ದೀಪಾವಳಿ ವಿಶ್ವದೆಲ್ಲೆಡೆ ಬೆಳಕಿನ ಹಬ್ಬದ ಸಡಗರ
Team Udayavani, Nov 4, 2021, 6:54 AM IST
ದೀಪಾವಳಿ ಎಂದರೆ ಅದೊಂದು ಸಡಗರ, ಸಂಭ್ರಮದ ಹಬ್ಬ. ಕತ್ತಲೆಯೋಡಿಸಿ, ಬೆಳಕನು ತರುವ ಹಬ್ಬ. ಭಾರತದಲ್ಲಿ ಈ ಹಬ್ಬಕ್ಕೆ ಎಲ್ಲಿಲ್ಲದ ಮಹತ್ವ. ವಿಶೇಷವೆಂದರೆ, ಈ ಹಬ್ಬವನ್ನು ಕೇವಲ ಭಾರತದಲ್ಲಿಯಷ್ಟೇ ಅಲ್ಲ, ಬೇರೆ ಬೇರೆ ದೇಶಗಳಲ್ಲೂ ಅದ್ಧೂರಿಯಾಗಿಯೇ ಆಚರಿಸುತ್ತಾರೆ. ಅಮೆರಿಕದಲ್ಲಿ ದೀಪಾವಳಿ ದಿನದಂದು ರಜೆ ಕೊಡಬೇಕು ಎಂದು ಡೆಮಾಕ್ರೆಟ್ ಕಾಂಗ್ರೆಸ್ ಸದಸ್ಯೆಯೊಬ್ಬರು ಮಸೂದೆಯೊಂದನ್ನು ಮಂಡಿಸಲೂ ಹೊರಟಿದ್ದಾರೆ. ಹಾಗೆಯೇ, ಪ್ರತೀ ವರ್ಷವೂ ಅಮೆರಿಕದ ಶ್ವೇತಭವನವೂ ಸೇರಿ ಬೇರೆ ಬೇರೆ ಕಡೆಗಳಲ್ಲಿ ದೀಪಾವಳಿ ಹಬ್ಬ ಆಚರಣೆ ಮಾಡುವುದು ರೂಢಿ ಇದೆ.
ಹಾಗಾದರೆ ಬೇರೆ ಯಾವ ಯಾವ ದೇಶಗಳಲ್ಲಿ ದೀಪಾವಳಿಯನ್ನು ಹೇಗೆ ಆಚರಿಸುತ್ತಾರೆ ಎಂಬ ಬಗ್ಗೆ ಇಲ್ಲಿದೆ ಮಾಹಿತಿ…
ಇಂಡೋನೇಶಿಯಾ
ಇಂಡೋನೇಷ್ಯಾದಲ್ಲಿ ಭಾರತೀಯರ ಸಂಖ್ಯೆ ಕಡಿಮೆ. ಆದರೂ ಬಾಲಿ ದ್ವೀಪದಲ್ಲಿ ಮಾತ್ರ ಬಹಳಷ್ಟು ಸಂಖ್ಯೆಯಲ್ಲಿ ಭಾರತೀಯರಿದ್ದಾರೆ. ಬಾಲಿಯೂ ಸೇರಿದಂತೆ ಉಳಿದೆಡೆ ಇರುವ ಭಾರತೀಯ ಸಮುದಾಯಗಳು ದೀಪಾವಳಿ ವೇಳೆ ದೀಪಗಳನ್ನು ಹಚ್ಚಿ, ಪಟಾಕಿ ಸಿಡಿಸಿ ಸಂಭ್ರಮಿಸುತ್ತಾರೆ.
ಫಿಜಿ
ಫಿಜಿ ದೇಶದಲ್ಲಿ ದೀಪಾವಳಿಯಂದು ಸಾರ್ವಜನಿಕ ರಜೆ ಇದೆ. ಇದಕ್ಕೆ ಕಾರಣ ಈ ದೇಶದಲ್ಲಿ ಭಾರೀ ಸಂಖ್ಯೆಯಲ್ಲಿ ಹಿಂದೂಗಳಿರುವುದು. ಭಾರತದಲ್ಲಿ ಯಾವ ರೀತಿಯಲ್ಲಿ ಬೆಳಕಿನ ಹಬ್ಬವನ್ನು ಆಚರಿಸುತ್ತಾರೋ ಅದೇ ರೀತಿಯಲ್ಲಿ ಇಲ್ಲಿಯೂ ಸಡಗರ ಸಂಭ್ರಮದಿಂದ ಮತ್ತು ಎಲ್ಲ ಧಾರ್ಮಿಕ ವಿಧಿ ವಿಧಾನಗಳನ್ನು ಅನುಸರಿಸಿ ದೀಪಾವಳಿ ಆಚರಿಸುತ್ತಾರೆ.
ಮಾರಿಷಸ್
ಇದು ವಿವಿಧ ಸಮುದಾಯಗಳಿರುವ ಪುಟ್ಟ ದೇಶವಾಗಿದೆ. ಹಿಂದೂಗಳ ಜತೆಗೆ ಇತರ ಸಮುದಾಯದವರು ಸೇರಿ ಹಬ್ಬ ಆಚರಣೆ ಮಾಡುವುದು ವಾಡಿಕೆ. ಹಾಗೆಯೇ, ಈ ಹಬ್ಬದಂದು ಇಲ್ಲಿ ಸಾರ್ವಜನಿಕ ರಜೆ ಘೋಷಿಸಲಾಗಿದೆ.
ಮಲೇಷ್ಯಾ
ಮಲೇಷ್ಯಾದಲ್ಲಿ ದೀಪಾವಳಿಯನ್ನು ಹರಿ ದೀಪಾವಳಿ ಎಂದೇ ಕರೆಯಲಾಗುತ್ತದೆ. ಹರಿ ದೀಪಾವಳಿ ಎಂದರೆ, ಹಸುರು ದೀಪಾವಳಿ ಎಂದರ್ಥ. ಇಲ್ಲಿ ಪಟಾಕಿ ಸಿಡಿಸುವುದನ್ನು ನಿಷೇಧಿಸಿರುವ ಹಿನ್ನೆಲೆಯಲ್ಲಿ ಹಸುರು ದೀಪಾವಳಿಯಾಗಿ ಆಚರಿಸಲಾಗುತ್ತದೆ. ಇಲ್ಲಿ ದೊಡ್ಡ ದೊಡ್ಡ ದೀಪಗಳು, ಲ್ಯಾಂಪ್‌ಗಳನ್ನು ಹಚ್ಚಿ ಪಕ್ಕಾ ಬೆಳಕಿನ ಹಬ್ಬವಾಗಿ ಆಚರಿಸಲಾಗುತ್ತದೆ.
ನೇಪಾಲ
ಹಿಂದೂಗಳೇ ಹೆಚ್ಚಾಗಿರುವ ನೇಪಾಲದಲ್ಲೂ ಸಡಗರ ಸಂಭ್ರಮದಿಂದ ದೀಪಾವಳಿ ಆಚರಿಸಲಾಗುತ್ತದೆ. ಇಲ್ಲೂ ಐದು ದಿನಗಳ ಕಾಲ ಈ ಹಬ್ಬ ನಡೆಯುತ್ತದೆ. ಜನ ಕೇವಲ ದೇವರಷ್ಟೇ ಅಲ್ಲ, ಪ್ರಾಣಿಗಳನ್ನೂ ಪೂಜೆ ಮಾಡುವುದು ಇಲ್ಲಿನ ವಾಡಿಕೆ. ಪ್ರತೀ ವರ್ಷವೂ ಐದು ದಿನಗಳಲ್ಲಿ, ಎರಡನೇ ದಿನ ನಾಯಿಗಳ ದಿನವನ್ನಾಗಿ ಆಚರಣೆ ಮಾಡಲಾಗುತ್ತದೆ. ಈ ದಿನ ಬೆಳಗ್ಗೆಯೇ ನಾಯಿಗಳಿಗೆ ಪೂಜೆ ಮಾಡಲಾಗುತ್ತದೆ.
ಸಿಂಗಾಪುರ
ಸಿಂಗಾಪುರದಲ್ಲೂ ಹೆಚ್ಚಿನ ಸಂಖ್ಯೆಯಲ್ಲಿ ಭಾರತೀಯರು ಇರುವ ಕಾರಣದಿಂದಾಗಿ ಸಡಗರದಿಂದ ಆಚರಿಸಲಾಗುತ್ತದೆ. ಅದರಲ್ಲೂ ಇಲ್ಲಿನ ಲಿಟಲ್ ಇಂಡಿಯಾ ಪ್ರದೇಶದಲ್ಲಿ ಅದ್ಧೂರಿಯಾಗಿ ಆಚರಿಸಲಾಗುತ್ತದೆ.
ಶ್ರೀಲಂಕಾ
ಶ್ರೀಲಂಕಾದ ಪ್ರಮುಖ ಹಬ್ಬಗಳಲ್ಲಿ ದೀಪಾವಳಿಯೂ ಒಂದು. ಇಲ್ಲಿ ಭಾರತದಂತೆಯೇ ದೀಪಾವಳಿಯನ್ನು ಐದು ದಿನಗಳ ಕಾಲ ಆಚರಿಸಲಾಗುತ್ತದೆ. ಹೆಚ್ಚಾಗಿ ಹಿಂದೂ ತಮಿಳಿಗರು ಈ ಹಬ್ಬ ಆಚರಣೆ ಮಾಡುತ್ತಾರೆ. ಇಲ್ಲಿಯೂ ದೀಪಗಳನ್ನು ಹಚ್ಚಿ, ಪಟಾಕಿ ಸಿಡಿಸಿ, ಸಿಹಿ ಹಂಚಿ ಹಬ್ಬ ಮಾಡಲಾಗುತ್ತದೆ.
ಅಮೆರಿಕ
ಅಮೆರಿಕದಲ್ಲಿಯೂ ಭಾರತೀಯರು ಹೆಚ್ಚಾಗಿರುವುದರಿಂದ ಈ ಹಬ್ಬವನ್ನು ಸಂಭ್ರಮದಿಂದಲೇ ಆಚರಿಸಲಾಗುತ್ತದೆ. ಪ್ರತೀ ವರ್ಷ ಭಾರತದಲ್ಲಿ ದೀಪಾವಳಿ ಆಚರಣೆ ಮಾಡುವ ಮೊದಲೇ ಅಮೆರಿಕದಲ್ಲಿ ದೀಪಾವಳಿ ಆಚರಣೆ ಮಾಡಲಾಗುತ್ತದೆ. ಈ ಬಾರಿ ಮಂಡ್ಯ ಮೂಲದ ಅಮೆ ರಿಕದ ಚೀಫ್ ಸರ್ಜನ್ ಜನರಲ್ ಡಾ| ವಿವೇಕ್ ಮೂರ್ತಿ ಅವರು ಭಾಗಿಯಾಗಿದ್ದರು. ಅಲ್ಲದೆ ಅಮೆರಿಕ ಅಧ್ಯಕ್ಷರೂ ಶ್ವೇತಭವನದಲ್ಲೇ ಈ ಹಬ್ಬ ಆಚರಿಸಿಕೊಂಡು ಬರುತ್ತಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Mandya :ಗಂಡ ಗದ್ಯ, ಹೆಂಡತಿ ಪದ್ಯ, ಮಕ್ಕಳು ರಗಳೆ!: ಹಾಸ್ಯ ಸಾಹಿತಿ ವೈ.ವಿ.ಗುಂಡೂರಾವ್
Mandya Sahitya Sammelana: ಅಕ್ಷರ ಜಾತ್ರೆಯಲ್ಲಿ “ಹವಾ’ ಎಬ್ಬಿಸಿದ ತೊಟ್ಟಿ ಮನೆ..!
Mandya: ನುಡಿ ಹಬ್ಬದ ಔತಣ ಸವಿಯಲು ಜನವೋ ಜನ- ವೃದ್ಧರಿಗೆ ವಿಶೇಷ ಕೌಂಟರ್
World Meditation Day; ಶರೀರಕ್ಕೆ ಊಟ, ಆತ್ಮಕ್ಕೆ ಧ್ಯಾನ
Meditation; ಮಾನಸಿಕ ಆರೋಗ್ಯಕ್ಕೆ ದಿವ್ಯೌಷಧ: ಡಿ.21ರಂದೇ ಏಕೆ ಧ್ಯಾನ ದಿನ?
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.