ಬೇಕು ಬೇಕೆಂಬ ಹಂಬಲ ಬೇಡ
Team Udayavani, Nov 16, 2022, 5:45 AM IST
ಶ್ರೀರಾಮಕೃಷ್ಣ ಪರಮಹಂಸರು ಮನುಷ್ಯರಲ್ಲಿ ಪ್ರಾಪಂಚಿಕ ಸುಖದ ಆಸೆಗಳು ಅತಿಯಾಗಿ ಇರಬಾರದು ಎಂಬು ದನ್ನು ಹೀಗೆ ಹೇಳಿದ್ದಾರೆ- “ನೀರಿನ ಮೇಲೆ ದೋಣಿ ಇರಬಹುದು, ಆದರೆ ದೋಣಿಯೊಳಗೆ ನೀರು ಇರಕೂಡದು. ಸಾಧಕ ನು ಪ್ರಪಂಚದಲ್ಲಿರಬಹುದು. ಆದರೆ ಪ್ರಾಪಂಚಿಕತೆಯು ಅವನಲ್ಲಿ ಇರಕೂಡದು’ ಎಂದು. ಆಸೆ ಎಂಬುದರ ಮಾನವ ಬದುಕಿನ ಸಂಜೀವಿನಿ, ಎಲ್ಲ ಕ್ರಿಯೆ, ಚೈತನ್ಯಗಳ ಮೂಲ ಸೆಲೆ’ ಎಲ್ಲ ಸಾಧನೆಗಳ ಪ್ರಾರಂಭಿಕ ಬಿಂದುವೇ ಆಸೆ; ಅದನ್ನು ಮರೆಯುವಂತಿಲ್ಲ. ಆದರೆ ಅದ ಕ್ಕೊಂದು ಮಿತಿ ಹಾಕಿಕೊಳ್ಳದಿದ್ದರೆ ಪೂರ್ಣವಿ ರಾಮವಿಲ್ಲದ ವಾಕ್ಯದಂತೆ ದೀರ್ಘ ವಾಗುತ್ತಲೇ ಹೋಗುತ್ತದೆ.
ಆಸೆ ಎಂಬುದು ರಕ್ತ ಬೀಜಾಸುರನ ಸಂತತಿ. ಒಂದು ತರಿಸಿದರೆ ಮತ್ತೊಂದರ ಮೊಳಕೆ. ಇದು ಒಬ್ಬನ ಸಮಸ್ಯೆಯಲ್ಲ, ಬಹುತೇಕ ಎಲ್ಲರ ಆಸೆಯೂ ಇದೇ. ಆಸೆ ಎಂಬ ಆಕ್ಟೋಪಸ್ ಹಿಡಿತದಿಂದ ಪಾರಾಗು ವುದು ಕಷ್ಟ ಸಾಧ್ಯ. ಅದು ಅಪಾರ ಮನೋ ನಿಗ್ರಹವನ್ನು ಬಯಸುತ್ತದೆ. ಆಸೆಯೇ ಇಲ್ಲದಾತ ಹಾಗೂ ನಿರ್ವಿಕಾರ ಚಿತ್ತದಿಂದ ಆಸೆ ನಿಯಂತ್ರಿಸಿಕೊಳ್ಳ ಬಲ್ಲಾತನೇ ಮಹಾತ್ಮ.
ಕನ್ನಡದ ಭಗವದ್ಗೀತೆ ಎಣಿಸಿದ “ಮಂಕುತಿಮ್ಮನ ಕಗ್ಗ’ದ ದಾರ್ಶನಿಕ ಕವಿ ಡಿ.ವಿ.ಜಿ. ಅವರು “ಬೇಕು ಬೇಕೆನುತ ಬೊಬ್ಬಿಡುವಂತಹ ಘಟವನಿದನು ಏಕೆಂದು ರಚಿಸಿದನೋ ಬೊಬ್ಬಿನು, ಈ ಬೇಕು ಜಪ ಸಾಕೆನಿಪುದೆಂದಿಗೆಲೊ ಮಂಕು ತಿಮ್ಮ’ ಎಂದು ವ್ಯಂಗ್ಯವಾಡಿದ್ದಾರೆ! ಇನ್ನೂ ಬೇಕು ಎನ್ನುವವನೇ ಬಡವ, ಸಾಕೆನ್ನುವವನೇ ಸಾಹುಕಾರ… ಎಂಬುದು ಯಥಾರ್ಥವಾದ ಮಾತು. ಮನದೊಳಗಿನ ಆಸೆಗೆ ಕುದುರೆಯ ವೇಗ ಲಗಾಮು ಬೇಕೇ ಬೇಕು, ಇಲ್ಲದಿರೆ ಅವನದಕ್ಕೆ ಗುಲಾಮ.
ಸಂತೃಪ್ತಿ ಮನಸ್ಸಿಗೆ ಸುಖದ ಸ್ಥಿತಿ. ಈ ಹಿನ್ನೆಲೆಯಲ್ಲಿಯೇ ಗೌತಮ ಬುದ್ಧನು ‘ಆಸೆಯೇ ದುಃಖಕ್ಕೆ ಮೂಲ’ ಎಂದಿ ರುವುದು. ಆದರೆ ಆಸೆಯೇ ಬೇಡ ಎನ್ನುವಂತಿಲ್ಲ. ಅತ್ಯಾಸೆಯನ್ನು ತ್ಯಜಿ ಸಬೇಕು ಅಷ್ಟೇ. ಅಲ್ಲದೆ ಪರಸ್ಪರ ಹೋಲಿಕೆಯಿಂದ ಅಶಾಂತಿ, ಮನಸ್ಸಿನಲ್ಲಿ ಕಿರಿಕಿರಿ ಹುಟ್ಟಿ ಬೆಳೆಯುತ್ತ ಜೀವಿತವು ದುಃಖಮಯವಾಗುತ್ತದೆ. ಹೋಲಿಕೆ ಬೇಕೆನಿಸಿದರೆ ನಮಗಿಂತ ಕೆಳಗಿನವರೊಂದಿಗೇ. ಆಗ ನಮ್ಮ ಸುಖದ ಮಟ್ಟವು ತಟ್ಟನೆ ಮೇಲೇರಿದ ಅರಿವು ನಮಗೆ ಆಗುತ್ತಲೇ ತೃಪ್ತಿ, ಶಾಂತಿ ಲಭಿಸುತ್ತದೆ. “ಹಳೆಯ ಹರಿದ ಚಪ್ಪಲಿಧಾರಿಯು, ಬರಿಗಾಲಿನಲ್ಲಿ ನಡೆಯುವನನ್ನು ಕಂಡು ಸಂತೃಪ್ತಿಯ ಉಸಿರೆಳೆದಂತೆ! ಈ ಸಂತೃಪ್ತಿಯು ಕಲ್ಲುಸಕ್ಕರೆಯಂತೆ ಸವಿಯೂ, ಔಷಧದಂತೆ ಸತ್ವಶಾಲಿಯೂ ಆಗಿ ಉಳಿಯುತ್ತದೆ.
ದುರಾಶೆಯ ಮಾನವನು ಪ್ರಕೃತಿಜನ್ಯವಾದ ಸಕಲ ಸಂಪನ್ಮೂಲಗಳನ್ನು ಧಾರಾಳವಾಗಿ ಬಳಸಿಕೊಂಡು ಇದೀಗ ಸಸ್ಯರಾಶಿಯಾದ ಕಾಡನ್ನು ಕಡಿಯುತ್ತಿದ್ದಾನೆ. ಇದು ಪ್ರಕೃತಿ ವಿಕೋಪ, ಪ್ರಾಣಿಗಳ ವಿನಾಶ, ಹವಾಮಾನ ವೈಪರೀತ್ಯ ಹತ್ತು ಹಲವು ಸಮಸ್ಯೆಗಳಿಗೆ ಆಗರವಾಗಿದೆ. ಶ್ರೀ ಶಂಕರಾಚಾರ್ಯರು ತಮ್ಮ ‘ಭಜ ಗೋವಿಂದಂ’ ಸ್ತೋತ್ರದಲ್ಲಿನ ಒಂದು ಪದ್ಯದಲ್ಲಿ “ಆಸೆಯು ಚಿರಾಯು” ಎಂಬ ಭೇದವನ್ನು ಹೀಗೆ ವ್ಯಕ್ತಪಡಿಸಿದ್ದಾರೆ.
ದಿನರಪಿ ರಜನಿ ಸಾಯಂ ಪ್ರಾತಃ
ಶಿಶಿರ ವಸಂತಾ ಪುನರಾಯತಃ
ಕಾಲಃ ಕ್ರೀಡಾ ಗಚ್ಚತ್ಯಾಯು
ಸ್ತದಪಿ ಮುಂಚತ್ಯಾಶಾವಾಯಃ
ಹಗಲು ಇರುಳು, ಬೆಳಗು, ಬೈಗು, ಶಿಶಿರ ವಸಂತಗಳು ಬಂದು ಹೋಗುತ್ತಲೇ ಇರು ತ್ತವೆ. ಕಾಲವು ಆಟವಾಡುತ್ತಿದೆ. ಆಯಸ್ಸು ಕಳೆಯುತ್ತಿದೆ. ಆದರೂ ಆಸೆಯು ಹೋಗು ವುದಿಲ್ಲ… ಎಂಥ ಸುಂದರ ಚಿತ್ರಣ, ಹಿನ್ನೆಲೆ ಮಾತ್ರ ವಿಷಾದನೀಯ.
ಇಂದಿನ ದಿನಗಳಲ್ಲಿ ಕೆಲವರು, ಕೊಳ್ಳುಬಾಕ ಚಟಕ್ಕೆ ಬಲಿಯಾಗಿರುವುದು, ಬೇಕು ಇನ್ನೂ ಬೇಕೆಂಬ ಹಂಬಲದ ಮತ್ತೂಂದು ಮುಖವಾಗಿದ್ದು ಅದಕ್ಕೂ ಕಡಿ ವಾಣ ಬಿದ್ದರೆ ಒಳಿತು. ಒಂದು ಅರ್ಥದಲ್ಲಿ ಆಸೆಗಳ ವಿರುದ್ಧ ನಮ್ಮನ್ನು ನಾವು ಗೆಲ್ಲುವುದೇ ನಿಜವಾದ ವಿಜಯ! ಅಂಥವರು ಮಹಾತ್ಮರ ಪಟ್ಟಕ್ಕೆ ಏರಿ ಬಹು ಮಾನ್ಯತೆ ಗಳಿಸಿದ್ದಾರೆ. ಕಳಿಂಗ ಯುದ್ಧದ ವಿಜಯಶಾಲಿ ಅಶೋಕ ಚಕ್ರವರ್ತಿ ಅಪಾರ ರಕ್ತಪಾತ, ಜೀವಹಾನಿಗಳನ್ನು ಕಂಡು ಯುದ್ಧಕ್ಕೇ ತಿಲಾಂಜಲಿಯಿತ್ತ. ರಾಜ್ಯಲಕ್ಷ್ಮೀಯನ್ನು, ಸಕಲ ಸುಖವೈಭೋಗಗಳನ್ನು ತಾನಾಗಿ ತ್ಯಜಿಸಿದ ರಾಜ ಕುಮಾರ ಸಿದ್ಧಾರ್ಥ ಬುದ್ಧನಾಗಿ ಕಂಗೊಳಿಸಿದ. ದೇಶಬಾಂಧವರ ದಾರಿದ್ರéಕ್ಕೆ ಮನ ನೊಂದು, ಸರಳ ವಸ್ತ್ರಧಾರಿಯಾದ ಮಹಾತ್ಮಾ ಗಾಂಧೀಜಿ ನಮ್ಮ ಮುಂದಿನ ಜ್ವಲಂತ ನಿದರ್ಶನ.
ಬೇಕುಬೇಕೆಂಬ ಹಂಬಲಕ್ಕೆ ಕೆಲವು ಅಪವಾದಗಳಿವೆ. ಒಳ್ಳೆಯ ಅಪೇಕ್ಷೆಗಳು ತಪ್ಪೇನಲ್ಲ. ಜ್ಞಾನ ತೃಷೆ, ದಾನ ಧರ್ಮಾದಿ ಸತ್ಕಾರ್ಯ, ಪರೋಪಕಾರ, ಸಮಾಜಸೇವೆ ಇತ್ಯಾದಿಗಳಿಗೆ ಮಿತಿ ಹೇರಬೇಕಾಗಿಲ್ಲ.
- ಸುಶೀಲಾ ಆರ್. ರಾವ್, ಬೈಲೂರು, ಉಡುಪಿ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
YearEnder 2024: ಪ್ರಧಾನಿ ಮೋದಿ ಅವರ ರಾಜಕೀಯ ಜೀವನದಲ್ಲಿ 2024 ಯಾಕೆ ಮಹತ್ವದ ವರ್ಷವಾಗಿದೆ?
A.B.Vajpayee Birth Century: ಅಜಾತಶತ್ರು, ಬಹುಮುಖಿ ವ್ಯಕ್ತಿತ್ವದ ಅಟಲ್ ಬಿಹಾರಿ ವಾಜಪೇಯಿ
A.B.Vajapayee Birth Century: ಸರಳತೆಯ ಸಾಕಾರಮೂರ್ತಿ ನಮ್ಮ ವಾಜಪೇಯಿ
ಮೇಲ್ಮನೆಗೆ ನಾನೇ ಫೈನಲ್, ನನ್ನ ಹಕ್ಕುಚ್ಯುತಿ ಬಗ್ಗೆ ಕಾನೂನು ತಜ್ಞರ ಜತೆ ಸಮಾಲೋಚಿಸಿ ಕ್ರಮ
ಜಂಟಿ ಸಂಸದೀಯ ಸಮಿತಿ ತನಿಖಾಸ್ತ್ರ!; ಇದು ಹೇಗೆ ಕಾರ್ಯನಿರ್ವಹಿಸುತ್ತದೆ? ಅಧಿಕಾರವೇನು?
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Living together; ವಿಚ್ಛೇದನ ತಡೆಯಲು ಲಿವಿಂಗ್ ಟುಗೆದರ್ ಸಹಕಾರಿಯೇ?
Uttarakhand: ಕಂದಕಕ್ಕೆ ಬಿದ್ದ ಬಸ್ ನಾಲ್ವರು ಮೃ*ತ್ಯು; 20ಕ್ಕೂ ಅಧಿಕ ಮಂದಿಗೆ ಗಾಯ
Uttar Pradesh: 16 ವರ್ಷದ ಬಾಲಕಿಯ ಮೇಲೆ ಸಾಮೂಹಿಕ ಅತ್ಯಾ*ಚಾರ; ಇಬ್ಬರ ಬಂಧನ
ಗಾಂಧಿ ಭಾರತ್ ಕಾರ್ಯಕ್ರಮದ ಬಗ್ಗೆ ಶೆಟ್ಟರ್ ಅಪಸ್ವರ ತೆಗೆದಿದ್ದು ದುರ್ದೈವ – ಎಚ್ ಕೆ ಪಾಟೀಲ
YearEnder 2024: ಪ್ರಧಾನಿ ಮೋದಿ ಅವರ ರಾಜಕೀಯ ಜೀವನದಲ್ಲಿ 2024 ಯಾಕೆ ಮಹತ್ವದ ವರ್ಷವಾಗಿದೆ?
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.