯಲ್ಲಿ ಪ್ರಧಾನಿಯಾಗಿದ್ದ ಇಂದಿರಾ ಗಾಂಧಿಯವರು ದೇಶದಲ್ಲಿ ತುರ್ತು ಪರಿಸ್ಥಿತಿಯನ್ನು ಹೇರಿದ್ದರು. ಆಗ ಸಮಾಜವಾದಿ ಚಳವಳಿಯ ರೂವಾರಿ ಜಯಪ್ರಕಾಶ ನಾರಾ ಯಣ ಅವರು, ಕರಾಳ ನಿರ್ಧಾರದ ವಿರುದ್ಧ ಬಿಹಾರ ರಾಜಧಾನಿ ಯ ಗಾಂಧಿ ಮೈದಾನದಿಂದಲೇ ಇಂದಿರಾ ಗಾಂಧಿಯವರ ತುರ್ತು ಪರಿಸ್ಥಿತಿ ನಿರ್ಧಾರದ ವಿರುದ್ಧ ಸಿಡಿದು ನಿಂತು ಅವರನ್ನು ಅಧಿಕಾರದಿಂದ ಕೆಳಗೆ ಇಳಿಸಲೇಬೇಕು ಎಂಬ ಕರೆಯನ್ನು ನೀಡಿ ದ್ದರು. ಆ ಸಂದರ್ಭದಲ್ಲಿ ಎಲ್ಲ ಪಕ್ಷ ಗಳು ಒಂದಾಗಿ ಕಾಂಗ್ರೆಸ್ ವಿರುದ್ಧ ಸ್ಪರ್ಧಿಸಿ ಗೆದ್ದಿದ್ದವು.
ಎಪ್ರಿಲ್‌ನಲ್ಲಿ ತೃಣಮೂಲ ಕಾಂಗ್ರೆಸ್ ನಾಯಕಿ ಮತ್ತು ಪಶ್ಚಿಮ ಬಂಗಾಲ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿಯವರು ನಿತೀಶ್ ಕುಮಾರ್ ಅವರನ್ನು ಭೇಟಿಯಾಗಿದ್ದ ವೇಳೆ 2024ರ ಚುನಾವಣೆಗಾಗಿ ಬಿಜೆಪಿ ವಿರುದ್ಧ ವಿಪಕ್ಷಗಳ ಮಹಾಮೈತ್ರಿ ರಚನೆ ಮಾಡುವುದಕ್ಕೆ ಪಟ್ನಾವೇ ಸೂಕ್ತ ಎಂದು ನೆನಪಿಸಿದ್ದರು. ಅದರಂತೆ ಈ ಭೇಟಿ ನಡೆಯುತ್ತಿದೆ.
ಸದಾಶಿವ ಕೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Mandya :ಗಂಡ ಗದ್ಯ, ಹೆಂಡತಿ ಪದ್ಯ, ಮಕ್ಕಳು ರಗಳೆ!: ಹಾಸ್ಯ ಸಾಹಿತಿ ವೈ.ವಿ.ಗುಂಡೂರಾವ್
Mandya Sahitya Sammelana: ಅಕ್ಷರ ಜಾತ್ರೆಯಲ್ಲಿ “ಹವಾ’ ಎಬ್ಬಿಸಿದ ತೊಟ್ಟಿ ಮನೆ..!
Mandya: ನುಡಿ ಹಬ್ಬದ ಔತಣ ಸವಿಯಲು ಜನವೋ ಜನ- ವೃದ್ಧರಿಗೆ ವಿಶೇಷ ಕೌಂಟರ್
World Meditation Day; ಶರೀರಕ್ಕೆ ಊಟ, ಆತ್ಮಕ್ಕೆ ಧ್ಯಾನ
Meditation; ಮಾನಸಿಕ ಆರೋಗ್ಯಕ್ಕೆ ದಿವ್ಯೌಷಧ: ಡಿ.21ರಂದೇ ಏಕೆ ಧ್ಯಾನ ದಿನ?
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
ODI; ವೆಸ್ಟ್ ಇಂಡೀಸ್ ವಿರುದ್ಧ ಭಾರತದ ವನಿತೆಯರಿಗೆ 211 ರನ್ ಜಯ:ಸ್ಮೃತಿ ನರ್ವಸ್ 90
Hunsur: ವನ್ಯಪ್ರಾಣಿ ದಾಳಿಗೆ ಸುಮಾರು 70 ಸಾವಿರ ಬೆಲೆಬಾಳುವ ಎತ್ತು ಬಲಿ
Gundlupete ಬಂಡೀಪುರ: ಗಂಡಾನೆ ಕಳೇಬರ ಪತ್ತೆ
Highest honour: ಪ್ರಧಾನಿ ನರೇಂದ್ರ ಮೋದಿಗೆ ಕುವೈಟ್‌ನ ಅತ್ಯುನ್ನತ ಗೌರವ ಪ್ರದಾನ
Delhi; ಅಕ್ರಮ ಬಾಂಗ್ಲಾ ವಲಸಿಗರ ವಿರುದ್ಧ ಕಾರ್ಯಾಚರಣೆ: 175 ಮಂದಿ ಪತ್ತೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.