ದೀಪಾವಳಿ ವೈವಿಧ್ಯದಲ್ಲಿ ಏಕತೆ ಸಾರುವ ಹಬ್ಬ


Team Udayavani, Oct 24, 2022, 6:40 AM IST

ದೀಪಾವಳಿ ವೈವಿಧ್ಯದಲ್ಲಿ ಏಕತೆ ಸಾರುವ ಹಬ್ಬ

ಆಕಾಶದಿಂದ ತಾರೆಗಳೇ ಧರೆಗಿಳಿದು ಬಂದಂತೆ ಮನೆಮನೆಯಲ್ಲೂ ಬಣ್ಣಬಣ್ಣದ ದೀಪಗಳ ಅಲಂಕಾರ, ರಸ್ತೆಯ ತುಂಬೆಲ್ಲ ಬೆಳಕಿನ ಚಿತ್ತಾರ ಮೂಡಿಸಿ ನಾಡಿನೆಲ್ಲೆಡೆ ಸಂಭ್ರಮವನ್ನು ತುಂಬಲು ಮತ್ತೆ ಬಂದಿದೆ ಬೆಳಕಿನ ಹಬ್ಬ ದೀಪಾವಳಿ.

ಪ್ರತೀ ವರ್ಷದ ಶ್ರಾವಣ ಮಾಸದಲ್ಲಿ ಪ್ರಾರಂಭಗೊಳ್ಳುವ ಹಬ್ಬಗಳ ಸಾಲಿಗೆ ಕಾರ್ತಿಕ ಮಾಸದ ದೀಪಾವಳಿ ಕಲಶವಿಟ್ಟಂತೆ. ದೀಪ ಮತ್ತು ಅವಳಿ ಎಂಬ ಎರಡು ಪದಗಳ ಸಂಯೋಜನೆಯಿಂದ ರೂಪುಗೊಂಡಿದೆ ದೀಪಾ ವಳಿ. ಅವಳಿ ಎಂದರೆ ಸಾಲು ಅಥವಾ ಗೊಂಚಲು ಎಂದರ್ಥ. ಮನದ ಕತ್ತಲನ್ನು (ಅಜ್ಞಾನ) ಸರಿಸಿ, ಬೆಳಕಿನ (ಜ್ಞಾನ) ದಾರಿ ತೋರುವ ಹಬ್ಬವಿದು.

ವೈವಿಧ್ಯತೆಯಲ್ಲಿ ಏಕತೆಯನ್ನು ಸಾರುವ ದೇಶ ನಮ್ಮದು. ದೀಪಾವಳಿ ಇದಕ್ಕೊಂದು ಉತ್ತಮ ಉದಾಹರಣೆ. ಈಗ ದೀಪಾವಳಿ ವಿಶ್ವಾದ್ಯಂತ ಆಚರಿಸಲ್ಪಡುತ್ತಿದೆಯಾದರೂ ಭಾರತದಲ್ಲಿ ಮಾತ್ರ ಜನರು ದೀಪಾವಳಿ ಹಬ್ಬದ ಸಂದರ್ಭದಲ್ಲಿ ಪಡುವ ಸಂಭ್ರಮ, ಸಡಗರಕ್ಕೆ ಎಣೆ ಇಲ್ಲ. ದೇಶದ ಉತ್ತರ, ಪೂರ್ವ, ಪಶ್ಚಿಮ, ದಕ್ಷಿಣ ಭಾಗಗಳಲ್ಲಿ ಅತ್ಯಂತ ವಿಭಿನ್ನವಾಗಿ ಮಾತ್ರವಲ್ಲದೆ ವೈಶಿಷ್ಟéಪೂರ್ಣವಾಗಿ ಆಚರಿಸಲಾಗುತ್ತದೆ. ಈ ಪ್ರತಿಯೊಂದೂ ಆಚರಣೆಗೂ ಪೌರಾಣಿಕ ಹಿನ್ನೆಲೆ ಇದೆ. ಶತಮಾನಗಳಿಂದ ಈ ಭವ್ಯ ಪರಂಪರೆ ಮುಂದುವರಿಯುತ್ತಾ ಬಂದಿದೆ. ದೀಪಾವಳಿ ಹಬ್ಬದ ಆಚರಣೆಯಲ್ಲಿ ದೇಶದ ಒಂದೊಂದು ಭಾಗದಲ್ಲಿ ವಿಭಿನ್ನತೆಗಳಿವೆಯಾದರೂ ಹಬ್ಬದ ಉದ್ದೇಶ ಮಾತ್ರ ಒಂದೇ. ಅದುವೇ ಎಲ್ಲರ ಜೀವನದಲ್ಲಿ ಸಕಾರಾತ್ಮಕತೆಯನ್ನು ತುಂಬುವುದಾಗಿದೆ.

ಐದು ದಿನಗಳ ಆಚರಣೆ
ದೇಶದ ಬಹುತೇಕ ಭಾಗಗಳಲ್ಲಿ ದೀಪಾವಳಿಯನ್ನು ಐದು ದಿನಗಳ ಕಾಲ ಆಚರಿಸಲಾಗುತ್ತದೆ. ಮೊದಲ ದಿನ ಧನ್‌ತೇರಸ್‌- ಯಮ ದೇವರ ಪೂಜೆ ಮತ್ತು ಲೋಹದ ವಸ್ತುಗಳ ಖರೀದಿಗೆ ಪ್ರಾಮುಖ್ಯ. ಎರಡನೇ ದಿನ ಛೋಟಿ ದಿವಾಲಿ, ರೂಪ್‌ ಚತುರ್ದಶಿ, ನರಕ ಚತುರ್ದಶಿ, ಮೂರನೇ ದಿನ ದೀಪಾವಳಿ- ಲಕ್ಷ್ಮೀ, ಗಣೇಶ ಪೂಜೆ, ನಾಲ್ಕನೇ ದಿನ ಗೋವರ್ಧನ ಪೂಜೆ, ಐದನೇ ದಿನ ಭಾಯಿಧೂಜ್‌- ಸಹೋದರಿಯರು ಸಹೋದರನಿಗೆ ತಿಲಕವಿಟ್ಟು ಅವರ ಆಯುಷ್ಯ ವೃದ್ಧಿಗಾಗಿ ಪ್ರಾರ್ಥಿಸುತ್ತಾರೆ.

ಯಾವ್ಯಾವ ರಾಜ್ಯಗಳಲ್ಲಿ ಆಚರಣೆ
ಹೇಗೆ?

ಕರ್ನಾಟಕ
ಕರ್ನಾಟಕದಲ್ಲೂ ಅಷ್ಟೇ ಒಂದೊಂದು ಭಾಗದಲ್ಲಿ ಭಿನ್ನ ಭಿನ್ನ ತೆರನಾದ ಆಚರಣೆಗಳಿವೆ. ನರಕ ಚತುರ್ದಶಿಯಂದು ಪಾಪದಿಂದ ಮುಕ್ತಿ ಹೊಂದಲು ಜನರು ತಮ್ಮ ದೇಹಕ್ಕೆ ತೆಂಗಿನ ಎಣ್ಣೆಯನ್ನು ಲೇಪಿಸಿಕೊಳ್ಳುತ್ತಾರೆ. ಹೀಗಾಗಿ ದೀಪಾವಳಿಯ ಮೊದಲ ದಿನ ಎಣ್ಣೆ ಸ್ನಾನ ವಿಶೇಷ. ದೀಪಾವಳಿಯು ಕರಾವಳಿ ಕರ್ನಾಟಕದಲ್ಲಿ ರಾಜ ಬಲಿ ಚಕ್ರವರ್ತಿಯ ದಿನವಾಗಿದೆ. ಈ ದಿನ ರೈತರು ತಮ್ಮ ಗದ್ದೆಗಳ ಸುತ್ತಲೂ ಆಹಾರ ವಿಟ್ಟು ಬಲಿ ಚಕ್ರವರ್ತಿಯನ್ನು ನೆನಪಿಸಿಕೊಳ್ಳುತ್ತಾರೆ. ಬಲಿಪಾಡ್ಯಮಿಯಂದು ಜೂಜಾಟ ಆಡುವ ಪುರಾಣವೂ ಇದೆ. ಈ ದಿನ ಶಿವ ಮತ್ತು ಪಾರ್ವತಿ ಪಗಡೆ ಯಾಡುತ್ತಾರೆ ಮತ್ತು ಪಾರ್ವತಿ ಶಿವನನ್ನು ಸೋಲಿಸುತ್ತಾಳೆ. ಕಾರ್ತಿಕೇಯ ಪಾರ್ವತಿಯೊಂದಿಗೆ ಆಡಿ ಗೆಲ್ಲುತ್ತಾನೆ. ಆಗ ಗಣಪತಿ ಕಾರ್ತಿಕೇಯನನ್ನು ಸೋಲಿಸುತ್ತಾನೆ. ಹೀಗಾಗಿ ಈ ದಿನ ಮನೆಯವರು ಪಗಡೆಯಾಡುವುದು ವಾಡಿಕೆ.

ಮಹಾರಾಷ್ಟ್ರ
ದೀಪಾವಳಿಯ ಧನ್‌ತೇರಸ್‌ ಹಬ್ಬವನ್ನು ಮಹಾರಾಷ್ಟ್ರದಲ್ಲಿ ವಿಭಿನ್ನವಾಗಿ ಆಚರಿಸಲಾಗುತ್ತದೆ. ಈ ದಿನ ಮಹಿಳೆಯರು ಕುಟುಂಬದ ಪುರುಷ ಸದಸ್ಯರ ಹೆಸರಲ್ಲಿ ದೀಪ ಬೆಳಗಿ ಅವರಿಗೆ ದೀರ್ಘ‌, ಸಮೃದ್ಧ ಜೀವನವನ್ನು ಬಯಸುತ್ತಾರೆ. ಈ ಬಗ್ಗೆ ಒಂದು ಕಥೆ ಪ್ರಚಲಿತದಲ್ಲಿದೆ. ರಾಜಕುಮಾರನೊಬ್ಬ ಮದುವೆಯಾದ ನಾಲ್ಕನೇ ದಿನಕ್ಕೆ ಸಾಯುತ್ತಾನೆ ಎಂದಿರುತ್ತದೆ. ಅದಕ್ಕಾಗಿ ಅವನ ಹೆಂಡತಿ ಬಾಗಿಲಲ್ಲಿ ದೀಪ ಬೆಳಗಿ ಅವನನ್ನು ಎಚ್ಚರವಾಗಿರಿಸುತ್ತಾಳೆ. ಯಮ ಸರ್ಪ ವೇಷ ಧರಿಸಿ ರಾಜಕುಮಾರನ ಕೋಣೆ ಪ್ರವೇಶಿಸಲು ನೋಡುತ್ತಾನೆ. ಆದರೆ ಅವನ ಹೆಂಡತಿ ಬೆಳಗಿದ ದೀಪದಿಂದ ಅವಳ ಬಗ್ಗೆ ಕನಿಕರ ಉಂಟಾಗಿ ಬಾಗಿಲಲ್ಲೇ ನಿಲ್ಲುತ್ತಾನೆ. ಹೀಗಾಗಿ ಈ ದಿನ ಯಮನ ಗೌರವಾರ್ಥವಾಗಿ ರಾತ್ರಿಯಿಡೀ ದೀಪ ಬೆಳಗಿಸಲಾಗುತ್ತದೆ.

ಮಹಾರಾಷ್ಟ್ರದ ಥಾಕರ್‌ ಎಂಬ ಬುಡಕಟ್ಟು ಸಮುದಾಯದವರು ಚಿಬ್ರಾ ಹಣ್ಣಿನ ಒಣಗಿದ ತುಂಡುಗಳನ್ನು ಬಳಸಿ ದೀಪಗಳನ್ನು ರಚಿಸಿ ಹಸುವಿನ ಸೆಗಣಿಯಿಂದ ಸಾರಿಸಿದ ನೆಲದ ಮೇಲಿಟ್ಟು ಬುಟ್ಟಿಯಲ್ಲಿಟ್ಟ ಧಾನ್ಯವನ್ನು ಲಕ್ಷ್ಮೀ ದೇವಿಯ ಪ್ರತಿರೂಪವಾಗಿ ಪೂಜಿಸುತ್ತಾರೆ. ಡೋಲಿನೊಂದಿಗೆ ಜಾನಪದ ನೃತ್ಯವನ್ನು ಪ್ರದರ್ಶಿಸುತ್ತಾರೆ.

ಉತ್ತರ ಭಾರತ
ವನವಾಸ ಮುಗಿಸಿ, ರಾವಣನನ್ನು ಸಂಹರಿಸಿದ ಬಳಿಕ ರಾಮ ಅಯೋಧ್ಯೆಗೆ ಮರಳಿದ ದಿನವಾಗಿ ದೀಪಾವಳಿಯನ್ನು ಉತ್ತರ ಭಾರತದಲ್ಲಿ ಆಚರಿಸಲಾಗುತ್ತದೆ. ಸೀತೆ, ಲಕ್ಷ್ಮಣ, ಹನುಮಂತ ರೊಂದಿಗೆ ರಾಮ ಅಯೋಧ್ಯೆಗೆ ಮರಳಿದಾಗ ಅಮಾವಾಸ್ಯೆ ಯಾಗಿದ್ದರಿಂದ ಎಲ್ಲೆಲ್ಲೂ ಕತ್ತಲು ಆವರಿಸಿತ್ತು. ಕತ್ತಲನ್ನು ಹೋಗಲಾಡಿಸುವ ಸಲುವಾಗಿ ಜನರು ಸಹಸ್ರಾರು ದೀಪಗಳನ್ನು ಬೆಳಗಿ, ಸುಡುಮದ್ದುಗಳನ್ನು ಸಿಡಿಸಿ ಅವರನ್ನು ಭಾರೀ ಸಡಗರ, ಸಂಭ್ರಮದಿಂದ ಸ್ವಾಗತಿಸಿದರು ಎಂಬುದು ಪೌರಾಣಿಕ ಐತಿಹ್ಯ. ಈ ನಂಬಿಕೆಯನ್ನು ಇಂದಿಗೂ ಉತ್ತರ ಭಾರತದ ಜನರು ಇಂದಿಗೂ ಶ್ರದ್ಧಾಭಕ್ತಿಗಳಿಂದ ಆಚರಿಸಿಕೊಂಡು ಬಂದಿದ್ದಾರೆ. ಉತ್ತರ ಪ್ರದೇಶ, ಪಂಜಾಬ್‌, ಹಿಮಾಚಲ ಪ್ರದೇಶ, ಹರಿಯಾಣ, ಬಿಹಾರ ಹಾಗೂ ಸುತ್ತಮುತ್ತಲಿನ ರಾಜ್ಯಗಳಲ್ಲಿ ಈ ಆಚರಣೆ ಇಂದಿಗೂ ಇದೆ.

ವಾರಾಣಸಿ
ದೀಪಾವಳಿಯ 15 ದಿನಗಳ ಬಳಿಕ ಇಲ್ಲಿ ದೇವ್‌ ದೀಪಾವಳಿ ಹಬ್ಬವನ್ನು ವಿಜೃಂಭಣೆಯಿಂದ ಆಚರಿಸಲಾಗುತ್ತದೆ. ಈ ದಿನ ದೇವಾನುದೇವತೆಗಳು ಭೂಮಿಗೆ ಬಂದು ಗಂಗಾ ನದಿಯಲ್ಲಿ ಸ್ನಾನ ಮಾಡುತ್ತಾರೆ ಎನ್ನುವ ನಂಬಿಕೆ ಇದೆ. ಹೀಗಾಗಿ ನದಿ ತೀರದಲ್ಲಿ ರಂಗೋಲಿ ಬಿಡಿಸಿ, ದೀಪಗಳಿಂದ ಅಲಂಕರಿಸಲಾಗುತ್ತದೆ. ಪಂಡಿತರು ವಿಜೃಂಭಣೆಯ ಗಂಗಾರತಿ ನಡೆಸುತ್ತಾರೆ. ಗಂಗಾರತಿಯನ್ನು ನೋಡಲೆಂದೇ ದೇಶವಿದೇಶಗಳಿಂದ ಭಾರೀ ಸಂಖ್ಯೆಯಲ್ಲಿ ಇಲ್ಲಿಗಾಗಮಿಸುತ್ತಾರೆ. ಇತ್ತೀಚಿನ ವರ್ಷಗಳಲ್ಲಂತೂ ಇಲ್ಲಿನ ಗಂಗಾರತಿ ಜಗತøಸಿದ್ಧಿಯನ್ನು ಪಡೆದಿದೆ.

ಪಂಜಾಬ್‌
ದೀಪಾವಳಿಯು ಪಂಜಾಬ್‌ನಲ್ಲಿ ಸಿಕ್ಖರ ಯುದ್ಧದ ಕಥೆಯನ್ನು ಹೇಳುತ್ತದೆ. ಚಕ್ರವರ್ತಿ ಜಹಾಂಗೀರ್‌ ಸಿಕ್ಖರ ಧರ್ಮಗುರು 6ನೇ ಗುರುನಾನಕ್‌ ಅವರ ಹೆಚ್ಚುತ್ತಿರುವ ಜನಪ್ರಿಯತೆ ಮತ್ತು ಪ್ರಭಾವದ ಭಯದಿಂದ ಅವರನ್ನು ಸೆರೆಮನೆಗೆ ಹಾಕುತ್ತಾನೆ ಮಾತ್ರವಲ್ಲದೆ ಇಸ್ಲಾಂಗೆ ಮತಾಂತರವಾಗುವಂತೆ ಒತ್ತಾಯ ಹೇರುತ್ತಾನೆ. ಆದರೆ ಗುರುಗಳು ಇದನ್ನು ತಿರಸ್ಕರಿಸುತ್ತಾರೆ. ಕೆಲವು ತಿಂಗಳುಗಳ ಕಾಲ ಅವರನ್ನು ಸೆರೆಮನೆಯಲ್ಲಿರಿಸಿ ಬಳಿಕ ದೀಪಾವಳಿ ಸಂದರ್ಭದಲ್ಲಿ ಅವರನ್ನು ಬಿಡುಗಡೆ ಮಾಡಲಾಗುತ್ತದೆ. ಗ್ವಾಲಿಯರ್‌ ಕೋಟೆಯಿಂದ ಗುರುನಾನಕ್‌ ಅವರು ಬಿಡುಗಡೆಯಾದ ದಿನವನ್ನು “ಬಂದಿ ಚೋರ್‌ ದಿವಸ್‌’ ಎಂದು ಕರೆಯಲಾಯಿತು. ಗ್ವಾಲಿಯರ್‌ನಿಂದ ಅಮೃತಸರದವರೆಗೆ ಅವರ ಸ್ವಾಗತಕ್ಕೆ ಎಲ್ಲೆಡೆಯೂ ದೀಪಗಳನ್ನು ಬೆಳಗಿಸಲಾಗುತ್ತದೆ. ಹೀಗಾಗಿ ಈ ದಿನವನ್ನು ವರ್ಷಂಪ್ರತಿ ದೀಪಾವಳಿ ಸಂದರ್ಭದಲ್ಲಿ ಸಿಕ್ಖರು ಮನೆಮನೆಗಳಲ್ಲಿ, ಗುರುದ್ವಾರಗಳಲ್ಲಿ ದೀಪಗಳನ್ನು ಬೆಳಗಿ, ಪಟಾಕಿಗಳನ್ನು ಸಿಡಿಸಿ, ಬಂಧುಮಿತ್ರರಿಗೆ ಉಡುಗೊರೆಗಳನ್ನು ನೀಡಿ ಹಬ್ಬದಂತೆ ಆಚರಿಸುತ್ತಾರೆ.

ಗೋವಾ
ರಾಜನಾಗಿದ್ದ ನರಕಾಸುರ ಕೃಷ್ಣನಿಂದ ಮುಂಜಾನೆ ವಧೆಯಾಗಿದ್ದರಿಂದ ನರಕ ಚತುರ್ದಶಿಯನ್ನು ಗೋವಾದಲ್ಲಿ ದೀಪಗಳ ಉತ್ಸವವಾಗಿ ಆಚರಿಸಲಾಗುತ್ತದೆ. ಕಾಗದ, ಹುಲ್ಲು ಮತ್ತಿತರ ಸಾಮಗ್ರಿಗಳನ್ನು ಬಳಸಿ ನರಕಾಸುರನ ಪ್ರತಿಕೃತಿ ತಯಾರಿಸಿ ಅದರಲ್ಲಿ ಸುಡುಮದ್ದುಗಳನ್ನು ಇಟ್ಟು ಬೀದಿಗಳಲ್ಲಿ ಸುಡುತ್ತಾರೆ. ಅದು ಸಂಪೂರ್ಣ ಸುಟ್ಟ ಬಳಿಕ ದೀಪಾವಳಿಯ ಸಂಭ್ರಮಾಚರಣೆ ಪ್ರಾರಂಭವಾಗುತ್ತದೆ. ಇದು ಕತ್ತಲೆಯ ವಿರುದ್ಧ ಬೆಳಕಿನ ವಿಜಯವನ್ನು ಸಾರುತ್ತದೆ.

ಛತ್ತೀಸ್‌ಗಢ
ಛತ್ತೀಸ್‌ಗಢದ ಬಾಸ್ಟರ್‌ ಭಾಗದ ಬುಡಕಟ್ಟು ಸಮುದಾಯದವರು ದೀಪಾವಳಿಯನ್ನು ವಿಶಿಷ್ಟವಾಗಿ ಆಚರಿಸುತ್ತಾರೆ. ಧಾನ್ಯಗಳ ಹೊಲದಲ್ಲಿ ದೇವರಾದ ನಾರಾಯಣನ ವಿವಾಹ ನಡೆಸುವ ಮೂಲಕ ಹಬ್ಬದ ಆಚರಣೆಯನ್ನು ಪ್ರಾರಂಭಿಸಲಾಗುತ್ತದೆ. ಬಳಿಕ ಆಹಾರ ಧಾನ್ಯಗಳನ್ನು ಸಂಗ್ರಹಿಸಲಾಗುತ್ತದೆ. ಹಬ್ಬದ ಮೊದಲ ದಿನ ಗ್ರಾಮದ ಜಾನುವಾರು ಗಳ ಮಾಲಕರಿಗೆ ಮದ್ಯ ನೀಡಿ ಗೌರವಿಸಲಾಗುತ್ತದೆ. ಮೂರು ದಿನಗಳ ಹಬ್ಬ ದಲ್ಲಿ ಜಾನುವಾರುಗಳನ್ನು ಹೂವಿನಿಂದ ಅಲಂಕರಿಸಿ, ಡೋಲು ಬಾರಿಸ ಲಾಗುತ್ತದೆ. ಬೆಳೆಯನ್ನು ಲಕ್ಷಿ$¾à ದೇವಿಯ ಪ್ರತಿರೂಪವಾಗಿ ಪೂಜಿಸಲಾಗು ತ್ತದೆ. ಇಲ್ಲಿ ಸಿಂಧಿ ಸಮುದಾಯದವರು ದೀಪಾವಳಿಯನ್ನು “ದಿಯಾರಿ’ ಎಂದು ಆಚರಿಸುತ್ತಾರೆ. ಈ ಸಂದರ್ಭದಲ್ಲಿ ಲಕ್ಷಿ$¾à ಪೂಜೆ ವಿಶೇಷ. ಬೆಳ್ಳಿ, ಚಿನ್ನದ ನಾಣ್ಯಗಳನ್ನು ಶುದ್ಧೀಕರಿಸಲು ಹಸಿ ಹಾಲು ಬಳಸಿ, ಅದನ್ನು ಪೂಜಿಸಿ ಬಳಿಕ ನಾಣ್ಯಗಳನ್ನು ಕೈಯಲ್ಲಿ ಹಿಡಿದು ಲಕ್ಷಿ$¾à ಬಂದಾಗ ಬಡತನ ದೂರವಾಗುವುದು ಎಂದು ಹಾಡುತ್ತ ತಮ್ಮ ಹಲ್ಲುಗಳಿಗೆ ಮೆಲ್ಲನೆ ಹೊಡೆದುಕೊಳ್ಳುತ್ತಾರೆ. ಇದರಿಂದ ಐಶ್ವರ್ಯ ವೃದ್ಧಿಯಾಗುತ್ತದೆ ಎಂಬ ನಂಬಿಕೆ ಆ ಸಮುದಾಯದವರದಾಗಿದೆ.

ಪೂರ್ವ ಭಾರತ
ದೀಪಾವಳಿಯಲ್ಲಿ ಲಕ್ಷಿ$¾à ದೇವಿಯ ಆರಾಧನೆಗೆ ವಿಶೇಷ ಪ್ರಾಮುಖ್ಯ. ಆದರೆ ಭಾರತದ ಪೂರ್ವಭಾಗಗಳಲ್ಲಿ ಮುಖ್ಯವಾಗಿ ಪಶ್ಚಿಮ ಬಂಗಾಲ, ಒಡಿಶಾ, ಅಸ್ಸಾಂನಲ್ಲಿ ದೀಪಾವಳಿ ಅಮಾವಾಸ್ಯೆಯಂದು ಕಾಳಿ ದೇವಿಯ ಆರಾಧನೆ ವಿಶೇಷ. ಕಾಳಿ ಪೂಜೆಯನ್ನು ಇಲ್ಲಿ “ಶ್ಯಾಮ ಪೂಜೆ’ ಎಂದೂ ಕರೆಯಲಾಗುತ್ತದೆ. ದುಷ್ಟರನ್ನು ಶಿಕ್ಷಿಸುವ, ಶಿಷ್ಟರನ್ನು ರಕ್ಷಿಸುವ ಕಾಳಿ ದೇವಿಗೆ ಇಷ್ಟವಾದ ಕೆಂಪು ದಾಸವಾಳ ಹೂವನ್ನು ಸಮರ್ಪಿಸಿ ಪೂಜಿಸಲಾಗುತ್ತದೆ. ಅನ್ನ, ಕಾಳುಗಳು, ಸಿಹಿಯೊಂದಿಗೆ ಮೀನು ಖಾದ್ಯವನ್ನು ಉಣಬಡಿಸುವುದು ಹಬ್ಬದ ವಿಶೇಷವಾಗಿದೆ. ಪಶ್ಚಿಮ ಬಂಗಾಲದಲ್ಲಿ ಮುಖ್ಯವಾಗಿ ಹೌರಾ, ಮಿಡ್ನಾಪುರ್‌, ಹೂಗ್ಲಿಯ ಗ್ರಾಮೀಣ ಭಾಗಗಳಲ್ಲಿ ಆಗಂಭಗೀಶರು ಕಾಳಿ ಪೂಜೆಯನ್ನು ಮಾಡುತ್ತಾರೆ. ಒಡಿಶಾದ ಜನರು “ಕೌರಿಯಾ ಕತಿ’ಯನ್ನು ಆಚರಿಸುತ್ತಾರೆ. ಈ ಸಂದರ್ಭದಲ್ಲಿ ಅವರು ಪೂರ್ವಜರನ್ನು ಸ್ಮರಿಸಿ ಗೌರವಿಸುತ್ತಾರೆ. ಇದಕ್ಕಾಗಿ ಪೂರ್ವಜರನ್ನು ಕರೆಯುವ ಸಂಕೇತವಾಗಿ ಸೆಣಬಿನ ಕಾಂಡಗಳನ್ನು ಸುಡುತ್ತಾರೆ.

ಆಂಧ್ರಪ್ರದೇಶ
ದೀಪಾವಳಿ ಸಂದರ್ಭದಲ್ಲಿ ಗಾಯನದ ಮೂಲಕ ಕೃಷ್ಣನ ಕಥೆ ಹೇಳುವ ಹರಿಕಥೆಯನ್ನು ಬಹುತೇಕ ಭಾಗಗಳಲ್ಲಿ ಆಯೋಜಿಸಲಾಗು ತ್ತದೆ. ಕೃಷ್ಣನ ಪತ್ನಿ ಸತ್ಯಭಾಮೆ ನರಕಾಸುರನನ್ನು ಕೊಂದಿದ್ದರಿಂದ ಆಕೆಯ ಪ್ರತಿಮೆಯನ್ನು ಮಾಡಿ ಪೂಜಿಸಲಾಗುತ್ತದೆ.

ಮಧ್ಯ ಪ್ರದೇಶ
ದೀಪಾವಳಿಯ ಒಂದು ದಿನದ ಬಳಿಕ ಉಜ್ಜಯಿನಿಯ ಬಿದ್ವಾಡ ಗ್ರಾಮದಲ್ಲಿ ಗೋವರ್ಧನ ಉತ್ಸವ ನಡೆಸಲಾಗುತ್ತದೆ. ಹಬ್ಬದ ಮೊದಲು ಐದು ದಿನಗಳ ಕಾಲ ಉಪವಾಸ ನಡೆಸುವ ಗ್ರಾಮಸ್ಥರು ತಮ್ಮ ಕರುಗಳನ್ನು ಹೂವುಗಳಿಂದ ಶೃಂಗರಿಸುತ್ತಾರೆ. ನೆಲದ ಮೇಲೆ ಮಲಗಿ ಕರುಗಳು ಅವರ ಮೇಲೆ ಕಾಲಿಡಲು ಅವಕಾಶ ನೀಡುತ್ತಾರೆ. ಇದನ್ನು ನೋಡಲು ಸಂಪೂರ್ಣ ಗ್ರಾಮವೇ ಒಟ್ಟುಗೂಡುತ್ತದೆ. ಈ ಆಚರಣೆ ಮೂಲಕ ಅವರು ದೇವರಿಗೆ ತಮ್ಮ ಅಭಿಲಾಷೆಗಳನ್ನು ಪೂರೈಸುವಂತೆ ಮೊರೆ ಇಡುತ್ತಾರೆ.

ಗುಜರಾತ್‌
ಹಬ್ಬಗಳಲ್ಲಿ ಗುಜರಾತ್‌ನ ಪಂಚಮಹಲ್‌ನಲ್ಲಿ ಪಟಾಕಿ ಸಿಡಿಸುವುದು ಒಂದು ವಿಶಿಷ್ಟ ಆಚರಣೆ. ಪಂಚಮಹಲ್‌ನ ವೇಜಲಾಪುರದಲ್ಲಿ ಒಬ್ಬರು ಇನ್ನೊಬ್ಬರಿಗಾಗಿ ಪಟಾಕಿ ಸುಡಲು ಬೆಂಕಿಯನ್ನು ನೀಡುತ್ತಾರೆ. ಇದೊಂದು ವಿಶಿಷ್ಟ ಆಚರಣೆ. ರಾತ್ರಿಯಿಡೀ ತುಪ್ಪದ ದೀಪ ಹಚ್ಚಿ ಮರುದಿನ ಅದರಿಂದ ಕಾಡಿಗೆ ತಯಾರಿಸಿ ತಮ್ಮ ಕಣ್ಣುಗಳಿಗೆ ಹಚ್ಚುತ್ತಾರೆ. ಇದರಿಂದ ಸಮೃದ್ಧಿಯಾಗುತ್ತದೆ ಎನ್ನುವ ನಂಬಿಕೆ ಇದೆ. ನರ್ಮದಾ ಮತ್ತು ಬರುಚಾ ಜಿಲ್ಲೆಯ ಬುಡಕಟ್ಟು ಸಮುದಾಯದವರು ಹಬ್ಬದ ಬೆಳಕನ್ನು ನೋಡುವುದು ಆರೋಗ್ಯಕ್ಕೆ ಉತ್ತಮ ಎಂದೇ ಭಾವಿಸುತ್ತಾರೆ. ಅವರು 15 ದಿನಗಳ ಕಾಲ ಹಬ್ಬವನ್ನು ಆಚರಿಸುತ್ತಾರೆ. ಈ ಸಂದರ್ಭದಲ್ಲಿ ಔಷಧೀಯ ಗುಣವುಳ್ಳ ಮರಗಳನ್ನು ಸುಟ್ಟು ಅದರ ಗಾಳಿಯನ್ನು ಸೇವಿಸುತ್ತಾರೆ. ಇದು ಅವರನ್ನು ಆರೋಗ್ಯವಾಗಿರಿಸುತ್ತದೆ ಎನ್ನುವ ನಂಬಿಕೆ ಅವರದ್ದು.

ಹಿಮಾಚಲ ಪ್ರದೇಶ
ಹಿಮಾಚಲ ಪ್ರದೇಶದ ಧಾಮಿಯಲ್ಲಿ ದೀಪಾವಳಿ ಸಂದರ್ಭದಲ್ಲಿ ಕಲ್ಲು ತೂರಾಟದ ಆಚರಣೆ ನಡೆಯುತ್ತದೆ. ಇದನ್ನು “ಪತ್ಥರ್‌ ಕಾ ಮೇಳ’ ಎಂದು ಕರೆಯಲಾಗುತ್ತದೆ. ಸ್ಥಳೀಯರ ಎರಡು ಗುಂಪುಗಳು ಪರಸ್ಪರ ಕಲ್ಲೆಸತದಲ್ಲಿ ತೊಡಗಿಕೊಳ್ಳುತ್ತವೆ. ಕಲ್ಲು ತೂರಾಟದ ಸಂದರ್ಭದಲ್ಲಿ ಇದರಲ್ಲಿ ಗಾಯಗೊಂಡವರ ದೇಹದಿಂದ ಸುರಿದ ರಕ್ತವನ್ನು ಹತ್ತಿರದ ಕಾಳಿ ದೇವಿಯ ವಿಗ್ರಹಕ್ಕೆ ತಿಲಕ ಇಡಲಾಗುತ್ತದೆ.

ಪ್ರಾಚೀನ ಕಾಲದಲ್ಲಿ ಇಲ್ಲಿ ಕಾಳಿ ದೇವಿಗೆ ನರಬಲಿ ನೀಡಲಾಗುತ್ತಿತ್ತು. ಇದರಿಂದ ಸ್ಥಳೀಯ ರಾಜಪ್ರಭುತ್ವದ ರಾಣಿಯೊಬ್ಬರು ಮನನೊಂದು ಅದನ್ನು ರದ್ದುಗೊಳಿಸಿದ್ದರು. ನರಬಲಿಗೆ ಪರ್ಯಾಯವಾಗಿ ಆ ಬಳಿಕ ಕಲ್ಲು ತೂರಾಟ ನಡೆಸುವ ಆಚರಣೆಯನ್ನು ಜಾರಿಗೆ ತರಲಾಯಿತು.

ಟಾಪ್ ನ್ಯೂಸ್

Boxing legend Mike Tyson hints at retirement

Mike Tyson: ವಿದಾಯದ ಸುಳಿವು ನೀಡಿದ ಬಾಕ್ಸಿಂಗ್‌ ದಿಗ್ಗಜ ಮೈಕ್‌ ಟೈಸನ್

Patna: ಆಸ್ಪತ್ರೆಯಲ್ಲಿ ಮೃತಪಟ್ಟ ರೋಗಿಯ ಕಣ್ಣೇ ಮಾಯಾ… ಇಲಿ ತಿಂದಿದೆ ಎಂದ ವೈದ್ಯರು

Patna: ಆಸ್ಪತ್ರೆಯಲ್ಲಿ ಮೃತಪಟ್ಟ ರೋಗಿಯ ಕಣ್ಣೇ ಮಾಯಾ… ಇಲಿ ತಿಂದಿದೆ ಎಂದ ವೈದ್ಯರು

Tilak Varma broke Virat Kohli’s T20I record

Team India: ವಿರಾಟ್‌ ಕೊಹ್ಲಿ ದಾಖಲೆ ಮುರಿದ ತಿಲಕ್‌ ವರ್ಮಾ

Master Rohit: ರಸ್ತೆ ಅಪಘಾತ ʼಕಾಟೇರʼ ಬಾಲನಟ ರೋಹಿತ್‌ಗೆ ಗಂಭೀರ ಗಾಯ

Master Rohit: ರಸ್ತೆ ಅಪಘಾತ ʼಕಾಟೇರʼ ಬಾಲನಟ ರೋಹಿತ್‌ಗೆ ಗಂಭೀರ ಗಾಯ

ರಸ್ತೆ ಅಪಘಾತ: ಮುದ್ದೇಬಿಹಾಳದ ಯುವಕ ಕಲಬುರ್ಗಿಯಲ್ಲಿ ಮೃತ್ಯು

Road Mishap: ಕಲಬುರ್ಗಿಯಲ್ಲಿ ರಸ್ತೆ ಅಪಘಾತ… ಮುದ್ದೇಬಿಹಾಳದ ಯುವಕ ಮೃತ್ಯು

Darshan’s Krantiveera Sangolli Rayanna movie to re release

Re Release: ದರ್ಶನ್‌ ಮತ್ತೊಂದು ಚಿತ್ರ ಮರು ಬಿಡುಗಡೆ: ರೀರಿಲೀಸ್‌ನತ್ತ ಸಂಗೊಳ್ಳಿ ರಾಯಣ್ಣ

shami

BGT 2024: ಟೀಂ ಇಂಡಿಯಾಗೆ ಗುಡ್ ನ್ಯೂಸ್:‌ ಆಸೀಸ್‌ ಸರಣಿಗೆ ತಂಡ ಸೇರಲಿದ್ದಾರೆ ಶಮಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

1-sugama

Music; ಸುಗಮ ಸಂಗೀತಕ್ಕೆ ನವೋದಯ ಸಾಹಿತ್ಯ ಬುನಾದಿ

3-kananda-1

Kannada: ಕನ್ನಡನಾಡಲ್ಲಿ ಕನ್ನಡ ಕಲಿಕೆಯ ಹಾಡು-ಪಾಡು

India: ಭಾರತದಲ್ಲಿ ರಹಸ್ಯ ವಾಸ್ತವ್ಯ, ಬಿಗಿ ಭದ್ರತೆ…ಶೇಖ್‌ ಹಸೀನಾ ಆಶ್ರಯ ಪಡೆದು 100 ದಿನ!

India: ಭಾರತದಲ್ಲಿ ರಹಸ್ಯ ವಾಸ್ತವ್ಯ, ಬಿಗಿ ಭದ್ರತೆ…ಶೇಖ್‌ ಹಸೀನಾ ಆಶ್ರಯ ಪಡೆದು 100 ದಿನ!

ಯಕ್ಷಗಾನದ ಕನ್ನಡ ಭಾಷಾ ಸಂಪದ ಉಳಿಸಿ, ಬೆಳೆಸೋಣ

ಯಕ್ಷಗಾನದ ಕನ್ನಡ ಭಾಷಾ ಸಂಪದ ಉಳಿಸಿ, ಬೆಳೆಸೋಣ

ರಾಷ್ಟ್ರೀಯ ಆರ್ಥಿಕ ಉತ್ಥಾನದ ಪದದರ್ಶಿ ಸಹಕಾರಿ ಸಂಸ್ಥೆಗಳು

ರಾಷ್ಟ್ರೀಯ ಆರ್ಥಿಕ ಉತ್ಥಾನದ ಪದದರ್ಶಿ ಸಹಕಾರಿ ಸಂಸ್ಥೆಗಳು

MUST WATCH

udayavani youtube

ಇಂಗ್ಲೀಷ್ ಒಂದು ಭಾಷೆ ಅನ್ನೋದೇ ತಪ್ಪು -ಪ್ರಕಾಶ್ ಬೆಳವಾಡಿ

udayavani youtube

ಕಾರಿನ ಟಯರ್ ಒಳಗಿತ್ತು ಬರೋಬ್ಬರಿ 50 ಲಕ್ಷ

udayavani youtube

ಹೊಸ ತಂತ್ರಜ್ಞಾನಕ್ಕೆ ತೆರೆದುಕೊಂಡ ತುಳುನಾಡ ಕಂಬಳ

udayavani youtube

ಉಡುಪಿಯ ಶ್ರೀ ಕೃಷ್ಣ ಮಠದಲ್ಲಿ ಕಾರ್ತಿಕ ಲಕ್ಷದೀಪೋತ್ಸವ

udayavani youtube

ಪುಂಗನೂರು ತಳಿಯ ಹಾಲು ಯಾವೆಲ್ಲ ಕಾಯಿಲೆಗಳನ್ನು ಗುಣಪಡಿಸುತ್ತದೆ ?

ಹೊಸ ಸೇರ್ಪಡೆ

Boxing legend Mike Tyson hints at retirement

Mike Tyson: ವಿದಾಯದ ಸುಳಿವು ನೀಡಿದ ಬಾಕ್ಸಿಂಗ್‌ ದಿಗ್ಗಜ ಮೈಕ್‌ ಟೈಸನ್

Patna: ಆಸ್ಪತ್ರೆಯಲ್ಲಿ ಮೃತಪಟ್ಟ ರೋಗಿಯ ಕಣ್ಣೇ ಮಾಯಾ… ಇಲಿ ತಿಂದಿದೆ ಎಂದ ವೈದ್ಯರು

Patna: ಆಸ್ಪತ್ರೆಯಲ್ಲಿ ಮೃತಪಟ್ಟ ರೋಗಿಯ ಕಣ್ಣೇ ಮಾಯಾ… ಇಲಿ ತಿಂದಿದೆ ಎಂದ ವೈದ್ಯರು

Tilak Varma broke Virat Kohli’s T20I record

Team India: ವಿರಾಟ್‌ ಕೊಹ್ಲಿ ದಾಖಲೆ ಮುರಿದ ತಿಲಕ್‌ ವರ್ಮಾ

Master Rohit: ರಸ್ತೆ ಅಪಘಾತ ʼಕಾಟೇರʼ ಬಾಲನಟ ರೋಹಿತ್‌ಗೆ ಗಂಭೀರ ಗಾಯ

Master Rohit: ರಸ್ತೆ ಅಪಘಾತ ʼಕಾಟೇರʼ ಬಾಲನಟ ರೋಹಿತ್‌ಗೆ ಗಂಭೀರ ಗಾಯ

ರಸ್ತೆ ಅಪಘಾತ: ಮುದ್ದೇಬಿಹಾಳದ ಯುವಕ ಕಲಬುರ್ಗಿಯಲ್ಲಿ ಮೃತ್ಯು

Road Mishap: ಕಲಬುರ್ಗಿಯಲ್ಲಿ ರಸ್ತೆ ಅಪಘಾತ… ಮುದ್ದೇಬಿಹಾಳದ ಯುವಕ ಮೃತ್ಯು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.