21ನೇ ಶತಮಾನಕ್ಕೆ ಅನಿವಾರ್ಯವಾದ ಡಿಜಿಟಲ್ ಜಾಣ್ಮೆ
Team Udayavani, Dec 23, 2021, 7:35 AM IST
ಮಾಹಿತಿ ಮತ್ತು ಸಂವಹನ ತಂತ್ರಜ್ಞಾನದ ಬಳಕೆ, ಅವಲಂಬನೆ ಸರ್ವವ್ಯಾಪಿಯಾಗಿರುವುದರಿಂದ ಶಿಕ್ಷಣದ ವ್ಯಾಖ್ಯೆಯನ್ನು ಆಮೂಲಾಗ್ರವಾಗಿ ಬದಲಾಯಿಸಬೇಕಾಗಿರುವುದು ಅನಿ ವಾರ್ಯವಾಗಿದೆ. ಈಗ ಕಲಿಕೆಗೆ, ಮಾಹಿತಿ ವಿನಿಮಯಕ್ಕೆ ಕಂಪ್ಯೂ ಟರ್, ಟ್ಯಾಬ್, ಮೊಬೈಲ್‌ಗಳಂಥ ಮಾಂತ್ರಿಕ ಪರಿಕರಗಳು, ಅಂತರ್ಜಾಲದಂತಹ ಅವಿಷ್ಕಾರ, ಸಾಮಾಜಿಕ ಮಾಧ್ಯಮಗಳು ಪ್ರಮುಖ ಸಾಧನಗಳು ಮತ್ತು ವಿಧಾನಗಳಾಗಿವೆ. ಕಲಿಕೆಗೆ ಮೊದಲಿದ್ದ ಕಾಲ ಮತ್ತು ಸ್ಥಳದ ಅಡೆತಡೆ ಗಳು ತೆರವಾಗಿ “ಆನ್‌ಲೈನ್’ ಕಲಿಕೆ ಎಂಬ ಹೊಸ ದಾರಿ ಯುವಜನತೆಗೆ ಆಪ್ತವಾಗಿ, ಆಕರ್ಷಕವಾಗಿ ಕಾಣತೊಡಗಿದೆ. ಕೇವಲ ಶೈಕ್ಷಣಿಕ ಕ್ಷೇತ್ರ ಮಾತ್ರವಲ್ಲ, ನಮ್ಮ ಬಹುತೇಕ ವ್ಯಾವಹಾರಿಕ, ಸಾಮಾಜಿಕ ನಡವಳಿಕೆಗಳು ಅಂತರ್ಜಾಲ ಆಧಾರಿತವಾಗತೊಡಗಿವೆ. ಮನೋರಂಜನೆ ಮಾಧ್ಯಮವಂತೂ ಹೆಚ್ಚುಕಡಿಮೆ ಅಂತರ್ಜಾಲದ ಕೈಗೂಸಾಗಿದೆ. ಹೆಚ್ಚಿನ ವೈಯಕ್ತಿಕ ಮತ್ತು ಸಾರ್ವಜನಿಕ ಸೇವೆಗಳು ಕೂಡಾ ಆನ್‌ಲೈನ್ ದಾರಿಯಲ್ಲಿಯೇ ಸಾಗತೊಡಗಿವೆ.
ಹೀಗೆ ನಮ್ಮನ್ನು ಈಗಾಗಲೇ ಒಳಸೆಳೆದುಕೊಂಡಿರುವ ಮತ್ತು ಶೀಘ್ರ ಭವಿಷ್ಯದಲ್ಲಿ ನಮ್ಮನ್ನು ಪೂರ್ತಿಯಾಗಿ ಆವರಿಸಿಕೊಳ್ಳಲಿರುವ ಡಿಜಿಟಲ್ ಜಗತ್ತಿನಲ್ಲಿ ವ್ಯವಹರಿಸಬೇಕಾದರೆ, ಬದುಕಬೇಕಾದರೆ ನಮಗೆ ಕೇವಲ ಅಕ್ಷರ ಕೌಶಲದ ಬಲವೊಂದೇ ಸಾಕಾಗಲಾರದು. ಡಿಜಿಟಲ್ ಪರಿಕರಗಳನ್ನು ಸಮರ್ಥವಾಗಿ ಬಳಸಲು, ಪಳಗಿಸಲು ಮತ್ತು ಡಿಜಿಟಲ್ ಪರಿಸರದ ಜತೆಗೆ ಧೈರ್ಯವಾಗಿ ವ್ಯವಹರಿಸಲು ಆವಶ್ಯಕವಾದ “ಡಿಜಿಟಲ್ ಜಾಣ್ಮೆ’ ಕೂಡ ಅಗತ್ಯವಾಗಿದೆ.
“ಡಿಜಿಟಲ್ ಜಾಣ್ಮೆ’ಯ ವ್ಯಾಪ್ತಿ ವಿಸ್ತಾರವಾದುದಾಗಿದ್ದು ಇದು ಬರೀ ಡಿಜಿಟಲ್ ಸಾಮರ್ಥ್ಯ ಮತ್ತು ಸಾಕ್ಷರತೆಗಷ್ಟೇ ಸಂಬಂಧಿ ಸಿದ್ದಲ್ಲ. ಇವುಗಳನ್ನು ಮೀರಿ, ಡಿಜಿಟಲ್ ಸಾಧನ, ಮಾಧ್ಯಮಗಳನ್ನು ವೈಯಕ್ತಿಕ ಹಾನಿಯಾಗದಂತೆ, ನೈತಿಕತೆ ನಷ್ಟವಾಗದಂತೆ, ಸಾಮಾಜಿಕ ಮೌಲ್ಯಗಳಿಗೆ ಭಂಗವಾಗದಂತೆ ನಿರ್ವಹಿಸುವ ಜವಾಬ್ದಾರಿಯುತ ಡಿಜಿಟಲ್ ನಾಗರಿಕರಾಗಲು ಅಗತ್ಯವಾದ ವಿವೇಚನ ಸಾಮರ್ಥ್ಯ ಒದಗಿಸಬಲ್ಲ ಸಮಗ್ರ ಅಧ್ಯಯನ ವಿಷಯವಿದು.
ಇಂಗ್ಲಿಷಿನಲ್ಲಿ ಇದು ಈಗಾಗಲೇ “ಡಿಜಿಟಲ್ ಫೂÉಯೆನ್ಸಿ’ ಎನ್ನುವ ಹೆಸರಿನಲ್ಲಿ ಜನಪ್ರಿಯವಾಗಿದೆ. ಡಿಜಿಟಲ್ ಪ್ರಪಂಚದಲ್ಲಿ ಯಾವುದೇ ಅಳುಕು, ಅಂಜಿಕೆಗಳಿಲ್ಲದೆ ಸರಾಗವಾಗಿ ಸಂವಹನ ಮಾಡಲು, ವ್ಯವಹರಿಸಲು ಅಗತ್ಯವಾದ ಸಾಮರ್ಥ್ಯ.
ಉನ್ನತ ಶಿಕ್ಷಣದಲ್ಲಿ ಡಿಜಿಟಲ್ ಜಾಣ್ಮೆ: “ಇಂದಿನ ಯುವಜನತೆಗೆ ನಿನ್ನೆಯದ್ದೇ ರೀತಿಯ ಶಿಕ್ಷಣವನ್ನು ನೀಡಿದರೆ, ಅವರ ನಾಳೆಗಳನ್ನು ಕದ್ದಂತೆ’ – ಶೈಕ್ಷಣಿಕ ಚಿಂತಕ ಜಾನ್ ಡೇವಿ ತುಂಬಾ ಹಿಂದೆ ಹೇಳಿರುವ ಈ ಮಾತು ಯಾವತ್ತೂ ಪ್ರಸ್ತುತ. ಶಿಕ್ಷಣ ವ್ಯವಸ್ಥೆ ಯಾವಾ ಗಲೂ ವರ್ತಮಾನಕ್ಕೆ ಸ್ಪಂದಿಸಬೇಕು, ಭವಿಷ್ಯದ ನಿರೀಕ್ಷೆಗಳನ್ನು ಪೂರೈಸಬೇಕು. ಎಲ್ಲೊಂದರಲ್ಲಿ ಯಾವ ರೀತಿಯ ಮಾಹಿತಿ ಬೇಕಾದರೂ ಸುಲಭದಲ್ಲಿ ಸಿಗುವ, ಕೆಲವರು ಭಾವಿಸುವಂತೆ ಮಾಹಿತಿ ಮಹಾಪೂರವೇ ಬಹುದೊಡ್ಡ ಸಮಸ್ಯೆಯಾಗುತ್ತಿರುವ ಇಂದಿನ ಮಾಹಿತಿಯುಗದಲ್ಲಿ ಕೇವಲ ಪಠ್ಯ ವಿಷಯಗಳಿಗೆ ಸಂಬಂಧಿಸಿದ ಮಾಹಿತಿಗಳನ್ನು ಒದಗಿಸುವ ಶಿಕ್ಷಣ ಪದ್ಧತಿ, ಅವುಗಳನ್ನು ಬಾಯಿಪಾಠ ಮಾಡುವ ತರಬೇತಿ ನೀಡುವ ತರಗತಿ ಗಳು ಅಪೂರ್ಣವೆನಿಸುತ್ತವೆ. ವೇಗದಲ್ಲಿ ಬದಲಾಗುತ್ತಿರುವ ತಂತ್ರಜ್ಞಾನ ಪ್ರೇರಿತ, ನಿಯಂತ್ರಿತ ಜಗತ್ತಿನಲ್ಲಿ ಕಳೆದುಹೋಗದಂತೆ ಬದುಕಲು ಬೇಕಾದ ಅರಿವನ್ನು, ಹೊಸ ಕೌಶಲಗಳನ್ನು ಶಾಲೆ- ಕಾಲೇಜುಗಳ ಕಲಿಕೆಯಲ್ಲಿ ಕಡ್ಡಾಯವಾಗಿ ಸೇರಿಸದಿದ್ದರೆ ಅಂತಹ ಶಿಕ್ಷಣ ನೀತಿ ಭವಿಷ್ಯದ ಪಾಲಿಗೆ ಕುರುಡಾದಂತೆ.
ಹಾಗೆಂದ ಮಾತ್ರಕ್ಕೆ ತಂತ್ರಜ್ಞಾನಗಳ ಬಲದಿಂದ ಯಾಂತ್ರಿಕ ವಾಗುತ್ತಿರುವ ಜಗತ್ತಿನಲ್ಲಿ ಕೇವಲ ತಾಂತ್ರಿಕ ಜ್ಞಾನ, ಕೌಶಲಗಳನ್ನು ಮಾತ್ರ ಕಲಿಸಿ, ಭವಿಷ್ಯದ “ಸ್ಮಾರ್ಟ್ ಯಂತ್ರ’ಗಳ ಜತೆಗೆ ಸ್ಪರ್ಧಿಸಲು ಯುವಜನರನ್ನು ಸನ್ನದ್ಧಗೊಳಿಸುವುದೇ ನೂತನ ಶಿಕ್ಷಣ ನೀತಿಯ ಉದ್ದೇಶವಾಗಬೇಕೆಂಬ ವಾದವಲ್ಲ. ಡಿಜಿಟಲ್ ಜಗತ್ತಿನ ನೂತನ ಅವಿಷ್ಕಾರಗಳ ಸೂಕ್ಷ್ಮಜ್ಞಾನವನ್ನು; ಅಲ್ಲಿನ ಸೇವೆ, ಉತ್ಪನ್ನಗಳನ್ನು ಸುರಕ್ಷಿತವಾಗಿ ಬಳಸಿಕೊಳ್ಳುವ ಪ್ರಬುದ್ಧತೆಯನ್ನು ನೀಡುವುದರ ಜತೆಗೆ ಯಾವುದೇ ಸ್ಮಾರ್ಟ್ ಯಂತ್ರಗಳಿಗೆ ಅಳವಡಿಸಲಾಗದ “ಮಾನವೀಯ ಮೌಲ್ಯ’ಗಳನ್ನು ಪರಿಚಯಿಸುವುದರ ಜತೆಗೆ ಅವುಗಳನ್ನು ಬೆಳೆಸಲು ಬೇಕಾದ ಪ್ರೇರಣೆಯನ್ನು ನೀಡುವ ಶೈಕ್ಷಣಿಕ ಸನ್ನಿವೇಶ ನಿರ್ಮಾಣವಾಗಬೇಕಿದೆ. ಡಿಜಿಟಲೀಕರಣ, ಕೃತಕ ಬುದ್ಧಿಮತ್ತೆಗಳಂತಹ ತಾಂತ್ರಿಕ ಶೋಧಗಳು ಒದಗಿಸುವ ಒಳಿತನ್ನು ಸದುಪಯೋಗ ಮಾಡಿಕೊಳ್ಳುವ ಜತೆಗೆ ಅವು ಗಳಿಂದಾಗಬಹುದಾದ ವೈಯಕ್ತಿಕ ಹಾನಿಗಳನ್ನು; ಸಾಮಾಜಿಕ, ಭಾವನಾತ್ಮಕ ಸಮಸ್ಯೆಗಳನ್ನು ಎದುರಿಸಲು ಯುವಜನರಲ್ಲಿ ಭಾವ ನಾತ್ಮಕ ಮತ್ತು ಸಾಮಾಜಿಕ ಬುದ್ಧಿವಂತಿಕೆಯನ್ನು ಉದ್ದೀಪನ ಗೊಳಿಸುವುದು ಭವಿಷ್ಯದ ಹಿತದೃಷ್ಟಿಯಿಂದ ಅತ್ಯವಶ್ಯವಾಗಿದೆ.
ಇದನ್ನು ಅರ್ಥ ಮಾಡಿಕೊಂಡಿರುವ ಕಾರಣಕ್ಕೆ, ಇದೀಗ ಕರ್ನಾಟಕದ ಉನ್ನತ ಶಿಕ್ಷಣ ಕ್ಷೇತ್ರದಲ್ಲಿ “ರಾಷ್ಟ್ರೀಯ ಶಿಕ್ಷಣ ನೀತಿ – 2020′ ರ ಅನುಸಾರ ಜಾರಿಗೆ ತರಲಾಗಿರುವ ನೂತನ ಶಿಕ್ಷಣ ಕ್ರಮದಲ್ಲಿ ಇಂತಹ ಹೊಸ ಬಗೆಯ ಕಲಿಕೆಗಳಿಗೆ ಅವಕಾಶ ಕಲ್ಪಿಸಲಾಗಿದೆ.
ಪದವಿ ವ್ಯಾಸಂಗದ ಅವಧಿಯಲ್ಲಿ ಮಾನವಿಕ, ವಿಜ್ಞಾನ, ವಾಣಿಜ್ಯಗಳಂತಹ ಪ್ರಮುಖ ಅಧ್ಯಯನ ವಿಷಯಗಳ ಜತೆಗೆ ಕೆಲವು ಅತ್ಯಗತ್ಯ ನೂತನ ಕೌಶಲವೃದ್ಧಿ ಕೋರ್ಸ್‌ಗಳ ಕಲಿಕೆಯನ್ನು ಕಡ್ಡಾಯಗೊಳಿಸಲಾಗಿದೆ. ಅವುಗಳಲ್ಲಿ ಡಿಜಿಟಲ್ ಜಾಣ್ಮೆ, ಆರ್ಥಿಕ ಸಾಕ್ಷರತೆ, ಕೃತಕ ಬುದ್ಧಿಮತ್ತೆ, ಸಾಮಾಜಿಕ ಸಂವಹನ, ವೃತ್ತಿಪರ ಸಂವಹನ, ಸೈಬರ್ ಸುರಕ್ಷೆ, ವಿಜ್ಞಾನ ಮತ್ತು ಸಮಾಜ, ಸೃಜನಶೀಲತೆ ಮತ್ತು ನಾವೀನ್ಯತೆ, ಸಾಂಸ್ಕೃತಿಕ ಪ್ರಜ್ಞೆ ಮುಂತಾದವುಗಳು ಸೇರಿವೆ. ಕರ್ನಾಟಕ ರಾಜ್ಯ ಉನ್ನತ ಶಿಕ್ಷಣ ಪರಿಷತ್ ಸಿದ್ಧಪಡಿಸಿರುವ ಈ ಬಗೆಯ ಕೋರ್ಸ್‌ಗಳ ಪಟ್ಟಿಯಿಂದ ಯಾವುದಾದರೂ ಕೆಲವನ್ನು ಆಯ್ಕೆ ಮಾಡಿಕೊಂಡು ಕಲಿಯುವ ಅವಕಾಶವನ್ನು ತಮ್ಮ ವ್ಯಾಪ್ತಿಯ ಪದವಿ ವಿದ್ಯಾರ್ಥಿಗಳಿಗೆ ಆಯಾಯ ವಿಶ್ವವಿದ್ಯಾನಿಲಯಗಳು ನೀಡಿವೆ.
ಪರಿಣಾಮಕಾರಿ ಜಾರಿಯ ಸವಾಲು: ರಾಷ್ಟ್ರೀಯ ಶಿಕ್ಷಣ ನೀತಿ – 2020ರ ಅನುಸಾರ 21ನೇ ಶತಮಾನಕ್ಕೆ ಅಗತ್ಯವಾದ ನೂತನ ಕೌಶಲಗಳ ಕಲಿಕೆಗೆ ಅಗತ್ಯವಾದ ವೇದಿಕೆಯನ್ನು ಕರ್ನಾಟಕದಲ್ಲಿ ಉನ್ನತ ಶಿಕ್ಷಣ ಇಲಾಖೆ ಈಗಾಗಲೇ ಸಿದ್ಧಗೊಳಿಸಿದೆ. ಆದರೆ ಇದನ್ನು ಪದವಿ ಹಂತದಲ್ಲಿ ಸೇರ್ಪಡೆಗೊಂಡಿರುವ ಲಕ್ಷಾಂತರ ವಿದ್ಯಾರ್ಥಿಗಳಿಗೆ ಪರಿಣಾಮಕಾರಿಯಾಗಿ, ಪ್ರಯೋಜನ ಕಾರಿ ಯಾಗುವ ಹಾಗೆ ತರಗತಿಗಳಲ್ಲಿ ಜಾರಿಗೆ ತರುವುದು ಬಹಳ ದೊಡ್ಡ ಸವಾಲು. ನಮ್ಮ ಪದವಿ ಹಂತದ ವಿದ್ಯಾರ್ಥಿಗಳ ನಡುವೆ ಇರುವ ಅಗಾಧವಾದ ಸಾಮಾಜಿಕ, ಆರ್ಥಿಕ ಮತ್ತು ಶೈಕ್ಷಣಿಕ ಭಿನ್ನತೆಗಳ ಹಿನ್ನೆಲೆಯಲ್ಲಿ ಇದು ಸಾಧ್ಯವಾಗಬೇಕಾದರೆ ಈ ಬಗ್ಗೆ ಗಂಭೀರವಾದ ಚಿಂತನೆ, ಯೋಜನೆ ಜವಾಬ್ದಾರಿಯುತ ವಿಶ್ವವಿದ್ಯಾನಿಲಯಗಳು ಮತ್ತು ಉನ್ನತ ಶಿಕ್ಷಣ ಸಂಸ್ಥೆಗಳ ಹಂತದಲ್ಲಿ ಆಗಬೇಕಿವೆ.
ಡಿಜಿಟಲ್ ಜಾಣ್ಮೆ ಕೋರ್ಸ್‌ಗೆ ಮಾತ್ರ ಸೀಮಿತಗೊಂಡು ಚರ್ಚಿಸುವುದಾದರೆ, ಈಗ ನಿಗದಿಗೊಳಿಸಲಾಗಿರುವ ರಾಜ್ಯವ್ಯಾಪಿ ಪಠ್ಯದಲ್ಲಿ ಕೃತಕ ಬುದ್ಧಿಮತ್ತೆ, ಯಂತ್ರ ಕಲಿಕೆ, ದತ್ತಾಂಶಗಳ ನಿರ್ವಹಣೆ, ಬೃಹತ್ ದತ್ತಾಂಶಗಳ ವಿಶ್ಲೇಷಣೆ, ವಸ್ತುಗಳ ಅಂತರ್ಜಾಲ, ಕೌÉಡ್ ಕಂಪ್ಯೂಟಿಂಗ್, ಸೈಬರ್ ದಾಳಿಗಳು ಮತ್ತು ಸೈಬರ್ ಸುರಕ್ಷೆಗಳಂತಹ ಉದಯೋನ್ಮುಖ ಡಿಜಿಟಲ್ ತಂತ್ರ ಜ್ಞಾನಗಳ ಪರಿಚಯ ಹಾಗೂ ಅವುಗಳ ಪ್ರಯೋಜನಗಳ ಬಗ್ಗೆ ಅಧ್ಯಾಯಗಳಿವೆ. ಜತೆಗೆ ಪರಿಣಾಮಕಾರಿ ಸಂವಹನ ಕೌಶಲಗಳು, ಸೃಜಾನಾತ್ಮಕ ಸಮಸ್ಯೆ ಪರಿಹಾರ ಮತ್ತು ವಿಮಶಾìತ್ಮಕ ಚಿಂತನೆ, ಸಹಯೋಗ ಮತ್ತು ತಂಡಕಾರ್ಯ ಕೌಶಲ, ನಾವೀನ್ಯ ಮತ್ತು ವಿನ್ಯಾಸ ಚಿಂತನೆಗಳಂತಹ ತಂತ್ರಜ್ಞಾನಗಳಾಚೆಗಿನ ಆವಶ್ಯಕ ಕೌಶಲಗಳ ಕಲಿಕೆಗಳನ್ನು ಸೇರ್ಪಡೆಗೊಳಿಸಲಾಗಿದೆ.
ಇಲ್ಲಿನ ವಿಷಯಗಳ ಹರವು ಮತ್ತು ವೈವಿಧ್ಯವನ್ನು ಗಮನಿಸಿದರೆ, ಬೇರೆ ಬೇರೆ ಪ್ರಾದೇಶಿಕ, ಭಾಷಿಕ, ಸಾಮಾಜಿಕ, ಶೈಕ್ಷಣಿಕ ಹಿನ್ನೆಲೆಗಳಿಂದ ಬಂದಿರುವ ವಿದ್ಯಾರ್ಥಿಗಳಿಗೆ ಇವುಗಳನ್ನು ಅರ್ಥಪೂರ್ಣವಾಗಿ ಕಲಿಸುವ ಸವಾಲು ಎಂಥದ್ದು ಎಂಬುದನ್ನು ಕಲ್ಪಿಸಿಕೊಳ್ಳಬಹುದು. ಇದು ಸಾಧ್ಯವಾಗಬೇಕಾದರೆ ಮತ್ತು ಇದನ್ನು ಸಾಧಿಸಬೇಕಾದರೆ ತತ್‌ಕ್ಷಣಕ್ಕೆ ಅನಿವಾರ್ಯವಾಗಿ ಬೇಕಾದ ಪ್ರಮುಖ ಶೈಕ್ಷಣಿಕ ಅಗತ್ಯತೆಗಳನ್ನು ಹೀಗೆ ಪಟ್ಟಿ ಮಾಡಬಹುದು:
ಈ ಅಗತ್ಯತೆಗಳನ್ನು ಆದಷ್ಟು ಶೀಘ್ರವಾಗಿ ಪೂರೈಸಲು ಗಂಭೀರ ಪ್ರಯತ್ನಗಳು ನಡೆದು, ಅವುಗಳ ಮೂಲಕ ಡಿಜಿಟಲ್ ಜಾಣ್ಮೆಯ ಅಗತ್ಯವನ್ನು ವಿದ್ಯಾರ್ಥಿಸಮೂಹಕ್ಕೆ ಮನದಟ್ಟು ಮಾಡಿ, ಮನ ಮುಟ್ಟುವಂತೆ ಪರಿಚಯಿಸುವ ಪ್ರಾಮಾಣಿಕ ಪ್ರಯತ್ನಗಳು ನಡೆದರೆ ಇದನ್ನು ಕಡ್ಡಾಯಗೊಳಿಸಿದ ನೂತನ ಶಿಕ್ಷಣ ನೀತಿಯ ಉದ್ದೇಶ ಸಾರ್ಥಕವಾಗಲಿದೆ. ಈಗಾಗಲೇ ಪದವಿ ತರಗತಿಗಳು ಪ್ರಾರಂಭವಾಗಿರುವ ಹಿನ್ನೆಲೆಯಲ್ಲಿ ಶೈಕ್ಷಣಿಕ ಸ್ವಾಯತ್ತತೆ ಮತ್ತು ಜವಾಬ್ದಾರಿ ಹೊಂದಿರುವ ವಿಶ್ವವಿದ್ಯಾನಿಲಯಗಳು ಈ ಬಗ್ಗೆ ಕಾರ್ಯಪ್ರವೃತ್ತವಾಗಬೇಕಿದೆ. ಈ ಕುರಿತು ತಜ್ಞತೆ, ಬದ್ಧತೆ ಇರುವ ಅಧ್ಯಾಪಕ ವೃಂದ, ವೃತ್ತಿಪರ ಬಳಗ, ಸಂಘ-ಸಂಸ್ಥೆಗಳು ಕೂಡ ಕೈಜೋಡಿಸಬೇಕಾಗಿದೆ. ವಿದ್ಯಾರ್ಥಿ ಸಮೂಹ ಕೂಡ ಇದನ್ನು ಇನ್ನೊಂದು ಕಡ್ಡಾಯ ವಿಷಯ ಎಂಬ ತಾತ್ಸಾರ ಭಾವದಿಂದ ನಿರ್ಲಕ್ಷಿಸದೆ, ಡಿಜಿಟಲ್ ಪ್ರಪಂಚದಲ್ಲಿ ತಮ್ಮ ಪಾಲಿಗೆ ತೆರೆದುಕೊಳ್ಳಲಿರುವ ಅಪೂರ್ವ ಅವಕಾಶಗಳನ್ನು ಬಾಚಿಕೊಳ್ಳಲು ಮತ್ತು ಆತಂಕಗಳನ್ನು ಎದುರಿಸಲು ತಮ್ಮನ್ನು ಸನ್ನದ್ಧಗೊಳಿಸಿಕೊಳ್ಳಲು ಸಿಕ್ಕಿರುವ ಸದವಕಾಶವಾಗಿ ಪರಿಗಣಿಸಬೇಕಾಗಿದೆ. ಇಲ್ಲದಿದ್ದರೆ ಈಗಿರುವ ಸಾಮಾಜಿಕ, ಆರ್ಥಿಕ, ಶೈಕ್ಷಣಿಕ ಅಸಮಾನತೆಗಳ ಜತೆಗೆ “ಡಿಜಿಟಲ್ ಅಸಮಾನತೆ’ ಎನ್ನುವ ಹೊಸ ತಾರತಮ್ಯಕ್ಕೆ ಒಳಗಾಗುವ ಸಾಧ್ಯತೆಯಿದೆ.
1 ಸ್ವತಃ ಡಿಜಿಟಲ್ ಜಾಣ್ಮೆ ಹೊಂದಿರುವ ನುರಿತ ಬೋಧಕ ಸಮೂಹ.
2ಸರಳವಾಗಿ, ಸುಲಭವಾಗಿ, ಸ್ಪಷ್ಟವಾಗಿ ಈ ವಿಷಯಗಳನ್ನು ವಿವರಿಸಬಲ್ಲ ಕಲಿಕಾ ಸಾಹಿತ್ಯ. ಇದು ಇಂಗ್ಲಿಷಿನ ಜತೆಗೆ ಕನ್ನಡ ಮತ್ತಿತರ ಪ್ರಾದೇಶಿಕ ಭಾಷೆಗಳಲ್ಲಿ ಲಭ್ಯವಾಗಬೇಕು.
3ವೀಡಿಯೋಗಳು, ಬಹುಮಾಧ್ಯಮ ಪ್ರಾತ್ಯಕ್ಷಿಕೆಗಳಂತಹ ಸ್ವಯಂ ಕಲಿಕಾ ಸಲಕರಣೆಗಳು. ಇವುಗಳು ಮುಕ್ತ ಡಿಜಿಟಲ್ ವೇದಿಕೆಗಳ ಮೂಲಕ ದೊರಕಬೇಕು.
“ಡಿಜಿಟಲ್ ಜಾಣ್ಮೆ’ ಬರಬೇಕಾದರೆ, ಅದು ಈ ಮೂರು ಪ್ರಮುಖ ಅಂಶಗಳಿಂದ ಕೂಡಿರಬೇಕು:
1 ಡಿಜಿಟಲ್ ಸಾಕ್ಷರತೆ: ಡಿಜಿಟಲ್ ತಂತ್ರಜ್ಞಾನಗಳು, ಪರಿಕರ ಗಳು, ಸೇವೆಗಳು, ಇತ್ಯಾದಿಗಳ ಕುರಿತಾದ ತಿಳಿವಳಿಕೆ, ಜ್ಞಾನ
2 ಡಿಜಿಟಲ್ ಕೌಶಲ: ಡಿಜಿಟಲ್ ಸೇವೆ, ಸಾಧನಗಳನ್ನು ಪರಿಣಾಮಕಾರಿಯಾಗಿ ಬಳಸುವ, ನಮ್ಮ ಅಗತ್ಯಕ್ಕನು ಸಾರವಾಗಿ ಅವುಗಳನ್ನು ಪಳಗಿಸುವ, ನೂತನ ಡಿಜಿಟಲ್ ಆವಿಷ್ಕಾರಗಳನ್ನು ಮಾಡುವ ಸಾಮರ್ಥ್ಯ
3 ಡಿಜಿಟಲ್ ನೈತಿಕತೆ: ವೈಯಕ್ತಿಕ, ಸಾಮಾಜಿಕ, ರಾಷ್ಟ್ರೀಯ, ಜಾಗತಿಕ ಮೌಲ್ಯಗಳಿಗೆ ಅನುಗುಣವಾಗಿ ಗೌರವಯುತವಾಗಿ, ಸುರಕ್ಷಿತವಾಗಿ, ಜವಾಬ್ದಾರಿಯಿಂದ ಡಿಜಿಟಲ್ ಸೇವೆ, ಸಾಧನಗಳನ್ನು ಬಳಸುವ ನೈತಿಕತೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Kannada Sahitya Sammelana: ಕಾವೇರಿ ಹೊನಲಲ್ಲಿ ಕನ್ನಡ ಉಕ್ಕಲಿ…
One Nation, One Election;ಹಣ, ಸಮಯ ಉಳಿಯಬಹುದು…ಮುಂದಾಗುವ ಸಮಸ್ಯೆಗಳಿಗೆ ಪರಿಹಾರ ಇದೆಯಾ?
Year ender: ಈ ವರ್ಷ ನಕ್ಕು ನಗಿಸಿ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆದ ವಿಡಿಯೋಗಳಿವು..
ಅಪಾಯಕ್ಕೆ ಎದೆಯೊಡ್ಡಿ ವಕ್ಫ್ ವರದಿ ಮಾಡಿದ್ದು ನಾನು, ಅದರಿಂದ ಹಣ ಮಾಡಿದ್ದು ಅನೇಕರು!
ಕರಾವಳಿಯಲ್ಲಿ ಹೈಕೋರ್ಟ್ ಪೀಠ ಸ್ಥಾಪನೆ ಅತ್ಯಗತ್ಯ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Chikkaballapur: 5 ವರ್ಷದಲ್ಲಿ 514 ತಾಯಿ-ಮಗು ಸಾವಿನ ಪ್ರಕರಣ!
ಪರ್ಯಾಯ ಶ್ರೀ ಪುತ್ತಿಗೆ ಶ್ರೀಕೃಷ್ಣ ಮಠ: ಸ್ಮೃತಿ ಪ್ರತಿಭಾ,ಗೀತಾ ತ್ರಯೋದಶಾವಧಾನ’ ಸಂಪನ್ನ
Video: ನ್ಯಾಯ ಕೇಳಲು ಬಂದ ವ್ಯಕ್ತಿಗೆ ಖಾಕಿಯಿಂದ 41 ಸೆಕೆಂಡ್‌ಗಳಲ್ಲಿ 31 ಬಾರಿ ಕಪಾಳ ಮೋಕ್ಷ
Atlee Kumar; ಸಲ್ಮಾನ್ ಖಾನ್ ಜತೆಗೆ ಅಟ್ಲಿ ಸಿನಿಮಾ
ಪ್ರಧಾನ ಸಂಪಾದಕ ನ್ಯೂಯಾರ್ಕ್ ನ ಬೆಂಕಿ ಬಸಣ್ಣ ವಿರಚಿತ ‘ವಿಶ್ವಕನ್ನಡ ಕೂಟಗಳ ಕೈಪಿಡಿ’ ಬಿಡುಗಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.