![Gun-Fire](https://www.udayavani.com/wp-content/uploads/2025/02/Gun-Fire-415x249.jpg)
![Gun-Fire](https://www.udayavani.com/wp-content/uploads/2025/02/Gun-Fire-415x249.jpg)
Team Udayavani, Aug 20, 2022, 7:55 AM IST
ವಿಮಾನ ನಿಲ್ದಾಣದ ಪ್ರಮುಖ ಗೇಟ್‌ನಿಂದ ವಿಮಾನ ಹತ್ತುವವರೆಗೆ ಹಲವಾರು ಚೆಕ್ಕಿಂಗ್‌ಗಳು, ಪರಿಶೀಲನೆಗಳ ಪ್ರಕ್ರಿಯೆ ಇರುತ್ತದೆ. ಎಷ್ಟೋ ಬಾರಿ ಈ ಪರಿಶೀಲನೆಯೇ ಬಹಳಷ್ಟು ಸಮಯ ತೆಗೆದುಕೊಳ್ಳುತ್ತದೆ. ಈ ಸಮಸ್ಯೆ ನಿವಾರಣೆಗಾಗಿ ಕೇಂದ್ರ ಸರಕಾರ ಡಿಜಿ ಯಾತ್ರಾ ಎಂಬ ಆ್ಯಪ್ ಅನ್ನು ಅಭಿವೃದ್ಧಿಗೊಳಿಸಿದೆ. ಆ.15ರಂದು ಬೆಂಗಳೂರು ಮತ್ತು ದಿಲ್ಲಿ ಏರ್‌ಪೋರ್ಟ್‌ನಲ್ಲಿ ಇದನ್ನು ಶುರು ಮಾಡಲಾಗಿದೆ.
ಏನಿದು ಡಿಜಿಯಾತ್ರಾ?
ಇದು ಫೇಸಿಯಲ್ ರೆಕಗ್ನಿಷನ್ ಮುಖಾಂತರ ಕಾರ್ಯನಿರ್ವಹಿಸುವ ಒಂದು ಆ್ಯಪ್. ಆ್ಯಂಡ್ರಾಯ್ಡ ಸ್ಮಾರ್ಟ್ ಫೋನ್‌ನಲ್ಲಿ ಇದನ್ನು ಡೌನ್‌ಲೋಡ್ ಮಾಡಿಕೊಂಡು, ಮೊಬೈಲ್ ಸಂಖ್ಯೆ ಮತ್ತು ಆಧಾರ್ ಕಾರ್ಡ್ ಮೂಲಕ ನೋಂದಣಿ ಮಾಡಿಕೊಳ್ಳಬಹುದು. ಈ ವರ್ಷಾಂತ್ಯದ ವೇಳೆಗೆ ಆ್ಯಪಲ್ ಸ್ಟೋರ್‌ನಲ್ಲೂ
ಈ ಆ್ಯಪ್ ಸಿಗಲಿದೆ.
ಡಿಜಿ ಆ್ಯಪ್‌ನಿಂದ ಅನುಕೂಲಗಳು
1. ಪ್ರತಿಯೊಂದು ಟೆಕ್‌ಪಾಯಿಂಟ್‌ನಲ್ಲೂ ಗುರುತಿನ ಚೀಟಿ ಅಥವಾ ಬೋರ್ಡಿಂಗ್ ಪಾಸ್ ತೋರಿಸಬೇಕಾದ ಅಗತ್ಯವಿಲ್ಲ.
2.ಸಿಬಂದಿಯ ಬಳಕೆ ಕಡಿಮೆ, ಶೀಘ್ರದಲ್ಲೇ ಕೆಲಸ ಮುಗಿಯುತ್ತೆ.
3. ಪಿಎನ್‌ಆರ್ ಸಂಖ್ಯೆ ಮುಖಾಂತರ ಇದು ಕಾರ್ಯ ನಿರ್ವಹಿಸುತ್ತದೆ. ಪ್ರತಿಯೊಂದು ಚೆಕ್‌ಪಾಯಿಂಟ್‌ನಲ್ಲೂ ಅರ್ಹ ಪ್ರಯಾಣಿಕರಿಗಷ್ಟೇ ಎಂಟ್ರಿ ಕೊಡುತ್ತದೆ.
4.ಪ್ರಯಾಣಿಕರ ಕುರಿತಂತೆ ರಿಯಲ್‌ಟೈಮ್‌ನಲ್ಲಿ ಏರ್‌ಪೋರ್ಟ್ ಅಧಿಕಾರಿಗಳಿಗೆ ಮಾಹಿತಿ ಸಿಗುತ್ತದೆ.
5.ಟಿಕೆಟ್ ಮಾಡಿಸಿಕೊಂಡಿರುವ ಪ್ರಯಾಣಿಕರು ಏರ್‌ಪೋರ್ಟ್‌ಗೆ ಬಂದಿದ್ದಾರೆ ಎಂಬುದನ್ನು ಮೊದಲೇ ತಿಳಿಯಬಹುದು.
ಹೇಗೆ ಕೆಲಸ ಮಾಡುತ್ತದೆ?
ಡಿಜಿಯಾತ್ರಾ ಆ್ಯಪ್ ಮೂಲಕ ಪ್ರಯಾಣಿಕರು ವಿವಿಧ ಟೆಕ್‌ಪಾಯಿಂಟ್‌ಗಳಲ್ಲಿ ಪೇಪರ್‌ಲೆಸ್ ಆಗಿ ಮತ್ತು ಸಂಪರ್ಕ ರಹಿತವಾಗಿ ಒಳಗೆ ಪ್ರವೇಶ ಪಡೆಯಬಹುದು. ಇವರ ಗುರುತನ್ನು ಫೇಶಿಯಲ್ ರೆಕಗ್ನಿಷನ್ ಮೂಲಕ ಖಾತರಿ ಮಾಡಿಕೊಳ್ಳಲಾ ಗುತ್ತದೆ. ಅಂದರೆ ಪ್ರಯಾಣಿಕರ ಮುಖವನ್ನು ಸ್ಕ್ಯಾನ್ ಮಾಡಿ ಎಲ್ಲೆಡೆ ತನ್ನಿಂತಾನೇ ಪ್ರವೇಶ ನೀಡುತ್ತದೆ.
ಎಲ್ಲೆಲ್ಲಿ ಈ ಸೌಲಭ್ಯ ಲಭ್ಯ?
ಆ.15ರಂದು ದಿಲ್ಲಿ ಮತ್ತು ಬೆಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಇದಕ್ಕೆ ಚಾಲನೆ ನೀಡಲಾಗಿದೆ. ಆ.18ರಂದು ಹೈದರಾಬಾದ್ ಏರ್‌ಪೋರ್ಟ್‌ನಲ್ಲಿಯೂ ಅಳವಡಿಸಲಾಗಿದೆ. ಹಂತ ಹಂತವಾಗಿ ಉಳಿದ ಏರ್‌ಪೋರ್ಟ್‌ಗಳಲ್ಲಿಯೂ ಇದನ್ನು ಅಳವಡಿಸಲಾಗುತ್ತದೆ. ಹಾಗೆಯೇ ಸದ್ಯ ವಿಸ್ತಾರಾ ಮತ್ತು ಏರ್‌ಏಷಿಯಾ ವಿಮಾನಯಾನ ಸಂಸ್ಥೆಗಳು ಮಾತ್ರ ಈ ಸೇವೆ ಒದಗಿಸುತ್ತಿವೆ.
Mandya: ನಾಗಮಂಗಲದಲ್ಲಿ ಆಕಸ್ಮಿಕ ಫೈರಿಂಗ್: 3 ವರ್ಷದ ಮಗು ಮೃತ್ಯು!
Kaup: ಸ್ಕೂಟಿ, ಕಾರಿಗೆ ಬಸ್ ಢಿಕ್ಕಿ; ಸವಾರನಿಗೆ ಗಾಯ
Thirthahalli: ಸಾಲ ಕಟ್ಟದ್ದಕ್ಕೆ ಕಿವಿಯೋಲೆ ಕಿತ್ತ ಬ್ಯಾಂಕ್ ಸಿಬ್ಬಂದಿ!
Padubidri: ಕಬ್ಬಿಣದ ತುಂಡು ಹೆಕ್ಕಿದ ಬಾಲಕರಿಗೆ ರೈಲ್ವೇ ಗ್ಯಾಂಗ್‌ಮನ್ ಹಲ್ಲೆ; ದೂರು
Restriction: ನಿಷೇಧವಿದ್ದರೂ ಗೂಡ್ಸ್ ವಾಹನಗಳಲ್ಲಿ ಜನರು ಬಿಳಿಗಿರಿ ರಂಗನ ಬೆಟ್ಟಕ್ಕೆ ಪಯಣ!
You seem to have an Ad Blocker on.
To continue reading, please turn it off or whitelist Udayavani.